Category Archives: Blog

Your blog category

Traditional Method: ವೆಂಕಟೇಶ್ವರನಿಗೆ ಹರಕೆ ಅಥವಾ ಮುಡುಪು ಕಟ್ಟುವ ಸರಿಯಾದ ವಿಧಾನ ಇಲ್ಲಿದೆ – Kannada News | Venkateshwara Offerings: The Traditional Method of Vows and Fulfillment

ಕಲಿಯುಗದ ದೈವ ಶ್ರೀ ವೆಂಕಟೇಶ್ವರನಿಗೆ ಹರಕೆ ಅಥವಾ ಮುಡುಪು ಕಟ್ಟುವ ಸಂಪೂರ್ಣ ವಿಧಾನದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಮನುಷ್ಯನು ಜೀವನದಲ್ಲಿ ಹಲವು ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತಾನೆ. ಇಂತಹ ಆಸೆಗಳನ್ನು ಈಡೇರಿಸಲು ಕಲಿಯುಗದಲ್ಲಿ ನೇರವಾಗಿ ಅನುಗ್ರಹಿಸುವ ದೈವ ಕಲೌ ವೆಂಕಟನಾಥ ಎಂಬ ನಂಬಿಕೆ ಇದೆ. ಶ್ರೀ ವೆಂಕಟೇಶ್ವರನು ಕಲಿಯುಗದ ದೇವರಾಗಿದ್ದು, ಭಕ್ತರ ಕೋರಿಕೆಗಳನ್ನು ಈಡೇರಿಸುವ ಶಕ್ತಿಯನ್ನು ಹೊಂದಿದ್ದಾನೆ. ಭಕ್ತಿ, ಶರಣಾಗತಿ ಮತ್ತು ಆತ್ಮವಿಶ್ವಾಸದಿಂದ ಹರಕೆ ಅಥವಾ ಮುಡುಪನ್ನು ಕಟ್ಟುವ ಮೂಲಕ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು. ಕನ್ನಡದಲ್ಲಿ ಹರಕೆ ಎಂದು ಕರೆಯಲಾಗುವ ಇದನ್ನು ತಿರುಪತಿ ಕ್ಷೇತ್ರದಲ್ಲಿ ಮುಡುಪು ಎಂದು ಕರೆಯುತ್ತಾರೆ. ಈ ಮುಡುಪನ್ನು ಕಟ್ಟುವ ಒಂದು ವಿಶಿಷ್ಟ ವಿಧಾನವಿದೆ.

ಯಾರು ಶ್ರದ್ಧಾಭಕ್ತಿಯಿಂದ ಸಂಕಲ್ಪ ಮಾಡಿಕೊಂಡು ಮುಡುಪನ್ನು ಕಟ್ಟುತ್ತಾರೋ, ಅವರ ಕಾರ್ಯಗಳು ಯಶಸ್ವಿಯಾದ ನಂತರ ಆ ಮುಡುಪಿನ ಸಮೇತ ಕ್ಷೇತ್ರಕ್ಕೆ ಭೇಟಿ ನೀಡಿ ಭಗವಂತನಿಗೆ ಅರ್ಪಿಸಿದರೆ ಶುಭವಾಗುತ್ತದೆ. ಈ ಹರಕೆ ಅಥವಾ ಮುಡುಪು ಹೇಗೆ ಇರಬೇಕು ಮತ್ತು ಅದನ್ನು ಹೇಗೆ ಕಟ್ಟಬೇಕು ಎಂಬುದು ಇಲ್ಲಿ ವಿವರಿಸಲಾಗಿದೆ. ವೆಂಕಟೇಶ್ವರನನ್ನು ಕರೆದರೆ ಮಾತಾಡೋ ದೈವ ಎಂದೂ ಕರೆಯುತ್ತಾರೆ. ನಿಮ್ಮ ಎಲ್ಲೆಡೆ ಇರುವ ವೆಂಕಟೇಶ್ವರನ ಚಿತ್ರ ಅಥವಾ ವಿಗ್ರಹದ ಮುಂದೆ ನೀವು ನಿಮ್ಮ ಕೋರಿಕೆಗಳನ್ನು ಪ್ರಾರ್ಥಿಸಬಹುದು. ವಿದ್ಯಾಭ್ಯಾಸ, ಸಂತಾನ, ಮನೆ ನಿರ್ಮಾಣ ಅಥವಾ ಮಾರಾಟ, ಆಸ್ತಿ ಖರೀದಿ ಅಥವಾ ಮಾರಾಟ, ಉದ್ಯೋಗ, ವ್ಯಾಪಾರ ಅಥವಾ ಆರೋಗ್ಯ ಸಮಸ್ಯೆಗಳು ಹೀಗೆ ಮನುಷ್ಯನ ಯಾವುದೇ ನ್ಯಾಯಯುತವಾದ ಇಷ್ಟಾರ್ಥಗಳನ್ನು ಭಗವಂತನಿಗೆ ಅರಿಕೆ ಮಾಡಿಕೊಳ್ಳಬಹುದು. ಧರ್ಮಬದ್ಧವಾದ ಕೋರಿಕೆಗಳಾಗಿದ್ದರೆ ಕಲೌ ವೆಂಕಟನಾಥನ ಕೃಪೆ ನೇರವಾಗಿ ಸಿಗುತ್ತದೆ ಮತ್ತು ಎಂತಹ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂಬುದು ನಂಬಿಕೆ.‘

ಹರಕೆ ಅಥವಾ ಮುಡುಪನ್ನು ಕಟ್ಟುವ ವಿಧಾನ ಹೀಗಿದೆ. ಶನಿವಾರದ ದಿನದಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುಚಿರ್ಭೂತರಾಗಬೇಕು. ನಂತರ ನಿಮ್ಮ ಮನೆಯಲ್ಲಿರುವ ವೆಂಕಟೇಶ್ವರನ ಚಿತ್ರಪಟ ಅಥವಾ ವಿಗ್ರಹದ ಮುಂದೆ ಕುಳಿತು ದೀಪಾರಾಧನೆ ಮಾಡಬೇಕು. ಗಣಪತಿ ಸ್ತೋತ್ರವನ್ನು ಪಠಿಸುವುದು ಶುಭ. ಒಂದು ಬಿಳಿಯ ವಸ್ತ್ರವನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ಶುದ್ಧೀಕರಿಸಿ, ಅದಕ್ಕೆ ಅರಿಶಿನವನ್ನು ಲೇಪಿಸಿ ಹಳದಿ ಬಟ್ಟೆಯನ್ನಾಗಿ ಮಾಡಿಕೊಳ್ಳಬೇಕು. ಆ ಅರಿಶಿನದ ಬಟ್ಟೆಯ ನಾಲ್ಕು ಕಡೆಗಳಲ್ಲಿ ಕುಂಕುಮ ಹಚ್ಚಿ, ಅದರಲ್ಲಿ ಒಂದಷ್ಟು ಅರಿಶಿನದ ಅಕ್ಷತೆಗಳನ್ನು ಇಡಬೇಕು. ನಂತರ ಹನ್ನೊಂದು ರೂಪಾಯಿ ನಾಣ್ಯಗಳನ್ನು (ಹನ್ನೊಂದು ಒಂದೊಂದು ರೂಪಾಯಿ ನಾಣ್ಯಗಳಾಗಿರಬಹುದು, ಅಥವಾ ಹತ್ತು ರೂಪಾಯಿ ಮತ್ತು ಒಂದು ರೂಪಾಯಿ ನಾಣ್ಯವಾಗಿರಬಹುದು) ಅದರಲ್ಲಿ ಇಡಬೇಕು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೆಚ್ಚಿನ ಹಣವನ್ನೂ ಸಹ ಇಡಬಹುದು.

ಇದನ್ನೂ ಓದಿ: ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕರೆಯುವುದೇಕೆ? ಮಾಹಿತಿ ಇಲ್ಲಿದೆ

ಈ ಹರಕೆ ಅಥವಾ ಮುಡುಪನ್ನು ಸಿದ್ಧಪಡಿಸಿದ ನಂತರ ಸ್ವಾಮಿಗೆ ಹೇಳಿ, “ನನ್ನ ಇಂತಹ ಕೋರಿಕೆ ಈಡೇರಿದ ಮೇಲೆ ದರ್ಶನಕ್ಕೆ ಬರುತ್ತೇನೆ” ಎಂದು ಪ್ರಾರ್ಥಿಸಬೇಕು. ಅದಕ್ಕೆ ಆರತಿ ಮಾಡಿ, ಪೂಜೆ ಮಾಡಿ ಭಗವಂತನ ಹತ್ತಿರ ಇಟ್ಟು ಪ್ರಾರ್ಥಿಸಬೇಕು. “ನನ್ನ ಆಸೆ, ನನ್ನ ಕೋರಿಕೆ ಇದನ್ನು ಈಡೇರಿಸು ಸ್ವಾಮಿ” ಎಂದು ಶ್ರದ್ಧಾಭಕ್ತಿಯಿಂದ ಬೇಡಿಕೊಳ್ಳಬೇಕು. ಶನಿವಾರದ ದಿನ ಅವರ ನಾಮಾವಳಿಗಳಾದ “ಓಂ ನಮೋ ವೆಂಕಟೇಶಾಯ” ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಪ್ರಾರ್ಥನೆ ಮಾಡುವುದು ಉತ್ತಮ.

ಈ ಪ್ರಾರ್ಥನೆ ಮಾಡಿದ ಹರಕೆಯನ್ನು ದೇವರ ಗುಡಿಯಲ್ಲಿ ಅಥವಾ ನಿಮ್ಮ ಬೀರುವಿನಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗಿ, ಇಷ್ಟಾರ್ಥ ಈಡೇರಿದ ನಂತರ ಆ ಮುಡುಪನ್ನು ತೆಗೆದುಕೊಂಡು ನೇರವಾಗಿ ತಿರುಪತಿ ಕ್ಷೇತ್ರಕ್ಕೆ ಹೋಗಿ ಹುಂಡಿಗೆ ಹಾಕಿ. ಅದರ ಜೊತೆಗೆ ಇನ್ನೊಂದಷ್ಟು ಹಣವನ್ನು ಹಾಕಿ ಭಗವಂತನಿಗೆ ಕೃತಜ್ಞತೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡು ಬಂದರೆ, ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಕೂಡಾ ಈಡೇರುತ್ತವೆ. ಈ ದರ್ಶನದಿಂದಲೇ ಕೂಡಾ ಒಳ್ಳೆದಾಗುತ್ತದೆ. ಇದು ಹರಕೆ ಅಥವಾ ಮುಡುಪಿನ ಮಹತ್ವ ಮತ್ತು ಫಲವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಗಿಲು ವಿಚಾರದಲ್ಲಿ ಜಟಾಪಟಿ: ತಿರುವನಂತಪುರದಲ್ಲಿ ಕೇರಳ ಸಿಎಂ ಪಿಣರಾಯಿ ಜತೆ ಸಿದ್ದರಾಮಯ್ಯ ಆತ್ಮೀಯ ಕುಶಲೋಪರಿ! – Kannada News | Kogilu Layout Row: Karnataka CM Siddaramaiah Meets Kerala CM Pinarayi Vijayan in Thiruvananthapuram, See Photos

ಮಠಾಧೀಶರಾದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್, ನನ್ನ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಬಿಕೆ ಹರಿಪ್ರಸಾದ್ ಸೇರಿದಂತೆ ಹಲವು ಗಣ್ಯರು ಈ ವೇಳೆ ಹಾಜರಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

Source link

ಅನಾಯಾಸವಾಗಿ ಭಾರತದಲ್ಲೇ 800 ಕೋಟಿ ರೂಪಾಯಿ ಗಳಿಸಲಿದೆ ‘ಧುರಂಧರ್’ – Kannada News | Dhurandhar Box Office Collection Update Ranveer Singh Movie eyes at Rs 800 Cr in Indian

ಹೆಚ್ಚೇನೂ ಹೈಪ್ ಇಲ್ಲದೇ ಬಿಡುಗಡೆ ಆದ ‘ಧುರಂಧರ್’ (Dhurandhar) ಸಿನಿಮಾ ಈ ಪರಿ ಕಲೆಕ್ಷನ್ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ನೋಡನೋಡುತ್ತಿದ್ದಂತೆಯೇ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 2025ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಅಲ್ಲದೇ, ಈ ಮೊದಲಿನ ಅನೇಕ ದಾಖಲೆಗಳನ್ನು ‘ಧುರಂಧರ್’ ಸಿನಿಮಾ ಅಳಿಸಿ ಹಾಕಿದೆ. ರಣವೀರ್ ಸಿಂಗ್ (Ranveer Singh) ಅವರು ಈ ಸಿನಿಮಾದಿಂದ ಬಹುದೊಡ್ಡ ಗೆಲುವು ಪಡೆದಿದ್ದಾರೆ. ನಿರ್ದೇಶಕ ಆದಿತ್ಯ ಧಾರ್ ಅವರ ಬೇಡಿಕೆ ಹೆಚ್ಚಾಗಿದೆ. ಬಿಡುಗಡೆಯಾಗಿ 27 ದಿನಗಳು ಕಳೆದಿದ್ದರೂ ಸಹ ‘ಧುರಂಧರ್’ ಸಿನಿಮಾದ ಕಲೆಕ್ಷನ್ (Dhurandhar Box Office Collection) ನಿಂತಿಲ್ಲ.

ದೇಶಭಕ್ತಿ ಕಥಾಹಂದರ ‘ಧುರಂಧರ್’ ಸಿನಿಮಾದಲ್ಲಿ ಇದೆ. ಪಾಕಿಸ್ತಾನದಲ್ಲಿ ನಡೆಯುವ ಭಯೋತ್ಪಾದಕ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಜನರು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ರಜೆ ದಿನ, ವಾರಾಂತ್ಯ ಮಾತ್ರವಲ್ಲದೇ ವಾರದ ದಿನಗಳಲ್ಲಿ ಕೂಡ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಇದರಿಂದಾಗಿ ಸಿನಿಮಾದ ಕಲೆಕ್ಷನ್ ಏರುತ್ತಲೇ ಇದೆ.

ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ‘ಧುರಂಧರ್’ ಸಿನಿಮಾ 712 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಲೇ ಇದೆ. ಇದೇ ವೇಗದಲ್ಲಿ ಮುಂದುವರಿದರೆ ಅನಾಯಾಸವಾಗಿ ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ 800 ಕೋಟಿ ರೂಪಾಯಿ ಮೀರಲಿದೆ. ವಿದೇಶದ ಕಲೆಕ್ಷನ್ ಕೂಡ ಸೇರಿಸಿದರೆ ಈಗಾಗಲೇ 1000 ಕೋಟಿ ರೂಪಾಯಿ ಮೀರಿದೆ.

‘ಧುರಂಧರ್’ ಸಿನಿಮಾ ಬಿಡುಗಡೆ ಆದ ಬಳಿಕ ‘ದಿ ಡೆವಿಲ್’, ‘ಅಖಂಡ 2’, ‘ಮಾರ್ಕ್’, ‘45’, ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’, ‘ಅವತಾರ್ 3’, ‘ಅನಾಕೊಂಡ’ ಮುಂತಾದ ಸಿನಿಮಾಗಳು ಬಿಡುಗಡೆ ಆದವು. ಆದರೆ ಈ ಯಾವ ಸಿನಿಮಾಗಳಿಂದಲೂ ‘ಧುರಂಧರ್’ ಹವಾ ಕಡಿಮೆ ಮಾಡಲು ಸಾಧ್ಯವಾಗಲೇ ಇಲ್ಲ. ಎಲ್ಲ ರಾಜ್ಯಗಳಲ್ಲೂ ಈ ಸಿನಿಮಾ ಸೂಪರ್ ಸಕ್ಸಸ್ ಆಗಿದೆ.

ಇದನ್ನೂ ಓದಿ: ‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ

ಈ ಚಿತ್ರದಲ್ಲಿ ನಟಿಸಿದ ಎಲ್ಲ ಕಲಾವಿದರಿಗೂ ಭಾರಿ ಜನಪ್ರಿಯತೆ ಸಿಕ್ಕಿದೆ. ವಿಶೇಷವಾಗಿ ನಟ ಅಕ್ಷಯ್ ಖನ್ನಾ ಅವರು ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ರೆಹಮಾನ್ ಡಕಾಯಿತ್ ಎಂಬ ವಿಲನ್ ಪಾತ್ರವನ್ನು ಅವರು ಮಾಡಿದ್ದಾರೆ. ಅರ್ಜುನ್ ರಾಮ್​ಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಅವರ ನಟನೆಗೂ ಮೆಚ್ಚುಗೆ ಸಿಗುತ್ತಿದೆ. ರಣವೀರ್ ಸಿಂಗ್ ಅವರ ಫ್ಯಾನ್ ಫಾಲೋಯಿಂಗ್ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

New Year 2026: ಹೊಸ ವರ್ಷಾಚರಣೆ ವೇಳೆ ಮಹಿಳೆಯರ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ ಮಹಿಳಾ ಸಹಾಯ ಕೇಂದ್ರ – Kannada News | New Year 2026: Bengaluru Police Women’s Safety Help Desks and Security Plan for New Year Celebrations

ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರು ವ್ಯಾಪಕ ಭದ್ರತಾ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ವಿಶೇಷವಾಗಿ ಮಹಿಳೆಯರ ಸುರಕ್ಷತೆಗಾಗಿ ನಗರದ ಪ್ರಮುಖ ಪ್ರದೇಶಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೊಸ ವರ್ಷದ ರಾತ್ರಿಯ ಭದ್ರತೆಯ ಪ್ರಮುಖ ಭಾಗವಾಗಿರುವ ಈ ಕೇಂದ್ರಗಳು, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್, ಎಂಜಿ ರೋಡ್, ಕೋರಮಂಗಲ, ಇಂದಿರಾನಗರ, ನೀಲಾದ್ರಿ ರಸ್ತೆ ಮತ್ತು ಬಾಣಸವಾಡಿ ಸೇರಿದಂತೆ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಈ ಮಹಿಳಾ ಸಹಾಯ ಕೇಂದ್ರಗಳು ತುರ್ತು ಸಂದರ್ಭಗಳಲ್ಲಿ ಮಹಿಳೆಯರಿಗೆ ನೆರವು ನೀಡಲು ಮೀಸಲಾಗಿವೆ. ಯಾವುದೇ ಸಮಸ್ಯೆ ಅಥವಾ ಆರೋಗ್ಯ ಸಮಸ್ಯೆ ಎದುರಾದಾಗ, ಮಹಿಳೆಯರು ನೇರವಾಗಿ ಈ ಕೇಂದ್ರಗಳಿಗೆ ಭೇಟಿ ನೀಡಿ ದೂರುಗಳನ್ನು ದಾಖಲಿಸಬಹುದು ಅಥವಾ ಸಹಾಯ ಪಡೆಯಬಹುದು. ಪೊಲೀಸ್ ಅಧಿಕಾರಿಗಳು, ಮಹಿಳಾ ಪೊಲೀಸರು ಮತ್ತು ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಈ ಕೇಂದ್ರಗಳಲ್ಲಿ ಲಭ್ಯವಿರುತ್ತಾರೆ. ಅಗತ್ಯವಿದ್ದರೆ, ಇಲ್ಲಿಂದ ಕ್ಯಾಬ್ ವ್ಯವಸ್ಥೆ ಮಾಡುವುದು ಅಥವಾ ವೈದ್ಯಕೀಯ ಚಿಕಿತ್ಸೆಗೆ ಒದಗಿಸುವುದು ಮುಂತಾದ ಸೇವೆಗಳನ್ನು ನೀಡಲಾಗುತ್ತದೆ. ಈ ಮೂಲಕ ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಮಹಿಳೆಯರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಆದ್ಯತೆಯಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್​ಗೆ 3 ತಂಡಗಳು ಪ್ರಕಟ – Kannada News | India, England and Oman Announced T20 World Cup 2026 Squad

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Source link

New Year’s Eve: 2025ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸುವ ವಿಶೇಷ ಡೂಡಲ್ ಹಂಚಿಕೊಂಡ ಗೂಗಲ್ – Kannada News | New Year’s Eve: Google shares doodle to celebrate last day of 2025

2025 ಕ್ಕೆ ವಿದಾಯ ಹೇಳುವ ದಿನ ಬಂದೇ ಬಿಟ್ಟಿತ್ತು. 2025 ಕ್ಕೆ ಗುಡ್ ಬೈ ಹೇಳಲು ಇನ್ನೇನು ಕೆಲವೇ ಕೆಲವು ಗಂಟೆಗಳಷ್ಟೇ ಬಾಕಿಯಿವೆ. ಈಗಾಗಲೇ ಹೊಸ ವರ್ಷವನ್ನು (New year) ಬರಮಾಡಿಕೊಳ್ಳಲು ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.​ ಒಂದು ಕಡೆ ಹೊಸ ವರ್ಷ 2026ನ್ನು ಬರ ಮಾಡಿಕೊಳ್ಳುವ ಸಂತಸದ ಸಮಯವನ್ನು ಗೂಗಲ್‌ ಡೂಡಲ್‌ನ್ನು(Google doodle) ವಿಭಿನ್ನವಾಗಿ ರೂಪಿಸಿದೆ.

ಇಂದಿನ ಗೂಗಲ್ ಡೂಡಲ್ ವಿಶೇಷತೆಯೇನು?

ಡೂಡಲ್ ಹೊಸ ವರ್ಷವನ್ನು ಪ್ರಾರಂಭಿಸಲು ಹೊಸ ಹುರುಪನ್ನು ನೀಡುತ್ತಿದೆ. ಇಂದು, ತನ್ನ ಗೂಗಲ್ ಡೂಡಲ್ ಮೂಲಕ, 2025 ನ್ನು ವಿಭಿನ್ನ ರೀತಿಯಲ್ಲಿ ವಿದಾಯ ಹೇಳುತ್ತಿದೆ ಹಾಗೂ 2026 ಹೊಸ ವರ್ಷವನ್ನು ಸ್ವಾಗತಿಸುತ್ತಿದೆ. ಹೀಗಾಗಿ ಈ ವರ್ಷದ ಕೊನೆಯ ದಿನದ ಹಿನ್ನೆಲೆಯಲ್ಲಿ ಗೂಗಲ್​ ನ್ಯೂ ಇಯರ್​ ಈವ್​ಅನ್ನು ಡೂಡಲ್​ ಮೂಲಕ ಆಚರಿಸಿದೆ.

ಗೂಗಲ್ ಡೂಡಲ್ 2025 ಮತ್ತು 2026 ಎರಡನ್ನೂ ಒಳಗೊಂಡಿದೆ. 2026 ರ ಆರಂಭವನ್ನು ಗೂಗಲ್ ಸ್ವಾಗತಿಸುತ್ತಿರುವಂತೆ ಡೂಡಲ್ ವಿನ್ಯಾಸವೂ ಬಲೂನುಗಳು, ಮಿಂಚು ಅಲಂಕಾರಗಳೊಂದಿಗೆ ಮಧ್ಯರಾತ್ರಿಯ ಆಚರಣೆಯನ್ನು ನೆನಪಿಸುವಂತಿದೆ. ಈ ಗೂಗಲ್ ಲೋಗೋವನ್ನು ಹೊಳೆಯುವ ಚಿನ್ನದ ಅಕ್ಷರಗಳಲ್ಲಿ ಬರೆಯಲಾಗಿದೆ. ಮಧ್ಯದಲ್ಲಿ, ಹೊಳೆಯುವ ಸಿಲ್ವರ್ ಬಣ್ಣದಲ್ಲಿ 2026 ರನ್ನು ಬರೆಯಲಾಗಿದೆ. ನೀವು ಅದರ ಮೇಲೆ ಕ್ಲಿಕ್ ಮಾಡಿದಾಗ 2026ರಾಗಿ ಬದಲಾಗುತ್ತವೆ.

ಇದನ್ನೂ ಓದಿ:ಡಿಎನ್‌ಎ ಕಲಿಕೆಗೆ ಪ್ರೋತ್ಸಾಹಿಸಿ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್

ಗೂಗಲ್ ಡೂಡಲ್ ಪಾರ್ಟಿ-ಥೀಮ್ ಆಗಿದ್ದು, ವರ್ಣರಂಜಿತ ಬಲೂನ್‌ಗಳು ಮತ್ತು ಅಲಂಕಾರಗಳನ್ನು ಒಳಗೊಂಡಿದೆ. ನಕ್ಷತ್ರಗಳು ಇಡೀ ಡೂಡಲ್‌ಗೆ ಪಾರ್ಟಿಯ ವಾತಾವರಣವನ್ನು ನೀಡುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷಾಚರಣೆ: ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಏನೆಲ್ಲ ಬಂದ್, ಯಾವುದೆಲ್ಲ ಓಪನ್? ಇಲ್ಲಿದೆ ಮಾಹಿತಿ – Kannada News | What is open and closed on New Year’s Eve and 1st January 2026 in Bangalore and other cities of Karnataka

ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷಾಚರಣೆ (New Year 2026) ಪ್ರಯುಕ್ತ ಭದ್ರತೆ ಮತ್ತು ಸುರಕ್ಷತಾ ಕಾರಣಗಳಿಗಾಗಿ ಕರ್ನಾಟಕದ (Karnataka) ಹಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ (Bengaluru) ಫ್ಲೈಓವರ್​ಗಳನ್ನು ಬಂದ್ ಮಾಡಲಾಗುತ್ತದೆ. ಮತ್ತೊಂದೆಡೆ ಬಿಎಂಟಿಸಿ ಬಸ್, ನಮ್ಮ ಮೆಟ್ರೋ ಸೇವೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಏನೇನು ಇರುತ್ತೆ? ಏನೇನು ಇರಲ್ಲ ಎಂಬ ಮಾಹಿತಿ ಇಲ್ಲಿದೆ.

ಹೊಸ ವರ್ಷಾಚರಣೆ: ಏನೇನಿರಲ್ಲ?

  • ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವಪ್ರಸಿದ್ಧ ಪ್ರವಾಸಿತಾಣ ನಂದಿಗಿರಿಧಾಮಕ್ಕೆ ಡಿಸೆಂಬರ್ 31ರ ಮಧ್ಯಾಹ್ನ 2 ಗಂಟೆಯಿಂದ ಜನವರಿ 1ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
  • ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೆ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆವರೆಗೆ ನಿರ್ಬಂಧ ಹೇರಲಾಗಿದೆ.
  • ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಧ್ಯರಾತ್ರಿ 12.30ರವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದೆ. ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  • ಕೊಡಗು ಜಿಲ್ಲೆಯಲ್ಲಿ ರಾತ್ರಿ 10 ಗಂಟೆಯ ಬಳಿಕ ಒಳಾಂಗಣದಲ್ಲಿ‌ ಮಾತ್ರ ಪಾರ್ಟಿ ಮಾಡಲು ಅವಕಾಶ.
  • ಬೆಂಗಳೂರಿನ ಚರ್ಚ್​​ ಸ್ಟ್ರೀಟ್, ಎಂಜಿ ರಸ್ತೆಯಲ್ಲಿ ಒಮ್ಮೆ ಹೋಗಿ ಹೊರಹೋದವರಿಗೆ ಮರಳಿ ಎಂಟ್ರಿ ಇಲ್ಲ.
  • ನಮ್ಮ ಮೆಟ್ರೋ ಎಂಜಿ ರಸ್ತೆ, ಟ್ರಿನಿಟಿ ನಿಲ್ದಾಣ ಬಂದ್.
  • ಬೆಂಗಳೂರಿನಲ್ಲಿ ಸಂಜೆ 6 ರ ನಂತರ ಪಾರ್ಕ್​ಗಳು ಬಂದ್.
  • ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್​ ಸ್ಟ್ರೀಟ್​ಗಳಲ್ಲಿ ಸಂಜೆಯ ನಂತರ ವಾಹನ ಸಂಚಾರ ಬಂದ್.

ಹೊಸ ವರ್ಷಾಚರಣೆ: ಏನೇನಿರುತ್ತೆ?

  • ಬೆಂಗಳೂರಿನಲ್ಲಿ ತಡರಾತ್ರಿ 2 ಗಂಟೆ ವರೆಗೆ ಬಿಎಂಟಿಸಿ ಬಸ್ ಸಂಚಾರ.
  • ಮುಂಜಾನೆ 3 ಗಂಟೆ ವರೆಗೆ ನಮ್ಮ ಮೆಟ್ರೋ ರೈಲು ಸೇವೆ.
  • ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಪಬ್, ಬಾರ್, ರೆಸ್ಟೋರೆಂಟ್​​ಗಳು ತಡರಾತ್ರಿ ವರೆಗೂ ಕಾರ್ಯಾಚರಿಸಲಿವೆ.
  • ಅಂಗಡಿಗಳು, ವಾಣಿಜ್ಯ ಮಳಿಗೆಗಳಿಗೆ ರಾತ್ರಿ 1 ರ ವರೆಗೂ ಕಾರ್ಯಾಚರಣೆಗೆ ಅನುಮತಿ ಇದೆ.
  • ಕರಾವಳಿ ನಗರಗಳಾದ ಮಂಗಳೂರು, ಉಡುಪಿಗಳಲ್ಲಿ ಬೀಚ್ ಬದಿಯ ರೆಸಾರ್ಟ್​ಗಳು, ಹೋಮ್​ ಸ್ಟೇಗಳು ತೆರೆದಿರಲಿವೆ.
  • ಮಂಗಳೂರು ನಗರದಲ್ಲಿ ರಾತ್ರಿ 12.30ರೊಳಗೆ ಹೊಸ ವರ್ಷ ಆಚರಣೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಂಭೀರ ಸ್ಥಿತಿ… ಕೋಮಾಕ್ಕೆ ಜಾರಿದ ಆಸ್ಟ್ರೇಲಿಯಾ ಕ್ರಿಕೆಟಿಗ – Kannada News | Australian cricketer Damien Martyn hospitalised

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್ ಅವರನ್ನು ಆಸ್ಪತ್ರೆಗೆ ದಾಖಲಾಗಿದೆ. ಮೆನಿಂಜೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಇದೀಗ ಕೋಮಾಕ್ಕೆ ಜಾರಿದ್ದಾರೆ ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್ (AAP) ಉಲ್ಲೇಖಿಸಿ cricket.com.au ವರದಿ ಮಾಡಿದೆ.

ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಪ್ರಕಾರ, ಮಾರ್ಟಿನ್ ಮೆನಿಂಜೈಟಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ನೀಡಲಾದ ಔಷಧಿಗಳ ರಿಯಾಕ್ಷನ್​ನಿಂದಾಗಿ ಅವರು ಕೋಮಾಕ್ಕೆ ಜಾರಿದ್ದಾರೆ. ವೈದ್ಯರು ಮಾರ್ಟಿನ್ ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆಯ ವ್ಯವಸ್ಥೆಗೆ ಮುಂದಾಗಿದ್ದಾರೆ.

ಡೇಮಿಯನ್ ಮಾರ್ಟಿನ್​ ಅವರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಆ್ಯಡಂ ಗಿಲ್‌ಕ್ರಿಸ್ಟ್ ಹೇಳಿದ್ದಾರೆ. 

ಡೇಮಿಯನ್ ಮಾರ್ಟಿನ್ 18 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದರು.  1991-92 ರಿಂದ ಶುರುವಾದ ಅವರ ಕ್ರಿಕೆಟ್ ಕೆರಿಯರ್ 2010 ರವರೆಗೆ ಮುಂದುವರೆದಿತ್ತು. ಈ ಅವಧಿಯಲ್ಲಿ ಒಟ್ಟು 509 ಪಂದ್ಯಗಳನ್ನಾಡಿದ್ದರು. ಈ ವೇಳೆ 54 ಶತಕಗಳೊಂದಿಗೆ ಒಟ್ಟು 23,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಡೇಮಿಯನ್ ಮಾರ್ಟಿನ್ ಬ್ಯಾಟಿಂಗ್ ವಿಡಿಯೋ:

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 67 ಟೆಸ್ಟ್ ಪಂದ್ಯಗಳನ್ನಾಡಿರುವ ಡೇಮಿಯನ್ ಮಾರ್ಟಿನ್ 109 ಇನಿಂಗ್ಸ್​ಗಳ ಮೂಲಕ 4406 ರನ್ ಕಲೆಹಾಕಿದ್ದಾರೆ. ಈ ವೇಳೆ 13 ಶತಕ ಹಾಗೂ 23 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಹಾಗೆಯೇ 208 ಏಕದಿನ ಪಂದ್ಯಗಳನ್ನಾಡಿದ್ದ ಮಾರ್ಟಿನ್ 182 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಅವರ ಬ್ಯಾಟ್​ನಿಂದ 5 ಶತಕಗಳೊಂದಿಗೆ 5346 ರನ್​ಗಳು ಮೂಡಿಬಂದಿದ್ದವು.

ಇದರ ಜೊತೆಗೆ ಆಸ್ಟ್ರೇಲಿಯಾ ಪರ 4 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 120 ರನ್​ಗಳಿಸಿದ್ದರು. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಒಂದು ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ

ಇದೀಗ ಆಸ್ಪತ್ರೆಯಲ್ಲಿ ಜೀವನ್ಮರಣದ ವಿರುದ್ಧ ಹೋರಾಡುತ್ತಿರುವ ಡೇಮಿಯನ್ ಮಾರ್ಟಿನ್ ಅವರ ಶೀಘ್ರ ಗುಣಮುಖರಾಗಲೆಂದು ಅಭಿಮಾನಿಗಳು ಸೇರಿದಂತೆ ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಹಾರೈಸಿದ್ದಾರೆ.

Published On – 10:14 am, Wed, 31 December 25

Source link

ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು? – Kannada News | Jaggesh Shows His Angriness over Movie Piracy

ಟ ಸುದೀಪ್ ಅವರು ಪೈರಸಿ ಬಗ್ಗೆ ಧ್ವನಿ ಎತ್ತಿದ್ದು ಗೊತ್ತೇ ಇದೆ. ಸುದೀಪ್ ಬಳಿಕ ಜಗ್ಗೇಶ್ ಅವರು ಪೈರಸಿ ಬಗ್ಗೆ ಮಾತನಾಡಿದ್ದಾರೆ. ಅವರ ಸಹೋದರ ಕೋಮಲ್ ಕುಮಾರ್ ನಟನೆಯ ‘ಕೋಣ’ ಸಿನಿಮಾ ಪೈರಸಿ ಆಗಿತ್ತು. ಇದನ್ನು ಮಾಡಿದವರ ವಿರುದ್ಧ ಜಗ್ಗೇಶ್ ದೂರು ನೀಡಿದ್ದರು. ಈಗ ನಂದಿನಿ ಲೇಔಟ್ ಪೊಲೀಸರು ಪೈರಸಿ ಮಾಡುತ್ತಿದ್ದ ಓರ್ವನ ಬಂಧಿಸಿದ್ದಾರೆ. ಫೇಸ್​ಬುಕ್ ಲೈವ್ ಬಂದು ಪೈರಸಿ ವಿರುದ್ಧ ನಟ ಜಗ್ಗೇಶ್ ಆಕ್ರೋಶ ಹೊರಹಾಕಿದ್ದಾರೆ. ‘ಸಿನಿಮಾ ಪೈರಸಿ ಕೊಲೆಗೆ ಸಮಾನ, ನಿರ್ಮಾಪಕನನ್ನು ಕೊಂದಂತೆ. ಪೈರಸಿ ಮಾಡೋದು ದರೋಡೆ ಮಾಡಿದಂತೆ’ ಎಂದು ನಟ ಜಗ್ಗೇಶ್​ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Vaikuntha Dwadashi: ವೈಕುಂಠ ದ್ವಾದಶಿಯ ಮಹತ್ವ, ಆಚರಣೆ ಮತ್ತು ಫಲಗಳ ಮಾಹಿತಿ ಇಲ್ಲಿದೆ – Kannada News | Vaikuntha dwadashi the day of infinite blessings and divine culmination

ವೈಕುಂಠ ದ್ವಾದಶಿ ಅಥವಾ ಮುಕ್ಕೋಟಿ ದ್ವಾದಶಿಯ ಮಹತ್ವ, ಆಚರಣೆ ಮತ್ತು ಫಲಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ವೈಕುಂಠ ಏಕಾದಶಿಯನ್ನು ಆಚರಿಸಿದ ಮಾರನೇ ದಿನ ಬರುವ ಈ ದ್ವಾದಶಿ ಅತೀ ಮಹತ್ವಪೂರ್ಣವಾದ ದಿನವಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, 33 ಕೋಟಿ ದೇವತೆಗಳು ವೈಕುಂಠದಲ್ಲಿ ಉತ್ತರ ದ್ವಾರದ ಮುಖಾಂತರ ಶ್ರೀ ವಿಷ್ಣುವಿನ ದರ್ಶನ ಪಡೆದ ಸಂದರ್ಭ ಇದಾಗಿದೆ. ಹೀಗಾಗಿ, ಈ ದಿನವನ್ನು ಮುಕ್ಕೋಟಿ ದ್ವಾದಶಿ ಎಂದು ಕರೆಯಲಾಗುತ್ತದೆ.

ಯಾವುದೇ ಕಾರ್ಯ ಅಥವಾ ಯಜ್ಞ ಮಾಡಿದಾಗ ಪೂರ್ಣಾಹುತಿ ಎಷ್ಟು ಮುಖ್ಯವೋ, ಹಾಗೆಯೇ ವೈಕುಂಠ ದ್ವಾದಶಿ ವೈಕುಂಠ ಏಕಾದಶಿ ವ್ರತದ ಪರಿಸಮಾಪ್ತಿಯ ದಿನವಾಗಿದೆ. ಏಕಾದಶಿಯಂದು ಪೂರ್ಣವಾಗಿ ಉಪವಾಸವಿದ್ದು, ದಾನ ಧರ್ಮಗಳು ಮತ್ತು ಜಪ ತಪಗಳನ್ನು ಕೈಗೊಂಡ ಭಕ್ತರು ಈ ದಿನ ಪಾರಣ ಮಾಡಿ ವ್ರತವನ್ನು ಪೂರ್ಣಗೊಳಿಸುತ್ತಾರೆ. ಇದು ಉಪವಾಸ ವ್ರತದ ಫಲವನ್ನು ಸಂಪೂರ್ಣವಾಗಿ ಪಡೆಯಲು ಅತ್ಯಂತ ಪ್ರಾಶಸ್ತ್ಯವಾದ ದಿನ. ಅತಿಥಿಗಳಿಗೆ ಪೂರ್ಣ ಗೌರವ ನೀಡಿ ಬೀಳ್ಕೊಡುವುದು ಎಷ್ಟು ಮುಖ್ಯವೋ, ಹಾಗೆಯೇ ಏಕಾದಶಿ ವ್ರತದ ಸಮರ್ಪಕ ಅಂತ್ಯ ವೈಕುಂಠ ದ್ವಾದಶಿಯಲ್ಲಾಗುತ್ತದೆ. ಈ ದಿನದಂದು ಉಪವಾಸವನ್ನು ಬಿಡುವುದು ಮತ್ತು ದಾನ ಧರ್ಮಗಳನ್ನು ಮಾಡುವುದು ನೂರು ಯಜ್ಞಗಳನ್ನು ಮಾಡಿದ ಫಲಕ್ಕೆ ಸಮಾನವೆಂದು ಶಾಸ್ತ್ರಗಳು ಹೇಳುತ್ತವೆ.

ವೈಕುಂಠ ದ್ವಾದಶಿಯಂದು ಭಕ್ತರು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ಭಗವಂತನ ಪೂಜೆ ಮಾಡಬೇಕು. ಈ ದಿನ ಸಾತ್ವಿಕ ಆಹಾರ ಸೇವನೆ ಮಾತ್ರ ಮಾನ್ಯವಾಗಿದ್ದು, ರಜೋ ಮತ್ತು ತಮೋ ಆಹಾರಗಳು ನಿಷಿದ್ಧವಾಗಿರುತ್ತವೆ. ಭಗವಂತನ ಆರಾಧನೆ ಮಾಡುತ್ತಾ, ಸಾಧ್ಯವಾದರೆ ಕನಿಷ್ಠ ಐದು ಜನ ನಿರ್ಗತಿಕರಿಗೆ ಅಥವಾ ಅಶಕ್ತರಿಗೆ ಆಹಾರ ದಾನ ಮಾಡಬೇಕು. ಇದರಿಂದ ಪೂರ್ಣ ಫಲ ದೊರೆಯುತ್ತದೆ. ತುಳಸಿಯಿಂದ ವಿಷ್ಣುವನ್ನು ಆರಾಧಿಸುವುದರಿಂದಲೂ ಅತಿ ಹೆಚ್ಚು ಪುಣ್ಯ ಲಭಿಸುತ್ತದೆ. ಕೆಲವರಿಗೆ ಏಕಾದಶಿಯಂದು ವಿಷ್ಣು ದರ್ಶನಕ್ಕೆ ಅವಕಾಶವಾಗದಿದ್ದರೆ, ದ್ವಾದಶಿಯಂದು ದರ್ಶನ ಮಾಡಿದರೂ ಅದರ ಫಲ ದೊರೆಯುತ್ತದೆ. ಕೆಲವು ದೇವಾಲಯಗಳಲ್ಲಿ ಉತ್ತರದ ದ್ವಾರವನ್ನು ದ್ವಾದಶಿಯಂದು ಸಹ ತೆರೆದಿಡಲಾಗುತ್ತದೆ.

ಇದನ್ನೂ ಓದಿ: ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದು ಕರೆಯುವುದೇಕೆ? ಮಾಹಿತಿ ಇಲ್ಲಿದೆ

ಈ ಪವಿತ್ರ ದಿನದಂದು ಅನ್ನದಾನ, ಸಂಕಲ್ಪಗಳು ಮತ್ತು ದಾನ ಧರ್ಮಗಳನ್ನು ಕೈಗೊಳ್ಳಲು ಬಹಳ ವಿಶೇಷ ಕಾಲ ಇದಾಗಿದೆ. ಕೇವಲ ವಿಷ್ಣುವಿನ ಅನುಗ್ರಹವಷ್ಟೇ ಅಲ್ಲದೆ, 33 ಕೋಟಿ ದೇವತೆಗಳ ಅನುಗ್ರಹವೂ ಸಹ ಈ ದಿನ ಲಭಿಸುತ್ತದೆ. ಸಂತೃಪ್ತಿಯಿಂದ ಮತ್ತು ಸಂತೋಷದಿಂದ ನಿರ್ಗತಿಕರಿಗೆ ಸಹಾಯ ಮಾಡುವುದು, ಅನ್ನದಾನ ಮಾಡುವುದರಿಂದ ಭಕ್ತರಿಗೆ ಬಹಳಷ್ಟು ಶುಭವಾಗುತ್ತದೆ. ಮುಕ್ಕೋಟಿ ಏಕಾದಶಿಗೆ ಎಷ್ಟು ಪ್ರಾಶಸ್ತ್ಯವಿದೆಯೋ, ಮುಕ್ಕೋಟಿ ದ್ವಾದಶಿಗೂ ಅಷ್ಟೇ ಪ್ರಾಶಸ್ತ್ಯವಿದೆ. ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಓಂ ನಮೋ ವೆಂಕಟೇಶಾಯ ಎಂಬ ಮಂತ್ರವನ್ನು ನಿರಂತರವಾಗಿ ಜಪಿಸುವುದರಿಂದ ಉತ್ತಮ ಫಲಗಳು ಪ್ರಾಪ್ತವಾಗುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link