Category Archives: Blog

Your blog category

ಆಸ್ತಿ ಮಾರಿ ಬಂದ 94 ಲಕ್ಷ ರೂನಲ್ಲಿ 38 ಲಕ್ಷ ರೂ ಕ್ಯಾಷ್; ಅಘೋಷಿತ ಆದಾಯವೆಂದು ಟ್ಯಾಕ್ಸ್ ನೋಟೀಸ್; ಕೇಸ್ ಗೆದ್ದ ಮಹಿಳೆ – Kannada News | Lady sells property, deposits cash into account, gets tax notice, but wins case at Mumbai ATAT

ಮುಂಬೈ, ಡಿಸೆಂಬರ್ 30: ಚಿರಾಸ್ತಿ ಮಾರಿ ಬಂದ ಹಣದಲ್ಲಿ ಒಂದಷ್ಟು ಕ್ಯಾಷ್ ಸಿಕ್ಕು, ಅದರಲ್ಲಿ ಸ್ವಲ್ಪವನ್ನು ಅಕೌಂಟ್​ಗೆ ಡೆಪಾಸಿಟ್ ಮಾಡಿದ್ದ ಮಹಿಳೆಗೆ ಆದಾಯ ತೆರಿಗೆ ಇಲಾಖೆಯಿಂದ (Income Tax) ನೋಟೀಸ್ ಬಂದಿದೆ. ಅಘೋಷಿತ ಆದಾಯ ಇದೆ ಎಂದು ವಿವರ ಕೇಳಿ ನೋಟೀಸ್ ನೀಡಲಾಗಿತ್ತು. ಈ ಪ್ರಕರಣದಲ್ಲಿ ಮುಂಬೈನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಆ ಮಹಿಳೆಯ ಪರವಾಗಿ ತೀರ್ಪು ಕೊಟ್ಟಿದೆ. ಆಸ್ತಿ ಮಾರುವವರಿಗೆ ಈ ಪ್ರಕರಣ ಕೆಲ ಕಾನೂನು ಅರಿವು ಪಡೆಯಲು ಸಹಾಯವಾಗಬಹುದು.

ಏನಿದು ಪ್ರಕರಣ?

ಮಹಿಳೆಯೊಬ್ಬರು (ಶ್ರೀಮತಿ ಚವಾಣ್) ಎಂಬುವವರು ತಮ್ಮ ಆಸ್ತಿಯೊಂದನ್ನು 94.06 ಲಕ್ಷ ರೂಗೆ ಮಾರಿದ್ದಾರೆ. ಇದರಲ್ಲಿ 38,15,000 ರೂ ಅನ್ನು ಕ್ಯಾಷ್ ರೂಪದಲ್ಲಿ ಪಡೆದಿದ್ದಾರೆ. ಅದು ನೊಂದಾಯಿತ ಕ್ರಯವಾಗಿತ್ತು. ಅಂದರೆ ರಿಜಿಸ್ಟರ್ಡ್ ಸೇಲ್ ಡೀಡ್. ಇದರಲ್ಲಿ ಕ್ಯಾಷ್ ರೂಪದಲ್ಲಿ ಹಣ ಪಡೆಯಲಾಗಿದ್ದನ್ನೂ ನಮೂದಿಸಲಾಗಿರುತ್ತದೆ.

ಇದನ್ನೂ ಓದಿ: 27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ?

ಚವಾಣ್ ಅವರು ತಮಗೆ ಬಂದ 38.15 ಲಕ್ಷ ರೂ ಕ್ಯಾಷ್ ಹಣದಲ್ಲಿ 13,00,500 ರೂ ಅನ್ನು ತಮ್ಮ ಐಸಿಐಸಿಐ ಬ್ಯಾಂಕ್ ಅಕೌಂಟ್​ಗೆ ಡೆಪಾಸಿಟ್ ಮಾಡಿದ್ದಾರೆ. ಆದರೆ, ಆ ವರ್ಷ ಇವರು ಐಟಿ ರಿಟರ್ನ್ ಸಲ್ಲಿಸಿಲ್ಲ. ಇವರ ಬ್ಯಾಂಕ್ ಖಾತೆಗೆ 13 ಲಕ್ಷ ರೂ ಕ್ಯಾಷ್ ಡೆಪಾಸಿಟ್ ಆಗಿರುವ ಬಗ್ಗೆ ಎಐಎಂಎಸ್ ಮಾಡ್ಯೂಲ್ ಮೂಲಕ ಆದಾಯ ತೆರಿಗೆ ಅಧಿಕಾರಿಗೆ ತಿಳಿಯುತ್ತದೆ. ಈ 13 ಲಕ್ಷ ರೂ ಕ್ಯಾಷ್ ಡೆಪಾಸಿಟ್ ಎಲ್ಲಿಂದ ಬಂತು, ಅದರ ಆದಾಯ ಮೂಲ ಏನು ಎಂದು ಹೇಳಿ ಅಸೆಸ್ಮೆಂಟ್ ಆಫೀಸರ್ ನೋಟೀಸ್ ಕೊಟ್ಟಿದ್ದಾರೆ. ಇದಾಗಿದ್ದು 2022 ಏಪ್ರಿಲ್ 28ರಂದು.

ಇದಾದ ಬಳಿಕ ಮಹಿಳೆಯು ಆ ವರ್ಷಕ್ಕೆ ಐಟಿಆರ್ ಸಲ್ಲಿಸಿದ್ದಾರೆ. ಅದರಲ್ಲಿ ನೊಂದಾಯಿತ ಸೇಲ್ ಡೀಡ್, ರೆಸಿಪ್ಟ್, ಬ್ಯಾಂಕ್ ಸ್ಟೇಟ್ಮೆಂಟ್, ಕ್ಯಾಷ್ ಡೆಪಾಸಿಟ್ ಇವೆಲ್ಲದಕ್ಕೂ ದಾಖಲೆಗಳು ಮತ್ತು ವಿವರಣೆಗಳನ್ನು ಕೊಟ್ಟಿದ್ದಾರೆ.

ಇಷ್ಟಕ್ಕೆ ಐಟಿ ಇಲಾಖೆ ಸಮಾಧಾನಗೊಳ್ಳಬೇಕಿತ್ತು. ಆದರೆ, ಮಹಿಳೆ ಸಲ್ಲಿಸಿದ್ದ ಐಟಿಆರ್ ಅನ್ನು ತಾಂತ್ರಿಕ ಸಮಸ್ಯೆ ಕಾರಣ ಅಸಿಂಧು ಎಂದು ಪರಿಗಣಿಸಲಾಗಿದೆ. ಅವರು ಕೊಟ್ಟಿದ್ದ ಸಾಕ್ಷ್ಯಾಧಾರ ಮತ್ತು ದಾಖಲೆಗಳನ್ನೂ ಪರಿಗಣಿಸಲಾಗಿಲ್ಲ. ವಿಚಿತ್ರ ಎಂದರೆ 13 ಲಕ್ಷ ರೂ ಕ್ಯಾಷ್ ಡೆಪಾಸಿಟ್ ಅಷ್ಟೇ ಅಲ್ಲ, ಆಸ್ತಿ ಮಾರಾಟದಲ್ಲಿ ಬಂದ 94 ಲಕ್ಷ ರೂ ಇಡೀ ಹಣವನ್ನೇ ಅಘೋಷಿತ ಆದಾಯ ಎಂದು ವಾದಿಸಿದೆ.

ಇದನ್ನೂ ಓದಿ: ಷೇರು, ಚಿನ್ನ, ಎಫ್​ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?

ಈ ಪ್ರಕರಣವು ಮುಂಬೈನ ಇನ್ಕಮ್ ಟ್ಯಾಕ್ಸ್ ಮೇಲ್ಮನವಿ ನ್ಯಾಯಮಂಡಳಿಯ ಮೆಟ್ಟಿಲೇರಿದೆ. ಮಹಿಳೆ ಒದಗಿಸಿರುವ ದಾಖಲೆಗಳನ್ನು ಕೋರ್ಟ್ ಮಾನ್ಯ ಮಾಡಿ 2025ರ ನವೆಂಬರ್ 13ರಂದು ಆಕೆಯ ಪರವಾಗಿ ತೀರ್ಪು ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆತ್ತಲೆ ಓಡಾಟ, ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ: ಸೈಕೋ ಪತಿ ಕಾಟಕ್ಕೆ ಪತ್ನಿ ಕಂಗಾಲು – Kannada News | Wife lodges a complaint against husband alleging assault and unacceptable behavior in Bengaluru

ಬೆಂಗಳೂರು, ಡಿಸೆಂಬರ್​​ 30: ಅವರಿಬ್ಬರು ಒಂದೇ ಖಾಸಗಿ ಕಂಪನಿಯಲ್ಲಿ ಸಹೋದ್ಯೋಗಿಗಳು. ಹೆಚ್​​ಆರ್​​ ಆಗಿದ್ದ ಇಬ್ಬರ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಯುವತಿಯನ್ನು ಪ್ರೀತಿಸಿದ್ದ ಆತ ಆಕೆಯ ಮನೆಯವರನ್ನೂ ಒಪ್ಪಿಸಿದ್ದ. ಬಳಿಕ ಸೆಪ್ಟೆಂಬರ್​​ 03, 2025ರಂದು ಚಿಂತಾಮಣಿಯಲ್ಲಿ ಕುಟುಂಬಸ್ಥರೇ ನಿಂತು ಇವರ ವಿವಾಹವನ್ನೂ ನಡೆಸಿದ್ದರು. ಆದರೀಗ ಸೈಕೋ ಪತಿ ಕಾಟಕ್ಕೆ ಪತ್ನಿ ಬೆಚ್ಚಿಬಿದ್ದಿದ್ದಾಳೆ. ತಾನು ಮದುವೆಯಾಗಿದ್ದು ಇಂತವನನ್ನಾ ಎಂದು ಗೋಗರೆಯುತ್ತಿದ್ದಾಳೆ.

ಹೌದು, ಮದುವೆಯಾಗಿ ಕೆಲ ದಿನಗಳು ಚೆನ್ನಾಗಿಯೇ ಇದ್ದ ಪತಿ ಮಂಜುನಾಥ್ ಈಗ​ ಸೈಕೋ ರೀತಿ ವರ್ತಿಸುತ್ತಿರೋದನ್ನು ಕಂಡು ಪತ್ನಿ ಬೆಚ್ಚಿಬಿದ್ದಿದ್ದಾಳೆ. ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುವ ಈತ, ಮನೆಯಲ್ಲಿ ಎಲ್ಲರ ಮುಂದೆಯೇ ಬೆತ್ತಲೆಯಾಗಿ ಓಡಾಡ್ತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ತಿರುಗಾಡೋದಲ್ಲದೆ, ಹಾಗೆಯೇ ಪ್ಯಾಸೇಜ್​​ಗೆ ಕೂಡ ಹೋಗಿ ಅಕ್ಕ ಪಕ್ಕದವರಿಗೂ ಮುಜುಗರ ಉಂಟುಮಾಡ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಗಂಡನ ವಿಚಿತ್ರ ವರ್ತನೆ, ಕಿರುಕುಳಕ್ಕೆ ಬೇಸತ್ತಿರೋ ಮಹಿಳೆ ಇದೀಗ ಪೊಲೀಸ್​​ ಠಾಣೆ ಮೆಟ್ಟಿಲೇರಿ ಪತಿ ವಿರುದ್ಧವೇ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ: ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ; ಪತಿಗಾಗಿ ಪತ್ನಿ ಪ್ರೊಟೆಸ್ಟ್​​

ದೂರಲ್ಲಿ ಏನಿದೆ?

ತನಗೆ ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆಕೊಟ್ಟಿದ್ದ ಗಂಡ ಮಂಜುನಾಥ್​​ ಮನೆ ಬಿಟ್ಟು ಹೋಗಿದ್ದ. ಬಳಿಕ ಮತ್ತೆ ಮನೆ ಬಳಿ ಬಂದ ಆತ, ತನಗೆ ಮತ್ತು ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹಲ್ಲೆಗೂ ಯತ್ನಿಸಿದ್ದಾನೆ. ಆತನ ಈ ಕೃತ್ಯಕ್ಕೆ ತನ್ನ ಅತ್ತೆ ಮತ್ತು ಮಾವ ಕೂಡ ಬೆಂಬಲ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಕೇಂದ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Spiritual Tips: ರಾತ್ರಿ ಮಲಗುವ ಮುನ್ನ ಮಹಿಳೆಯರು ಈ ಕೆಲಸ ಮಾಡಲೇಬಾರದು; ಸಮಸ್ಯೆ ತಪ್ಪಿದ್ದಲ್ಲ! – Kannada News | 4 things women must avoid at night banish negative energy

ರಾತ್ರಿ ಮಲಗುವ ಮುನ್ನ ಮಹಿಳೆಯರು ಈ ಕೆಲಸ ಮಾಡಲೇಬಾರದು

ವಾಸ್ತುಶಾಸ್ತ್ರದಲ್ಲಿ, ರಾತ್ರಿಯಲ್ಲಿ ಮೊಸರು ತಿನ್ನುವುದು, ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು ಮತ್ತು ಬಟ್ಟೆ ಹೊಲಿಯುವುದು ಮುಂತಾದ ಅನೇಕ ವಿಷಯಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಈ ನಿಯಮಗಳು ಪುರುಷರು ಮತ್ತು ಮಹಿಳೆಯರಿಗೆ ಅನ್ವಯಿಸುತ್ತವೆ. ಆದರೆ ಕೆಲವು ನಿಯಮಗಳು ಮಹಿಳೆಯರಿಗೆಂದೇ ಮಾಡಲಾಗಿದೆ. ಮಹಿಳೆಯರು ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದರೆ, ಅದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಅವು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೂದಲು ಕಟ್ಟಿಕೊಂಡು ಮಲಗುವುದು:

ಮಹಿಳೆಯರು ರಾತ್ರಿಯಲ್ಲಿ ಕೂದಲು ಕಟ್ಟಿಕೊಂಡು ಮಲಗಬಾರದು. ವಿಶೇಷವಾಗಿ ನೀವು ಒಬ್ಬಂಟಿಯಾಗಿ ಮಲಗುತ್ತಿದ್ದರೆ, ಕೂದಲು ಕಟ್ಟಿಕೊಂಡು ಮಲಗಬೇಡಿ. ಇದು ನಕಾರಾತ್ಮಕ ಶಕ್ತಿ ಅಥವಾ ದುಷ್ಟಶಕ್ತಿಗಳನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.

ಸುಗಂಧ ದ್ರವ್ಯ:

ಮಹಿಳೆಯರು ರಾತ್ರಿಯಲ್ಲಿ ಮನೆಯಿಂದ ಹೊರಗೆ ಹೋಗುವುದನ್ನು ಅಥವಾ ಸುಗಂಧ ದ್ರವ್ಯವನ್ನು ಹಚ್ಚಿಕೊಂಡು ಮಲಗುವುದನ್ನು ತಪ್ಪಿಸಬೇಕು. ಸುಗಂಧ ದ್ರವ್ಯದ ವಾಸನೆಯು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಆದ್ದರಿಂದ, ರಾತ್ರಿಯಲ್ಲಿ ಸುಗಂಧ ದ್ರವ್ಯವನ್ನು ಹಚ್ಚಬಾರದು.

ಇದನ್ನೂ ಓದಿ: ಮನೆಯಲ್ಲಿ ಮೂರು ಬರ್ನರ್‌ಗಳಿರುವ ಗ್ಯಾಸ್ ಸ್ಟೌವ್ ಬಳಸುತ್ತಿದ್ದೀರಾ? ಹಾಗಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ!

ತಲೆ ಬಾಚುವುದು:

ಅನೇಕ ಮಹಿಳೆಯರು ರಾತ್ರಿಯಲ್ಲಿ ಬಾಚಣಿಗೆಯಿಂದ ಕೂದಲನ್ನು ಬಾಚಿಕೊಂಡು ಮಲಗುತ್ತಾರೆ. ಆದರೆ ಶಾಸ್ತ್ರಗಳ ಪ್ರಕಾರ, ಸೂರ್ಯಾಸ್ತದ ನಂತರ ಮಹಿಳೆಯರು ತಮ್ಮ ಕೂದಲನ್ನು ಬಾಚಿಕೊಳ್ಳಬಾರದು.

ಜಗಳ ಅಥವಾ ವಾದ:

ಮಹಿಳೆಯರು ರಾತ್ರಿಯಲ್ಲಿ ಜಗಳ ಅಥವಾ ವಾದಗಳನ್ನು ತಪ್ಪಿಸಬೇಕು. ವಾಸ್ತವವಾಗಿ, ಈ ಕೆಲಸಗಳನ್ನು ಸಂಜೆ ಕೂಡ ಮಾಡಬಾರದು. ರಾತ್ರಿಯಲ್ಲಿ ಜಗಳಗಳು ನಿಮ್ಮ ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ, ಜೊತೆಗೆ ಮಾನಸಿಕ ಅಶಾಂತಿಯು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನೆರವೇರಿದ ವೈಕುಂಠ ಏಕಾದಶಿ – Kannada News | Mantralaya Vaikuntha Ekadashi: Grand Celebrations at Venkateshwara swamy temple

ರಾಯಚೂರು, ಡಿಸೆಂಬರ್ 30: ಮಂತ್ರಾಲಯ ರಾಯರ ಮಠದಲ್ಲಿ ವೈಕುಂಠ ಏಕಾದಶಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದ್ದು, ಮಂತ್ರಾಲಯದ ಓಲ್ಡ್ ಟೌನ್‌ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ವಿವಿಧ ಬಗೆಯ ಹೂವುಗಳಿಂದ ಶ್ರೀಮಠ ಹಾಗೂ ದೇವಸ್ಥಾನವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಶ್ರೀ ರಾಘವೇಂದ್ರ ಸ್ವಾಮಿಗಳು ಸ್ಥಾಪಿಸಿದ ಈ ದೇವಾಲಯಕ್ಕೆ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಭೇಟಿ ನೀಡಿ ತುಳಸಿ ಅರ್ಚನೆ, ಪುಷ್ಪಾರ್ಚನೆ ನೆರವೇರಿಸಿ ವೆಂಕಟೇಶ್ವರ ಸ್ವಾಮಿಗೆ ಮಂಗಳಾರತಿ ಸಲ್ಲಿಸಿದರು. ನಂತರ ಪವಿತ್ರ ವೈಕುಂಠ ದ್ವಾರವನ್ನು ಉದ್ಘಾಟಿಸಿ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ? – Kannada News | Vishnuvardhan Death Anniversary Special Pooje To Vishnuvardhan

ಇಂದು (ಡಿಸೆಂಬರ್ 30) ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 16ನೇ ವರ್ಷದ ಪುಣ್ಯ ಸ್ಮರಣೆ. ಈ ವೇಳೆ ವಿಷ್ಣುವರ್ಧನ್ ರಸ್ತೆಯಲ್ಲಿರುವ ಜೆಎಸ್​ಎಸ್ ಕಾಲೇಜು ಮುಂಭಾಗದಲ್ಲಿ ಪುಣ್ಯಸ್ಮರಣೆ ಆಚರಣೆ ಮಾಡಲಾಗಿದೆ. ಈ ಜಾಗ ಅಭಿಮಾನ್ ಸ್ಟುಡಿಯೋದಿಂದ ಕೇವಲ 200 ಮೀಟರ್ ದೂರದಲ್ಲಿ ಇದೆ. ತಾತ್ಕಾಲಿಕ ಮಂಟಪ ನಿರ್ಮಿಸಿ ವಿಷ್ಣು ಅವರ ಭಾವಚಿತ್ರವಿಟ್ಟು ಪೂಜೆ ಮಾಡಲಾಗಿದೆ. ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ, ಅನ್ನದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಕಿರುಕುಳ ಆರೋಪ: ಮಾಗಡಿಯಲ್ಲಿ ಪತಿ ಶಾಲೆ ಮುಂದೆಯೇ ಪತ್ನಿ ಪ್ರೊಟೆಸ್ಟ್​​ – Kannada News | Family dispute: Wife protests outside husband’s school in Magadi, Ramanagara

ರಾಮನಗರ, ಡಿಸೆಂಬರ್​​ 30: ಕಿರುಕುಳ ನೀಡಿದ್ದಲ್ಲದೆ ಮನೆಗೆ ಸೇರಿಸದ ಆರೋಪದ ಹಿನ್ನೆಲೆ ಪತಿ ಒಡೆತನದ ಶಿಕ್ಷಣ ಸಂಸ್ಥೆಯ ಎದುರೇ ಕುಳಿತು ಪತ್ನಿ ಪ್ರತಿಭಟನೆ ನಡೆಸಿರುವ ಘಟನೆ ಮಾಗಡಿಯಲ್ಲಿ ನಡೆದಿದೆ. ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಮಾಲಕ ರೂಪೇಶ್ ಜೊತೆ ಕಳೆದ ಒಂದು ವರ್ಷದ ಹಿಂದೆ ಪ್ರೀತಿ ವಿವಾಹವಾಗಿತ್ತು. ಆದರೆ ಪತಿ ಕಿರುಕುಳ ನೀಡುತ್ತಿದ್ದು, ಕೆಲ ದಿನಗಳಿಂದ ಮನೆಗೂ ತನ್ನನ್ನು ಸೇರಿಸುತ್ತಿಲ್ಲ ಎಂದು ಪ್ರೀತಿ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿರುವ ಇವರು, ನ್ಯಾಯಕ್ಕಾಗಿ ಪತಿಗೆ ಸೇರಿದ ಶಾಲೆಯ ಮುಂದೆ ಪ್ರತಿಭಟನೆ ಕುಳಿತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಶ್ವಿನಿ ಗೌಡಗೆ ಓಪನ್ ಚಾಲೆಂಜ್ ಹಾಕಿದ ಗಿಲ್ಲಿ​; ಎರಡು ವಾರದಲ್ಲಿ ಇದು ಸಾಧ್ಯಾನಾ? – Kannada News | Bigg Boss Kannada 12: Ashwini Gowda vs Gilli Nata Captaincy Challenge

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮಧ್ಯೆ ಇರೋದು ಹಾವು ಮುಂಗುಸಿ ರೀತಿಯ ಸಂಬಂಧ. ಯಾವಾಗಲೂ ಕಿತ್ತಾಡಿಕೊಳ್ಳುತ್ತಲೇ ಇರುವ ಇವರು ಒಂದಾಗಿದ್ದು ತುಂಬಾನೇ ಕಡಿಮೆ. ಇತ್ತೀಚೆಗೆ ಇಬ್ಬರ ಮಧ್ಯೆ ಸಾಮರಸ್ಯ ಬೆಳೆದಿತ್ತು. ಆದರೆ, ಇವರ ಮಧ್ಯೆ ಮತ್ತೆ ಕಿರಿಕ್ ಉಂಟಾಗಿದೆ. ಅಶ್ವಿನಿ ಗೌಡ ಅವರಿಗೆ ಗಿಲ್ಲಿ ನಟ ಓಪನ್ ಚಾಲೆಂಜ್ ಹಾಕಿದ್ದಾರೆ. ಇದನ್ನು ಸಾಧಿಸೋಕೆ ಅಶ್ವಿನಿ ಬಳಿ ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ.

ಗಿಲ್ಲಿ ನಟ ಅವರು ಬಿಗ್ ಬಾಸ್​​ಗೆ ಬಂದು ಮೂರು ತಿಂಗಳು ಕಳೆದರೂ ಒಮ್ಮೆಯೂ ಕ್ಯಾಪ್ಟನ್ ಆಗಲು ಸಾಧ್ಯವಾಗಿರಲಿಲ್ಲ. ಇದು ಅವರನ್ನು ತುಂಬಾನೇ ಕಾಡಿತ್ತು. ಹಲವು ಬಾರಿ ಪ್ರಯತ್ನಿಸಿದ್ದರೂ ಇದು ಸಾಧ್ಯವಾಗಿರಲಿಲ್ಲ. ಬಿಗ್ ಬಾಸ್ ಶುರುವಾಗಿ ಮೂರು ತಿಂಗಳ ಬಳಿಕ ಗಿಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಅಶ್ವಿನಿಗೆ ಇದು ಇನ್ನೂ ಕನಸಾಗಿಯೇ ಉಳಿದಿದೆ. ಅವರಿಗೆ ಕ್ಯಾಪ್ಟನ್ ಆಗುವಂತೆ ಗಿಲ್ಲಿ ಚಾಲೆಂಜ್ ಹಾಕಿದ್ದಾರೆ. ಅಲ್ಲದೆ, ಈ ಚಾಲೆಂಜ್​​ನ ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಅಶ್ವಿನಿಗೆ ಇದೆ.

ಮನೆಯ ಕೆಲಸದ ವಿಷಯ ಚರ್ಚೆಗೆ ಬಂದಿದೆ. ‘ಅಡುಗೆ ಮನೆ ಕ್ಲೀನ್ ಮಾಡಿ ಮಲಗಿ’ ಎಂದು ಗಿಲ್ಲಿ ಅವರು ಅಶ್ವಿನಿ ಬಳಿ ಕೇಳಿಕೊಂಡರು. ಆದರೆ, ಇದಕ್ಕೆ ಅವರು ಒಪ್ಪಿಕೊಳ್ಳಲೇ ಇಲ್ಲ. ಇದು ಗಿಲ್ಲಿ ಕೋಪಕ್ಕೆ ಕಾರಣ ಆಗಿದೆ. ಅವರು ಅಶ್ವಿನಿ ಮೇಲೆ ಕೂಗಾಡಿದ್ದಾರೆ. ಈ ವೇಳೆ ಅಶ್ವಿನಿ ಆಡಿದ ಒಂದು ಮಾತು ಗಿಲ್ಲಿಗೆ ಚುಚ್ಚಿದೆ. ‘ಕ್ಯಾಪ್ಟನ್ ಎಂದರೆ ನಿಮಗೇನು ಕೋಡು ಇರೋದಿಲ್ಲ’ ಎಂದರು ಅಶ್ವಿನಿ. ಆಗ ಗಿಲ್ಲಿ ಓಪನ್ ಚಾಲೆಂಜ್ ಹಾಕಿದರು.

ಇದನ್ನೂ ಓದಿ: ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಹೊಸ ಎರಡು ಪಾತ್ರಕ್ಕೆ ಬಿಗ್ ಬಾಸ್​​ನಲ್ಲಿ ಆಡಿಷನ್

‘ಮೊದಲು ನೀನು ಕ್ಯಾಪ್ಟನ್ ಆಗಿ ತೋರಿಸು. ಆಮೇಲೆ ಮಾತನಾಡುವಿಯಂತೆ’ ಎಂದು ಗಿಲ್ಲಿ ಸವಾಲು ಹಾಕಿದರು. ಈ ಪ್ರಶ್ನೆ ಕೇಳಿದರೂ ಕೇಳದಿರುವಂತೆ ನಡೆದುಕೊಂಡರು ಅಶ್ವಿನಿ. ಫಿನಾಲೆಗೆ ಉಳಿದಿರೋದು ಮೂರು ವಾರ ಮಾತ್ರ. ಫೈನಲ್ ವಾರದಲ್ಲಿ ಯಾವುದೇ ಕ್ಯಾಪ್ಟನ್ಸಿ ಇರೋದಿಲ್ಲ. ಹೀಗಾಗಿ, ಕ್ಯಾಪ್ಟನ್ ಆದರೆ ಇನ್ನು ಎರಡು ವಾರಗಳಲ್ಲಿ ಆಗಬೇಕಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು

ಪಂಜಾಬ್, ಡಿಸೆಂಬರ್ 30: ಪಂಜಾಬ್​ನ ಅಮೃತಸರದಲ್ಲಿರುವ ಆಭರಣದಂಗಡಿಯಲ್ಲಿ ಬೆಳ್ಳಂಬೆಳಗ್ಗೆ ಕದಿಯಲೆಂದು ಹೋದ ಕಳ್ಳರು ಫಜೀತಿಗೆ ಸಿಲುಕಿರುವ ಘಟನೆ ನಡೆದಿದೆ. ಸಂಧು ಕಾಲೋನಿಯಲ್ಲಿರುವ ಅಂಗಡಿಗೆ ನುಗ್ಗಿದ ದರೋಡೆಕೋರರು ಆಭರಣ ವ್ಯಾಪಾರಿಯ ಮೇಲೆ ಗುಂಡು ಹಾರಿಸಿ, ಆವರಣದೊಳಗೆ ಎರಡು ಬಾರಿ ಗುಂಡು ಹಾರಿಸಿದರು. ಅದೃಷ್ಟವಶಾತ್, ಯಾವುದೇ ಗುಂಡುಗಳು ಆಭರಣ ವ್ಯಾಪಾರಿಗೆ ತಾಗಲಿಲ್ಲ. ಬುದ್ಧಿವಂತಿಕೆಯನ್ನು ಪ್ರದರ್ಶಿಸಿ, ಆಭರಣ ವ್ಯಾಪಾರಿ ದಾಳಿಕೋರರಲ್ಲಿ ಒಬ್ಬನನ್ನು ಸೋಲಿಸುವಲ್ಲಿ ಯಶಸ್ವಿಯಾದರು.

ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಗಳು ಮೋಟಾರ್ ಸೈಕಲ್‌ನಲ್ಲಿ ಬಂದಿದ್ದರು. ಪರಾರಿಯಾಗುವ ವೇಳೆ ಒಬ್ಬ ದರೋಡೆಕೋರ ಬೈಕ್ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬರ–ಪ್ರವಾಹಕ್ಕೆ ವರ್ಷಗಳ ನಿರೀಕ್ಷೆ, ಕೋಗಿಲು ಲೇಔಟ್‌ಗೆ ಎರಡು ದಿನಗಳಲ್ಲಿ ಪರಿಹಾರ: ಸರ್ಕಾರದ ವಿರುದ್ಧ ಗುಡುಗಿದ ಜೋಶಿ – Kannada News | Kogilu Layout Rehabilitation: Prahlad Joshi Slams Karnataka Govt on this action

ಬೆಂಗಳೂರು, ಡಿಸೆಂಬರ್ 30: ಇತ್ತೀಚೆಗೆ ಕೋಗಿಲು ಬಡಾವಣೆಯಲ್ಲಿ (Kogilu Layout) ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಜೆಸಿಬಿ ಬಳಸಿ ತೆರವು ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಕೋಗಿಲು ಲೇಔಟ್ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ತೀರ್ಮಾನಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕರ್ನಾಟಕದ ಜನ ವಿಪತ್ತಿಗೊಳಗಾಗಿ ಪರಿಹಾರಕ್ಕಾಗಿ ಕಾಯುತ್ತಿದ್ದರೂ ಕೇವಲ ಎರಡೇ ದಿನಗಳಲ್ಲಿ ಒಂದು ಸಮುದಾಯಕ್ಕೆ ಪರಿಹಾರ ಒದಗಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

11 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆ ನಿರ್ಮಾಣ

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಎಕ್ಸ್​ ಸಂದೇಶದೊಂದಿಗೆ ಕರ್ನಾಟಕ ಸರ್ಕಾರವನ್ನು ಪ್ರಜಾಪ್ರಭುತ್ವ ವಿರೋಧಿ ಮತ್ತು ಜೆಸಿಬಿ ಸರ್ಕಾರ ಎಂದು ತೀವ್ರವಾಗಿ ಟೀಕಿಸಿದ್ದರು. ಇದೆಲ್ಲದರ ನಡುವೆ ಕೋಗಿಲು ಲೇಔಟ್ ಸಂತ್ರಸ್ತರಿಗೆ ಬೇರೆ ಕಡೆ ವಸತಿ ನೀಡಲು ವ್ಯವಸ್ಥೆ ಮಾಡಿರುವುದು ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳ ನೆಲಸಮದ ನಂತರ, ಸಿಎಂ ಸಿದ್ದರಾಮಯ್ಯ ಅರ್ಹ ನಿವಾಸಿಗಳಿಗೆ ಪರಿಹಾರ ಘೋಷಿಸಿದ್ದು, 7 ಕಿ.ಮೀ ಅಂತರದಲ್ಲಿ ತಲಾ 11.2 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆಗಳನ್ನು ನಿರ್ಮಿಸಲಾಗಿದೆ. ಈ ಕುರಿತು ಪ್ರಹ್ಲಾದ್ ಜೋಶಿ ಎಕ್ಸ್ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ ಕೋಗಿಲು ಕಲಹ: ಅರ್ಹರಿಗೆ 11.2 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಾಣ; ಸಿಎಂ ಘೋಷಣೆ

ಜೋಶಿಯ ಎಕ್ಸ್ ಪೋಸ್ಟ್​ನಲ್ಲೇನಿದೆ?

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಂದು ಧರ್ಮದ ಓಲೈಕೆ ಹಾಗೂ ತುಷ್ಟೀಕರಣಕ್ಕಾಗಿ ಅತಿವೇಗವಾಗಿ ಹಾಗೂ ತುರ್ತಾಗಿ ಔಪಚಾರಿಕ ಪರಿಹಾರ ನೀಡಲು ಮುಂದಾಗಿರುವುದು ಅತಿ ಬೇಸರದ ಸಂಗತಿ ಎಂದು ಬರೆದುಕೊಂಡಿರುವ ಜೋಶಿ, ಬರ ಮತ್ತು ಪ್ರವಾಹದಂತಹ ವಿಪತ್ತುಗಳ ಪರಿಹಾರವನ್ನು ಪಡೆಯಲು ರಾಜ್ಯಾದ್ಯಂತ ಜನರು ವರ್ಷಗಳಿಂದ ಕಾಯುತ್ತಿದ್ದರು, ಈ ಸಂದರ್ಭದಲ್ಲಿ, ಕೇವಲ ಎರಡೇ ದಿನಗಳಲ್ಲಿ ಒಂದು ಸಮುದಾಯಕ್ಕೆ ಪರಿಹಾರ ಒದಗಿಸಲಾಗಿದೆ.

ಪ್ರಹ್ಲಾದ್ ಜೋಶಿ ಪೋಸ್ಟ್ ಇಲ್ಲಿದೆ

ಪಕ್ಕದ ರಾಜ್ಯದ ಕಾಂಗ್ರೆಸ್ ನಾಯಕರೊಬ್ಬರು ಕರೆ ಮಾಡಿ, ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ ನಂತರ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕಾಂಗ್ರೆಸ್ ಪಕ್ಷದ ನಾಯಕತ್ವದ ಕೈಗೊಂಬೆಯಾಗಿ, ತನ್ನ ಕರ್ತವ್ಯ ಹಾಗೂ ಕಾನೂನಿನ ಪರಿಮಿತಿಯ ಜವಾಬ್ದಾರಿಯನ್ನು ಗಾಳಿಗೆ ತೂರಿ, ತುಷ್ಠಿಕರಣ ರಾಜಕಾರಣದ ಪರಮಾವಧಿಯನ್ನು ಪ್ರದರ್ಶಿಸಿದೆ. ಗೃಹಲಕ್ಷ್ಮಿ ಫಲಾನುಭವಿಗಳು ಕಾಯಬಹುದೇ ವಿನಃ ಅಕ್ರಮವಾಗಿ ಅತಿಕ್ರಮಿಸಿದವರು ಕಾಯುವಂತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಚಳ್ಳಕೆರೆ ಗೇಟ್ ಬಳಿ ಗೂಡಂಗಡಿಗಳು ನೆಲಸಮ

ಚಿತ್ರದುರ್ಗ, ಡಿಸೆಂಬರ್ 30: ಬೆಂಗಳೂರಿನಲ್ಲಿ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್​​ ತೆರವು ವಿಚಾರ ದೇಶದಾದ್ಯಂತ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ, ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ಅಕ್ರಮವಾಗಿ ಇಡಲಾಗಿದ್ದ ಗೂಡಂಗಡಿಗಳ ತೆರವು ಮಾಡಲಾಗಿದೆ. ನಗರಸಭೆ‌ ಆಯುಕ್ತೆ ಲಕ್ಷ್ಮೀ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಜೆಸಿಬಿ ಬಳಸಿ ಹಣ್ಣು, ತರಕಾರಿ, ಟೀಸ್ಟಾಲ್, ಗುಜರಿ ಅಂಗಡಿಗಳ ತೆರವು ಮಾಡಲಾಗಿದೆ. ನಗರಸಭೆ ಅಧಿಕಾರಿಗಳ ವಿರುದ್ಧ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಕೋರ್ಟ್ ಆದೇಶದಂತೆ ನಾವು ಗೂಡಂಗಡಿ ತೆರವು ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link