Category Archives: Blog

Your blog category

ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ – Kannada News | Suraj Singh realized why He eliminated from Bigg Boss Kannada House

ಸೂರಜ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಇಷ್ಟು ದಿನ ಇದ್ದರು. ಮೂರನೇ ವಾರಕ್ಕೆ ಎಂಟ್ರಿ ಮತ್ತು ಮೂರನೇ ತಿಂಗಳಿಗೆ ಅವರು ಹೊರ ಬಂದರು. ಈ ವೇಳೆ ಅವರು ಒಂದಷ್ಟು ವಿಷಯಗಳನ್ನು ಹೇಳಿದ್ದಾರೆ. ‘ಎಲ್ಲರ ಜೊತೆ ಇನ್ನಷ್ಟು ಬೆರೆತಿದ್ದರೆ ಮತ್ತಷ್ಟು ದಿನ ಉಳಿದುಕೊಳ್ಳುವ ಸಾಧ್ಯತೆ ಇತ್ತು’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಆ್ಯಪಲ್, ಎನ್​ವಿಡಿಯಾವನ್ನೂ ಮೀರಿಸಿದ ಬೆಳ್ಳಿ ಈಗ ಜಗತ್ತಿನಲ್ಲಿ ಎರಡನೇ ಅತಿಹೆಚ್ಚು ಮಾರುಕಟ್ಟೆ ಮೌಲ್ಯದ ಆಸ್ತಿ – Kannada News | Silver overtakes NVidia, Apple to become second most valuable asset in the world

ನವದೆಹಲಿ, ಡಿಸೆಂಬರ್ 29: ಬೆಳ್ಳಿ ಬೆಲೆ (Silver) ಹುಚ್ಚೆದ್ದು ಓಡುತ್ತಿದೆ. ಅತಿವೇಗವಾಗಿ ಬೆಲೆ ಏರಿಕೆ ಆಗುತ್ತಿರುವ ಸರಕುಗಳಲ್ಲಿ ಚಿನ್ನವನ್ನೂ ಮೀರಿಸಿ ಬೆಳ್ಳಿ ಬೆಳೆಯುತ್ತಿದೆ. ವಿಶ್ವದಲ್ಲೇ ಅತಿಹೆಚ್ಚು ಮಾರ್ಕೆಟ್ ಕ್ಯಾಪಿಟಲ್ ಇರುವ ಸ್ವತ್ತುಗಳಲ್ಲಿ ಬೆಳ್ಳಿ ಎರಡನೇ ಸ್ಥಾನಕ್ಕೇರಿದೆ. ಎನ್​ವಿಡಿಯಾ, ಆ್ಯಪಲ್ ಇತ್ಯಾದಿ ದೈತ್ಯ ಕಂಪನಿಗಳ ಷೇರು ಬಂಡವಾಳವನ್ನೂ ಮೀರಿಸಿ ಬೆಳ್ಳಿ ಮೌಲ್ಯ ಬೆಳೆದಿದೆ.

ಬೆಳ್ಳಿ ಬೆಲೆ ಒಂದು ಔನ್ಸ್​ಗೆ 84 ಡಾಲರ್​ಗಿಂತ ಹೆಚ್ಚಾಗಿದೆ. ಭಾರತದಲ್ಲಿ ಇದರ ಬೆಲೆ ಒಂದು ಗ್ರಾಮ್​ಗೆ 260 ರೂ ಆಸುಪಾಸಿನಲ್ಲಿ ಇದೆ. ಈ ವರ್ಷ ಅದರ ಬೆಲೆ ಬರೋಬ್ಬರಿ ಶೇ. 170ರಷ್ಟು ಹೆಚ್ಚಿದೆ. ಶೇ. 72ರಷ್ಟು ಇರುವ ಚಿನ್ನದ ಬೆಲೆ ಏರಿಕೆಯು ಬೆಳ್ಳಿ ಮುಂದೆ ಗೌಣವೆನಿಸಿದೆ. ಈ ಅಮೂಲ್ಯ ಬೆಳ್ಳಿ ಲೋಹದ ಒಟ್ಟು ಮಾರುಕಟ್ಟೆ ಮೌಲ್ಯ 4.7 ಟ್ರಿಲಿಯನ್ ಡಾಲರ್​ಗೆ ಏರಿದೆ. 4.6 ಟ್ರಿಲಿಯನ್ ಡಾಲರ್ ಇರುವ ಎನ್​ವಿಡಿಯಾ ಷೇರುಗಳ ಮೌಲ್ಯವನ್ನು ಬೆಳ್ಳಿ ದಾಟಿ ಹೋಗಿದೆ.

ಇದನ್ನೂ ಓದಿ: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಬೆಲೆ ಮತ್ತೆ ದಾಖಲೆ

ಅತಿಹೆಚ್ಚು ಮಾರುಕಟ್ಟೆ ಮೌಲ್ಯದಲ್ಲಿ ಚಿನ್ನವೇ ನಂಬರ್ 1

ಬೆಳ್ಳಿ ಬೆಲೆಯ ಇತ್ತೀಚಿನ ಓಟದ ನಡುವೆಯೂ ಚಿನ್ನವೇ ವಿಶ್ವದಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಆಸ್ತಿ ಎನಿಸಿದೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 31.5 ಟ್ರಿಲಿಯನ್ ಡಾಲರ್ ಇದೆ. ಅತಿಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಕೆಲ ಆಸ್ತಿಗಳ ಪಟ್ಟಿ ಈ ಕೆಳಕಂಡಂತಿದೆ:

  1. ಚಿನ್ನ: 31.5 ಟ್ರಿಲಿಯನ್ ಡಾಲರ್
  2. ಬೆಳ್ಳಿ: 4.7 ಟ್ರಿಲಿಯನ್ ಡಾಲರ್
  3. ಎನ್​ವಿಡಿಯಾ: 4.6 ಟ್ರಿಲಿಯನ್ ಡಾಲರ್
  4. ಆ್ಯಪಲ್: 4 ಟ್ರಿಲಿಯನ್ ಡಾಲರ್
  5. ಆಲ್ಫಬೆಟ್: 3.8 ಟ್ರಿಲಿಯನ್ ಡಾಲರ್
  6. ಮೈಕ್ರೋಸಾಫ್ಟ್: 3.6 ಟ್ರಿಲಿಯನ್ ಡಾಲರ್

ಬೆಳ್ಳಿಗೆ ಯಾಕಿಷ್ಟು ಡಿಮ್ಯಾಂಡ್?

ವಿಶ್ವಾದ್ಯಂತ ಹೆಚ್ಚಿನ ದೇಶಗಳಲ್ಲಿ ಚಿನ್ನವನ್ನು ಹೂಡಿಕೆಗಾಗಿ ಹೆಚ್ಚಾಗಿ ಖರೀದಿಸಲಾಗುತ್ತದೆ. ಕಷ್ಟದ ಸಂದರ್ಭಕ್ಕೆ ಹೆಡ್ಜಿಂಗ್ ಆಗಿ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತದೆ. ಭಾರತ ಹಾಗೂ ಚೀನಾದಲ್ಲಿ ಮಾತ್ರ ಚಿನ್ನವನ್ನು ಆಭರಣ ಮತ್ತು ಹೂಡಿಕೆಗೆ ಬಳಸುವುದುಂಟು.

ಇದನ್ನೂ ಓದಿ: ಎಫ್ ಅಂಡ್ ಒ ಕರ್ಮಕಾಂಡ; ಭಾರತದಿಂದ ಅಮೆರಿಕಕ್ಕೆ ಹರಿದುಹೋಗುತ್ತಿದೆಯಾ ವರ್ಷಕ್ಕೆ ಲಕ್ಷ ಕೋಟಿ ರೂ?

ಆದರೆ, ಬೆಳ್ಳಿಯದ್ದು ಭಿನ್ನ ಕಥೆ. ಬೆಳ್ಳಿಯನ್ನು ಅನೇಕ ಉದ್ಯಮಗಳಲ್ಲಿ ಬಳಕೆ ಆಗುವುದುಂಟು. ಸೋಲಾರ್ ಪ್ಯಾನಲ್, ಎಲೆಕ್ಟ್ರಿಕ್ ವಾಹನ, ಎಲೆಕ್ಟ್ರಾನಿಕ್ಸ್ ವಸ್ತು ಇತ್ಯಾದಿಗಳಲ್ಲಿ ಬೆಳ್ಳಿಯನ್ನು ಬಳಸಲಾಗುತ್ತದೆ. ಹೀಗಾಗಿ, ಇದಕ್ಕೆ ಅತಿಹೆಚ್ಚು ಬೇಡಿಕೆ ಇದೆ. ಇದರ ಉತ್ಪಾದನೆ ಬಹಳ ಸೀಮಿತ ಪ್ರಮಾಣದಲ್ಲಿ ಇದೆ. ಹೀಗಾಗಿ, ಬೆಳ್ಳಿಗೆ ಬೇಡಿಕೆ ಇರುವಷ್ಟು ಪೂರೈಕೆ ಇಲ್ಲ. ಇದರ ಜೊತೆಗೆ, ಹೆಡ್ಜಿಂಗ್ ಆಗಿ ಚಿನ್ನದ ಜೊತೆಗೆ ಬೆಳ್ಳಿಯ ಮೇಲೂ ಹೂಡಿಕೆ ಮಾಡುವ ಟ್ರೆಂಡ್ ಹೆಚ್ಚುತ್ತಿದೆ.

ಬೆಳ್ಳಿ ಬೆಲೆ ಜಿಗಿಜಿಗಿದು ಏರಲು ಮೂರು ಪ್ರಮುಖ ಕಾರಣಗಳು ಕಂಡಿವೆ. ಮೊದಲನೆಯದು, ಬೆಳ್ಳಿಯನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತಿರುವುದು. ಎರಡನೆಯದು, ಚಿನ್ನದಂತೆ ಬೆಳ್ಳಿಯನ್ನೂ ಹೆಡ್ಜಿಂಗ್ ಆಗಿ ಹೂಡಿಕೆಗೆ ಬಳಸಲಾಗುತ್ತಿರುವುದು. ಮೂರನೆಯದು, ಬೆಳ್ಳಿಯ ಮೈನಿಂಗ್​ಗಳು ತೀರಾ ಕಡಿಮೆ ಇರುವುದು, ಮತ್ತು ಅದರ ಉತ್ಪಾದನೆ ಬಹಳ ಕಡಿಮೆ ಇರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹುಣಸೂರು ಚಿನ್ನದಂಗಡಿ ದರೋಡೆ: ರಾಬರಿ ಆಗಿದ್ದು 7 ಕೆ.ಜಿ ಬಂಗಾರ; ಡೈಮಂಡ್​​ ಕೂಡ ಕಳವು – Kannada News | Hunsur Gold Robbery: 7kg Gold and Diamonds Stolen in 5 Minutes

ದರೋಡೆಯಾದ ಬಂಗಾರದ ಅಂಗಡಿ.

ಮೈಸೂರು, ಡಿಸೆಂಬರ್ 29: ಹುಣಸೂರು ಪಟ್ಟಣದಲ್ಲಿ ಹಾಡಹಗಲೇ ಚಿನ್ನದಂಗಡಿ ದರೋಡೆ ಪ್ರಕರಣ ಸಂಬಂಧ ತನಿಖೆ ತೀವ್ರಗೊಂಡಿದೆ. ಹುಣಸೂರು ಬಸ್ ನಿಲ್ದಾಣದ ಹಿಂಭಾಗದ ಬೈಪಾಸ್‌ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ʼಗೆ ನುಗ್ಗಿದ್ದ 5  ಜನರ ಗ್ಯಾಂಗ್‌, ಸಿಬ್ಬಂದಿಗೆ ಗನ್ ತೋರಿಸಿ 7 ಕೆಜಿ ಚಿನ್ನ ಮತ್ತು ವಜ್ರ ದರೋಡೆ ಮಾಡಿ ಪರಾರಿಯಾಗಿತ್ತು. ಆರೋಪಿಗಳ ಪತ್ತೆಗೆ ಮೈಸೂರು ಎಸ್​ಪಿ 5 ತಂಡ ರಚಿಸಿದ್ದು, ಗ್ಯಾಂಗ್​​ಗೆ ಖಾಕಿ ಬಲೆ ಬೀಸಿದೆ.

ಐದೇ ನಿಮಿಷದಲ್ಲಿ ದರೋಡೆ

ಚಿನ್ನದಂಗಡಿ ದರೋಡೆ ನಡೆಸಿ ದುಷ್ಕರ್ಮಿಗಳು ಎಸ್ಕೇಪ್​​ ಆಗಿರುವ ದೃಶ್ಯ ಟಿವಿ9ಗೆ ಲಭ್ಯವಾಗಿದೆ. ಕೇವಲ ಐದೇ ಐದು ನಿಮಿಷಗಳಲ್ಲಿ ಗೋಲ್ಡ್​​ ಶಾಪ್​​ ರಾಬರಿ ನಡೆಸಲಾಗಿದ್ದು, ಕೆಜಿಗಟ್ಟಲೆ ಚಿನ್ನ ಕದ್ದು ಚಾಲಾಕಿಗಳು ಪರಾರಿಯಾಗಿದ್ದಾರೆ. ಮಧ್ಯಾಹ್ನ 2 ಗಂಟೆ 4 ನಿಮಿಷಕ್ಕೆ ಅಂಗಡಿಗೆ ಎಂಟ್ರಿಕೊಟ್ಟಿದ್ದ ಗ್ಯಾಂಗ್​​ 2 ಗಂಟೆ 9 ನಿಮಿಷಕ್ಕೆ ಶಾಪ್​​ನಿಂದ ತೆರಳಿದೆ. ಚಿನ್ನ ತೆಗೆದುಕೊಂಡ ಹೋಗಲು ಎರಡು ಚೀಲದಂತಹ ಬ್ಯಾಗ್ ತಂದಿದ್ದ ದರೋಡೆಕೋರರು, ಶೋಕೆಸ್​​ನಲ್ಲಿಟ್ಟಿದ್ದ ದೊಡ್ಡ ದೊಡ್ಡ ಗಾತ್ರದ ಆಭರಣವನ್ನ ಎರಡಲೇ ನಿಮಿಷದಲ್ಲಿ ಒಂದು ಕಡೆ ರಾಶಿ ಹಾಕಿದ್ದಾರೆ. ಬಳಿಕ ಮತ್ತೆರಡು ನಿಮಿಷದಲ್ಲಿ ದೊಡ್ಡ ಬ್ಯಾಗ್​​​ಗೆ ಅವನ್ನು ತುಂಬಿಕೊಂಡು ಎಸ್ಕೇಪ್​​ ಆಗಿದ್ದಾರೆ.

ಇದನ್ನೂ ಓದಿ: ಹುಣಸೂರಿನಲ್ಲಿ ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ

ಮ್ಯಾನೇಜರ್, ಸಿಬ್ಬಂದಿ ಸಮಯಪ್ರಜ್ಞೆ

ಮ್ಯಾನೇಜರ್, ಸಿಬ್ಬಂದಿ ಸಮಯಪ್ರಜ್ಞೆಯಿಂದ ಪೂರ್ತಿ ಅಂಗಡಿ ದರೋಡೆ ಆಗುವುದು ತಪ್ಪಿದೆ. ಮಡಿಕೇರಿ, ವಿರಾಜಪೇಟೆ, ನೆಲಮಂಗಲ, ಕೇರಳ ಮತ್ತು ಯುಎಇಯಲ್ಲಿ ಚಿನ್ನದಂಗಡಿಯ ಬ್ರ್ಯಾಂಚ್ ಇದ್ದು, ಇವುಗಳೆಲ್ಲದರ ಸಿಸಿ ಕ್ಯಾಮರಾ ವಿಡಿಯೋ ಕೇರಳದ ಕೇಂದ್ರ ಕಚೇರಿಯಲ್ಲಿ ಲಭ್ಯವಿವೆ. ವಿಡಿಯೋ ನೋಡಿ ಮ್ಯಾನೇಜರ್‌ ಅಸ್ಗರ್‌ಗೆ ಕೇಂದ್ರ ಕಚೇರಿಯಿಂದ ಮಾಹಿತಿ ನೀಡಲಾಗಿದ್ದು, ಆ ವೇಳೆ ಊಟ ಮಾಡುತ್ತಿದ್ದ ಮ್ಯಾನೇಜರ್ ಅರ್ಧಕ್ಕೆ ಊಟ ಬಿಟ್ಟು ಓಡಿ ಬಂದಿದ್ದಾರೆ. ಅಂಗಡಿ ಲಾಕ್ ಮಾಡಲು ಯತ್ನಿಸಿದ ಮ್ಯಾನೇಜರ್ ಮೇಲೆ ಫೈರ್ ಮಾಡಲು ಆರೋಪಿಗಳು ಯತ್ನಿಸಿದ್ದಾರೆ. ಅಲ್ಲಿಯವರೆಗೂ ಆರಾಮಾಗಿ ಭಯ ಇಲ್ಲದೆ ದರೋಡೆಗೆ ಮುಂದಾಗಿದ್ದ ಗ್ಯಾಂಗ್​​ ಮ್ಯಾನೇಜರ್ ಬಂದ ತಕ್ಷಣ ಆತುರಾತುರವಾಗಿ ಸಿಕ್ಕಷ್ಟು ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದೆ.

ದರೋಡೆ ನಡೆದಿರುವ ಚಿನ್ನಾಭರಣದ ಅಂಗಡಿಯನ್ನ ತಾತ್ಕಾಲಿಕವಾಗಿ ಪೊಲೀಸರು ಬಂದ್​​ ಮಾಡಿಸಿದ್ದಾರೆ. ಅಂಗಡಿ ಬಳಿ ತೆರಳದಂತೆ ನಿರ್ಬಂಧ ವಿಧಿಸಲಾಗಿದ್ದು, ಚಿನ್ನಾಭರಣ ಅಂಗಡಿ ಮಾಲೀಕ, ಮ್ಯಾನೇಜರ್​​, ಸಿಬ್ಬಂದಿ ವಿಚಾರಣೆ ನಡೆಸಲಾಗಿದೆ. ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:56 pm, Mon, 29 December 25

Source link

ಜೀವನದ ಕಠಿಣ ಕ್ಷಣ: ಚರ್ಚ್ ಸ್ಟ್ರೀಟ್​​ನಲ್ಲಿ ಕಂಡ ಅದ್ಭುತ ದೃಶ್ಯ, ಕಲಿಕೆಗಾಗಿ ಈ ಹುಡುಗಿಯ ಹೋರಾಟ ನೋಡಿ – Kannada News | Viral: Bengaluru Student Sells Christmas Items and Studies, Inspiring Hard Work

ಬೆಂಗಳೂರು, ಡಿ.29; ಬೆಂಗಳೂರಿನಲ್ಲೊಂದು ಹೃದಯಸ್ಪರ್ಶಿ ಘಟನೊಂದು ನಡೆದಿದೆ. ಇದೀಗ ಸೋಶಿಯಲ್​​​ ಮೀಡಿಯಾದಲ್ಲಿ ಈ ಪೋಸ್ಟ್​​ ಭಾರೀ ಸದ್ದು ಮಾಡುತ್ತಿದೆ. ವಿದ್ಯೆ ಎಂಬುದಕ್ಕೆ ಶ್ರೀಮಂತ, ಬಡವ, ಮನೆ, ಶಾಲೆ ಎಂಬ ತಾರತಮ್ಯವಿಲ್ಲ. ಶ್ರಮ, ಪ್ರಯತ್ನ, ಛಲ ಇದ್ದರೆ ಸಾಕು, ಯಾರು ಬೇಕಾದರೂ ಕಲಿಯಬಹುದು. ಇದೀಗ ಇಲ್ಲಿ ವೈರಲ್​ ಆಗಿರುವ ಪೋಸ್ಟ್​​ ಇದೇ ನೀತಿ ಪಾಠವನ್ನು ಹೇಳುತ್ತದೆ. ಬೆಂಗಳೂರಿನ ಜನನಿಬಿಡ ಪ್ರದೇಶವಾದ ಚರ್ಚ್ ಸ್ಟ್ರೀಟ್‌ನಲ್ಲಿ (Bengaluru Church Street) ಕ್ರಿಸ್‌ಮಸ್ ವಸ್ತುಗಳನ್ನು ಮಾರಾಟ ಮಾಡುತ್ತ, ಓದುತ್ತಿರುವ ಫೋಟೋ ಭಾರೀ ವೈರಲ್​​ ಆಗಿದೆ. ಇದು ನೆಟ್ಟಿಗರ ಮನಸ್ಸು ಕೂಡ ಗೆದ್ದಿದೆ. ಅಭಿನವ್ ಎಂಬುವವರು ಈ ಪೋಸ್ಟ್​​​ನ್ನು ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚರ್ಚ್ ಸ್ಟ್ರೀಟ್‌ನಲ್ಲಿ ಯುವತಿಯೊಬ್ಬಳು ಕ್ರಿಸ್‌ಮಸ್ ವಸ್ತುಗಳನ್ನು ಮಾರಾಟ ಮಾಡುತ್ತ, ಹೋಮ್​​​​​ ವರ್ಕ್​​​ ಮಾಡುವುದನ್ನು ಅಭಿನವ್ ತಮ್ಮ ಪೋಸ್ಟ್​​​ನಲ್ಲಿ ಹೇಳಿಕೊಂಡಿದ್ದಾರೆ. “ಕಠಿಣ ಶ್ರಮದ ಜತೆಗೆ ಶಿಕ್ಷಣ” ಎಂಬ ಶೀರ್ಷಿಕೆಯನ್ನು ಈ ಪೋಸ್ಟ್​​ಗೆ ನೀಡಿದ್ದಾರೆ. ಪೋಸ್ಟ್ 19,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಲಕ್ಷಕ್ಕೂ ಹೆಚ್ಚು ಜನ ಕಮೆಂಟ್​​ ಮಾಡಿದ್ದಾರೆ. ಈ ಹುಡುಗಿಯ ಅಚಲವಾದ ಕಲಿಕೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯೋಗಿ ಬುಲ್ಡೋಜರ್ ರಾಜ್ ಜತೆ ಹೋಲಿಕೆ ಬೇಡ: ಕೋಗಿಲು ಶೆಡ್​ಗಳ ತೆರವು ವಿಚಾರದಲ್ಲಿ ಕಾಂಗ್ರೆಸ್ ಬೆಂಬಲಕ್ಕೆ ನಿಂತ ಮುಸ್ಲಿಂ ಲೀಗ್

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ನೆಟ್ಟಿಗರು ಈ ಪೋಸ್ಟ್​ ಬಗ್ಗೆ ಕಮೆಂಟ್​​ ಮಾಡಿದ್ದಾರೆ. ಅವಳಂತಹ ಮಕ್ಕಳು ಜೀವನ ಸಾಗಿಸಲು ಏನನ್ನೂ ಮಾರಾಟ ಮಾಡಬೇಕಾಗಿಲ್ಲ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಆ ಹುಡುಗಿಗೆ ಖಂಡಿತ ನಾನು ಸಹಾಯ ಮಾಡುತ್ತೇನೆ.  ಅವಳ ಶಿಕ್ಷಣದ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಿಮ್ಮಲ್ಲಿ ಇರುವುದನ್ನು ಬಿಟ್ಟು, ನಿಮಗೆ ದೇವರು ನೀಡಿದ ಈ ಜೀವನಕ್ಕೆ ಧನ್ಯವಾದ ಹೇಳಿಕೆ. ಏಕೆಂದರೆ ನಿಮಗೆ ಶ್ರಮದ ಅನುಭವ ಇರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಕೆಲವೊಂದು ಜನರಿಗೆ ಈ ಜೀವನದಲ್ಲಿ ಅನ್ಯಾಯವಾಗಿದೆ. ಆದರೆ ದೇವರಿಗೆ ಒಂದು ಧನ್ಯವಾದ ಹೇಳಿ ಏಕೆಂದರೆ ಅವರು ನಿಮಗೆ ಇಂತಹ ಅದ್ಭುತ ಜ್ಞಾನ ನೀಡಿದ್ದಾನೆ ಎಂದು ಮತ್ತೊಬ್ಬರು ಹೇಳಿದ್ದಾರ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:58 pm, Mon, 29 December 25

Source link

Video: ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ: ಚಾಕುವಿನಿಂದ ಇರಿದು ಯುವಕನಿಗೆ ಹಲ್ಲೆ – Kannada News | Chikkamagaluru Crime: Man Stabbed at Akshay Bar in Cigarette Row, CCTV Shows Fight

ಚಿಕ್ಕಮಗಳೂರು, ಡಿ.29: ಚಿಕ್ಕಮಗಳೂರು ಹೊರವಲಯದ ಅಕ್ಷಯ್ ಬಾರ್​ನಲ್ಲಿ ಸಿಗರೇಟ್ ವಿಚಾರವಾಗಿ ವ್ಯಕ್ತಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಸಿಗರೇಟ್ ವಿಚಾರವಾಗಿ 2 ಗುಂಪುಗಳ ನಡುವೆ ಗಲಾಟೆ ಶುರುವಾಗಿದೆ. ಮುಗ್ತಿಹಳ್ಳಿಯ ಅನಿಲ್ ಕುಮಾರ್​ಗೆ ಎಂಬುವವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಇದೀಗ ಆರೋಪಿ ಯುವಕ ಲಿಖಿತ್​​ನ್ನು ಪೊಲೀಸರು ವಶ ಪಡೆದಿದ್ದಾರೆ. ಬಾರ್​​ನಲ್ಲಿ 2 ಗುಂಪುಗಳ ಗಲಾಟೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಂಭೀರವಾಗಿ ಗಾಯಗೊಂಡ ಅನಿಲ್ ಕುಮಾರ್ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

January Festival List 2026: ಜನವರಿ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ – Kannada News | January Festival Calendar 2026: Important Festival List Of January month

2026ರ ಮೊದಲ ತಿಂಗಳಾದ ಜನವರಿಗೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಇಂಗ್ಲೀಷ್‌ ಕ್ಯಾಲೆಂಡರ್‌ ಪ್ರಕಾರ ಜನವರಿ ತಿಂಗಳನ್ನು ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುತ್ತದೆ. ಎಲ್ಲರೂ  ತಿಂಗಳನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಆದರೆ ಈ ತಿಂಗಳಲ್ಲಿ ಹಲವಾರು ಹಬ್ಬಗಳು (festivals) ಆಚರಣೆಗಳಿವೆ. ಮೊದಲ ತಿಂಗಳಾದ ಜನವರಿಯಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ.

ಜನವರಿ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ:

  • ಜನವರಿ 01 : ಮುಕ್ಕೋಟಿ ದ್ವಾದಶಿ
  • ಜನವರಿ 01 : ಪ್ರದೋಷ
  • ಜನವರಿ 03 : ಹುಣ್ಣಿಮೆ
  • ಜನವರಿ 04 : ಧನುರ್ವೈಧೃತಿಯೋಗ
  • ಜನವರಿ 04 : ಪುಷ್ಯ ಕೃಷ್ಣ ಪಕ್ಷ ಆರಂಭ
  • ಜನವರಿ 06 : ಸಂಕಷ್ಟಹರ ಚತುರ್ಥಿ
  • ಜನವರಿ 11 : ಮಹಾನಕ್ಷತ್ರ ಉತ್ತರಾಷಾಢಾ
  • ಜನವರಿ 14 : ಮಕರ ಸಂಕ್ರಮಣ
  • ಜನವರಿ 14 : ಸರ್ವೈಕಾದಶಿ ಷಟ್ತಿಲಾ
  • ಜನವರಿ 16 : ಮಾಸ ಶಿವರಾತ್ರಿ
  • ಜನವರಿ 16 : ಪ್ರದೋಷ
  • ಜನವರಿ 18 : ಮೌನಿ ಅಮಾವಾಸ್ಯೆ
  • ಜನವರಿ 18 : ಪುರಂದರದಾಸರ ಆರಾಧನೆ
  • ಜನವರಿ 19 : ಮಾಘ ಶುಕ್ಲ ಪಕ್ಷ
  • ಜನವರಿ 21 : ಕಲ್ಕಿ ಜಯಂತಿ
  • ಜನವರಿ 21 : ಶಬನ್ ಪ್ರಾರಂಭ
  • ಜನವರಿ 23 : ವಸಂತ ಪಂಚಮಿ
  • ಜನವರಿ 24 : ಮಹಾನಕ್ಷತ್ರ ಶ್ರವಣ
  • ಜನವರಿ 25 : ರಥ ಸಪ್ತಮಿ
  • ಜನವರಿ 26 : ಭೀಷ್ಮಾಷ್ಟಮಿ
  • ಜನವರಿ 27 : ಮಧ್ವ ಜಯಂತಿ
  • ಜನವರಿ 29 : ಸರ್ವೈಕಾದಶಿ ಜಯಾ
  • ಜನವರಿ 30 : ಶ್ರೀ ವಾದಿರಾಜ ಜಯಂತಿ
  • ಜನವರಿ 30 : ಪ್ರದೋಷ
  • ಜನವರಿ 30 : ಭೀಷ್ಮಾದ್ವಾದಶಿ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ. ದೇವೇಗೌಡ – Kannada News | HDD Pooja at Haradanahalli Temple before Hassan JDS Convention

ಹಾಸನ, ಡಿಸೆಂಬರ್ 29: ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹಾಗೂ ಹರಪನಹಳ್ಳಿಯ ದೇವೇಶ್ವರಸ್ವಾಮಿ ದೇವಸ್ಥಾನದಲ್ಲಿ ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ವಿಶೇಷ ಪೂಜೆ ಸಲ್ಲಿಸಿದರು. ಪುತ್ರ ಎಚ್.ಡಿ.ರೇವಣ್ಣ, ಸೊಸೆ ಭವಾನಿ ರೇವಣ್ಣ ಜೊತೆಯಿದ್ದರು. ಹಾಸನದಲ್ಲಿ ನಡೆಯಲಿರುವ ಜೆಡಿಎಸ್ ಕಾರ್ಯಕರ್ತರ ಸಮಾವೇಶಕ್ಕೂ ಮುನ್ನ ಪೂಜೆ ನೆರವೇರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಧರ್ಮಸ್ಥಳ ಕೇಸ್​: ‘ಬುರುಡೆ’ ಕಾಟಕ್ಕೆ ಬೆಚ್ಚಿಬಿದ್ದಿದ್ದ ಆತ​​; SIT ವರದಿಯಲ್ಲಿ ಸ್ಫೋಟಕ ಮಾಹಿತಿ – Kannada News | Dharmasthala Case: SIT Report Reveals Skull Terrorized Conspirator Jayanth

ಮಂಗಳೂರು, ಡಿಸೆಂಬರ್​​ 29: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ ಪ್ರಕರಣ ಸಂಬಂಧ ಕೋರ್ಟ್​ಗೆ ಎಸ್​ಐಟಿ ಸಲ್ಲಿಸಿದ ಪ್ರಾಥಮಿಕ ವರದಿ ಹಲವಾರು ಕುತೂಹಲಕಾರಿ ಅಂಶಗಳನ್ನು ಬಹಿರಂಗಗೊಳಿಸಿದೆ. ಧರ್ಮಸ್ಥಳದ ವಿರುದ್ಧ ಆರೋಪ ಹೊರಿಸಿದ್ದ ಬುರುಡೆ ಗ್ಯಾಂಗ್​​ ಸದಸ್ಯನೋರ್ವನಿಗೆ ಅವರು ತಂದಿದ್ದ ಬುರುಡೆಯೇ ಕಾಟ ಕೊಟ್ಟಿತ್ತು ಎನ್ನುವ ಮಾಹಿತಿ SIT ವರದಿಯಲ್ಲಿ ಉಲ್ಲೇಖವಾಗಿದೆ.

ಗ್ಯಾಂಗ್​​ ಸದಸ್ಯ ಜಯಂತ್​​ ಬುರುಡೆಯನ್ನ ರೈಲಿನ ಮೂಲಕ ದೆಹಲಿಗೂ ತೆಗೆದುಕೊಂಡು ಹೋಗಿದ್ದ. ಇತರರಾದ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್ ಮತ್ತು ಸುಜಾತಾ ಫ್ಲೈಟ್​​ ಮೂಲಕ ತೆರಳಿದ್ದರು. ಈ ವೇಳೆ ಒಂದೇ ರೂಂನಲ್ಲಿ ಚಿನ್ನಯ್ಯ, ಮಟ್ಟಣ್ಣನವರ್​ ಮತ್ತು ಜಯಂತ್​ ಮಲಗಿದ್ದ ವೇಳೆ ಕೆಟ್ಟ ಕನಸು ಬಿದ್ದು ಜಯಂತ್​​ ಕಿರುಚಿಕೊಂಡಿದ್ದ. ಇದೇ ಕಅರಣಕ್ಕೆ ಹೆದರಿ ವಾಪಸ್ ಬುರುಡೆ ತರಲು ಒಪ್ಪದೆ ಅದನ್ನು ದೆಹಲಿಯಲ್ಲೇ ಬಿಟ್ಟು ಬೆಂಗಳೂರಿಗೆ ವಾಪಸ್ ಆಗಿದ್ದ. ಬಳಿಕ ಮತ್ತೆ ವಿಮಾನದ ಮೂಲದ ದೆಹಲಿಗೆ ತೆರಳಿದ್ದ ಜಯಂತ್​, ರೈಲಿನ ಮೂಲಕ ದೆಹಲಿಯಿಂದ ನೇರವಾಗಿ ಮಂಗಳೂರಿಗೆ ಬುರುಡೆ ತಂದಿದ್ದ. ತಿಮರೋಡಿ ಮನೆಗೆ ಅದನ್ನು ಕೊಂಡೊಯ್ದಿದ್ದ ಎಂದು ವರದಿಯಲ್ಲಿ ಎಸ್​​ಐಟಿ ಉಲ್ಲೇಖಿಸಿದೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್​​ಗೆ ಮೇಜರ್​​ ಟ್ವಿಸ್ಟ್​​; SIT ತನಿಖೆಯಿಂದ ಕೊನೆಗೂ ಬಯಲಾಯ್ತು ಸತ್ಯ!

ಬುರುಡೆ ಜೊತೆ ರಾತ್ರಿ ಕಳೆದಿದ್ದ ಸುಜಾತಾ

ದೆಹಲಿಯಲ್ಲಿ ಪ್ರತ್ಯೇಕ ರೂಮ್​ನಲ್ಲಿ ಇದ್ದ ಸುಜಾತಾ ಭಟ್ ಅರಿವಿಲ್ಲದೇ ಬುರುಡೆ ಜೊತೆ ರಾತ್ರಿ ಕಳೆದಿದ್ದರು. ದೆಹಲಿಯ ವಿಠ್ಠಲ ಮಂದಿರದಲ್ಲಿ ಆರೋಪಿಗಳು ರೂಂ ಮಾಡಿದ್ದು, ಸುಜಾತಾ ಭಟ್ ಇದ್ದ ರೂಂ ಮಂಚದ ಕೆಳಗೆ ಜಯಂತ್ ಬುರುಡೆ ಬಾಕ್ಸ್​​ ಇಟ್ಟಿದ್ದ. ಈ ವೇಳೆ ಬಾಕ್ಸ್​ನಲ್ಲಿ ಏನಿದೆ ಅಂತಾ ಸುಜಾತಾ ಭಟ್ ಕೇಳಿದ್ದು, ಏನಿಲ್ಲ ಅಂತಾ ಹೇಳಿ ಜಯಂತ್ ಸುಮ್ಮನಾಗಿದ್ದ. ಹೀಗಾಗಿ ಅಂದು ರಾತ್ರಿ ಸುಜಾತಾ ಭಟ್ ಮಲಗಿದ್ದ ಮಂಚದ ಕೆಳಗೇ ಬುರುಡೆ ಇತ್ತು. ಅದೇ ರಾತ್ರಿ ಜಯಂತ್​​​ಗೆ ಕೆಟ್ಟ ಕನಸು ಕೂಡ ಬಿದ್ದಿತ್ತು ಎಂದು ಕೋರ್ಟ್​ಗೆ ಎಸ್​ಐಟಿ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ – Kannada News | Bangladesh: House Set Ablaze in Pirojpur Amid Unrest, Authorities Probe Incident

ಬಾಂಗ್ಲಾದೇಶ, ಡಿಸೆಂಬರ್ 29: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮತ್ತಷ್ಟು ಹೆಚ್ಚಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗೆ ಬೆಂಕಿ ಹಚ್ಚಲಾಗಿದೆ. ಹಿಂದೂ ಯುವಕ ದೀಪು ಚಂದ್ರ ದಾಸ್‌ ಗುಂಪು ಹತ್ಯೆ ಖಂಡಿಸಿ ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದಾದ್ಯಂತ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಒಂದೆಡೆ ನಡೆಯುತ್ತಿವೆ. ಪಿರೋಜ್‌ಪುರದ ಡುಮ್ರಿಟೋಲಾ ಗ್ರಾಮದಲ್ಲಿರುವ ಸಹಾ ಅವರ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ.

ಚಟ್ಟೋಗ್ರಾಮ್‌ನ ರೌಜಾನ್‌ನಲ್ಲಿ, ಜಿಹಾದಿಗಳು ಬೆಳಗಿನ ಜಾವ ಹಿಂದೂ ಮನೆಗಳಿಗೆ ಅದೇ ರೀತಿ ಬೆಂಕಿ ಹಚ್ಚಿದ್ದರು. ದೇಶದಲ್ಲಿ ಉಳಿದಿರುವ ಎಲ್ಲಾ ಹಿಂದೂ ಮನೆಗಳನ್ನು ಹೀಗೆಯೇ ಸುಡುತ್ತಾರೆಯೇ? ಹಿಂದೂಗಳನ್ನು ಸಜೀವದಹನ ಮಾಡುವುದೇ ಅವರ ಗುರಿಯೇ ಎನ್ನುವ ಅನುಮಾನ ಮೂಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿಎಂ ಹೇಳಿ 20 ದಿನವಾದ್ರೂ ಬಂದಿಲ್ಲ ಗೃಹಲಕ್ಷ್ಮಿ ದುಡ್ಡು, ಎಲ್ಲೋಯ್ತು 5 ಸಾವಿರ ಕೋಟಿ ರೂ: ಮಹೇಶ್ ಟೆಂಗಿನಕಾಯಿ ಪ್ರಶ್ನೆ – Kannada News | Gruhalakshmi Scheme money Payment Delay once again Sparks Political Row in Karnataka

ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಗೃಹಲಕ್ಷ್ಮಿ ಯೋಜನೆ ಸಂಗ್ರಹ ಚಿತ್ರ

ಹುಬ್ಬಳ್ಳಿ, ಡಿಸೆಂಬರ್ 29: ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಬಿಡುಗಡೆಗೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ (BJP) ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂದು ಆರೋಪಿಸಿದರು.

ಈ ವಿಷಯವನ್ನು ತಾವು ವಿಧಾನಸಭೆ ಅಧಿವೇಶನದಲ್ಲೇ ಪ್ರಸ್ತಾಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿರುವುದಾಗಿ ತಿಳಿಸಿದರು. ಅಧಿವೇಶನದ ವೇಳೆ ಸಿಎಂ ಆದಷ್ಟು ಬೇಗ ಹಣ ವರ್ಗಾವಣೆ ಮಾಡುವ ಭರವಸೆ ನೀಡಿದ್ದರು. ಆದರೆ ಸಿಎಂ ಹೇಳಿ ಇಪ್ಪತ್ತು ದಿನಗಳಾದರೂ ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಎಂದು ಟೀಕಿಸಿದರು.

ಐದು ಸಾವಿರ ಕೋಟಿ ರೂ. ಹಣ ಎಲ್ಲಿ: ಟೆಂಗಿನಕಾಯಿ ಪ್ರಶ್ನೆ

ಪೂರಕ ಬಜೆಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅಗತ್ಯವಿರುವ ಐದು ಸಾವಿರ ಕೋಟಿ ರೂಪಾಯಿ ಹಣದ ಯಾವುದೇ ಪ್ರಸ್ತಾಪವೇ ಇಲ್ಲ. ಹಾಗಾದರೆ ಆ ಹಣ ಎಲ್ಲಿ ಹೋಯ್ತು ಎಂಬುದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಟೆಂಗಿನಕಾಯಿ ಆಗ್ರಹಿಸಿದರು.

ಇನ್ನು ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾದ ನಂತರ ಅಧಿಕಾರಿಗಳಿಗೆ ಮಾಹಿತಿ ನೀಡದಂತೆ ತಾಕೀತು ಮಾಡಲಾಗಿದೆ ಎಂದು ಮಹೇಶ್ ಟೆಂಗಿನಕಾಯಿ ಆರೋಪಿಸಿದರು. ಹತ್ತನೇ ತಾರೀಖಿನಿಂದಲೇ ಅಧಿಕಾರಿಗಳಿಗೆ ಮಾಹಿತಿ ನೀಡದಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಫೆಬ್ರವರಿ–ಮಾರ್ಚ್ ತಿಂಗಳ ಹಣದ ಬಗ್ಗೆ ಮಾಹಿತಿ ಕೇಳಿದ್ದರೂ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದರು.

ಇದನ್ನೂ ಓದಿ: ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಕ್ಷಮೆಗೆ ಪ್ರತಿಪಕ್ಷ ಪಟ್ಟು

ಇತರೆ ಜಿಲ್ಲೆಗಳಿಗೂ ಮಾಹಿತಿ ಕೇಳಿದರೂ ಯಾರೂ ಪ್ರತಿಕ್ರಿಯಿಸಿಲ್ಲ. ಮೊದಲು ಹಣ ಜಮೆಯಾಗಿದೆ ಎಂಬ ಗೊಂದಲಕಾರಿ ಉತ್ತರ ನೀಡಿದ ಅಧಿಕಾರಿಗಳು, ನಂತರ ಕೆಲ ಜಿಲ್ಲೆಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಇನ್ನೂ ಜಮೆಯಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದರು. ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link