Category Archives: Blog

Your blog category

ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್ – Kannada News | Sudeep talks about his daughter Instagram post

ಮಾರ್ಕ್’ (Mark) ಸಿನಿಮಾದ ಪೈರಸಿ ವಿಚಾರಕ್ಕೆ ಕಿಚ್ಚ ಸುದೀಪ್ ಆಡಿದ ಮಾತು ಆ ನಂತರ ಹಲವು ಕವಲುಗಳಾಗಿ ಒಡೆದು ಏನೇನೋ ಆಗಿದೆ. ಸುದೀಪ್ ಅವರನ್ನು ಟಾರ್ಗೆಟ್ ಮಾಡಿರುವ ದರ್ಶನ್ ಅಭಿಮಾನಿಗಳು, ಅವರ ಪುತ್ರಿಯ ಬಗ್ಗೆಯೂ ಕೆಟ್ಟ ಕಮೆಂಟ್​​ಗಳನ್ನು ಮಾಡಿದ್ದಾರೆ. ಇದನ್ನು ಸುದೀಪ್ ಈಗಾಗಲೇ ಖಂಡಿಸಿದ್ದಾರೆ. ಅಲ್ಲದೆ, ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಸಹ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸುದೀಪ್ ಅವರು, ಸಾನ್ವಿ ಸುದೀಪ್ ಹಂಚಿಕೊಂಡಿರುವ ಪೋಸ್ಟ್ ಬಗ್ಗೆ ಮಾತನಾಡುತ್ತಾ, ‘ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೃಷ್ಣನೂರಿನಲ್ಲಿ ಸನ್ನಿ ಲಿಯೋನಿ ಶೋಗೆ ವಿರೋಧ: ಕಾರ್ಯಕ್ರಮ ರದ್ದು – Kannada News | Sunny Leone’s new year program canceled at Mathura for religious reasons

ಸನ್ನಿ ಲಿಯೋನಿ  (Sunny Leone), ನೀಲಿ ಚಿತ್ರಗಳ ಲೋಕಕ್ಕೆ ವಿದಾಯ ಹೇಳಿ ವರ್ಷಗಳೇ ಆಗಿದೆ. ಅವರು ಈಗ ಚಿತ್ರರಂಗದಲ್ಲಿ ಸೆಟಲ್ ಆಗಿದ್ದಾರೆ ಆದರೂ ಸಹ ಆಗಾಗ್ಗೆ ಅವರ ಇತಿಹಾಸದ ಕಾರಣಕ್ಕೆ ಆಗಾಗ್ಗೆ ಮುಜುಗರಕ್ಕೆ, ನಿಂದನೆಗೆ ಒಳಗಾಗುತ್ತಲೇ ಇರುತ್ತಾರೆ. ಸನ್ನಿ ಲಿಯೋನಿ, ನೀಲಿ ಚಿತ್ರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿದ್ದರೂ, ಈಗಲೂ ಸಹ ಅವರನ್ನು ಗ್ಲಾಮರ್ ಕ್ವೀನ್ ಆಗಿ, ಪಾರ್ಟಿ ಗರ್ಲ್ ಆಗಿಯೇ ನೋಡಲಾಗುತ್ತದೆ. ಇದೇ ಕಾರಣಕ್ಕೆ ಹಲವು ಪಾರ್ಟಿಗಳಿಗೆ ವಿಶೇಷ ಅತಿಥಿಯಾಗಿ, ವಿಶೇಷ ಗ್ಲಾಮರಸ್ ಲೈವ್ ಶೋಗೆ ಆಹ್ವಾನಿಸಲಾಗುತ್ತದೆ. ಇಂಥಹುದೇ ಒಂದು ಶೋ ಇತ್ತೀಚೆಗೆ ರದ್ದಾಗಿದೆ.

ಹೊಸ ವರ್ಷಾಚರಣೆಗೆಂದು ಸನ್ನಿ ಲಿಯೋನಿ ಅವರ ಲೈವ್ ಶೋ ಅನ್ನು ಕೃಷ್ಣನ ಜನ್ಮಭೂಮಿ ಎಂದು ಖ್ಯಾತವಾಗಿರುವ ಮಥುರಾನಲ್ಲಿ ಆಯೋಜನೆ ಮಾಡಲಾಗಿತ್ತು. ಮಥುರಾದ ಐಶಾರಾಮಿ ಖಾಸಗಿ ಹೋಟೆಲ್ ಒಂದು ಹೊಸ ವರ್ಷಾಚರಣೆಗೆಂದು ಡಿಜಿ ಪಾರ್ಟಿ ಆಯೋಜಿಸಿತ್ತು, ಕಾರ್ಯಕ್ರಮದಲ್ಲಿ ಸನ್ನಿ ಲಿಯೋನಿ ವಿಶೇಷ ಅತಿಥಿ ಆಗಿದ್ದರು. ಗ್ಲಾಮರಸ್ ನೃತ್ಯ ಪ್ರದರ್ಶನವನ್ನೂ ಸಹ ಅವರು ಅಲ್ಲಿ ನೀಡಲಿದ್ದರು. ಹೋಟೆಲ್​​ನವರು ಮುಂಚಿತವಾಗಿಯೇ ಸ್ಥಳೀಯ ಆಡಳಿತ ಮತ್ತು ಪೊಲೀಸರಿಂದ ಅನುಮತಿಯನ್ನು ಸಹ ಪಡೆಯಲಾಗಿತ್ತು. ಆದರೆ ಕೆಲ ಸಂಪ್ರದಾಯವಾದಿಗಳು ಮತ್ತು ಧಾರ್ಮಿಕ ಮುಖಂಡರ ಆಕ್ಷೇಪಣೆಗೆ ಮೇರೆಗೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ:ಕೊಲ್ಕತ್ತನಲ್ಲಿ ಮಿಂಚು ಹರಿಸಿದ ಸನ್ನಿ ಲಿಯೋನಿ: ವಿಡಿಯೋ ನೋಡಿ

ಸನ್ನಿ ಲಿಯೋನಿ ಅವರು ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಹೋಟೆಲ್​​ನವರು ಘೋಷಣೆ ಆದ ಬೆನ್ನಲ್ಲೆ ಹಿಂದೂಪರ ಸಂಘಟನೆಗಳವರು ಪ್ರತಿಭಟನೆ ಆರಂಭಿಸಿದ್ದರು. ಸ್ಥಳೀಯ ಧಾರ್ಮಿಕ ಮುಖಂಡರು, ಮಠದ ಗುರುಗಳು ಸಹ ಕಾರ್ಯಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಹೋಟೆಲ್​​ಗೆ ಮುತ್ತಿಗೆ ಹಾಕುವುದಾಗಿಯೂ ಸಹ ಕೆಲ ಧಾರ್ಮಿಕ ಸಂಘಟನೆ ಸದಸ್ಯರು ಎಚ್ಚರಿಕೆ ನೀಡಿದ್ದರು. ಇದೆಲ್ಲದರ ಬೆನ್ನಲ್ಲೆ ಇದೀಗ ಹೋಟೆಲ್​​ನವರೇ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ.

‘ಸನ್ನಿ ಲಿಯೋನಿ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು, ಅವರು ನಮ್ಮ ಹೋಟೆಲ್ ಕಾರ್ಯಕ್ರಮಕ್ಕೆ ಬರುವುದು ವಿಶೇಷವಾಗಿತ್ತು. ಅದಕ್ಕೆ ಬೇಕಾದ ಎಲ್ಲ ಅನುಮತಿಗಳನ್ನೂ ಸಹ ನಾವು ತೆಗೆದುಕೊಂಡಿದ್ದೆವು. ಕಾರ್ಯಕ್ರಮವನ್ನು ನಾವು ಕಾನೂನು ನಿಯಮದ ಅಡಿಯಲ್ಲಿಯೇ ನಡೆಸಲಿದ್ದೆವು ಆದರೆ ಇದೀಗ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಸಾಮಾಜಿಕ ಮತ್ತು ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಾ ಈ ನಿರ್ಣಯವನ್ನು ತೆಗೆದುಕೊಂಡಿದ್ದೇವೆ’ ಎಂದಿದೆ ಹೋಟೆಲ್ ಆಡಳಿತ ಮಂಡಳಿ.

ಸನ್ನಿ ಲಿಯೋನಿಗೆ ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಸಹ ಅವರ ಕೆಲವು ಕಾರ್ಯಕ್ರಮಗಳು ಪ್ರತಿಭಟನೆ ಇನ್ನಿತರೆ ಕಾರಣಗಳಿಗೆ ರದ್ದಾಗಿದ್ದು ಇದೆ. ಇದೀಗ ಮತ್ತೊಮ್ಮೆ ಸನ್ನಿ ಲಿಯೋನಿಯ ಕಾರ್ಯಕ್ರಮ ಧಾರ್ಮಿಕ ಮುಖಂಡರ ಒತ್ತಾಯದ ಕಾರಣಕ್ಕೆ ರದ್ದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೋವಿಡ್ ಹಗರಣ: ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ – Kannada News | Karnataka COVID scam: Justice D’Cunha submits final report to the government

ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ

ಬೆಂಗಳೂರು, ಡಿಸೆಂಬರ್​ 31: ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೋವಿಡ್ ಅವಧಿಯಲ್ಲಿ ನಡೆಸಿದೆ ಎನ್ನಲಾದ ಅವ್ಯವಹಾರದ ತನಿಖೆಯ ಅಂತಿಮ ವರದಿಯನ್ನು ನಿವೃತ್ತ ನ್ಯಾಯಮೂರ್ತಿಗಳಾದ ಮೈಕೆಲ್ ಡಿ ಕುನ್ಹಾ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್​​ಗೆ ರಿಪೋರ್ಟ್​​ ಹಸ್ತಾಂತರಿಸಿದ್ದಾರೆ.

ಸಿಎಂ ಕಚೇರಿ ಮಾಹಿತಿ

ಕೊರೊನಾ ಸೋಂಕು ಅಬ್ಬರದ ವೇಳೆ, ಔಷಧ ಮತ್ತು ಉಪಕರಣಗಳ ಖರೀದಿಯಲ್ಲಿನ ಭ್ರಷ್ಟಾಚಾರ ಆರೋಪದ ಕುರಿತು ತನಿಖೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​ ಸರ್ಕಾರ ಆಗಸ್ಟ್ 25, 2023ರಲ್ಲಿ ಆದೇಶಿಸಿತ್ತು. ಹೈಕೋರ್ಟ್​​ ನಿವೃತ್ತ ನ್ಯಾಯಮೂರ್ತಿ ಜಾನ್​ ಮೈಕಲ್​ ಕುನ್ಹಾ ನೇತೃತ್ವದ ತನಿಖಾ ಆಯೋಗಕ್ಕೆ ಇದರ ಹೊಣೆ ನೀಡಲಾಗಿತ್ತು. ಬಳಿಕ ಈ ಬಗ್ಗೆ ತನಿಖೆ ನಡೆಸಿದ್ದ ಆಯೋಗ 2024ರ ಆಗಸ್ಟ್​​ ವೇಳೆಗೆ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ ಮಾಡಿತ್ತು. ಈಗ ತನಿಖೆಯ ಅಂತಿಮ ವರದಿ ಸಲ್ಲಿಸಿದೆ. ಈ ಬಗ್ಗೆ ಸಿಎಂ ಕಚೇರಿಯೇ ಮಾಹಿತಿ ನೀಡಿದೆ.

ಇದನ್ನೂ ಓದಿ: ಬಿಜೆಪಿ ಅವಧಿಯ ಕೋವಿಡ್ ಹಗರಣದ ವಿಸ್ತೃತ ಮಾಹಿತಿಗೆ ರಚನೆಯಾಗಲಿದೆ ಮತ್ತೊಂದು‌ ಸಮಿತಿ; ಅಧಿಕಾರಿಗಳಗೆ ಢವಢವ

ಅಂದಿನ ಸರ್ಕಾರ ಚೀನಾ ಕಂಪನಿಗಳಿಂದ ಪಿಪಿಇ ಕಿಟ್ ಖರೀದಿ ಮಾಡಿದ್ದು, ಕಿಟ್ ಖರೀದಿ ವೇಳೆ ದರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ದರ ವ್ಯತ್ಯಾಸದಿಂದ ಪಿಪಿಇ ಕಿಟ್ ಪೂರೈಕೆದಾರರಿಗೆ 14.21 ಕೋಟಿ ರೂ. ಲಾಭವಾಗಿದೆ. ಪೂರೈಕೆದಾರರಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಅಕ್ರಮ ಎಸಗಲಾಗಿದೆ. ಒಟ್ಟು 769 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಹೇಳಲಾಗಿತ್ತು. ಪಿಪಿಇ ಕಿಟ್​ ಹಾಗೂ ಇತರೆ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದ ನ್ಯಾಯಮೂರ್ತಿ ಜಾನ್​ ಮೂಕಲ್​ ಡಿ.ಮೈಕಲ್​ ಕುನ್ಹಾ ಆಯೋಗ, ಈ ಸಂಬಂಧ ಅಂದಿನ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್​ಗೆ ಶಿಫಾರಸು ಕೂಡ ಮಾಡಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು – Kannada News | Sakleshpur Miracle: Lost Child Found on Bus, Reunited with Mother by Police

ಹಾಸನ, ಡಿ.31 : ಪೋಷಕರಿಂದ ದೂರವಾಗಿದ್ದ ಮಗುವನ್ನು ತಾಯಿ ಮಡಿಲಿಗೆ ಸೇರಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಬಾಗೆ ಗ್ರಾಮದಲ್ಲಿ ನಡೆದಿದೆ. ಬಾಲಕಿ ನಿನ್ನೆ ರಾತ್ರಿ ತಾಯಿಯಿಂದ ತಪ್ಪಿಸಿಕೊಂಡಿದ್ದಾಳೆ. ತಾಯಿ, ಮಗು ಸೇರಿ ಆರು ಜನರ ತಂಡ ಧರ್ಮಸ್ಥಳದಿಂದ ಕೋಲಾರಕ್ಕೆ ತೆರಳುತ್ತಿದ್ದ ವೇಳೆ ಬಾಗೆ ಗ್ರಾಮದ ಬಳಿ ಸಾರಿಗೆ ಬಸ್ ಕೆಟ್ಟು ನಿಂತಿದೆ. ಈ ವೇಳೆ ಪ್ರಯಾಣಿಕರನ್ನು ಕಂಡಕ್ಟರ್ ಮತ್ತೊಂದು ಬಸ್ಸಿನಲ್ಲಿ ಕಳುಹಿಸಿದ್ದಾನೆ. ಆದರೆ ಬಾಲಕಿ ಗೊಂದಲದಿಂದ ಕೆಟ್ಟು ನಿಂತಿದ್ದ ಬಸ್ಸಿನಲ್ಲೇ ಕುಳಿತಿದ್ದಾಳೆ. ಮತ್ತೊಂದು ಕಡೆ ಬಾಲಕಿಯ ತಾಯಿ ಮಗಳು ಬಸ್ ಹತ್ತಿದ್ದಾಳೋ ಇಲ್ಲವೋ ಎಂಬುದನ್ನು ಗಮನಿಸದೆ ಸ್ನೇಹಿತೆಯರ ಜೊತೆ ತೆರಳಿದ್ದಾಳೆ. ರಿಪೇರಿಯಾದ ನಂತರ ಬೆಂಗಳೂರು ಕಡೆಗೆ ಹೊರಟಿದ್ದ ಬಸ್​ನಲ್ಲಿ ಬಾಲಕಿಯನ್ನು ಕಂಡು ಬಸ್​​ ನಿರ್ವಾಹಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಲಕಿ ತಾಯಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ಹಾಸನ ಸಮೀಪ ಬಂದಿದ್ದ ತಾಯಿ, ವಾಪಾಸ್ ಬಂದು ಮಗಳನ್ನು ಕರೆದುಕೊಂಡು ಹೋಗಿದ್ದಾಳೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ವರ್ಷಾಂತ್ಯದಲ್ಲಿ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: ಹಲವರಿಗೆ ಬಡ್ತಿ, ಕೆಲವರಿಗೆ ವರ್ಗಾವಣೆ – Kannada News | Karnataka Police Major Changes: IPS Officers Promoted and Transferred by karnataka government

ಬೆಂಗಳೂರು, ಡಿಸೆಂಬರ್​ 31: ಸರ್ಕಾರ ವರ್ಷಾಂತ್ಯದಲ್ಲಿ ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ ಮಾಡಿದೆ. 23 ಐಪಿಎಸ್‌ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ ನೀಡಿದ್ದು, 20 ಐಪಿಎಸ್(IPS) ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ (karnataka government) ಬುಧವಾರ ಆದೇಶ ಹೊರಡಿಸಿದೆ.

23 ಐಪಿಎಸ್‌ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಬಡ್ತಿ

  • ಭೀಮಾಶಂಕರ್ ಗುಳೇದ್-ಡಿಐಜಿಪಿ, ಸಿಐಡಿ ಆರ್ಥಿಕ ಅಪರಾಧ
  • ಇಲಕ್ಕಿಯ ಕರುಣಾಗರನ್-ಡಿಐಜಿಪಿ, ವೈರ್‌ಲೆಸ್​​
  • ವೇದಮೂರ್ತಿ-ಡಿಐಜಿಪಿ, ರಾಜ್ಯ ಗುಪ್ತಚರ
  • ಕೆ.ಎಂ.ಶಾಂತರಾಜು-ಡಿಐಜಿಪಿ, ಐಎಸ್‌ಡಿ
  • ಹನುಮಂತರಾಯ-ಡಿಐಜಿಪಿ, ಎಸ್‌ಹೆಚ್‌ಆರ್‌ಸಿ
  • ಡಿ.ದೇವರಾಜು-ಡಿಐಜಿಪಿ, ಪೊಲೀಸ್‌ ತರಬೇತಿ
  • ಡಾ.ಸಿರಿ ಗೌರಿ-ಡಿಐಜಿಪಿ, ಕರ್ನಾಟಕ ಲೋಕಾಯುಕ್ತ
  • ಡಾ.ಕೆ.ಧರಣಿದೇವಿ-ಡಿಐಜಿಪಿ, ಗುಪ್ತಚರ
  • ಎಸ್.ಸವಿತಾ-ಡಿಐಜಿಪಿ, ಗೃಹರಕ್ಷಕ ದಳ
  • ಸಿ.ಕೆ.ಬಾಬಾ-ಡಿಐಜಿಪಿ ಕೆಎಸ್‌ಆರ್‌ಪಿ
  • ಅಬ್ದುಲ್ ಅಹದ್-ನಿರ್ದೇಶಕರು, ಬಿಎಂಟಿಸಿ
  • ಎಸ್.ಗಿರೀಶ್-ಡಿಐಜಿಪಿ, ಎಎನ್‌ಟಿಎಫ್​
  • ಎಂ.ಪುಟ್ಟಮಾದಯ್ಯ-ಡಿಐಜಿಪಿ, ಪ್ರಾಂಶುಪಾಲ, ಪಿಟಿಸಿ ಕಲಬುರಗಿ
  • ಟಿ.ಶ್ರೀಧರ್‌-ಡಿಐಜಿಪಿ ಮುಖ್ಯ ಕಚೇರಿ
  • ಎ.ಎನ್.ಪ್ರಕಾಶ್ ಗೌಡ-ಡಿಐಜಿಪಿ, ಎಸ್‌ಎಎಫ್​
  • ಜಿನೇಂದ್ರ ಖನಗಾವಿ-ಡಿಐಜಿಪಿ, ಕಾರಾಗೃಹ
  • ಜೆ.ಕೆ.ರಶ್ಮಿ-ಡಿಐಜಿಪಿ, ರೈಲ್ವೆ
  • ಟಿ.ಪಿ.ಶಿವಕುಮಾರ್-ಡಿಐಜಿಪಿ, ಎಸ್‌ಸಿಆರ್‌ಬಿ
  • ವಿಷ್ಣುವರ್ಧನ್-ನಿರ್ದೇಶಕ, ಕೆಪಿಎ
  • ಡಾ.ಸಂಜೀವ್ ಎಂ ಪಾಟೀಲ್-ಡಿಐಜಿಪಿ ಜನರಲ್(ಅಪ್‌ಗ್ರೇಡ್)
  • ಕೆ.ಪರಶುರಾಮ-ಡಿಐಜಿಪಿ, ಸಿಟಿಆರ್‌ಎಸ್​
  • ಹೆಚ್‌.ಡಿ.ಆನಂದ್ ಕುಮಾರ್-ಡಿಐಜಿಪಿ, ಸೈಬರ್ ಕಮಾಂಡ್​
  • ಕಲಾ ಕೃಷ್ಣಸ್ವಾಮಿ-ಡಿಐಜಿಪಿ, ಅಪರಾಧ (ಅಪ್‌ಗ್ರೇಡ್)

ಐಜಿಪಿ ಆಗಿ ಬಡ್ತಿ ಹೊಂದಿದ ಅಧಿಕಾರಿಗಳು ಮತ್ತು ನಿಯೋಜಿತ ಸ್ಥಳ

  • ಡಾ.ಎಂ.ಬಿ.ಬೋರಲಿಂಗಯ್ಯ- ಐಜಿಪಿ, ದಕ್ಷಿಣ ವಲಯದಲ್ಲಿ ಮುಂದಿವರಿಕೆ
  • ಅಜಯ್ ಹಿಲೋರಿ- ಐಜಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ ಬೆಂಗಳೂರು ಮುಂದುವರಿಕೆ

ವರ್ಗಾವಣೆಗೊಂಡ 20 IPS ಅಧಿಕಾರಿಗಳು 

  • ಚಂದ್ರಕಾಂತ್.ಎಂ.ವಿ-ಬೆಂಗಳೂರು ಗ್ರಾಮಾಂತರ ಎಸ್‌ಪಿ
  • ಸೈದುಲು ಅಡಾವತ್-ಬೆಂಗಳೂರು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ
  • ಯತೀಶ್.ಎನ್-ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ
  • ಕೆ.ರಾಮರಾಜನ್-ಬೆಳಗಾವಿ ಎಸ್‌ಪಿ
  • ಬಿ.ನಿಖಿಲ್-ಶಿವಮೊಗ್ಗ ಎಸ್‌ಪಿ
  • ಅರುಣಾಂಗ್ಶು ಗಿರಿ-ರಾಯಚೂರು ಎಸ್‌ಪಿ
  • ಶುಭನ್ವಿತಾ-ಹಾಸನ ಎಸ್‌ಪಿ
  • ಮಿಥುನ್ ಕುಮಾರ್-ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ
  • ವಿಕ್ರಮ್ ಆಮ್ಟೆ-ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ
  • ಜಿತೇಂದ್ರ ಕುಮಾರ್ ದಯಾಮ್-ಚಿಕ್ಕಮಗಳೂರು ಎಸ್‌ಪಿ
  • ಕನ್ನಿಕಾ ಸುಕ್ರಿವಾಲ್-ಕೋಲಾರ ಎಸ್‌ಪಿ
  • ಬಿಂದು ಮಣಿ-ಕೊಡಗು ಎಸ್‌ಪಿ
  • ಮೊಹಮ್ಮದ್ ಸುಜೀತಾ.ಎಂ.ಎಸ್-ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ
  • ಶೋಭಾರಾಣಿ-ಮಂಡ್ಯ ಎಸ್‌ಪಿ
  • ಸಾರಾ ಫಾತಿಮಾ-ಎಸ್‌ಪಿ, ರೈಲ್ವೆ
  • ಮುತ್ತುರಾಜು.ಎಂ-ಚಾಮರಾಜನಗರ ಎಸ್‌ಪಿ
  • ಡಾ.ಕವಿತಾ.ಬಿ.ಟಿ-ಸಿಐಡಿ, ಡಿಸಿಪಿ
  • ಸಜೀತ್-ಸಿಐಡಿ ಎಸ್‌ಪಿ
  • ಪವನ್ ನೆಜ್ಜೂರ್-ಬಳ್ಳಾರಿ ಎಸ್‌ಪಿ
  • ಮೈಸೂರು ಎಸ್‌ಪಿ ಆಗಿ ಮಲ್ಲಿಕಾರ್ಜುನ ಬಾಲದಂಡಿ ವರ್ಗಾವಣೆಗೊಳಿಸಲಾಗಿದೆ.

ವರದಿ: ಪ್ರದೀಪ್​​ ಚಿಕ್ಕಾಟೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ಬಾರಿಯ ಗಣರಾಜ್ಯೋತ್ಸವ ಬಹಳ ಡಿಫರೆಂಟ್; ಸೇನೆಯಿಂದ ಒಂಟೆ, ಭಾರತೀಯ ತಳಿಯ ನಾಯಿಗಳ ಮೆರವಣಿಗೆ – Kannada News | Indian Armys Animal warriors to march On Kartavya Path in Republic Day Parade first time in India

ನವದೆಹಲಿ, ಡಿಸೆಂಬರ್ 31: ಭಾರತವು 2026ರ ಗಣರಾಜ್ಯೋತ್ಸವದಂದು (Republic Day) ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಲಿದೆ. ಈ ಬಾರಿ ಭಾರತೀಯ ಸೇನೆಯ ಪ್ರಾಣಿಗಳು ಕರ್ತವ್ಯ ಪಥದಲ್ಲಿ ಮೆರವಣಿಗೆ ನಡೆಸಲಿವೆ. ಇದು ಸಹಿಷ್ಣುತೆ, ತ್ಯಾಗ ಮತ್ತು ಸೈನ್ಯದ ವಿಶಿಷ್ಟವಾದ ಕಾರ್ಯಾಚರಣೆಯ ಸಾಮರ್ಥ್ಯವನ್ನು ಸಂಕೇತಿಸುತ್ತದೆ. ಇದೇ ಮೊದಲ ಬಾರಿಗೆ, ರಿಮೌಂಟ್ ಮತ್ತು ಪಶುವೈದ್ಯಕೀಯ ದಳದ ಕ್ಯುರೇಟೆಡ್ ಪ್ರಾಣಿ ತುಕಡಿಯು ಮೆರವಣಿಗೆಯಲ್ಲಿ ಭಾಗವಹಿಸುತ್ತದೆ. ಈ ತುಕಡಿಯು ಎರಡು ಬ್ಯಾಕ್ಟ್ರಿಯನ್ ಒಂಟೆಗಳು, 4 ಝನ್ಸ್ಕಾರ್ ಪೋನಿಗಳು, 4 ರಾಪ್ಟರ್‌ಗಳು, 10 ಭಾರತೀಯ ತಳಿಯ ಸೇನಾ ನಾಯಿಗಳು ಮತ್ತು ಈಗಾಗಲೇ ಸೇವೆಯಲ್ಲಿರುವ 6 ಸಾಂಪ್ರದಾಯಿಕ ಮಿಲಿಟರಿ ನಾಯಿಗಳನ್ನು ಒಳಗೊಂಡಿರುತ್ತದೆ.

ಲಡಾಖ್‌ನ ಮರುಭೂಮಿಗಳಲ್ಲಿ ಕಾರ್ಯಾಚರಣೆಗಾಗಿ ಇತ್ತೀಚೆಗೆ ಸೇರಿಸಲಾದ ಹಾರ್ಡಿ ಬ್ಯಾಕ್ಟ್ರಿಯನ್ ಒಂಟೆಗಳು ಈ ಮೆರವಣಿಗೆಯನ್ನು ಮುನ್ನಡೆಸುತ್ತವೆ. ತೀವ್ರ ಶೀತ, ಗಾಳಿ ಮತ್ತು 15,000 ಅಡಿಗಳಿಗಿಂತ ಹೆಚ್ಚಿನ ಎತ್ತರಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿರುವ ಈ ಒಂಟೆಗಳು 250 ಕೆಜಿಗಳಷ್ಟು ಭಾರವನ್ನು ಹೊತ್ತೊಯ್ಯಬಲ್ಲವು. ಅತ್ಯಂತ ಕಡಿಮೆ ನೀರು ಮತ್ತು ಆಹಾರದೊಂದಿಗೆ ದೀರ್ಘ ದೂರವನ್ನು ಕ್ರಮಿಸಬಲ್ಲವು. ಹೀಗಾಗಿ, ಇವುಗಳನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಮರಳು ಭೂಪ್ರದೇಶ ಮತ್ತು ಇಳಿಜಾರುಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಗಸ್ತು ತಿರುಗುವ ಸಾಮರ್ಥ್ಯವನ್ನು ಈ ಒಂಟೆಗಳು ಹೊಂದಿವೆ. ಈಗಾಗಲೇ ಇವು ಸಿಯಾಚಿನ್ ಹಿಮನದಿ ಸೇರಿದಂತೆ ಕೆಲವು ಕಠಿಣ ಭೂಪ್ರದೇಶಗಳಲ್ಲಿ ಸೇವೆ ಸಲ್ಲಿಸಿವೆ. ಇವು ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಸೈನಿಕರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತವೆ.

ಇದನ್ನೂ ಓದಿ: Indian Army Recruitment 2025: ಲಿಖಿತ ಪರೀಕ್ಷೆಯಿಲ್ಲದೇ ಭಾರತೀಯ ಸೇನೆ ಸೇರಲು ಇಲ್ಲಿದೆ ಸುವರ್ಣವಕಾಶ; ಹೀಗೆ ಅರ್ಜಿ ಸಲ್ಲಿಸಿ

ಭಾರತೀಯ ಸೇನೆಯ “ಸೈಲೆಂಟ್ ವಾರಿಯರ್ಸ್” ಎಂದು ಕರೆಯಲ್ಪಡುವ ಸೇನಾ ಶ್ವಾನಗಳು ಗಣರಾಜ್ಯೋತ್ಸವದ ಮೆರವಣಿಗೆಯ ಪ್ರಮುಖ ಅಂಶವಾಗಿರುತ್ತದೆ. ಮೀರತ್‌ನ ಆರ್‌ವಿಸಿ ಸೆಂಟರ್ ಮತ್ತು ಕಾಲೇಜಿನಲ್ಲಿ ರಿಮೌಂಟ್ ಮತ್ತು ಪಶುವೈದ್ಯಕೀಯ ದಳದಿಂದ ಬೆಳೆಸಲ್ಪಟ್ಟ, ತರಬೇತಿ ಪಡೆದ ಮತ್ತು ಪೋಷಿಸಲ್ಪಟ್ಟ ಈ ಶ್ವಾನಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು, ಸ್ಫೋಟಕ ಮತ್ತು ಗಣಿ ಪತ್ತೆ, ಟ್ರ್ಯಾಕಿಂಗ್, ಕಾವಲು, ವಿಪತ್ತು ಪ್ರತಿಕ್ರಿಯೆ ಮತ್ತು ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸೈನಿಕರನ್ನು ಬೆಂಬಲಿಸುತ್ತವೆ.

ಕಳೆದ ದಶಕಗಳಲ್ಲಿ ಸೇನಾ ಶ್ವಾನಗಳು ಮತ್ತು ಅವುಗಳ ನಿರ್ವಾಹಕರು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದ್ದಾರೆ, ಯುದ್ಧ ಮತ್ತು ಮಾನವೀಯ ಕಾರ್ಯಾಚರಣೆಗಳಲ್ಲಿ ಧೈರ್ಯದ ಕಾರ್ಯಗಳಿಗಾಗಿ ಶೌರ್ಯ ಪ್ರಶಸ್ತಿಗಳು ಮತ್ತು ಪ್ರಶಂಸೆಗಳನ್ನು ಗಳಿಸಿದ್ದಾರೆ. ಈ ಬಾರಿಯ ಸ್ವಾತಂತ್ರ್ಯೋತ್ಸವದ ವೇಳೆಯೂ ಭಾರತೀಯ ತಳಿಯ ಸೇನಾ ಶ್ವಾನಗಳ ಪ್ರದರ್ಶನ ಗಮನಸೆಳೆದಿತ್ತು.

ಇದನ್ನೂ ಓದಿ: Brigadier in Indian Army: ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗುವುದು ಹೇಗೆ? ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಿರಿ

ಆತ್ಮನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾದ ದೃಷ್ಟಿಕೋನದಡಿಯಲ್ಲಿ ಭಾರತೀಯ ಸೇನೆಯು ಮುಧೋಳ ಹೌಂಡ್, ರಾಂಪುರ್ ಹೌಂಡ್, ಚಿಪ್ಪಿಪರೈ, ಕೊಂಬೈ ಮತ್ತು ರಾಜಪಾಳ್ಯಂನಂತಹ ಸ್ಥಳೀಯ ನಾಯಿ ತಳಿಗಳನ್ನು ಹೆಚ್ಚಾಗಿ ಸೇರಿಸಿಕೊಳ್ಳುತ್ತಿದೆ. ಈ ಪ್ರಾಣಿಗಳ ತಂಡವು 2026ರ ಗಣರಾಜ್ಯೋತ್ಸವದಂದು ಮೆರವಣಿಗೆ ನಡೆಸುವ ಮೂಲಕ ಭಾರತದ ರಕ್ಷಣಾ ಬಲವು ಯಂತ್ರಗಳು ಮತ್ತು ಸೈನಿಕರಿಂದ ಮಾತ್ರ ನಿರ್ಮಿಸಲ್ಪಟ್ಟಿಲ್ಲ ಎಂಬುದನ್ನು ನೆನಪಿಸುತ್ತದೆ. ಸಿಯಾಚಿನ್‌ನ ಹಿಮಾವೃತ ಎತ್ತರದಿಂದ ಲಡಾಖ್‌ನ ಶೀತ ಮರುಭೂಮಿಗಳು ಮತ್ತು ವಿಪತ್ತು ಪೀಡಿತ ನಾಗರಿಕ ಪ್ರದೇಶಗಳವರೆಗೆ, ಈ ಪ್ರಾಣಿಗಳು ಕರ್ತವ್ಯ, ಧೈರ್ಯ ಮತ್ತು ತ್ಯಾಗದ ಹೊರೆಯನ್ನು ಮೌನವಾಗಿಯೇ ಹಂಚಿಕೊಂಡಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:06 pm, Wed, 31 December 25

Source link

10 ನಿಮಿಷದ ಡೆಲಿವರಿ ಆಯ್ಕೆ ರದ್ದುಗೊಳಿಸಿ; ಗಿಗ್ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ – Kannada News | Remove 10 minute delivery option Swiggy, Zomato and other Workers demanding

ನವದೆಹಲಿ, ಡಿಸೆಂಬರ್ 31: ಹೊಸ ವರ್ಷದ ಮುನ್ನಾದಿನವಾದ ಇಂದು ಡೆಲಿವರಿ ಏಜೆಂಟ್​​ಗಳು ಮುಷ್ಕರ ನಡೆಸುತ್ತಿದ್ದಾರೆ. ದೇಶಾದ್ಯಂತ ಮುಷ್ಕರದ ನಡುವೆ ಸ್ವಿಗ್ಗಿ (Swiggy), ಜೊಮಾಟೊ ವಿತರಣಾ ಪ್ರೋತ್ಸಾಹವನ್ನು ಹೆಚ್ಚಿಸಿವೆ. ಫುಡ್, ದಿನಸಿ ಮುಂತಾದ ವಿತರಣಾ ಅಪ್ಲಿಕೇಶನ್‌ಗಳ ಗಿಗ್ ಕಾರ್ಮಿಕರು ಇಂದು ದೇಶಾದ್ಯಂತ ಮುಷ್ಕರ ಘೋಷಿಸಿದ್ದಾರೆ. “10 ನಿಮಿಷದ ಡೆಲಿವರಿ ಆಯ್ಕೆಯನ್ನು ತೆಗೆದುಹಾಕಿ” ಎಂದು ಅವರು ಒತ್ತಾಯಿಸಿದ್ದಾರೆ.

ಕಡಿಮೆ ವೇತನ, ಅಸುರಕ್ಷಿತ ಪರಿಸ್ಥಿತಿಗಳು ಮತ್ತು ಕಳಪೆ ಕೆಲಸದ ಭದ್ರತೆಯ ವಿರುದ್ಧ ಗಿಗ್ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. 10 ನಿಮಿಷದಲ್ಲಿ ಡೆಲಿವರಿ ನೀಡಬೇಕಾದ ಒತ್ತಡ ಇರುವುದರಿಂದ ಸುರಕ್ಷತೆಯ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದಿರುವ ಗಿಗ್ ಕಾರ್ಮಿಕರು 10 ನಿಮಿಷದಲ್ಲಿ ಡೆಲಿವರಿ ಎಂಬ ಆಯ್ಕೆಯನ್ನು ರದ್ದುಗೊಳಿಸುವಂತೆ ಆಹಾರ ಮತ್ತು ದಿನಸಿ ವಿತರಣಾ ವೇದಿಕೆಗಳನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸತತ 10 ವರ್ಷಗಳಿಂದ ಬಿರಿಯಾನಿಗೆ ಅಗ್ರಸ್ಥಾನ: ಸ್ವಿಗ್ಗಿಯಲ್ಲಿ 93 ಮಿಲಿಯನ್ ಬಿರಿಯಾನಿ ಆರ್ಡರ್

ಇಂದು ನಡೆದ ಈ ಪ್ರತಿಭಟನೆಯಲ್ಲಿ ಸುಮಾರು 1.7 ಲಕ್ಷ ವಿತರಣಾ ಸಿಬ್ಬಂದಿ ಭಾಗವಹಿಸಿದ್ದಾರೆ. ಇದು ಸ್ವಿಗ್ಗಿ, ಜೊಮಾಟೊ, ಜೆಪ್ಟೊ ಮತ್ತು ಅಮೆಜಾನ್ ನಡೆಸುವ ತ್ವರಿತ-ಡೆಲಿವರಿ ಸೇವೆಗಳನ್ನು ಅಡ್ಡಿಪಡಿಸುವ ಸಾಧ್ಯತೆಯಿದೆ.

“ನಮ್ಮ ಬೇಡಿಕೆಗಳು ಸ್ಪಷ್ಟವಾಗಿವೆ. ಅಪಘಾತಗಳು, ಗಾಯಗಳು ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿರುವ 10 ನಿಮಿಷಗಳ ಡೆಲಿವರಿ ವ್ಯವಸ್ಥೆಯನ್ನು ತೆಗೆದುಹಾಕಬೇಕೆಂದು ನಾವು ಬಯಸುತ್ತೇವೆ” ಎಂದು ಗಿಗ್ ಕಾರ್ಮಿಕ ಸಲಾವುದ್ದೀನ್ ಹೇಳಿದ್ದಾರೆ. ಗಿಗ್ ಕಾರ್ಮಿಕರನ್ನು ರಕ್ಷಿಸಲು ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:48 pm, Wed, 31 December 25

Source link

ಈ ಅಭ್ಯಾಸಗಳಿರುವವರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಹೆಚ್ಚು; ಈ ಬಗ್ಗೆ ಜಾಗೃತೆ ವಹಿಸಬೇಕು ಎನ್ನುತ್ತಾರೆ ಡಾ. ಸಂತೋಷ್

ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲಿಯೂ ಚಳಿಗಾಲದಲ್ಲಿ ಈ ಸಮಸ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಈ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿದಿರುವುದು ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ನಮ್ಮ ನಿರ್ಲಕ್ಷ್ಯವೇ ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಪಡೆಯಲು ವೈಟ್ ಫೀಲ್ಡ್ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಲಾಜಿಸ್ಟ್ ಆಗಿರುವ ಡಾ. ಸಂತೋಷ್ ಎನ್ ಎಸ್ (Dr. Santhosh N.S) ಅವರನ್ನು ಸಂಪರ್ಕಿಸಿತ್ತು. ಈ ವಿಷಯದ ಕುರಿತಂತೆ ಅವರು ಹೆಚ್ಚಿನ ಮಾಹಿತಿ ನೀಡಿದ್ದು ಸ್ಟ್ರೋಕ್ ಗಳಲ್ಲಿ ಕಂಡು ಬರುವ ವಿಧಗಳು ಮತ್ತು ಅವು ಕಂಡುಬರುವುದಕ್ಕೆ ಕಾರಣಗಳು ಸೇರಿದಂತೆ ಅವುಗಳ ಲಕ್ಷಣಗಳ ಬಗ್ಗೆ ವಿವರಿಸಿದ್ದು ಎಷ್ಟು ಗಂಟೆಯೊಳಗೆ ಸ್ಟ್ರೋಕ್ ಆದವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಬೇಕು ಎನ್ನುವುದರ ಬಗ್ಗೆ ಮಾತನಾಡಿದ್ದು ಮತ್ತಷ್ಟು ಮಾಹಿತಿ ಪಡೆಯಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Source link

‘ಜನ ನಾಯಗನ್’ ಆಡಿಯೋ ಲಾಂಚ್ ಕಾರ್ಯಕ್ರಮ ಒಟಿಟಿಯಲ್ಲಿ: ಎಲ್ಲಿ? ಯಾವಾಗ? – Kannada News | Jana Nayagan movie audio launch function to stream on OTT

ದಳಪತಿ ವಿಜಯ್ (Thalapathy Vijay) ನಟಿಸಿರುವ ‘ಜನ ನಾಯಗನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದೆ. ವಿಜಯ್ ಸಾಮಾನ್ಯವಾಗಿ ಯಾವುದೇ ಸಂದರ್ಶನ ನೀಡಿ ಸಿನಿಮಾ ಪ್ರಚಾರ ಮಾಡುವುದಿಲ್ಲ ಬದಲಿಗೆ ಸಿನಿಮಾ ಬಿಡುಗಡೆಗೆ ಮುಂಚೆ ಒಂದು ಆಡಿಯೋ ಲಾಂಚ್ ಕಾರ್ಯಕ್ರಮ ಆಯೋಜಿಸುತ್ತಾರೆ, ಅಲ್ಲಿಯೇ ಸಿನಿಮಾ ಬಗ್ಗೆ, ಸಹ ನಟರುಗಳು ಬಗ್ಗೆ ಮಾತನಾಡುತ್ತಾರೆ. ಈ ಬಾರಿಯೂ ಸಹ ‘ಜನ ನಾಯಗನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಬಲು ಅದ್ಧೂರಿಯಾಗಿ ಮಲೇಷಿಯಾನಲ್ಲಿ ಆಯೋಜಿಸಲಾಗಿತ್ತು. ದೂರದ ಮಲೇಷಿಯಾನಲ್ಲಿ ಕಾರ್ಯಕ್ರಮ ನಡೆದಿದ್ದರಿಂದ ಕಾರ್ಯಕ್ರಮವನ್ನು ಯೂಟ್ಯೂಬ್​​ನಲ್ಲಿ ಆದರೂ ನೋಡಲು ಅಭಿಮಾನಿಗಳು ಕಾತರರಾಗಿದ್ದರು, ಆದರೆ ಚಿತ್ರತಂಡ ಅಭಿಮಾನಿಗಳಿಗೆ ಶಾಕ್ ನೀಡಿದೆ.

‘ಜನ ನಾಯಗನ್’ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮ ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗುತ್ತಿಲ್ಲ ಬದಲಿಗೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಈ ಹಿಂದೆಲ್ಲ ವಿಜಯ್ ಅವರ ಯಾವುದೇ ಸಿನಿಮಾದ ಆಡಿಯೋ ಲಾಂಚ್ ಅಥವಾ ಪ್ರೀ ರಿಲೀಸ್ ಕಾರ್ಯಕ್ರಮ ಯೂಟ್ಯೂಬ್​​ನಲ್ಲಿ ಲೈವ್ ಮಾಡಲಾಗುತ್ತಿತ್ತು, ಅಥವಾ ಕಾರ್ಯಕ್ರಮ ನಡೆದ ಒಂದೆರಡು ದಿನಗಳ ಬಳಿಕ ಯೂಟ್ಯೂಬ್​​ನಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕಾರ್ಯಕ್ರಮವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆವಿಎನ್​ನವರು ‘ಜನ ನಾಯಗನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ಪ್ರಸಾರ ಹಕ್ಕನ್ನು ಒಟಿಟಿಗೆ ಮಾರಾಟ ಮಾಡಿದ್ದಾರೆ. ಅದೂ ದೊಡ್ಡ ಮೊತ್ತಕ್ಕೆ ಈ ಡೀಲ್ ನಡೆದಿದೆ ಎನ್ನಲಾಗುತ್ತಿದೆ. ಇದೀಗ ‘ಜನ ನಾಯಗನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಜೀ5 ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಜನವರಿ 4 ರಂದು ಜೀ5ನಲ್ಲಿ ಅಭಿಮಾನಿಗಳು ‘ಜನ ನಾಯಗನ್’ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ವಿವರವಾಗಿ ನೋಡಬಹುದಾಗಿದೆ.

ಇದನ್ನೂ ಓದಿ:‘ಜನ ನಾಯಗನ್ ಬಳಿಕ ಸಿನಿಮಾ ಮಾಡ್ತೀರಾ?’; ಉತ್ತರಿಸಿದ ದಳಪತಿ ವಿಜಯ್

ಮಲೇಷಿಯಾನಲ್ಲಿ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಜಯ್, ‘ಜನ ನಾಯಗನ್’ ಸಿನಿಮಾದ ಜೊತೆಗೆ ಅಭಿಮಾನಿಗಳ ಬಗ್ಗೆಯೂ ಭಾವುಕವಾಗಿ ಮಾತನಾಡಿದ್ದರು. ಮರಳಿನಲ್ಲಿ ಮನೆ ಕಟ್ಟಿಕೊಳ್ಳಲು ಬಂದ ನನಗೆ ದೊಡ್ಡ ಕೋಟೆಯನ್ನೇ ಅಭಿಮಾನಿಗಳು ಕಟ್ಟಿದ್ದಾರೆ, ಆದರೆ ಅವರಿಗಾಗಿ ನಾನು ಏನೂ ಕೊಟ್ಟಿಲ್ಲ, ಹಾಗಾಗಿ ಮುಂದಿನ ಮೂವತ್ತು ವರ್ಷ ನಾನು ನನ್ನ ಅಭಿಮಾನಿಗಳಿಗಾಗಿ ದುಡಿಯಲಿದ್ದೇನೆ, ತಮ್ಮ ಎಲ್ಲವನ್ನೂ ನನಗೆ ಕೊಟ್ಟಿರುವ ಅಭಿಮಾನಿಗಳಿಗಾಗಿ ನಾನು ಸಿನಿಮಾವನ್ನೇ ಬಿಟ್ಟುಕೊಟ್ಟಿದ್ದೇನೆ’ ಎಂದಿದ್ದಾರೆ ವಿಜಯ್. ವೇದಿಕೆ ಮೇಲೆ ಹಾಡು ಹಾಡಿ, ಡ್ಯಾನ್ಸ್ ಸಹ ಮಾಡಿದ್ದಾರೆ ವಿಜಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:02 pm, Wed, 31 December 25

Source link

ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ 7 ಜನ ಸಾವು; ಆಸ್ಪತ್ರೆಯಲ್ಲಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ ಸಿಎಂ – Kannada News | Madhya Pradesh CM Mohan Yadav meets the people hospitalised in Indore after drinking contaminated water

ಇಂದೋರ್‌, ಡಿಸೆಂಬರ್ 31: ಮಧ್ಯಪ್ರದೇಶದ ಇಂದೋರ್‌ನಲ್ಲಿ (Indore) ಕಲುಷಿತ ನೀರು ಸೇವನೆಯಿಂದ 7 ಜನರು ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಜನರನ್ನು ಭೇಟಿಯಾದರು. ಮುನ್ನೆಚ್ಚರಿಕಾ ಕ್ರಮವಾಗಿ ಮುನ್ಸಿಪಲ್ ಕಾರ್ಪೊರೇಷನ್ ಮನೆಗಳಿಗೆ ನೀರು ಸರಬರಾಜು ಮಾಡುತ್ತಿದೆ, ಯಾವುದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.

ಇಂದೋರ್‌ನ ಭಾಗೀರಥಪುರ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಕೊಳಕು ನೀರಿನ ಬಗ್ಗೆ ದೂರುಗಳು ಬರುತ್ತಿದ್ದರೂ ಇನ್ನೂ ಯಾವುದೇ ಪರಿಹಾರ ಕಂಡುಬಂದಿಲ್ಲ. ಈ ಪ್ರದೇಶದಲ್ಲಿ ವಾಂತಿ, ಅತಿಸಾರ, ಹೊಟ್ಟೆ ನೋವು ಮತ್ತು ವೀಕ್​​ನೆಸ್​​ನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಸುಮಾರು 2,000 ಜನರು ಇದರಿಂದ ಬಾಧಿತರಾಗಿದ್ದಾರೆ ಎಂದು ವರದಿಯಾಗಿದೆ. ಇಂದೋರ್‌ನ ವಿವಿಧ ಆಸ್ಪತ್ರೆಗಳಿಗೆ ಅನೇಕ ರೋಗಿಗಳು ದಾಖಲಾಗಿದ್ದಾರೆ. 25 ರಿಂದ 30 ಆರೋಗ್ಯ ಇಲಾಖೆಯ ತಂಡಗಳು ಮನೆ-ಮನೆ ಸಮೀಕ್ಷೆಗಳನ್ನು ನಡೆಸುತ್ತಿವೆ. ಇಲ್ಲಿಯವರೆಗೆ, 1,100 ಕ್ಕೂ ಹೆಚ್ಚು ಮನೆಗಳನ್ನು ಪರಿಶೀಲಿಸಲಾಗಿದೆ ಮತ್ತು ನಿವಾಸಿಗಳು ಕುಡಿಯುವ ಮೊದಲು ತಮ್ಮ ನೀರನ್ನು ಕುದಿಸಿ ಕುಡಿಯಲು ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link