Category Archives: Blog

Your blog category

ಮನೆಯೊಳಗೆ ಗುಂಡಿಕ್ಕಿ ಆಭರಣ ವ್ಯಾಪಾರಿ ಮತ್ತವರ ಪತ್ನಿಯ ಹತ್ಯೆ – Kannada News | Madhya Pradesh: Jeweller and Wife Killed at Home, Police Probe Business Dispute Angle

ಆಭರಣ ವ್ಯಾಪಾರಿ ದಂಪತಿImage Credit source: India Today

ಮಧ್ಯಪ್ರದೇಶ, ಜನವರಿ 01: ಆಭರಣ ವ್ಯಾಪಾರಿ ಮತ್ತವರ ಪತ್ನಿ(Wife) ಮನೆಯೊಳಗೆ ಶವವಾಗಿ ಪತ್ತೆಯಾಗಿರುವ ಘಟನೆ ಮಂಗಳವಾರ ಮಧ್ಯಪ್ರದೇಶದ ಮಂದ್ಸೌರ್​ನಲ್ಲಿ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಅವರ ವ್ಯವಹಾರದ ವಿವಾದವೇ ಈ ಸಾವಿಗೆ ಕಾರಣ ಎನ್ನಲಾಗಿದೆ. ಇಬ್ಬರನ್ನೂ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅದೇ ಸ್ಥಳದಲ್ಲಿ ವಿಕಾಸ್ ಎಂಬುವವರ ಶವವೂ ದೊರೆತಿದೆ.  ಪೊಲೀಸರು ಸಾವಿಗೆ ಕಾರಣವೇನೆಂಬುದ ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಮೃತ ದಂಪತಿಯನ್ನು ದಿಲೀಪ್ ಜೈನ್ ಮತ್ತು ಅವರ ಪತ್ನಿ ರೇಖಾ ಎಂದು ಗುರುತಿಸಲಾಗಿದ್ದು, ಮೂರನೇ ವ್ಯಕ್ತಿಯನ್ನು ರಾಜಸ್ಥಾನದ ನಿವಾಸಿ ವಿಕಾಸ್ ಸೋನಿ ಎಂದು ಪೊಲೀಸರು ಗುರುತಿಸಿದ್ದಾರೆ.

ಗುಂಡಿನ ದಾಳಿ ನಡೆಯುವ ಮುನ್ನ ಮೂವರು ವ್ಯಕ್ತಿಗಳ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಮಂಗಳವಾರ ಸಂಜೆ 8.30 ರ ಸುಮಾರಿಗೆ ಮನೆಯೊಳಗೆ ಗುಂಡು ಹಾರಿಸಿದ ಸದ್ದು ಕೇಳಿಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಮೀನಾ ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವಗಳನ್ನು ಪತ್ತೆ ಮಾಡಿದರು ಮತ್ತು ಒಂದು ಪಿಸ್ತೂಲ್ ಮತ್ತು ಚಾಕುವನ್ನು ವಶಪಡಿಸಿಕೊಂಡರು. ಸಾವಿಗೆ ನಿಖರವಾದ ಕಾರಣವನ್ನು ತಿಳಿಯಲು ಮತ್ತು ಘಟನೆಗಳ ಅನುಕ್ರಮವನ್ನು ನಿರ್ಧರಿಸಲು ಮೂರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮತ್ತಷ್ಟು ಓದಿ: ಮನೆಯೊಳಗೆ ಹಿರಿಯ ವಕೀಲರ ಪತ್ನಿಯ ಬರ್ಬರ ಹತ್ಯೆ; ಪಕ್ಕದ ಚೇರ್​​ನಲ್ಲಿದ್ದ ಸಹಾಯಕ!

ಪೊಲೀಸರ ಪ್ರಕಾರ, ದಿಲೀಪ್ ಜೈನ್ ಅವರ ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸಿನ ವಿವಾದವೇ ಈ ಮಾರಕ ಘಟನೆಗೆ ಕಾರಣವಾಗಿರುವ ಸಾಧ್ಯತೆಯ ಮೇಲೆ ತನಿಖೆ ಕೇಂದ್ರೀಕರಿಸಿದೆ. ಆದಾಗ್ಯೂ, ಹಿಂಸಾಚಾರವನ್ನು ಯಾರು ಪ್ರಾರಂಭಿಸಿದರು ಮತ್ತು ಹೊರಗಿನವರಾದ ವಿಕಾಸ್ ಸೋನಿ ಆಯುಧವನ್ನು ತಂದಿದ್ದಾರೋ ಅಥವಾ ಘಟನೆಯಲ್ಲಿ ಬೇರೆ ಯಾರದ್ದೋ ಪಾತ್ರವಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನೆಯ ಸುತ್ತಲೂ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾವಿಗೆ ಕಾರಣವಾದ ಸಂದರ್ಭಗಳನ್ನು ಸ್ಪಷ್ಟಪಡಿಸಲು ಅಧಿಕಾರಿಗಳು ಪ್ರಸ್ತುತ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:45 am, Thu, 1 January 26

Source link

Gold Rate Today Bangalore: ಚಿನ್ನದ ಬೆಲೆ ತುಸು ಏರಿಕೆ; ಬೆಳ್ಳಿ ಅಲ್ಪ ಇಳಿಕೆ – Kannada News | Gold Price Today on 1st January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 1: ಸತತ ಮೂರು ದಿನ ಇಳಿಕೆ ಕಂಡಿದ್ದ ಚಿನ್ನದ ಬೆಲೆ (gold rate) ಇಂದು ಗುರುವಾರ ಅಲ್ಪ ಏರಿಕೆ ಕಂಡಿದೆ. 15 ರೂ ಹೆಚ್ಚಳವಾಗಿರುವ ಆಭರಣ ಚಿನ್ನದ ಬೆಲೆ 12,400 ಗಡಿಗಿಂತ ಕೆಳಗೆ ಇಳಿದಿದೆ. ನಿನ್ನೆ ಚಿನ್ನದ ಬೆಲೆ 120 ರೂಗಳಷ್ಟು ಇಳಿಕೆಯಾಗಿತ್ತು. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ ಕಡಿಮೆ ಆಗಿದೆ. ಇದೇ ವೇಳೆ, ಬೆಳ್ಳಿ ಬೆಲೆಯ ಇಳಿಕೆಯೂ ಮುಂದುವರಿದಿದೆ. ನಿನ್ನೆ ಒಂದು ರೂ ಇಳಿದಿದ್ದ ಇದರ ಬೆಲೆ ಇವತ್ತು ಕೂಡ ಒಂದು ರೂ ತಗ್ಗಿ 238 ರೂ ತಲುಪಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,23,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,35,060 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,23,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,800 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,600 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 1ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,506 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,380 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,129 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 238 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,506 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,380 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 238 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,380 ರೂ
  • ಚೆನ್ನೈ: 12,440 ರೂ
  • ಮುಂಬೈ: 12,380 ರೂ
  • ದೆಹಲಿ: 12,395 ರೂ
  • ಕೋಲ್ಕತಾ: 12,380 ರೂ
  • ಕೇರಳ: 12,380 ರೂ
  • ಅಹ್ಮದಾಬಾದ್: 12,385 ರೂ
  • ಜೈಪುರ್: 12,395 ರೂ
  • ಲಕ್ನೋ: 12,395 ರೂ
  • ಭುವನೇಶ್ವರ್: 12,380 ರೂ

ಇದನ್ನೂ ಓದಿ: LPG Price: ಕಮರ್ಷಿಯಲ್ ಗ್ಯಾಸ್ ಬೆಲೆ ಭರ್ಜರಿ ಹೆಚ್ಚಳ; 19 ಕಿಲೋ ಸಿಲಿಂಡರ್ ದರ 110.50 ರೂ ಏರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 555 ರಿಂಗಿಟ್ (12,311 ರುಪಾಯಿ)
  • ದುಬೈ: 484.75 ಡಿರಾಮ್ (11,871 ರುಪಾಯಿ)
  • ಅಮೆರಿಕ: 134.50 ಡಾಲರ್ (12,098 ರುಪಾಯಿ)
  • ಸಿಂಗಾಪುರ: 174.70 ಸಿಂಗಾಪುರ್ ಡಾಲರ್ (12,219 ರುಪಾಯಿ)
  • ಕತಾರ್: 483 ಕತಾರಿ ರಿಯಾಲ್ (11,919 ರೂ)
  • ಸೌದಿ ಅರೇಬಿಯಾ: 493 ಸೌದಿ ರಿಯಾಲ್ (11,823 ರುಪಾಯಿ)
  • ಓಮನ್: 51.40 ಒಮಾನಿ ರಿಯಾಲ್ (12,016 ರುಪಾಯಿ)
  • ಕುವೇತ್: 39.27 ಕುವೇತಿ ದಿನಾರ್ (11,474 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 238 ರೂ
  • ಚೆನ್ನೈ: 256 ರೂ
  • ಮುಂಬೈ: 238 ರೂ
  • ದೆಹಲಿ: 238 ರೂ
  • ಕೋಲ್ಕತಾ: 238 ರೂ
  • ಕೇರಳ: 256 ರೂ
  • ಅಹ್ಮದಾಬಾದ್: 238 ರೂ
  • ಜೈಪುರ್: 238 ರೂ
  • ಲಕ್ನೋ: 238 ರೂ
  • ಭುವನೇಶ್ವರ್: 256 ರೂ
  • ಪುಣೆ: 238

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:48 am, Thu, 1 January 26

Source link

ಗಾನವಿ ಕುಟುಂಬಸ್ಥರಿಗೆ ಶಾಕ್​​: ಸೂರಜ್​​ ಸಾವಿನ ಸಂಬಂಧ 9 ಮಂದಿ ಮೇಲೆ FIR – Kannada News | FIR Filed Against Nine Members of Ganavi Family Over Suraj’s Death

ಬೆಂಗಳೂರು, ಜನವರಿ 01: ರಾಜ್ಯಾದ್ಯಂತ ಸುದ್ದಿಯಾಗಿದ್ದ ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಸಂಬಂಧ ಆಕೆಯ ಕುಟುಂಬಸ್ಥರ ವಿರುದ್ಧವೇ ಈಗ ಎಫ್​​ಐಆರ್​ ದಾಖಲಾಗಿದೆ. ಸೂರಜ್ ಅತ್ತಿಗೆ ನೀಡಿದ ದೂರಿನ ಮೇರೆಗೆ 9 ಮಂದಿ ಮೇಲೆ ಪೊಲೀಸರು ಕೇಸ್​​ ದಾಖಲಿಸಿದ್ದಾರೆ. ಪತ್ನಿ ಗಾನವಿ ಕುಟುಂಬಸ್ಥರ ಆರೋಪಗಳ ಹಿನ್ನೆಲೆ ಪತಿ ಸೂರಜ್​​ ಕೂಡ ಸೂಸೈಡ್​​ ಮಾಡಿಕೊಂಡಿದ್ದ. ಹೀಗಾಗಿ ಆತನ ಸಾವಿಗೆ ಗಾನವಿ ಕುಟುಂಬಸ್ಥರೇ ಕಾರಣ ಎಂದು ದೂರು ನೀಡಲಾಗಿದೆ.

ಸೂರಜ್ ತಾಯಿ ಜಯಂತಿ ಮೇಲೆ ವರದಕ್ಷಿಣೆ ಕಿರುಕುಳ ಆರೋಪದ ಜೊತೆಗೆ ಹನಿಮೂನ್​​ಗೆ ತೆರಳಿದ್ದ ಸೂರಜ್​ ಮತ್ತು ಗಾನವಿ ದಂಪತಿ ಶ್ರೀಲಂಕಾದಿಂದ ಅರ್ಧಕ್ಕೆ ಹಿಂತಿರುಗಿದ್ದ ಬಗ್ಗೆಯೂ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಮಾನಹಾನಿಕಾರ ಆರೋಪಗಳಿಂದ ಮನನೊಂದು ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸೂರಜ್​​ ಸಹೋದರ ಸಂಜಯ್ ಪತ್ನಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಗಾನವಿ ಕುಟುಂಬಸ್ಥರಾದ ರಾಧಾ, ಬಾಬುಗೌಡ, ಕಾರ್ತಿಕ್, ಮಹದೇವ, ಗಗನ್, ಶಶಿಕುಮಾರ್, ರುಕ್ಮಿಣಿ, ಅಭಿಲಾಷ್, ಅಭಿಷೇಕ್ ವಿರುದ್ಧ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಗಾನವಿ-ಸೂರಜ್ ಪ್ರಕರಣ; ಹನಿಮೂನ್‌ನಿಂದ ಅರ್ಧಕ್ಕೆ ಬಂದಿದ್ಯಾಕೆ? ಸ್ಫೋಟಕ ರಹಸ್ಯ ಬಯಲು

ಹನಿಮೂನ್​​ಗೆಂದು ಶ್ರೀಲಂಕಾಕ್ಕೆ ತೆರಳಿದ್ದ ವೇಳೆ ಗಾನವಿ ಲವ್​ ವಿಚಾರ ಸೂರಜ್​​ಗೆ ಗೊತ್ತಾಗಿದೆ. ಹರ್ಷ ಎಂಬಾತನನ್ನ ಪ್ರೀತಿಸುತ್ತಿದ್ದು, ಅವನನ್ನೆ ಮದುವೆಯಾಗುತ್ತೇನೆ ಎಂದು ಗಾನವಿ ಹೇಳಿದ್ದಳಂತೆ. ಈ ವಿಚಾರ ಕೇಳಿ ಸೂರಜ್ ದಿಗ್ಭ್ರಾಂತನಾಗಿದ್ದ. ಆದ್ರೆ ಆ ವಿಷಯ ಮುಚ್ಚಿಟ್ಟು ಸೂರಜ್ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಗಾನವಿ ಸಹೋದರರು ಸೂರಜ್​​ಗೆ ಜೀವ ಬೆದರಿಕೆ ಕೂಡ ಹಾಕಲಾಗಿತ್ತು. ಈ ಎಲ್ಲಾ ವಿಚಾರಗಳಿಂದ ಮನನೊಂದು ಸೂರಜ್ ಪ್ರಾಣ ಕಳೆದುಕೊಂಡಿದ್ದರೆ, ಅವರ ತಾಯಿ ಜಯಂತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೀಗಾಗಿ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಲಾದ ದೂರಲ್ಲಿ ಉಲ್ಲೇಖಿಸಲಾಗಿದೆ.

ಅಕ್ಟೋಬರ್ 29ರಂದು ಗಾನವಿ ಮತ್ತು ಸೂರಜ್​​ ಮದುವೆ ನಡೆದಿದ್ದು, ಬೆಂಗಳೂರಿನ ಪ್ಯಾಲೆಸ್‌ ಗ್ರೌಂಡ್‌ನಲ್ಲಿ ಅದ್ದೂರಿ ರಿಸೆಪ್ಷನ್ ಕೂಡ ಹಮ್ಮಿಕೊಳ್ಳಲಾಗಿತ್ತು. ಬಳಿಕ ಹನಿಮೂನ್​​ಗೆಂದು ಶ್ರೀಲಂಕಾಕ್ಕೆ ತೆರಳಿದ್ದ ಇವರು ಅರ್ಧದಲ್ಲೇ ಹಿಂದಿರುಗಿದ್ದರು. ಆ ಬೆನ್ನಲ್ಲೇ 26 ವರ್ಷದ ಗಾನವಿ ಆತ್ಮಹತ್ಯೆ ಯತ್ನ ನಡೆಸಿದ್ದಳು. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಳು. ಮಗಳ ಸಾವಿಗೆ ಸೂರಜ್​​ ಕುಟುಂಬಸ್ಥರೇ ಕಾರಣ. ಆತ ಗಂಡಸೇ ಅಲ್ಲ ಎಂಬಿತ್ಯಾದಿ ಆರೋಪ ಗಾನವಿ ಕುಟುಂಬಸ್ಥರಿಂದ ಕೇಳಿಬಂದಿತ್ತು. ಈ ನಡುವೆ ಸೂರಜ್​​ ಕೂಡ ಆತ್ಮಹತ್ಯೆ ಶರಣಾಗಿರೋದು ಪ್ರಕರಣಕ್ಕೆ ಹೊಸ ಟ್ವಿಸ್ಟ್​​ ಕೊಟ್ಟಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:43 am, Thu, 1 January 26

Source link

150 ವರ್ಷಗಳಿಂದ ವಾಸವಿದ್ದ 29 ಕುಟುಂಬಗಳ ಮನೆ ನೆಲಸಮ: ಕೆಜಿ ಹಳ್ಳಿ, ಡಿಜೆ ಹಳ್ಳಿ‌ ನಿವಾಸಿಗಳಿಗೆ ಇನ್ನೂ ಇಲ್ಲ ಸೂರಿನ ಬಾಗ್ಯ – Kannada News | KG Halli–DJ Halli Evictions: Homes of 29 Families Demolished After 150 Years, Residents Still Await Housing

ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಮನೆಗಳನ್ನು ತೆರವು ಮಾಡಿರುವುದು

ಬೆಂಗಳೂರು, ಜನವರಿ 1: ಮೂರು ದಿನಗಳ ಹಿಂದೆ ಬೆಂಗಳೂರಿನ ಕೋಗಿಲು ಲೇಔಟ್​​ನಲ್ಲಿ (Kogilu Layout) ನೆಲೆಸಿದ್ದ ಅಕ್ರಮ ನಿವಾಸಿಗಳಿಗೆ ಸಿಎಂ ಸಿದ್ದರಾಮಯ್ಯ ಸೂರಿನ ಬಾಗ್ಯ ನೀಡಿದ್ದಾರೆ. ಆದರೆ ಕಳೆದ ಮೂರು ತಿಂಗಳಿನಿಂದ ಬೀದಿಯಲ್ಲಿ ನಿಂತಿರುವ ಕೆಜಿ ಹಳ್ಳಿ, ಡಿಜೆ ಹಳ್ಳಿ‌ (KG Halli–DJ Halli) ಮೂಲ ನಿವಾಸಿಗಳ ಅಳಲು ಕೇಳುವವರೇ ಇಲ್ಲದಂತಾಗಿದೆ. ಒತ್ತುವರಿ ತೆರವು ಹೆಸರಲ್ಲಿ ರೈಲ್ವೆ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ ಕನ್ನಡಿಗರು ಈಗ ಸರ್ಕಾರದ ತಾರತಮ್ಯದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಡಿಜೆ ಹಳ್ಳಿಯಲ್ಲಿ ಅಕ್ಟೋಬರ್‌ 31 ರಂದು ರೈಲ್ವೆ ಇಲಾಖೆ ಜಾಗ ಎಂದು ಯಾವುದೇ ನೋಟೀಸ್ ಇಲ್ಲದೆ, ಸೂಚನೆ ಕೂಡಾ ಇಲ್ಲದೆ ಏಕಾಏಕಿ ಮನೆಗಳನ್ನು ನೆಲಸಮ ಮಾಡಲಾಗಿತ್ತು. 150 ವರ್ಷಗಳಿಂದ ವಾಸವಾಗಿದ್ದ 29 ಕುಟುಂಬಗಳ ಮನೆ ನೆಲಸಮ ಮಾಡಲಾಗಿತ್ತು.

ಕೆಜೆ ಹಳ್ಳಿಯ ಸರ್ವೆ ನಂಬರ್ 71 ರಲ್ಲಿ 1 ಎಕರೆ 37 ಗುಂಟೆ ಜಾಗದಲ್ಲಿ ಚೂನಾ ಲೈನ್ ಜನರಿಗಾಗಿ 1984 ರಲ್ಲಿ 1 ಎಕರೆ 28 ಗುಂಟೆ ಸರ್ಕಾರಿಂದಲೇ ನೀಡಿದ ಜಾಗ ಇದಾಗಿದೆ. ತದನಂತರ ಒಂಟಿ ಮನೆ ಯೋಜನೆಯಡಿಯಲ್ಲಿ 2015 ರಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದಲೇ ಮನೆ ಒಂಟಿ ಮನೆಗಳ ನಿರ್ಮಾಣ ಕೂಡಾ ಮಾಡಿಕೊಡಲಾಗಿತ್ತು. ಆದರೆ, ಅಕ್ಟೋಬರ್ 31 ರಂದು ಬಿಡಿಎ ಅಭಿವೃದ್ಧಿ ಹೆಸರಲ್ಲಿ ಸ್ಥಳೀಯ ನಿವಾಸಿಗಳನ್ನು ತೆರವು ಮಾಡಿಸಿ ಮನೆ ನೆಲಸಮ ಮಾಡಲಾಗಿದೆ. ಇದೆಲ್ಲ ಆಗಿ ಮೂರು ತಿಂಗಳು ಕಳೆದರೂ ಯಾವುದೇ ಪರಿಹಾರವೂ ಇಲ್ಲ, ಮನೆಯೂ ಇಲ್ಲದೆ ಸಂತ್ರಸ್ಥರು ಪರಡಾಡುವಂತಾಗಿದೆ.

ಇದನ್ನೂ ಓದಿ: ಹೊಸ ವರ್ಷದ ಮರುದಿನವೇ ಕೋಗಿಲು ನಿರಾಶ್ರಿತರಿಗೆ ಮನೆ ಭಾಗ್ಯ: 187 ಮನೆಗಳ ಸರ್ವೆ ಮುಕ್ತಾಯ, ಯಾರಿಗೆ ಸಿಗಲಿದೆ ಸೂರು?

‘ಕೋಗಿಲು ಲೇಔಟ್​​​ನಲ್ಲಿ ಕೇರಳಿಗರ ಮೇಲೆ ತೋರಿದ ಪ್ರೀತಿ ಇಲ್ಲಿಯೂ ತೋರಿ. ನಮಗೆ ಮನೆ ಕೊಡಿ ನಾವೇನು ಪಾಪ ಮಾಡಿದ್ದೇವೆ’ ಎಂಬುದು ಕೆಜಿ ಹಳ್ಳಿ, ಡಿಜೆ ಹಳ್ಳಿ‌ ಕನ್ನಡಿಗರ ಪ್ರಶ್ನೆಯಾಗಿದೆ. ಓಟರ್ ಐಡಿ ಇದೆ, ಆದಾರ್ ಕಾರ್ಡ್ ಇದೆ. ಬಿಪಿಎಲ್ ಕಾರ್ಡ್ ಕೂಡಾ ಇದೆ. ಆದರೆ ಕನ್ನಡಿಗರಿಗೆ ಮನೆ ಇಲ್ಲ. ಕನ್ನಡಿಗರಿಗೇ ನೀಡದ ವಿಶೇಷ ಸೌಲಭ್ಯ ಅಕ್ರಮವಾಗಿ ನೆಲೆಸಿದ್ದ ಕೇರಳಿಗರಿಗೆ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸಿಎಂ ಸಿದ್ದರಾಮಯ್ಯ ಇನ್ನಾದರೂ ಈ ಕಡೆ ಗಮನ ಹರಿಸುತ್ತಾರೆಯೇ ಎಂಬುದನ್ನು ಕಾದು ನೋಡ್ಬೇಕಿದೆ.

ವರದಿ: ಅರುಣ್​ ಕುಮಾರ್ ಆರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ, ವಿಡಿಯೋ ಇಲ್ಲಿದೆ – Kannada News | Russia Circulates Video Alleging Ukrainian Drone Attacks Near Putin’s Residence

ಮಾಸ್ಕೋ, ಜನವರಿ 01: ಪುಟಿನ್ ಅವರ ರಹಸ್ಯ ನಿವಾಸದ ಮೇಲೆ 91 ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಲಾಗಿದೆ. ಇದನ್ನು ರಷ್ಯಾದ ಅತ್ಯಂತ ಸುರಕ್ಷಿತ ಸ್ಥಳವೆಂದು ಪರಿಗಣಿಸಲಾಗಿದೆ.ಕಳೆದ ಸೋಮವಾರ, ರಷ್ಯಾ ಉಕ್ರೇನ್‌ನತ್ತ ಬೆರಳು ತೋರಿಸುತ್ತಾ, ಪುಟಿನ್ ನಿವಾಸವನ್ನು ನಾಶಮಾಡಲು 91 ಡ್ರೋನ್‌ಗಳನ್ನು ಕಳುಹಿಸಲಾಗಿದೆ ಎಂದು ಹೇಳಿಕೊಂಡಿತ್ತು.ಆದರೆ ಉಕ್ರೇನ್ ದಾಳಿಯನ್ನು ನಿರಾಕರಿಸಿತು ಮತ್ತು ಪುರಾವೆಗಳನ್ನು ಕೋರಿತು.

ಈಗ, ಪುಟಿನ್ ಈ ಆಸೆಯನ್ನು ಈಡೇರಿಸಿದ್ದಾರೆ ಮತ್ತು ದಾಳಿಯ ಪುರಾವೆಗಳನ್ನು ಜಗತ್ತಿಗೆ ಪ್ರಸ್ತುತಪಡಿಸಿದ್ದಾರೆ. ಪುಟಿನ್ ನಿವಾಸದ ಮೇಲಿನ ದಾಳಿಗೆ ಸಾಕ್ಷಿಯಾಗಿ ರಷ್ಯಾದ ರಕ್ಷಣಾ ಸಚಿವಾಲಯವು ದೃಶ್ಯಗಳನ್ನು ಬಿಡುಗಡೆ ಮಾಡಿದ್ದು, ಹಿಮದಿಂದ ಆವೃತವಾದ ಅರಣ್ಯ ಪ್ರದೇಶದಲ್ಲಿ ಹಾನಿಗೊಳಗಾದ ಡ್ರೋನ್ ಬಿದ್ದಿರುವುದನ್ನು ತೋರಿಸುತ್ತದೆ.ಅದಾದ ಬಳಿಕ ಡ್ರೋನ್ ದಾಳಿಯ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದೆ.

ಮಾಸ್ಕೋ ಈ ದಾಳಿಯನ್ನು ಭಯೋತ್ಪಾದಕ ಕೃತ್ಯ ಮತ್ತು ಪುಟಿನ್ ಮೇಲಿನ ವೈಯಕ್ತಿಕ ದಾಳಿ ಎಂದು ಹೆಸರಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಸ್ಥಾಪನೆಗೆ ಟ್ರಂಪ್ ಮತ್ತು ಹಲವಾರು ಯುರೋಪಿಯನ್ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಈ ಎಲ್ಲಾ ಗದ್ದಲಗಳು ನಡೆಯುತ್ತಿವೆ. ಶಾಂತಿ ಒಪ್ಪಂದವು ಶೇಕಡಾ 95 ರಷ್ಟು ಪೂರ್ಣಗೊಂಡಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Black Thread Benefits: ಮಹಿಳೆಯರು ಎಡಗಾಲಿಗೆ ಕಪ್ಪು ದಾರ ಧರಿಸುವುದರಿಂದ ಇದೆ ಅದ್ಭುತ ಲಾಭ! – Kannada News | Black Thread Benefits: Shani Dev’s Protection and Astrological Power

ಜ್ಯೋತಿಷ್ಯದ ಪ್ರಕಾರ ಕಪ್ಪು ದಾರವು ಶನಿ ದೇವರನ್ನು ಪ್ರತಿನಿಧಿಸುವ ಶಕ್ತಿಯ ಸಂಕೇತವಾಗಿದೆ. ದುಷ್ಟ ದೃಷ್ಟಿ, ನಕಾರಾತ್ಮಕ ಶಕ್ತಿಗಳು ಹಾಗೂ ಅಶುಭ ಪ್ರಭಾವಗಳಿಂದ ರಕ್ಷಣೆ ಪಡೆಯಲು ಅನೇಕರು ಕೈಗೆ ಅಥವಾ ಕಾಲಿಗೆ ಕಪ್ಪು ದಾರವನ್ನು ಧರಿಸುತ್ತಾರೆ. ವಿಶೇಷವಾಗಿ ಮಹಿಳೆಯರು ದುರದೃಷ್ಟ ನಿವಾರಣೆ, ಆರೋಗ್ಯ ರಕ್ಷಣೆ ಮತ್ತು ಜೀವನದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕಾಲಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ ಎಂಬ ನಂಬಿಕೆಯಿದೆ.

ಕಪ್ಪು ದಾರ ಕಟ್ಟುವುದರಿಂದ ಶನಿದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ. ಜೊತೆಗೆ ಜೀವನದಲ್ಲಿ ಸ್ಥಿರತೆ ಮತ್ತು ಶಾಂತಿ ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಕಪ್ಪು ದಾರ ಧರಿಸಲು ಶುಭ ದಿನ ಮತ್ತು ವಿಧಾನ:

  • ಶನಿವಾರ ಕಪ್ಪು ದಾರವನ್ನು ಧರಿಸಲು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ.
  • ಮಹಿಳೆಯರು ಎಡಗಾಲಿಗೆ ಕಪ್ಪು ದಾರವನ್ನು ಕಟ್ಟುವುದು ವಿಶೇಷ ಫಲ ನೀಡುತ್ತದೆ.

ಕಪ್ಪು ದಾರ ಧರಿಸುವ ವಿಧಾನ:

  • ಶನಿವಾರ ಬೆಳಿಗ್ಗೆ ಸ್ನಾನ ಮಾಡಿ ಶುಚಿಯಾಗಿರಬೇಕು.
  • ಶನಿ ದೇವಾಲಯಕ್ಕೆ ತೆರಳಿ
  • ಶನಿದೇವರಿಗೆ ಎಳ್ಳೆಣ್ಣೆ ಅರ್ಪಿಸಿ
  • ಶನಿ ಮಂತ್ರವನ್ನು ಪಠಿಸಿ
  • ನಂತರ ಕಪ್ಪು ದಾರವನ್ನು ಎಡಗಾಲಿಗೆ ಕಟ್ಟಬೇಕು

ಇದನ್ನೂ ಓದಿ: ಸಾಮಾನ್ಯ ಜನರು ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಬಾರದು ಯಾಕೆ?

ಕಪ್ಪು ದಾರ ಧರಿಸುವುದರಿಂದ ದೊರೆಯುವ ಲಾಭಗಳು:

  • ವ್ಯಾಪಾರ ಅಥವಾ ಉದ್ಯೋಗದಲ್ಲಿ  ಆರ್ಥಿಕ ಸಮಸ್ಯೆಯಿಂದ ಮುಕ್ತಿ
  • ಸಾಲ, ನಷ್ಟ, ಅಡೆತಡೆಗಳಿಂದ ಬಳಲುತ್ತಿದ್ದರೆ ಪರಿಹಾರ
  • ಕಂಕಣ ಬಲ ಕೂಡಿಬರಲಿದೆ
  • ವೈವಾಹಿಕ ಜೀವನದಲ್ಲಿ ಸಂತೋಷ ಸಮೃದ್ಧಿ
  • ಜಾತಕದಲ್ಲಿ ಶನಿ, ರಾಹು–ಕೇತು ದೋಷಗಳಿಂದ ಮುಕ್ತಿ

ಅಂತಹ ಸಂದರ್ಭಗಳಲ್ಲಿ ಪುರುಷರು ಮತ್ತು ಮಹಿಳೆಯರು ಎರಡೂ ಕಾಲಿಗೆ ಅಥವಾ ಕೈಗೆ ಕಪ್ಪು ದಾರವನ್ನು ಧರಿಸಬಹುದು ಎಂದು ಜ್ಯೋತಿಷ್ಯ ಸಲಹೆ ನೀಡುತ್ತದೆ.

ಗಮನಿಸಬೇಕಾದ ವಿಷಯ:

ಕಪ್ಪು ದಾರವನ್ನು ಧರಿಸುವುದು ಆಸ್ಥೆಯ ಮತ್ತು ನಂಬಿಕೆಯ ಭಾಗ. ಇದರೊಂದಿಗೆ ಶುದ್ಧ ಜೀವನ ಶೈಲಿ, ಸಕಾರಾತ್ಮಕ ಚಿಂತನೆ ಮತ್ತು ಶ್ರಮವೂ ಅಷ್ಟೇ ಮುಖ್ಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷದ ದಿನ ಭಾರತಕ್ಕೆ ಬೆದರಿಕೆ ಹಾಕಿದ ಪಾಕಿಸ್ತಾನ – Kannada News | New Year Message Sparks Tension as Pakistan Army Chief Warns of Strong Retaliation

ಇಸ್ಲಾಮಾಬಾದ್, ಜನವರಿ 01: ಹೊಸ ವರ್ಷ(New Year)ಕ್ಕೆ ಪಾಕಿಸ್ತಾನವು ಶುಭಾಶಯ ತಿಳಿಸುವುದಕ್ಕಿಂತ ಬೆದರಿಕೆಯನ್ನೇ ಆರಿಸಿಕೊಂಡಿದೆ. ಭಾರತದ ಬಗೆಗಿನ ದ್ವೇಷ ಕಿಂಚಿತ್ತೂ ಕಡಿಮೆಯಾದಂತೆ ಗೋಚರಿಸುತ್ತಿಲ್ಲ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಪಾಕಿಸ್ತಾನವು ಹೊಸ ವರ್ಷವನ್ನು ಹೊಸ ಆಕ್ರಮಣಕಾರಿ ನಿಲುವಿನೊಂದಿಗೆ ಪ್ರಾರಂಭಿಸಿದೆ. ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಭಾರತವನ್ನು ನೇರವಾಗಿ ಹೆಸರಿಸದೆ, ಪಾಕಿಸ್ತಾನದ ಪ್ರಾದೇಶಿಕ ಸಮಗ್ರತೆಯ ಧಕ್ಕೆ ತಂದರೆ ತೀಕ್ಷ್ಣ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಯಾವುದೇ ಹಂತಕ್ಕೆ ಹೋಗಲಿದೆ ಎಂದು ಅವರು ಪ್ರತಿಪಾದಿಸಿದರು. ಭಯೋತ್ಪಾದನೆ ಮತ್ತು ಅಶಾಂತಿಯನ್ನು ತೊಡೆದು ಹಾಕಲು ಭದ್ರತಾ ಪಡೆಗಳು ಕಠಿಣ ಕಾರ್ಯಾಚರಣೆಗಳನ್ನು ಮುಂದುವರಿಸಿವೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಡ್ರೋನ್‌ಗಳನ್ನು ಬಳಸಿಕೊಂಡು ಪಂಜಾಬ್‌ಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಳುಹಿಸುತ್ತಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಹೇಳಿದ್ದಾರೆ.

ಗ್ರೆನೇಡ್ ದಾಳಿಯಂತಹ ಘಟನೆಗಳನ್ನು ಪ್ರೋತ್ಸಾಹಿಸುವ ಮೂಲಕ ಪಾಕಿಸ್ತಾನ ಪಂಜಾಬ್ ಅನ್ನು ಅತ್ಯಂತ ತೊಂದರೆಗೊಳಗಾದ ರಾಜ್ಯವೆಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಗಡಿಯಾಚೆಯಿಂದ ಐಎಸ್‌ಐ ಆಯೋಜಿಸಿದ್ದ ಪ್ರತಿಯೊಂದು ಪಿತೂರಿಯನ್ನು ಪೊಲೀಸರು ಯಶಸ್ವಿಯಾಗಿ ವಿಫಲಗೊಳಿಸುತ್ತಿದ್ದಾರೆ ಎಂದು ಪಂಜಾಬ್ ಡಿಜಿಪಿ ಹೇಳಿದರು.

ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿಕೊಂಡು ನಡೆದ ಗ್ರೆನೇಡ್ ದಾಳಿಯನ್ನು ಉಲ್ಲೇಖಿಸಿ, ಪಾಕಿಸ್ತಾನ ಗಡಿ ರಾಜ್ಯದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದೆ, ಆದರೆ ಭದ್ರತಾ ಸಂಸ್ಥೆಗಳು ಸಂಪೂರ್ಣವಾಗಿ ಜಾಗರೂಕರಾಗಿ ಪ್ರತಿಯೊಂದು ಪ್ರಯತ್ನವನ್ನೂ ತಟಸ್ಥಗೊಳಿಸುತ್ತಿವೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: New Year 2026: ಹೊಸ ವರ್ಷದ ಶುಭಾಶಯ ತಿಳಿಸಿ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ ಪ್ರಧಾನಿ ಮೋದಿ

ದೇಶದ ಸಶಸ್ತ್ರ ಪಡೆಗಳ ಸಂಪೂರ್ಣ ನಿಯಂತ್ರಣವನ್ನು ನೀಡುವ ಮೂಲಕ ಇತ್ತೀಚೆಗೆ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (CDF) ನೇಮಕಗೊಂಡ ಅಸಿಮ್ ಮುನೀರ್, ಗುಜ್ರಾನ್‌ವಾಲಾ ಮತ್ತು ಸಿಯಾಲ್‌ಕೋಟ್ ಗ್ಯಾರಿಸನ್‌ಗಳಿಗೆ ಭೇಟಿ ನೀಡಿದರು.

ತಮ್ಮ ಭೇಟಿಯ ಸಮಯದಲ್ಲಿ, ಮುನೀರ್ ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಉನ್ನತ ನೈತಿಕತೆ ಮತ್ತು ರಾಷ್ಟ್ರೀಯ ಭದ್ರತೆಗೆ ದೃಢವಾದ ಬದ್ಧತೆಯನ್ನು ಶ್ಲಾಘಿಸಿದರು ಮತ್ತು ಕಠಿಣ ಮತ್ತು ಮಿಷನ್-ಆಧಾರಿತ ತರಬೇತಿಯ ಮಹತ್ವವನ್ನು ಒತ್ತಿ ಹೇಳಿದರು .

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಮರ್ಷಿಯಲ್ ಗ್ಯಾಸ್ ಬೆಲೆ ಭರ್ಜರಿ ಹೆಚ್ಚಳ; 19 ಕಿಲೋ ಸಿಲಿಂಡರ್ ದರ 110.50 ರೂ ಏರಿಕೆ – Kannada News | LPG commercial gas cylinder prices rise on 2026 January

ನವದೆಹಲಿ, ಜನವರಿ 1: ಹೊಸ ವರ್ಷಕ್ಕೆ ಎಲ್​ಪಿಜಿ ಸಿಲಿಂಡರ್ ಬೆಲೆ (LPG) ಏರಿಕೆಯ ಶಾಕ್ ಸಿಕ್ಕಿದೆ. 2025ರಲ್ಲಿ 200 ರೂಗೂ ಹೆಚ್ಚು ಇಳಿಕೆ ಕಂಡಿದ್ದ ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆ ಏರಿಕೆ ಆಗಿದೆ. ಆದರೆ, ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ ಏರಿಕೆ ಆಗಿಲ್ಲ. 19 ಕಿಲೋ ಮತ್ತು 47.50 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್​ಗಳು ದುಬಾರಿಯಾಗಿವೆ. 19 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ 110 ರೂನಿಂದ 112 ರೂನಷ್ಟು ಏರಿದೆ. ಬೆಂಗಳೂರಿನಲ್ಲಿ 110.50 ರೂ ಬೆಲೆ ಹೆಚ್ಚಳ ಆಗಿದೆ. ಇನ್ನು, 47.50 ಕಿಲೋ ತೂಕದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 274.50 ರೂ ಏರಿಕೆ ಆಗಿದ್ದು, 4,407 ರೂ ಗಡಿ ಮುಟ್ಟಿದೆ.

ಬೆಂಗಳೂರಿನಲ್ಲಿ 2026ರ ಜನವರಿಯಲ್ಲಿ ವಿವಿಧ ಎಲ್​ಪಿಜಿ ದರ

  • 14.2 ಕಿಲೋ ಅಡುಗೆ ಅನಿಲ: 855.50 ರೂ
  • 5 ಕಿಲೋ ಅಡುಗೆ ಅನಿಲ: 318.50 ರೂ
  • 19 ಕಿಲೋ ವಾಣಿಜ್ಯ ಸಿಲಿಂಡರ್: 1,764.50 (110.50 ರೂ ಏರಿಕೆ)
  • 47.5 ಕಿಲೋ ವಾಣಿಜ್ಯ ಸಿಲಿಂಡರ್: 4,407 ರೂ (274.50 ರೂ ಏರಿಕೆ)

ಇದನ್ನೂ ಓದಿ: ಸಿಮ್ ವೆರಿಫಿಕೇಶನ್​ನಿಂದ ಹಿಡಿದು ಕ್ರೆಡಿಟ್ ಸ್ಕೋರ್​ವರೆಗೆ ಜನವರಿ 1ರಿಂದ ಆಗಲಿರುವ ಪ್ರಮುಖ ಹಣಕಾಸು ನಿಯಮ ಬದಲಾವಣೆಗಳು

ಬಹಳ ತಿಂಗಳುಗಳಿಂದ ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚೇನೂ ಏರಿಕೆ ಆಗಿಲ್ಲ. 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಕಳೆದ 1-2 ವರ್ಷದಲ್ಲಿ ಹೆಚ್ಚಳ ಆಗಿರುವುದು ಸುಮಾರು 50 ರೂ ಮಾತ್ರವೇ.

ದೇಶಾದ್ಯಂತ ವಿವಿಧ ನಗರಗಳಲ್ಲಿ 19 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ (ಜ. 1ಕ್ಕೆ):

  • ದೆಹಲಿ: 1,691.50 ರೂ
  • ಕೋಲ್ಕತಾ: 1,684 ರೂ
  • ಮುಂಬೈ: 1,642.50 ರೂ
  • ಬೆಂಗಳೂರು: 1,764.60 ರೂ
  • ಪಾಟ್ನಾ: 1,953 ರೂ
  • ಲಕ್ನೋ: 1,814 ರೂ
  • ಗುರುಗ್ರಾಮ್: 1,708.50 ರೂ
  • ಭೋಪಾಲ್; 1,696 ರೂ
  • ನೋಯ್ಡಾ: 1,691 ರೂ

ಇದನ್ನೂ ಓದಿ: ಭಾರತದ ಪ್ರಗತಿಯ ಸಂಕೇತಗಳು; 10 ವರ್ಷದಲ್ಲಿ ಹೂಡಿಕೆ, ಎಲ್​ಪಿಜಿ ಅನುಭೋಗದಲ್ಲಿ ಸಖತ್ ಹೆಚ್ಚಳ

ಕಮರ್ಷಿಯಲ್ ಗ್ಯಾಸ್ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ. ಅಡುಗೆ ವೆಚ್ಚ ಏರಿಕೆಯಾಗಿ, ಅಂತಿಮವಾಗಿ ಗ್ರಾಹಕರಿಗೆ ಊಟದ ಬಿಲ್​ನಲ್ಲಿ ಏರಿಕೆ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

New Year 2026: ಹೊಸ ವರ್ಷವನ್ನು ವಿಶೇಷ ಡೂಡಲ್‌ನೊಂದಿಗೆ ಸ್ವಾಗತಿಸಿದ ಗೂಗಲ್ – Kannada News | New Year 2026: Google welcomes the New Year with a meaningful doodle

2025ಕ್ಕೆ ವಿದಾಯ ಹೇಳಿ, 2026ರ ಹೊಸ ವರ್ಷವನ್ನು (New Year) ಸ್ವಾಗತಿಸಿದ್ದಾಗಿದೆ. ಹಳೆಯ ವರ್ಷದ ಕಹಿ ಘಟನೆಗಳು ಮರೆತು ಹೊಸ ಭರವಸೆ, ಹೊಸ ಕನಸುಗಳೊಂದಿಗೆ ಆರಂಭಿಸುವ ಹುರುಪು ಎಲ್ಲರಲ್ಲೂ ತುಂಬಿದೆ. ಈ ನಡುವೆ ಹೊಸ ವರ್ಷವನ್ನು ಗೂಗಲ್​ ಕೂಡ ವಿಶೇಷವಾಗಿ ಸ್ವಾಗತಿಸಿದೆ. ಗೂಗಲ್ ಹೊಸ ಆರಂಭವನ್ನು ಸೂಚಿಸುವ ಹಾಗೂ ಚೈತನ್ಯವನ್ನು ಮೂಡಿಸುವ ಗೂಗಲ್ ಡೂಡಲ್ (Google Doodle) ಹಂಚಿಕೊಂಡಿರುವುದು ವಿಶೇಷ.

ಗೂಗಲ್ ಹೊಸ ವರ್ಷವನ್ನು ರೋಮಾಂಚಕ ಡೂಡಲ್‌ನೊಂದಿಗೆ ಸ್ವಾಗತಿಸಿದ್ದು, ಕಸ್ಟಮೈಸ್ಡ್ ಆ್ಯನಿಮೆಟೇಡ್ ಡೂಡಲ್ ಇದೀಗ ಗೂಗಲ್ ಪೇಜ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಇಂದಿನ ಗೂಗಲ್ ಡೂಡಲ್‌ನಲ್ಲಿ, G ಹಾಗೂ Gle ಅಕ್ಷರಗಳ ನಡುವೆ, 2026 ಸಂಖ್ಯೆಯನ್ನು ಬರೆದಿದ್ದು, ಅದರ ಪಕ್ಕದಲ್ಲೇ ಡೈರಿ ಮತ್ತು ಪೆನ್ನು ಇದೆ.

ಇದನ್ನೂ ಓದಿ:2025ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸುವ ವಿಶೇಷ ಡೂಡಲ್ ಹಂಚಿಕೊಂಡ ಗೂಗಲ್

ಈ ಡೂಡಲ್‌ನಲ್ಲಿ ಡೈರಿಯ ಪಕ್ಕದಲ್ಲಿ ಒಂದು ಕಪ್ ಕಾಫಿ ಇರುವುದನ್ನು ಕಾಣಬಹುದು. ಬಿಸಿ ಬಿಸಿ ಕಾಫಿ ಕುಡಿದು ದಿನವನ್ನು ಆರಂಭಿಸಿ. ನಿಮ್ಮ ಬದುಕಿನ ಖಾಲಿ ಹಾಳೆಯ ತುಂಬೆಲ್ಲಾ ಸಿಹಿ ಘಟನೆಗಳೇ ತುಂಬಲಿ. ಹೊಸ ವರ್ಷದ ಹೊಸ ಸಂಕಲ್ಪದೊಂದಿಗೆ  ಆರಂಭಿಸಿ ಎನ್ನುವ ಸಂದೇಶದೊಂದಿಗೆ ಡೈರಿ ಹಾಗೂ ಪೆನ್ನನ್ನು ಇಟ್ಟಂತಿದೆ. ಇಂದಿನ ಡೂಡಲ್ ಹೊಸ ವರ್ಷದ ಸಂಕಲ್ಪವನ್ನು ಚಿತ್ರಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:21 am, Thu, 1 January 26

Source link

Global Family Day 2026: ವಸುದೈವ ಕುಟುಂಬಕಂ; ಜಾಗತಿಕ ಕುಟುಂಬ ದಿನದ ಆಚರಣೆಯ ಬಗ್ಗೆ ತಿಳಿಯಿರಿ – Kannada News | Global Family Day 2026: What is the importance of celebrating Global Family Day?

ಕುಟುಂಬವಿಲ್ಲದೆ (Family) ಜೀವನ ಅಸಾಧ್ಯ ಅಂತಾನೇ ಹೇಳಬಹುದು. ಕುಟುಂಬವು ನಮಗೆ ಬೆಟ್ಟದಷ್ಟು ಪ್ರೀತಿ ನೀಡುತ್ತದೆ, ಜೀವನ ನಡೆಸಲು ಸ್ಫೂರ್ತಿಯನ್ನು ನೀಡುತ್ತದೆ. ಕುಟುಂಬವು ನಮ್ಮನ್ನು ಯಾವುದೇ ಕ್ಲಿಷ್ಟಕರ ಸಂದರ್ಭದಲ್ಲೂ ಒಗ್ಗಟ್ಟಿನಿಂದ ಇರುವಂತೆ ನೋಡಿಕೊಳ್ಳುತ್ತದೆ. ಇದೇ ರೀತಿ ವಸುದೈವ ಕುಟುಂಬಕಂ ಎಂಬ ಮಾತಿನಂತೆ ಇಡೀ ಜಗತ್ತೇ ಒಂದು ಕುಟುಂಬದಂತಿದ್ದರೆ ಯುದ್ಧ ಹಿಂಸಾಚಾರಗಳು ನಡೆಯುವುದಿಲ್ಲ, ಪ್ರತಿಯೊಬ್ಬರೂ ಸಹ ಶಾಂತಿಯಿಂದ ಬದುಕಬಹುದು. ಈ ನಿಟ್ಟಿನಲ್ಲಿ ರಾಷ್ಟ್ರಗಳು, ಧರ್ಮಗಳು, ಸಂಸ್ಕೃತಿಗಳ ನಡುವೆ ಏಕತೆ, ಸಹೋದರತ್ವ ಮತ್ತು ಸ್ನೇಹವನ್ನು ಬೆಳೆಸುವ ಸಲುವಾಗಿ, ಯುದ್ಧ ಮತ್ತು ಹಿಂಸಾಚಾರವನ್ನು ತಡೆಗಟ್ಟಿ ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸಲು ಜನವರಿ 1 ರಂದು ಜಾಗತಿಕ ಕುಟುಂಬ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ಜಾಗತಿಕ ಕುಟುಂಬ ದಿನದ ಇತಿಹಾಸವೇನು?

ಜಾಗತಿಕ ಕುಟುಂಬ ದಿನವು ಎರಡು ಪುಸ್ತಕಗಳ ಆಧಾರದಲ್ಲಿ ಹುಟ್ಟಿಕೊಂಡಿತು. ಮೊದಲನೆಯದು 1996 ರಲ್ಲಿ ಅಮೇರಿಕನ್ ಲೇಖಕರಾದ ಸ್ಟೀವ್ ಡೈಮಂಡ್ ಮತ್ತು ರಾಬರ್ಟ್ ಅಲನ್ ಸಿಲ್ವರ್‌ಸ್ಟೈನ್ ಬರೆದ “ಒನ್ ಡೇ ಇನ್ ಪೀಸ್, ಜನವರಿ 1, 2000” ಎಂಬ ಮಕ್ಕಳ ಪುಸ್ತಕ. ಎರಡನೆಯದು 1998 ರಲ್ಲಿ ಅಮೇರಿಕನ್ ಶಾಂತಿ ಕಾರ್ಯಕರ್ತೆ ಮತ್ತು ಲೇಖಕಿ ಲಿಂಡಾ ಗ್ರೋವರ್ ಬರೆದ ಯುಟೋಪಿಯನ್ ಕಾದಂಬರಿ “ಟ್ರೀ ಐಲ್ಯಾಂಡ್: ಎ ನಾವೆಲ್ ಫಾರ್ ದಿ ನ್ಯೂ ಮಿಲೇನಿಯಂ”. ನಿರ್ದಿಷ್ಟವಾಗಿ ಗ್ರೋವರ್, ಜನವರಿ 1 ಅನ್ನು ಜಾಗತಿಕ ಶಾಂತಿ ದಿನವನ್ನಾಗಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಪುಸ್ತಕಗಳಲ್ಲಿನ ವಿಚಾರಗಳನ್ನು ಆಧರಿಸಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1997 ರಲ್ಲಿ ಜನವರಿ 1 ಅನ್ನು ಶಾಂತಿಯ ದಿನವೆಂದು ಘೋಷಿಸಿತು. ವಿಶ್ವಾದ್ಯಂತ ಅಹಿಂಸೆಯನ್ನು ಉತ್ತೇಜಿಸಲು “ಒಂದು ದಿನ, ಒಂದು ಶಾಂತಿ” ಎಂಬ ಹೆಸರಿನಲ್ಲಿ ಜಾಗತಿಕ ಕುಟುಂಬ ದಿನವನ್ನು ಪ್ರಾರಂಭಿಸಿತು. ಮೊದಲ ಅಧಿಕೃತ ಜಾಗತಿಕ ಕುಟುಂಬ ದಿನವನ್ನು ಜನವರಿ 1, 2000 ರಂದು ಆಚರಿಸಲಾಯಿತು. ಅಂದಿನಿಂದ, ಜಾಗತಿಕ ಕುಟುಂಬ ದಿನವನ್ನು ವಾರ್ಷಿಕವಾಗಿ ಹೊಸ ವರ್ಷದ ದಿನದಂದು ವಿಭಿನ್ನ ಥೀಮ್‌ನೊಂದಿಗೆ ಆಚರಿಸಲಾಗುತ್ತದೆ.

ಇದನ್ನೂ ಓದಿ: ಹೊಸ ವರ್ಷದ ಆಚರಣೆ ಪ್ರಾರಂಭವಾದದ್ದು ಹೇಗೆ? ಇಲ್ಲಿದೆ ಆಸಕ್ತಿದಾಯಕ ಸಂಗತಿ

ಜಾಗತಿಕ ಕುಟುಂಬ ದಿನದ ಉದ್ದೇಶ, ಮಹತ್ವವೇನು?

  • ಈ ದಿನವನ್ನು ಆಚರಿಸುವ ಹಿಂದಿನ ಉದ್ದೇಶವೆಂದರೆ ಇಡೀ ಜಗತ್ತು ಒಂದೇ ಕುಟುಂಬ ಎಂಬುದನ್ನು ಗುರುತಿಸುವುದು.
  • ಈ ದಿನವು ಪ್ರಪಂಚದಾದ್ಯಂತದ ಕುಟುಂಬಗಳು ಒಗ್ಗಟ್ಟಿನಿಂದ ಒಟ್ಟಿಗೆ ಬದುಕಲು ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
  • ಈ ದಿನವು ಏಕತೆ, ಶಾಂತಿ ಮತ್ತು ಒಗ್ಗಟ್ಟನ್ನು ಉತ್ತೇಜಿಸುತ್ತದೆ.
  • ಜಾಗತಿಕ ಕುಟುಂಬ ದಿನವು ನಮಗೆ ಶಾಂತಿ ಮತ್ತು ಪ್ರೀತಿಯಲ್ಲಿ ಒಟ್ಟಿಗೆ ಬದುಕುವ ಸಂದೇಶವನ್ನು ನೀಡುತ್ತದೆ.
  • ಸಮಾಜದಲ್ಲಿ ಬೆಳೆಯುತ್ತಿರುವ ಅಶಾಂತಿ ಮತ್ತು ಹಿಂಸೆಯನ್ನು ತೊಡೆದುಹಾಕುವ ಮೂಲಕ ಶಾಂತಿಯ ಸಂದೇಶವನ್ನು ಪ್ರಚಾರ ಮಾಡುವುದು ಈ ದಿನದ ಉದ್ದೇಶವಾಗಿದೆ.
  • ಈ ದಿನದಂದು, ವಿವಿಧ ಸಮುದಾಯಗಳ ಕುಟುಂಬಗಳು ವಿಶ್ವ ಶಾಂತಿಯ ಬಗ್ಗೆ ಜಾಗೃತಿ ಮೂಡಿಸಲು ಒಟ್ಟಾಗಿ ಸೇರುತ್ತವೆ.
  • ಕುಟುಂಬಗಳು ಮತ್ತು ಸಮುದಾಯಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ದಿನವಾಗಿಯೂ ಇದು ಕಾರ್ಯನಿರ್ವಹಿಸುತ್ತದೆ.
  • ಈ ದಿನದಂದು ಜಾಗೃತಿ ಮೂಡಿಸಲು, ಶಾಲಾ-ಕಾಲೇಜುಗಳಲ್ಲಿ ಜಾಗತಿಕ ಕುಟುಂಬ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link