Headlines

New Year 2026: ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಯುವಸಮೂಹ – Kannada News | New Year 2026: Karnataka Gives a Grand Welcome to the New Year with Widespread Celebrations

ಬೆಂಗಳೂರು, ಜನವರಿ 01: ಕರ್ನಾಟಕದ ಜನರು 2025ಕ್ಕೆ ಬೈಬೈ ಹೇಳಿ ಹೊಸ ವರ್ಷ 2026ಕ್ಕೆ ಹಾಯ್ ಹಾಯ್ ಹೇಳಿದರು. ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಹೊಸ ವರ್ಷ 2026ನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದರು. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source link

Read More

ನ್ಯೂ ಇಯರ್​ ಸಂಭ್ರಮದ ಮಧ್ಯೆ ಯುವಕರ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ – Kannada News | Bengaluru: Drunk Man Arrested for Misbehaving with Women Police on Church Street During New Year Celebrations

ಬೆಂಗಳೂರು, ಡಿಸೆಂಬರ್​ 31: ರಾಜ್ಯಾದ್ಯಂತ ಹೊಸ ವರ್ಷ 2026ರ ಸಂಭ್ರಮಾಚರಣೆ ಶುರುವಾಗಿದೆ. ಈ ಮಧ್ಯೆ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿ ಓರ್ವ ವ್ಯಕ್ತಿ ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿರುವಂತಹ ಘಟನೆ ನಡೆದಿದೆ. ಸದ್ಯ ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ನೋಢಿ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source link

Read More

ಮನೆಯ ಕೊನೆಯ ಕ್ಯಾಪ್ಟನ್ ಪಟ್ಟ ಯಾರ ಮುಡಿಗೆ? ಸ್ಪರ್ಧೆ ಬಲು ಜೋರು – Kannada News | Bigg Boss Kannada 12: Last captain of the house, race is on

ಬಿಗ್​​ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಮುಗಿಯಲು ಉಳಿದಿರುವುದು ಕೆಲವು ದಿನಗಳಷ್ಟೆ. ಈಗಾಗಲೇ 95 ದಿನಗಳನ್ನು ಶೋ ಪೂರೈಸಿದೆ. ಮನೆಯಲ್ಲಿ ಪ್ರಸ್ತುತ ಒಂಬತ್ತು ಮಂದಿ ಮಾತ್ರವೇ ಉಳಿದುಕೊಂಡಿದ್ದಾರೆ. ಪ್ರತಿ ವಾರದಂತೆ ಈ ವಾರವೂ ಸಹ ಟಾಸ್ಕ್​​ಗಳು ಜೋರಾಗಿ ನಡೆಯುತ್ತಿದೆ. ಆದರೆ ಹಿಂದಿನ ವಾರಗಳಿಗೆ ಹೋಲಿಸಿದರೆ ಈ ವಾರ ಕ್ಯಾಪ್ಟೆನ್ಸಿ ರೇಸಿಗೆ ಹೆಚ್ಚಿನ ಮಹತ್ವ ಇದೆ. ಈ ಬಾರಿ ಕ್ಯಾಪ್ಟನ್ ಆಗುವವರು ಮನೆಯ ಕೊನೆಯ ಕ್ಯಾಪ್ಟನ್ ಆಗಲಿದ್ದಾರೆ ಮಾತ್ರವಲ್ಲ, ನೇರವಾಗಿ ಫಿನಾಲೆ ಸ್ಪರ್ಧಿ…

Read More

ಕಳೆದ ದಶಕದಲ್ಲಿ PRAGATIಯಿಂದ 85 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳು ವೇಗಗೊಂಡಿದೆ; ಪ್ರಧಾನಿ ಮೋದಿ – Kannada News | PM Modi says PRAGATI led ecosystem has helped accelerate projects worth more than 85 lakh crore

ನವದೆಹಲಿ, ಡಿಸೆಂಬರ್ 31: ಕಳೆದ ದಶಕದಲ್ಲಿ ಪ್ರಗತಿ (PRAGATI) ನೇತೃತ್ವದ ಪರಿಸರ ವ್ಯವಸ್ಥೆಯು 85 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ ಯೋಜನೆಗಳನ್ನು ವೇಗಗೊಳಿಸಲು ಸಹಾಯ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದ್ದಾರೆ. ಸುಧಾರಣೆಯ ಆವೇಗವನ್ನು ಉಳಿಸಿಕೊಳ್ಳಲು ಮತ್ತು ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಗತಿ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ. ಪ್ರಗತಿಯಂತಹ ಕಾರ್ಯವಿಧಾನಗಳನ್ನು ಸಾಂಸ್ಥಿಕಗೊಳಿಸುವಂತೆ ಅವರು ರಾಜ್ಯಗಳಿಗೆ ಕರೆ ನೀಡಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗಾಗಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಯೋಜನೆಗಳನ್ನು ಇದೀಗ ಪೂರ್ಣಗೊಳಿಸಲಾಗಿದೆ ಎಂದು…

Read More

ಒಟ್ಟಿಗೆ ದಾಳಿ ಮಾಡಿದ ಧ್ರುವಂತ್-ಅಶ್ವಿನಿ, ಕಕ್ಕಾಬಿಕ್ಕಿಯಾದ ಗಿಲ್ಲಿ – Kannada News | Bigg Boss Kannada 12: Dhruvanth and Ashwini attacks on Gilli

ಬಿಗ್​​ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ಮಾಡುವ ಹಾಸ್ಯ ಎಲ್ಲರಿಗೂ ಇಷ್ಟ ಆಗುವಂಥಹುದ್ದಲ್ಲ, ಅದರಲ್ಲೂ ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಹಿರಿಯರು, ಕಿರಿಯರೆನ್ನದೆ ಮಾತನಾಡುವುದು, ವಿಪರೀತಕ್ಕೆ ಹೋಗಿ ಗೇಲಿ ಮಾಡುವುದು, ವ್ಯಂಗ್ಯ ಮಾಡುವುದು ಮಾಡುತ್ತಾರೆ. ಇದೇ ಕಾರಣಕ್ಕೆ ಮನೆಯ ಕೆಲವು ಸದಸ್ಯರಿಂದ ಬೈಸಿಕೊಂಡಿದ್ದು, ವಿರೋಧ ಕಟ್ಟಿಕೊಂಡಿದ್ದೂ ಸಹ ಇದೆ. ಆದರೆ ಯಾರೂ ಸಹ ಗಿಲ್ಲಿಯ ಬಾಯಿಗೆ ಬಾಯಿ ಕೊಟ್ಟು ಮಾತನಾಡಿರಲಿಲ್ಲ. ಆದರೆ ಈ ಬಾರಿ ಧ್ರುವಂತ್ ಮತ್ತು ಅಶ್ವಿನಿ ಅವರ ಆರ್ಭಟಕ್ಕೆ ಸ್ವತಃ ಗಿಲ್ಲಿ ಕಕ್ಕಾ ಬಿಕ್ಕಿ ಆಗಿಬಿಟ್ಟಿದ್ದಾರೆ….

Read More

ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು; ವಿವಾದಕ್ಕೀಡಾಯ್ತು ವಿಡಿಯೋ – Kannada News | Amroha School Sparks Outrage After Men dressed in burqas dancing to Dhurandhar Song Viral Video

ಅಮ್ರೋಹಾ, ಡಿಸೆಂಬರ್ 31: ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಬುರ್ಖಾ ಧರಿಸಿದ ಯುವಕರು ಧುರಂಧರ್ ಸಿನಿಮಾದ ಹಾಡಿಗೆ ನೃತ್ಯ ಮಾಡುತ್ತಿರುವ ವೈರಲ್ ವಿಡಿಯೋ (Viral Video) ಆನ್‌ಲೈನ್‌ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮೆಸ್ಕೊ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬುರ್ಖಾ ಧರಿಸಿ ಅಪಹಾಸ್ಯ ಮಾಡುತ್ತಾ ಡ್ಯಾನ್ಸ್ ಮಾಡಿದ್ದಾರೆ. ವಿವಾದಾತ್ಮಕ ಸಿನಿಮಾ ಧುರಂಧರ್‌ನ ಹಾಡಿಗೆ ನೃತ್ಯ ಮಾಡುತ್ತಿರುವ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆಕ್ರೋಶವನ್ನು ಹುಟ್ಟುಹಾಕಿದೆ. ಹಿಜಾಬ್ ಮತ್ತು ಮುಸ್ಲಿಂ ಧಾರ್ಮಿಕ ಗುರುತನ್ನು ಅಪಹಾಸ್ಯ…

Read More

New Year 2026 Celebration Live: ನ್ಯೂ ಇಯರ್​ ಫೀವರ್, ಸಂಭ್ರಮಾಚರಣೆ ಶುರು – Kannada News | New Year 2026 Celebration Live: New Year celebrations across Karnataka, watch live

ಬೆಂಗಳೂರು, ಡಿಸೆಂಬರ್​​ 31: ಇನ್ನೇನು ಕೆಲವೇ ಕ್ಷಣದಲ್ಲಿ 2025 ರ ಅಧ್ಯಾಯ ಮುಗಿಯಲಿದೆ. 2026ರ ಹೊಸ ಪರ್ವ ಶುರುವಾಗಲಿದೆ. ಇಂದು ಬೆಳಗಿನಿಂದಲೇ ರಾಜ್ಯದ ಉದ್ದಗಲಕ್ಕೂ ಜನ ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಹೊಸ ವರ್ಷವನ್ನ ಸ್ವಾಗತಿಸೋಕೆ ರಾಜ್ಯದ ಜನ ಕಾತರರಾಗಿದ್ದಾರೆ. ಅದರಲ್ಲೂ ಸಿಲಿಕಾನ್​ ಸಿಟಿಯಲ್ಲಿ ಪಾರ್ಟಿ ಗಮ್ಮತ್ತು ಜೋರಾಗಿದೆ. ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್​ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರದ ಸೆಲೆಬ್ರೇಷನ್ ಸ್ಪಾಟ್​ಗಳು ಲಕ ಲಕ ಅಂತಿವೆ. ಹೊಸ ವರ್ಷದ ಸಂಭ್ರಮಾಚರಣೆ ಲೈವ್​​ ನೋಡಿ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು…

Read More

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ: ಆಟೋ ಚಾಲಕರ ವಿಶೇಷ ಕೆಲಸ – Kannada News | Police Backed Initiative: Bengaluru Auto Drivers Provide Free Rides for Drunken Party goers

ಬೆಂಗಳೂರು, ಡಿ.31: ಹೊಸ ವರ್ಷದ ಸಂಭ್ರಮಕ್ಕೆ ಬೆಂಗಳೂರು ಸಿದ್ಧವಾಗಿದ್ದು, ಪಾರ್ಟಿ ಪ್ರಿಯರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದರಲ್ಲೂ ಮದ್ಯ ಸೇವಿಸಿ ಅಮಲೇರಿದವರಿಗಾಗಿ ಬೆಂಗಳೂರಿನ ಆಟೋ ಚಾಲಕರು ವಿನೂತನ ಸೇವೆಗೆ ಮುಂದಾಗಿದ್ದಾರೆ. ನಗರದ ಯಾವುದೇ ಭಾಗದಲ್ಲಿ ಮನೆ ಇರುವ ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಪೊಲೀಸ್ ಇಲಾಖೆಯ ನಿರ್ದೇಶನದ ಮೇರೆಗೆ ಸುಮಾರು 25 ಆಟೋಗಳನ್ನು ಈ ಸೇವೆಗೆ ನಿಯೋಜಿಸಲಾಗಿದೆ. ಮುಖ್ಯವಾಗಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಮಹಿಳಾ ಪೊಲೀಸರೊಂದಿಗೆ ಸುರಕ್ಷಿತವಾಗಿ ಅವರನ್ನು ಮನೆಗೆ…

Read More

ಗಂಡ-ಹೆಂಡತಿಯನ್ನು ಜೀವಂತವಾಗಿ ಸುಟ್ಟುಹಾಕಿದ ಗ್ರಾಮಸ್ಥರು; ಕಾರಣ ಕೇಳಿದರೆ ಶಾಕ್ ಆಗ್ತೀರ – Kannada News | Assam Villagers burn couple alive over suspicion of witchcraft

ನವದೆಹಲಿ, ಡಿಸೆಂಬರ್ 31: ಅಸ್ಸಾಂನಲ್ಲೊಂದು (Assam) ಅಮಾನವೀಯ ಘಟನೆ ನಡೆದಿದೆ. ಇಲ್ಲಿನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಗ್ರಾಮಸ್ಥರ ಗುಂಪೊಂದು ದಂಪತಿಯನ್ನು ಹರಿತವಾದ ಆಯುಧಗಳಿಂದ ಹೊಡೆದು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಆ ದಂಪತಿ ಮಾಟಮಂತ್ರ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಹೀಗಾಗಿಯೇ ಅವರನ್ನು ಸುಟ್ಟುಹಾಕಲಾಗಿದೆ. ಮೃತರನ್ನು ಗಾರ್ಡಿ ಬಿರೋವಾ (43) ಮತ್ತು ಅವರ ಪತ್ನಿ ಮೀರಾ ಬಿರೋವಾ (33) ಎಂದು ಗುರುತಿಸಲಾಗಿದೆ. ಇಲ್ಲಿನ ಬೆಲೋಗುರಿ ಮುಂಡಾ ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಭೀಕರ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ…

Read More

Video: ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ – Kannada News | New Year Festivities Ignite Bengaluru: Crowds Gather at MG Road and Brigade Road

ಬೆಂಗಳೂರು, ಡಿ.31: ನಗರವು ನವ ವರ್ಷದ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಯಂತಹ ಪ್ರಮುಖ ಸ್ಥಳಗಳಲ್ಲಿ ಲಕ್ಷಾಂತರ ಜನರು ಜಮಾಯಿಸುವ ನಿರೀಕ್ಷೆಯಿದೆ. ಈಗಾಗಲೇ ಹೊಸ ವರ್ಷದ ಕೌಂಟ್ ಡೌನ್‌ಗೆ ಕ್ಷಣಗಣನೆ ಆರಂಭವಾಗಿದ್ದು, ನಗರದಲ್ಲಿ ಜನಸಂದಣಿ ಹೆಚ್ಚುತ್ತಿದೆ. ಈ ಪ್ರದೇಶಗಳಲ್ಲಿನ ವಾತಾವರಣ ಸಂಪೂರ್ಣವಾಗಿ ಹಬ್ಬದ ಸಡಗರದಿಂದ ಕೂಡಿದೆ, ಎಲ್ಲೆಡೆ ಉತ್ಸಾಹ ಮತ್ತು ಸಡಗರ ಮನೆಮಾಡಿದೆ. ಜನರಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ಉತ್ಸಾಹ “ಫುಲ್ ಜೋಶ್”…

Read More