Category Archives: Blog

Your blog category

Horoscope Today: ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ – Kannada News

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 09, ಮಂಗಳವಾರದ ದೈನಂದಿನ ರಾಶಿ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ಅಧಿಕ ಜ್ಯೇಷ್ಠ ಮಾಸದಲ್ಲಿ ರವಿ ವೃಷಭ ರಾಶಿಯಲ್ಲಿ ಮತ್ತು ಚಂದ್ರ ಮೀನ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇಂದು ಸುಬ್ರಹ್ಮಣ್ಯ ಮತ್ತು ನಾಗಗಳ ಆರಾಧನೆಗೆ ಪ್ರಾಶಸ್ತ್ಯವಿದೆ. ಜೂನ್ 9 ರಂದು ಜನ್ಮದಿನ ಅಥವಾ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಶುಭವಾಗಲಿ ಎಂದು ಗುರೂಜಿ ಹಾರೈಸಿದ್ದಾರೆ.

 

 

 

Source link

ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು – Kannada News

ಕಾರವಾರ, ಜೂನ್ 9: ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿರುವ ಐತಿಹಾಸಿಕ ಮಹಾಬಲೇಶ್ವರ ದೇಗುಲದಲ್ಲಿ ಕೊಳಚೆ ನೀರು ತುಂಬಿಕೊಂಡಿದೆ. ದೇಗುಲದ ಗರ್ಭಗುಡಿಯಲ್ಲಿರುವ ಮಹಾಬಲೇಶ್ವರನ ಆತ್ಮಲಿಂಗ ಕೂಡ ಸಂಪೂರ್ಣವಾಗಿ ಕೊಳಚೆ ನೀರಿನಲ್ಲಿ ಮುಳುಗಿದೆ. ಇದು ಭಕ್ತರಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ದೇಗುಲದ ಅಕ್ಕಪಕ್ಕದ ಶೌಚಾಲಯಗಳು ಮತ್ತು ಇತರೆ ಭಾಗಗಳಿಂದ ಕೊಳಚೆ ನೀರು ಗರ್ಭಗುಡಿಗೆ ನುಗ್ಗಿದೆ. ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ಕೊಳಚೆ ನೀರು ನುಗ್ಗುತ್ತಿರುವುದು ಇದೇನು ಮೊದಲ ಸಲವಲ್ಲ. ಈ ಹಿಂದೆ ಕೂಡ ಇದೇ ರೀತಿಯ ಸಮಸ್ಯೆ ಎದುರಾಗಿತ್ತು.

ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳ ಒತ್ತುವರಿ ಮತ್ತು ಶೌಚಾಲಯದ ನೀರನ್ನು ನೇರವಾಗಿ ಸಮುದ್ರಕ್ಕೆ ಹರಿಸುತ್ತಿರುವುದೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಪರಿಸ್ಥಿತಿಗೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಮೇಲುಸ್ತುವಾರಿ ಸಮಿತಿಯ ನಿರ್ಲಕ್ಷ್ಯವೇ ಕಾರಣ ಎಂದು ಭಕ್ತರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿರ್ಲಕ್ಷ್ಯವನ್ನು ಕೂಡಲೇ ಸರಿಪಡಿಸಿ ದೇಗುಲದ ಪಾವಿತ್ರ್ಯವನ್ನು ಕಾಪಾಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು? – Kannada News

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು? ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು ನಿಮ್ಮ ಅದೃಷ್ಟ ಮತ್ತು ವ್ಯಕ್ತಿತ್ವದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಜಗತ್ತು ಗ್ರಹಗಳ ಅಧೀನದಲ್ಲಿದ್ದು, ಗ್ರಹಗಳು ಸಂಖ್ಯೆಗಳ ಅಧೀನದಲ್ಲಿವೆ. ಈ ಅಂಕೆಗಳು ನಮ್ಮ ಬದುಕಿನ ಅನೇಕ ನಿರ್ಣಾಯಕ ಅಂಶಗಳನ್ನು ಪ್ರಭಾವಿಸುತ್ತವೆ.

ನಿರ್ದಿಷ್ಟ ಸಂಖ್ಯೆಗಳ ಸಂಯೋಜನೆಗಳು ವಿಭಿನ್ನ ಫಲಿತಾಂಶಗಳನ್ನು ನೀಡುತ್ತವೆ. ಉದಾಹರಣೆಗೆ, ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು 4 ಮತ್ತು 8 ಆಗಿದ್ದರೆ ಕೋಪತಾಪಗಳು ಮತ್ತು ಆವೇಶ ಹೆಚ್ಚಾಗಬಹುದು. ಆದರೆ, 3 ಮತ್ತು 7 ಸಂಯೋಜನೆಗಳು ಎಲ್ಲಾ ರಾಶಿಗಳಿಗೂ ಸಂತೋಷ ಮತ್ತು ತೃಪ್ತಿಯನ್ನು ತರಬಲ್ಲವು. 5 ಮತ್ತು 6 ಅಥವಾ 6 ಮತ್ತು 5 ಸಂಯೋಜನೆಗಳು ಅದೃಷ್ಟ, ಕೀರ್ತಿ, ಪ್ರತಿಷ್ಠೆ ಮತ್ತು ವ್ಯಾಪಾರದಲ್ಲಿ ಶುಭವನ್ನು ಸೂಚಿಸುತ್ತವೆ ಎಂದು ಗುರೂಜಿ ಹೇಳಿದ್ದಾರೆ.

Source link

ನೆಗೆಟಿವ್ ವಿಮರ್ಶೆಗಳೇ ‘ಪೆದ್ದಿ’ ಚಿತ್ರದ ಗೆಲುವಿಗೆ ಕಾರಣ; ಚಿತ್ರತಂಡದ ಅಚ್ಚರಿಯ ಹೇಳಿಕೆ – Kannada News

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಪೆದ್ದಿ’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಾ ಇದೆ. ನೆಗೆಟಿವ್ ವಿಮರ್ಶೆಗಳು ಸಿಕ್ಕ ಹೊರತಾಗಿಯೂ ರಾಮ್ ಚರಣ್ ಅವರ ಸ್ಟಾರ್​ ಡಂ ಕಾರಣಕ್ಕೆ ಸಿನಿಮಾ ಗೆಲ್ಲುತ್ತಿದೆ. ಚಿತ್ರದ ಮೇಲಿನ ನೆಗೆಟಿವ್ ವಿಮರ್ಶೆಗಳೇ ಸಿನಿಮಾ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಲು ಪರೋಕ್ಷವಾಗಿ ನೆರವಾದವು ಎಂದು ಹಿರಿಯ ನಟ ಜಗಪತಿ ಬಾಬು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಸಿನಿಮಾಗೆ ಸಿಕ್ಕ ನೆಗೆಟಿವ್ ವಿಮರ್ಶೆ ಬ್ಗಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಪೆದ್ದಿ ಸಿನಿಮಾ ರಿಲೀಸ್ ಆಯಿತು, ಹೋರಾಡಿತು ಮತ್ತು ಗೆದ್ದಿತು. ಆದರೆ ಬಿಡುಗಡೆಯಾದ ಮೇಲೂ ಚಿತ್ರತಂಡ ವಿಮರ್ಶೆಗಳ ವಿರುದ್ಧ ಮತ್ತೊಮ್ಮೆ ಹೋರಾಡಿ, ಎರಡನೇ ಬಾರಿಗೆ ಗೆಲ್ಲಬೇಕಾಗಿ ಬಂತು. ಬಹುಶಃ ಇತಿಹಾಸದಲ್ಲಿ ಎರಡು ಬಾರಿ ಗೆದ್ದ ಸಿನಿಮಾ ಇದೊಂದೇ ಇರಬಹುದು’ ಎಂದರು.
‘ನಾಯಕ ರಾಮ್ ಚರಣ್ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ್ದಾರೆ. ಅವರು ಈ ಸಿನಿಮಾದಲ್ಲಿ ಕೇವಲ ನಟನಾಗಿ ಉಳಿದಿಲ್ಲ, ಬದಲಿಗೆ ಸೂಪರ್‌ಮ್ಯಾನ್ ಮತ್ತು ಹೀ-ಮ್ಯಾನ್ ತರಹ ಅಬ್ಬರಿಸಿದ್ದಾರೆ’ ಎಂದು ಕೊಂಡಾಡಿದರು.

‘ಸಿನಿಮಾ 300 ಕೋಟಿ ಅಥವಾ 400 ಕೋಟಿ ಗಳಿಸುವುದು ಮುಖ್ಯವಲ್ಲ. ಥಿಯೇಟರ್‌ನಲ್ಲಿ 300 ರೂಪಾಯಿ ಟಿಕೆಟ್ ಕೊಟ್ಟು ನೋಡುವ ಸಾಮಾನ್ಯ ಪ್ರೇಕ್ಷಕನೇ ಸಿನಿಮಾದ ಹಣೆಬರಹ ನಿರ್ಧರಿಸುತ್ತಾನೆ. ಇಂತಹ ವಿಭಿನ್ನ ಕಥೆಗೆ ನಿರ್ಮಾಪಕರನ್ನು ಹುಡುಕುವುದು ಮತ್ತು ರಾಮ್ ಚರಣ್ ಅವರಂತಹ ಸ್ಟಾರ್ ನಟನನ್ನು ಒಪ್ಪಿಸುವುದು ಸುಲಭದ ಮಾತಲ್ಲ. ಸ್ವಲ್ಪ ತಪ್ಪಾಗಿದ್ದರೂ ಜನ ಚಿತ್ರವನ್ನು ತಿರಸ್ಕರಿಸುತ್ತಿದ್ದರು. ನಮಗೆ ಕೆಟ್ಟ ವಿಮರ್ಶೆ ಬರೆದವರಿಗೆ ನಾನು ವಿಶೇಷ ಧನ್ಯವಾದ ಹೇಳುತ್ತೇನೆ. ಏಕೆಂದರೆ ಅವರು ತಿಳಿಯದೆಯೇ ಚಿತ್ರದ ಪ್ರಚಾರಕ್ಕೆ ಮತ್ತು ಯಶಸ್ಸಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದಾರೆ’ ಎಂದು ವಿಮರ್ಶಕರಿಗೆ ಟಾಂಗ್ ನೀಡಿದರು.

ಇದನ್ನೂ ಓದಿ: ನಾಲ್ಕನೇ ದಿನ ಭರ್ಜರಿ ಗಳಿಕೆ ಮಾಡಿದ ‘ಪೆದ್ದಿ’; ಮುಂದಿದೆ ಚಾಲೆಂಜ್

ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸಿನಿಮಾ ಸ್ಪೋರ್ಟ್ಸ್ ಡ್ರಾಮಾ ಶೈಲಿಯಲ್ಲಿದೆ. ಕ್ರಿಕೆಟ್, ಕುಸ್ತಿ ಹಾಗೂ ರನ್ನಿಂಗ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಮಿಂಚುವ ನಾಯಕನ ಕಥೆಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರಕ್ಕೆ ಪ್ರಶಂಸೆಗಳ ಜೊತೆಯಲ್ಲೇ ದೊಡ್ಡ ಮಟ್ಟದ ವಿವಾದವೂ ಸುತ್ತಿಕೊಂಡಿದೆ. ಚಿತ್ರದಲ್ಲಿ ನಾಯಕಿ ಜಾನ್ವಿ ಕಪೂರ್ ಪಾತ್ರವನ್ನು ತೋರಿಸಿರುವ ರೀತಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ನಾಯಕಿಯ ಪಾತ್ರವನ್ನು ಅತಿಯಾಗಿ ಗ್ಲಾಮರೈಸ್ ಮಾಡಲಾಗಿದೆ ಮತ್ತು ಮಹಿಳೆಯರನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ ಎಂದು ನೆಟ್ಟಿಗರು ಚಿತ್ರತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೆಟ್ರೋ ಪ್ರಯಾಣಿಕರಿಗೆ ಸಹಿ ಸುದ್ದಿ: ಪಿಂಕ್ ಲೈನ್ ಮೆಟ್ರೋ ಲೋಕಾರ್ಪಣೆಗೆ ಮುಹೂರ್ತ ಬಹುತೇಕ ಫಿಕ್ಸ್ – Kannada News

ನಮ್ಮ ಮೆಟ್ರೋ ಪಿಂಕ್ ಲೈನ್ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜೂನ್ 9: ನಮ್ಮ ಮೆಟ್ರೋ ಪಿಂಕ್ ಲೈನ್ (Pink Line) ಮಾರ್ಗದ ಉದ್ಘಾಟನೆಗೆ ಕೊನೆಗೂ ಮುಹೂರ್ತ ಬಹುತೇಕ ನಿಗದಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂಬರುವ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಪಿಂಕ್ ಲೈನ್‌ನ ಮೊದಲ ಹಂತದ ಮಾರ್ಗವು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಈ ಮಹತ್ವದ ಯೋಜನೆಯ ಎಲಿವೇಟೆಡ್ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಪ್ರಾರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಭರದಿಂದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಮುಖ್ಯಾಂಶಗಳು

  • ಆಗಸ್ಟ್ 15ರಂದು ಪಿಂಕ್ ಲೈನ್ ಮೆಟ್ರೋ ಲೋಕಾರ್ಪಣೆ ಸಾಧ್ಯತೆ.
  • ಗಂಟೆಗೆ 90 ಕಿಮೀ ವೇಗಕ್ಕೆ ಗ್ರೀನ್ ಸಿಗ್ನಲ್.
  • ಕಾಳೇನ ಅಗ್ರಹಾರ-ತಾವರೆಕೆರೆ ಮಾರ್ಗ ಮೊದಲಿಗೆ ಓಪನ್.

ವೇಗ ಪ್ರಮಾಣ ಪತ್ರ ಲಭ್ಯ, ಮುಗಿದ ಹಳಿ ಪರೀಕ್ಷೆ

ಪಿಂಕ್ ಲೈನ್ ಮಾರ್ಗದಲ್ಲಿ ಸಂಚರಿಸಲಿರುವ ನಮ್ಮ ಮೆಟ್ರೋ ರೈಲುಗಳಿಗೆ ಈಗಾಗಲೇ ಅಧಿಕೃತ ‘ಸ್ಪೀಡ್ ಸರ್ಟಿಫಿಕೇಟ್ (ವೇಗ ಪ್ರಮಾಣ ಪತ್ರ)’ ಲಭ್ಯವಾಗಿದೆ. ಕೇಂದ್ರ ಸರ್ಕಾರದ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆಯು (RDSO) ಈ ಮಹತ್ವದ ಸುರಕ್ಷತಾ ಪತ್ರವನ್ನು ನೀಡಿದೆ. ಯಾವುದೇ ವೇಗದ ನಿರ್ಬಂಧಗಳಿಲ್ಲದೆ, ಗಂಟೆಗೆ ಗರಿಷ್ಠ 90 ಕಿ.ಮೀ ವೇಗದಲ್ಲಿ ರೈಲು ಸಂಚರಿಸಲು ಹಸಿರು ನಿಶಾನೆ ಸಿಕ್ಕಿದೆ. ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದಿದ್ದ ಪ್ರಾಯೋಗಿಕ ಸಂಚಾರ ಪರೀಕ್ಷೆಗಳು (Trial Runs) ಸಂಪೂರ್ಣ ಯಶಸ್ವಿಯಾಗಿದ್ದು, ಬಿಎಂಆರ್‌ಸಿಎಲ್ ಅಧಿಕಾರಿಗಳು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ (CMRS) ಅಂತಿಮ ಒಪ್ಪಿಗೆ ಮತ್ತು ಪರಿಶೀಲನೆಗಾಗಿ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಮೊದಲ ಹಂತದಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ಓಪನ್

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.25 ಕಿ.ಮೀ ವಿಸ್ತೀರ್ಣ ಹೊಂದಿರುವ ಈ ಪಿಂಕ್ ಲೈನ್‌ನಲ್ಲಿ 18 ಮೆಟ್ರೋ ನಿಲ್ದಾಣಗಳಿವೆ. ಇದರಲ್ಲಿ 12 ಅಂಡರ್​ಗ್ರೌಂಡ್ ಹಾಗೂ 6 ಎಲಿವೇಟೆಡ್ ನಿಲ್ದಾಣಗಳು ಸೇರಿವೆ. ಈ ಪೈಕಿ, ಆಗಸ್ಟ್ 15 ರಂದು ಬಿಎಂಆರ್‌ಸಿಎಲ್ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಉದ್ದದ ಎಲಿವೇಟೆಡ್ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಿದೆ. ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಗೊಟ್ಟಿಗೆರೆ, ಹುಳಿಮಾವು, ಐಐಎಂಬಿ, ಜೆಪಿ ನಗರ 4ನೇ ಹಂತ ಹಾಗೂ ತಾವರೆಕೆರೆ ಸೇರಿದಂತೆ 6 ನಿಲ್ದಾಣಗಳು ಇವೆ. ವಿಶೇಷವಾಗಿ ಜಯದೇವ ಆಸ್ಪತ್ರೆಯ ಇಂಟರ್‌ಚೇಂಜ್ ನಿಲ್ದಾಣವು ಪ್ರಯಾಣಿಕರಿಗೆ ಒಂದು ಮಾರ್ಗದಿಂದ ಮತ್ತೊಂದು ಮಾರ್ಗಕ್ಕೆ ಬದಲಾಗಲು ಭಾರಿ ಅನುಕೂಲ ಕಲ್ಪಿಸಲಿದೆ.

ಬನ್ನೇರುಘಟ್ಟ ಮುಖ್ಯರಸ್ತೆ ಸುತ್ತಲಿನ ಟ್ರಾಫಿಕ್​ಗೆ ಮುಕ್ತಿ

ಈ 7.5 ಕಿ.ಮೀ ಮಾರ್ಗವು ಲೋಕಾರ್ಪಣೆಯಾದರೆ ಬೆಂಗಳೂರು ಮೆಟ್ರೋ ಜಾಲದ ಒಟ್ಟು ಉದ್ದ 103.6 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಇದರಿಂದ ಬನ್ನೇರುಘಟ್ಟ ಮುಖ್ಯರಸ್ತೆಯ ಸುತ್ತಮುತ್ತಲಿನ ಟ್ರಾಫಿಕ್ ಸಮಸ್ಯೆ ಮತ್ತು ವಾಯುಮಾಲಿನ್ಯಕ್ಕೆ ದೊಡ್ಡ ಮಟ್ಟದ ಬ್ರೇಕ್ ಬೀಳಲಿದೆ ಎಂದು ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನುಳಿದ 13.76 ಕಿ.ಮೀ ವಿಸ್ತೀರ್ಣದ 12 ಅಂಡರ್​ಗ್ರೌಂಡ್ ನಿಲ್ದಾಣಗಳ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕಾಮಗಾರಿ ಮುಕ್ತಾಯದ ಬಳಿಕ ಈ ವರ್ಷದ (2026) ಅಂತ್ಯದ ವೇಳೆಗೆ ನಾಗವಾರದವರೆಗಿನ ಸಂಪೂರ್ಣ ಪಿಂಕ್ ಲೈನ್ ಮಾರ್ಗವು ಲೋಕಾರ್ಪಣೆಯಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು ಗೊತ್ತಾ? – Kannada News

ಬೆಂಗಳೂರು, (ಜೂನ್ 08): ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಡಿಕೆ ಶಿವಕುಮಾರ್ (DK Shivakumar) ಅವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಹೌದು…ಡಿಕೆ ಶಿವಕುಮಾರ್ ಅವರು ಯಾವುದೇ ಪಕ್ಷ ಎನ್ನುವುದನ್ನು ನೋಡದೇ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳನ್ನು (Karnataka former chief minister) ಭೇಟಿ ಮಾಡುತ್ತಿದ್ದಾರೆ. ಸಿಎಂ ಆಗಿ ಪ್ರಮಾಣವಚನಕ್ಕೂ ಮುನ್ನವೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಎಚ್​​ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆದುಕೊಂಡಿದ್ದರು. ಇದನ್ನು ಡಿಕೆ ಶಿವಕುಮಾರ್ ಮುಂದುವರೆಸಿದ್ದು, ಇಂದು (ಜೂನ್ 08) ಮಾಜಿ ಸಿಎಂಗಳಾದ ವೀರಪ್ಪ ಮೊಯ್​ಲಿ, ಡಿವಿ ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸದಾನಂದಗೌಡ ಅವರ ಕುಟುಂಬ ಡಿಕೆ ಶಿವಕುಮಾರ್ ಅವರನ್ನು ಆರತಿ ಬೆಳಗಿ ಮನೆಗೆ ಸ್ವಾಗತಿಸಿರುವುದು ವಿಶೇಷ.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, ರಾಜ್ಯದ ಎಲ್ಲಾ ಮಾಜಿ ಸಿಎಂಗಳ ನಿವಾಸಕ್ಕೂ ಭೇಟಿ ನೀಡುತ್ತೇನೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೂ ಹೋಗುತ್ತೇನೆ. ಕುಮಾರಸ್ವಾಮಿ ಸಮಯ ನೀಡಿದರೆ ಅವರನ್ನೂ ಭೇಟಿ ಮಾಡುತ್ತೇ‌ನೆ. ಮಾಜಿ ಮುಖ್ಯಮಂತ್ರಿಗಳ ಅನುಭವ ಕೇಳಬೇಕಲ್ವಾ? ಎಲ್ಲರ ಅನುಭವ ಮತ್ತು ಮಾರ್ಗದರ್ಶನ ಕೇಳಬೇಕಲ್ವೇ? ಮಾಜಿ ಮುಖ್ಯಮಂತ್ರಿಗಳು ಕೂಡ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಏನು ಗೌರವ ನೀಡಬೇಕೋ ಕೊಡುತ್ತೇನೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿಯ ಹೆಗಲಿಗೊರಗಿ ಕಣ್ಣೀರಿಟ್ಟ ತಾಯಿ; ಮನಕಲಕುವ ವಿಡಿಯೋ ಇಲ್ಲಿದೆ – Kannada News

ನವದೆಹಲಿ, ಜೂನ್ 8: ಇಂದು ಭಾರತದ ವೀರ ಯೋಧರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಕೀರ್ತಿ ಚಕ್ರ, ವೀರ ಚಕ್ರ, ಶೌರ್ಯ ಚಕ್ರ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ವೇಳೆ ಮರಣೋತ್ತರ ಪ್ರಶಸ್ತಿಯನ್ನು ಸ್ವೀಕರಿಸುವಾಗ ಆ ಸೈನಿಕರ ಕುಟುಂಬಸ್ಥರು ಕಣ್ಣೀರಿಟ್ಟ ದೃಶ್ಯಗಳು ನೋಡುಗರನ್ನು ಕೂಡ ಭಾವುಕರನ್ನಾಗಿಸಿದವು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಿಪಾಯಿ ಜಂಜಾಲ್ ಪ್ರವೀಣ್ ಪ್ರಭಾಕರ್ ಅವರ ತಾಯಿಯು ತಮ್ಮ ಮಗನ ಪರವಾಗಿ ‘ಕೀರ್ತಿ ಚಕ್ರ’ ಪ್ರಶಸ್ತಿಯನ್ನು ಸ್ವೀಕರಿಸಿದ ಕ್ಷಣ ಇಡೀ ದೇಶವನ್ನೇ ಭಾವುಕಗೊಳಿಸಿದೆ.

ಜುಲೈ 6, 2024ರಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ವೇಳೆ ಅಪ್ರತಿಮ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದ ಸಿಪಾಯಿ ಪ್ರವೀಣ್ ಪ್ರಭಾಕರ್, ಇಬ್ಬರು ಉಗ್ರರನ್ನು ಹತ್ಯೆಗೈದು ವೀರಮರಣ ಅಪ್ಪಿದ್ದರು. ಅವರ ಈ ಸಾಹಸ ಮತ್ತು ದೇಶಕ್ಕಾಗಿ ನೀಡಿದ ಬಲಿದಾನವನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿ ನೀಡಲಾಗಿದೆ. ಈ ವೇಳೆ ಅವರ ತಾಯಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಗಲಿಗೊರಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರನ್ನು ರಾಷ್ಟ್ರಪತಿ ಸಾಂತ್ವನಗೊಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮುಖ ವಿಪರೀತ ಊದಿಕೊಂಡಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟಿ ಉರ್ಫಿ ಜಾವೇದ್ – Kannada News

ಮಾಡೆಲಿಂಗ್ ಹಾಗೂ ವಿಭಿನ್ನ ಫ್ಯಾಷನ್ ಉಡುಪುಗಳ ಮೂಲಕವೇ ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಬಾಲಿವುಡ್ ನಟಿ ಉರ್ಫಿ ಜಾವೇದ್ (Uorfi Javed) ಕಳೆದ ವರ್ಷ ತಮ್ಮ ಮುಖದ ಕಾರಣಕ್ಕೆ ಭಾರಿ ಸುದ್ದಿಯಾಗಿದ್ದರು. ಅವರ ಕಣ್ಣು, ಕೆನ್ನೆ ಹಾಗೂ ತುಟಿಗಳು ವಿಪರೀತವಾಗಿ ಉಬ್ಬಿಕೊಂಡಿದ್ದ ಫೋಟೋಗಳು ವೈರಲ್ ಆದಾಗ, ನೆಟ್ಟಿಗರು ‘ಕಾಸ್ಮೆಟಿಕ್ ಫಿಲ್ಲರ್ಸ್ (Plastic Surgery/Fillers) ಮಾಡಿಸಿಕೊಳ್ಳಲು ಹೋಗಿ ಮುಖ ಹಾಳು ಮಾಡಿಕೊಂಡಿದ್ದಾರೆ’ ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.

ಆದರೆ, ತಮ್ಮ ಮುಖ ಆ ರೀತಿ ಉಬ್ಬಿಕೊಳ್ಳಲು ಯಾವುದೇ ಪ್ಲಾಸ್ಟಿಕ್ ಸರ್ಜರಿ ಅಥವಾ ಫಿಲ್ಲರ್ಸ್ ಕಾರಣವಲ್ಲ, ಬದಲಿಗೆ ಅದೊಂದು ಆರೋಗ್ಯ ಸಮಸ್ಯೆ ಎಂದು ಈಗ ಉರ್ಫಿ ಜಾವೇದ್ ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಅಸಲಿ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ. ‘ಇದು ಫಿಲ್ಲರ್ಸ್ ಅಲ್ಲ, ಹೈ ಕಾರ್ಟಿಸೋಲ್ ಮತ್ತು ಮಾನಸಿಕ ಒತ್ತಡ’ ಎಂದು ಅವರು ಹೇಳಿದ್ದಾರೆ.

ತಮ್ಮ ಹಳೆಯ ಮುಖದ ಫೋಟೋಗಳನ್ನು ವಿಡಿಯೋದಲ್ಲಿ ತೋರಿಸುತ್ತಾ ಮಾತನಾಡಿದ ಉರ್ಫಿ, ‘ಇದು ಒಂದುವರೆ ವರ್ಷದ ಹಿಂದೆ ನನ್ನ ಮುಖ ಇದ್ದ ಸ್ಥಿತಿ. ಆಗ ಎಲ್ಲರೂ ನಾನು ಫಿಲ್ಲರ್ಸ್ ಮಾಡಿಸಿಕೊಂಡು ಮುಖದ ಶೇಪ್ ಹಾಳು ಮಾಡಿಕೊಂಡಿದ್ದೇನೆ ಅಂದುಕೊಂಡಿದ್ದರು. ಆದರೆ ಅಸಲಿಗೆ ನನ್ನ ದೇಹದಲ್ಲಿದ್ದ ಅತಿಯಾದ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಮತ್ತು ವಿಪರೀತ ಮಾನಸಿಕ ಒತ್ತಡದಿಂದಾಗಿ ನನ್ನ ಮುಖ ಆ ರೀತಿ ಊದಿಕೊಂಡಿತ್ತು. ನಾನು ಯಾವುದೇ ಕಾಸ್ಮೆಟಿಕ್ ಸರ್ಜರಿ ಮಾಡಿಸಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಉರ್ಫಿ ಜಾವೇದ್ ವೈರಲ್ ವಿಡಿಯೋ:

ಮುಖ ಉಬ್ಬಿಕೊಳ್ಳಲು ಮತ್ತೊಂದು ಪ್ರಮುಖ ಕಾರಣವನ್ನು ಉರ್ಫಿ ಜಾವೇದ್ ಬಿಚ್ಚಿಟ್ಟಿದ್ದಾರೆ. ಅವರಿಗೆ ಬೆಕ್ಕುಗಳೆಂದರೆ ಅಲರ್ಜಿ! ಈ ವಿಷಯವೇ ಮೊದಲು ಅವರಿಗೆ ತಿಳಿದಿರಲಿಲ್ಲವಂತೆ. ‘ನನ್ನ ಮನೆಯಲ್ಲಿ ಮೂರು ಮುದ್ದಿನ ಬೆಕ್ಕುಗಳಿವೆ. ಆದರೆ ನನಗೆ ಬೆಕ್ಕಿನ ರೋಮಗಳಿಂದ ಅಲರ್ಜಿ ಆಗುತ್ತದೆ ಎಂಬುದು ತಡವಾಗಿ ತಿಳಿಯಿತು. ಹಲವು ವೈದ್ಯರನ್ನು ಭೇಟಿಯಾದಾಗ ಕೆಲವರು ಇದು ಸೈನಸ್ ಸಮಸ್ಯೆ ಎಂದಿದ್ದರು. ಕೊನೆಗೆ ಟೆಸ್ಟ್ ಮಾಡಿಸಿದಾಗ ನನ್ನ ಮುದ್ದಿನ ಬೆಕ್ಕುಗಳೇ ಈ ಅಲರ್ಜಿಗೆ ಕಾರಣ ಎಂದು ಗೊತ್ತಾಯಿತು. ಆದರೆ ಅಷ್ಟರಲ್ಲಾಗಲೇ ನಾನು ಅವುಗಳ ಜೊತೆ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸಲು ಆರಂಭಿಸಿದ್ದೆ’ ಎಂದಿದ್ದಾರೆ.

ಇದನ್ನೂ ಓದಿ: 40 ಸಾವಿರ ರೂ. ಸಂಬಳ ಇದ್ದಾಗ ಮನೆ ನಡೆಸಲು ಕಷ್ಟಪಟ್ಟಿದ್ದ ಉರ್ಫಿ ಜಾವೇದ್; ಈಗ ಎಷ್ಟು?

‘ಹಿಂದೆ ನಾನು ದಪ್ಪಗಾಗುತ್ತೇನೆ ಎಂಬ ಭಯದಿಂದ ಸರಿಯಾಗಿ ಊಟವನ್ನೇ ಮಾಡುತ್ತಿರಲಿಲ್ಲ. ಆದರೆ ಈಗ ನಾನು ನನ್ನ ಆರೋಗ್ಯದ ಕಡೆ ಗಮನ ಹರಿಸುತ್ತಿದ್ದೇನೆ. ವರ್ಕೌಟ್‌ ಮಾಡಲು ಹಾಗೂ ಅಲರ್ಜಿಯನ್ನು ತಡೆಗಟ್ಟಲು ಇಮ್ಯುನೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈಗ ಸರಿಯಾಗಿ ಆಹಾರ ಸೇವಿಸುತ್ತಿರುವುದರಿಂದ ನನ್ನ ಮುಖ ಮೊದಲಗಿಂತ ತುಂಬಾ ಚೆನ್ನಾಗಿದೆ’ ಎಂದು ತಮ್ಮ ಫಿಟ್‌ನೆಸ್ ರಹಸ್ಯವನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ – Kannada News

ಮನಿಲಾ, (ಜೂನ್ 08): ದಕ್ಷಿಣ ಫಿಲಿಪೈನ್ಸ್‌ ನಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದ ಪರಿಣಾಮ ಹಲವು ಕಟ್ಟಡಗಳು ಹಾಗೂ ಪ್ರಮುಖ ಸೇತುವೆಗೆ ಹಾನಿಯಾಗಿದ್ದು, ಕರಾವಳಿ ಪ್ರದೇಶಗಳಲ್ಲಿ ಸುಮಾರು 1 ಮೀಟರ್ ಎತ್ತರದ ಸುನಾಮಿ ಅಲೆಗಳು ಕಾಣಿಸಿಕೊಂಡಿವೆ. ಇನ್ನು ಮೃತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಭೂಕಂಪದ ಕೇಂದ್ರಬಿಂದು ಬುರಿಯಾಸ್​ನಿಂದ 24.7 ಕಿ.ಮೀ ದೂರದಲ್ಲಿದ್ದು, ಪತ್ತೆ ಹಚ್ಚಿ ತಕ್ಷಣ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಮತ್ತು ಜಪಾನ್ ಹವಾಮಾನ ಇಲಾಖೆ ಜಂಟಿಯಾಗಿ ಫಿಲಿಪೈನ್ಸ್​, ಇಂಡೋನೇಷ್ಯಾ, ತೈವಾನ್ ಮತ್ತು ಜಪಾನ್ ಕರಾವಳಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಿವೆ. ಇನ್ನು ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ಎನ್ನುವುದನ್ನು ನೋಡಿ.

ವಿದೇಶ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವೀರ ಯೋಧರಿಗೆ ರಾಷ್ಟ್ರಪತಿಯಿಂದ ಕೀರ್ತಿ ಚಕ್ರ, ವೀರ ಚಕ್ರ, ಶೌರ್ಯ ಚಕ್ರ ಪ್ರಶಸ್ತಿ ಪ್ರದಾನ – Kannada News

ನವದೆಹಲಿ, ಜೂನ್ 8: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಆಪರೇಷನ್ ಸಿಂಧೂರ್’ (Operation Sindoor) ಕಾರ್ಯಾಚರಣೆಯಲ್ಲಿ ತೋರಿದ ಅಪ್ರತಿಮ ಸಾಹಸ ಮತ್ತು ಧೀರತನಕ್ಕಾಗಿ ಭಾರತೀಯ ವಾಯುಪಡೆಯ (IAF) ವೀರ ಅಧಿಕಾರಿಗಳಿಗೆ ವೀರ ಚಕ್ರ (Vir Chakra) ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ರಕ್ಷಣಾ ಪಡೆಯ ಯೋಧರಿಗೆ ಕೀರ್ತಿ ಚಕ್ರ, ಶೌರ್ಯ ಚಕ್ರ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗಿದೆ. ಸೋಮವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ 2026ರ ರಕ್ಷಣಾ ಹೂಡಿಕೆ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು 7 ಕೀರ್ತಿ ಚಕ್ರ, 15 ವೀರ ಚಕ್ರ ಮತ್ತು 29 ಶೌರ್ಯ ಚಕ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

‘ವೀರ ಚಕ್ರ’ ಯುದ್ಧದ ಸಮಯದಲ್ಲಿ ಶತ್ರುಗಳ ಎದುರು ಪ್ರದರ್ಶಿಸುವ ಅಪ್ರತಿಮ ಶೌರ್ಯಕ್ಕಾಗಿ ನೀಡಲಾಗುವ ದೇಶದ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ಪ್ರಾಣದ ಹಂಗು ತೊರೆದು ಶತ್ರುಗಳ ಯುದ್ಧ ವಿಮಾನಗಳನ್ನು ಅಥವಾ ನೆಲೆಗಳನ್ನು ಅತ್ಯಂತ ಚಾಣಾಕ್ಷತನದಿಂದ ಹಿಮ್ಮೆಟ್ಟಿಸಿದ ವಾಯುಪಡೆಯ ಫೈಟರ್ ಪೈಲಟ್‌ಗಳು ಮತ್ತು ಕಮಾಂಡರ್‌ಗಳಿಗೆ ರಾಷ್ಟ್ರಪತಿಗಳು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಜಾಗತಿಕ ಮಟ್ಟದಲ್ಲಿ ಭಾರತೀಯ ವಾಯುಪಡೆಯ ತಾಂತ್ರಿಕ ಮತ್ತು ಯುದ್ಧ ಕೌಶಲ್ಯದ ಪ್ರಾಬಲ್ಯವನ್ನು ಈ ಅಧಿಕಾರಿಗಳು ಜಗತ್ತಿಗೆ ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿಗಳ ಗಮನಸೆಳೆದ ಬೆಂಗಳೂರು ಕರಗ: ಅಧ್ಯಕ್ಷರನ್ನ ಕರೆಯಿಸಿ ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?

ಮರಣೋತ್ತರ ಗೌರವ:

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹಲವು ವೀರ ಯೋಧರಿಗೆ ಮರಣೋತ್ತರವಾಗಿಯೂ ಕೀರ್ತಿ ಚಕ್ರ, ಶೌರ್ಯ ಚಕ್ರ, ವೀರ ಚಕ್ರ ಗೌರವವನ್ನು ನೀಡಲಾಗಿದ್ದು, ಅವರ ಕುಟುಂಬಸ್ಥರು ಕಣ್ಣೀರಿನ ನಡುವೆ ಪ್ರಶಸ್ತಿ ಸ್ವೀಕರಿಸಿದರು.

ಕೀರ್ತಿ ಚಕ್ರ ಪ್ರಶಸ್ತಿ:

ಯುದ್ಧ ರಂಗದ ಹೊರಗೆ ಶಾಂತಿ ಸಮಯದಲ್ಲಿ ನೀಡಲಾಗುವ ದೇಶದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿ ಇದಾಗಿದೆ. ಈ ಪ್ರಶಸ್ತಿಯ ಪ್ರಮುಖ ಪುರಸ್ಕೃತರೆಂದರೆ,

ಕ್ಯಾಪ್ಟನ್ ಅಂಶುಮಾನ್ ಸಿಂಗ್ (ಮರಣೋತ್ತರ): ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸಹ ಯೋಧರನ್ನು ರಕ್ಷಿಸಿ ಹುತಾತ್ಮರಾದ ಆರ್ಮಿ ಮೆಡಿಕಲ್ ಕಾರ್ಪ್ಸ್‌ನ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರಿಗೆ ಕೀರ್ತಿ ಚಕ್ರ ಪ್ರದಾನ ಮಾಡಲಾಯಿತು.

ಹವಿಲ್ದಾರ್ ಪ್ರದೀಪ್ ಸಿಂಗ್ (ರಾಜಪೂತ್ ರೈಫಲ್ಸ್): ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತೋರಿದ ಅಪ್ರತಿಮ ಧೈರ್ಯಕ್ಕಾಗಿ ಪ್ರಶಸ್ತಿ ನೀಡಲಾಯಿತು.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ: ಉಗ್ರ ವಿರೋಧಿ ಕಾರ್ಯಾಚರಣೆ ವೇಳೆ ಕಂದಕಕ್ಕೆ ಬಿದ್ದು ಯೋಧ ಹುತಾತ್ಮ

ರೈಫಲ್‌ಮ್ಯಾನ್ ಅಲೋಕ್ ರಾವ್ (ಅಸ್ಸಾಂ ರೈಫಲ್ಸ್ – ಮರಣೋತ್ತರ): ಈಶಾನ್ಯ ರಾಜ್ಯದಲ್ಲಿ ಶಾಂತಿ ಕಾಪಾಡುವ ಕಾರ್ಯಾಚರಣೆಯ ವೇಳೆ ವೀರಾವೇಶದಿಂದ ಹೋರಾಡಿ ಪ್ರಾಣತ್ಯಾಗ ಮಾಡಿದ್ದಕ್ಕಾಗಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೀರ ಚಕ್ರ ಪ್ರಶಸ್ತಿ:

ಯುದ್ಧದ ಸಮಯದಲ್ಲಿ ಶತ್ರುಗಳ ಎದುರು ಪ್ರದರ್ಶಿಸುವ ಧೀರತನಕ್ಕಾಗಿ ನೀಡಲಾಗುವ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿ ಇದಾಗಿದೆ. ಗಡಿ ನಿಯಂತ್ರಣ ರೇಖೆ (LoC) ಹಾಗೂ ಅಂತಾರಾಷ್ಟ್ರೀಯ ಗಡಿಗಳಲ್ಲಿ ಶತ್ರುಗಳ ವಾಯುಪಡೆ ಹಾಗೂ ನುಸುಳುವಿಕೆಯನ್ನು ಅತ್ಯಂತ ಚಾಣಾಕ್ಷತನದಿಂದ ಹಿಮ್ಮೆಟ್ಟಿಸಿದ ವಾಯುಪಡೆ ಮತ್ತು ಭೂಸೇನೆಯ ವೀರ ಅಧಿಕಾರಿಗಳಿಗೆ ಈ ಬಾರಿ ವೀರ ಚಕ್ರ ನೀಡಿ ಗೌರವಿಸಲಾಗಿದೆ.

ಶೌರ್ಯ ಚಕ್ರ ಪುರಸ್ಕೃತರು:

ಶಾಂತಿ ಸಮಯದಲ್ಲಿ ಶೌರ್ಯ, ಸಾಹಸ ಪ್ರದರ್ಶಿಸಿದ ಯೋಧರಿಗೆ ನೀಡಲಾಗುವ ಮೂರನೇ ಅತ್ಯುನ್ನತ ಪ್ರಶಸ್ತಿ ಇದಾಗಿದೆ. ಈ ಬಾರಿ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಅರೆಸೇನಾ ಪಡೆಗಳ ಹಲವು ಯೋಧರಿಗೆ ಈ ಗೌರವ ಸಂದಿದೆ. ಅವರಲ್ಲಿ ಪ್ರಮುಖರೆಂದರೆ,

ಮೇಜರ್ ದಿಗ್ವಿಜಯ್ ಸಿಂಗ್ ರಾವತ್ (ಪ್ಯಾರಾಚೂಟ್ ರೆಜಿಮೆಂಟ್ – ವಿಶೇಷ ಪಡೆ): ಮಣಿಪುರದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಭಯೋತ್ಪಾದಕರ ಜಾಲವನ್ನು ಧ್ವಂಸಗೊಳಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ಮೇಜರ್ ದೀಪೇಂದ್ರ ವಿಕ್ರಮ್ ಬಸ್ನೆಟ್: ಜಮ್ಮು-ಕಾಶ್ಮೀರದ ಗಡಿಯಲ್ಲಿ ನುಸುಳುವಿಕೆಯನ್ನು ತಡೆದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ಪವನ್ ಕುಮಾರ್ (ರಾಷ್ಟ್ರೀಯ ರೈಫಲ್ಸ್ – ಮರಣೋತ್ತರ): ಉಗ್ರರೊಂದಿಗಿನ ನೇರ ಗುಂಡಿನ ಚಕಮಕಿಯಲ್ಲಿ ವೀರಮರಣ ಅಪ್ಪುವ ಮುನ್ನ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಕ್ಕಾಗಿ ಶೌರ್ಯ ಚಕ್ರ ನೀಡಲಾಗಿದೆ.

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ವೀರ ಯೋಧರ ಕಥೆಗಳು ಮತ್ತು ಹುತಾತ್ಮ ಯೋಧರ ಹೆತ್ತ ತಾಯಂದಿರು ಹಾಗೂ ಪತ್ನಿಯರು ಪ್ರಶಸ್ತಿ ಸ್ವೀಕರಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿವೆ. ಭಾರತೀಯ ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯ ಮತ್ತು ದೇಶದ ಭದ್ರತೆಯ ಬದ್ಧತೆಯನ್ನು ಈ ಗೌರವಗಳು ಮತ್ತೊಮ್ಮೆ ಎತ್ತಿಹಿಡಿದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link