Category Archives: Blog

Your blog category

ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂ ಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್!

ರಾಮನಗರ, ಜನವರಿ 01: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ತಡರಾತ್ರಿ ಭಯಾನಕ ಘಟನೆಯೊಂದು ನಡೆದಿದೆ. ಗ್ರಾಮದ ಮಧ್ಯದಲ್ಲಿ ವಾಮಾಚಾರ ಮಾಡಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜನರಿಗೆ ಆಘಾತ ಎದುರಾಗಿದೆ. ರಸ್ತೆಯಲ್ಲಿ ಅರಿಶಿನ, ಕುಂಕುಮ, ನಿಂಬೆಹಣ್ಣು, ದೀಪ ಇಟ್ಟು ಪೂಜೆ ಮಾಡಲಾಗಿದೆ. ತಮಾಷೆಗೆ ಮಾಡಿದ್ದಾರಾ ಅಥವಾ ಉದ್ದೇಶ ಪೂರ್ವಕವಾಗಿ ಮಾಡಿದ್ದಾರಾ ಎಂಬುವುದು ತಿಳಿದುಬಂದಿಲ್ಲ. ಸದ್ಯ ಇದರಿಂದಾಗಿ ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಪೊಲೀಸ್​​ ತನಿಖೆಗೆ ಜನರು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

 

Source link

ಆಧಾರ್​​ ಕಾರ್ಡ್​​ನಲ್ಲಿ ಹೆಸರು ಬದಲಾಯಿಸಬೇಕೆ? ಹಾಗಿದ್ರೆ ನೀವು ಈ ನಿಯಮ ಪಾಲಿಸಲೇ ಬೇಕು – Kannada News | Aadhaar Name Change: Online, Offline, Gazette Process Details​​

ಆಧಾರ್​​ ಕಾರ್ಡ್​​ನಲ್ಲಿ ಹೆಸರು ಬದಲಾವಣೆ.

ಬೆಂಗಳೂರು, ಜನವರಿ 01: ಅಕ್ಷರ ದೋಷ, ಮದುವೆಯಾದ ಬಳಿಕ ಅಥವಾ ಇನ್ಯಾವುದೋ ಕಾರಣಕ್ಕೆ ಇಂದು ಬಹುತೇಕ ಎಲ್ಲ ವ್ಯವಹಾರಗಳಿಗೆ ಅಗತ್ಯವಾದ ಆಧಾರ್​​ ಕಾರ್ಡ್​​ನಲ್ಲಿ ಹೆಸರು ಬದಲಾವಣೆ ಮಾಡಲೇ ಬೇಕಾಗುತ್ತದೆ. ಸಣ್ಣಪುಟ್ಟ ಬದಲಾವಣೆಯನ್ನು ಆನ್​​ಲೈನ್​​ ಮತ್ತು ಆಫ್​​ಲೈನ್​​ ಮೂಲಕ ಮಾಡಬಹುದಾಗಿದ್ದರೆ, ದೊಡ್ಡ ಬದಲಾವಣೆಗಳಿಗೆ ಗೆಜೆಟ್​​ ನೋಟಿಫಿಕೇಶನ್​​ ಪ್ರಕ್ರಿಯೆ ಪಾಲಿಸಲೇ ಬೇಕಾಗುತ್ತದೆ.

ಆಧಾರ್​​ನಲ್ಲಿ ಹೆಸರು ಬದಲಾವಣೆ ಮಾಡಲು ಇರುವ ಪ್ರಮುಖ 3 ವಿಧಾನಗಳ ಬಗ್ಗೆ ಹಂತಗಳ ಸಮೇತವಾಗಿ ವಿವರಣೆ ಇಲ್ಲಿದೆ.

1. ಆನ್‌ಲೈನ್ ಮೂಲಕ ಹೆಸರು ಬದಲಾವಣೆ ಹೇಗೆ?

  • ಅಧಿಕೃತ ವೆಬ್‌ಸೈಟ್ uidai.gov.in ಅಥವಾ myAadhaar Self-Service Portal ತೆರೆಯಿರಿ.
  • ನಿಮ್ಮ 12-ಅಂಕಿಯ ಆಧಾರ್ ನಂಬರ್ ಮತ್ತು ಕ್ಯಾಪ್ಚಾ ನಮೂದಿಸಿ, ‘Send OTP’ ಕ್ಲಿಕ್ ಮಾಡಿ, ಮೊಬೈಲ್‌ಗೆ ಬಂದ OTP ನಮೂದಿಸಿ ಲಾಗಿನ್ ಆಗಿ.
  • ‘Update Demographics Data’ ಕ್ಲಿಕ್ ಮಾಡಿ, ನಂತರ ‘Name’ ಆಯ್ಕೆ ಮಾಡಿ.
  • ಸರಿಯಾದ ಹೆಸರನ್ನು ನಮೂದಿಸಿ, ಅದು ನಿಮ್ಮ ಬೆಂಬಲಿತ ದಾಖಲೆಯಲ್ಲಿರುವಂತೆಯೇ ಇರಬೇಕು.
  • ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಮಾನ್ಯ ದಾಖಲೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ.
  • 50 ರೂ. ಶುಲ್ಕವನ್ನು ಡೆಬಿಟ್/ಕ್ರೆಡಿಟ್ ಕಾರ್ಡ್, UPI ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ.
  • ಯಶಸ್ವಿಯಾದ ನಂತರ URN ನಂಬರ್ ಬಳಸಿ ಅಪ್‌ಡೇಟ್ ಸ್ಟೇಟಸ್ ಟ್ರ್ಯಾಕ್ ಮಾಡಬಹುದು.

2. ಆಫ್‌ಲೈನ್ ಮೂಲಕ ಹೆಸರು ಬದಲಾವಣೆ ಹೇಗೆ?

  • ಹತ್ತಿರದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ.
  • ಅಲ್ಲಿ ಲಭ್ಯವಿರುವ ಆಧಾರ್ ಅಪ್‌ಡೇಟ್ ಫಾರ್ಮ್ ಅನ್ನು ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳೊಂದಿಗೆ ಭರ್ತಿ ಮಾಡಿದ ಫಾರ್ಮ್ ಅನ್ನು ಸಲ್ಲಿಸಿ ಮತ್ತು ನಿಗದಿತ ಶುಲ್ಕ ಪಾವತಿಸಿ.

ಇವು ಹೆಸರಿನ ಸಣ್ಣಪುಟ್ಟ ಬದಲಾವಣೆಗೆ ಇರುವ ಪ್ರಕ್ರಿಯೆಗಳಾದರೆ ಪೂರ್ತಿ ಹೆಸರಿನ ಬದಲಾವಣೆಗೆ ಕೆಲವು ಸುದೀರ್ಘ ಪ್ರಕ್ರಿಯೆಯನ್ನು ಸಾರ್ವಜನಿಕರು ಪಾಲಿಸಬೇಕಾಗುತ್ತದೆ. ಇದಕ್ಕೆ ತಗಲುವ ಶುಲ್ಕವೂ ಕೊಂಚ ಹೆಚ್ಚು. ಹೆಸರು ಬದಲಾವಣೆ ಸೇವಾ ಕೇಂದ್ರದ ಮಾಹಿತಿ ಪ್ರಕಾರ ಕೇಸ್​​ಗಳ ಆಧಾರದಲ್ಲಿ ಶುಲ್ಕದಲ್ಲಿ ವ್ಯತ್ಯಾಸವಾಗಲಿದೆ. ಅಂದಾಜಿನ ಪ್ರಕಾರ 10-12 ಸಾವಿರ ರೂ. ಇದಕ್ಕೆ ವೆಚ್ಚವಾಗಬಹುದು.

3. ಗೆಜೆಟ್​​ ನೋಟಿಫಿಕೇಶನ್ ಮೂಲಕ ಹೆಸರು ಬದಲಾವಣೆ

  • ಈಗಿರುವ ಹೆಸರು, ಬದಲಾಗಬೇಕಿರುವ ಹೆಸರು ಮತ್ತು ಈ ಬದಲಾವಣೆಗೆ ಕಾರಣ ಏನು ಎಂಬ ಬಗ್ಗೆ ಮೊದಲು ಕೋರ್ಟ್​​ಗೆ ಅಫಿಡವಿಟ್​​ ಸಲ್ಲಿಸಬೇಕು.
  • ಆಂಗ್ಲ ಭಾಷೆ ಮತ್ತು ಪ್ರಾದೇಶಿಕ/ಸ್ಥಳೀಯವಾಗಿರುವ ತಲಾ ಒಂದು ದಿನ ಪತ್ರಿಕೆಗಳಲ್ಲಿ ಈ ಬಗ್ಗೆ ಜಾಹೀರಾತು ನೀಡಬೇಕು.
  • ಅಫಿಡವಿಟ್​​, ದಿನಪತ್ರಿಕೆಯ ಜಾಹೀರಾತು ಪ್ರತಿ, ಗುರುತಿನ ದಾಖಲೆ, ವಿಳಾಸ ಸಂಬಂಧಿತ ದಾಖಲೆ ಮತ್ತು ಫೋಟೋಗಳನ್ನು ಒಳಗೊಂಡ ಅರ್ಜಿಯನ್ನು ಗೆಜೆಟ್​​ ಆಫೀಸ್​​ಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಈ ವೆಬ್​​ಸೈಟ್​​ಗೆ ಭೇಟಿ ನೀಡಿ. https://changeofname.in/gazette-office-in-bangalore/#steps
  • ಆ ಬಳಿಕ ಗೆಜೆಟ್​​ ಆಫೀಸ್​​ ನಿಮ್ಮ ಅರ್ಜಿ ಬಗ್ಗೆ ಪರಿಶೀಲನೆ ನಡೆಸಿ, ಅನುಮೋದನೆ ನೀಡಲಿದೆ.
  • ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ ಹೆಸರು ಬದಲಾಗಿರುವ ಬಗ್ಗೆ ಗೆಜೆಟ್​​ ನೋಟಿಫಿಕೆಶನ್ ಪ್ರಕಟವಾಗಲಿದೆ.
  • ಅಂತಿಮವಾಗಿ ನಿಮ್ಮ ಹೆಸರು ಬದಲಾಗಿರುವ ಬಗ್ಗೆ ಗೆಜೆಟ್​​ ಪ್ರತಿ ನಿಮ್ಮ ಕೈಸೇರಲಿದೆ. ಇದರನ್ವಯ ನೀವು ಆಧಾರ್​​ ಹೆಸರನ್ನು ಬದಲಾಯಿಸಬಹುದು.

ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಸೇರಿ ನಾನಾ ಕಾರಣಗಳಿಂದಾಗಿ ಹಲವರು ತಮ್ಮ ಹೆಸರನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳುತ್ತಾರೆ ಅಥವಾ ಅದರಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುತ್ತಾರೆ. ಈ ಸಂದರ್ಭಗಳಲ್ಲಿ ಆಧಾರ್​​ನಲ್ಲಿ ನೇಮ್​ ಚೇಂಜ್​​ ಮಾಡಲು ಬೆಂಬಲಿತ ಅಗತ್ಯ ಮಾನ್ಯ ದಾಖಲೆಗಳು ಇರದ ಸಂದರ್ಭ ಈ ರೀತಿ ಗೆಜೆಟ್​​ ನೋಟಿಫೀಕೇಶನ್​​ ಮೂಲಕವೇ ಹೆಸರು ಬದಲಾವಣೆ ಅನಿವಾರ್ಯವಾಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರಭಾಸ್ ಸಿನಿಮಾ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ ಗೊತ್ತೆ? – Kannada News | Prabhas starrer The Raja Saab movie director get 18 crore rs as remuneration

ಪ್ರಭಾಸ್ (Prabhas) ಭಾರತದ ಟಾಪ್ ಪ್ಯಾನ್ ಇಂಡಿಯಾ (Pan India) ನಟ. ಅವರ ಸಂಭಾವನೆ ನೂರು ಕೋಟಿಯನ್ನೂ ದಾಟಿದೆ. ಕೆಲ ಸಿನಿಮಾಗಳಿಗೆ 150 ಕೋಟಿ ರೂಪಾಯಿ ಸಂಭಾವನೆಯನ್ನೂ ಸಹ ಪ್ರಭಾಸ್ ಪಡೆಯುತ್ತಿದ್ದಾರೆ. ಅವರಿಗಿರುವ ಮಾರುಕಟ್ಟೆಗೆ ತಕ್ಕಂತೆ ಸಂಭಾವನೆ ನಿಗದಿ ಪಡಿಸಿಕೊಂಡಿದ್ದಾರೆ. ಆದರೆ ಅವರಿಂದಾಗಿ ಅವರ ಸಿನಿಮಾಗಳ ತಂತ್ರಜ್ಞರ ಸಂಭಾವನೆಯೂ ಏರಿಕೆ ಆಗಿದೆ. ಇದೀಗ ಪ್ರಭಾಸ್ ‘ದಿ ರಾಜಾ ಸಾಬ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ ಗೊತ್ತೆ? ಆ ಸಂಭಾವನೆ ಮೊತ್ತದಲ್ಲಿ ನಾಲ್ಕೈದು ‘ಸು ಫ್ರಂ ಸೋ’ ರೀತಿಯ ಸಿನಿಮಾ ನಿರ್ಮಾಣ ಮಾಡಿ ಬಿಡಬಹುದು.

‘ದಿ ರಾಜಾ ಸಾಬ್’ ಸಿನಿಮಾ ನಿರ್ದೇಶನ ಮಾಡಿರುವುದು ಮಾರುತಿ ಹೆಸರಿನ ನಿರ್ದೇಶಕ. ಈ ಹಿಂದೆ ಈ ನಿರ್ದೇಶಕನಿಂದ ಭಾರಿ ದೊಡ್ಡ ಹಿಟ್ ಸಿನಿಮಾಗಳು ಯಾವುವೂ ಮೂಡಿ ಬಂದಿಲ್ಲ. ತೀರಾ ಸಾಧಾರಣ ಎನ್ನಬಹುದಾದ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ದೊಡ್ಡ ಸ್ಟಾರ್ ನಟರುಗಳೊಟ್ಟಿಗೆ ಕೆಲಸ ಮಾಡಿದ್ದು ಸಹ ಇಲ್ಲ. ಆದರೂ ಪ್ರಭಾಸ್, ಕೇವಲ ಮಾರುತಿ ಹೇಳಿದ ಕತೆ ಇಷ್ಟವಾಗಿ ಅವರೊಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡರು ಮಾತ್ರವಲ್ಲದೆ, ‘ದಿ ರಾಜಾ ಸಾಬ್’ ಸಿನಿಮಾಕ್ಕೆ ತಮ್ಮ ಜೀವನದ ಎರಡು ವರ್ಷಕ್ಕೂ ಹೆಚ್ಚು ಸಮಯ ಸಹ ನೀಡಿದ್ದಾರೆ.

‘ದಿ ರಾಜಾ ಸಾಬ್’ ಸಿನಿಮಾ ಇದೇ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರ ಕಾರ್ಯ ಚಾಲ್ತಿಯಲ್ಲಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾರುತಿ, ಈ ಸಿನಿಮಾಕ್ಕೆ ತಾವು ಪಡೆದ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ. ‘ದಿ ರಾಜಾ ಸಾಬ್’ ಸಿನಿಮಾಕ್ಕೆ ಮಾರುತಿ ಅವರಿಗೆ ಬರೋಬ್ಬರಿ 18 ಕೋಟಿ ರೂಪಾಯಿ ಸಂಭಾವನೆ ದೊರೆತಿದೆಯಂತೆ. ಇದು ಸಾಮಾನ್ಯ ಮೊತ್ತವಲ್ಲ. ಅದೂ ದೊಡ್ಡ ಹೆಸರು ಮಾಡದ ನಿರ್ದೇಶಕರೊಬ್ಬರಿಗೆ ಇಷ್ಟು ದೊಡ್ಡ ಸಂಭಾವನೆ ಸಿಗುವುದು ಬಹಳ ಅಪರೂಪ.

ಇದನ್ನೂ ಓದಿ:‘ಸ್ಪಿರಿಟ್’ ಚಿತ್ರಕ್ಕಾಗಿ ಶರ್ಟ್​​ಲೆಸ್ ಆದ ಪ್ರಭಾಸ್; ಸಖತ್ ರಾ ಆಗಿದೆ ಪೋಸ್ಟರ್

‘ದಿ ರಾಜಾ ಸಾಬ್’ ಸಿನಿಮಾಕ್ಕೆ ನನ್ನ ಜೀವನದ ಕಳೆದ ಮೂರು ವರ್ಷಗಳನ್ನು ವ್ಯಯಿಸಿದ್ದೇನೆ ಹಾಗಾಗಿ ಆ ಮೂರು ವರ್ಷಗಳನ್ನು ಸೇರಿಸಿ 18 ಕೋಟಿ ಸಂಭಾವನೆ ನೀಡಿದ್ದಾರೆ ಎಂದಿದ್ದಾರೆ. ಇದಕ್ಕೆ ಪರೋಕ್ಷ ಕಾರಣ ಪ್ರಭಾಸ್ ಎಂದೂ ಸಹ ಮಾರುತಿ ಹೇಳಿಕೊಂಡಿದ್ದಾರೆ. ಅಂದಹಾಗೆ ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರುಗಳಿಗೆ ಭಾರಿ ದೊಡ್ಡ ಸಂಭಾವನೆ ನೀಡಲಾಗುತ್ತದೆ. ರಾಜಮೌಳಿ ಅವರಿಗೆ ಯಾವ ಸ್ಟಾರ್ ನಟರಿಗೂ ನೀಡದಷ್ಟು ಸಂಭಾವನೆ ನೀಡಲಾಗುತ್ತಿದೆ ‘ವಾರಣಾಸಿ’ ಸಿನಿಮಾಕ್ಕೆ. ಬೋಯಪಾಟಿ ಸೀನು ಅವರಿಗೂ ಸಹ ಸುಮಾರು 10 ಕೋಟಿಗೂ ಹೆಚ್ಚು ಮೊತ್ತದ ಸಂಭಾವನೆ ನೀಡಲಾಗುತ್ತದೆಯಂತೆ.

ಇನ್ನು ‘ದಿ ರಾಜಾ ಸಾಬ್’ ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಪ್ರಭಾಸ್ ಮೊದಲ ಬಾರಿಗೆ ಹಾರರ್ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಪ್ರಭಾಸ್ ಅವರದ್ದು ದ್ವಿಪಾತ್ರ ಮಾತ್ರವಲ್ಲದೆ ಸಿನಿಮಾನಲ್ಲಿ ಸಂಜಯ್ ದತ್ ಸಹ ನಟಿಸಿದ್ದಾರೆ. ಸಿನಿಮಾನಲ್ಲಿ ಮಾಳವಿಕಾ ಮೋಹನನ್, ರಿಧಿ ಕುಮಾರ್, ನಿಧಿ ಅಗರ್ವಾಲ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷದಂದು ಬಿಎಂಟಿಸಿಗೆ ಭರ್ಜರಿ ಆದಾಯ: ನಿನ್ನೆ ಒಂದೇ ದಿನ ಗಳಿಸಿದ್ದೆಷ್ಟು ಗೊತ್ತಾ? – Kannada News | Bengaluru New Year Bus Surge: BMTC Earns 10 Lakh with Special Services

ಬೆಂಗಳೂರು, ಜನವರಿ 1: 2025ಕ್ಕೆ ಗುಡ್ ಬೈ ಹೇಳಿ 2026ರನ್ನು ಜನರು ಅದ್ಧೂರಿಯಾಗಿ ವೆಲ್​ಕಂ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆ ಜೋರಾಗಿತ್ತು. ಹೊಸ ವರ್ಷದ (new year) ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ಬಿಎಂಟಿಸಿಯಿಂದ (BMTC) ಹೆಚ್ಚುವರಿ ಬಸ್​ ಸೇವೆ ಒದಗಿಸಲಾಗಿತ್ತು. ಹೀಗಾಗಿ ಬಿಎಂಟಿಸಿ ಭಾರಿ ಆದಾಯ ಗಳಿಸಿದೆ. ನಿನ್ನೆ (ಬುಧವಾರ) ಒಂದೇ ದಿನ ಬಿಎಂಟಿಸಿಗೆ ಬರೋಬ್ಬರಿ 10 ಲಕ್ಷ ರೂ ಆದಾಯ ಹರಿದುಬಂದಿದೆ.

ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಹೇಳಿದ್ದಿಷ್ಟು 

ಈ ಬಗ್ಗೆ ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಮಾತನಾಡಿದ್ದು, ಹೊಸ ವರ್ಷಕ್ಕೆ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗಿತ್ತು. ಹೆಚ್ಚುವರಿ 200 ಟ್ರಿಪ್ ಮಾಡಲಾಗಿದೆ. 4400 ಕಿ.ಮೀ ಬಸ್ ಓಡಾಡಿವೆ. ರಾತ್ರಿ 11 ಗಂಟೆಯಿಂದ ಮಧ್ಯರಾತ್ರಿ 3 ಗಂಟೆ ತನಕ ಬಸ್ ಸೇವೆ ಒದಗಿಸಲಾಗಿತ್ತು. ಸರಿಸುಮಾರು ಒಂದು ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ನಿನ್ನೆ ಒಂದೇ ದಿನ ಬಿಎಂಟಿಸಿ 10 ಲಕ್ಷ ರೂ ಆದಾಯ ಗಳಿಸಿದೆ.

ಇದನ್ನೂ ಓದಿ: ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಆದ ಕಲೆಕ್ಷನ್​ ಎಷ್ಟು?

ಕೋರಮಂಗಲ, ಇಂದಿರಾನಗರ, ಮಾಲ್ ಆಫ್ ಏಶಿಯಾ, ಎಂಜಿ ರಸ್ತೆ ಹೀಗೆ ನಾನಾ ಕಡೆಗಳಲ್ಲಿ ಸೇವೆ ವಿಸ್ತರಣೆ ಮಾಡಲಾಗಿತ್ತು. ಡಿಸೆಂಬರ್​ 20ರಂದು 6 ಕೋಟಿ 75 ಲಕ್ಷ ರೂ ಆದಾಯ ಇತ್ತು. ಐಟಿ ಬಿಟಿ ಜನರಿಗೆ ರಜೆ ಇರುವ ಕಾರಣ, ಡಿಸೆಂಬರ್ 24ರಿಂದ ಬಸ್ ಪ್ರಯಾಣಿಕರ ಸಂಖ್ಯೆ ಇಳಿಕೆ ಆಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನ್ಯೂ ಇಯರ್​​​ ಸಂಭ್ರಮ ಮಧ್ಯೆ ಕಿರಿಕ್: ಗೆಳೆಯನಿಗೆ ಹೊಡೆದ ಯುವತಿ, ನಡುರೋಡಲ್ಲೇ ಜೋಡಿ ಹೈಡ್ರಾಮಾ, ಲಾಠಿ ಚಾರ್ಜ್

ಡಿಸೆಂಬರ್​ 25, 27, 28ರಂದು ಕಡಿಮೆ ಪ್ರಯಾಣಿಕರು ಓಡಾಟ ಮಾಡಿದ್ದು, 60 ಲಕ್ಷ ರೂ ಆದಾಯ ಕಡಿಮೆ ಆಗಿತ್ತು. 6 ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ ಇತ್ತು. ಆದರೆ ಹೊಸ ವರ್ಷ ಹಿನ್ನೆಲೆ ಬುಧವಾರ ಒಂದೇ ದಿನ 1 ಲಕ್ಷ ಪ್ರಯಾಣಿಕರು ಹೆಚ್ಚಾಗಿದ್ದಾರೆ ಎಂದು ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Holidays Calendar 2026: 2026ರಲ್ಲಿ ಪ್ರವಾಸ ಪ್ರಿಯರಿಗೆ ಸಿಗಲಿವೆ ಸಾಲು ಸಾಲು ರಜೆಗಳು; ಸಂಪೂರ್ಣ ವಿವರ ಇಲ್ಲಿದೆ – Kannada News | Holidays Calendar 2026 : Plan Long Weekends and Vacations Smartly!

ಹೊಸ ವರ್ಷದ ಆಚರಣೆ ಆರಂಭವಾಗಿದೆ. ಹೊಸ ವರ್ಷದ ಆಚರಣೆಗಳು ಮಾತ್ರವಲ್ಲ, ಮುಂಬರುವ ರಜಾದಿನಗಳ ಬಗ್ಗೆಯೂ ಉತ್ಸಾಹ ಹೆಚ್ಚುತ್ತಿದೆ. ಏಕೆಂದರೆ ಜನವರಿ ತಿಂಗಳ ಮೊದಲ ವಾರದಿಂದ ಅನೇಕ ಸರ್ಕಾರಿ ರಜಾದಿನಗಳು, ಹಬ್ಬಗಳು ಮತ್ತು ರಾಷ್ಟ್ರೀಯ ದಿನಗಳು ಇರುತ್ತವೆ. ಇದು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಖುಷಿಯ ವಿಚಾರ. 2026 ಹೊಸ ವರ್ಷದೊಂದಿಗೆ ಸ್ವಾಗತಿಸುವುದರಿಂದ ಹಿಡಿದು ಡಿಸೆಂಬರ್​ ತಿಂಗಳನ್ನು ಕೊನೆಗೊಳಿಸುವವರೆಗೆ.. ಪ್ರತೀ ತಿಂಗಳು ವಿರಾಮ ತೆಗೆದುಕೊಂಡು ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಈ ವರ್ಷ ಎಷ್ಟು ರಜೆಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಪ್ರತೀ ತಿಂಗಳಲ್ಲಿ ಲಾಂಗ್​​ ವೀಕೆಂಡ್​ ಪಡೆಯಲು ಈ ರೀತಿ ಪ್ಲಾನ್​ ಮಾಡಿ:

ಜನವರಿ 01 ಹೊಸ ವರ್ಷದ ಆಗಿರುವುದರಿಂದ ಕಛೇರಿಯಲ್ಲಿ ರಜೆ ಇದ್ದರೆ ಮರುದಿನ ಶುಕ್ರವಾರ ರಜೆ ತಗೆದುಕೊಳ್ಳಿ. ಜೊತೆಗೆ ಶನಿವಾರ, ಆದಿತ್ಯವಾರ ರಜೆ ಇರುವುದರಿಂದ ನೀವು ಒಟ್ಟಾಗಿ 4 ರಜೆಗಳು ನಿಮ್ಮ ಕೈಯಲ್ಲಿ ಇರುತ್ತದೆ. ಆದ್ದರಿಂದ ಈ 4 ದಿನದಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಲಾಂಗ್​​ ವೀಕೆಂಡ್​ ರಜೆ ತೆಗೆದುಕೊಳ್ಳಬಹುದಾಗಿದೆ. ಇದೇ ತಿಂಗಳಲ್ಲಿ ಸಂಕ್ರಾಂತಿ ಹಬ್ಬವು (ಜನವರಿ 14) ಬುಧವಾರ ಬರುವುದರಿಂದ 15 ಮತ್ತು 16ರಂದು ರಜೆ ಪಡೆದು ಐದು ದಿನಗಳ ಲಾಂಗ್ ಬ್ರೇಕ್ ಪಡೆಯಬಹುದು. ಅದೇ ರೀತಿ ಗಣರಾಜ್ಯೋತ್ಸವ (ಜನವರಿ 26) ಇರುವುರಿಂದ ಆವಾಗಲೂ ಕೂಡ ನೀವು ಮೂರು ದಿನಗಳ ರಜೆಯನ್ನು ಪಡೆಯಬಹುದು.

ಮಾರ್ಚ್ ತಿಂಗಳಲ್ಲಿಯೂ ಕೂಡ ನೀವು ದೀರ್ಘ ರಜೆಯೊಂದಿಗೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯವನ್ನು ಕಳೆಯಬಹುದಾಗಿದೆ. ಮಾರ್ಚ್ 4ರಂದು ಹೋಳಿ ಹಬ್ಬ ಅಂದರೆ ಬುಧವಾರ ಬಂದಿರುವುದರಿಂದ ನೀವು 5 ಮತ್ತು 6ರಂದು ರಜೆ ತೆಗೆದುಕೊಂಡರೆ ವಾರಾಂತ್ಯ ಸೇರಿ ಐದು ದಿನಗಳ ರಜೆ ಸಿಗುತ್ತದೆ. ಅದರಂತೆ ಯುಗಾದಿ ಹಬ್ಬವೂ ಮತ್ತೊಂದು ಉತ್ತಮ ಅವಕಾಶವನ್ನು ನೀಡುತ್ತದೆ.

ಏಪ್ರಿಲ್‌ ತಿಂಗಳಲಿನಲ್ಲಿಯೂ ಕೂಡ ನೀವೂ ಕೆಲಸದ ಕಿರಿಕಿರಿ ಮಧ್ಯೆ ಲಾಂಗ್ ಬ್ರೇಕ್ ಪಡೆಯಬಹುದು. ಏಪ್ರಿಲ್‌ ತಿಂಗಳ ಮೂರನೇ ತಾರೀಕಿನಂದು ಅಂದರೆ ಶುಕ್ರವಾರ ಗುಡ್ ಫ್ರೈಡೇ ಬರುವುದರಿಂದ ನೀವು ಶುಕ್ರವಾರ, ಶನಿವಾರ–ಭಾನುವಾರದೊಂದಿಗೆ ಮೂರು ದಿನಗಳ ದೀರ್ಘ ರಜೆಯನ್ನು ಪಡೆಯಬಹುದು. ಈ ಮೂರು ದಿನದಲ್ಲಿ ನೀವು ಸುಂದರ ವೀಕೆಂಡ್ ಟ್ರಿಪ್ ಯೋಜಿಸಬಹುದು.

ಇದನ್ನೂ ಓದಿ: ಹೊಸ ವರ್ಷದ ಆಚರಣೆ ಪ್ರಾರಂಭವಾದದ್ದು ಹೇಗೆ? ಇಲ್ಲಿದೆ ಆಸಕ್ತಿದಾಯಕ ಸಂಗತಿ

ಮೇ ತಿಂಗಳಲ್ಲಿ ಕಾರ್ಮಿಕ ದಿನ (ಮೇ 1) ಶುಕ್ರವಾರವಾಗಿದ್ದು, ಮೂರು ದಿನಗಳ ಬ್ರೇಕ್ ಸಿಗುತ್ತದೆ. ಅದರಂತೆ ಜೂನ್‌ನಲ್ಲಿ ಮೊಹರಂ (ಜೂನ್ 26) ಶುಕ್ರವಾರ ಬಂದು ವಾರಾಂತ್ಯ ಸೇರಿ ಲಾಂಗ್ ರಜೆ ನೀಡುತ್ತದೆ. ಆದ್ದರಿಂದ ಮೇ ಮತ್ತು ಜೂನ್​ ಎರಡು ತಿಂಗಳಿನಲ್ಲಿ ಸಿಗುವ ಈ ದೀರ್ಘ ರಜೆಯನ್ನು ಮಿಸ್​ ಮಾಡ್ಲೇ ಬೇಡಿ.

ಸೆಪ್ಟೆಂಬರ್‌ ತಿಂಗಳಿನಲ್ಲಿ ಗಣೇಶ ಚತುರ್ಥಿ 14 ಅಂದರೆ ಸೋಮವಾರದಂದು ಬಂದಿರುವುದರಿಂದ ಕುಟುಂಬದೊಂದಿಗೆ ಹಬ್ಬವನ್ನು ಆಚರಿಸಲು ಸೂಕ್ತ ಸಮಯ. ನೀವು ಈ ತಿಂಗಳು ಶನಿವಾರ ಮತ್ತು ಆದಿತ್ಯವಾರ ಜೊತೆಗೆ ಸೋಮವಾರದ ಲಾಂಗ್​ ಬ್ರೇಕ್​ ತೆಗೆದುಕೊಂಡು ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಬಹುದು.

ಅಕ್ಟೋಬರ್‌ನಲ್ಲಿ ಗಾಂಧಿ ಜಯಂತಿ ಮತ್ತು ದಸರಾ ಹಬ್ಬಗಳು ಲಾಂಗ್ ಹಾಲಿಡೇಗೆ ಉತ್ತಮ ಅವಕಾಶ ಕೊಡುತ್ತವೆ. ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ (ಡಿಸೆಂಬರ್ 25) ಶುಕ್ರವಾರ ಬರುವುದರಿಂದ ವರ್ಷಾಂತ್ಯವನ್ನು ಪ್ರವಾಸದೊಂದಿಗೆ ಸ್ಮರಣೀಯವಾಗಿಸಬಹುದು. ಈ ಮೂಲಕ ನಿಮ್ಮ ಪೂರ್ತಿ ವರ್ಷವನ್ನು ಸುಂದರವಾಗಿ ಕಳೆಯಬಹುದು. ಇನ್ನೇಕೆ ತಡ ಕೆಲಸದ ಜಂಜಾಟ ಬಿಟ್ಟು ಆರಾಮವಾಗಿ ಪ್ರವಾಸದ ಪ್ಲಾನ್​ ಮಾಡಿ, ನಿಮ್ಮ ಪ್ರೀತಿ ಪಾತ್ರರೊಂದಿಗೆ ಸುಂದರ ಸಮಯವನ್ನು ಕಳೆಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:53 pm, Thu, 1 January 26

Source link

Chanakya Niti: 2026 ರಲ್ಲಿ ಯಶಸ್ಸು ನಿಮ್ಮದಾಗಲು ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ಅನುಸರಿಸಿ – Kannada News | Chanakya Niti: If you want success, follow these tips from Acharya Chanakya

ಪ್ರತಿಯೊಬ್ಬರೂ ಜೀವನದಲ್ಲಿ ಪ್ರಗತಿ, ಯಶಸ್ಸನ್ನು (success) ಸಾಧಿಸುವ ಓಟದಲ್ಲಿರುತ್ತಾರೆ. ಈ ಪ್ರಯಾಣದಲ್ಲಿ, ಕೆಲವರು ಛಲದಿಂದ ಮುಂದೆ ಸಾಗಿದರೆ, ಇನ್ನೂ ಕೆಲವರು ತಾವು ಇಡುವ ತಪ್ಪು ಹೆಜ್ಜೆಗಳ ಕಾರಣದಿಂದ ಪ್ರಗತಿಯನ್ನು ಸಾಧಿಸದೆ ಹಿಂದೆಯೇ ಉಳಿದುಬಿಡುತ್ತಾರೆ. ಕೆಲವರು ಈ ಸೋಲುಗಳಿಗೆ ತಲೆ ಕೆಡಿಸಿಕೊಳ್ಳದೆ ಹೊಸ ವರ್ಷದ ಸಂದರ್ಭದಲ್ಲಿ ಹೊಸ ಆರಂಭ, ಭರವಸೆಗಳೊಂದಿಗೆ ಯಶಸ್ಸಿನತ್ತ ಹೆಜ್ಜೆ ಇಡಲು ಶ್ರಮಿಸುತ್ತಾರೆ. 2026 ರ ಈ ಹೊಸ ವರ್ಷದಲ್ಲಿ ನೀವು ಸಹ ಜೀವನದಲ್ಲಿ ಯಶಸ್ಸು ಸಾಧಿಸಲು, ಸಂತೋಷದಾಯಕ ಜೀವನವನ್ನು ನಡೆಸಲು ಬಯಸಿದರೆ ಆಚಾರ್ಯ ಚಾಣಕ್ಯರ ಈ ಯಶಸ್ಸಿನ ತತ್ವಗಳನ್ನು ಪಾಲಿಸಿ. ಇವುಗಳನ್ನು ಪಾಲಿಸಿದ್ದೇ ಆದಲ್ಲಿ ಈ ವರ್ಷ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು ಖಂಡಿತ,

ಯಶಸ್ಸನ್ನು ಸಾಧಿಸಲು ಚಾಣಕ್ಯರ ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ:

ಅಹಂಕಾರ ಬಿಟ್ಟು ಬಿಡಿ: ಚಾಣಕ್ಯರ ಪ್ರಕಾರ , ಕೋಪ ಮತ್ತು ಅಹಂಕಾರವು ನಿಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ತಡೆಯನ್ನು ಉಂಟುಮಾಡುತ್ತವೆ. ಅಹಂ ಮತ್ತು ಕೋಪ ನಿಮ್ಮ ಜೀವನದ ಕಠಿಣ ಪರಿಶ್ರಮವನ್ನು ಹಾಳುಮಾಡುತ್ತದೆ. ಅವು ನಿಮ್ಮ ಸಾಮಾಜಿಕ ಗೌರವವನ್ನೂ ಕಸಿದುಕೊಳ್ಳುತ್ತವೆ. ಹಾಗಾಗಿ ಈ ಹೊಸ ವರ್ಷದ ಆರಂಭದಲ್ಲಿಯೇ ಕೋಪ ಮತ್ತು ಅಹಂಕಾರವನ್ನು ತ್ಯಾಜಿಸಿ.  ಇದು ನಿಮಗೆ ಯಶಸ್ಸನ್ನು ತರುವುದು ಖಚಿತ.

ಟೀಕೆಗೆ ಹೆದರಬೇಡಿ: ಜೀವನದಲ್ಲಿ ಟೀಕೆಗೆ ಎಂದಿಗೂ ಭಯಪಡಬಾರದು ಎಂದು ಚಾಣಕ್ಯ ಹೇಳುತ್ತಾರೆ. ಜೀವನದಲ್ಲಿ ಟೀಕೆಗೆ ಹೆದರುವ ವ್ಯಕ್ತಿ ತನ್ನ ಗುರಿಗಳನ್ನು ತಲುಪಲು ಸಾಧ್ಯವಿಲ್ಲ ಹಾಗಾಗಿ ಜೀವನದಲ್ಲಿ ಟೀಕೆಗೆ ಹೆದರಬೇಡಿ ಬದಲಾಗಿ ತಾಳ್ಮೆಯಿಂದ ಇದ್ದು, ಗುರಿ ಸಾಧಿಸುವತ್ತ ಗಮನಹರಿಸಿ.

ಸ್ವಾಭಿಮಾನ:  ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಇತರರನ್ನು ಗೌರವಿಸುವ ಮೊದಲು ತನ್ನನ್ನು ತಾನು ಗೌರವಿಸಿಕೊಳ್ಳಬೇಕು, ತನ್ನ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು, ನಿಮ್ಮ ಶಕ್ತಿಯ ಮೇಲೆ ನಂಬಿಕೆ ಇದ್ದರೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಯಶಸ್ಸು ನಿಮ್ಮದಾಗುತ್ತದೆ.

ಒಳ್ಳೆಯವರ ಸಹವಾಸ: ಕೆಟ್ಟವರ ಸಹವಾಸದಿಂದ ಹಾನಿಯೇ ಹೆಚ್ಚು. ಹಾಗಾಗಿ ಈ ವರ್ಷ ಆದಷ್ಟು ಒಳ್ಳೆಯ, ಸಕಾರಾತ್ಮಕ ಮನಸ್ಸಿನ ಜನರೊಂದಿಗೆ ಬೆರೆಯಿರಿ. ಆಚಾರ್ಯ ಚಾಣಕ್ಯರ ಪ್ರಕಾರ, ನಿಮ್ಮ ಸಹವಾಸವು ನಿಮ್ಮ ಯಶಸ್ಸು ಹಾಗೂ ನಿಮ್ಮ ಸಾಮಾಜಿಕ ಇಮೇಜ್‌ನ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ನೀವು ಎಂದಿಗೂ ಕೆಟ್ಟವರ ಸಹವಾಸ ಮಾಡಬಾರದು. ಕೆಟ್ಟ ಸಹವಾಸವು ನಿಮ್ಮತನವನ್ನು ಹಾಳುಮಾಡುವುದಲ್ಲದೆ ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತದೆ.

ಇದನ್ನೂ ಓದಿ: ನಿಮ್ಮ ವೈಯಕ್ತಿಯ ವಿಚಾರಗಳನ್ನು ಅಪ್ಪಿತಪ್ಪಿಯೂ ಸಂಬಂಧಿಕರ ಬಳಿ ಶೇರ್‌ ಮಾಡಬೇಡಿ

ಗುರಿಯನ್ನು ರೂಪಿಸಿ: ಗುರಿಯಿಲ್ಲದ ವ್ಯಕ್ತಿಯು ಎಂದಿಗೂ ಯಶಸ್ಸನ್ನು ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯ. ಆದ್ದರಿಂದ, ನೀವು ಜೀವನದಲ್ಲಿ ಒಂದು ಗುರಿಯನ್ನು ಹೊಂದಿರಬೇಕು ಮತ್ತು ಆ ಗುರಿಯನ್ನು ಸಾಧಿಸುವತ್ತ ಗಮನಹರಿಸಬೇಕು. 2026 ರ ಈ ಹೊಸ ವರ್ಷದಲ್ಲಿ ಗುರಿಗಳನ್ನು ಹೊಂದಿಸಿ, ಅದರ ಮೇಲೆ ಕೆಲಸ ಮಾಡುವ ಮೂಲಕ ನೀವು ಯಶಸ್ಸಿನತ್ತ ಸಾಗಬಹುದು.

ಜ್ಞಾನ ಸಂಪಾದನೆ: ಜ್ಞಾನಕ್ಕಿಂತ ದೊಡ್ಡದು ಯಾವುದೂ ಇಲ್ಲ, ಹೊಸ ವಿಷಯಗಳನ್ನು ಕಲಿಯುತ್ತಲೇ ಇರಿ.  ಈ ಜ್ಞಾನವು ನಿಮ್ಮನ್ನು ಯಶಸ್ವಿ ವ್ಯಕ್ತಿಯನ್ನಾಗಿ ಮಾಡುವುದಲ್ಲದೆ, ಸಮಾಜದಲ್ಲಿ ನಿಮಗೆ ಗೌರವವನ್ನು ಸಿಗುವಂತೆ ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಟಿ20 ವಿಶ್ವಕಪ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ – Kannada News | T20 World Cup 2026: Australia Squad Announced, Shock Selections and Captain

ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್‌ಗಾಗಿ (T20 World Cup 2026) ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದೆ. ನಾಯಕ ಮಿಚೆಲ್ ಮಾರ್ಷ್ (Mitchell Marsh) ನಾಯಕತ್ವದ 15 ಸದಸ್ಯರ ತಂಡವನ್ನು ಮಿನಿ ವಿಶ್ವಸಮರಕ್ಕೆ ಆಯ್ಕೆ ಮಾಡಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, 2025 ರಲ್ಲಿ ಟಿ20 ಮಾದರಿಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಆಟಗಾರನನ್ನು ಆಯ್ಕೆ ಮಂಡಳಿ ಕೈಬಿಟ್ಟಿದ್ದರೆ, ಇತ್ತ ಕಳೆದ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ಹೊರಗುಳಿದ ಆಟಗಾರನನ್ನು ಆಯ್ಕೆ ಮಾಡುವ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತೊಂದು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ.

ಮಿಚೆಲ್ ಓವನ್ ಔಟ್

2026 ರ ಟಿ20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾ ತಂಡದ ಆಯ್ಕೆಯಲ್ಲಿ ಎರಡು ಅಚ್ಚರಿಯ ವಿಚಾರಗಳೆಂದರೆ ಮಿಚೆಲ್ ಓವನ್ ಅವರನ್ನು ಕೈಬಿಟ್ಟಿರುವುದು ಮತ್ತು ಕೂಪರ್ ಕಾನೊಲಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿರುವುದು. ಕಳೆದ ವರ್ಷ ಬಿಬಿಎಲ್‌ನಲ್ಲಿ ಸಿಡ್ನಿ ಥಂಡರ್ ವಿರುದ್ಧ ಹೋಬಾರ್ಟ್ ಹರಿಕೇನ್ಸ್ ಪರ ಬಿರುಗಾಳಿಯ ಶತಕ ಗಳಿಸುವ ಮೂಲಕ ಮಿಚೆಲ್ ಓವನ್ ಎಲ್ಲರ ಗಮನ ಸೆಳೆದಿದ್ದರು. ಅವರು ಕೇವಲ 42 ಎಸೆತಗಳಲ್ಲಿ 11 ಸಿಕ್ಸರ್‌ಗಳ ಸಹಿತ 108 ರನ್ ಕಲೆಹಾಕಿದ್ದರು. ಆದಾಗ್ಯೂ ಅವರನ್ನು ಆಯ್ಕೆ ಮಾಡಲಾಗಿಲ್ಲ.

ಕೂಪರ್ ಕೊನೊಲಿಗೆ ಜಾಕ್​ಪಾಟ್

ಕಳೆದ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ಆಸ್ಟ್ರೇಲಿಯಾ ತಂಡದ ಭಾಗವಾಗಿರದ ಕೂಪರ್ ಕೊನೊಲಿ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಕೂಪರ್ ಕೊನೊಲಿ ಜೊತೆಗೆ, ಮ್ಯಾಥ್ಯೂ ಶಾರ್ಟ್, ಮ್ಯಾಟ್ ಕುನ್ಹೆಮನ್ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಅವರನ್ನು 2026 ರ ಟಿ20 ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿದೆ. ಈ ಎಲ್ಲಾ ಆಟಗಾರರಿಗೆ ಇದು ಮೊದಲ ಟಿ20 ವಿಶ್ವಕಪ್ ಆಗಲಿದೆ.

ತಂಡವು ಪ್ಯಾಟ್ ಕಮ್ಮಿನ್ಸ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಜೋಶ್ ಹ್ಯಾಜಲ್‌ವುಡ್‌ರಂತಹ ಆಟಗಾರರ ಅನುಭವವನ್ನು ಹೊಂದಿದೆ. ಹಾಗೆಯೇ ಆಡಮ್ ಜಂಪಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಸ್ಪಿನ್ ದಾಳಿಯನ್ನು ಮುನ್ನಡೆಸಲಿದ್ದಾರೆ.

U19 World Cup: ಅಂಡರ್-19 ವಿಶ್ವಕಪ್​ಗೆ 15 ಸದಸ್ಯರ ಭಾರತ ತಂಡ ಪ್ರಕಟ

2026 ರ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಹೇಜಲ್‌ವುಡ್, ನಾಥನ್ ಎಲ್ಲಿಸ್, ಕ್ಸೇವಿಯರ್ ಬಾರ್ಟ್ಲೆಟ್, ಮ್ಯಾಥ್ಯೂ ವೇಡ್, ಕೂಪರ್ ಕಾನೊಲಿ, ಆಡಮ್ ಜಂಪಾ, ಮ್ಯಾಟ್ ಕುನ್ಹೆಮನ್, ಟಿಮ್ ಡೇವಿಡ್, ಕ್ಯಾಮರೂನ್ ಗ್ರೀನ್, ಜೋಶ್ ಇಂಗ್ಲಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:06 pm, Thu, 1 January 26

Source link

Video: ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ – Kannada News | Caught on Video: Monkey Bites Elderly Woman in Delhi Neighbourhood

ನವದೆಹಲಿ, ಡಿಸೆಂಬರ್ 31: ದೆಹಲಿಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಅಲ್ಲಿನ ಬಾತ್ರಾ ಕಾಲೋನಿಯಲ್ಲಿ ಮನೆಯ ಎದುರು ಕುಳಿತಿದ್ದ ವೃದ್ಧೆ ಮೇಲೆ ಕೋತಿಗಳು ದಾಳಿ ನಡೆಸಿವೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ವಸತಿ ಕಟ್ಟಡದ ಪ್ರವೇಶದ್ವಾರದ ಬಳಿ ಗೋಡೆಯ ವಿರುದ್ಧ ಇರಿಸಲಾದ ಪ್ಲಾಸ್ಟಿಕ್ ಕುರ್ಚಿಯ ಮೇಲೆ ವೃದ್ಧ ಮಹಿಳೆ ಶಾಂತವಾಗಿ ಕುಳಿತಿರುವುದನ್ನು ವೀಡಿಯೊ ತೋರಿಸುತ್ತದೆ. ಕೋತಿಗಳ ಗುಂಪು ಹತ್ತಿರದ ಓಣಿಯಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು.

ಕೆಲವು ಕ್ಷಣಗಳ ನಂತರ, ಒಂದು ಕೋತಿ ಇದ್ದಕ್ಕಿದ್ದಂತೆ ದೂರ ಸರಿದು, ಮಹಿಳೆಯ ಕಡೆಗೆ ಓಡಿ, ಆಕ್ರಮಣಕಾರಿಯಾಗಿ ಆಕೆಯ ದೇಹದ ಕೆಳಭಾಗಕ್ಕೆ ಹಾರಿ ಕಚ್ಚುತ್ತದೆ. ಕೆಲವು ಕ್ಷಣಗಳ ನಂತರ ಇಡೀ ಹಿಂಡು ಮಹಿಳೆಯ ತಲೆಯ ಮೇಲೆ, ಆಕೆಯ ಕಾಲುಗಳ ಮೇಲೆ ದಾಳಿ ಮಾಡುವುದು ಕಂಡುಬರುತ್ತದೆ.

ಗಾಬರಿಗೊಂಡು ನಡುಗುತ್ತಿರುವಂತೆ ತೋರುತ್ತಿದ್ದ ಆ ಮಹಿಳೆ, ಸ್ವಲ್ಪ ಹೊತ್ತು ಹೆಣಗಾಡುತ್ತಿದ್ದಾಗ ಕೋತಿ ಅವರನ್ನು ಹಿಡಿದುಕೊಂಡಿತು, ನಂತರ ಬೇಗನೆ ಬಿಟ್ಟು ಓಡಿಹೋಯಿತು. ವರದಿಗಳ ಪ್ರಕಾರ, ಮಹಿಳೆಯ ದೇಹದ ಮೇಲೆ ಮೂರು ಕಡಿತದ ಗುರುತುಗಳಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇದೆಂಥಾ ಬದಲಾವಣೆ; ‘ಗಿಲ್ಲಿ ಕಪ್ ಗೆಲ್ಲಬಹುದು’ ಎಂದು ಹಾಡಿ ಹೊಗಳಿದ ಮಾಳು – Kannada News | Malu Nipanal’s U Turn! Now Says Gilli Can Win The Bigg Boss Kannada 12 Cup

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಮೂರು ತಿಂಗಳು ಇದ್ದ ಮಾಳು ನಿಪನಾಳ ಅವರು ಎಲಿಮಿನೇಟ್ ಆಗಿ ಹೊರ ಬಂದರು. ಅವರು ಈಗ ಊರಿಗೆ ತೆರಳಿದ್ದಾರೆ. ಅಲ್ಲಿಯೂ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಅವರಿಗೆ ಈಗ ತಪ್ಪಿನ ಅರಿವಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಮೊದಲು ಯಾರು ಗೆದ್ದರೂ ಒಪ್ಪಿಕೊಳ್ಳಲ್ಲ ಎನ್ನುತ್ತಿದ್ದ ಅವರು ಈಗ, ‘ಗಿಲ್ಲಿ ಕಪ್ ಗೆಲ್ಲಬಹುದು’ ಎಂದು ಹೇಳಿದ್ದಾರೆ. ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.

ಈ ಮೊದಲು ಟಿವಿ9 ಕನ್ನಡದ ಜೊತೆ ಮಾತನಾಡಿದ್ದ ಮಾಳು ಅವರು, ‘ಈ ಸೀಸನ್ ಅಲ್ಲಿ ಯಾರೇ ಗೆದ್ದರೂ ಅದನ್ನು ಒಪ್ಪಿಕೊಳ್ಳೋದಿಲ್ಲ’ ಎಂದು ಹೇಳಿದ್ದರು. ತಾವೇ ಕಪ್ ಗೆಲ್ಲುತ್ತೇನೆ ಎಂಬ ನಂಬಿಕೆಯಲ್ಲಿ ಇದ್ದ ಅವರು, ‘ಮನೆಯಲ್ಲಿರೋ ಯಾರಿಗೂ ಕಪ್ ಗೆಲ್ಲಲು ಅರ್ಹತೆ ಇಲ್ಲ’ ಎಂದು ನೇರವಾಗಿ ಹೇಳಿದ್ದರು. ಅವರು ಮಾತು ಚರ್ಚೆಗೆ ಕಾರಣ ಆಗಿತ್ತು.

ಪ್ರತಿ ಸಂದರ್ಶನದಲ್ಲಿ ಮಾತನಾಡುವಾಗ, ‘ಕಪ್ ಯಾರು ಗೆಲ್ತಾರೆ’ ಎಂದು ಕೇಳಿದಾಗ ಅವರು ಇದಕ್ಕೆ ಸೂಕ್ತ ಉತ್ತರ ನೀಡಿರಲಿಲ್ಲ. ‘ಯಾರು ಗೆಲ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಏನು ಬೇಕಿದ್ದರೂ ಆಗಬಹುದು’ ಎಂದು ಉತ್ತರ ನೀಡಿದ್ದರು. ಈಗ ಮಾಳು ಅವರು ಬದಲಾಗಿದ್ದಾರೆ. ಗಿಲ್ಲಿ ಕಪ್ ಗೆಲ್ಲುವ ಸಾಧ್ಯತೆ ಇದೆ ಎಂದಿದ್ದಾರೆ.

ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾಳು, ‘ನಮ್ಮ ಇಬ್ಬರ ಮಧ್ಯೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲ. ಇಬ್ಬರ ಹಾದಿ, ವ್ಯಕ್ತಿತ್ವ ಬೇರೆ. ಇಬ್ಬರ ಮಧ್ಯೆ ಹೋಲಿಕೆ ಸಾಧ್ಯವಿಲ್ಲ. ಗಿಲ್ಲಿ ಕೆಟ್ಟವನಲ್ಲ. ಎಲ್ಲರನ್ನೂ ನಗಿಸುತ್ತಾನೆ. ಟಾಸ್ಕ್ ಚೆನ್ನಾಗಿ ಆಡಲ್ಲ ಅನ್ನೋದಷ್ಟೇ ನನಗೆ ಅವರಲ್ಲಿ ಕಂಡ ಕೊರತೆ. ಅವರು ತಪ್ಪು ತಿದ್ದುಕೊಂಡರೆ ಫಿನಾಲೆ ತಲುಪಿ ಕಪ್ ಗೆಲ್ಲಬಹುದು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೀ ಕೊಡೋದ್ರಲ್ಲಿ ಮಾಸ್ಟರ್​; ಗಿಲ್ಲಿ ಮಾತಿಗೆ ಉರಿದುರಿದು ಬಿದ್ದ ಧ್ರುವಂತ್-ಅಶ್ವಿನಿ

ಇದಕ್ಕೆ ನಾನಾ ರೀತಿಯ ಕಮೆಂಟ್ ಬಂದಿದೆ. ‘ಗಿಲ್ಲಿ ಹವಾ ಏನು ಎಂಬುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಮಾಳು ಬದಲಾಗಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇತ್ತೀಚೆಗೆ ಮಾಳು ವೇದಿಕೆ ಏರಿದಾಗ ‘ಗಿಲ್ಲಿ ಗಿಲ್ಲಿ’ ಎಂದು ಕೂಗಿದ್ದರು. ಇದರಿಂದ ಅವರಿಗೆ ಮುಜುಗರ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೋಗಿಲು ಬಡಾವಣೆಯಲ್ಲಿ ಡೆಮಾಲಿಷ್ ಆಗಿದ್ದು 167 ಮನೆ, ಫ್ಲಾಟ್​ಗಾಗಿ ಸಲ್ಲಿಕೆಯಾದ ಅರ್ಜಿ 250ಕ್ಕೂ ಹೆಚ್ಚು! – Kannada News | Kogilu Layout Housing Row: 167 illegal Homes Demolished, Over 250 Applications Filed for Flats

ಬೆಂಗಳೂರು, ಜನವರಿ 1: ಬೆಂಗಳೂರಿನ ಕೋಗಿಲು ಲೇಔಟ್​ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್, ಮನೆಗಳ ತೆರವು ವಿಚಾರ ವಿವಾದಕ್ಕೀಡಾಗಿತ್ತು. ನಂತರ ನಿರಾಶ್ರಿತರಿಗೆ ಮನೆ ನೀಡುವುದಾಗಿ ಕರ್ನಾಟಕ (Karnataka) ಕಾಂಗ್ರೆಸ್ (Congress) ಸರ್ಕಾರ ಘೋಷಣೆ ಮಾಡಿದ್ದೂ ಸಹ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಈ ನಡೆಗೆ ವ್ಯಾಪಕ ಆಕ್ಷೇಪವೂ ವ್ಯಕ್ತವಾಗಿದೆ. ಏತನ್ಮಧ್ಯೆ ಇದೀಗ ಹೊಸ ಸಮಸ್ಯೆ ಎದುರಾಗಿದೆ. ಕೋಗಿಲು ಬಡಾವಣೆಯಲ್ಲಿ ಡೆಮಾಲಿಷ್ ಮಾಡಲಾದ ಮನೆಗಳ ಲೆಕ್ಕಾಚಾರದ ಆಧಾರದಲ್ಲಿ, ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆ ಅಡಿ 167 ಫ್ಲಾಟ್​​ಗಳನ್ನು ನೀಡುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಇದೀಗ ಮನೆಗಳಿಗಾಗಿ 25ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಕೋಗಿಲು ಲೇಔಟ್ ನಿವಾಸಿಗಳಿಗೆ ಮನೆ ಹಂಚಿಕೆ ಪ್ರಕ್ರಿಯೆ ಇದೀಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಡೆಮಾಲಿಷನ್ ಆಗಿರುವ ಒಂದೇ ಮನೆಯ ವಿಳಾಸದಿಂದ ಇಬ್ಬರು, ಮೂವರು ಮನೆಗಾಗಿ ಅರ್ಜಿ ಸಲ್ಲಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೆ, ಕೋಗಿಲು ಲೇಔಟ್‌ನ ನಿವಾಸಿಗಳೇ ಅಲ್ಲದವರೂ ಮನೆಗಾಗಿ ಅರ್ಜಿ ಹಾಕಿರುವುದಾಗಿ ತಿಳಿದುಬಂದಿದೆ.

ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಸೂಚನೆಯಂತೆ, ಇಲಾಖಾ ಅಧಿಕಾರಿಗಳ ತಂಡ ಅಲ್ಲಿನ ನಿವಾಸಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ವಸತಿ ಇಲಾಖೆ ಹಾಗೂ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಯುತ್ತಿದೆ.

ನಿರಾಶ್ರಿತರಿಂದ ಬಂದಿರುವ ಎಲ್ಲ ಅರ್ಜಿಗಳ ನೈಜತೆ ಪರಿಶೀಲನೆ ಕಾರ್ಯ ಇಂದು ಹಾಗೂ ನಾಳೆ ನಡೆಸಲಾಗುತ್ತಿದೆ. ಪರಿಶೀಲನೆ ಬಳಿಕ ಅಂತಿಮ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಕನ್ನಡಿಗರು, ಪರಭಾಷಿಕರು ಎಂದು ಪಟ್ಟಿ

ಮನೆ ಹಂಚಿಕೆ ಸಂಬಂಧವಾಗಿ ಅಧಿಕಾರಿಗಳು ಈಗಾಗಲೇ ಕನ್ನಡಿಗರು ಹಾಗೂ ಪರಭಾಷಿಕರು ಎಂಬ ಎರಡು ಪ್ರತ್ಯೇಕ ಪಟ್ಟಿಗಳನ್ನು ಸಿದ್ಧಪಡಿಸಿದ್ದಾರೆ. ಎಲ್ಲಾ ಅರ್ಜಿಗಳ ಪರಿಶೀಲನೆ ಮುಗಿದ ನಂತರ ವಸತಿ ಇಲಾಖೆ ಮನೆ ಹಂಚಿಕೆ ಕುರಿತ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ.

ಇದನ್ನೂ ಓದಿ: ಹೊಸ ವರ್ಷದ ಮರುದಿನವೇ ಕೋಗಿಲು ನಿರಾಶ್ರಿತರಿಗೆ ಮನೆ ಭಾಗ್ಯ: 187 ಮನೆಗಳ ಸರ್ವೆ ಮುಕ್ತಾಯ, ಯಾರಿಗೆ ಸಿಗಲಿದೆ ಸೂರು?

ಕೋಗಿಲು ಬಡಾವಣೆಯಲ್ಲಿ ಅಕ್ರಮ ಶೆಡ್, ಮನೆಗಳನ್ನು ನಿರ್ಮಿಸಿದ್ದವರಿಗೆ ವಸತಿ ಒದಗಿಸಿಕೊಡುವ ಸರ್ಕಾರದ ತೀರ್ಮಾನಕ್ಕೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿವೆ. ಕರ್ನಾಟಕದಲ್ಲಿ ವಿವಿಧ ಕಾರಣಗಳಿಂದ ಸಂತ್ರಸ್ತರಾಗಿರುವ ಅರ್ಹ ಫಲಾನುಭವಿಗಳಿಗೇ ದಶಕಗಳಿಂದ ಪರಿಹಾರ ನೀಡಿಲ್ಲ. ಅಂಥದ್ದರಲ್ಲಿ ಇದೀಗ ಏಕಾಏಕಿ ಎಲ್ಲಿಂದಲೋ ಬಂದ ವಲಸಿಗರಿಗೆ, ಅದೂ ಸಹ ಅಕ್ರಮವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿದವರಿಗೆ ಪರಿಹಾರ ಏಕೆ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link