Category Archives: Blog

Your blog category

Horoscope Today 01 January : ಇಂದು ಈ ರಾಶಿಯವರ ಸಾಮರ್ಥ್ಯವನ್ನು ಊಹಿಸಲಾಗದು

2025 ಮುಕ್ತಾಯವಾಗುತ್ತಿದೆ. 2026 ರ ಹೊಸ ವರ್ಷದ ಉದಯವಾಗಿದೆ. ಕಾಲವು ಪರಿವರ್ತನೆಯನ್ನು ಹೇಳಿದ್ದು, ಮನುಕುಲವೂ ಪರಿವರ್ತನೆಯ ಕಡೆಗೆ ಹೆಜ್ಜೆ ಹಾಕಬೇಕು. ದ್ವೇಷ ಅಸೂಯೆ, ಸಿಟ್ಟು, ಅಶಾಂತಿ, ಎಲ್ಲವನ್ನೂ ಬಿಟ್ಟು ನೆಮ್ಮದಿಯ ಬದುಕನ್ನು ಹೊಸ ವರ್ಷದ ಆರಂಭದಲ್ಲಿ ಸಂಕಲ್ಪ ಮಾಡಬೇಕು‌. ಎಲ್ಲರಿಗೂ ಶುಭವಾಗಲಿ.

ಮೇಷ ರಾಶಿ:

ಶ್ರಮಕ್ಕೆ ಅಂತಿಮ ಫಲ ಸಿಗುತ್ತದೆ. ಆಪ್ತರ ಸಹಾನುಭೂತಿ ದೊರೆಯುತ್ತದೆ. ನ್ಯಾಯಾಲಯದ ವಿಚಾರದಲ್ಲಿ ಸಮಾಧಾನ. ನಿಮ್ಮನ್ನೇ ನೀವು ಪರೀಕ್ಷೆಗೆ ಒಡ್ಡಿಕೊಳ್ಳುವಿರಿ. ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ಮಾಧ್ಯಮದಲ್ಲಿ ಕೆಲಸ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಿ. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು. ಅತಿಯಾದ ಸುಖದಿಂದ ನಿಮ್ಮ ಕ್ರಿಯಾಶೀಲತೆ ನಿಂತುಹೋಗುವುದು. ದುಷ್ಟಶಕ್ತಿಯ ಬಗ್ಗೆ ನಮಗೆ ಸಂದೇಹ ಬರಬಹುದು. ಕುಟುಂಬ ಮತ್ತು ಮನೆಕೆಲಸ ಜವಾಬ್ದಾರಿಯಿಂದ ಒತ್ತಡ. ಗೃಹನಿರ್ಮಾಣದಲ್ಲಿ ಸಣ್ಣ ವಿಘ್ನಗಳು. ಅತಿಯಾಸೆ ಮನಸ್ಸಿಗೆ ಕಳವಳ ತರಬಹುದು. ವಾಹನ ಖರೀದಿಯಲ್ಲಿ ಗೊಂದಲ ಉಂಟಾಗಬಹುದು. ತಾಯಿಯ ಜೊತೆ ಜಗಳ ಮಾಡಿಕೊಂಡು ಬೇಸರಗೊಳ್ಳುವಿರಿ. ಬಿಡಿಸಲಾಗದ ಸಮಸ್ಯೆಗಳು ನಿಮ್ಮನ್ನು ಇಬ್ಬಂದಿ ಮಾಡಬಹುದು. ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆಯುವ ಕಡೆ ಕೆಲಸ ಮಾಡುವಿರಿ.

ವೃಷಭ ರಾಶಿ:

ಗೃಹಕ್ಕೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮನೆಕೆಲಸ ಸುಧಾರಣೆ ಕಾಣುತ್ತದೆ. ಶ್ರಮಕ್ಕೆ ಫಲ ದೊರೆಯುತ್ತದೆ. ಅತಿಯಾಸೆ ತೊರೆದು ಯೋಜನೆ ಮಾಡಿದರೆ ಒತ್ತಡ ಕಡಿಮೆ. ನಿಮ್ಮದಾದ ಕಾರ್ಯಗಳೇ ಬಹಳ ಇರುವಾಗ ಬೇರೆಯ ಕಡೆ ನಿಮ್ಮ ಗಮನ ಹೋಗದು. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸೀತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ನಿಮ್ಮಿಂದ ಆಗದ ಕೆಲಸಕ್ಕೆ ಸಮಯವನ್ನು ಕೊಡುವುದು ಬೇಡ. ಸಹೋದರರ ಶೀತಲ ಸಮರವು ತಿಳಿಯಾಗಬಹುದು ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವು ಸಂಭವಿಸಬಹುದು. ಇಂದು ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗಬಹುದು. ಉತ್ಸಾಹದ ಭರದಲ್ಲಿ ಏನ್ನಾದರೂ ಮಾಡಿಕೊಂಡೀರ. ದಾಂಪತ್ಯದಲ್ಲಿ ಪರಸ್ಪರ ಅನುರಾಗದ ಕೊರತೆ ಕಾಣಿಸಬಹುದು. ನ್ಯಾಯಾಲಯದ ವಿಷಯದಲ್ಲಿ ಅನುಕೂಲ. ದೇಹಾಯಾಸ ಇದ್ದರೂ ಅನಾರೋಗ್ಯ ದೂರ. ಉದ್ವೇಗಕ್ಕೆ ಒಳಗಾಗದೇ ಇರಲು ನೀವು ಪ್ರಯತ್ನಿಸುವಿರಿ. ಸ್ನೇಹಿತರ ಇಚ್ಛೆಯನ್ನು ಪೂರೈಸಲು ನೀವು ಸಮರ್ಥರಾಗುವಿರಿ.

ಮಿಥುನ ರಾಶಿ:

ಅತಿಯಾಸೆಯಿಂದ ನಿರ್ಧಾರದಲ್ಲಿ ಗೊಂದಲ ಹೆಚ್ಚು. ಆಪ್ತರ ವಿಯೋಗ ಭಾವ ಕಾಡುವುದು. ನ್ಯಾಯಾಲಯದ ವಿಚಾರದಲ್ಲಿ ಬಲ ಸಿಗುತ್ತದೆ. ಮನಸ್ತಾಪವನ್ನು ಹೇಗಾದರೂ ಮಾಡಿ ಹೊರಹಾಕಬೇಕು ಎಂದುಕೊಂಡಿರುವಿರಿ. ನಿಮ್ಮ ವಸ್ತುಗಳು ಕಾಣಿಸದೇ ನೀವು ಆತಂಕಪಡುವಿರಿ. ಸಿಕ್ಕ ಅವಕಾಶವನ್ನು ನೀವೇ ಬಿಟ್ಟುಕೊಂಡು ನಿಮ್ಮನ್ನೇ ಹಳಿದುಕೊಳ್ಳುವಿರಿ. ಅನ್ಯರ ಕುರಿತಾಗಿ ಸಂತಾಪವನ್ನು ವ್ಯಕ್ತಪಡಿಸುವುದು ವ್ಯರ್ಥವಾಗಬಹುದು. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ವಿದ್ಯಾಭ್ಯಾಸದಲ್ಲಿ ಸಾಮಾನ್ಯ ಪ್ರಗತಿಯನ್ನು ಕಾಣಬಹುದು. ತುರ್ತಾಗಿ ಹಣದ ಹೊಂದಾಣಿಕೆಯು ಕಷ್ಟವಾಗಬಹುದು. ಗೃಹನಿರ್ಮಾಣದಲ್ಲಿ ವಿಳಂಬ ಮತ್ತು ವಿಘ್ನಗಳು ಒತ್ತಡ ಹೆಚ್ಚಿಸುತ್ತವೆ. ಶ್ರಮಕ್ಕೆ ನಿಧಾನ ಫಲ. ಆರೋಗ್ಯದಲ್ಲಿ ಎಚ್ಚರ ಅಗತ್ಯ. ಮಕ್ಕಳ ಯಶಸ್ಸು ನೀವು ನಿರೀಕ್ಷಿಸಿದಂತೆ ಆಗುವುದು ಕಷ್ಟ. ಕೃಷಿ‌ಗೆ ಚಟುವಟಿಕೆಗಲ್ಲಿ ಆಸಕ್ತಿ ಹೆಚ್ಚಿರುವುದು. ನಿಮಗೆ ಸಂಬಂಧಿಸಿದ ಕಾರ್ಯವನ್ನು ಮಾತ್ರ ಮಾಡಿ. ಬಹಳ ದಿಮಗಳ ಅನಂತರ ನಿಮ್ಮ ಮನಸ್ಸು ಎಲ್ಲಿಲ್ಲದ ಉತ್ಸಾಹದಲ್ಲಿ ಇರುವುದು.

ಕರ್ಕಾಟಕ ರಾಶಿ:

ಶ್ರಮಕ್ಕೆ ಗೌರವ ಮತ್ತು ಪ್ರಶಂಸೆ ದೊರೆಯುತ್ತದೆ. ಗೃಹಸಂಬಂಧಿತ ಕೆಲಸಗಳಲ್ಲಿ ಮುನ್ನಡೆ. ಮನೆಕೆಲಸ ಇದ್ದರೂ ಮನಸ್ಸು ಹಗುರವಾಗಿರುವುದು. ಹಿರಿಯರ ಸಮ್ಮುಖದಲ್ಲಿ ನೂತನ ಗೃಹನಿರ್ಮಾಣವನ್ನು ಮಾಡುವಿರಿ. ಅಧಿಕಾರಿಗಳ ನಡವೆ ಕಲಹವಾಗಬಹುದು. ಉದ್ವೇಗದಿಂದ ಏನನ್ನಾದರೂ ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಹಳೆಯ ಸ್ನೇಹವನ್ನು ಮರಳಿ ಪಡೆಯುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಆರಂಭಿಸಿದ ಕಾರ್ಯವು ಪೂರ್ಣ ಸಫಲವಾಗುವವರೆಗೂ ನೀವು ನಿಲ್ಲಿಸುವುದಿಲ್ಲ. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ಅತಿಯಾಸೆ ಹಣಕಾಸಿನ ಒತ್ತಡ ತರಬಹುದು. ನ್ಯಾಯಾಲಯದ ವಿಚಾರದಲ್ಲಿ ಜಯದ ಸಾಧ್ಯತೆ. ನೀವು ನಿಮ್ಮ ಪರಿಸ್ಥಿತಿಯನ್ನು ಇತರರಿಗೆ ತಿಳಿಸುವುದು ಕಷ್ಟವಾಗುವುದು. ಸಂತಾನದ ಖುಷಿಯು ಇರಲಿದೆ. ಸಹೋದರರ ಬಗ್ಗೆ ನಿಮ್ಮಲ್ಲಿ ನಕಾರಾತ್ಮಕ ಗುಣಗಳು ಕಾಣಿಸಿಕೊಳ್ಳಬಹುದು. ನೀವು ಕೈಗೊಂಡ ಕಾರ್ಯಗಳು ಸಫಲವಾಗಲಿಲ್ಲ ಎಂಬ ಹತಾಶಭಾವವೂ ಸಿಟ್ಟೂ ಏಕಕಾಲಕ್ಕೆ ಬರಲಿದೆ.

ಸಿಂಹ ರಾಶಿ:

ಗೃಹನಿರ್ಮಾಣದಲ್ಲಿ ತಾಂತ್ರಿಕ ವಿಘ್ನದಿಂದ ಆತಂಕ. ಆಪ್ತರಿಂದ ದೂರವಿರುವ ಭಾವ. ನ್ಯಾಯಾಲಯದ ವಿಚಾರದಲ್ಲಿ ವಿಳಂಬ. ಶ್ರಮಕ್ಕೆ ಫಲ ತಡವಾಗಿ ಸಿಗುವ ದಿನ. ಅಪಹಾಸ್ಯಕ್ಕೆ ಆಸ್ಪದ ಕೊಡಲಾರಿರಿ. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಅರಿವಿಲ್ಲದೇ ಎಲ್ಲರೆದುರು ಅಸಭ್ಯ ವರ್ತನೆಯನ್ನು ನೀವು ತೋರಿಸುವಿರಿ. ಹೊಂದಾಣಿಕೆಯಿಂದ ಇರುವುದು ಒಳ್ಳೆಯದು. ಉದ್ಯೋಗದಲ್ಲಿ ನಿರಂತರ ಯಾವುದಾದರೂ ಸಮಸ್ಯೆಯು ಬಾಧಿಸುತ್ತಿದ್ದು ದೈವಜ್ಞರಿಂದ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾಗಬಹುದು. ನಂಬಿ ಬಂದವರನ್ನು ಬರಿಗೈಯಲ್ಲಿ ಕಳುಹಿಸಲಾರಿರಿ. ಸಂಗಾತಿಯ ಮಾತುಗಳು ನಿಮ್ಮ‌ ಅಭಿಮಾನಕ್ಕೆ ತೊಂದರೆ ಕೊಡಬಹುದು. ಅತಿಯಾದ ಶ್ರಮದಿಂದ ದೇಹಾಯಾಸ ಹೆಚ್ಚಾಗುತ್ತದೆ. ಮನೆಕೆಲಸ ಮತ್ತು ಜವಾಬ್ದಾರಿ ಒತ್ತಡ ತರುತ್ತವೆ. ನಿಮ್ಮ ಉದ್ಯಮವನ್ನು ವಿಸ್ತಾರಗೊಳಿಸುವ ಆಲೋಚನೆಯು ಬೇರೆಯವರಿಂದ ಸಿಗಬಹುದು. ನಿಮ್ಮ ಶ್ರೇಯಸ್ಸಿನಲ್ಲಿ ಬಂಧುಗಳ‌ ಪಾತ್ರವು ಇರುವುದು.

ಕನ್ಯಾ ರಾಶಿ:

ಆಪ್ತರ ಬೆಂಬಲದಿಂದ ಮನಸ್ಸಿಗೆ ಧೈರ್ಯ. ಗೃಹನಿರ್ಮಾಣದಲ್ಲಿ ಪ್ರಗತಿ ಕಂಡುಬರುತ್ತದೆ. ಅತಿಯಾಸೆ ನಿಯಂತ್ರಿಸಿದರೆ ಒತ್ತಡ ತಪ್ಪುತ್ತದೆ. ವಿಶ್ವಾಸವನ್ನು ಗಳಿಸದೇ ನೀವು ವ್ಯವಹಾರದಲ್ಲಿ ಯಶಸ್ಸು ಸಾಧ್ಯವಾಗದು. ವಿದೇಶ ಪ್ರಯಾಣದಿಂದ ಆಯಾಸ ಹೆಚ್ಚು. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಇಲ್ಲವೇ ಸುಮ್ಮನೆ ಇರುವಿರಿ. ಅಮೂಲ್ಯ ವಸ್ತುಗಳನ್ನು ಪಡೆದುಕೊಳ್ಳುವ ಹಂಬಲವಿರುವುದು. ಮಕ್ಕಳಿಗಾಗಿ ಹಣವನ್ನು ಇಡುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ನ್ಯಾಯಾಲಯದ ವಿಚಾರದಲ್ಲಿ ಸಮಾಧಾನ. ಆರೋಗ್ಯ ಸಾಮಾನ್ಯ, ದೇಹಾಯಾಸ ತಾತ್ಕಾಲಿಕ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಬರಲಿದ್ದು ಹಿರಿಯರಿಂದ ಕೇಳಿಪಡೆಯುವಿರಿ. ವೃತ್ತಿಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಕಲಹವಾಗುವ ಕಾರಣ ಸ್ಥಾನವು ಬದಲಾಗಬಹುದು.

ತುಲಾ ರಾಶಿ:

ಅತಿಯಾಸೆ ತಪ್ಪಿಸಿದರೆ ಒತ್ತಡ ಕಡಿಮೆ. ನ್ಯಾಯಾಲಯದ ವಿಷಯದಲ್ಲಿ ಅನುಕೂಲಕರ ಬೆಳವಣಿಗೆ. ದೇಹಾಯಾಸ ಇದ್ದರೂ ಅನಾರೋಗ್ಯ ತೀವ್ರವಾಗದು. ನಿಮ್ಮ ಜಾಣ್ಮೆಯಿಂದ ಭೂಮಿಯ ಕಲಹವನ್ನು ಸರಿ‌ಮಾಡಿಕೊಳ್ಳುವಿರಿ. ಮಿತ್ರನ ಬಗ್ಗೆ ಯಾರಾದರೂ ಸಲ್ಲದ ಮಾತನಾಡಬಹುದು. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇರುವರು. ನಾಜೂಕಿನಿಂದ‌ ಇಂದಿನ ಕಾರ್ಯವನ್ನು ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು. ಮನೆಯಿಂದ ದೂರದಲ್ಲಿ ನಿಮ್ಮ ಹೊಸ ಜೀವನವನ್ನು ನಡೆಸಬಹುದು. ಯೋಜಿತ ಶ್ರಮಕ್ಕೆ ಉತ್ತಮ ಫಲ ಸಿಗುತ್ತದೆ. ಗೃಹನಿರ್ಮಾಣದಲ್ಲಿ ಸಣ್ಣ ತಿದ್ದುಪಡಿ ಅಗತ್ಯ. ಮನೆಕೆಲಸ ವ್ಯವಸ್ಥಿತವಾಗಿರುತ್ತದೆ. ಕಲಾವಿದರು ಕೆಲವು ಅವಕಾಶದಿಂದ ವಂಚಿತರಾಗಬಹುದು. ಖರ್ಚಿನ ಬಗ್ಗೆ ಅಂದಾಜಿರಲಿ.‌ ನಿಮ್ಮ ಅಭಿರುಚಿಗೆ ಪ್ರೋತ್ಸಾಹವು ಸಿಗಲಿದೆ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ.

ವೃಶ್ಚಿಕ ರಾಶಿ:

ಅತಿಯಾಸೆ ನಿಮ್ಮ ಶಾಂತಿಯನ್ನು ಹಾಳುಮಾಡಬಹುದು. ಗೃಹನಿರ್ಮಾಣದಲ್ಲಿ ವಿಳಂಬ ಅಥವಾ ಅಡಚಣೆ. ಮನೆಕೆಲಸ ಹೆಚ್ಚಾಗಿ ಕಿರಿಕಿರಿ. ಸಮಯವನ್ನು ಸುಮ್ಮನೇ ವ್ಯರ್ಥವಾಗಿ ಕಳೆಯುವಿರಿ. ಆಲಸ್ಯದಿಂದ ಏನನ್ನೂ ಮಾಡಲಾಗದು. ಮೇಲಧಿಕಾರಿಗಳ ಮಾತುಗಳಿಂದ ನಿಮಗೆ ಅವಮಾನವಾಗಿದ್ದು ಮುಂದೇನು ಎಂಬುದರ ಬಗ್ಗೆ ನಿಮಗೆ ಚಿಂತೆ ಬರಬಹುದು. ಅಧಿಕ‌ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಅತಿಯಾದ ಶ್ರಮಕ್ಕೆ ಭಾಗಶಃ ಫಲ ಮಾತ್ರ ಸಿಗಲಿದೆ. ನ್ಯಾಯಾಲಯದ ವಿಚಾರದಲ್ಲಿ ದಾಖಲೆ ಮತ್ತು ಮಾತಿನಲ್ಲಿ ಜಾಗ್ರತೆ ಅಗತ್ಯ. ದೇಹಾಯಾಸ ಮತ್ತು ಒತ್ತಡ ಹೆಚ್ಚಾಗುವ ಸಾಧ್ಯತೆ. ನಿಮ್ಮನ್ನು ಅತಿಥಿಗಳಾಗಿ ಆಹ್ವಾನಿಸಬಹುದು. ನಿಮ್ಮ ಪ್ರೇಮ‌ಸಂಬಂಧವು ಸಡಿಲಾಗಬಹುದು. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು.

ಧನು ರಾಶಿ:

ನ್ಯಾಯಾಲಯದ ವಿಚಾರದಲ್ಲಿ ಲಾಭದ ಸೂಚನೆ. ದೇಹಾಯಾಸ ಕಡಿಮೆ, ಆರೋಗ್ಯ ಸ್ಥಿರ. ಅದನ್ನು ಕೆರಳಿಸಲು ಹೋಗುವುದು ಬೇಡ. ಯಾರ ಜೊತೆ ಸ್ಪರ್ಧಿಸಲೂ ನೀವು ತಯಾರಿರುವಿರಿ. ಎಲ್ಲರ ಪ್ರಶ್ನೆಗಳಿಗೂ ಉತ್ತರವನ್ನೇ ಕೊಡಬೇಕೆಂದಿಲ್ಲ.‌ ಕಾರ್ಯವನ್ನೂ ಮಾಡಿ ತೋರಿಸಲೂಬಹುದು. ಗಂಭೀರವಾದ ಸಣ್ಣ ವಿಚಾರವೂ ಮುಂದೆ ದೊಡ್ಡದಾಗಬಹುದು. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಸಂಗಾತಿಯ ವಿರುದ್ಧ ಸಿಟ್ಟಾಗಬಹುದು. ಮಹಿಳೆಯರಿಗೆ ನಿಮ್ಮಿಂದ ಹೆಚ್ಚಿನ ಸಹಕಾರವು ಸಿಕ್ಕಬಹುದು. ಗೃಹನಿರ್ಮಾಣ ಅಥವಾ ಮನೆ ಸುಧಾರಣೆಗೆ ಉತ್ತಮ ಸೂಚನೆ. ಶ್ರಮಕ್ಕೆ ಸ್ಪಷ್ಟ ಫಲ ದೊರೆಯುತ್ತದೆ. ಕುಟುಂಬ ಜವಾಬ್ದಾರಿಯಿಂದ ಒತ್ತಡ ಇದ್ದರೂ ನಿರ್ವಹಣೆ ಸಾಧ್ಯ. ಆಪ್ತರಿಂದ ತಾತ್ಕಾಲಿಕ ದೂರ. ಅನಪೇಕ್ಷಿತ ಮಾತುಗಳಿಂದ ನಿಮ್ಮ ಸಮಯವು ವ್ಯರ್ಥವಾಗುವುದು. ವಿವಾಹಕ್ಕೆ ಅಪರಿಚಿತರಿಂದ ತಡೆ ಬರಬಹುದು. ನಿಮ್ಮ ಕನಸುಗಳಿಗೆ ನೀರೆರೆಯುವ ಅವಶ್ಯಕತೆ ಇದೆ.

ಮಕರ ರಾಶಿ:

ಗೃಹಸಂಬಂಧಿತ ವಿಷಯಗಳಲ್ಲಿ ಗೊಂದಲ ಹೆಚ್ಚಾಗುತ್ತದೆ. ಅತಿಯಾಸೆ ಹಣವ್ಯಯಕ್ಕೆ ಕಾರಣವಾಗಬಹುದು. ದೇಹಾಯಾಸ ಮತ್ತು ನಿದ್ರಾಭಂಗದಿಂದ ಕಿರಿಕಿರಿ ಹೆಚ್ಚುತ್ತದೆ. ಅವಕಾಶಗಳನ್ನು ನೀವು ಪರೀಕ್ಷಿಸಿ ಒಪ್ಪಿಕೊಳ್ಳುವಿರಿ. ಹೊಸ ಮನೆಯ ಖರೀದಿಗೆ ಆಪ್ತರಿಂದ ಹಣವನ್ನು ಪಡೆಯಬೇಕಾಗಬಹುದು. ಹಿತಶತ್ರುಗಳು ನಿಮ್ಮ ಅವನತಿಯನ್ನು ನಿರೀಕ್ಷಿಸಬಹುದು. ಮಾತನ್ನು ಸರಿಯಾಗಿ, ಸರಿಯಾದ ಸ್ಥಳದಲ್ಲಿ ಆಡಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಗಣ್ಯರ ಭೇಟಿಯನ್ನು ಮಾಡುವಿರಿ. ಉದ್ಯೋಗಕ್ಕೆ ಸಂಬಂಧಿಸಿದ ಕಾನೂನಿನ ವಿಚಾರವನ್ನು ತಿಳಿದುಕೊಳ್ಳಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಮನೆಕೆಲಸ ಒತ್ತಡ ತರುತ್ತದೆ. ಶ್ರಮಕ್ಕೆ ತಕ್ಷಣ ಫಲ ಸಿಗದು. ನ್ಯಾಯಾಲಯದ ವಿಚಾರ ಮುಂದೂಡಿಕೆ. ಮಾನಸಿಕ ಸಮತೋಲನ ಮುಖ್ಯ. ಇಂದು ನಿಮ್ಮ ರೂಪಕ್ಕೆ ಆಕರ್ಷಣೆ ಇರಲಿದೆ. ಎಲ್ಲರೂ ಪ್ರಶಂಸಿಸಬಹುದು. ವಾಹನದಲ್ಲಿ ಓಡಾಟವನ್ನು ನೀವು ನಿಲ್ಲಿಸಬೇಕಾಗಬಹುದು.

ಕುಂಭ ರಾಶಿ:

ಶ್ರಮಕ್ಕೆ ತಕ್ಕ ಫಲ ಸಿಗುವ ಸೂಚನೆ ನಿಮ್ಮ ಮನಸ್ಸಿಗೆ ಬರುವುದು. ಗೃಹನಿರ್ಮಾಣ ನಿಧಾನವಾಗಿ ಸಾಗುತ್ತದೆ. ಮನೆ ಕೆಲಸಗಳಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ. ಬಹಳ ಕೆಲಸಗಳಿದ್ದರೂ ಎಲ್ಲವನ್ನೂ ನೀವು ಮರೆತಿರುವಿರಿ. ವಿದ್ಯೆಯು ಬೇಕಾದ ಸಮಯಕ್ಕೆ ಕೆಲಸಕ್ಕೆ ಬಾರದೇಹೋಗಬಹುದು. ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ನಿಮ್ಮ ಸ್ಥಿತಿಯನ್ನು ಕೆಲವರು ಆಡಿಕೊಂಡಾರು. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ದೇವತಾಕಾರ್ಯದಲ್ಲಿ ಆಸಕ್ತಿ ಕಡಿಮೆ ಇರುವುದು. ಆರ್ಥಿಕತೆಯ ಬಗ್ಗೆ ನಿಮ್ಮನ್ನು ಬಂಧುಗಳು ಪ್ರಶ್ನಿಸಬಹುದು. ಆಪ್ತರ ವಿಯೋಗ ಅಥವಾ ದೂರವು ಮನಸ್ಸಿಗೆ ನೋವು. ಅತಿಯಾದ ನಿರೀಕ್ಷೆ ಒತ್ತಡ ತಂದೀತು. ನ್ಯಾಯಾಲಯದ ವಿಚಾರದಲ್ಲಿ ಅನುಕೂಲಕರ ತಿರುವು ಕಾಣಿಸುವುದು‌. ಕುರುಡನಂತೆ ಹೋಗುವುದು ಬೇಡ. ಸ್ನೇಹಿತರ ಬೆಂಬಲವನ್ನು ನೀವು ನಿರಾಕರಿಸಬಹುದು. ತಾಯಿಯಿಂದ ನಿಮಗೆ ಏನಾದರೂ ಉಡುಗೊರೆಯಾಗಿ ಸಿಗಬಹುದು.

ಮೀನ ರಾಶಿ:

ಮಾನಸಿಕ ಒತ್ತಡ ಮತ್ತು ದೇಹಾಯಾಸ ಹೆಚ್ಚಾಗುವ ದಿನ. ಮನೆಕೆಲಸ ಜಾಸ್ತಿ ಆಗಿ ಶಕ್ತಿ ಕುಂದಬಹುದು. ಗೃಹನಿರ್ಮಾಣದಲ್ಲಿ ಅನಿರೀಕ್ಷಿತ ವಿಘ್ನಗಳು ಎದುರಾಗುತ್ತವೆ. ಮಾಧ್ಯಮದಲ್ಲಿ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಬೇಕಾದೀತು. ವೇಗದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಉದ್ಯೋಗದಲ್ಲಿ ಬರುವ ಮನಸ್ತಾಪವನ್ನು ನಿಮ್ಮೊಳಗೇ ಇಟ್ಟುಕೊಂಡು ಮುಂದುವರಿಯುವಿರಿ. ಅನಾಯಾಸವಾಗಿ ಸಿಕ್ಕ ಅವಕಾಶದಿಂದ ಗೊಂದಲ ಬರಬಹುದು. ಯಾರ ಪ್ರಭಾವವನ್ನೂ ನೀವು ಉಪಯೋಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅತಿಯಾಸೆಯ ನಿರ್ಧಾರಗಳನ್ನು ತಪ್ಪಿಸಬಹುದು. ನ್ಯಾಯಾಲಯದ ವಿಚಾರದಲ್ಲಿ ಎಚ್ಚರ ಅಗತ್ಯ. ಶ್ರಮಕ್ಕೆ ಫಲ ತಡವಾಗಿ ಗೊತ್ತಾಗುತ್ತದೆ. ಆಪ್ತರಿಂದ ದೂರಾಗುವಿರಿ. ನಿಮ್ಮ ವಿರುದ್ಧದ ಮಾತುಗಳಿಗೆ ನೀವು ಸಿಟ್ಟಾಗುವಿರಿ. ನಿಮ್ಮ ಉತ್ಸಾಹದಲ್ಲಿ ಮಿತಿ ಮೀರುವುದು ಬೇಡ. ಕಳೆದುಕೊಂಡಿದ್ದನ್ನು ಪುನಃ ಪಡೆದುಕೊಳ್ಳಲು ಸಮಯ ಬೇಕಾಗುವುದು. ಆದಷ್ಟು ಬೇರೆ ಚಟುವಟಿಕೆಗಳ ಮೂಲಕ ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ.

ಜನವರಿ 01​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ದ್ವಾದಶೀ ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ವೈಧೃತಿ, ಕರಣ : ಬಾಲವ, ಸೂರ್ಯೋದಯ – 06 – 50 am, ಸೂರ್ಯಾಸ್ತ – 06 – 05 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:32 – 15:17, ಯಮಗಂಡ ಕಾಲ 06:50 – 08:15, ಗುಳಿಕ ಕಾಲ 09:39 – 11:03

-ಲೋಹಿತ ಹೆಬ್ಬಾರ್ – 8762924271 (what’s app only)

Source link

New Year 2026: ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಯುವಸಮೂಹ – Kannada News | New Year 2026: Karnataka Gives a Grand Welcome to the New Year with Widespread Celebrations

ಬೆಂಗಳೂರು, ಜನವರಿ 01: ಕರ್ನಾಟಕದ ಜನರು 2025ಕ್ಕೆ ಬೈಬೈ ಹೇಳಿ ಹೊಸ ವರ್ಷ 2026ಕ್ಕೆ ಹಾಯ್ ಹಾಯ್ ಹೇಳಿದರು. ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಹೊಸ ವರ್ಷ 2026ನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನ್ಯೂ ಇಯರ್​ ಸಂಭ್ರಮದ ಮಧ್ಯೆ ಯುವಕರ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ – Kannada News | Bengaluru: Drunk Man Arrested for Misbehaving with Women Police on Church Street During New Year Celebrations

ಬೆಂಗಳೂರು, ಡಿಸೆಂಬರ್​ 31: ರಾಜ್ಯಾದ್ಯಂತ ಹೊಸ ವರ್ಷ 2026ರ ಸಂಭ್ರಮಾಚರಣೆ ಶುರುವಾಗಿದೆ. ಈ ಮಧ್ಯೆ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿ ಓರ್ವ ವ್ಯಕ್ತಿ ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿರುವಂತಹ ಘಟನೆ ನಡೆದಿದೆ. ಸದ್ಯ ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ನೋಢಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮನೆಯ ಕೊನೆಯ ಕ್ಯಾಪ್ಟನ್ ಪಟ್ಟ ಯಾರ ಮುಡಿಗೆ? ಸ್ಪರ್ಧೆ ಬಲು ಜೋರು – Kannada News | Bigg Boss Kannada 12: Last captain of the house, race is on

ಬಿಗ್​​ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಮುಗಿಯಲು ಉಳಿದಿರುವುದು ಕೆಲವು ದಿನಗಳಷ್ಟೆ. ಈಗಾಗಲೇ 95 ದಿನಗಳನ್ನು ಶೋ ಪೂರೈಸಿದೆ. ಮನೆಯಲ್ಲಿ ಪ್ರಸ್ತುತ ಒಂಬತ್ತು ಮಂದಿ ಮಾತ್ರವೇ ಉಳಿದುಕೊಂಡಿದ್ದಾರೆ. ಪ್ರತಿ ವಾರದಂತೆ ಈ ವಾರವೂ ಸಹ ಟಾಸ್ಕ್​​ಗಳು ಜೋರಾಗಿ ನಡೆಯುತ್ತಿದೆ. ಆದರೆ ಹಿಂದಿನ ವಾರಗಳಿಗೆ ಹೋಲಿಸಿದರೆ ಈ ವಾರ ಕ್ಯಾಪ್ಟೆನ್ಸಿ ರೇಸಿಗೆ ಹೆಚ್ಚಿನ ಮಹತ್ವ ಇದೆ. ಈ ಬಾರಿ ಕ್ಯಾಪ್ಟನ್ ಆಗುವವರು ಮನೆಯ ಕೊನೆಯ ಕ್ಯಾಪ್ಟನ್ ಆಗಲಿದ್ದಾರೆ ಮಾತ್ರವಲ್ಲ, ನೇರವಾಗಿ ಫಿನಾಲೆ ಸ್ಪರ್ಧಿ ಸಹ ಆಗಲಿದ್ದಾರೆ ಹಾಗಾಗಿ ಸಹಜವಾಗಿಯೇ ಸ್ಪರ್ಧೆ ಜೋರಾಗಿದೆ.

ಮೊದಲಿಗೆ ಸ್ಪಂದನಾ ಮತ್ತು ರಾಶಿಕಾ ನಡುವೆ ಬಿಲ್ಲೆಯ ಟಾಸ್ಕ್ ಒಂದು ನಡೆಯಿತು. ಬಿಗ್​​ಬಾಸ್ 71 ಬಿಲ್ಲೆಗಳನ್ನು ಮನೆಯೊಳಗೆ ಕಳಿಸಿದ್ದರು, ಮನೆಯ ರಾಜ ಗಿಲ್ಲಿ ಮತ್ತು ರಾಣಿ ಅಶ್ವಿನಿ ಆ ಬಿಲ್ಲೆಗಳನ್ನು ತಮ್ಮ ವಿವೇಚನೆಗೆ ತಕ್ಕಂತೆ ಮನೆಯ ಇತರೆ ಸದಸ್ಯರಿಗೆ ಹಂಚಬೇಕಿತ್ತು, ಆ ಬಿಲ್ಲೆಗಳನ್ನು ಅವರು ಸ್ಪಂದನಾ ಮತ್ತು ರಾಶಿಕಾಗೆ ಹಂಚಬೇಕಾಗಿತ್ತು. ಅದರಂತೆ ಸ್ಪಂದನಾಗೆ ಹೆಚ್ಚಿನ ಬಿಲ್ಲೆಗಳು ಬಂದವು, ರಾಶಿಕಾಗೆ ಕಡಿಮೆ ಬಿಲ್ಲೆಗಳು ಬಂದವು. ಆದರೆ ಇದೇ ರಾಶಿಕಾಗೆ ಪ್ಲಸ್ ಆಗಿ ಪರಿಣಮಿಸಿತು. ರಾಶಿಕಾ ತೋಳ್ಬಲ ಬಳಸಿ ಸ್ಪಂದನಾ ಗೆಲ್ಲದಂತೆ ತಡೆದರು ಮಾತ್ರವಲ್ಲದೆ ಕಡಿಮೆ ಬಿಲ್ಲೆಗಳಿದ್ದರೂ ಸಹ ಗೆದ್ದು ಕ್ಯಾಪ್ಟೆನ್ಸಿ ರೇಸಿಗೆ ಆಯ್ಕೆ ಆದರು.

ಬಳಿಕ ಪುರುಷ ಸ್ಪರ್ಧಿಗಳಿಗೆ ಟಾಸ್ಕ್ ಆಯೋಜನೆ ಆಯ್ತು. ಎಣ್ಣೆ ಚೆಲ್ಲಿಗೆ ಟಾರ್ಪಲ್ ಮೇಲೆ ಬ್ಯಾಲೆನ್ಸ್ ಮಾಡುತ್ತಾ ಸ್ಪರ್ಧಿಗಳು ಚೆಂಡುಗಳನ್ನು ಸಂಗ್ರಹಿಸಬೇಕು, ಅವನ್ನು ಮಹಿಳಾ ಸ್ಪರ್ಧಿಯ ಸಹಾಯದಿಂದ ಬುಟ್ಟಿಗೆ ಹಾಕಬೇಕು. ಈ ಟಾಸ್ಕ್​​ನಲ್ಲಿ ಧನುಶ್ ಭರ್ಜರಿ ಮುನ್ನಡೆಯಿಂದ ಗೆದ್ದರು. ದ್ವಿತೀಯ ಸ್ಥಾನ ಪಡೆದಿದ್ದು ರಘು, ತೃತೀಯ ಸ್ಥಾನಕ್ಕೆ ಧ್ರುವಂತ್ ತೃಪ್ತರಾದರು. ಆದರೆ ಬಿಗ್​​ಬಾಸ್ ಆದೇಶದಂತೆ ಧನುಶ್ ಜೊತೆಗೆ ಮತ್ತೊಬ್ಬರನ್ನು ಕ್ಯಾಪ್ಟೆನ್ಸಿ ರೇಸಿಗೆ ಆಯ್ಕೆ ಮಾಡಬೇಕಿತ್ತು. ಈ ಕಾರ್ಯವನ್ನು ರಾಜ-ರಾಣಿಗೆ ವಹಿಸಿದ್ದರು.

ಇದನ್ನೂ ಓದಿ:ಬಿಗ್​​ ಬಾಸ್​​ ಬಳಿಕ ಭೇಟಿಯಾದ ತನಿಷಾ ಹಾಗೂ ವರ್ತೂರ್ ಸಂತೋಷ್

ಗಿಲ್ಲಿಗೆ ರಘು ಕ್ಯಾಪ್ಟೆನ್ಸಿ ರೇಸಿಗೆ ಆಯ್ಕೆ ಆಗಬೇಕಿತ್ತು ಆದರೆ ಅಶ್ವಿನಿ ಧ್ರುವಂತ್ ಪರವಾಗಿ ನಿಂತಿದ್ದರು. ಬಹಳ ಹೊತ್ತು ಚರ್ಚೆ, ಜಗಳ, ವಾಗ್ವಾದ ನಡೆಯಿತು. ಬಿಗ್​​ಬಾಸ್ ಸಹ ಕೊನೆಗೆ ಎಚ್ಚರಿಕೆ ನೀಡಿದರು. ಅಂತಿಮವಾಗಿ ರಘು ಅವರನ್ನು ಆಯ್ಕೆ ಮಾಡಲಾಯ್ತು. ಇತರೆ ಸ್ಪರ್ಧಿಗಳಲ್ಲಿ ಯಾರಿಗೆ ಯಾರನ್ನು ಕ್ಯಾಪ್ಟೆನ್ಸಿ ಟಾಸ್ಕ್​​ಗೆ ಕಳಿಸಬೇಕು ಎಂದು ಮತ್ತೊಂದು ಟಾಸ್ಕ್ ನೀಡಲಾಯ್ತು. ಅದರಂತೆ ರಘು ಅವರಿಗೆ ಹೆಚ್ಚು ಮತಗಳು ದೊರೆತಿವೆ. ಆದರೆ ಟಾಸ್ಕ್ ಇನ್ನೂ ಮುಗಿದಿಲ್ಲ. ಧನುಶ್, ಟಾಸ್ಕ್ ಗೆದ್ದರೂ ಸಹ ಕ್ಯಾಪ್ಟೆನ್ಸಿ ರೇಸಿನಿಂದ ಹೊರಗೆ ಉಳಿಯುವ ಸಾಧ್ಯತೆ ಕಾಣುತ್ತಿದೆ.

ಆದರೆ ಸ್ಪಂದನಾ ಮತ್ತು ರಾಶಿಕಾ ಟಾಸ್ಕ್​​ನಲ್ಲಿಯೂ ಹೀಗೆಯೇ ಆಗಿತ್ತು, ಸ್ಪಂದನಾಗೆ ಹೆಚ್ಚು ಬಿಲ್ಲೆ ದೊರೆತರೂ ಸಹ ಸ್ಪಂದನಾ ಸೋತಿದ್ದರು, ಈಗ ರಘುಗೆ ಹೆಚ್ಚು ಮತ ದೊರೆತಿದೆ. ಟಾಸ್ಕ್​​ನ ನಿಯಮದಂತೆ ಅವರಿಗೆ ಹೆಚ್ಚು ಮಣ್ಣು ಸಹ ದೊರೆತಿದೆ. ಆದರೆ ಇದೇ ಅವರಿಗೆ ಶಾಪವಾಗುತ್ತದೆಯಾ? ಕಾದು ನೊಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಳೆದ ದಶಕದಲ್ಲಿ PRAGATIಯಿಂದ 85 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳು ವೇಗಗೊಂಡಿದೆ; ಪ್ರಧಾನಿ ಮೋದಿ – Kannada News | PM Modi says PRAGATI led ecosystem has helped accelerate projects worth more than 85 lakh crore

ನವದೆಹಲಿ, ಡಿಸೆಂಬರ್ 31: ಕಳೆದ ದಶಕದಲ್ಲಿ ಪ್ರಗತಿ (PRAGATI) ನೇತೃತ್ವದ ಪರಿಸರ ವ್ಯವಸ್ಥೆಯು 85 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ ಯೋಜನೆಗಳನ್ನು ವೇಗಗೊಳಿಸಲು ಸಹಾಯ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದ್ದಾರೆ. ಸುಧಾರಣೆಯ ಆವೇಗವನ್ನು ಉಳಿಸಿಕೊಳ್ಳಲು ಮತ್ತು ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಗತಿ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

ಪ್ರಗತಿಯಂತಹ ಕಾರ್ಯವಿಧಾನಗಳನ್ನು ಸಾಂಸ್ಥಿಕಗೊಳಿಸುವಂತೆ ಅವರು ರಾಜ್ಯಗಳಿಗೆ ಕರೆ ನೀಡಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗಾಗಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಯೋಜನೆಗಳನ್ನು ಇದೀಗ ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Narendra Modi In Pics: 2025 ಪ್ರಧಾನಿ ನರೇಂದ್ರ ಮೋದಿ ಚಿತ್ರ ಪರ್ವ, ವಿಶ್ವ ಪರ್ಯಟನೆ, ದೇಶದಲ್ಲಿ ನಡೆದ ಘಟನೆಗಳ ಮಿಶ್ರಣ

ನಾಗರಿಕರಿಗೆ ವೇಗವಾಗಿ ಕಾರ್ಯಗತಗೊಳಿಸುವಿಕೆ, ಉತ್ತಮ ಗುಣಮಟ್ಟ ಮತ್ತು ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಮುಂಬರುವ ವರ್ಷಗಳಲ್ಲಿ ಸಕ್ರಿಯ ಆಡಳಿತ ಮತ್ತು ಸಮಯೋಚಿತ ಅನುಷ್ಠಾನ (PRAGATI) ವೇದಿಕೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಹೇಳಿದ್ದಾರೆ. ಈ ಸಭೆಯಲ್ಲಿ ಪ್ರಧಾನ ಮಂತ್ರಿ ಮೋದಿ ರಸ್ತೆ, ರೈಲ್ವೆ, ವಿದ್ಯುತ್, ಜಲ ಸಂಪನ್ಮೂಲಗಳು ಮತ್ತು ಕಲ್ಲಿದ್ದಲು ಸೇರಿದಂತೆ 5 ನಿರ್ಣಾಯಕ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದರು. ಈ ಯೋಜನೆಗಳು 5 ರಾಜ್ಯಗಳನ್ನು ವ್ಯಾಪಿಸಿವೆ, ಒಟ್ಟು 40,000 ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚವನ್ನು ಹೊಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಟ್ಟಿಗೆ ದಾಳಿ ಮಾಡಿದ ಧ್ರುವಂತ್-ಅಶ್ವಿನಿ, ಕಕ್ಕಾಬಿಕ್ಕಿಯಾದ ಗಿಲ್ಲಿ – Kannada News | Bigg Boss Kannada 12: Dhruvanth and Ashwini attacks on Gilli

ಬಿಗ್​​ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ಮಾಡುವ ಹಾಸ್ಯ ಎಲ್ಲರಿಗೂ ಇಷ್ಟ ಆಗುವಂಥಹುದ್ದಲ್ಲ, ಅದರಲ್ಲೂ ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಹಿರಿಯರು, ಕಿರಿಯರೆನ್ನದೆ ಮಾತನಾಡುವುದು, ವಿಪರೀತಕ್ಕೆ ಹೋಗಿ ಗೇಲಿ ಮಾಡುವುದು, ವ್ಯಂಗ್ಯ ಮಾಡುವುದು ಮಾಡುತ್ತಾರೆ. ಇದೇ ಕಾರಣಕ್ಕೆ ಮನೆಯ ಕೆಲವು ಸದಸ್ಯರಿಂದ ಬೈಸಿಕೊಂಡಿದ್ದು, ವಿರೋಧ ಕಟ್ಟಿಕೊಂಡಿದ್ದೂ ಸಹ ಇದೆ. ಆದರೆ ಯಾರೂ ಸಹ ಗಿಲ್ಲಿಯ ಬಾಯಿಗೆ ಬಾಯಿ ಕೊಟ್ಟು ಮಾತನಾಡಿರಲಿಲ್ಲ. ಆದರೆ ಈ ಬಾರಿ ಧ್ರುವಂತ್ ಮತ್ತು ಅಶ್ವಿನಿ ಅವರ ಆರ್ಭಟಕ್ಕೆ ಸ್ವತಃ ಗಿಲ್ಲಿ ಕಕ್ಕಾ ಬಿಕ್ಕಿ ಆಗಿಬಿಟ್ಟಿದ್ದಾರೆ.

ಅಶ್ವಿನಿ, ಧ್ರುವಂತ್ ಅವರು ಗಾರ್ಡನ್ ಏರಿಯಾನಲ್ಲಿ ಕುಳಿತಿದ್ದಾಗ ಸುಮ್ಮನೆ ನಿನ್ನೆ ನಡೆದ ಟಾಸ್ಕ್​ ವಿಚಾರವಾಗಿ ಚರ್ಚೆಗೆ ಎಳೆದ ಗಿಲ್ಲಿ, ಅಶ್ವಿನಿ ಅವರನ್ನು ಮೂದಲಿಸಲು ಆರಂಭಿಸಿದರು. ಕೂಡಲೇ ಧ್ರುವಂತ್ ಸಹ ಗಿಲ್ಲಿಯ ಮೂದಲಿಕೆ ಆರಂಭಿಸಿದರು. ಅಶ್ವಿನಿ ಮತ್ತು ಧ್ರುವಂತ್ ಒಟ್ಟಾಗಿ ಗಿಲ್ಲಿಯ ಮೇಲೆ ಮುಗಿಬಿದ್ದರು. ಟಾಸ್ಕ್ ವಿಷಯದಿಂದ ಆರಂಭವಾದ ಜಗಳ ವೈಯಕ್ತಿಕ ಮಟ್ಟಕ್ಕೂ ಸಹ ಹೋಯ್ತು. ಒಂದು ಹಂತದಲ್ಲಂತೂ ಗಿಲ್ಲಿಗೆ ಏನು ಮಾತನಾಡಬೇಕು ಎಂದು ಸಹ ತೋಚದೆ ಏನೇನೋ ಚಿತ್ರ ವಿಚತ್ರ ಸದ್ದುಗಳನ್ನು ಮಾಡಲು ಆರಂಭಿಸಿದರು.

ಇದನ್ನೂ ಓದಿ:ಅಶ್ವಿನಿ ಗೌಡ ಎದುರು ಗಿಲ್ಲಿ ನಟ ಆ್ಯಟಿಟ್ಯೂಡ್: ವಿಡಿಯೋ ನೋಡಿ..

ಇವರ ಜಗಳದ ಜೋರು ನೋಡಿ ಮನೆ ಸದಸ್ಯರೆಲ್ಲ ಗಾರ್ಡನ್ ಏರಿಯಾದಿಂದ ಎದ್ದು ಕಿಚನ್​​ಗೆ ಹೊರಟು ಬಿಟ್ಟರು. ಅಲ್ಲಿ ಅವರು ಅಡುಗೆ ಮಾಡಿ ವಾಪಸ್ ಗಾರ್ಡನ್ ಏರಿಯಾಕ್ಕೆ ಬಂದಾಗಲೂ ಸಹ ಇವರ ಜಗಳ ಮುಂದುವರೆಯುತ್ತಲೇ ಇತ್ತು. ಧ್ರುವಂತ್ ಮತ್ತು ಅಶ್ವಿನಿ, ಪಾಯಿಂಟ್​​ಗಳ ಮೇಲೆ ಪಾಯಿಂಟ್ ಹಾಕುತ್ತಾ, ಗಿಲ್ಲಿ ರೀತಿಯಲ್ಲೇ ವ್ಯಂಗ್ಯ ಮಾಡುತ್ತಾ, ಹೀಗಳೆಯುತ್ತಾ ಜಗಳ ಮಾಡಿದರು. ತನ್ನದೇ ಮದ್ದು ತನ್ನ ಮೇಲೆ ಪ್ರಯೋಗಿಸಿದಾಗ ಸಹಜವಾಗಿಯೇ ಗಿಲ್ಲಿ ಅವಕ್ಕಾದರು, ಅದರಲ್ಲೂ ಧ್ರುವಂತ್ ಅಂತೂ ಗಿಲ್ಲಿಯ ಮುಂದೆ ಹೋಗಿ ಕೂತು, ‘ತಾಕತ್ತಿದ್ದರೆ ಮಾತನಾಡು’ ಎಂದು ಸವಾಲುಗಳನ್ನು ಎಸೆದರು. ಧ್ರುವಂತ್ ಆರ್ಭಟಕ್ಕೆ ಪೆಚ್ಚಾಗಿ ಕೊನೆಗೆ ಗಿಲ್ಲಿಯೇ ಮಾತು ನಿಲ್ಲಿಸಿ ಎದ್ದು ಹೋಗುವಂತಾಯ್ತು.

‘ನಿನ್ನ ಮೂರು-ಮುಕ್ಕಾಲು ರಿಯಾಲಿಟಿ ಶೋನ ಕಂಟೆಂಟ್ ಮುಗಿದು ಹೋಗಿದೆ ಅದೇ ಕಾರಣಕ್ಕೆ ಈಗ ಏನೇನೋ ಶಬ್ದ ಮಾಡುತ್ತಿದ್ದೀಯ’ ಎಂದೆಲ್ಲ ಧ್ರುವಂತ್ ಬೈದರೆ, ಗಿಲ್ಲಿ, ಅಶ್ವಿನಿ ಕುರಿತಂತೆ ‘ಅಜ್ಜಿ ಎಂದು, ಹಲ್ಲು ಸೆಟ್’ ಎಂದು ರೇಗಿಸಿದ. ಧ್ರುವಂತ್​​ಗೆ ‘ವೀಕ್ ಪರ್ಸನ್’ ಎಂದು ರೇಗಿಸಿದ. ಆದರೆ ಇಂದು ನಡೆದ ಜಗಳದಲ್ಲಿ ಸ್ಪಷ್ಟವಾಗಿ ಧ್ರುವಂತ್ ಅವರದ್ದೇ ಮೇಲುಗೈ ಆಗಿದ್ದು ಸ್ಪಷ್ಟವಾಗಿ ಕಂಡು ಬಂತು. ಗಿಲ್ಲಿ ಸಾಮಾನ್ಯವಾಗಿ ಜಗಳದಲ್ಲಿ ಗೆಲುವು ಸಾಧಿಸುತ್ತಿದ್ದ ಆದರೆ ಈ ಬಾರಿ ಸೋತಿದ್ದಾರೆ. ಗಿಲ್ಲಿಯ ಮಾತಿಗೆ ಪ್ರತಿ ಮಾತು ಸಹ ಆಡದೆ ಸುಮ್ಮನೇ ಇರುತ್ತಿದ್ದ ಧ್ರುವಂತ್, ಗಿಲ್ಲಿಯನ್ನೇ ಕೆಣಕಿ ಸೈ ಎನಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು; ವಿವಾದಕ್ಕೀಡಾಯ್ತು ವಿಡಿಯೋ – Kannada News | Amroha School Sparks Outrage After Men dressed in burqas dancing to Dhurandhar Song Viral Video

ಅಮ್ರೋಹಾ, ಡಿಸೆಂಬರ್ 31: ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಬುರ್ಖಾ ಧರಿಸಿದ ಯುವಕರು ಧುರಂಧರ್ ಸಿನಿಮಾದ ಹಾಡಿಗೆ ನೃತ್ಯ ಮಾಡುತ್ತಿರುವ ವೈರಲ್ ವಿಡಿಯೋ (Viral Video) ಆನ್‌ಲೈನ್‌ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮೆಸ್ಕೊ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬುರ್ಖಾ ಧರಿಸಿ ಅಪಹಾಸ್ಯ ಮಾಡುತ್ತಾ ಡ್ಯಾನ್ಸ್ ಮಾಡಿದ್ದಾರೆ. ವಿವಾದಾತ್ಮಕ ಸಿನಿಮಾ ಧುರಂಧರ್‌ನ ಹಾಡಿಗೆ ನೃತ್ಯ ಮಾಡುತ್ತಿರುವ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆಕ್ರೋಶವನ್ನು ಹುಟ್ಟುಹಾಕಿದೆ. ಹಿಜಾಬ್ ಮತ್ತು ಮುಸ್ಲಿಂ ಧಾರ್ಮಿಕ ಗುರುತನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಈ ಕೃತ್ಯವನ್ನು ಟೀಕಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

New Year 2026 Celebration Live: ನ್ಯೂ ಇಯರ್​ ಫೀವರ್, ಸಂಭ್ರಮಾಚರಣೆ ಶುರು – Kannada News | New Year 2026 Celebration Live: New Year celebrations across Karnataka, watch live

ಬೆಂಗಳೂರು, ಡಿಸೆಂಬರ್​​ 31: ಇನ್ನೇನು ಕೆಲವೇ ಕ್ಷಣದಲ್ಲಿ 2025 ರ ಅಧ್ಯಾಯ ಮುಗಿಯಲಿದೆ. 2026ರ ಹೊಸ ಪರ್ವ ಶುರುವಾಗಲಿದೆ. ಇಂದು ಬೆಳಗಿನಿಂದಲೇ ರಾಜ್ಯದ ಉದ್ದಗಲಕ್ಕೂ ಜನ ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಹೊಸ ವರ್ಷವನ್ನ ಸ್ವಾಗತಿಸೋಕೆ ರಾಜ್ಯದ ಜನ ಕಾತರರಾಗಿದ್ದಾರೆ. ಅದರಲ್ಲೂ ಸಿಲಿಕಾನ್​ ಸಿಟಿಯಲ್ಲಿ ಪಾರ್ಟಿ ಗಮ್ಮತ್ತು ಜೋರಾಗಿದೆ. ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್​ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರದ ಸೆಲೆಬ್ರೇಷನ್ ಸ್ಪಾಟ್​ಗಳು ಲಕ ಲಕ ಅಂತಿವೆ. ಹೊಸ ವರ್ಷದ ಸಂಭ್ರಮಾಚರಣೆ ಲೈವ್​​ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ: ಆಟೋ ಚಾಲಕರ ವಿಶೇಷ ಕೆಲಸ – Kannada News | Police Backed Initiative: Bengaluru Auto Drivers Provide Free Rides for Drunken Party goers

ಬೆಂಗಳೂರು, ಡಿ.31: ಹೊಸ ವರ್ಷದ ಸಂಭ್ರಮಕ್ಕೆ ಬೆಂಗಳೂರು ಸಿದ್ಧವಾಗಿದ್ದು, ಪಾರ್ಟಿ ಪ್ರಿಯರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದರಲ್ಲೂ ಮದ್ಯ ಸೇವಿಸಿ ಅಮಲೇರಿದವರಿಗಾಗಿ ಬೆಂಗಳೂರಿನ ಆಟೋ ಚಾಲಕರು ವಿನೂತನ ಸೇವೆಗೆ ಮುಂದಾಗಿದ್ದಾರೆ. ನಗರದ ಯಾವುದೇ ಭಾಗದಲ್ಲಿ ಮನೆ ಇರುವ ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಪೊಲೀಸ್ ಇಲಾಖೆಯ ನಿರ್ದೇಶನದ ಮೇರೆಗೆ ಸುಮಾರು 25 ಆಟೋಗಳನ್ನು ಈ ಸೇವೆಗೆ ನಿಯೋಜಿಸಲಾಗಿದೆ. ಮುಖ್ಯವಾಗಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಮಹಿಳಾ ಪೊಲೀಸರೊಂದಿಗೆ ಸುರಕ್ಷಿತವಾಗಿ ಅವರನ್ನು ಮನೆಗೆ ತಲುಪಿಸಲಾಗುವುದು. ಪ್ರಜ್ಞೆ ಕಳೆದುಕೊಂಡವರು ಅಥವಾ ಆರೋಗ್ಯದಲ್ಲಿ ಏರುಪೇರಾದವರಿಗೂ ಈ ಸೇವೆ ಲಭ್ಯವಿದೆ. ಈ ಸೇವೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ, ಆದರೆ ಪ್ರೀತಿಯಿಂದ ನೀಡಿದರೆ ಸ್ವೀಕರಿಸಲಾಗುವುದು ಎಂದು ಚಾಲಕರು ತಿಳಿಸಿದ್ದಾರೆ. ಗಲಾಟೆಗಳನ್ನು ತಪ್ಪಿಸಿ ಸುರಕ್ಷಿತ ಹೊಸ ವರ್ಷಾಚರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಂಡ-ಹೆಂಡತಿಯನ್ನು ಜೀವಂತವಾಗಿ ಸುಟ್ಟುಹಾಕಿದ ಗ್ರಾಮಸ್ಥರು; ಕಾರಣ ಕೇಳಿದರೆ ಶಾಕ್ ಆಗ್ತೀರ – Kannada News | Assam Villagers burn couple alive over suspicion of witchcraft

ನವದೆಹಲಿ, ಡಿಸೆಂಬರ್ 31: ಅಸ್ಸಾಂನಲ್ಲೊಂದು (Assam) ಅಮಾನವೀಯ ಘಟನೆ ನಡೆದಿದೆ. ಇಲ್ಲಿನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಗ್ರಾಮಸ್ಥರ ಗುಂಪೊಂದು ದಂಪತಿಯನ್ನು ಹರಿತವಾದ ಆಯುಧಗಳಿಂದ ಹೊಡೆದು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಆ ದಂಪತಿ ಮಾಟಮಂತ್ರ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಹೀಗಾಗಿಯೇ ಅವರನ್ನು ಸುಟ್ಟುಹಾಕಲಾಗಿದೆ. ಮೃತರನ್ನು ಗಾರ್ಡಿ ಬಿರೋವಾ (43) ಮತ್ತು ಅವರ ಪತ್ನಿ ಮೀರಾ ಬಿರೋವಾ (33) ಎಂದು ಗುರುತಿಸಲಾಗಿದೆ.

ಇಲ್ಲಿನ ಬೆಲೋಗುರಿ ಮುಂಡಾ ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಭೀಕರ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ರಾತ್ರಿ 9 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. “ಈ ಕೃತ್ಯ ಎಸಗಲು ಬಹುತೇಕ ಇಡೀ ಗ್ರಾಮದ ಜನರು ಒಗ್ಗೂಡಿದ್ದರು. ಹೀಗಾಗಿ ಅವರು ಯಾರೂ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ನಮ್ಮ ಆರಂಭಿಕ ತನಿಖೆಯ ಪ್ರಕಾರ, ಪತಿ ಮತ್ತು ಪತ್ನಿಯನ್ನು ಮೊದಲು ಥಳಿಸಿ ನಂತರ ಬೆಂಕಿ ಹಚ್ಚಲಾಯಿತು. ಅವರ ಮೂಳೆಗಳನ್ನು ಸಹ ನಮಗೆ ಪಡೆಯಲು ಸಾಧ್ಯವಾಗಲಿಲ್ಲ” ಎಂದು ಕರ್ಬಿ ಅಂಗ್ಲಾಂಗ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪುಷ್ಪರಾಜ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಗ್ರಹಚಾರ ಎಂದರೆ ಇದೇ ನೋಡಿ; ಸೋಫಾದಿಂದ ಏಳುವಾಗ ಆಕಸ್ಮಿಕವಾಗಿ ಗುಂಡು ಹಾರಿ ಎನ್​ಆರ್​ಐ ಸಾವು

ದುಷ್ಕರ್ಮಿಗಳು ಆರಂಭದಲ್ಲಿ ದಂಪತಿಗಳ ಮೇಲೆ ಮನೆಯೊಳಗೆ ಹಲ್ಲೆ ನಡೆಸಿದರು. ನಂತರ ಮನೆ ಸುಟ್ಟು ಭಸ್ಮವಾಯಿತು. ಬಳಿಕ ಆ ದಂಪತಿ ಬೆಂಕಿಯಲ್ಲಿ ಸಾವನ್ನಪ್ಪಿದರು. ಗ್ರಾಮಸ್ಥರು ದಂಪತಿಗಳು ಮಾಟಮಂತ್ರದಲ್ಲಿ ತೊಡಗಿದ್ದಾರೆಂದು ಶಂಕಿಸಿದ್ದರು. ಇದರಿಂದಾಗಿ ಆ ಊರಿನಲ್ಲಿ ಕೆಟ್ಟ ಘಟನೆಗಳು ಮತ್ತು ಅನಾರೋಗ್ಯ ಉಂಟಾಗಿದೆ ಎಂಬುದು ಅವರ ನಂಬಿಕೆಯಾಗಿತ್ತು. ಬೆಂಕಿ ಹಚ್ಚಿದ ಎಲ್ಲಾ ಅಪರಾಧಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:24 pm, Wed, 31 December 25

Source link