Category Archives: Blog

Your blog category

Video: ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ – Kannada News | New Year Festivities Ignite Bengaluru: Crowds Gather at MG Road and Brigade Road

ಬೆಂಗಳೂರು, ಡಿ.31: ನಗರವು ನವ ವರ್ಷದ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಯಂತಹ ಪ್ರಮುಖ ಸ್ಥಳಗಳಲ್ಲಿ ಲಕ್ಷಾಂತರ ಜನರು ಜಮಾಯಿಸುವ ನಿರೀಕ್ಷೆಯಿದೆ. ಈಗಾಗಲೇ ಹೊಸ ವರ್ಷದ ಕೌಂಟ್ ಡೌನ್‌ಗೆ ಕ್ಷಣಗಣನೆ ಆರಂಭವಾಗಿದ್ದು, ನಗರದಲ್ಲಿ ಜನಸಂದಣಿ ಹೆಚ್ಚುತ್ತಿದೆ. ಈ ಪ್ರದೇಶಗಳಲ್ಲಿನ ವಾತಾವರಣ ಸಂಪೂರ್ಣವಾಗಿ ಹಬ್ಬದ ಸಡಗರದಿಂದ ಕೂಡಿದೆ, ಎಲ್ಲೆಡೆ ಉತ್ಸಾಹ ಮತ್ತು ಸಡಗರ ಮನೆಮಾಡಿದೆ. ಜನರಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ಉತ್ಸಾಹ “ಫುಲ್ ಜೋಶ್” ನಲ್ಲಿದೆ. ಪೊಲೀಸ್ ಇಲಾಖೆಯು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಂದೋಬಸ್ತ್ ಮಾಡಿದ್ದಾರೆ. ಸಾರ್ವಜನಿಕರು ಸುರಕ್ಷಿತವಾಗಿ ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರನ್ನು ಉದ್ದೇಶಿಸಿ, “ಬರ್ರಿ, ಬರ್ರಿ ಮುಂದೆ. ಎಲ್ಲರೂ ಬರ್ತೀರಿ, ಟೆನ್ಶನ್ ತಗೋಬೇಡ್ರಿ. Happy New Year” ಎಂಬಂತಹ ಸ್ವಾಗತದ ಮಾತುಗಳು ಕೇಳಿಬರುತ್ತಿವೆ, ಇದು ಜನರನ್ನು ಇನ್ನಷ್ಟು ಹುರಿದುಂಬಿಸುತ್ತಿದೆ. ಒಟ್ಟಾರೆ, ಬೆಂಗಳೂರು ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಸನ್ನದ್ಧವಾಗಿದ್ದು, ಎಲ್ಲರೂ ಹೊಸ ಚೈತನ್ಯದೊಂದಿಗೆ ಹೊಸ ವರ್ಷಕ್ಕೆ ಕಾಲಿಡಲು ಕಾತರರಾಗಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್? ಎನ್​ಐಎ ತನಿಖೆಗೆ ಆಗ್ರಹಿಸಿದ ಅಶೋಕ್ – Kannada News | Kogilu Displaced Persons Case: Is There a Pakistan Link? BJP Leader Ashok Demands NIA Probe

ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅನಧಿಕೃತ ಶೆಡ್, ಮನೆಗಳಲ್ಲಿದ್ದವರ ಪೌರತ್ವ ಮತ್ತು ಮೂಲದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್ಐಎ) ತನಿಖೆ ನಡೆಸಬೇಕೆಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಕೋಗಿಲು ಬಡಾವಣೆಗೆ ಬುಧವಾರ ಭೇಟಿ ನೀಡಿ ಮಾತನಾಡಿದ ಅಶೋಕ್, ಇಲ್ಲಿ ಮನೆಗಳ ತೆರವು ಮಾಡಿದ ಕೂಡಲೇ ಪಾಕಿಸ್ತಾನದ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟು ಬೇಗ ಅಲ್ಲಿಗೆ ಹೇಗೆ ಮಾಹಿತಿ ಹೋಯಿತು? ಇಲ್ಲಿದ್ದ ಸ್ಲೀಪರ್​ ಸೆಲ್​​ನಿಂದ ಹೋಗಿರಬಹುದಲ್ಲವೇ? ಈ ಅನುಮಾನದ ಬಗ್ಗೆ ಎನ್​ಐಎ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳು ಕೇರಳದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವೇದಿಕೆ ಹಂಚಿಕೊಂಡಿರುವುದನ್ನು ಅಶೋಕ್ ಖಂಡಿಸಿದ್ದಾರೆ. ಕೇರಳ ಸರ್ಕಾರ ಕರ್ನಾಟಕವನ್ನು ಬುಲ್ಡೋಜರ್ ರಾಜ್ಯ ಎಂದು ಕರೆದಿದ್ದರೂ, ಸಿಎಂ ವೇದಿಕೆ ಹಂಚಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದ್ದಾರೆ. ಅತಿಕ್ರಮಣ ತೆರವುಗೊಳಿಸಿದ ಕನ್ನಡಿಗರಿಗೆ ಪರಿಹಾರ ನೀಡುವ ಬದಲು, ಸರ್ಕಾರವು ಬಾಂಗ್ಲಾದೇಶ ಮೂಲದವರು ಎಂದು ಆರೋಪಿಸಲಾದವರಿಗೆ ಆಶ್ರಯ ನೀಡಲು ಯತ್ನಿಸುತ್ತಿದೆ ಎಂದು ಆಪಾದಿಸಿದ್ದಾರೆ. ನಿಜವಾದ ಕನ್ನಡಿಗರು, ಮಳೆಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರ ಇನ್ನೂ ನೆರವು ನೀಡಿಲ್ಲ. ಅಕ್ರಮ ಬಾಂಗ್ಲಾ ವಲಸಿಗರಿಗೆ ನೀಡಲು ಮುಂದಾಗಿದೆ ಎಂದು ಅಶೋಕ್ ಕಿಡಿ ಕಾರಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನ್ಯೂಇಯರ್​ ಪಾರ್ಟಿಗೆ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದ ವೇಳೆ ಪೊಲೀಸ್​​​​ ಕೈಗೆ ಸಿಕ್ಕಿಬಿದ್ದ ನೈಜಿರಿಯಾ ಮೂಲದ ವ್ಯಕ್ತಿ – Kannada News | Devanahalli Drug Seizure: Nigerian National Caught Supplying for NYE Parties

ಬೆಂಗಳೂರು, ಡಿ.31: ಒಂದು ಕಡೆಯಲ್ಲಿ ಬೆಂಗಳೂರಿನಲ್ಲಿ (Bengaluru drug) ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ ಹಾಗೂ ಇಂದಿರಾನಗರ ಇನ್ನು ಅನೇಕ ಕಡೆ ಈಗಾಗಲೇ ಜನ ಸೇರಿದ್ದಾರೆ. ಪಬ್​​​ಗಳಲ್ಲಿ ಪಾರ್ಟಿ ಶುರುವಾಗಿದೆ. ಜತೆಗೆ ಪೊಲೀಸ್​​​​ ಕಣ್ಗಾವಲು ಇದೆ. ಬಿಗಿ ಭದ್ರತೆ ಇದೆ. ಇದರ ನಡುವೆ ನ್ಯೂಇಯರ್​ ಪಾರ್ಟಿಗೆ ಡ್ರಗ್ಸ್​ ಸಪ್ಲೈ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ನೈಜಿರಿಯಾ ಮೂಲದ ವ್ಯಕ್ತಿ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದ ಎಂದು ಹೇಳಲಾಗಿದೆ. ದೇವನಹಳ್ಳಿ ಠಾಣೆ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ನಡೆಸಿದ ವೇಳೆ ಈತ ಸಿಕ್ಕಿಬಿದ್ದಿದ್ದಾನೆ. ಏರ್​​ಪೋರ್ಟ್​ ಬ್ಯಾಕ್​ ಗೇಟ್​ ಬಳಿ ಮಾರುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಇದೀಗ ಈ ನೈಜಿರಿಯಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದ್ದು, 21 ಗ್ರಾಂ ಕೊಕೇನ್ ಹಾಗೂ 30 ಗ್ರಾಂ MDMA ಸೀಜ್​ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷ ಹಿನ್ನೆಲೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ಹಿಂದೆ ಕೂಡ ಈ ವ್ಯಕ್ತಿ ಡ್ರಗ್ಸ್​​​​​ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ಇತರ ಪ್ರದೇಶದಲ್ಲೂ ಕೂಡ ಪೊಲೀಸರ ವಿಶೇಷ ತಂಡ ಕಾರ್ಯಚರಣೆ ನಡೆಸಿದ್ದಾರೆ.

ಡ್ರಗ್ ಫ್ಯಾಕ್ಟರಿ ಪತ್ತೆ ಮಾಡಿದ ಮಹಾ ಪೊಲೀಸ್:

ಈ ಹಿಂದೆ ಮಹಾರಾಷ್ಟ್ರ ಪೊಲೀಸರು ಬಂದು ಬೆಂಗಳೂರಿನಲ್ಲಿದ್ದ ಡ್ರಗ್ಸ್ ಫ್ಯಾಕ್ಟರಿಯನ್ನು ಪತ್ತೆ ಮಾಡಿದ್ದರು. ಫ್ಯಾಕ್ಟರಿ ತಯಾರಿಸಲು ದಂಧೆಕೋರರು ಆಲ್ ಇಂಡಿಯಾ ಪ್ಲಾನ್ ಮಾಡುತ್ತಿದ್ದರು ಎಂದು ತಿಳಿದು ಬಂದಿತು. ಕೇವಲ 8 ಕಿ.ಮೀ ವ್ಯಾಪ್ತಿಯಲ್ಲಿ ದಂಧೆ ನಡೆಸಲು ಪಕ್ಕಾ ಸೆಟಪ್ ಮಾಡಿದ್ದರು. ಇದರ ಮಧ್ಯೆ ಡ್ರಗ್ಸ್ ದಂಧೆಯನ್ನು ಭೇದಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆ ಮೂವರು ಇನ್ಸ್​​ಪೆಕ್ಟರ್​​ಗಳನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಜಾಲಕ್ಕೆ NCB ಶಾಕ್​​: 8 ಕೋಟಿ ಮೌಲ್ಯದ ಡ್ರಗ್ಸ್​​ ಸೀಜ್​

ಅಂತಾರಾಷ್ಟ್ರೀಯ ಮಾದಕವಸ್ತು ಜಾಲವನ್ನು ಭೇದಿಸಿದ ಎನ್‌ಸಿಬಿ:

ಅಂತಾರಾಷ್ಟ್ರೀಯ ಮಾದಕವಸ್ತು ಜಾಲವನ್ನು ಎನ್‌ಸಿಬಿ ಭೇದಿಸಿದೆ. ಬೆಂಗಳೂರು ಮೂಲಕ ಕಾರ್ಯನಿರ್ವಹಿಸುತ್ತಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ಜಾಲಗಳು ಕಂಡು ಬಂದಿದೆ. ಸುಮಾರು 160 ಕಿಲೋಗ್ರಾಂ ತೂಕದ ಖಾಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಮೌಲ್ಯವು ಸುಮಾರು 8 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 2018ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಖಾಟ್ ಅನ್ನು ಮಾದಕ ವಸ್ತು ಪಟ್ಟಿಗೆ ಸೇರಿಸಿಸಲಾಗಿತ್ತು. ಆ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಖಾಟ್​​ ಎಲೆಗಳನ್ನು ವಶಪಡಿಸಿಕೊಂಡಿರೋದು ರಾಜ್ಯದಲ್ಲಿ ಇದೇ ಮೊದಲು ಎಂದು ಎನ್​​ಸಿಬಿ ತಿಳಿಸಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:08 pm, Wed, 31 December 25

Source link

ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ; ರಷ್ಯಾದಿಂದ ಮೊದಲ ವಿಡಿಯೋ ಬಿಡುಗಡೆ – Kannada News | Russia releases Ukraine drone footage which targeted Putin’s residence

ಮಾಸ್ಕೋ, ಡಿಸೆಂಬರ್ 31: ಉಕ್ರೇನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿವಾಸವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ (Russia) ಹೇಳಿಕೊಂಡಿದೆ. ಆದರೆ, ಉಕ್ರೇನ್ ಈ ಆರೋಪವನ್ನು ನಿರಾಕರಿಸಿದೆ. ಇದರ ನಡುವೆ ರಷ್ಯಾ ತಾನು ಪತನಗೊಳಿಸಿದ ಉಕ್ರೇನ್​ನ ಡ್ರೋನ್​ಗಳ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದೆ. ನವ್ಗೊರೊಡ್ ಪ್ರದೇಶದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಂಬಂಧಿಸಿದ ನಿವಾಸವನ್ನು ಹೊಡೆಯಲು ಉಕ್ರೇನ್ ಪ್ರಯತ್ನ ಮಾಡಿತ್ತು ಎಂದು ಆರೋಪಿಸಿರುವ ರಷ್ಯಾ ತಾನು ಹೊಡೆದುರುಳಿಸಿದ ಡ್ರೋನ್‌ನ ರಾತ್ರಿಯ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ಹಿಮದಿಂದ ಆವೃತವಾದ ಕಾಡಿನಲ್ಲಿ ಬಿದ್ದಿರುವ, ಹಾನಿಗೊಳಗಾದ ಉಕ್ರೇನ್​ನ ಮಾನವರಹಿತ ವೈಮಾನಿಕ ವಾಹನವಿದು ಎಂದು ಮಾಸ್ಕೋ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹೊಸ ವರ್ಷಕ್ಕೆ ಹೊಸ ಚಾಲೆಂಜ್; 10 ದಿನ ಸಕ್ಕರೆ ತಿನ್ನದಿದ್ದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ ನೋಡಿ – Kannada News | Sugar Detox: 10 Days to a Healthier You

ಇತ್ತೀಚಿಗೆ ಶುಗರ್ (Sugar) ಫ್ರೀ ಚಾಲೆಂಜ್ ನಡೆಯುತ್ತಿದ್ದು ಇದು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು, ತೂಕ ಇಳಿಸಿಕೊಳ್ಳಲು, ದೇಹದಲ್ಲಿರುವ ಶಕ್ತಿಯನ್ನು ಹೆಚ್ಚಿಸಲು ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆದರೆ ಸಿಹಿ ತಿನ್ನುವ ಬಯಕೆ ಅಥವಾ ಹಂಬಲವನ್ನು ನಿಯಂತ್ರಿಸುವುದು ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರುವುದು ಅಷ್ಟು ಸುಲಭವಲ್ಲ, ಅದೊಂದು ಸವಾಲಾಗಿರುತ್ತದೆ. ಆದರೆ ಸಿಹಿ ತಿಂಡಿ ಸೇವನೆ ಮಾಡುವುದನ್ನು ಕಡಿಮೆ ಮಾಡುವ ಮೂಲಕ ಅಥವಾ ತ್ಯಜಿಸುವ ಮೂಲಕ ಒಬ್ಬ ವ್ಯಕ್ತಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಸಕ್ಕರೆಯ ಸೇವನೆ ಅಥವಾ ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿದ ನಂತರ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ, ಈ ಬಗ್ಗೆ ತಜ್ಞರ ಅಭಿಪ್ರಾಯವೇನು ತಿಳಿದುಕೊಳ್ಳಿ.

ಸಾಮಾನ್ಯವಾಗಿ ಹಣ್ಣು, ತರಕಾರಿ ಮತ್ತು ಡೈರಿ ಉತ್ಪನ್ನಗಳಂತಹ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಎಲ್ಲಾ ಆಹಾರಗಳಲ್ಲಿ ಸಕ್ಕರೆ ನೈಸರ್ಗಿಕವಾಗಿ ಕಂಡುಬರುತ್ತದೆ. ಈ ರೀತಿ ನೈಸರ್ಗಿಕವಾಗಿ ಕಂಡುಬರುವ ಸಿಹಿಅಂಶವಿರುವ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಲ್ಲ. ಆದರೆ ನಾವು ಸೇವಿಸುವ ಆಹಾರಗಳಿಗೆ ಹೆಚ್ಚಿನ ಸಕ್ಕರೆ ಸೇರಿಸುವುದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಸಕ್ಕರೆ ಅಥವಾ ಸಿಹಿ ಸೇವನೆ ಮಾಡುವುದನ್ನು ಕಡಿಮೆ ಮಾಡುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆರಂಭದಲ್ಲಿ, ಒಮ್ಮೆಲೇ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದಾಗ ಕೆಲವರಲ್ಲಿ ತಲೆನೋವು, ಆಯಾಸ ಅಥವಾ ಮಾನಸಿಕ ಬದಲಾವಣೆ ಅನುಭವಕ್ಕೆ ಬರುತ್ತದೆ, ಆದರೆ ಅಂತಿಮವಾಗಿ ಅಂದರೆ ದೀರ್ಘಾವಧಿಯಲ್ಲಿ ಉತ್ತಮ ಫಲಿತಾಂಶ ನೀಡುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ: ಚಳಿಗೆ ಬಿಸಿಬಿಸಿಯಾಗಿ ತಿನ್ನಬೇಕು ಅಂತಾ ಅನಿಸುತ್ತಾ? ಅಪ್ಪಿತಪ್ಪಿಯೂ ಸಂಜೆ 6 ಗಂಟೆಯ ನಂತರ ಈ ಆಹಾರಗಳನ್ನು ತಿನ್ನಬೇಡಿ

ಸಕ್ಕರೆ ಸೇವನೆ ಮಾಡದಿದ್ದರೆ ಏನಾಗುತ್ತದೆ?

10 ದಿನ ಸಕ್ಕರೆ ಸೇವನೆ ಮಾಡುವುದನ್ನು ನಿಲ್ಲಿಸಿದರೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟದಲ್ಲಿ ಬದಲಾವಣೆಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವು ಆರು ದಿನಗಳಲ್ಲಿ ಸುಧಾರಿಸಬಹುದು, ಮಾನಸಿಕ ಸ್ಥಿತಿ ಒಂದು ವಾರದೊಳಗೆ ಬದಲಾಗಬಹುದು ಮತ್ತು ಚರ್ಮವು ಹತ್ತು ದಿನಗಳಲ್ಲಿ ಕಾಂತಿಯುತವಾಗಿ ಕಾಣಬಹುದು ಎಂದು ಸಂಶೋಧನೆ ಹೇಳುತ್ತದೆ. ದೇಹದ ತೂಕದಲ್ಲಿನ ಬದಲಾವಣೆಗಳನ್ನು ಗಮನಿಸಲು ಕನಿಷ್ಠ ಒಂದು ತಿಂಗಳ ಕಾಲ ಸಕ್ಕರೆಯಿಂದ ದೂರವಿರುವುದರ ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸಬೇಕಾಗುತ್ತದೆ. ವಯಸ್ಕರು ದಿನಕ್ಕೆ 30 ಗ್ರಾಂ ಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು ಮತ್ತು ಎರಡರಿಂದ ಮೂರು ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 14 ಗ್ರಾಂ ಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂತಾರಾಷ್ಟ್ರೀಯ ಜಾಲಕ್ಕೆ NCB ಶಾಕ್​​: 8 ಕೋಟಿ ಮೌಲ್ಯದ ಡ್ರಗ್ಸ್​​ ಸೀಜ್​ – Kannada News | Massive Drug Bust in Bengaluru: NCB Seizes 160kg Khat leaves, 8 Crore Value

ಜಪ್ತಿ ಮಾಡಲಾದ ಖಾಟ್​​ ಎಲೆಗಳು (ಸಾಂದರ್ಭಿಕ ಚಿತ್ರ)

ಬೆಂಗಳೂರು, ಡಿಸೆಂಬರ್​ 31: ಬೆಂಗಳೂರು ಮೂಲಕ ಕಾರ್ಯನಿರ್ವಹಿಸುತ್ತಿದ್ದ ಖಾಟ್ ಎಲೆಗಳ ಅಕ್ರಮ ಸಾಗಣೆ ಅಂತಾರಾಷ್ಟ್ರೀಯ ಜಾಲವನ್ನು ಭೇದಿಸಿರೋದಾಗಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ತಿಳಿಸಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು 160 ಕಿಲೋಗ್ರಾಂ ತೂಕದ ಖಾಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಮೌಲ್ಯವು ಸುಮಾರು 8 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 2018ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಖಾಟ್ ಅನ್ನು ಮಾದಕ ವಸ್ತು ಪಟ್ಟಿಗೆ ಸೇರಿಸಿಸಲಾಗಿತ್ತು. ಆ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಖಾಟ್​​ ಎಲೆಗಳನ್ನು ವಶಪಡಿಸಿಕೊಂಡಿರೋದು ರಾಜ್ಯದಲ್ಲಿ ಇದೇ ಮೊದಲು ಎಂದು ಎನ್​​ಸಿಬಿ ತಿಳಿಸಿದೆ.

ಈ ಅಕ್ರಮ ವಸ್ತುಗಳನ್ನು ಇಥಿಯೋಪಿಯಾದಿಂದ ಕೀನ್ಯಾ ಮೂಲಕ ಭಾರತಕ್ಕೆ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಸುಮಾರು 20ಕ್ಕೂ ಹೆಚ್ಚು ದೇಶಗಳಲ್ಲಿ ಈ ಜಾಲ ಸಕ್ರಿಯವಾಗಿರುವ ಮಾಹಿತಿ ದೊರೆತಿದೆ. ಈ ಜಾಲವು ಉತ್ತರ ಅಮೆರಿಕಾ, ಯುರೋಪ್, ಗಲ್ಫ್ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯಕ್ಕೆ ಸುಮಾರು 2,100 ಕಿಲೋಗ್ರಾಂ ತೂಕದ 550ಕ್ಕೂ ಹೆಚ್ಚು ಪಾರ್ಸೆಲ್‌ಗಳನ್ನು ಕಳುಹಿಸಿದೆ ಎಂದು ಎನ್‌ಸಿಬಿ ತಿಳಿಸಿದೆ.

ಇದನ್ನೂ ಓದಿ: ಡ್ರಗ್ ಫ್ಯಾಕ್ಟರಿ ಪತ್ತೆ ಮಾಡಿದ ಮಹಾ ಪೊಲೀಸ್; ಬೆಂಗಳೂರಿನ ಮೂವರು ಇನ್ಸ್​​​ಪೆಕ್ಟರ್​​​ಗಳ ತಲೆದಂಡ

ಮಾರ್ಗಮಧ್ಯದಲ್ಲಿರುವ ಪಾರ್ಸೆಲ್‌ಗಳ ಮಾಹಿತಿಯನ್ನು ಸಂಬಂಧಿತ ದೇಶಗಳ ಏಜೆನ್ಸಿಗಳಿಗೆ ನೀಡಲಾಗಿದೆ. ಭಾರತದಲ್ಲಿ ಹೆಚ್ಚು ಜನಪ್ರಿಯವಲ್ಲದ ಅಥವಾ ಕಡಿಮೆ ಬಳಕೆಯಲ್ಲಿರುವ ಮಾದಕ ವಸ್ತುವಾಗಿದ್ದರೂ ಖಾಟ್ ಎಲೆಗಳು ಮತ್ತು ಇತರೆ ಮನೋವೈಕಾರಿಕ ದ್ರವ್ಯಗಳ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಎನ್‌ಸಿಬಿ ಕಠಿಣ ಕ್ರಮ ಕೈಗೊಂಡಿದೆ. ಅಂತಾರಾಷ್ಟ್ರೀಯ ಅಂಚೆ ಮತ್ತು ಕೋರಿಯರ್ ವ್ಯವಸ್ಥೆ ಬಳಸಿಕೊಂಡು, ಚಹಾ ಮುಂತಾದ ಸಾಮಾನ್ಯ ವಾಣಿಜ್ಯ ವಸ್ತುಗಳಂತೆ ಇವನ್ನು ಬಿಂಬಿಸಿ ಸಾಗಾಟ ಮಾಡಲಾಗುತ್ತಿತ್ತು ಎಂಬ ಬಗ್ಗೆಯೂ ತಿಳಿದುಬಂದಿದೆ. ಈ ಅಕ್ರಮ ಜಾಲದಲ್ಲಿ ಮುಖ್ಯವಾಗಿ ವಿದೇಶಿ ನಾಗರಿಕರು ಭಾಗಿಯಾಗಿದ್ದು, ಸ್ಥಳೀಯ ಸಹಕಾರಿಗಳ ಸಹಾಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಹಲವರು ವಿದ್ಯಾರ್ಥಿ ಮತ್ತು ವೈದ್ಯಕೀಯ ವೀಸಾಗಳ ಹೆಸರಿನಲ್ಲಿ ಭಾರತದಲ್ಲಿ ವಾಸಿಸುತ್ತಿದ್ದರು ಎಂದು ಎನ್‌ಸಿಬಿ ಹೇಳಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:42 pm, Wed, 31 December 25

Source link

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ – Kannada News | Video of the last sunset of the year 2025 from Kanyakumari tamil Nadu

ಕನ್ಯಾಕುಮಾರಿ, ಡಿಸೆಂಬರ್ 31: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತವನ್ನು (Sunset) ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು. ಸೂರ್ಯಾಸ್ತವಾಗುತ್ತಿದ್ದಂತೆ ಕಿತ್ತಳೆ ಬಣ್ಣದ ಆಕಾಶದ ಅಡಿಯಲ್ಲಿ ಕನ್ಯಾಕುಮಾರಿಯ ಸಮುದ್ರ ತಟ ಬಹಳ ಸುಂದರವಾಗಿ ಕಾಣುತ್ತಿತ್ತು. ಸಮುದ್ರದ ದಂಡೆಯಲ್ಲಿ ನಿಂತಿದ್ದ ಜನರು ಮೊಬೈಲ್ ಫೋನ್‌ಗಳು ಮತ್ತು ಕ್ಯಾಮೆರಾಗಳಲ್ಲಿ 2025ರ ಕೊನೆಯ ಸೂರ್ಯಾಸ್ತದ ಕ್ಷಣವನ್ನು ಸೆರೆಹಿಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ – Kannada News | Sudeep talks about why he is watching Mark movie with fans

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಕಾಣುತ್ತಿದೆ. ಇದೀಗ ಸುದೀಪ್ ಅವರು ರಾಜ್ಯದ ಕೆಲವು ಪ್ರಮುಖ ನಗರಗಳಿಗೆ ತೆರಳಿ ಅಭಿಮಾನಿಗಳ ಜೊತೆಗೆ ‘ಮಾರ್ಕ್’ ಸಿನಿಮಾ ವೀಕ್ಷಿಸುತ್ತಿದ್ದಾರೆ. ಮೈಸೂರು, ಬೆಂಗಳೂರು ಸೇರಿದಂತೆ ಇನ್ನೂ ಕೆಲವೆಡೆ ಸುದೀಪ್ ಓಡಾಡುತ್ತಿದ್ದಾರೆ. ಅಭಿಮಾನಿಗಳೊಟ್ಟಿಗೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು ಎಂಬುದನ್ನು ಸುದೀಪ್ ಅವರೇ ವಿವರಿಸಿದ್ದಾರೆ. ಅಭಿಮಾನಿಗಳೊಟ್ಟಿಗೆ ಸಿನಿಮಾ ನೋಡುವಾಗ ಸಿನಿಮಾ ಮಾಡುವಾಗ ನಾವು ಮಾಡಿದ ತಪ್ಪು, ಸರಿಗಳು ಏನು ಎಂಬುದು ಅರ್ಥವಾಗುತ್ತದೆ, ಅಲ್ಲದೆ ನಮ್ಮ ಸಿನಿಮಾ ನಾವೇ ನೋಡುವ ಅನುಭವವೇ ವಿಶೇಷವಾದುದು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​​ – Kannada News | Bengaluru: Rain Arrives Ahead of New Year Celebrations, Heavy Showers Lash Yelahanka

ಬೆಂಗಳೂರು, ಡಿಸೆಂಬರ್​ 31: 2026ರ ಆಗಮನಕ್ಕೆ ಕ್ಷಣಗಣನೆ ಶುರುವಾಗಿದ್ದು, ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರಾಗಿದೆ. ಆದರೆ ಇತ್ತ ಸಿಲಿಕಾನ್​ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಮಳೆರಾಯನ ಅಡ್ಡಿ ಉಂಟಾಗಿದೆ. ನಗರದ ಯಲಹಂಕ ಸುತ್ತಮುತ್ತ ಅರ್ಧ ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ ಪಾರ್ಟಿ ಮೂಡಲ್ಲಿದ್ದವರು ವರುಣರಾಯನಿಗೆ ಹಿಡಿಶಾಪ ಹಾಕಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​​ ನೀಡಿದ ಕೇಂದ್ರ, ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ಸಿದ್ಧತೆ – Kannada News | Vande Bharat Express Soon for Bengaluru Mangaluru: Big Travel News

ಮಂಗಳೂರು, ಡಿ.31: ಮಂಗಳೂರು ಜನರಿಗೆ ಬಿಗ್​​ ಗುಡ್​​​ನ್ಯೂಸ್​​ ನೀಡಿದ ಕೇಂದ್ರ ಸರ್ಕಾರ, ಇನ್ಮುಂದೆ ರೈಲು ಪ್ರಯಾಣಿಕರ ವೇಗವನ್ನು ಹೆಚ್ಚಿಸಲಿದೆ. ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸಂಪರ್ಕಿಸಲಿದೆ ಎಂದು ಹಿಂದೂಸ್ಥಾನ್​​​​​​​​​​​ ಟೈಮ್ಸ್​​​ ವರದಿ ಮಾಡಿದೆ. ಈ ಮೂಲಕ ಕರಾವಳಿಗೆ ಹೋಗುವ ಬೆಂಗಳೂರಿನ ಪ್ರಯಾಣಿಕರು ಶೀಘ್ರದಲ್ಲೇ ವೇಗವಾದ ಮತ್ತು ಹೆಚ್ಚು ಆರಾಮದಾಯಕ ರೈಲು ಪ್ರಯಾಣವನ್ನು ಆನಂದಿಸಬಹುದು. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬಹುನಿರೀಕ್ಷಿತ ಸೆಮಿ-ಹೈಸ್ಪೀಡ್ ರೈಲು ಸೇವೆ ಕೊನೆಗೂ ಹಳಿಗೆ ಬರಲಿದೆ ಎಂಬ ಸುಳಿವು ನೀಡಿದ್ದಾರೆ. ಇದೀಗ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುವ ಜನರಿಗೆ ಇದು ಆಶಾಭಾವನೆಯನ್ನು ಮೂಡಿಸಿದೆ. ವಂದೇ ಭಾರತ್ ಸೇವೆಯನ್ನು ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಯೋಜಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರಗಳಿಗೆ ಹೋಗುವವರಿಗೆ ಇದು ಸಹಾಯವಾಗಲಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲೂ ಸಚಿವ ವಿ. ಸೋಮಣ್ಣ ಹಂಚಿಕೊಂಡಿದ್ದಾರೆ. ಈಗಾಗಲೇ ಮಂಗಳೂರು – ಬೆಂಗಳೂರು ವಂದೇ ಭಾರತ್ ಸೇವೆ ಅಂತಿಮವಾಗಿದೆ. ಕರ್ನಾಟಕದ ರಮಣೀಯ ಪಶ್ಚಿಮ ಘಟ್ಟಗಳ ಮೂಲಕ ಐಕಾನಿಕ್ ವಂದೇ ಭಾರತ್ ರೈಲುಗಳು ಶೀಘ್ರದಲ್ಲೇ ಓಡುವುದನ್ನು ಕಾಣಬಹುದು. ಮಂಗಳೂರು ಪ್ರದೇಶದ ಜನರ ಬಹುದಿನಗಳ ಬೇಡಿಕೆಯಾಗಿರುವ ವಂದೇ ಭಾರತ್ ರೈಲು ಓಡಾಟ ಆರಂಭಿಸುವ ಸಮಯ ಹತ್ತಿರವಾಗಿದೆ ಎಂದು ಬರೆದುಕೊಂಡಿದ್ದಾರೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆಯ ನಡುವಿನ 55 ಕಿಮೀ ಘಾಟ್ ವಿಭಾಗದಲ್ಲಿ ವಿದ್ಯುದೀಕರಣ ಕಾರ್ಯವನ್ನು ಪೂರ್ಣಗೊಳಿಸುವ ಮೂಲಕ ಹೊಸ ಸೇವೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮಡಗಾಂವ್‌ ನಡುವೆ ವಂದೇ ಭಾರತ್​​ ರೈಲು ಆರಂಭಕ್ಕೆ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಮನವಿ

ಇದು ಮುಖ್ಯ ಮೂಲಸೌಕರ್ಯ ಮೈಲಿಗಲ್ಲು ಎಂದು ಹೇಳಿದ್ದಾರೆ. ಈ ರೈಲು ಮಾರ್ಗದಲ್ಲಿ ಸಂಪೂರ್ಣ ವಿದ್ಯುದ್ದೀಕರಣವಾಗಲಿದೆ. ಈ ರೈಲು ಕಾರ್ಯಾಚರಣೆ ಸ್ವಚ್ಛ, ತ್ವರಿತ ಮತ್ತು ಹೆಚ್ಚು ಇಂಧನ ಉಳಿತವನ್ನು ಮಾಡಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವಿನ ರೈಲು ಜಾಲವನ್ನು ಬಲಪಡಿಸುತ್ತದೆ. ಇನ್ನು ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲಿನ ದೀರ್ಘಕಾಲದ ಬೇಡಿಕೆಯ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನದಾಸ್ ಪೈ ಅವರ ಹಂಚಿಕೊಂಡಿದ್ದ ಪೋಸ್ಟ್​​​ಗೆ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link