Headlines

Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ – Kannada News | Young Girl Rescued After Bull Attack in Lucknow’s Chowkpatia Area

ಲಕ್ನೋ, ಫೆಬ್ರವರಿ 04: ಬಾಲಕಿಯನ್ನು ಅಟ್ಟಾಡಿಸಿ ಬಂದು ದಾಳಿ ನಡೆಸುತ್ತಿದ್ದ ಗೂಳಿಯಿಂದ, ಬಾಲಕಿಯನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಸ್ಥಳೀಯರು ಆಕೆಯನ್ನು ರಕ್ಷಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ, ಕೊನೆಗೆ ವ್ಯಕ್ತಿಯೊಬ್ಬ ಗೂಳಿಗೆ ತನ್ನ ಕೈಯಲ್ಲಿದ್ದ ಟವೆಲ್ ಬೀಸುವ ಮೂಲಕ ಬೇರೆಡೆಗೆ ಗಮನ ಸೆಳೆದು ಆಕೆಯನ್ನು ಉಳಿಸಿಕೊಳ್ಳುತ್ತಾರೆ. ಈ ಘಟನೆ ಲಕ್ನೋದ ಚೌಪಟ್ಟಿಯಲ್ಲಿ ನಡೆದಿದೆ.     ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ      Source link

Read More

Spiritual Reasons: ದೇವಸ್ಥಾನದಲ್ಲಿ ದೇವರ ವಿಗ್ರಹದ ಮುಂದೆ ಯಾಕೆ ಫೋಟೋ, ಸೆಲ್ಫಿ ತೆಗೆಯಬಾರದು? ಆಧ್ಯಾತ್ಮಿಕ ಕಾರಣ ಇಲ್ಲಿದೆ – Kannada News | Temple Photography Rules: Why Garbhagudi Photos are Forbidden? Expert Vastu Guide

ದೇವಸ್ಥಾನದಲ್ಲಿ ದೇವರ ವಿಗ್ರಹದ ಮುಂದೆ ಯಾಕೆ ಫೋಟೋ ಸಾಕಷ್ಟು ಜನರಿಗೆ ಹೋದಲ್ಲಿ ಬಂದಲ್ಲಿ ಫೋಟೋ ತೆಗೆದುಕೊಳ್ಳುವ ಆಸೆ ಇರುತ್ತದೆ. ಹಿರಿಯರೊಂದಿಗೆ, ಕುಟುಂಬ ಸಮಾರಂಭಗಳಲ್ಲಿ ಅಥವಾ ಸುಂದರ ಪ್ರಕೃತಿಯ ಮಧ್ಯದಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಹೆಚ್ಚಾಗಿ ಬಿಟ್ಟಿದೆ. ಆದರೆ, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಸೆಲ್ಫಿ ತೆಗೆಸಿಕೊಳ್ಳುವುದು ಇದು ಅಷ್ಟು ಶುಭವಲ್ಲ. ಅದರಲ್ಲಿ ಮುಖ್ಯವಾಗಿ ದೇವಾಲಯಗಳಲ್ಲಿ, ವಿಶೇಷವಾಗಿ ಮೂಲ ವಿಗ್ರಹ ಅಥವಾ ಗರ್ಭಗುಡಿಯೊಳಗೆ ಸೆಲ್ಫಿ ಅಥವಾ ಫೋಟೋಗಳನ್ನು ತೆಗೆದುಕೊಳ್ಳುವುದು ಶುಭವಲ್ಲ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್…

Read More

Video: ಯಾಕೆ ಹಣ್ಣಿಗೆ ಕೊಳಕು ನೀರು ಸಿಂಪಡಣೆ ಮಾಡ್ತೀಯ ಎಂದಿದ್ದಕ್ಕೆ ಗಟ ಗಟನೆ ಚರಂಡಿ ನೀರು ಕುಡಿದ ಹಣ್ಣಿನ ವ್ಯಾಪಾರಿ – Kannada News | Virar Vendor Caught Using Gutter Water on Fruits, Locals Intervene

ವಿರಾರ್, ಫೆಬ್ರವರಿ 04: ಯಾಕೆ ಹಣ್ಣಿಗೆ ಚರಂಡಿ ನೀರು ಸಿಂಪಡಣೆ ಮಾಡ್ತೀರಾ ಎಂದು ಕೇಳಿದ್ದಕ್ಕೆ ಹಣ್ಣಿನ ವ್ಯಾಪಾರಿಯೊಬ್ಬ ಗಟ ಗಟನೆ ಚರಂಡಿ ನೀರು ಕುಡಿದಿರುವ ಘಟನೆ ಮಹಾರಾಷ್ಟ್ರದ ವಿರಾರ್​​ನಲ್ಲಿ ನಡೆದಿದೆ. ನಂತರ ಸ್ಥಳೀಯರು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದರು. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ವೀಡಿಯೊವು ಪುರುಷರ ಗುಂಪೊಂದು ಹಣ್ಣಿನ ಮಾರಾಟಗಾರನಿಗೆ ಹಣ್ಣುಗಳ ಮೇಲೆ ಸಿಂಪಡಿಸುತ್ತಿದ್ದ ನೀರು ಗಟರ್ ನೀರು ಆದರೆ ಅವನು ಆ ನೀರು ಬಿಎಂಸಿ ನೀರು ಎಂದು ವಾದಿಸುತ್ತಿದ್ದ. ಬಿಎಂಸಿ ನೀರು ಎಲ್ಲಿದೆ…

Read More

IPL 2026: ಐಪಿಎಲ್​ಗೆ SRH ತಂಡದ ಸ್ಟಾರ್ ಆಟಗಾರ ಡೌಟ್

ಟಿ20 ವಿಶ್ವಕಪ್​ ಮುಕ್ತಾಯದ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಶುರುವಾಗಲಿದೆ. ಮಾರ್ಚ್ 26 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಕಾಣಿಸಿಕೊಳ್ಳುವುದು ಅನುಮಾನ. ಏಕೆಂದರೆ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಪ್ಯಾಟ್ ಕಮಿನ್ಸ್ ಮುಂಬರುವ ಟಿ20 ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ. ಅಲ್ಲದೆ ಸಂಪೂರ್ಣ ಫಿಟ್ ಆದರೆ ಮಾತ್ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಐಪಿಎಲ್​ ಆಡುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ಯಾಟ್ ಕಮಿನ್ಸ್, ಸದ್ಯಕ್ಕೆ…

Read More

ಬ್ರಾಹ್ಮಣ ಸಮುದಾಯಕ್ಕೆ ಅವಮಾನ? ಮನೋಜ್ ಸಿನಿಮಾ ವಿರುದ್ಧ ಆಕ್ರೋಶ – Kannada News | Ghooskhor Pandat movie landed in controversy for its name

ಸಿನಿಮಾಗಳು (Cinema) ವಿವಾದಕ್ಕೆ ಸಿಲುಕುವುದು ತೀರ ಸಾಮಾನ್ಯ ಆಗಿಬಿಟ್ಟಿದೆ. ಸಿನಿಮಾಗಳಲ್ಲಿ ಜಾತಿ, ಧರ್ಮ, ಸಮುದಾಯ, ವೃತ್ತಿಯ ಅಪಮಾನ ಮಾಡಲಾಗಿದೆ ಎಂಬ ದೂರು ಇತ್ತೀಚೆಗೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇದೇ ಸಾಲಿಗೆ ಖ್ಯಾತ ನಟ ಮನೋಜ್ ಬಾಜಪೇಯಿ ನಟನೆಯ ಸಿನಿಮಾ ಸಹ ಸೇರಿಕೊಂಡಿದೆ. ಮನೋಜ್ ನಟನೆಯ ಹೊಸ ಸಿನಿಮಾ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಹೆಸರಿನ ಬಗ್ಗೆ ಇದೀಗ ಆಕ್ರೋಶ ವ್ಯಕ್ತವಾಗಿದೆ. ಸಿನಿಮಾದ ಹೆಸರು ಬದಲಾವಣೆ ಮಾಡದಿದ್ದಲ್ಲಿ ಸಿನಿಮಾ ಬಹಿಷ್ಕರಿಸುವುದಾಗಿ ಹಲವರು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದಾರೆ. ಮನೋಜ್…

Read More

ಮಹಿಳೆಯರಲ್ಲಿ ಕ್ಯಾನ್ಸರ್​​ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು – Kannada News | Oncologists Warn of Rising Cancer Cases Among Young Women, Urge Not to Ignore Symptoms

ಬೆಂಗಳೂರು, ಫೆಬ್ರವರಿ 04: ಕ್ಯಾನ್ಸರ್‌ನ ಪ್ರವೃತ್ತಿಗಳಲ್ಲಿ ಕಳವಳಕಾರಿ ಬದಲಾವಣೆ ಕಂಡುಬರುತ್ತಿದ್ದು, ಕಡಿಮೆ ವಯಸ್ಸಿನ ಮಹಿಳೆಯರಲ್ಲಿಯೇ ಹೆಚ್ಚಾಗಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಆಂಕಾಲಜಿಸ್ಟ್‌ಗಳು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ರೋಗ ಲಕ್ಷಣಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಮಹಿಳೆಯರು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂಬ ಮನವಿಯನ್ನೂ ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನ್ ಕೆ.ಆರ್. ಮಾಡಿದ್ದಾರೆ. ಸ್ಥೂಲತೆ, ಇನ್ಸುಲಿನ್ ಪ್ರತಿರೋಧ, ಮಧುಮೇಹ, ನಿರಂತರ ಒತ್ತಡ, ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದಿರುವುದು, ತಂಬಾಕು ಸೇವನೆ ಹಾಗೂ…

Read More

ಹೊಸ ಅವತಾರದಲ್ಲಿ ರುಕ್ಮಿಣಿ ವಸಂತ್; ಇಲ್ಲಿವೆ ಸುಂದರ ಫೋಟೋಗಳು – Kannada News | Rukmini Vasanth Looks Amazing In her New look and New photoshoot

ರುಕ್ಮಿಣಿ ವಸಂತ್ ಅವರ ಹೊಸ ಫೋಟೋಶೂಟ್ ವೈರಲ್ ಆಗಿದೆ. ಈ ಫೋಟೋಶೂಟ್​ ಅಲ್ಲಿ ಅವರು ಗಮನ ಸೆಳೆದಿದ್ದಾರೆ. ಅವರ ಡ್ರೆಸ್​​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ರುಕ್ಮಿಣಿ ಅವರು ಮತ್ತಷ್ಟು ಸುಂದರವಾಗಿ ಕಾಣಿಸಿದ್ದಾರೆ. Source link

Read More

ಪತ್ನಿಯ ಚಿಕಿತ್ಸೆಗೆಂದು ಇಟ್ಟಿದ್ದ ಸಾಲದ ಹಣವನ್ನೇ ಹೊತ್ತೊಯ್ದ ಕದೀಮರು! – Kannada News | Thieves Break Car Glass, Loot Rs.2.5 Lakh Meant for Treatment in Nelamangala

ನೆಲಮಂಗಲ, ಫೆಬ್ರುವರಿ 04: ಪತ್ನಿಯ ಚಿಕಿತ್ಸೆಗೆಂದು ಸಂಗ್ರಹಿಸಿದ್ದ ಸಾಲದ ಹಣವನ್ನೇ ಕಳ್ಳರು  ದೋಚಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜಿಎಸ್ ಆಸ್ಪತ್ರೆ ಬಳಿ ನಡೆದಿದೆ. ಚಿಕ್ಕಬಾಣವರ ನಿವಾಸಿ ಹೇಮಣ್ಣ ಎಂಬುವವರು ತಮ್ಮ ಪತ್ನಿ ಅನಸೂಯ ಅವರಿಗೆ ಅನಾರೋಗ್ಯ ಹಿನ್ನೆಲೆ ನಗರೂರು ಸಮೀಪದ ಬಿಜಿಎಸ್ ಆಸ್ಪತ್ರೆಗೆ ಆಯುರ್ವೇದ ಚಿಕಿತ್ಸೆಗಾಗಿ ತೆರಳಿದ್ದರು. ಚಿಕಿತ್ಸೆಗಾಗಿ ಹಾಗೂ ಮತ್ತೊಬ್ಬರಿಗೆ ಹಣ ನೀಡಬೇಕಿದ್ದ ಕಾರಣ ಹೇಮಣ್ಣ ಸುಮಾರು ಎರಡು ಲಕ್ಷ ಐವತ್ತು ಸಾವಿರ ರೂಪಾಯಿ ಸಾಲ ಪಡೆದು ಕಾರಿನ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ಪತ್ನಿಯನ್ನು…

Read More

Home Positivity: ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚಾಗಲು ಈ 4 ಸರಳ ಮಾರ್ಗ ಅನುಸರಿಸಿ – Kannada News | Home Positivity: Women’s Role, Cleanliness and Rituals for Peace and Prosperity

ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಸಕಾರಾತ್ಮಕತೆ ನೆಲೆಸಲು ಕುಟುಂಬದ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾದರೂ, ಅದರಲ್ಲೂ ಮಹಿಳೆಯರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಮನೆಯ ಸ್ವಚ್ಛತೆ, ಪೂಜೆ-ಪಾಠ, ದಿನನಿತ್ಯದ ಸಣ್ಣ ಅಭ್ಯಾಸಗಳು – ಇವೆಲ್ಲವೂ ಮನೆಯ ವಾತಾವರಣವನ್ನು ರೂಪಿಸುತ್ತವೆ. ನಮ್ಮ ಹಿರಿಯರು ಹೇಳುವಂತೆ, ಲಕ್ಷ್ಮೀ ದೇವಿ ಯಾವಾಗಲೂ ಸ್ವಚ್ಛ, ಪ್ರಕಾಶಮಾನ ಮತ್ತು ಸಾತ್ವಿಕ ಶಕ್ತಿಯಿರುವ ಸ್ಥಳದಲ್ಲೇ ವಾಸಿಸುತ್ತಾಳೆ. ಆದ್ದರಿಂದ ಮನೆಗೆ ದೈವಿಕ ಶಕ್ತಿಯನ್ನು ಆಕರ್ಷಿಸಲು ಕೆಲವು ಸರಳ ಕ್ರಮಗಳನ್ನು ಪಾಲಿಸುವುದು ಬಹಳ ಉಪಯುಕ್ತ. ಮೊದಲನೆಯದಾಗಿ, ಸ್ವಚ್ಛತೆ ಅತ್ಯಂತ ಮುಖ್ಯ. ಅಸ್ತವ್ಯಸ್ತವಾಗಿರುವ…

Read More

‘ವಾರಣಾಸಿ’ ಚಿತ್ರೀಕರಣಕ್ಕೆ ಐಮ್ಯಾಕ್ಸ್ ಬಳಸಿದ್ದೇಕೆ: ಕಾರಣ ನೀಡಿದ ರಾಜಮೌಳಿ – Kannada News | SS Rajamouli explains why he choose IMAX camera to Shoot Varanasi movie

ರಾಜಮೌಳಿ (Rajamouli) ನಿರ್ದೇಶಿಸಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ‘ವಾರಣಾಸಿ’ ಭಾರತದಲ್ಲಿ ಮಾತ್ರವಲ್ಲ ವಿಶ್ವ ಸಿನಿಮಾ ರಂಗದಲ್ಲಿಯೇ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಪೋಸ್ಟ್ ಪ್ರೊಡಕ್ಷನ್ ಶುರುವಾಗಲಿದೆ. ಕೆಲ ವಾರಗಳ ಹಿಂದಷ್ಟೆ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆ ದಿನ ಮಾತನಾಡಿದ್ದ ರಾಜಮೌಳಿ, ಈ ಸಿನಿಮಾಕ್ಕಾಗಿ ತಾವು ಐಮ್ಯಾಕ್ಸ್ ಕ್ಯಾಮೆರಾಗಳನ್ನು ಬಳಸಿದ್ದಾಗಿ ಹೇಳಿದ್ದರು. ಇದೀಗ ತಾವು, ಐಮ್ಯಾಕ್ಸ್ ಕ್ಯಾಮೆರಾಗಳನ್ನೇ ಬಳಸಿದ್ದು ಏಕೆಂದು ವಿವರಿಸಿದ್ದಾರೆ….

Read More