Category Archives: Blog

Your blog category

ಗಿಲ್ಲಿಗೆ ‘ಲೋ*ರ್’, ಥರ್ಡ್​​ಕ್ಲಾಸ್ ಪದ ಬಳಕೆ ಮಾಡಿದ ಅಶ್ವಿನಿ; ಮತ್ತೆ ಬಂತು ಹಳೇ ವರ್ಷನ್ – Kannada News | Ashwini Gowda Used Lofer Third class words in Bigg Boss Ashwini Old Version Returns

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಅಶ್ವಿನಿ ಗೌಡ ಅವರ ಹೊಸ ವರ್ಷನ್ ಇತ್ತೀಚೆಗಷ್ಟೇ ಆರಂಭ ಆಗಿತ್ತು. ಮೊದಲು ಕೂಗಾಟ, ಅವಾಚ್ಯ ಪದ ಬಳಕೆ ಮಾಡಿಕೊಂಡು ಓಡಾಡುತ್ತಿದ್ದ ಅವರು ನಂತರ ಬದಲಾದರು. ಇತ್ತೀಚೆಗೆ ಅವರು ಬಹುತೇಕ ಸಂದರ್ಭದಲ್ಲಿ ಮೌನವಾಗೇ ಇರುತ್ತಿದ್ದರು. ಯಾರೇ ಎಷ್ಟೇ ಟ್ರಿಗರ್ ಮಾಡಿದರೂ ಅವರು ರೇಗಾಡುತ್ತಾ ಇರಲಿಲ್ಲ. ತಾಳ್ಮೆಯಿಂದ ವರ್ತಿಸುತ್ತಿದ್ದರು. ಆದರೆ, ಈಗ ಅವರ ಹಳೆಯ ವರ್ಷನ್ ಮತ್ತೆ ಆರಂಭ ಆಗಿದೆ. ಅವರು ಗಿಲ್ಲಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ.

ಧ್ರುವಂತ್ ಹಾಗೂ ಅಶ್ವಿನಿ ಗೌಡ ಒಂದೇ ಕಡೆ ಕುಳಿತಿದ್ದರು. ಅಲ್ಲಿಯೇ ಗಿಲ್ಲಿ ಕೂಡ ಇದ್ದರು. ಇಬ್ಬರ ಮಧ್ಯೆ ಮಾತಿನ ಚಕಮಕಿ ಶುರುವಾಗಿದೆ. ಇಬ್ಬರೂ ಕಿರಿಕ್ ಮಾಡಿಕೊಂಡಿದ್ದಾರೆ. ಗಿಲ್ಲಿ ಮಾತನಾಡಿದರು ಎಂದು ಅಶ್ವಿನಿ, ಅಶ್ವಿನಿ ಮಾತನಾಡಿದರು ಎಂದು ಗಿಲ್ಲಿ, ಹೀಗೆ, ಮಾತಿಗೆ ಮಾತು ಬೆಳೆದಿದೆ. ತಾಳ್ಮೆ ಕಳೆದುಕೊಂಡ ಅಶ್ವಿನಿ ಅವರು ಗಿಲ್ಲಿಗೆ ‘ಲೋಫರ್’ ಎಂದೆಲ್ಲ ಬೈದಿದ್ದಾರೆ.

ಅಶ್ವಿನಿ ವಿರುದ್ಧ ಏಕವಚನ ಪದ ಬಳಕೆ ಮಾಡಿದರು ಗಿಲ್ಲಿ. ಇದರಿಂದ ಸಿಟ್ಟಾದ ಅಶ್ವಿನಿ, ‘ಗಿಲ್ಲಿ ನಿಂಗೆ ಬೆನ್ನುಮೂಳೆ ಇಲ್ಲ. ನೀನೊಬ್ಬ ಲೋಫರ್. ಥರ್ಡ್​ ಕ್ಲಾಸ್ ನೀನು’ ಎಂದು ಕೂಗಾಡಿದ್ದಾರೆ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮತ್ತೆ ಹಳೆಯ ವರ್ಷನ್ ಮರಳಿದೆ ಎಂದು ಅನೇಕರು ಹೇಳಿದ್ದಾರೆ. ಅಶ್ವಿನಿ ಗೌಡ ಅವರು ಈ ಮೊದಲು ಬಳಕೆ ಮಾಡಿದ ಪದಗಳ ಆಡಿಯೋ ಹಾಕಲಾಗಿತ್ತು. ಅಲ್ಲಿಂದ ಅವರು ಬದಲಾಗಿದ್ದರು. ಈಗ ಮತ್ತೆ ಕೂಗಾಡಿ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಆದೇಶಕ್ಕೆ ನಲುಗಿ ಹೋದ ಗಿಲ್ಲಿ ನಟ; ಇದಕ್ಕೆ ಕಾರಣ ರಘು-ಸೂರಜ್?

‘ನಿಮ್ಮ ಜಗಳದಿಂದ ಇಡೀ ಮನೆಗೆ ಗಾರ್ಡನ್​​ಗೆ ಬರೋಕೆ ಆಗ್ತಾ ಇಲ್ಲ. ಟಾಕ್ಸಿಕ್ ಎನಿಸುತ್ತಿದೆ. ದಯವಿಟ್ಟು ನಿಲ್ಲಿಸಿ. ಈ ರೀತಿಯ ವಿಷಯಗಳನ್ನು ಮಾತನಾಡಲು ಸುದೀಪ್ ಅವರು ಬರಬೇಕಾ’ ಎಂದು ಸ್ಪಂದನಾ ಅವರು ಕೇಳಿಕೊಂಡರು. ಆದಾಗ್ಯೂ ಧ್ರುವಂತ್ ಮಾತು ನಿಲ್ಲಿಸಿಲ್ಲ. ‘ಕೇಳಿ ಕೇಳಿ ಇಸ್ಕೋತೀದಾನೆ, ನಾನೇನು ಮಾಡಲಿ’ ಎಂದು ಗಿಲ್ಲಿ ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೊಡ್ಡಬಳ್ಳಾಪುರ: ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ – Kannada News | Doddaballapur: Police Raid Farmhouse Hosting Illegal New year Party

ದೇವನಹಳ್ಳಿ, ಜನವರಿ 1: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಹಳ್ಳಿಯ ಫಾರ್ಮ್‌ಹೌಸ್ ಒಂದರಲ್ಲಿ ಅನುಮತಿ ಪಡೆಯದೆ ಅಕ್ರಮವಾಗಿ ನಡೆಯುತ್ತಿದ್ದ ಹೊಸ ವರ್ಷಾಚರಣೆಯ ಪಾರ್ಟಿ ಮೇಲೆ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿದ್ದಾರೆ. ಈ ಪಾರ್ಟಿಯಲ್ಲಿ ಸುಮಾರು 40-50 ಯುವಕರು ಭಾಗವಹಿಸಿದ್ದರು. ಅನುಮತಿ ಪಡೆಯದೆ ಜೋರಾದ ಸಂಗೀತ ಹಾಕಿ ಮೋಜು ಮಸ್ತಿ ಮಾಡಲಾಗುತ್ತಿತ್ತು. ಅತಿಯಾದ ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಪೊಲೀಸರು ಪಾರ್ಟಿಗೆ ಬ್ರೇಕ್ ಹಾಕಿ, ಸ್ಥಳದಲ್ಲಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಫಾರ್ಮ್‌ಹೌಸ್ ಮಾಲೀಕ ಮತ್ತು ಪಾರ್ಟಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಾರ್ಕ್’ ವೀಕ್ಷಿಸುವಾಗ ಕಿಚ್ಚನ ಎದುರೇ ಗಿಲ್ಲಿ ಗೆಲ್ಲಬೇಕು ಎಂದ ಫ್ಯಾನ್ಸ್; ಸುದೀಪ್ ರಿಯಾಕ್ಷನ್ ಏನು? – Kannada News | Kichcha Sudeep Ignores Gilli Must Win Chant ahead of Bigg Boss Kannada 12 Finale

ಕಿಚ್ಚ ಸುದೀಪ್ (Sudeep) ಅವರು ಕಳೆದ ಹಲವು ವರ್ಷಗಳಿಂದ ಬಿಗ್ ಬಾಸ್ ನಡೆಸಿಕೊಡುತ್ತಾ ಬರುತ್ತಿದ್ದಾರೆ. ಈಗಾಗಲೇ 11 ಸೀಸನ್ ಪೂರ್ಣಗೊಂಡಿದ್ದು, 12ನೇ ಸೀಸನ್ ನಡೆಯುತ್ತಿದೆ. ಅವರು ಒಮ್ಮೆ ವೇದಿಕೆ ಏರಿದರೆ ಮುಗಿಯಿತು, ಯಾರ ಪರವಾಗಿಯೂ ಬ್ಯಾಟ್ ಬೀಸೋದಿಲ್ಲ. ಅವರು ಎಷ್ಟೇ ಆಪ್ತರಾಗಿದ್ದರೂ ತಪ್ಪು ಮಾಡಿದಾಗ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಈಗ ಸುದೀಪ್ ಎದುರು ‘ಗಿಲ್ಲಿ ಗೆಲ್ಲಬೇಕು’ ಎನ್ನುವ ಘೋಷಣೆ ಕೂಗಲಾಗಿದೆ.

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಯಿತು. ಈ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವು ದಿನ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಅವರು ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ಅವರ ಎದುರು ‘ಗಿಲ್ಲಿ ಗೆಲ್ಲಬೇಕು’ ಎನ್ನುವ ಬೇಡಿಕೆ ಬಂದಿದೆ.

ಸುದೀಪ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಎಲ್ಲರೂ ಕಿಚ್ಚನ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಇದ್ದರು. ಅಲ್ಲೋರ್ವ ‘ಅಣ್ಣ ಗಿಲ್ಲಿ ಗೆಲ್ಲಬೇಕು’ ಎಂದು ಕೂಗಿದ್ದಾನೆ. ಇದು ಕಿಚ್ಚನಿಗೂ ಕೇಳಿಸಿದೆ. ಕೇಳಿದರೂ ಅವರು ಕೇಳಿಸಿದಂತೆ ಇದ್ದಾರೆ. ಫಿನಾಲೆಗೆ ಕೆಲವೇ ವಾರ ಬಾಕಿದೆ. ಹೀಗಿರುವಾಗ ಅವರು ಇದಕ್ಕೆ ರಿಯಾಕ್ಟ್ ಮಾಡಿದರೆ ಬೇರೆಯದೇ ಅರ್ಥ ಪಡೆದುಕೊಳ್ಳುತ್ತದೆ. ಹೀಗಾಗಿ, ಸುದೀಪ್ ಈ ವಿಷಯದಲ್ಲಿ ಮೌನ ಕಾಪಾಡಿಕೊಂಡಿದ್ದಾರೆ.

ಈ ಬಾರಿ ಬಿಗ್ ಬಾಸ್​​​ನಲ್ಲಿ ಗಿಲ್ಲಿ ಹೆಚ್ಚು ಹೈಲೈಟ್ ಆಗಿ ಕಾಣಿಸುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಸುದೀಪ್ ಅವರು ಈ ಮೊದಲು ವಿವರಿಸಿದ್ದರು. ‘ಗಿಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ, ಇಲ್ಲ ಎಂದು ಹೇಳಲ್ಲ. ಆದರೆ, ಉಳಿದ ಯಾರೊಬ್ಬರೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಒಬ್ಬರು ಹೈಲೈಟ್ ಆಗುತ್ತಿದ್ದಾರೆ’ ಎಂದಿದ್ದರು ಸುದೀಪ್.

ಇದನ್ನೂ ಓದಿ: ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ

‘ಮಾರ್ಕ್’ ಸಿನಿಮಾ ಒಂದು ವಾರಕ್ಕೆ ಒಳ್ಳೆಯ ಗಳಿಕೆ ಮಾಡಿದೆ. ಚಿತ್ರದ ಕಲೆಕ್ಷನ್ 50 ಕೋಟಿ ರೂಪಾಯಿಯತ್ತ ಸಾಗುತ್ತಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು? – Kannada News | The Spiritual Practice: Ayyappa Swamis Image in Your Home

ಬೆಂಗಳೂರು, ಜ.1: ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದೇ ಎಂಬ ಪ್ರಶ್ನೆಗೆ ಸ್ಪಷ್ಟ ಮಾಹಿತಿಯನ್ನು ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ನೀಡಿದ್ದಾರೆ. ಮಾಲಾಧಾರಿಗಳು ಮಾತ್ರವಲ್ಲದೆ, ಶ್ರದ್ಧಾ ಭಕ್ತಿ ಇರುವ ಯಾರಾದರೂ ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜಿಸಬಹುದು. ಅಯ್ಯಪ್ಪ ಸ್ವಾಮಿ ಚಿನ್ಮುದ್ರೆಯಲ್ಲಿ, 18 ಮೆಟ್ಟಿಲುಗಳೊಂದಿಗೆ ಕುಳಿತಿರುವ ಭಂಗಿಯಲ್ಲಿರುವ ಫೋಟೋ ಜನಪ್ರಿಯವಾಗಿದೆ. ಇನ್ನು ಅಯ್ಯಪ್ಪನ ಫೋಟೋವನ್ನು ಇಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಸಿಂಹದ್ವಾರದ ಮೇಲೆ ಅಥವಾ ವಾಹನಗಳಲ್ಲಿ ವರ್ಷವಿಡೀ ಇಡುವುದು ಸೂಕ್ತವಲ್ಲ. ವಾಹನದಲ್ಲಿ ಯಾತ್ರೆಯ ಸಮಯದಲ್ಲಿ ರಕ್ಷಣೆಯಾಗಿ ಇಡಬಹುದು. ಮನೆಯಲ್ಲಿ, ದೇವರ ಮನೆ ಅತ್ಯಂತ ಶುಭಕರವಾದ ಸ್ಥಳ. ಹಾಲ್‌ನಲ್ಲಿ ಇಡಲು ಬಯಸಿದರೆ, ಫೋಟೋಗೆ ತ್ರಿಕಾಲ ಆರತಿ ಮಾಡಬೇಕು. ಮಲಗುವ ಕೋಣೆ ಅಥವಾ ಅಶುದ್ಧ ಸ್ಥಳಗಳಲ್ಲಿ ಫೋಟೋ ಇಡುವುದು ಸರಿಯಲ್ಲ. ಶುದ್ಧ ಮತ್ತು ಪವಿತ್ರ ಸ್ಥಳಗಳಲ್ಲಿ ಇಟ್ಟು, ನಿತ್ಯ ಕರ್ಪೂರದ ಆರತಿ, ಪ್ರಾರ್ಥನೆ ಮತ್ತು ವಾರಕ್ಕೊಮ್ಮೆ ಬೆಲ್ಲದಿಂದ ಮಾಡಿದ ಸಿಹಿ ನೈವೇದ್ಯವನ್ನು ಅರ್ಪಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. “ಸ್ವಾಮಿಯೇ ಶರಣಂ ಅಯ್ಯಪ್ಪ” ಘೋಷವನ್ನು ಪಠಿಸುವುದು ಶ್ರೇಷ್ಠ. ಹೀಗೆ ಶ್ರದ್ಧೆಯಿಂದ ಪೂಜಿಸುವುದರಿಂದ ಸಾಡೇಸಾತಿ, ಅಷ್ಟಮ, ಪಂಚಮ ಶನಿ ಕಾಟಗಳ ತೀವ್ರತೆ ಕಡಿಮೆಯಾಗುತ್ತದೆ. ನವಗ್ರಹ ದೋಷ ನಿವಾರಣೆಯಾಗಿ, ಮಾಟ-ಮಂತ್ರದ ದೃಷ್ಟಿ ಮನೆಯನ್ನು ಪ್ರವೇಶಿಸುವುದಿಲ್ಲ. ಮನೆಯ ಕಲಹಗಳು ಇತ್ಯರ್ಥವಾಗಿ, ಮಾನಸಿಕ ತೃಪ್ತಿ ಮತ್ತು ಸಂತೃಪ್ತಿ ಪ್ರಾಪ್ತವಾಗುತ್ತದೆ. ಇವೆಲ್ಲವೂ ನಂಬಿಕೆಯ ಆಧಾರದ ಮೇಲೆ ನಿಂತಿವೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷದ ಮರುದಿನವೇ ಕೋಗಿಲು ನಿರಾಶ್ರಿತರಿಗೆ ಮನೆ ಭಾಗ್ಯ: 187 ಮನೆಗಳ ಸರ್ವೆ ಮುಕ್ತಾಯ, ಯಾರಿಗೆ ಸಿಗಲಿದೆ ಸೂರು? – Kannada News | Kogilu Displaced Families to Get Houses a Day After New Year: Survey of 187 Homes Completed

ಬಂಡೆ ಹೊಸೂರಿನ ಬೈಯಪ್ಪನಹಳ್ಳಿಯಲ್ಲಿರೋ ಅಪಾರ್ಟ್​ಮೆಂಟ್​​

ಬೆಂಗಳೂರು, ಜನವರಿ 1: ಜನವರಿ 2 ರಂದು ಕೋಗಿಲು (Kogilu Layout) ನಿರಾಶ್ರಿತರಿಗೆ ಮನೆ ಹಸ್ತಾಂತರ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಬಂಡೆ ಹೊಸೂರಿನ ಬೈಯಪ್ಪನಹಳ್ಳಿಯಲ್ಲಿರೋ ಅಪಾರ್ಟ್​ಮೆಂಟ್​​ನಲ್ಲಿ ಮನೆ ನೀಡಲು ನಿರ್ಧರಿಸಲಾಗಿದೆ. ಸುಮಾರು 1 ಸಾವಿರಕ್ಕೂ ಹೆಚ್ಚು 1 BHK ಫ್ಲ್ಯಾಟ್​ಗಳು ಈ ಅಪಾರ್ಟ್​ಮೆಂಟ್​ನಲ್ಲಿವೆ. ಸದ್ಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿವೆ.

ಆದರೆ, ಸರ್ಕಾರ ಕೋಗಿಲು ನಿವಾಸಿಗಳಿಗೆ ಸೂರು ಕಲ್ಪಿಸಿಕೊಡುತ್ತಿದ್ದು, ಮನೆ ಕಳೆದುಕೊಂಡು ದಶಕಗಳೇ ಉರುಳಿದರೂ ರಾಜ್ಯದ ಅನೇಕ ಕಡೆಯಲ್ಲಿ ಅರ್ಹ ಸಂತ್ರಸ್ತರತ್ತ ಗಮನವೇ ಕೊಟ್ಟಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡವರಿಗೆ 65 ವರ್ಷದಿಂದ ಹಕ್ಕುಪತ್ರ ನೀಡಿಲ್ಲ.

ಬೆಳಗಾವಿ ನೆರೆ ಸಂತ್ರಸ್ತರ ಗೋಳನ್ನೂ ಹೇಳುವವರಿಲ್ಲ. ಎರಡು ವರ್ಷಗಳಿಂದ 500 ಕುಟುಂಬಗಳು ಬೀದಿಗೆ ಬಿದ್ದಿದ್ದರೂ ಒಂದು ಸೂರಿನ ಗತಿ ಇಲ್ಲದ ಪರಿಸ್ಥಿತಿ ಇವರದ್ದು. ಸರ್ಕಾರ ಮಾತ್ರ ಒಂದು ಎರಡು ಕಂತಿನ ಹಣ ಕೊಟ್ಟು ಕೈತೊಳೆದುಕೊಂಡಿದೆ.

ಮಿನಿ ಬಾಂಗ್ಲಾ ಮಾಡ್ತಿದ್ದೀರಿ: ಬಿಜೆಪಿ ವಾಗ್ದಾಳಿ

ಮತ್ತೊಂದೆಡೆ, ಕೋಗಿಲು ಪ್ರಕರಣ ಸುತ್ತ ರಾಜಕೀಯ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ. ಇದೇ ವಿಚಾರ ಮುಂದಿಟ್ಟು ವಿಪಕ್ಷ ಬಿಜೆಪಿ ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದೆ. ವಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಛಲವಾದಿ ನಾರಾಯಣಸ್ವಾಮಿ, ಅಶ್ವತ್ಥ್ ನಾರಾಯಣ್ ಸೇರಿದಂತೆ ಕೇಸರಿ ನಾಯಕರು, ಅಕ್ರಮ ಮನೆಗಳ ತೆರವು ಸ್ಥಳ ಪರಿಶೀಲನೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಮಿನಿ ಬಾಂಗ್ಲಾದೇಶ ಮಾಡಲು ಹೊರಟಿದೆ ಎಂದು ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ? ಮುಸ್ಲಿಂ ದಂಪತಿ ಆಧಾರ್ ಕಾರ್ಡ್ ನೋಡಿ ಬಿಜೆಪಿ ನಾಯಕರಿಗೆ ಶಾಕ್!

ಇಲ್ಲಿ ರೋಹಿಂಗ್ಯಾಗಳು, ಬಾಂಗ್ಲಾದವರು ಇದ್ದಾರೆ. ನಾವು ಬರುವ ವಿಷಯ ತಿಳಿದು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ದೇಶದ ಭದ್ರತೆ ಕಥೆ ಏನು ಎಂದು ಛಲವಾದಿ ನಾರಾಯಣಸ್ವಾಮಿ, ಅಶ್ವತ್ಥ್ ನಾರಾಯಣ್ ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಸಚಿವ ಸತೀಶ್ ಜಾರಕಿಹೊಳಿ ಕೂಡ ಪಶ್ಚಿಮ ಬಂಗಾಳ, ಬಾಂಗ್ಲಾದವರ ಪತ್ತೆ ಆಗಬೇಕು ಎಂದಿದ್ದಾರೆ.

ಸತ್ಯಶೋಧನೆಗೆ ಸಮಿತಿ ರಚಿಸಿದ ಬಿಜೆಪಿ

ಕೋಗಿಲು ಲೇಔಟ್​​ನಲ್ಲಿ ಬಿಜೆಪಿ ಸತ್ಯ ಶೋಧನೆಗೆ ಮುಂದಾಗಿದೆ. ಯಲಹಂಕ ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಶಾಸಕ ಮುನಿರಾಜು, ಪರಿಷತ್ ಸದಸ್ಯ ನವೀನ್ ಸೇರಿ 7 ನಾಯಕರನ್ನು ಒಳಗೊಂಡ ಸತ್ಯಶೋಧನಾ ಸಮಿತಿ ರಚನೆ ಮಾಡಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ, ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಕುರ್ಚಿ ವ್ಯಾಮೋಹಕ್ಕೆ ರಾಜ್ಯದ ಜನರ ಹಿತಾಸಕ್ತಿ ಬಲಿ ಕೊಟ್ಟಿದ್ದಾರೆ ಎಂದು ಬಿಜೆಪಿ ಸಾಮಾಜಿಕ ತಾಲತಾಣದಲ್ಲಿ ಕುಟುಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 1 January: ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ – Kannada News | Dr. Basavaraj Gurujis Astrological Insights: Daily Horoscope for All 12 Zodiac Signs

ಬೆಂಗಳೂರು, ಜ.1: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಹೊಸ ವರ್ಷದ ಮೊದಲ ದಿನವಾದ ಜನವರಿ 1ರ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಈ ವಿಶೇಷ ದಿನದಂದು ರವಿ ಧನು ರಾಶಿಯಲ್ಲಿ ಹಾಗೂ ಚಂದ್ರ ವೃಷಭ ರಾಶಿಯಲ್ಲಿ ರೋಹಿಣಿ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ. ಇದು ಅನೇಕ ರಾಶಿಗಳ ಮೇಲೆ ಶುಭ ಪರಿಣಾಮ ಬೀರುತ್ತದೆಯೆಂದು ಗುರೂಜಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು, ವ್ಯಾಪಾರಸ್ಥರು, ರೈತರು, ಸರ್ಕಾರಿ ನೌಕರರು ಸೇರಿದಂತೆ ಎಲ್ಲ ವರ್ಗದವರಿಗೂ ಈ ದಿನದ ಗ್ರಹಗತಿಗಳ ಪ್ರಭಾವವನ್ನು ವಿವರಿಸಲಾಗಿದೆ. ಕೆಲವರಿಗೆ ಆರ್ಥಿಕ ಲಾಭ, ವೃತ್ತಿಯಲ್ಲಿ ಪ್ರಗತಿ ಮತ್ತು ಮಕ್ಕಳಿಂದ ಶುಭ ಸಮಾಚಾರ ಲಭಿಸಿದರೆ, ಇನ್ನು ಕೆಲವರಿಗೆ ಆರೋಗ್ಯದ ಕಡೆ ಗಮನಹರಿಸಲು ಮತ್ತು ಸಂಬಂಧಗಳಲ್ಲಿ ಎಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳನ್ನು ಸೂಚಿಸಲಾಗಿದೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ – Kannada News | Bengaluru and Karnataka Weather Forecast: Dry, Foggy Conditions and Cold Nights

ಬೆಂಗಳೂರು, ಜ.1: ಹೊಸ ವರ್ಷಕ್ಕೆ ವಾತಾವರಣದಲ್ಲೂ (Karnataka Weather Forecast) ಕೂಡ ಬದಲಾವಣೆಗಳು ಆಗಿವೆ. ರಾಜ್ಯದ ಹಲವು ಭಾಗದಲ್ಲಿ ವಾತಾವರಣ ಬದಲಾಗಿದೆ. ಇಂದು ರಾಜ್ಯದ (ಜನವರಿ 1), ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮಂಜು ಕವಿದ ವಾತಾವರಣ ಇದೆ. ಬೆಂಗಳೂರು ಮತ್ತು ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ, ಕನಿಷ್ಠ ತಾಪಮಾನ 13°C ಮತ್ತು 19°C ನಡುವೆ ಇರುತ್ತದೆ. ಗರಿಷ್ಠ ತಾಪಮಾನ ಸುಮಾರು 27°C-28°C ಇರಲಿದೆ. ಬೀದರ್ , ವಿಜಯಪುರ ಮತ್ತು ಕಲಬುರಗಿ ಸೇರಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಶೀತ ಅಲೆಯ ಪರಿಸ್ಥಿತಿ ಇರಲಿದ್ದು, ಈಗಾಗಲೇ ಎಲ್ಲೋ ಅಲರ್ಟ್​ ನೀಡಲಾಗಿದೆ. ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಗಮನಾರ್ಹವಾಗಿ ಕಡಿಮೆಯಾಗಿದೆ. ಬೀದರ್ 6.4°C, ವಿಜಯಪುರ 9.9°C, ಬೆಳಗಾವಿ 8.7°Cರಷ್ಟು ತಾಪಮಾನ ಇದೆ.

ಕರಾವಳಿ ಕರ್ನಾಟಕದಲ್ಲಿ ಬೆಚ್ಚಗಿನ ಮತ್ತು ಇಬ್ಬಣಿಯಿಂದ ಕೂಡಿದ್ದು, ಕನಿಷ್ಠ ತಾಪಮಾನವು 19°C-20°C ಇರುತ್ತದೆ. ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಬೆಳಿಗ್ಗೆ ತಂಪಾದ ವಾತಾವರಣ ಇರಲಿದೆ. ಮಂಗಳೂರು ಭಾಗದಲ್ಲಿ ಗರಿಷ್ಠ ತಾಪಮಾನ ಸುಮಾರು 28°C-30°C , ಕನಿಷ್ಠ ತಾಪಮಾನ ಸುಮಾರು 20°C-21°C ಇರಲಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ, ಒಣ ಹವಾಮಾನವಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆಯಾಗುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಿದೆ.

ಬೆಳಗಾವಿ (8.7°C), ಬಾಗಲಕೋಟೆ (9.9°C), ರಾಯಚೂರು (10.4°C), ಧಾರವಾಡ ಮತ್ತು ಗದಗ (ತಲಾ 10.7°C) ತೀವ್ರ ಚಳಿಗಾಲದ ಚಳಿಯನ್ನು ಅನುಭವಿಸಿವೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ, ಚಿಕ್ಕಮಗಳೂರು (11.1°C), ಹಾಸನ (13.1°C), ತುಮಕೂರು (13.1°C), ಕೋಲಾರ (13.3°C) ಮತ್ತು ಚಿತ್ರದುರ್ಗ (13°C) ಶೀತದ ವಾತಾವರಣವನ್ನು ಹೊಂದಿದೆ. ಇನ್ನು ಬೆಂಗಳೂರಿನ ಐಎಂಡಿ ಪ್ರಕಾರ, ಬೆಂಗಳೂರಿನಲ್ಲಿ ತಕ್ಷಣಕ್ಕೆ ಮಳೆಯಾಗುವ ಮುನ್ಸೂಚನೆ ಇಲ್ಲ, ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ. ಮೋಡ ಕವಿದ ವಾತಾವರಣ ಕೂಡ ಹೆಚ್ಚಾಗಲಿದೆ. ರಾತ್ರಿ ಹೊತ್ತು ಕೂಡ ತಂಪಾದ ಗಾಳಿ ಇರಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​​

ಮುಂದಿನ ಕೆಲವು ದಿನಗಳಲ್ಲಿ ಬೆಂಗಳೂರಿನಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನದ ವೇಳೆ ತಂಪಾದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನಗರದಲ್ಲಿ ಹಗಲಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವಿದ್ದರೂ, ರಾತ್ರಿ ಮತ್ತು ಮುಂಜಾನೆಯ ವೇಳೆ ಚಳಿಯ ವಾತಾವರಣ ಇರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನ್ಯೂ ಇಯರ್​​​ ಸಂಭ್ರಮ ಮಧ್ಯೆ ಕಿರಿಕ್: ಗೆಳೆಯನಿಗೆ ಹೊಡೆದ ಯುವತಿ, ನಡುರೋಡಲ್ಲೇ ಜೋಡಿ ಹೈಡ್ರಾಮಾ, ಲಾಠಿ ಚಾರ್ಜ್ – Kannada News | Bengaluru New Year 2026: Grand Celebrations Marked by Midnight Chaos

ಬೆಂಗಳೂರು, ಜನವರಿ 01: 2025ಕ್ಕೆ ಗುಡ್ ಬೈ ಹೇಳಿ ಹೊಸ ವರ್ಷ 2026ನ್ನು (New Year) ಎಲ್ಲರೂ ವೆಲ್​ಕಂ ಮಾಡಿದರು. ರಾಜ್ಯದ ಜನರು ಹೊಸ ವರ್ಷವನ್ನು ಸಂಭ್ರಮ ಸಡಗರದಿಂದ ಬರಮಾಡಿಕೊಂಡಿದ್ದಾರೆ. ಬೆಂಗಳೂರಿನ (bangaluru) ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಚರ್ಚ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ಹಲವೆಡೆ ಸೆಲೆಬ್ರೇಷನ್ ಜೋರಾಗಿತ್ತು. ಕಿಕ್ಕೇರಿಸಿಕೊಂಡು ಎಲ್ಲರೂ ಕುಣಿದು ಕುಪ್ಪಳಿಸಿದ್ದು, ಹೊಸ ವರ್ಷವನ್ನ ಮಸ್ತ್ ಎಂಜಾಯ್ ಮಾಡಿದರು. ಸಂಭ್ರಮಾಚರಣೆ ನಡುವೆಯೇ ಕೆಲ ಕಿರಿಕ್​ ಕೂಡ ನಡೆದಿದ್ದು, ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಂತೆ ಮನೆ ದಾರಿ ಹಿಡಿದರು.

ಕುಡಿದ ಮತ್ತಿನಲ್ಲಿ ಗೆಳೆಯನಿಗೆ ಹಲ್ಲೆ ಮಾಡಿದ ಗೆಳತಿ

ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಓಪೇರಾ ರಸ್ತೆಯಲ್ಲಿ ಸೆಲೆಬ್ರೇಷನ್ ಜೋರಾಗಿತ್ತು. ಈ ವೇಳೆ ಸಂಭ್ರಮಾಚರಣೆ ನಡುವೆಯೇ ಹಲವು ಕಿರಿಕ್ ನಡೆದಿವೆ. ಒಪೇರಾ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಗೆಳೆಯನ ಮೇಲೆ ಯುವತಿ ಹಲ್ಲೆ ಮಾಡಿದ್ದಾಳೆ. ನ್ಯೂಇಯರ್ ಆಚರಣೆಗೆ ಆಗಮಿಸಿದ್ದ ಜೋಡಿ ನಡುರೋಡಲ್ಲೇ ಹೈಡ್ರಾಮಾ ಕ್ರಿಯೇಟ್ ಮಾಡಿದೆ. ನಶೆಯಲ್ಲಿದ್ದ ಜೋಡಿಯನ್ನು ಸಮಾಧಾನಪಡಿಸಲು ಪೊಲೀಸು ಹರಸಹಾಸ ಪಡುವಂತಾಯ್ತು. ಕುಡಿದು ಟೈಟಾದ ಪ್ರೇಯಸಿಯನ್ನ ಮಗುವಿನ‌ ರೀತಿ ಪ್ರಿಯಕರ ಹೊತ್ತೊಯ್ದಿದ್ದಾನೆ.

ಇದನ್ನೂ ಓದಿ: ನ್ಯೂ ಇಯರ್​ ಕಿಕ್​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​ ​

ಕೋರಮಂಗಲದ ಟೋಕಾ ಪಬ್​ನಲ್ಲಿ ಯುವಕರಿಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಓರ್ವ ಯುವಕನ ತಲೆಗೆ ಗಾಯವಾಗಿದೆ. ಗಾಯಗೊಂಡ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಆ್ಯಂಬುಲೆನ್ಸ್ ಹತ್ತಲು ಹಿಂದೇಟು ಹಾಕಿದ ಯುವಕನಿಗೆ ಪೊಲೀಸರು ಕಪಾಳಮೋಕ್ಷ ಮಾಡಿದ್ದಾರೆ.

ಬ್ರಿಗೇಡ್ ರಸ್ತೆಯಲ್ಲಿ ನಡು ರಸ್ತೆಯಲ್ಲಿ ಪಟಾಕಿ ಸಿಡಿಸಿದ್ದಕ್ಕೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ನ್ಯೂ ಇಯರ್ ಖುಷಿಯಲ್ಲಿ ಯುವಕರು ನಡುರೋಡಲ್ಲೇ ಪಟಾಕಿ ಸಿಡಿಸಿದ್ದರು. ರಸ್ತೆಯಲ್ಲೇ ಪಟಾಕಿ ಹಚ್ಚಿದಕ್ಕೆ ಕುಡಿದು ಮತ್ತಿನಲ್ಲಿದ್ದ ಯುವಕರ ಗುಂಪಿಗೆ ಪೊಲೀಸರು ಲಾಠಿ ಬೀಸಿ ಕಿಕ್ ಇಳಿಸಿದರು. ಯುವಕರ ಗುಂಪು ಎದ್ನೋ ಬಿದ್ನೋ ಅಂತಾ ಓಡಿ ಹೋದರು.

ಇದನ್ನೂ ಓದಿ: New Year 2026: ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಯುವಸಮೂಹ

ಇನ್ನು ಖುದ್ದು ಜನರನ್ನ ಕಂಟ್ರೋಲ್ ಮಾಡಲು ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಫೀಲ್ಡಿಗಿಳಿದರು. ಯಾವುದೇ ತೊಂದರೆ ಇಲ್ಲದೆ ಸೇಫ್ಟಿ ನೀಡಿದ ಕಮಿಷನರ್​ಗೆ ಕೆಲ ಜನರು ಹೂವಿನ ಗುಚ್ಚ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನ್ಯೂ ಇಯರ್​ ಕಿಕ್​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​ ​ – Kannada News | New Year 2026 Eve: Drunk Young Woman Safely Sent Home by Police in an Autorickshaw

ಬೆಂಗಳೂರು, ಜನವರಿ 01: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಸಡಗರದಿಂದ ಕೂಡಿತ್ತು. ಜನರು ಪಾರ್ಟಿ, ಕುಣಿತ ಮತ್ತು ಮೋಜಿನಲ್ಲಿ ಪಾಲ್ಗೊಂಡು 2026 ಅನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಸಂಭ್ರಮಿಸುವುದು ಸಹಜವಾದರೂ, ಪಾರ್ಟಿಯ ನಂತರ ಪ್ರತಿಯೊಬ್ಬರೂ ಸುರಕ್ಷಿತವಾಗಿ ಮನೆ ತಲುಪುವುದು ಅತ್ಯಂತ ಮುಖ್ಯ. ಈ ವರ್ಷ ಬೆಂಗಳೂರು ಪೊಲೀಸರು ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹೊಸ ವರ್ಷದ ಪಾರ್ಟಿ ಮುಗಿದ ನಂತರ ಮನೆಗೆ ತೆರಳಲು ಕಷ್ಟಪಡುತ್ತಿದ್ದ ಮಹಿಳೆಯರಿಗಾಗಿ ಬೆಂಗಳೂರು ಪೊಲೀಸರು ಆಟೋ ವ್ಯವಸ್ಥೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು

ಬೆಳಗಾವಿ, ಜನವರಿ 01: 2026ರ ಹೊಸ ಪರ್ವ ಶುರುವಾಗಿದೆ. ರಾಜ್ಯದ ಉದ್ದಗಲಕ್ಕೂ ಜನರು ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಇತ್ತ ಬೆಳಗಾವಿಯಲ್ಲಿ ಹೊಸ ವರ್ಷವನ್ನು ಜನರು ಅದ್ದೂರಿಯಾಗಿ ಸ್ವಾಗತ ಮಾಡಿದರು. ಪಾರ್ಟಿ, ಡ್ಯಾನ್ಸ್​​ನಲ್ಲಿ ಫುಲ್ ಎಂಜಾಯ್​ ಮಾಡಿದರು. ಅದರಲ್ಲೂ ಯುವಜನತೆ ಕುಣಿದು ಕುಪ್ಪಲಿಸಿದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Source link