Category Archives: Blog

Your blog category

ಬೆಂಗಳೂರು: ಕೋಗಿಲು ಲೇಔಟ್ ನಿರಾಶ್ರಿತರಿಗೆ ವಸತಿ ಭಾಗ್ಯ; ಮನೆ ಹಸ್ತಾಂತರಕ್ಕೆ ದಿನಾಂಕ ನಿಗದಿ – Kannada News | Bengaluru: Kogilu Housing Project Handover on January 2, Victims to Receive New Homes

ಬೆಂಗಳೂರು, ಡಿಸೆಂಬರ್​ 31: ಕೋಗಿಲು (Kogilu) ಸುತ್ತ ರಾಜಕೀಯ ಜಟಾಪಟಿ ಜೋರಾಗಿ ನಡೆಯುತ್ತಿದೆ. ಇದೇ ವಿಚಾರ ಮುಂದಿಟ್ಟುಕೊಂಡು ವಿಪಕ್ಷ ಬಿಜೆಪಿ ಸರ್ಕಾರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ. ಕೋಗಿಲು ಲೇಔಟ್​ನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದವರಿಗೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ಕೊಡುತ್ತಿದೆ. ಇದೀಗ ಜನವರಿ 2ರಂದು ಕೋಗಿಲು ನಿರಾಶ್ರಿತರಿಗೆ ಮನೆ (home) ಹಸ್ತಾಂತರಕ್ಕೆ ಸರ್ಕಾರ ದಿನಾಂಕ ನಿಗದಿ ಮಾಡಿದೆ.

ನಿರಾಶ್ರಿತರಿಗೆ ವಸತಿ ಭಾಗ್ಯ

ಯಲಹಂಕ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ಹಿನ್ನೆಲೆ ಅರ್ಹ ಸಂತ್ರಸ್ತರಿಗೆ ಜಿಬಿಎ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಪರ್ಯಾಯವಾಗಿ ಶಾಶ್ವತ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಜಿಬಿಎ, ಕಂದಾಯ, ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಕೋಗಿಲಿನಲ್ಲಿ ಸರ್ವೆ ಮುಗಿಸಿದ್ದಾರೆ.

ಇದನ್ನೂ ಓದಿ: ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್? ಎನ್​ಐಎ ತನಿಖೆಗೆ ಆಗ್ರಹಿಸಿದ ಅಶೋಕ್

ನಿರಾಶ್ರಿತರ ಬಗ್ಗೆ ಸಮಗ್ರವಾಗಿ ದಾಖಲೆ ಪರಿಶೀಲನೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಹೀಗಾಗಿ ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಕಾರ್ಯ ನಡೆದಿದ್ದು, 2026 ಜನವರಿ 2ರಂದು ಮನೆಗಳ ಹಸ್ತಾಂತರಕ್ಕೆ ನಿರ್ಧರಿಸಲಾಗಿದೆ.

ಬಂಡೆ ಹೊಸೂರಿನ ಬೈಯಪ್ಪನಹಳ್ಳಿಯಲ್ಲಿರೋ ಅಪಾರ್ಟ್​ಮೆಂಟ್​ನಲ್ಲಿ ಸುಮಾರು 1ಸಾವಿರಕ್ಕೂ ಹೆಚ್ಚು 1 BHK ಫ್ಲ್ಯಾಟ್​ಗಳಿವೆ. ಸದ್ಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿವೆ. ಇದೇ ಅಪಾರ್ಟ್​​ಮೆಂಟ್​ನಲ್ಲಿ ನಿರಾಶ್ರಿತರಿಗೆ ಮನೆ ಕೊಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಕೋಗಿಲು ಲೇಔಟ್​​ ನಿರಾಶ್ರಿತರ ಬಗ್ಗೆ ಅಶೋಕ್​​ ಸ್ಫೋಟಕ ಮಾಹಿತಿ: ಸಂತ್ರಸ್ತರ ಸತ್ಯ ಬಿಚ್ಚಿಟ್ಟ ವಿಪಕ್ಷ ನಾಯಕ

ಹೀಗೆ ಸರ್ಕಾರ ಕೋಗಿಲಿನ ನಿವಾಸಿಗಳಿಗೆ ಸೂರು ಕಲ್ಪಿಸಿಕೊಡುತ್ತಿದೆ. ಆದರೆ ಮನೆ ಕಳೆದುಕೊಂಡು ದಶಕಗಳೇ ಉರುಳಿದರೂ ರಾಜ್ಯ ಅನೇಕ ಕಡೆಯ ಜನರ ನೆರವಿಗೆ ಸರ್ಕಾರಗಳು ಹೋಗಿಲ್ಲ. ಲಿಂಗನಮಕ್ಕಿ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡವರು ಕಳೆದ 65 ವರ್ಷದಿಂದ ಹಕ್ಕುಪತ್ರಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಸರ್ಕಾರಗಳು ಇವರನ್ನ ಕಣ್ಣೆತ್ತಿಯೂ ನೋಡಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

FSSAI Recruitment 2025: FSSAIನಲ್ಲಿ ಆಹಾರ ವಿಶ್ಲೇಷಕ ಹುದ್ದೆಗಳಿಗೆ ನೇಮಕಾತಿ; ಹೀಗೆ ಅರ್ಜಿ ಸಲ್ಲಿಸಿ – Kannada News | FSSAI Food Analyst Recruitment 2025: Apply Online for Government Jobs

ಸರ್ಕಾರಿ ಉದ್ಯೋಗಗಳನ್ನು ಹುಡುಕುತ್ತಿರುವ ಯುವಕರಿಗಾಗಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಆಹಾರ ವಿಶ್ಲೇಷಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಗೆ ಜನವರಿ 22 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಆಹಾರ ಸುರಕ್ಷತೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸರ್ಕಾರಿ ವೃತ್ತಿಜೀವನವನ್ನು ಬಯಸುವ ಅಭ್ಯರ್ಥಿಗಳಿಗೆ ಇದು ವಿಶೇಷ ಅವಕಾಶವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕಗಳಲ್ಲಿ ಅಧಿಕೃತ ವೆಬ್‌ಸೈಟ್ fssai.gov.in ನಲ್ಲಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆಹಾರ ವಿಶ್ಲೇಷಣೆ, ರಸಾಯನಶಾಸ್ತ್ರ ಅಥವಾ ಸಂಬಂಧಿತ ವೈಜ್ಞಾನಿಕ ಕ್ಷೇತ್ರಗಳಲ್ಲಿ ಅರ್ಹತೆ ಮತ್ತು ಅಗತ್ಯ ಅನುಭವ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆಗಳು:

ಆಹಾರ ವಿಶ್ಲೇಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ರಸಾಯನಶಾಸ್ತ್ರ, ಡೈರಿ ರಸಾಯನಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಆಹಾರ ತಂತ್ರಜ್ಞಾನ, ಆಹಾರ ಸುರಕ್ಷತೆ, ಕೃಷಿ ವಿಜ್ಞಾನ, ಜೀವರಸಾಯನಶಾಸ್ತ್ರ ಸೇರಿದಂತೆ 14 ಮಾನ್ಯತೆ ಪಡೆದ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ/ಪಿಜಿ/ಪಿಎಚ್‌ಡಿ ಪದವಿಯನ್ನು ಹೊಂದಿರಬೇಕು. ಇದಲ್ಲದೆ, ಇನ್‌ಸ್ಟಿಟ್ಯೂಟ್ ಆಫ್ ಕೆಮಿಸ್ಟ್ಸ್ ಇಂಡಿಯಾದಿಂದ ಆಹಾರ ವಿಶ್ಲೇಷಕ ವಿಭಾಗ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಅಭ್ಯರ್ಥಿಯು ಆಹಾರ ವಿಶ್ಲೇಷಣೆಯಲ್ಲಿ ಕನಿಷ್ಠ 3 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.

ಅರ್ಜಿ ಶುಲ್ಕ:

ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಾಯೋಗಿಕ ಪರೀಕ್ಷೆಗೆ ರೂ. 2500 ಮತ್ತು ರೂ. 5000 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು. ಅರ್ಜಿಯನ್ನು ಸಲ್ಲಿಸಿದ ನಂತರ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಆಯ್ಕೆ ಪ್ರಕ್ರಿಯೆ:

FSSAI ಆಹಾರ ವಿಶ್ಲೇಷಕರ ನೇಮಕಾತಿ ಆಯ್ಕೆಯನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲ ಹಂತವು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, ಇದರಲ್ಲಿ ಆಹಾರ ರಸಾಯನಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಆಹಾರ ಸುರಕ್ಷತೆ ಮತ್ತು ಸಂಬಂಧಿತ ವಿಷಯಗಳಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ. CBT ಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಎರಡನೇ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಎರಡನೇ ಹಂತವು ಪ್ರಾಯೋಗಿಕ ಪರೀಕ್ಷೆಯಾಗಿದ್ದು, ಇದರಲ್ಲಿ ಪ್ರಯೋಗಾಲಯದ ಕೆಲಸ ಮತ್ತು ಆಹಾರ ವಿಶ್ಲೇಷಣೆಗೆ ಸಂಬಂಧಿಸಿದ ಕೌಶಲ್ಯಗಳನ್ನು ಪರೀಕ್ಷಿಸಲಾಗುತ್ತದೆ. ಎರಡು ಹಂತಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು FSSAI ಅಧಿಕೃತ ವೆಬ್‌ಸೈಟ್ fssai.gov.in ಗೆ ಭೇಟಿ ನೀಡಿ.
  • ಅಭ್ಯರ್ಥಿಗಳು ಮುಖಪುಟದಲ್ಲಿರುವ ಆಹಾರ ವಿಶ್ಲೇಷಕರ ನೇಮಕಾತಿ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಅದರ ನಂತರ, ಅಭ್ಯರ್ಥಿಗಳು ಮೊದಲು ನೋಂದಾಯಿಸಿಕೊಳ್ಳಬೇಕು ಮತ್ತು ಲಾಗಿನ್ ಐಡಿಯನ್ನು ರಚಿಸಬೇಕು.
  • ಈಗ ಅರ್ಜಿ ನಮೂನೆಯಲ್ಲಿ ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ನಂತರ ಅಭ್ಯರ್ಥಿಗಳು ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಬೇಕು.
  • ಈಗ ಫಾರ್ಮ್ ಅನ್ನು ಸಲ್ಲಿಸಿ ಮತ್ತು ಅದರ ಪ್ರಿಂಟ್​ ಕಾಪಿ ತೆಗೆದಿಟ್ಟುಕೊಳ್ಳಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:58 pm, Wed, 31 December 25

Source link

New Year 2026: ಹೊಸ ವರ್ಷ ಅದ್ಧೂರಿಯಾಗಿ ಸ್ವಾಗತಿಸಿದ ಮೊದಲ ದೇಶ ನ್ಯೂಜಿಲೆಂಡ್‌; ಪಟಾಕಿ ಸಿಡಿಸಿ ಸಂಭ್ರಮಿಸಿದ ಜನ – Kannada News | New Year 2026: New Zealand Welcomes the New Year with Spectacular Fireworks, Watch Video

ನ್ಯೂಜಿಲೆಂಡ್‌, ಡಿಸೆಂಬರ್​​ 31: ನ್ಯೂಜಿಲೆಂಡ್‌ನ ಆಕ್ಲೆಂಡ್ ನಗರ 2026ರ ಹೊಸವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡಿತು. ಜಗತ್ತಿನಲ್ಲಿ ಮೊದಲಿಗೆ ಹೊಸವರ್ಷವನ್ನು ಸ್ವಾಗತಿಸುವ ಸ್ಥಳಗಳಲ್ಲಿ ಒಂದಾದ ಆಕ್ಲೆಂಡ್‌ನಲ್ಲಿ ಮಧ್ಯರಾತ್ರಿ 12 ಗಂಟೆಗೆ ಜನರು ಕೇಕ್ ಕತ್ತರಿಸಿ, ವರ್ಣರಂಜಿತ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ನ್ಯೂಜಿಲೆಂಡ್‌ನ ಜನತೆ 2026ರ ವರ್ಷವನ್ನು ಸಡಗರ ಮತ್ತು ಉತ್ಸಾಹದಿಂದ ಬರಮಾಡಿಕೊಂಡರು. ಹೊಸ ವರ್ಷಾಚರಣೆಯ ವಿಡಿಯೋ ಇಲ್ಲಿದೆ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ – Kannada News | Bigg Boss Kannada: Spandana and Rashika engaged in a fight

ಬಿಗ್​​ಬಾಸ್ (Bigg Boss) ಮನೆಯಲ್ಲಿ ಜಗಳ, ಪ್ರೀತಿ, ಗಲಾಟೆ ಎಲ್ಲವೂ ಮಾಮೂಲು. ಟಾಸ್ಕ್ ಬಂದಾಗಲಂತೂ ಮೆತ್ತಗಿದ್ದವರೂ ಸಹ ಗಟ್ಟಿಯಾಗಿ ಜಗಳಕ್ಕೆ ನಿಲ್ಲುತ್ತಾರೆ. ಕೆಲವೊಮ್ಮೆ ಕೈ-ಕೈ ಮಿಲಾಯಿಸಿದ್ದೂ ಸಹ ಇದೆ. ಸ್ಪಂದನಾ ಬಿಗ್​​ಬಾಸ್ ಮನೆಯಲ್ಲಿ ದಂತದ ಬೊಂಬೆಯಂತೆ ಇದ್ದಾರೆ. ಹೆಚ್ಚಾಗಿ ಟಾಸ್ಕ್​​ಗಳಲ್ಲಿ ಇನ್ನಿತರೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವಾದರೂ ತಮ್ಮ ಅಂದ, ಮುದ್ದಾದ ಮಾತುಗಳಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಆದರೆ ಅವಶ್ಯಕತೆ ಬಂದರೆ ತಾವು ಕೈ-ಕೈ ಮಾಲಿಸುವುದಕ್ಕೂ ಸೈ ಎಂಬುವನ್ನು ಅವರು ತೋರಿಸಿಕೊಟ್ಟಿದ್ದಾರೆ. ಇದೀಗ ಟಾಸ್ಕ್ ಒಂದಕ್ಕೆ ಸಂಬಂಧಿಸಿದಂತೆ ರಾಶಿಕಾ ಮೇಲೆ ಕುಸ್ತಿ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಹೊಸ ವರ್ಷಾಚರಣೆ ದಿನವೇ ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲಿವರಿ ಬಾಯ್ಸ್​​​

ಬೆಂಗಳೂರು, ಡಿ.31: ಆಹಾರ ಡೆಲಿವರಿ ಬಾಯ್​​ಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದಾಗಿ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಡೆಲಿವರಿ ಬಾಯ್‌ಗಳ ಮುಖ್ಯ ಬೇಡಿಕೆಗಳಲ್ಲಿ ಉತ್ತಮ ಸಂಭಾವನೆ, ವೇಗದ ಆಹಾರ ವಿತರಣೆಗೆ ಅನಗತ್ಯ ಒತ್ತಡವನ್ನು ಕಡಿಮೆ ಮಾಡುವುದು, ಅಪಘಾತಗಳು ಸಂಭವಿಸಿದಾಗ ಕಂಪನಿಗಳಿಂದ ಸೂಕ್ತ ಬೆಂಬಲ ಸಿಗದಿರುವುದು ಮತ್ತು ವ್ಯವಸ್ಥಿತ ಚೌಕಟ್ಟಿನ ಕೊರತೆ ಸೇರಿವೆ. ಗ್ರಾಹಕರು 10-15 ನಿಮಿಷಗಳಲ್ಲಿ ಆಹಾರ ತಲುಪಿಸುವಂತೆ ನಿರೀಕ್ಷಿಸಿದರೆ, ರೆಸ್ಟೋರೆಂಟ್‌ಗಳಲ್ಲಿ ಆರ್ಡರ್ ಸಿದ್ಧಗೊಳ್ಳಲು 30-40 ನಿಮಿಷಗಳಿಂದ ಒಂದು ಗಂಟೆಯವರೆಗೆ ಸಮಯ ತೆಗೆದುಕೊಳ್ಳುತ್ತದೆ. ಈ ವಿಳಂಬದಿಂದಾಗಿ ಗ್ರಾಹಕರು ದೂರು ನೀಡಿದಾಗ, ಡೆಲಿವರಿ ಪಾಲುದಾರರಿಗೆ ಪೆನಾಲ್ಟಿ ವಿಧಿಸಲಾಗುತ್ತದೆ ಅಥವಾ ಅವರ ರೇಟಿಂಗ್‌ಗಳನ್ನು ಕಡಿಮೆ ಮಾಡಲಾಗುತ್ತದೆ. ಇದು ಅವರ ಆದೇಶಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ನಗರಗಳ ಸಂಚಾರ ದಟ್ಟಣೆಯು ಸಮಯಕ್ಕೆ ತಲುಪಲು ಅಡ್ಡಿಯಾಗುತ್ತದೆ, ಇದರಿಂದ ಮತ್ತಷ್ಟು ಸಮಸ್ಯೆಗಳು ಉಂಟಾಗುತ್ತವೆ. ಈ ಪ್ರತಿಭಟನೆ ಕೇವಲ ಬೆಂಗಳೂರು ಅಥವಾ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ಬದಲಾಗಿ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಂದೆಯಿಂದಲೇ ‘ಫಾದರ್’ ಸಿನಿಮಾದ ಥೀಮ್ ವಿಡಿಯೋ ಬಿಡುಗಡೆ ಮಾಡಿಸಿದ ಆರ್. ಚಂದ್ರು – Kannada News | R Chandru Father Movie Theme Video Released Ft Darling Krishna and Prakash Raj

‘ಆರ್‌.ಸಿ. ಸ್ಟುಡಿಯೋಸ್‌’ ಮೂಲಕ ‘ಫಾದರ್’ ಸಿನಿಮಾ (Father Movie) ನಿರ್ಮಾಣ ಆಗುತ್ತಿದೆ. ಆರ್. ಚಂದ್ರು ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಬಿಡುಗಡೆಗೆ ಈ ಚಿತ್ರ ಸಿದ್ಧವಾಗಿದೆ. ಈಗ ‘ಫಾದರ್’ ಸಿನಿಮಾದ ಥೀಮ್ ವಿಡಿಯೋ ರಿಲೀಸ್ ಮಾಡಲಾಗಿದೆ. ಸಿನಿಮಾದ ಕಥಾವಸ್ತುವಿಗೆ ತಕ್ಕಂತೆಯೇ ಚಂದ್ರು (R, Chandru) ಅವರು ತಂದೆ ರಾಮಣ್ಣ ಅವರಿಂದಲೇ ಈ ಸಿನಿಮಾದ ಥೀಮ್ ವಿಡಿಯೋ ಬಿಡುಗಡೆ ಮಾಡಿಸಿದರು. ಈ ಚಿತ್ರದಲ್ಲಿ ಪ್ರಕಾಶ್ ರಾಜ್, ಡಾರ್ಲಿಂಗ್ ಕೃಷ್ಣ (Darling Krishna), ಅಮೃತಾ ಅಯ್ಯಂಗಾರ್ ಮುಂತಾದವರು ನಟಿಸಿದ್ದಾರೆ.

ನಿರ್ದೇಶಕ ರಾಜ್‌ ಮೋಹನ್‌ ಅವರು ‘ಫಾದರ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಇದೊಂದು ಎಮೋಷನಲ್ ಸಿನಿಮಾ ಆಗಿರಲಿದೆ. ಅಪ್ಪ-ಮಗನ ಬಾಂಧವ್ಯದ ಕಥೆ ಈ ಚಿತ್ರದಲ್ಲಿ ಇರಲಿದೆ. ‘ಟಗರು ಪಲ್ಯ’ ಖ್ಯಾತಿಯ ನಾಗಭೂಷಣ ಅವರು ಕೂಡ ಈ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದಾರೆ.

ಮೈಸೂರು, ಧರ್ಮಸ್ಥಳ, ಮಂಗಳೂರು, ಬೆಂಗಳೂರು ಮತ್ತು ವಾರಾಣಸಿಯಲ್ಲಿ ‘ಫಾದರ್’ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ಸುಜ್ಞಾನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ನಕುಲ್‌ ಅಭ್ಯಂಕರ್ ಅವರು ಸಂಗೀತ ನೀಡಿದ್ದಾರೆ. ‘ಎಲ್ಲರಿಗೂ ಒಳ್ಳೆಯದಾಗಲಿ. ಫಾದರ್ ಸಿನಿಮಾ ಚೆನ್ನಾಗಿ ಹಿಟ್ ಆಗಲಿ. ಎಲ್ಲ ಭಾಷೆಯ ಜನರು ಇದನ್ನು ನೋಡಲಿ. ಕಥೆ ಚೆನ್ನಾಗಿದೆ’ ಎಂದು ಆರ್. ಚಂದ್ರು ತಂದೆ ರಾಮಣ್ಣ ಅವರು ಹೇಳಿದರು.

‘ಫಾದರ್’ ಚಿತ್ರದ ಥೀಮ್ ವಿಡಿಯೋ:

ಈ ವೇಳೆ ಡಾರ್ಲಿಂಗ್ ಕೃಷ್ಣ ಅವರು ಮಾತನಾಡಿದರು. ‘ಈ ರೀತಿಯ ಕಥೆ ಬಹಳ ಅಪರೂಪ. ಒಮ್ಮೆ ಕೇಳಿದ ತಕ್ಷಣ ವಾವ್ ಎನಿಸಿತು. ತಂದೆ-ಮಗನ ಎಮೋಷನ್ ಮೀರಿದ ಹಲವು ಅಂಶಗಳು ಈ ಚಿತ್ರದಲ್ಲಿ ಇವೆ. ಇದನ್ನು ನಾನು ಮಾಡಬಹುದಾ ಅಂತ ಭಯ ಆಗಿತ್ತು. ಕ್ಲೈಮ್ಯಾಕ್ಸ್​​ನಲ್ಲಿ ಆ ರೀತಿಯ ಅಂಶಗಳು ಇವೆ. ಈ ರೀತಿಯ ಕಥೆಯನ್ನು ನಾನು ಎಲ್ಲಿಯೂ ಕೇಳಿಲ್ಲ. ನಿರ್ದೇಶಕರು ಇಂತಹ ಒಂದು ಒಳ್ಳೆಯ ಕಥೆಯನ್ನು ಬರೆದಿದ್ದಕ್ಕೆ ಧನ್ಯವಾದಗಳು’ ಎಂದು ಡಾರ್ಲಿಂಗ್ ಕೃಷ್ಣ ಹೇಳಿದರು.

ಇದನ್ನೂ ಓದಿ: ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್

ಆರ್. ಚಂದ್ರ ಕೂಡ ಈ ವೇಳೆ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡರು. ‘ಸದಭಿರುಚಿಯ ಸಿನಿಮಾಗಳನ್ನು ಜನರು ಇಷ್ಟಪಟ್ಟು ನೋಡುತ್ತಾರೆ. ಎಲ್ಲರಿಗೂ ತಂದೆಯ ಮಹತ್ವನ್ನು ಥೀಮ್ ವಿಡಿಯೋದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಸಾಕಷ್ಟು ವಿಷಯ ಇದೆ. ನಿರ್ದೇಶಕ ರಾಜ್ ಮೋಹನ್ ಅವರು ತುಂಬ ಚೆನ್ನಾಗಿ ಕಥೆ ಬರೆದಿದ್ದಾರೆ. ಅವರು ಒಂದು ಲೈನ್ ಹೇಳಿದಾಗಲೇ ನನಗೆ ಇಷ್ಟ ಆಗಿತ್ತು’ ಎಂದು ಆರ್​. ಚಂದ್ರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬುರುಡೆ ಕೇಸ್​​ಗೆ ಎಂಟ್ರಿಕೊಟ್ಟ ಶ್ರೀಕ್ಷೇತ್ರ ಧರ್ಮಸ್ಥಳ: ಕೋರ್ಟ್​​ನಲ್ಲಿ ವಕಾಲತ್ತು ಸಲ್ಲಿಕೆ – Kannada News | Dharmasthala Temple Submits Advocacy Petition in Belthangady Court Over Mass Burial Case

ಬೆಳ್ತಂಗಡಿ, ಡಿಸೆಂಬರ್​​ 31: ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವಕಾಲತ್ತು ಸಲ್ಲಿಕೆಯಾಗಿದೆ. ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 39/2025ರ ಸಂಬಂಧ ಬೆಂಗಳೂರಿನ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ಹಾಗೂ ಪುತ್ತೂರಿನ ಮಹೇಶ್ ಕಜೆ ವಕಾಲತ್ತು ಸಲ್ಲಿಸಿದ್ದಾರೆ.

ಪ್ರಕರಣ ಸಂಬಂಧ ಸದ್ಯ ಎಸ್ಐಟಿ ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಕೂಡ ಸಲ್ಲಿಕೆಯಾಗಿದೆ. ಆ ವರದಿಯಲ್ಲಿ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿರೋದು ಬಹಿರಂಗವಾಗಿದ್ದರೂ ಆರೋಪಿಗಳ ವಿರುದ್ದ ಎಸ್ಐಟಿ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ವಾದಮಂಡನೆ ನಡೆಯಲಿದೆ. ಎಸ್​​ಐಟಿ ವರದಿ ಸಂಬಂಧ ಜ.3ರಂದು ಬೆಳ್ತಂಗಡಿ ಕೋರ್ಟ್ ಅದೇಶ ಮಾಡಲಿರುವ ಕಾರಣ ಈ ವಿಚಾರ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್​​ಗೆ ಮೇಜರ್​​ ಟ್ವಿಸ್ಟ್​​; SIT ತನಿಖೆಯಿಂದ ಕೊನೆಗೂ ಬಯಲಾಯ್ತು ಸತ್ಯ!

ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗ್ ಷಡ್ಯಂತ್ರ SIT ತನಿಖೆಯಲ್ಲಿಸಾಬೀತಾಗಿದೆ. ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ. ಜಯಂತ್ ಹಾಗೂ ಸುಜಾತಾ ಭಟ್ ಸೇರಿ ಆರೂ ಆರೋಪಿಗಳು ಅಪರಾಧ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಎಸ್​ಐಟಿ ದೃಢಪಡಿಸಿದೆ. ಹಣದ ಆಮಿಷಕ್ಕೆ ಒಳಗಾಗಿ ಎ೧ ಚಿನ್ನಯ್ಯ ಬುರುಡೆ ಕಥೆ ಕಟ್ಟಿದ್ದ. ಬುರುಡೆ ಗ್ಯಾಂಗ್ ಚಿನ್ನಯ್ಯನಿಗೆ ಹಣ ಕೊಟ್ಟು ಪುಸಲಾಯಿಸಿತ್ತು. ಅಪರಿಚಿತ ಶವಗಳನ್ನು ಹೂತಿದ್ದೇನೆಂದು ಚಿನ್ನಯ್ಯನಿಂದ ಸುಳ್ಳು ಹೇಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು ಎಂಬುದು ಬಯಲಾಗಿತ್ತು.

ಚಿನ್ನಯ್ಯನಿಗೆ ಮೊದಲಿಂದ ಪರಿಚಿತನಾಗಿದ್ದ ವಿಠ್ಠಲಗೌಡ ಮಹೇಶ್ ತಿಮರೋಡಿ ಮನೆಗೆ ಆತನನ್ನು ಕರೆದೊಯ್ದಿದ್ದ. ತಿಮರೋಡಿ ಮನೆಯಲ್ಲಿ ನಡೆದಿದ್ದ ಸಭೆಯಲ್ಲಿ ಮಟ್ಟಣ್ಣನವರ್, ಜಯಂತ್, ವಿಠ್ಠಲಗೌಡ ಭಾಗಿಯಾಗಿದ್ದು, ಧರ್ಮಸ್ಥಳ ಮೇಲ್ವಿಚಾರಕರ ವಿರುದ್ಧ ಪಿತೂರಿಗೆ ಪ್ಲ್ಯಾನ್ ನಡೆದಿತ್ತು. ಅದರಂತೆ ತಲೆ ಬುರುಡೆಯೊಂದನ್ನು ಚಿನ್ನಯ್ಯನಿಗೆ ಕೊಟ್ಟು ಪೊಲೀಸರಿಗೆ ದೂರು ಕೊಡಿಸಿದ್ದರು. ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ಕೊಡುವಂತೆ ಪ್ರೇರೇಪಿಸಿದ್ದರು ಎಂಬುದನ್ನು ಎಸ್​ಐಟಿ ವರದಿ ಈಗಾಗಲೇ ಬಹಿರಂಗಗೊಳಿಸಿದೆ. ಈ ನಡುವೆ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಕೋರ್ಟ್​​ನಲ್ಲಿ ವಕಾಲತ್ತು ಸಲ್ಲಿಕೆಯಾಗಿರೋದು ಪ್ರಕರಣಕ್ಕೆ ಹೊಸ ದಿಕ್ಕು ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

NABARD Recruitment 2025: ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್​ ನ್ಯೂಸ್​; ನಬಾರ್ಡ್​ನಲ್ಲಿ ಭರ್ಜರಿ ನೇಮಕಾತಿ – Kannada News | NABARD Young Professional Recruitment 2025: Apply Online for Govt Jobs

ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ ಗುಡ್​ ನ್ಯೂಸ್​ ಇಲ್ಲಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ಯುವ ವೃತ್ತಿಪರ ಕಾರ್ಯಕ್ರಮದಡಿ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 12 ರವರೆಗೆ ಅರ್ಜಿ ಸಲ್ಲಿಸಬಹುದು.

ಬ್ಯಾಂಕಿಂಗ್, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕನಸು ಕಾಣುವ ಯುವಕರಿಗೆ ಈ ನೇಮಕಾತಿ ಬಹಳ ಮುಖ್ಯವಾಗಿದೆ. ನಬಾರ್ಡ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿರುತ್ತದೆ. ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಯಾರು ಅರ್ಜಿ ಸಲ್ಲಿಸಬಹುದು?

ಈ ನೇಮಕಾತಿಯಲ್ಲಿ ಭಾಗವಹಿಸಲು, ಅಭ್ಯರ್ಥಿಯು ಸಂಬಂಧಿತ ಕ್ಷೇತ್ರ ಅಥವಾ ಸ್ಟ್ರೀಮ್‌ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಇದರೊಂದಿಗೆ, ನಿರ್ದಿಷ್ಟ ಕೆಲಸದ ಅನುಭವವೂ ಇರಬೇಕು. ಅರ್ಹತೆ ಮತ್ತು ಅನುಭವಕ್ಕೆ ಸಂಬಂಧಿಸಿದ ಎಲ್ಲಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ನಬಾರ್ಡ್ ಸ್ಪಷ್ಟಪಡಿಸಿದೆ.

ವಯಸ್ಸಿನ ಮಿತಿ:

ವಯಸ್ಸಿನ ಮಿತಿಗೆ ಸಂಬಂಧಿಸಿದಂತೆ, ನವೆಂಬರ್ 1, 2025 ರಂತೆ, ಅಭ್ಯರ್ಥಿಯ ಕನಿಷ್ಠ ವಯಸ್ಸು 21 ವರ್ಷಗಳು ಮತ್ತು ಗರಿಷ್ಠ ವಯಸ್ಸು 30 ವರ್ಷಗಳನ್ನು ಮೀರಬಾರದು. ವಯಸ್ಸಿನ ಮಿತಿ ನಿಯಮಗಳು ತುಂಬಾ ಸ್ಪಷ್ಟವಾಗಿವೆ, ಆದ್ದರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಮ್ಮ ವಯಸ್ಸನ್ನು ಪರಿಶೀಲಿಸಲು ಮರೆಯದಿರಿ.

ಆಯ್ಕೆ ಹೇಗೆ ಮಾಡಲಾಗುತ್ತದೆ?

ನಬಾರ್ಡ್ ಯುವ ವೃತ್ತಿಪರರ ಕಾರ್ಯಕ್ರಮದ ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. ಮೊದಲ ಹಂತದಲ್ಲಿ, ಬ್ಯಾಂಕ್ ರಚಿಸಿದ ಸಮಿತಿಯು ಸ್ವೀಕರಿಸಿದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸುತ್ತದೆ. ಈ ಸಮಯದಲ್ಲಿ, ಅಭ್ಯರ್ಥಿಗಳನ್ನು ಅವರ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

ಎರಡನೇ ಹಂತದಲ್ಲಿ, ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದ ನಂತರ, ಅತ್ಯುತ್ತಮ ಪ್ರದರ್ಶನ ನೀಡುವ ಅಭ್ಯರ್ಥಿಗಳ ಹೆಸರುಗಳೊಂದಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಸಂದರ್ಶನದಲ್ಲಿನ ಅರ್ಹತೆ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಆಯ್ಕೆಯನ್ನು ಸಂಪೂರ್ಣವಾಗಿ ಮಾಡಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?

ಈ ನೇಮಕಾತಿಗಾಗಿ ಅಭ್ಯರ್ಥಿಗಳು 150 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು. ಈ ಶುಲ್ಕವು ಜಿಎಸ್‌ಟಿಯಿಂದ ಪ್ರತ್ಯೇಕವಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಮಾತ್ರ ಪಾವತಿಸಬಹುದು. ಈ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ, ಅಂದರೆ ಒಮ್ಮೆ ಪಾವತಿಸಿದ ನಂತರ ಅದನ್ನು ಹಿಂತಿರುಗಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?

ಈ ನಬಾರ್ಡ್ ನೇಮಕಾತಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮೊದಲು ibpsreg.ibps.in/nabardoct25/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ವೆಬ್‌ಸೈಟ್‌ನ ಮುಖಪುಟದಲ್ಲಿ, “New registration” ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ನೋಂದಾಯಿಸಿ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ನೋಂದಣಿ ನಂತರ, ಅಭ್ಯರ್ಥಿಯು ಲಾಗಿನ್ ಆಗಿ ಅರ್ಜಿ ನಮೂನೆಯಲ್ಲಿ ಉಳಿದ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು. ಇದರೊಂದಿಗೆ, ಇತ್ತೀಚಿನ ಫೋಟೋ ಸಹಿಯನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದ ನಂತರ, ಅರ್ಜಿ ಶುಲ್ಕವನ್ನು ಪಾವತಿಸಬೇಕು ಮತ್ತು ಅಂತಿಮವಾಗಿ ಫಾರ್ಮ್ ಅನ್ನು ಸಲ್ಲಿಸಬೇಕು.

ಪ್ರಿಂಟ್ ಔಟ್ ತೆಗೆದುಕೊಳ್ಳುವುದು ಮುಖ್ಯ:

ಅರ್ಜಿಯನ್ನು ಸಲ್ಲಿಸಿದ ನಂತರ, ಅಭ್ಯರ್ಥಿಗಳು ಅರ್ಜಿ ನಮೂನೆಯ ಮುದ್ರಣವನ್ನು ತೆಗೆದುಕೊಂಡು ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಅರ್ಜಿಯ ಮುದ್ರಣವನ್ನು ತೆಗೆದುಕೊಳ್ಳಲು ಕೊನೆಯ ದಿನಾಂಕ ಜನವರಿ 27 ಎಂದು ನಬಾರ್ಡ್ ಸ್ಪಷ್ಟಪಡಿಸಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷಾಚರಣೆಗೆ ಬ್ರಿಗೇಡ್, ಎಂಜಿ ರೋಡ್ ಸಜ್ಜು: ಸ್ಪಾಟ್​​ಗಳತ್ತ ಜಮಾಯಿಸುತ್ತಿರುವ ಜನರು – Kannada News | Bengaluru Brigade Road and Church Street Gear Up for Grand New Year 2026 Celebrations with Tight Security and Extensive Preparations

ಬೆಂಗಳೂರು, ಡಿಸೆಂಬರ್​ 31: ಹೊಸ ವರ್ಷದ ಸಂಭ್ರಮಾಚರಣೆಗೆ ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್​ ಸ್ಟ್ರೀಟ್​​ ಸಕಲ ರೀತಿಯಲ್ಲೂ ಸಜ್ಜಾಗಿದೆ. ಎಲ್ಲೆಡೆ ಸಂಭ್ರಮ ಕಳೆಗಟ್ಟಿದೆ. ಪಾರ್ಟಿ ಹಾಟ್ ಸ್ಪಾಟ್​ಗಳಲ್ಲಿ ಜನರು ಜಮಾಯಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಂಚಾರ ಪೊಲೀಸರು ಚರ್ಚ್ ಸ್ಟ್ರೀಟ್​​ನಲ್ಲಿ ಬ್ಯಾರಿಕೇಡ್ ಸೇರಿದಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪಬ್​ಗಳ ಪ್ರವೇಶಕ್ಕೆ ಟಿಕೆಟ್​ ಬುಕ್ಕಿಂಗ್ ಸೋಲ್ಡ್​ಔಟ್ ಆಗಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಚಳಿಗಾಲದಲ್ಲೇಕೆ ಕೀಲು ನೋವು ಹೆಚ್ಚಾಗಿ ಕಂಡುಬರುತ್ತೆ ಗೊತ್ತಾ? ತಡೆಯಲು ಈ ಸಲಹೆ ಪಾಲಿಸುವುದನ್ನು ಮರೆಯಬೇಡಿ – Kannada News | Winter Joint Pain: Causes & Effective Solutions

ಚಳಿಗಾಲದಲ್ಲಿ ಕಂಡುಬರುವ ಕೀಲು ನೋವು

ಚಳಿಗಾಲದಲ್ಲಿ, ಅನೇಕರಿಗೆ ಕೀಲು ನೋವು (Joint Pain), ಬಿಗಿತದಿಂದ ನಡೆಯಲು ಅಥವಾ ಕುಳಿತುಕೊಳ್ಳಲು ತೊಂದರೆಯಾಗುತ್ತದೆ. ಅದರಲ್ಲಿಯೂ ಬೆಳಿಗ್ಗೆಯಿಂದ ಸಂಜೆವರೆಗೆ ಒಂದೇ ಜಾಗದಲ್ಲಿ ಕುಳಿತಲ್ಲಿಯೇ ಇದ್ದರೆ ಇಂತಹ ನೋವುಗಳು ಹೆಚ್ಚಾಗುತ್ತದೆ. ಶೀತ ಹೆಚ್ಚಾದಂತೆ, ದೇಹದ ಚಟುವಟಿಕೆಯೂ ಸೀಮಿತವಾಗುತ್ತದೆ, ಇದು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅನೇಕರು ಇದನ್ನು ನಿರ್ಲಕ್ಷಿಸುತ್ತಾರೆ, ಆದರೆ ಇದು ದಿನಕಳೆದಂತೆ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ಕೀಲು ನೋವು ವಯಸ್ಸಾದವರಿಗೆ ಮಾತ್ರವಲ್ಲ ಯುವ ಜನರಲ್ಲಿಯೂ ಕಂಡುಬರಬಹುದು. ಹಾಗಾಗಿ ಇಂತಹ ಸಮಯದಲ್ಲಿ ಕೀಲು ನೋವು ಏಕೆ ಹೆಚ್ಚಾಗುತ್ತದೆ, ಅದರ ಬಗ್ಗೆ ಯಾರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಅದನ್ನು ಹೇಗೆ ತಡೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಚಳಿಗಾಲದಲ್ಲಿ ಕೀಲು ನೋವು ಹೆಚ್ಚಾಗುವುದಕ್ಕೆ ಕಾರಣವೇನು?

ಡಾ. ಅಖಿಲೇಶ್ ಯಾದವ್ ಎನ್ನುವವರು ತಿಳಿಸಿರುವ ಮಾಹಿತಿ ಅನುಸಾರ ಚಳಿಗಾಲದಲ್ಲಿ, ತಾಪಮಾನದಲ್ಲಿನ ಇಳಿಕೆ, ಸ್ನಾಯು ಮತ್ತು ಕೀಲುಗಳು ಗಟ್ಟಿಯಾಗಲು ಪ್ರಾರಂಭಿಸುತ್ತವೆ, ಇದು ನೋವು ಮತ್ತು ಬಿಗಿತವನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಚಳಿಗಾಲದಲ್ಲಿ, ರಕ್ತದ ಹರಿವು ನಿಧಾನವಾಗಬಹುದು, ಸಾಕಷ್ಟು ಉಷ್ಣತೆ ಮತ್ತು ಪೋಷಣೆ ಕೀಲುಗಳನ್ನು ತಲುಪುವುದನ್ನು ತಡೆಯುತ್ತದೆ. ವಯಸ್ಸಾದವರು, ಸಂಧಿವಾತ ಮತ್ತು ಅಸ್ಥಿಸಂಧಿವಾತ ರೋಗಿಗಳು ಮತ್ತು ಈಗಾಗಲೇ ಕೀಲು ನೋವಿನಿಂದ ಬಳಲುತ್ತಿರುವವರಿಗೆ ಈ ಅಪಾಯ ಹೆಚ್ಚು. ಜೊತೆಗೆ ದೀರ್ಘಕಾಲದವರೆಗೆ ಒಂದೇ ಜಾಗದಲ್ಲಿ ಕುಳಿತುಕೊಳ್ಳುವ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡದವರಲ್ಲಿ ಈ ಸಮಸ್ಯೆ ಹೆಚ್ಚಾಗಬಹುದು. ಇನ್ನು ಕೆಲವು ಮಹಿಳೆಯರಲ್ಲಿ, ಹಾರ್ಮೋನುಗಳ ಬದಲಾವಣೆಗಳು ಮತ್ತು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯಿಂದಾಗಿ, ಕೀಲು ನೋವು ಕಂಡುಬರುತ್ತದೆ. ಸಮಯಕ್ಕೆ ಸರಿಯಾಗಿ ಗಮನ ನೀಡದಿದ್ದರೆ, ಈ ನೋವು ಕ್ರಮೇಣ ತೀವ್ರಗೊಳ್ಳುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೀಲು ನೋವು ಬರಬಾರದು ಎಂದರೆ ತಪ್ಪದೆ ಈ ಆಹಾರಗಳ ಸೇವನೆ ಮಾಡಿ

ಕೀಲು ನೋವು ಹೆಚ್ಚಾಗುವುದನ್ನು ತಡೆಯಲು ಈ ಸಲಹೆಯನ್ನು ಪಾಲಿಸಿ:

  • ನಿಮ್ಮ ದೇಹವನ್ನು ಆದಷ್ಟು ಬೆಚ್ಚಗಿಟ್ಟುಕೊಳ್ಳಿ.
  • ಪ್ರತಿದಿನ ಲಘು ವ್ಯಾಯಾಮ ಮತ್ತು ಸ್ಟ್ರೆಚಿಂಗ್ ಮಾಡಿ.
  • ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.
  • ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ.
  • ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸಿ.
  • ನೋವು ತೀವ್ರವಾಗಿದ್ದರೆ, ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link