ನಷ್ಟದ ಭೀತಿಯಲ್ಲಿ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ನಿರ್ಮಾಪಕರು – Kannada News
ಚಿತ್ರರಂಗದಲ್ಲಿ ದೊಡ್ಡ ತಾರಾಗಣ ಹಾಗೂ ಭರ್ಜರಿ ಪ್ರಚಾರದೊಂದಿಗೆ ತೆರೆಗೆ ಬರುವ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತವೆ ಎಂಬ ನಂಬಿಕೆ ಸದಾ ನಿಜವಾಗುವುದಿಲ್ಲ. ಇದಕ್ಕೆ ಲೇಟೆಸ್ಟ್ ಉದಾಹರಣೆ ಸಿಕ್ಕಿದೆ. ಭಾರಿ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಗಿದ್ದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ಇದೀಗ ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಕಾಣದೆ ಸಂಪೂರ್ಣವಾಗಿ ಮಕಾಡೆ ಮಲಗುವ ಸೂಚನೆ ನೀಡಿದೆ. ವೀಕೆಂಡ್ ಮುಗಿದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದರೂ ಚಿತ್ರದ ಗಳಿಕೆಯಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಪ್ರಸ್ತುತ ದೇಶಾದ್ಯಂತ 1,380 ಶೋಗಳಲ್ಲಿ ಈ…