Category Archives: Blog

Your blog category

ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆ ‘ಕೂಸಿನ ಮನೆ’ ಸಂಕಷ್ಟದಲ್ಲಿ: ಸಿಬ್ಬಂದಿಗೆ ಸಿಗುತ್ತಿಲ್ಲ ಸಂಬಳ – Kannada News | Kusina Mane Scheme in Koppal Faces Fund Crunch, Staff Unpaid: Impact on NREGA Mothers

ಕೊಪ್ಪಳ, ಫೆ.3: ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷೆ ಯೋಜನೆ ‘ಕೂಸಿನ ಮನೆ’ ಇದೀಗ ಆರ್ಥಿಕ ಸಂಕಷ್ಟಕ್ಕೆ (Kusina Mane Crisis) ಸಿಲುಕಿದೆ. ಕಳೆದ ಒಂದು ತಿಂಗಳಿನಿಂದ ಕೆಲಸ ಮಾಡಿದ ಸಿಬ್ಬಂದಿಗೆ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲೆಯ ಹಲವೆಡೆ ಈ ಕೇಂದ್ರಗಳಿಗೆ ಬೀಗ ಬಿದ್ದಿದೆ.ನರೇಗಾ ಕೆಲಸಕ್ಕೆ ಹೋಗುವ ಮಹಿಳೆಯರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಬಿಟ್ಟು ಹೋಗಲಿ ಎಂಬ ಉದ್ದೇಶದಿಂದ ನರೇಗಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಆದರೆ, ಇದೀಗ ಸಿಬ್ಬಂದಿಗೆ ನೀಡಬೇಕಾದ ಸಂಬಳದ ಹಣ ಬಿಡುಗಡೆಯಾಗದ ಕಾರಣ, ಅಸಮಾಧಾನಗೊಂಡ ಸಿಬ್ಬಂದಿ ಕೇಂದ್ರಗಳನ್ನು ಬಂದ್ ಮಾಡಿದ್ದಾರೆ.

ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೂಸಿನ ಮನೆಗೆ ಬಾಗಿಲು ಹಾಕಲಾಗಿದ್ದು, ಮಕ್ಕಳು ಆಡಬೇಕಿದ್ದ ಆಟಿಕೆಗಳು ಧೂಳು ಹಿಡಿಯುತ್ತಿವೆ. ಜಿಲ್ಲೆಯ ಹಾಲವರ್ತಿ ಹಾಗೂ ಗಿಣಗೇರಿಗಳಲ್ಲಿ ಮಾತ್ರ ಸದ್ಯಕ್ಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ ಕಡೆಗಳಲ್ಲಿ ಬಂದ್​ ಮಾಡಲಾಗಿದೆ. ಈ ಹಿಂದೆ ಕೂಸಿನ ಮನೆಯಲ್ಲಿ ಕೆಲಸ ಮಾಡುವ ಕೇರ್ ಟೇಕರ್ಸ್‌ಗಳಿಗೆ (ಇಬ್ಬರು ಸಿಬ್ಬಂದಿ) ನರೇಗಾ ಯೋಜನೆಯಡಿ ದಿನಕ್ಕೆ 370 ರೂ. ರಂತೆ ಗ್ರಾಮ ಪಂಚಾಯತ್ ಅಧಿಕಾರಿಗಳೇ ವೇತನ ಪಾವತಿಸುತ್ತಿದ್ದರು. ಜೊತೆಗೆ ಪ್ರತಿ ಮಗುವಿನ ಪೌಷ್ಟಿಕ ಆಹಾರಕ್ಕಾಗಿ ತಲಾ 12 ರೂ. ಖರ್ಚು ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಗ್ರಾ.ಪಂ ಮೂಲಕ ಹಣ ಪಾವತಿಸದಂತೆ ಆದೇಶ ಬಂದಿರುವುದು ಈ ಗೊಂದಲಕ್ಕೆ ಮತ್ತು ವೇತನ ವಿಳಂಬಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಈ ಕುರಿತು ಪ್ರತಿಕ್ರಿಯಿಸಿರುವ ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ, ವೇತನ ವಿಳಂಬವಾಗಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಹಣ ಬಂದಿದ್ದು, ಶೀಘ್ರದಲ್ಲೇ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡಿ ಸಿಬ್ಬಂದಿಯ ವೇತನ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 145 ಕೂಸಿನ ಮನೆಗಳು ಮಂಜೂರಾಗಿವೆ. ಆದರೆ ಒಂದು ತಿಂಗಳಿನಿಂದ ಸಂಬಳವಿಲ್ಲದೆ ಸಿಬ್ಬಂದಿಗಳು ಕೆಲಸ ಬಿಡುತ್ತಿದ್ದಾರೆ. ಇದೀಗ ಇದರಿಂದ ಕೂಲಿ ಕೆಲಸಕ್ಕೆ ಹೋಗುವ ತಾಯಂದಿರಿಗೆ ಮಕ್ಕಳನ್ನು ಎಲ್ಲಿ ಬಿಡಬೇಕೆಂಬ ಆತಂಕ ಎದುರಾಗಿದೆ.

ಇದನ್ನೂ ಓದಿ: ಇದು ಬ್ರಾಂಡ್ ಬೆಂಗಳೂರಲ್ಲ, ಬ್ಯಾಡ್ ಬೆಂಗಳೂರು: ಕಸದಿಂದ ತುಂಬಿ ತುಳುಕಿದ ಬಸ್​​ ನಿಲ್ದಾಣ

ಒಂದು ಕಡೆ ಗ್ಯಾರಂಟಿ ಯೋಜನೆಗಳ ಅಬ್ಬರದ ನಡುವೆ, ತಳಮಟ್ಟದ ಕೂಲಿ ಕಾರ್ಮಿಕರ ಮಕ್ಕಳ ಹಿತ ಕಾಯುವ ಇಂತಹ ಮಹತ್ವದ ಯೋಜನೆಗಳು ಆರ್ಥಿಕ ಕಾರಣಗಳಿಗಾಗಿ ನಿಂತು ಹೋಗುತ್ತಿರುವುದು ದುರದೃಷ್ಟಕರ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ‘ಕೂಸಿನ ಮನೆ’ಗಳನ್ನು ಪುನರಾರಂಭಿಸಬೇಕಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಟೀಂ ಇಂಡಿಯಾದ ಐವರಿಗೆ ಇದು ಚೊಚ್ಚಲ ಟಿ20 ವಿಶ್ವಕಪ್ – Kannada News | T20 World Cup 2026:Team India’s Five Young Debutants Ready to Shine

ಅಭಿಷೇಕ್ ಶರ್ಮಾ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದ್ದಾರೆ. 2024 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿರುವ ಅಭಿಷೇಕ್ ಶರ್ಮಾ, ರೋಹಿತ್ ಶರ್ಮಾ ನಿವೃತ್ತಿಯ ನಂತರ ತಂಡದಲ್ಲಿ ಆರಂಭಿಕನಾಗಿ ಆಡುತ್ತಿದ್ದಾರೆ. ಅಂದಿನಿಂದ ಟಿ20 ತಂಡದ ಭಾಗವಾಗಿರುವ ಅಭಿಷೇಕ್ 38 ಟಿ20 ಪಂದ್ಯಗಳಲ್ಲಿ 194.74 ಸ್ಟ್ರೈಕ್ ರೇಟ್‌ನಲ್ಲಿ 1297 ರನ್ ಗಳಿಸಿದ್ದಾರೆ.

Source link

ಬ್ಯಾಂಕ್ ಲಾಕರ್ ಕೀ ಕಳೆದುಹೋದರೆ ಮುಂದೇನು? ಲಾಕರ್ ಒಡೆಯಲಾಗುತ್ತಾ? ಇಲ್ಲಿದೆ ಪ್ರಕ್ರಿಯೆ – Kannada News | What happens whey bank locker key lost, whats the procedure to break open it

ಬೆಲೆಬಾಳುವ ಆಭರಣಗಳು, ಪ್ರಮುಖ ದಾಖಲೆಗಳನ್ನು ಮನೆಯಲ್ಲಿ ಇಟ್ಟರೆ ಕಳ್ಳತನದ ಅಪಾಯ ಇರುತ್ತದಾದ್ದರಿಂದ ಬಹಳ ಜನರು ಬ್ಯಾಂಕ್ ಲಾಕರ್​ಗಳಲ್ಲಿ (Bank Locker) ಇವುಗಳನ್ನು ಇರಿಸುವುದುಂಟು. ಗ್ರಾಹಕರು ತಮ್ಮ ಲಾಕರ್ ಕೀಲಿಯನ್ನು ಕಳೆದುಕೊಂಡರೆ ಏನಾಗುತ್ತದೆ? ಬ್ಯಾಂಕ್ ಬಳಿ ಡೂಪ್ಲಿಕೇಟ್ ಕೀಲಿ ಇರುತ್ತದಾ? ಲಾಕರ್ ತೆರೆಯುವ ಪ್ರಕ್ರಿಯೆ ಹೇಗಿರುತ್ತೆ, ಇತ್ಯಾದಿ ಮಾಹಿತಿ ಇಲ್ಲಿದೆ.

ಬ್ಯಾಂಕ್ ಲಾಕರ್​ಗಳಿಗೆ ಎರಡು ಕೀಲಿಗಳಿರುತ್ತವೆ. ಒಂದು ಕೀಲಿ ಗ್ರಾಹಕರಿಗೆ ಕೊಡಲಾಗುತ್ತದೆ. ಮತ್ತೊಂದು ಕೀಲಿ ಬ್ಯಾಂಕ್​ನಲ್ಲಿ ಇರುತ್ತದೆ. ಈ ಎರಡು ಕೀಲಿಗಳೂ ಬೇರೆ ಬೇರೆಯವೇ. ಲಾಕರ್ ಓಪನ್ ಮಾಡಲು ಈ ಎರಡೂ ಕೀಲಿಗಳ ಬಳಕೆ ಬೇಕು. ಒಂದು ಕೀಲಿಯಿಂದ ಲಾಕರ್ ತೆರೆಯಲು ಆಗುವುದಿಲ್ಲ. ಹೀಗಾಗಿ, ಗ್ರಾಹಕರು ಕೀಲಿ ಕಳೆದುಕೊಂಡಾಗ ಅದನ್ನು ತೆರೆಯುವ ಏಕೈಕ ಮಾರ್ಗವೆಂದರೆ ಲಾಕರ್ ಮುರಿಯುವುದು. ಲಾಕರ್ ಓಪನ್ ಮಾಡುವ ಪ್ರಕ್ರಿಯೆ ಇಲ್ಲಿದೆ:

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್; ಭಾರತದ ಕೃಷಿ ಮಾರುಕಟ್ಟೆ ರಕ್ಷಣೆಯಲ್ಲಿ ರಾಜಿ ಇರೋದಿಲ್ಲವಾ?

  • ಮೊದಲಿಗೆ, ನೀವು ಲಾಕರ್ ಕೀಲಿ ಕಳೆದುಕೊಂಡಾಗ ಕೂಡಲೇ ಆ ಬ್ಯಾಂಕ್ ಬ್ರ್ಯಾಂಚ್​ಗೆ ಹೋಗಿ ಅಧಿಕೃತವಾಗಿ ಪತ್ರದ ಮೂಲಕ ಮಾಹಿತಿ ನೀಡಬೇಕು.
  • ಪೊಲೀಸ್ ಠಾಣೆಗೆ ಹೋಗಿ ಲಾಕರ್ ಕೀಲಿ ಕಳುವಾಗಿರುವುದನ್ನು ತಿಳಿಸಿ ಕಂಪ್ಲೇಂಟ್ ಕೊಟ್ಟು ಅದರ ಕಾಪಿಯನ್ನು ಪಡೆದುಕೊಳ್ಳಬೇಕು.
  • ನಂತರ ಬ್ಯಾಂಕಿಗೆ ತೆರಳಿ ಪೊಲೀಸ್ ಕಂಪ್ಲೇಂಟ್ ಪ್ರತಿ ಜೊತೆಗೆ ಲಾಕರ್ ಕೀಲಿ ಕಳುವಾಗಿದೆ ಎಂದು ಬ್ಯಾಂಕಿನಲ್ಲಿ ದೂರು ಸಲ್ಲಿಸಬೇಕು.
  • ಬ್ಯಾಂಕು ನಿಮ್ಮಿಂದ ಅಂಡರ್​ಟೇಕಿಂಗ್ ಅನ್ನು ಪಡೆಯಬಹುದು. ಪೊಲೀಸ್ ಕಂಪ್ಲೇಂಟ್ ಜೊತೆಗೆ ಆಧಾರ್, ಪ್ಯಾನ್ ಕಾರ್ಡ್ ಇತ್ಯಾದಿ ದಾಖಲೆಗಳನ್ನೂ ಬ್ಯಾಂಕು ಕೇಳಬಹುದು.
  • ಜಂಟಿ ಖಾತೆಯಾದರೆ ಎಲ್ಲಾ ಖಾತೆದಾರರೂ ಬ್ಯಾಂಕಿಗೆ ಹೋಗಿ ದೂರಿನಲ್ಲಿ ಸಹಿ ಹಾಕಬೇಕಾಗುತ್ತದೆ.
  • ಇದಾದ ಬಳಿಕ ಲಾಕರ್ ಮುರಿಯುವ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಈ ಕಾರ್ಯಕ್ಕಾಗಿ ಬ್ಯಾಂಕು ಒಂದು ಸಮಯ ನಿಗದಿ ಮಾಡುತ್ತದೆ.
  • ಆ ಸಮಯಕ್ಕೆ ಖಾತೆದಾರ ಅಥವಾ ಖಾತೆದಾರರು ಹೋಗಬೇಕು. ಖಾತೆದಾರ ಮತ್ತು ಬ್ಯಾಂಕ್ ಅಧಿಕಾರಿಯೊಬ್ಬರ ಉಪಸ್ಥಿತಿಯಲ್ಲಿ ತಜ್ಞರೊಬ್ಬರು ಲಾಕರ್ ಮುರಿಯುತ್ತಾರೆ.
  • ನಂತರ, ಹೊಸ ಲಾಕರ್ ಅನ್ನು ಸ್ಥಾಪಿಸಿ ಗ್ರಾಹಕರಿಗೆ ಹೊಸ ಕೀಲಿ ಕೊಡಲಾಗುತ್ತದೆ.

ಇದನ್ನೂ ಓದಿ: ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಗಳ ಭರ್ಜರಿ ಕುಸಿತ; ಇಗೋ ಇಲ್ಲಿವೆ ಕಾರಣಗಳು

ಗಮನಿಸಬೇಕಾದ ಸಂಗತಿ ಎಂದರೆ, ಬ್ಯಾಂಕ್ ಲಾಕರ್ ಮುರಿಯುವುದರಿಂದ ಹಿಡಿದು ಹೊಸ ಲಾಕರ್ ಹಾಕುವವರೆಗೆ ಎಲ್ಲಾ ವೆಚ್ಚವನ್ನೂ ಗ್ರಾಹಕರೇ ಭರಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇದು ಬ್ರಾಂಡ್ ಬೆಂಗಳೂರಲ್ಲ, ಬ್ಯಾಡ್ ಬೆಂಗಳೂರು: ಕಸದಿಂದ ತುಂಬಿ ತುಳುಕಿದ ಬಸ್​​ ನಿಲ್ದಾಣ – Kannada News | Brand Bengaluru vs. Bad Bengaluru: CV Raman Nagar Bus Stop Drowning in Waste and Neglect*

ಕಸದಿಂದ ಕಾಣುತ್ತಿಲ್ಲ ಬಸ್​​ ನಿಲ್ದಾಣ Image Credit source: Tv9 kannada

ಬೆಂಗಳೂರು, ಫೆ.3: ಬೆಂಗಳೂರು, ಭಾರತದ ‘ಸಿಲಿಕಾನ್ ವ್ಯಾಲಿ’ ಮತ್ತು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರವಾಗಿದೆ. 14,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು 44ಕ್ಕೂ ಹೆಚ್ಚು ಯುನಿಕಾರ್ನ್ ಕಂಪನಿಗಳೊಂದಿಗೆ, ಇದು ಐಟಿ, ಎಐ (AI), ಡೀಪ್‌ಟೆಕ್ ಮತ್ತು ನಾವೀನ್ಯತೆಯ ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಎಲ್ಲ ಕೀರ್ತಿಗೂ ವಿರುದ್ಧವಾಗಿದೆ. ಒಂದು ಕಡೆ ರಾಜ್ಯ ಸರ್ಕಾರದ ಬೆಂಗಳೂರನ್ನು ಬ್ರಾಂಡ್​​ ಸಿಟಿ ಮಾಡುತ್ತೇವೆ ಎಂದು ಹೇಳುತ್ತಿದೆ. ಆದರೆ ಬೆಂಗಳೂರಿನ ಕಸ ರಾಶಿಯನ್ನು ನೋಡಿದ್ರೆ, ಇದು ಬ್ರಾಂಡ್ ಬೆಂಗಳೂರಲ್ಲ, ಬ್ಯಾಡ್ ಬೆಂಗಳೂರು ಎಂದು ಜನ ಹೇಳುತ್ತಿದ್ದಾರೆ. ಇದೇನು ಬಸ್ ನಿಲ್ದಾಣವೋ ಅಥವಾ ಜಿಬಿಎ ಡಂಪಿಂಗ್ ಸ್ಥಳವೋ ಎಂಬುದು ಗೊತ್ತಾಗುತ್ತಿಲ್ಲ. ಸಿ ವಿ ರಾಮನ್ ನಗರದ NGEF ವೃತ್ತದ ಬಳಿ ಇರುವ ಬಸ್​​ ನಿಲ್ದಾಣ ಅವಸ್ಥೆ ಇದು.

ಸಿ ವಿ ರಾಮನ್ ನಗರದ NGEF ವೃತ್ತದ ಬಳಿಯ ಬಸ್ ಸ್ಟಾಪ್ ಸುಮಾರು ದಿನಗಳಿಂದ ಇದೆ ಅವಸ್ಥೆಯಲ್ಲಿದೆ, ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಿಸಿಲ್ಲ, ಗಮನಿಸಿದ್ರು ಇದನ್ನು ಸರಿ ಮಾಡುವ ಯೋಚನೆ ಮಾಡಿಲ್ಲ. ನಾವು ಬೆಂಗಳೂರನ್ನು ಬದಲಾವಣೆ ಮಾಡುತ್ತೇವೆ. “ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ” ಎಂದು ಕೊಚ್ಚಿಕೊಳ್ಳುತ್ತಿರುವ ಜಿಬಿಎ (ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಈ ಕಡೆ ತಲೆ ಕೂಡ ಹಾಕಿಲ್ಲ. ಬಸ್ ಸ್ಟಾಪ್ ಮುಂದೆ ರಾಶಿ ರಾಶಿ ಕಸದ ಮಧ್ಯೆ ಬಸ್​​ಗಾಗಿ ಪ್ರಯಾಣಿಕರ ಪರದಾಡುತ್ತಿದ್ದಾರೆ. ಹಳೆ ಮದ್ರಾಸ್ ರಸ್ತೆಯಲ್ಲಿರುವ ಈ ಬಸ್ ನಿಲ್ದಾಣದಲ್ಲಿ ದಿನವಿಡೀ ಕಸದ ರಾಶಿ ಬಿದ್ದಿರುತ್ತದೆ. ಅಲ್ಲಿನ ದುರ್ವಾಸನೆಯಿಂದಾಗಿ ಪ್ರಯಾಣಿಕರು ನಿಲ್ದಾಣದ ಒಳಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ.

ಇಲ್ಲಿದೆ ನೋಡಿ ವಿಡಿಯೋ:

ಸ್ಥಳೀಯ ಕಟ್ಟಡ ಮಾಲೀಕರು ರಾತ್ರೋರಾತ್ರಿ ಬಂದು ಕಟ್ಟಡದ ತ್ಯಾಜ್ಯವನ್ನು (Construction Debris) ರಸ್ತೆಯ ಮೇಲೆ ಮತ್ತು ಬಸ್ ನಿಲ್ದಾಣದ ಮುಂದೆ ಸುರಿಯುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ.ಲ್ದಾಣದ ಮುಂದೆ ಕಸ ಮತ್ತು ತ್ಯಾಜ್ಯ ಇರುವುದರಿಂದ ಚಾಲಕರು ಬಸ್ ಅನ್ನು ನಿಲ್ಲಿಸದೆ ಹಾಗೆಯೇ ಹೋಗುತ್ತಿದ್ದಾರೆ. ಇದರಿಂದ ಬಸ್‌ಗಾಗಿ ಕಾಯುವ ಪ್ರಯಾಣಿಕರು ರಸ್ತೆಯ ಮಧ್ಯೆ ನಿಂತು ಜೀವದ ಹಂಗು ತೊರೆದು ಪರದಾಡಬೇಕಿದೆ. ಹಲವು ತಿಂಗಳಿಂದ ಈ ಅವಸ್ಥೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಬಿಬಿಎಂಪಿ ಸಿಬ್ಬಂದಿ ಕಣ್ಣೆತ್ತಿ ಕೂಡ ನೋಡಿಲ್ಲ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಯುವತಿಯರೇ ನಿಮ್ಮ ಖಾಸಗಿ ಫೋಟೋ ಇಟ್ಟುಕೊಂಡು ಯಾರಾದರೂ ಬ್ಲ್ಯಾಕ್‌ಮೇಲ್​​​ ಮಾಡುತ್ತಿದ್ದಾರ? ಹೀಗೆ ಮಾಡಿದ್ರೆ ಸಾಕು

“ಇಲ್ಲಿ ಬಸ್ ನಿಲ್ಲಲ್ಲ, ನಿಂತರೂ ಕಸದ ವಾಸನೆಗೆ ನಾವು ನಿಲ್ಲೋಕೆ ಆಗಲ್ಲ. ರಾತ್ರಿ ಹೊತ್ತು ದೊಡ್ಡ ದೊಡ್ಡ ಲಾರಿಗಳಲ್ಲಿ ತಂದು ಕಸ ಹಾಕ್ತಾರೆ, ಕೇಳೋರೇ ಇಲ್ಲದಂತಾಗಿದೆ.” ಎಂದು ರಘು ಎಂಬುವವರು ಹೇಳಿದ್ದಾರೆ. ಬೈಕ್‌ನಲ್ಲಿ ಹೋಗುವಾಗ ಈ ರಸ್ತೆಯಲ್ಲಿ ಬಿದ್ದಿರೋ ಕಟ್ಟಡ ತ್ಯಾಜ್ಯದಿಂದಾಗಿ ಎಷ್ಟೋ ಜನ ಬಿದ್ದಿದ್ದಾರೆ. ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಈ ಕಸ ವಿಲೇವಾರಿ ಮಾಡಬೇಕು.” ಎಂದು ವಾಹನ ಸವಾರ ಚಂದ್ರಶೇಖರ್ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:59 pm, Tue, 3 February 26

Source link

BSNL Recruitment 2026: BSNLನಲ್ಲಿ 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗೆ ನೇಮಕಾತಿ; ಸಂಬಳ ಮತ್ತು ಸೌಲಭ್ಯಗಳ ವಿವರ ಇಲ್ಲಿದೆ – Kannada News | BSNL SET Recruitment 2026: 120 Senior Executive Trainee Posts – Apply Now!

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಭಾರತ ಸಂಚಾರ ನಿಗಮ ನಿಯಮಿತ (BSNL) 2026ನೇ ಸಾಲಿನ ಪ್ರಮುಖ ನೇಮಕಾತಿ ಅಭಿಯಾನವನ್ನು ಘೋಷಿಸಿದೆ. ಒಟ್ಟು 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ (SET) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಂಜಿನಿಯರಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಅರ್ಹತೆ ಹೊಂದಿರುವ ಯುವಕರಿಗೆ ಸರ್ಕಾರಿ ವಲಯದಲ್ಲಿ ಉತ್ತಮ ವೃತ್ತಿಜೀವನ ನಿರ್ಮಿಸಲು ಇದು ಅತ್ಯುತ್ತಮ ಅವಕಾಶವಾಗಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಪ್ರಕ್ರಿಯೆ ಫೆಬ್ರವರಿ 5, 2026 ರಿಂದ ಪ್ರಾರಂಭವಾಗಿದ್ದು, ಮಾರ್ಚ್ 7 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

ಈ ನೇಮಕಾತಿಯಲ್ಲಿ ಎರಡು ಪ್ರಮುಖ ಸ್ಟ್ರೀಮ್‌ಗಳಿವೆ:

  • ಟೆಲಿಕಾಂ ಸ್ಟ್ರೀಮ್ – 95 ಹುದ್ದೆಗಳು
  • ಹಣಕಾಸು (Finance) ಸ್ಟ್ರೀಮ್ – 25 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

  • ಟೆಲಿಕಾಂ ಸ್ಟ್ರೀಮ್: ಎಲೆಕ್ಟ್ರಾನಿಕ್ಸ್, ಟೆಲಿಕಾಂ, ಕಂಪ್ಯೂಟರ್ ಸೈನ್ಸ್, ಐಟಿ, ಎಲೆಕ್ಟ್ರಿಕಲ್ ಅಥವಾ ಇನ್ಸ್ಟ್ರುಮೆಂಟೇಶನ್ ವಿಭಾಗದಲ್ಲಿ ಕನಿಷ್ಠ ಶೇ.60 ಅಂಕಗಳೊಂದಿಗೆ BE/B.Tech ಪದವಿ ಅಗತ್ಯ.
  • ಫೈನಾನ್ಸ್ ಸ್ಟ್ರೀಮ್: CA (ಚಾರ್ಟರ್ಡ್ ಅಕೌಂಟೆಂಟ್) ಅಥವಾ CMA (Cost & Management Accountant) ಅರ್ಹತೆ ಅಗತ್ಯ.

ವಯೋಮಿತಿ:

  • ಕನಿಷ್ಠ ವಯಸ್ಸು – 21 ವರ್ಷ
  • ಗರಿಷ್ಠ ವಯಸ್ಸು – 30 ವರ್ಷ

ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲರಿಗೆ ಹೆಚ್ಚುವರಿ ಸಡಿಲಿಕೆ ನೀಡಲಾಗುತ್ತದೆ.

ಸಂಬಳ ಮತ್ತು ಸೌಲಭ್ಯಗಳು:

ಆಯ್ಕೆಯಾದ ಅಭ್ಯರ್ಥಿಗಳು IDA ವೇತನ ಶ್ರೇಣಿ E-3 ಅಡಿಯಲ್ಲಿ 24,900 – 50,500 ರೂ. ಸಂಬಳ ಪಡೆಯುತ್ತಾರೆ.
ಪ್ರೊಬೇಷನ್ ಪೂರ್ಣಗೊಂಡ ನಂತರ ಪದೋನ್ನತಿ ಹಾಗೂ ಸರ್ಕಾರಿ ಭತ್ಯೆಗಳು, ಸೌಲಭ್ಯಗಳು ದೊರೆಯುತ್ತವೆ.

ಇದನ್ನೂ ಓದಿ: ಎಕ್ಸಿಮ್ ಬ್ಯಾಂಕ್​ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ತಿಂಗಳಿಗೆ 65,000ರೂ. ಸ್ಟೈಫಂಡ್

ಆಯ್ಕೆ ಪ್ರಕ್ರಿಯೆ:

ಆಯ್ಕೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ನಡೆಯಲಿದೆ. ಪರೀಕ್ಷೆಯನ್ನು ಮಾರ್ಚ್ 29 ರಂದು ನಡೆಸುವ ನಿರೀಕ್ಷೆಯಿದೆ.

ಅರ್ಜಿ ಶುಲ್ಕ:

  • ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ – 2,500 ರೂ.
  • ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ – 1,250 ರೂ.
  • ಅರ್ಜಿ ಸಲ್ಲಿಸಿದ ನಂತರ, ಮಾರ್ಚ್ 8 ರಿಂದ 15 ರವರೆಗೆ ತಿದ್ದುಪಡಿ ವಿಂಡೋ ಲಭ್ಯವಿರುತ್ತದೆ.

ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಎಂಜಿನಿಯರಿಂಗ್ ಮತ್ತು ಫೈನಾನ್ಸ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ BSNL SET ನೇಮಕಾತಿ ಒಂದು ದೊಡ್ಡ ಅವಕಾಶವಾಗಿದೆ. ಉತ್ತಮ ಸಂಬಳ, ಸ್ಥಿರ ಉದ್ಯೋಗ ಮತ್ತು ಬೆಳವಣಿಗೆ ಅವಕಾಶಗಳಿರುವ ಈ ಹುದ್ದೆಗೆ ಅರ್ಹರು ಆದಷ್ಟು ಬೇಗ ಅರ್ಜಿ ಸಲ್ಲಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್​ಗೂ ಮುನ್ನ ಸಂಜು ಸ್ಯಾಮ್ಸನ್​ಗೆ ಕೊನೆಯ ಅವಕಾಶ – Kannada News | Sanju Samson’s T20 World Cup Hope: South Africa Practice Match Crucial for Playing XI Spot

ವಾಸ್ತವವಾಗಿ ನಾಳೆ ಅಂದರೆ ಫೆಬ್ರವರಿ 4 ರ ಬುಧವಾರದಂದು ನವಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದು ಅಭ್ಯಾಸ ಪಂದ್ಯವಾಗಿದ್ದರೂ, ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ವರದಿಗಳ ಪ್ರಕಾರ, 35,000 ಟಿಕೆಟ್‌ಗಳು ಮಾರಾಟವಾಗಿವೆ, ಅಂದರೆ ಹೌಸ್ ಫುಲ್ ಆಗುವ ಸಾಧ್ಯತೆಯಿದೆ. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಆಡುವ ಅವಕಾಶ ನೀಡಬಹುದು. ದಕ್ಷಿಣ ಆಫ್ರಿಕಾ ವಿರುದ್ಧ ಅವರು ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗಬಹುದು.

Source link

ಈ ಕೆಲವು ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯಬಾರದು, ಕೈಯಲ್ಲಿ ಒಗೆದರೆ ಉತ್ತಮ – Kannada News | These are some clothes that should never be washed in the washing machine

ಇಂದಿನ ಈ ಬ್ಯುಸಿ ಜೀವನಶೈಲಿಯ ಕಾರಣ ಹೆಚ್ಚಿನವರಿಗೆ ಮನೆಕೆಲಸಗಳನ್ನು ಮಾಡುವುದೇ ದೊಡ್ಡ ಸವಾಲಾಗಿದೆ. ಅದರಲ್ಲೂ ಈ ಬಟ್ಟೆ ಒಗೆಯುವುದೆಂದರೆ ಹಲವರಿಗೆ ತಲೆಬಿಸಿ. ಇದಕ್ಕಾಗಿ ಹೆಚ್ಚಿನವರು ಎಲ್ಲಾ ಬಟ್ಟೆಗಳನ್ನು ಸಹ ಒಮ್ಮೆಲೇ ವಾಷಿಂಗ್‌ ಮಷಿನ್‌ನಲ್ಲಿ (washing machine) ತೊಳೆದುಬಿಡುತ್ತಾರೆ. ಇದರಿಂದ ಕೆಲಸ ಸುಲಭವಾಗುತ್ತದೆ, ಸಮಯ ಉಳಿತಾಯವಾಗುತ್ತದೆ ನಿಜ. ಆದ್ರೆ ಎಲ್ಲಾ ರೀತಿಯ ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯುವುದು ಸೂಕ್ತವಲ್ಲ. ಹೌದು ಕೆಲವೊಂದು ಬಟ್ಟೆಗಳನ್ನು ಮಷಿನ್‌ನಲ್ಲಿ ವಾಶ್‌ ಮಾಡಿದಾಗ ಅವುಗಳ ಗುಣಮಟ್ಟ ಹಾಳಾಗುವ ಸಾಧ್ಯತೆ ಇರುತ್ತದೆ. ಅಂತಹ ಬಟ್ಟೆಗಳನ್ನು ಕೈಯಲ್ಲಿ ಒಗೆದರೆ ಉತ್ತಮ. ಹಾಗಿದ್ರೆ ಯಾವ ಬಟ್ಟೆಗಳನ್ನು ಕೈಯಲ್ಲಿ ಒಗೆದರೆ ಸೂಕ್ತ, ಯಾವ ಬಟ್ಟೆಗಳನ್ನು ವಾಷಿಂಗ್‌ ಮಷೀನ್‌ನಲ್ಲಿ ವಾಶ್‌ ಮಾಡಬಹುದು ಎಂಬುದನ್ನು ತಿಳಿಯಿರಿ.

ಯಾವ ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯಬಾರದು?

ಕೆಲವೊಂದು ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯಬಾರದು. ಅವುಗಳನ್ನು ಕೈಯಿಂದ ಒಗೆಯುವುದೇ ಉತ್ತಮ.

  • ಬಿಳಿ ಬಟ್ಟೆಗಳನ್ನು ಕೈಯಿಂದ ಒಗೆಯುವುದು ಉತ್ತಮ. ಯಂತ್ರದಲ್ಲಿ ಒಗೆದರೆ ಬೇರೆ ಬಟ್ಟೆಯ ಬಣ್ಣ ಬಿಳಿ ಬಟ್ಟೆಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ.
  • ಹೆಚ್ಚು ಕೊಳೆಯಾದ ಬಟ್ಟೆಗಳನ್ನು ಕೈಯಿಂದ ತೊಳೆದರೆಯೇ ಉತ್ತಮ.
  • ಮೃದುವಾದ ಹತ್ತಿ ಟಾಪ್‌ಗಳು ಮತ್ತು ಲಿನಿನ್ ಶರ್ಟ್‌ಗಳನ್ನು ಯಾವಾಗಲೂ ಕೈಯಿಂದ ಒಗೆಯಬೇಕು.
  • ಡಿಸೈನರ್‌ ಕುರ್ತಾ ಇನ್ನಿತರ ಬಟ್ಟೆ, ಎಂಬ್ರಾಯ್ಡರಿ ವರ್ಕ್‌ ಇರುವಂತಹ ಬಟ್ಟೆಗಳನ್ನು ಯಂತ್ರದಲ್ಲಿ ತೊಳೆಯುವುದು ಸೂಕ್ತವಲ್ಲ.
  • ಕಪ್ಪು ಬಣ್ಣದ ಬಟ್ಟೆಗಳನ್ನು ಸಹ ಕೈಯಿಂದ ಒಗೆಯಬೇಕು. ಇದು ಬಟ್ಟೆಗಳ ಹೊಳಪನ್ನು ಕಾಪಾಡಿಕೊಳ್ಳಲು ಮತ್ತು ಬೇಗನೆ ಮಸುಕಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
  • ಅಲ್ಲದೆ ಉಣ್ಣೆ, ರೇಷ್ಮೆ, ಶಿಫೋನ್ ಬಟ್ಟೆ, ಲೆದರ್‌ ಜಾಕೆಟ್‌ಗಳನ್ನು ಸಹ ಯಂತ್ರದಲ್ಲಿ ತೊಳೆಯಬಾರದು. ಏಕೆಂದರೆ ಈ ಉಡುಪುಗಳು ಬಹು ಬೇಗನೆ ಹಾಳಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಬಿಳಿ ಬಟ್ಟೆಯ ಮೇಲಿನ ಹಠಮಾರಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿವೆ ಸರಳ ಉಪಾಯ

ಯಾವ ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯಬಹುದು?

  • ದಪ್ಪ ಜೀನ್ಸ್ ಮತ್ತು ಪ್ಯಾಂಟ್‌ಗಳನ್ನು ಯಂತ್ರದಲ್ಲಿ ಒಟ್ಟಿಗೆ ತೊಳೆಯಬಹುದು.
  • ಟವೆಲ್‌ಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆಯುವುದು ಸೂಕ್ತ.
  • ಬಣ್ಣ ಬಿಡದ ಬಟ್ಟೆಗಳನ್ನು ಯಂತ್ರದಲ್ಲಿ ವಾಷ್‌ ಮಾಡಬಹುದು. ಬಟ್ಟೆಗಳು ತುಂಬಾ ಮೃದುವಾಗಿದ್ದರೆ, ಅವುಗಳನ್ನು ಲೈಟ್ ಮೋಡ್‌ನಲ್ಲಿ ತೊಳೆಯಿರಿ.
  • ಬೆಡ್‌ಶೀಟ್‌ಗಳು ಮತ್ತು ದಿಂಬಿನ ಕವರ್‌ಗಳನ್ನು ಸಹ ವಾಷಿಂಗ್‌ ಮಷಿನ್‌ನಲ್ಲಿ ತೊಳೆಯಬಹುದು.

ಡ್ರೈ ಕ್ಲೀನ್ ಮಾಡಬಹುದಾದ ಬಟ್ಟೆಗಳು:

ಸೀರೆಗಳು ಅದರಲ್ಲೂ ರೇಷ್ಮೆ ಸೀರೆ,  ಸೂಟ್‌ಗಳು, ಕೋಟ್‌ಗಳು, ಚಳಿಗಾಲದ ಜಾಕೆಟ್‌ಗಳನ್ನು ಡ್ರೈ ಕ್ಲೀನ್ ಮಾಡಿದರೆ ಉತ್ತಮ. ಹೀಗೆ ಮಾಡುವುದರಿಂದ ಅವುಗಳ ಹೊಳಪು ಉಳಿಯುತ್ತದೆ ಮತ್ತು ಬಟ್ಟೆಯೂ ಸಹ ಹಾನಿಗೊಳಗಾಗುವುದಿಲ್ಲ. ಡ್ರೈ ಕ್ಲೀನಿಂಗ್ ಬಟ್ಟೆ ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ಕಮಲಾಕರ ಗುರೂಜಿ ಜೊತೆಗೆ ಸಂಬಂಧ: ಪುತ್ರಿಯಿಂದಲೇ ಮ್ಯಾಟರ್​​ ರಿವೀಲ್​ – Kannada News | Relationship Between Kamalakar Bhat Guruji and Suchitra Exposed by Daughter’s Message to Her Father

ಸುಚಿತ್ರಾ ಜೊತೆಗೆ ಕಮಲಾಕರ್​​ ಭಟ್​​ ಗುರೂಜಿImage Credit source: Tv9 Kannada

ಕಾರವಾರ, ಫೆಬ್ರವರಿ 03: ಸುಚಿತ್ರಾ ಎಂಬ ವಿವಾಹಿತ ಮಹಿಳೆಯ ಜೊತೆಗೆ ಕಮಲಾಕರ ಭಟ್ ಗುರೂಜಿಯ ಅಕ್ರಮ ಸಂಬಂಧ ಆರೋಪ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಅಷ್ಟಕ್ಕೂ ಇಬ್ಬರ ನಡುವಿನ ಸಂಬಂಧ ಬಯಲು ಮಾಡಿದ್ದು, ಒಂದೇ ಒಂದು ಮೆಸೇಜ್​​ ಎನ್ನಲಾಗಿದೆ. 20 ವರ್ಷಗಳ ಹಿಂದೆ ಮಹೆಶ್​​ ಜೊತೆ ಪ್ರೀತಿಸಿ ವಿವಾಹವಾಗಿದ್ದ ಸುಚಿತ್ರಾ ಕಳೆದ 6 ತಿಂಗಳ ಹಿಂದೆ ಗಂಡನಿಗೆ ಗೊತ್ತಿಲ್ಲದೆ ತನ್ನಿಬ್ಬರು ಹೆಣ್ಣು ಮಕ್ಕಳನ್ನೂ ಕರೆದೊಯ್ದು ಶಿವಮೊಗ್ಗದ ಕಮಲಾಕರ ಭಟ್ ಗೂರೂಜಿ ಜೊತೆ ವಾಸವಿದ್ದಳು. ಈ ಬಗ್ಗೆ ಓರ್ವ ಮಗಳು ತಂದೆಗೆ ವಿಷಯ ತಿಳಿಸಿದ್ದರಿಂದಲೇ ಗುರೂಜಿ ಮತ್ತು ಸುಚಿತ್ರಾ ಸಂಬಂಧ ಕುಟುಂಬಸ್ಥರಿಗೆ ಗೊತ್ತಾಗಿದೆ ಎನ್ನಲಾಗಿದೆ.

ತಂದೆಗೆ ಮಗಳು ಮಾಡಿದ್ದ ಮೇಸೇಜ್​ ಏನು?

ನಾನು ಮತ್ತೆ ತಂಗಿ ಒಂದು ರೂಮಿನಲ್ಲಿ ಮಲಗುತ್ತೇವೆ. ತಾಯಿ ಹಾಗೂ ಗುರೂಜಿ ಬೇರೆ ರೂಂನಲ್ಲಿ ಮಲಗುತ್ತಿದ್ದಾರೆ ಎಂಬ ಮಾಹಿತಿಯನ್ನು ಸುಚಿತ್ರಾ ಮಗಳು ತಂದೆ ಮಹೇಶ್​​ಗೆ ತಿಳಿಸಿದ್ದಳು. ಅಲ್ಲದೆ ತಾಯಿ ತನಗೆ ಹಿಂಸೆ ನೀಡುತ್ತಿದ್ದು, ಪ್ಲೀಸ್​​ ಅಪ್ಪ ನನ್ನನ್ನು ಕರೆದುಕೊಂಡು ಹೋಗು ಎಂದು ಮೆಸೇಜ್​​ ಮಾಡಿದ್ದಳು. ಇಲ್ಲದಿದ್ದರೆ ತಾನು ಸಾಯುವುದಾಗಿ ಅಲವತ್ತುಕೊಂಡಿದ್ದಳು. ಈ ವೇಳೆ ಆಕೆಗೆ ಶಿವಮೊಗ್ಗದಿಂದ ಸಿದ್ದಾಪುರಕ್ಕೆ ಬರುವಂತೆ ತಂದೆ ಮಹೇಶ್​ ತಿಳಿಸಿದ್ದರು. ಅದರಂತೆ ಮಗಳು ತಂದೆಯ ಬಳಿ ಬಂದಿದ್ದು, ಆಕೆಯನ್ನು ಸಿದ್ದಾಪುರ ಠಾಣೆಗೆ ಕರೆದುಕೊಂಡು ಹೋಗಿದ್ದ ಮಹೇಶ್​​ ಪತ್ನಿಯ ಕ್ರೌರ್ಯದ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸರ ಸೂಚನೆಯಂತೆ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮುಂದೆಯೂ ಮಗಳನ್ನು ಹಾಜರಿಪಡಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ; ದೂರು ನೀಡಿದ್ದಕ್ಕೆ ಹಲ್ಲೆ, ಓರ್ವ ಸಾವು

ಈ ನಡುವೆ ರಾತ್ರಿ 9.45ರ ಸುಮಾರಿಗೆ ಸುಚಿತ್ರಾ ಮತ್ತು ಆಕೆಯ ತಂದೆ ಸೇರಿ ಇತರ ನಾಲ್ವರು ಚಾಕು ಹಿಡಿದು ಏಕಾಏಕಿ ಮನೆಗೆ ನುಗ್ಗಿದ್ದು, ಅವರನ್ನು ತಡೆದ ಮಹೇಶ್​​, ಅವರ ತಮ್ಮ ವಸಂತ್​​ ನಾಯ್ಕ ಮತ್ತು ನೆರೆ ಮನೆಯ ಕುಮಾರ್​​ಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸುಚಿತ್ರಾ ಜೊತೆಗಿನ ಗುರೂಜಿ ಫೋಟೋ ಲಭ್ಯ

ಕಮಲಾಕರ ಭಟ್ ಗೂರುಜಿ ಜೊತೆಗಿನ ಸುಚಿತ್ರಾ ಫೋಟೋ Tv9ಗೆ ಲಭ್ಯವಾಗಿದೆ. ನನ್ನ ಕುಟುಂಬ ಎಂದು ಗುರೂಜಿ ಹಾಕಿರುವ ಈ ಫೋಟೋ ಇಬ್ಬರೂ ಎಷ್ಟು ಅನ್ಯೋನ್ಯವಾಗಿದ್ದರು ಎಂಬುದಕ್ಕೆ ಸಾಕ್ಷಿ ಎಂಬಂತಿದೆ. ಸುಚಿತ್ರಾಳ ಹೆಗಲ ಮೇಲೆ ಕೈ ಹಾಕಿ ಗುರೂಜಿ ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋ ಮಗಳ ಆರೋಪಕ್ಕೆ ಪುಷ್ಟಿ ನೀಡುವಂತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:29 pm, Tue, 3 February 26

Source link

ಆಸ್ಕರ್​ ಮೇಲೆ ಕಣ್ಣಿಟ್ಟರೇ ಅಂಬಾನಿ? ಆ ನಿರ್ಮಾಣ ಸಂಸ್ಥೆ ಸ್ವಾಧೀನಕ್ಕೆ ಪಡೆದಿದ್ದೇಕೆ? – Kannada News | Reliance Jio Studios Acquires Oscar winning production house Sikhya Entertainment

ಮುಖೇಶ್ ಅಂಬಾನಿ (Mukesh Ambani) ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರು. ಅವರ ಒಡೆತನದ ರಿಲಯನ್ಸ್ ಮತ್ತು ಜಿಯೋ ದೇಶ ಮತ್ತು ವಿದೇಶಗಳಲ್ಲಿ ಹಲವಾರು ವಿವಿಧ ರೀತಿಯ ಉದ್ಯಮಗಳಲ್ಲಿ ತೊಡಗಿಕೊಂಡಿದೆ. ಆಯಿಲ್ ರಿಫೈನರಿ ಇಂದ ಹಿಡಿದು ಮಾವಿನ ಹಣ್ಣು ಮಾರಾಟದ ವರೆಗೆ ನಾನಾ ರೀತಿಯ ಉದ್ಯಮಗಳನ್ನು ರಿಲಯನ್ಸ್ ಮಾಡುತ್ತಿದೆ. ರಿಲಯನ್ಸ್​​ನವರದ್ದು ಖುದ್ದು ಸಿನಿಮಾ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ವಿತರಣಾ ವ್ಯವಸ್ಥೆಯ ಜೊತೆಗೆ ಜಿಯೋ ಹೆಸರಿನಲ್ಲಿ ಒಟಿಟಿ, ಟಿವಿ ನೆಟ್​​ವರ್ಕ್ ಮನರಂಜನೆಗೆ ಸಂಬಂಧಿಸಿದ ಇನ್ನೂ ಹಲವು ಉದ್ಯಮಗಳಿವೆ. ಇವುಗಳ ಜೊತೆಗೆ ಇದೀಗ ರಿಲಯನ್ಸ್ ಮತ್ತೊಂದು ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಖರೀದಿಸಿ ಸ್ವಾಧೀನಕ್ಕೆ ಪಡೆದುಕೊಂಡಿದೆ.

ಆಸ್ಕರ್ ಪ್ರಶಸ್ತಿ ಗೆದ್ದಿರುವ ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯನ್ನು ರಿಯಲನ್ಸ್ ಜಿಯೋ ಸ್ಟುಡಿಯೋ ಖರೀದಿ ಮಾಡಿದೆ. ಸಿಖ್ಯ ಎಂಟರ್​ಟೈನ್​​ಮೆಂಟ್ ನಿರ್ಮಾಣ ಸಂಸ್ಥೆಯ 50.1% ಷೇರುಗಳನ್ನು ರಿಲಯನ್ಸ್ ಜಿಯೋ ಸ್ಟುಡಿಯೋ ಪಡೆದುಕೊಂಡಿದ್ದು, ನಿರ್ಮಾಣ ಸಂಸ್ಥೆಯ ಮುಖ್ಯ ಮಾಲೀಕ ಆಗಿದೆ. ಭಾರತದ ಕತೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಳುವ ಸಲುವಾಗಿ ಈ ಪಾಲುದಾರಿಕೆ ನಡೆದಿದೆ ಎಂದು ರಿಯಲನ್ಸ್ ಜಿಯೋ ಸ್ಟುಡಿಯೋ ಹೇಳಿಕೊಂಡಿದೆ.

ಗುಣೀತ್ ಮೋಂಗಾ ಕಪೂರ್ ಮತ್ತು ಅಚಿನ್ ಜೈನ್ ಪ್ರಾರಂಭಿಸಿದ ಸಿಖ್ಯಾ ಎಂಟರ್‌ಟೈನ್‌ಮೆಂಟ್, ಕಳೆದ ದಶಕದಲ್ಲಿ, ವಿಶ್ವ ವೇದಿಕೆಯಲ್ಲಿ ಭಾರತೀಯ ಕಥೆಗಳನ್ನು ಹೇಗೆ ಹೇಳಬಹುದು ಮತ್ತು ಅದರ ಮೂಲಕ ಏನನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಸಿಖ್ಯಾ ನಿರ್ಮಾಣ ಸಂಸ್ಥೆಯು ಆಸ್ಕರ್ ಪ್ರಶಸ್ತಿ ಗೆದ್ದಿರುವ ಜೊತೆಗೆ ಹಲವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆಯಾಗಿದೆ.

ಇದನ್ನೂ ಓದಿ:ಈಗ ಹೇಗಾಗಿದ್ದಾರೆ ನೋಡಿ ‘ಮಿಲನ’ ಸಿನಿಮಾ ನಟಿ ಪಾರ್ವತಿ; ಹೊಸ ಫೋಟೋಸ್ ವೈರಲ್

ಸಿಖ್ಯ ಎಂಟರ್ಟೈನ್​​ಮೆಂಟ್​ ಸಂಸ್ಥೆಯು ಎರಡು ಆಸ್ಕರ್ ಗೆದ್ದಿರುವ ಏಕೈಕ ಭಾರತೀಯ ನಿರ್ಮಾಣ ಸಂಸ್ಥೆ ಆಗಿದೆ. 2018 ರಲ್ಲಿ ಸಿಖ್ಯ ನಿರ್ಮಿಸಿದ್ದ ‘ಪೀರಿಯಡ್: ಎಂಡ್ ಆಫ್ ಸೆಂಟೆನ್ಸ್’ ಹೆಸರಿನ ಡಾಕ್ಯುಮೆಂಟರಿ ಶಾರ್ಟ್​​ಗೆ ಆಸ್ಕರ್ ಬಂದಿತ್ತು. ಬಳಿಕ 2022 ರಲ್ಲಿ ‘ದಿ ಎಲಿಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿಗೆ ಆಸ್ಕರ್ ಬಂದಿತ್ತು. ಈ ಎರಡೂ ಡಾಕ್ಯುಮೆಂಟರಿಗಳನ್ನು ಸಿಖ್ಯ ಎಂಟರ್ಟೈನ್​​​ಮೆಂಟ್ ನಿರ್ಮಾಣ ಮಾಡಿದೆ.

ಡಾಕ್ಯುಮೆಂಟರಿ ಮಾತ್ರವೇ ಅಲ್ಲದೆ ಸಿಖ್ಯ ಹಲವು ಅತ್ಯುತ್ತಮ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದೆ. ಅದರಲ್ಲೂ ದೊಡ್ಡ ಸ್ಟಾರ್ ನಟರಲ್ಲದೆ, ಹೊಸಬರನ್ನು ಹಾಕಿಕೊಂಡು ಕತೆಗೆ ಮಾತ್ರವೇ ಪ್ರಾಧಾನ್ಯತೆ ನೀಡುತ್ತಾ ಸಿನಿಮಾ ನಿರ್ಮಾಣ ಮಾಡುವುದು ಸಿಖ್ಯ ಶೈಲಿ. ‘ದಿ ಲಂಚ್​​ಬಾಕ್ಸ್’, ‘ಗರ್ಲ್ ಇನ್ ಯೆಲ್ಲೊ ಬೂಟ್ಸ್’, ‘ಮಸಾನ್’, ‘ಸೂರರೈ ಪೋಟ್ರು’, ‘ಕಠಲ್’ ಸಿನಿಮಾಗಳನ್ನು ನಿರ್ಮಾಣ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ – Kannada News | PDO Nataraj to file defamation case against Yash mother Pushpa Arun Kumar

ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಹಾಸನದಲ್ಲಿ ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಮಾಡಿಕೊಂಡಿದ್ದಾರೆ. ಪಿಡಿಒ ನಟರಾಜ್ ವಿರುದ್ಧ ಅವರು ಆರೋಪ ಮಾಡಿದ್ದರು. ಅದಕ್ಕೆ ಸ್ವತಃ ನಟರಾಜ್ ಅವರು ಪ್ರತಿಕ್ರಿಯೆ ಈಗ ನೀಡಿದ್ದಾರೆ. ಟಿವಿ9 ಜೊತೆ ಅವರು ಮಾತನಾಡಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ನಟರಾಜ್ (PDO Nataraj) ಅವರು ತಳ್ಳಿಹಾಕಿದ್ದಾರೆ. ‘ಸತ್ಯಮಂಗಲ ಗ್ರಾಮ ಪಂಚಾಯಿತಿಯಲ್ಲಿ 2018ರಿಂದ 2022ರ ತನಕ ಕೆಲಸ ಮಾಡಿದ್ದೇನೆ. ಆ ಸಮಯದಲ್ಲಿ ಇ-ಸ್ವತ್ತು ನಾನೇ ಮಾಡಿಕೊಟ್ಟಿದ್ದು. ಹಾಗಿದ್ದರೂ ನನ್ನ ಮೇಲೆ ಅವರು ಆರೋಪ ಮಾಡುತ್ತಿದ್ದಾರೆ. ಯಾಕೆ ಎಂಬುದು ಗೊತ್ತಿಲ್ಲ. ನಾವು ನಮ್ಮ ವೃತ್ತಿ ಮಾಡಿದ್ದೇವೆ. ಸುಳ್ಳರು, ಕಳ್ಳರು ಅಂತ ಹೇಳಿದರೆ ನೋವಾಗುತ್ತದೆ. ನಾನು ಕೂಡ ವಕೀಲನಾಗಿ ಕೆಲವು ವರ್ಷ ಕೆಲಸ ಮಾಡಿದ್ದೇನೆ. ಪುಷ್ಪಾ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಆಲೋಚನೆ ಮಾಡಿದ್ದೇನೆ’ ಎಂದು ನಟರಾಜ್ ಅವರು ಹೇಳಿದ್​ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link