Category Archives: Blog

Your blog category

ಹಲ್ಲುಜ್ಜಲು ಎಷ್ಟು ಪ್ರಮಾಣದ ಟೂತ್‌ಪೇಸ್ಟ್‌ ಬಳಸುವುದು ಸೂಕ್ತ? – Kannada News | Do you know how much toothpaste you should use to brush your teeth?

ಆರೋಗ್ಯದ ದೃಷ್ಟಿಯಿಂದ ಬೆಳಗ್ಗೆ ಎದ್ದ ನಂತರ ಮತ್ತು ರಾತ್ರಿ ಮಲಗುವ ಮೊದಲು ಹಲ್ಲುಜ್ಜಲೇಬೇಕು. ಇದು  ಹಲ್ಲು ಮತ್ತು ಒಸಡುಗಳನ್ನು ಆರೋಗ್ಯವಾಗಿಡುತ್ತದೆ ಜೊತೆಗೆ ಬಾಯಿಯಲ್ಲಿ ಬೆಳೆಯುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕುತ್ತದೆ. ಹೀಗೆ ಹಲ್ಲುಜ್ಜುವ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಟೂತ್‌ಪೇಸ್ಟ್‌  (toothpaste) ಬಳಕೆ ಮಾಡುವ ಅಭ್ಯಾಸ ನಮ್ಮಲ್ಲಿ ಹಲವರಿಗೆ ಇದೆ. ಹೌದು ಹಲ್ಲು ಕ್ಲೀನ್‌ ಆಗುತ್ತೆ, ಬಿಳಿಯಾಗುತ್ತೆ ಅನ್ನೋ ಕಾರಣಕ್ಕೆ ಹಲವರು ಹೆಚ್ಚು ಟೂತ್‌ಪೇಸ್ಟ್‌ ಬಳಸುತ್ತಾರೆ. ನಿಜಕ್ಕೂ ಇದು ಸೂಕ್ತವೇ? ಹಲ್ಲುಜ್ಜುವಾಗ ಎಷ್ಟು ಪ್ರಮಾಣದಲ್ಲಿ ಟೂತ್‌ಪೇಸ್ಟ್‌ ಬಳಕೆ ಮಾಡಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಹಲ್ಲುಜ್ಜಲು ಎಷ್ಟು ಟೂತ್‌ಪೇಸ್ಟ್ ಬಳಸಬೇಕು?

ತಜ್ಞರ ಪ್ರಕಾರ, ನಿಮ್ಮ ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸಲು ಹೆಚ್ಚು ಟೂತ್‌ಪೇಸ್ಟ್ ಅಗತ್ಯವಿಲ್ಲ. ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿಡಲು ಒಂದು ಬಟಾಣಿ ಗಾತ್ರದ ಟೂತ್‌ಪೇಸ್ಟ್ ಸಾಕು. ಈ ಪ್ರಮಾಣವು ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ ಮತ್ತು ನಿಮ್ಮ ಬಾಯಿಯನ್ನು ತಾಜಾವಾಗಿರಿಸುತ್ತದೆ. ವಾಸ್ತವವಾಗಿ, ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಟೂತ್‌ಪೇಸ್ಟ್‌ನ ಪ್ರಮಾಣವನ್ನು ಅವಲಂಬಿಸಿರುವುದಿಲ್ಲ, ಬದಲಿಗೆ ಹಲ್ಲುಜ್ಜುವ ಸರಿಯಾದ ವಿಧಾನ ಮತ್ತು ಸಮಯವನ್ನು ಅವಲಂಬಿಸಿರುತ್ತದೆ.

ಮಕ್ಕಳಿಗೆ ಎಷ್ಟು ಟೂತ್‌ಪೇಸ್ಟ್ ಸೂಕ್ತ?

ಮಕ್ಕಳ ವಿಷಯದಲ್ಲಿ, ಹೆಚ್ಚಿನ ಎಚ್ಚರಿಕೆ ಅಗತ್ಯ. ಚಿಕ್ಕ ಮಕ್ಕಳು ಹಲ್ಲುಜ್ಜುವಾಗ ಹೆಚ್ಚಾಗಿ ಟೂತ್‌ಪೇಸ್ಟ್ ಅನ್ನು ನುಂಗುತ್ತಾರೆ, ಇದು ಅವರ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವೈದ್ಯರ ಪ್ರಕಾರ, ಮಕ್ಕಳಿಗೆ ಅಕ್ಕಿ ಗಾತ್ರದ ಟೂತ್‌ಪೇಸ್ಟ್ ಸಾಕು. ಇದು ಅವರ ಹಲ್ಲುಗಳನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ಟೂತ್‌ಪೇಸ್ಟ್ ನುಂಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಪೋಷಕರು ಮಕ್ಕಳು ಹಲ್ಲುಜ್ಜುವಾಗ ಮೇಲ್ವಿಚಾರಣೆ ಮಾಡಬೇಕು ಮತ್ತು ಸರಿಯಾದ ಪ್ರಮಾಣದ ಪೇಸ್ಟ್ ಅನ್ನು ಬಳಸಲು ಅವರಿಗೆ ಕಲಿಸಬೇಕು.

ಹಲ್ಲುಜ್ಜುವ ಸರಿಯಾದ ವಿಧಾನ ಯಾವುದು?

ನೀವು ಹಲ್ಲುಜ್ಜುವ ವಿಧಾನವೂ ಬಹಳ ಮುಖ್ಯ. ನಿಮ್ಮ ಹಲ್ಲುಗಳನ್ನು ಆರೋಗ್ಯವಾಗಿಡಲು, ನೀವು ದಿನಕ್ಕೆ ಎರಡು ಬಾರಿ, ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲುಜ್ಜಬೇಕು. ಪ್ರತಿ ಬಾರಿ ಕನಿಷ್ಠ ಎರಡು ನಿಮಿಷಗಳ ಕಾಲ ಆರಾಮವಾಗಿ ಹಲ್ಲುಜ್ಜಿ. ನಿಮ್ಮ ಹಲ್ಲುಗಳ ಮೇಲೆ ವೃತ್ತಾಕಾರದ ಚಲನೆಯಲ್ಲಿ ಬ್ರಷ್ ಅನ್ನು ನಿಧಾನವಾಗಿ ಸರಿಸಿ, ಇದರಿಂದ ಒಸಡುಗಳು ಸಹ ಚೆನ್ನಾಗಿ ಸ್ವಚ್ಛವಾಗುತ್ತವೆ. ಹೆಚ್ಚು ಬಲದಿಂದ ವೇಗವಾಗಿ ಹಲ್ಲುಜ್ಜುವುದರಿಂದ ನಿಮ್ಮ ಹಲ್ಲು ಮತ್ತು ಒಸಡುಗಳಿಗೆ ಹಾನಿಯಾಗುತ್ತದೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಮಾಡುವ ತಪ್ಪುಗಳು ನಿಮ್ಮ ನಿದ್ರೆಗೆ ಭಂಗ ತರಬಹುದು ಎಚ್ಚರ!

ಹೆಚ್ಚು ಟೂತ್‌ಪೇಸ್ಟ್ ಬಳಸುವುದರಿಂದ ಹಲ್ಲುಗಳಿಗೆ ಹಾನಿಯಾಗಬಹುದೇ?

ಹೆಚ್ಚು ಟೂತ್‌ಪೇಸ್ಟ್ ಹಚ್ಚುವುದರಿಂದ ಹಲ್ಲುಗಳು ಚೆನ್ನಾಗಿ ಹೊಳೆಯುತ್ತವೆ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ, ಆದರೆ ವಾಸ್ತವ ಇದಕ್ಕೆ ವಿರುದ್ಧವಾಗಿದೆ. ನಿಮ್ಮ ಬ್ರಷ್‌ಗೆ ಹೆಚ್ಚು ಟೂತ್‌ಪೇಸ್ಟ್ ಹಚ್ಚಿದಾಗ, ನಿಮ್ಮ ಬಾಯಿಯಲ್ಲಿ ಬಹಳಷ್ಟು ನೊರೆ ಬರುತ್ತದೆ. ಈ ಹೆಚ್ಚು ನೊರೆ ಎರಡು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮೊದಲನೆಯದಾಗಿ, ನೊರೆಯಿಂದಾಗಿ, ನೀವು ತುಂಬಾ ಬೇಗನೆ ಹಲ್ಲುಜ್ಜಲು ಪ್ರಾರಂಭಿಸುತ್ತೀರಿ ಮತ್ತು ನಿಮ್ಮ ಹಲ್ಲುಗಳು ಸರಿಯಾಗಿ ಸ್ವಚ್ಛಗೊಳ್ಳುವುದಿಲ್ಲ. ಎರಡನೆಯದಾಗಿ, ಹೆಚ್ಚುವರಿ ನೊರೆಯಿಂದಾಗಿ, ಬ್ರಷ್ ಫೈಬರ್‌ಗಳು ಹಲ್ಲು ಮತ್ತು ಒಸಡುಗಳನ್ನು ಸರಿಯಾಗಿ ತಲುಪುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ಹೆಚ್ಚು ಟೂತ್‌ಪೇಸ್ಟ್ ಕಿರಿಕಿರಿ ಉಂಟು ಮಾಡುತ್ತದೆ ಮತ್ತು ಹಲ್ಲಿನ ಮೇಲಿನ ಪದರಕ್ಕೆ ಹಾನಿಯನ್ನುಂಟುಮಾಡುತ್ತದೆ.

ಜಾಹೀರಾತುಗಳಲ್ಲಿ ಏಕೆ ಬ್ರಶ್‌ ಪೂರ್ತಿ  ಪೇಸ್ಟ್ ಹಚ್ಚಿರುವುದನ್ನು ತೋರಿಸುವುದು?

ಟೂತ್‌ಪೇಸ್ಟ್ ಜಾಹೀರಾತುಗಳಲ್ಲಿ ಬ್ರಷ್‌ನಲ್ಲಿ  ಪೂರ್ತಿ ಉದ್ದಕ್ಕೆ ಟೂತ್‌ಪೇಸ್ಟ್‌ ಹರಡಿರುವುದನ್ನು ನೀವು ನೋಡಿರುತ್ತೀರಿ ಅಲ್ವಾ. ಇದನ್ನೇ ನೋಡಿ ಹಲವರು ತಾವು ಕೂಡ ಹಲ್ಲುಜ್ಜಲು ಜಾಸ್ತಿ ಪ್ರಮಾಣದ ಟೂತ್‌ಪೇಸ್ಟ್‌ ಬಳಸುತ್ತಾರೆ.  ಜಾಹೀರಾತುಗಳಲ್ಲಿ ಹೀಗೆ ತೋರಿಸುವುದರ ಹಿಂದಿನ  ಕಾರಣ ಹಲ್ಲಿನ ಆರೋಗ್ಯವಲ್ಲ, ಬದಲಾಗಿ ಮಾರ್ಕೆಟಿಂಗ್. ಕಂಪನಿಗಳು ಜನರು ಹೆಚ್ಚು ಟೂತ್‌ಪೇಸ್ಟ್ ಬಳಸಬೇಕೆಂದು ಬಯಸುತ್ತವೆ, ಇದರಿಂದ ಪೇಸ್ಟ್ ಬೇಗನೆ ಖಾಲಿಯಾಗುತ್ತದೆ ಮತ್ತು ಅವರು ಆಗಾಗ್ಗೆ ಹೊಸ ಪ್ಯಾಕ್‌ಗಳನ್ನು ಖರೀದಿಸಬೇಕಾಗುತ್ತದೆ. ಇದರಿಂದ ಹೆಚ್ಚು ಟೂತ್‌ಪೇಸ್ಟ್ ಮಾರಾಟವಾಗುತ್ತದೆ ಮತ್ತು ಕಂಪನಿಯ ಗಳಿಕೆ ಹೆಚ್ಚಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 70ಕ್ಕೂ ಹೆಚ್ಚು ಗೋವುಗಳು ರಕ್ಷಣೆ, ಕೆಲವು ಹಸುಗಳು ಮೃತಪಟ್ಟಿರುವ ಶಂಕೆ – Kannada News | Mulbagal Cow Rescue: Gorakshakas Intercept Cruel Transport from Hyderabad to Bengaluru

ಕೋಲಾರ, ಫೆ.3: ಹೈದರಾಬಾದ್‌ನಿಂದ ಬೆಂಗಳೂರಿಗೆ ಅಕ್ರಮವಾಗಿ ಕಂಟೇನರ್‌ನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 70ಕ್ಕೂ ಹೆಚ್ಚು ಗೋವುಗಳನ್ನು ಮುಳಬಾಗಿಲು ತಾಲೂಕಿನ ಹನುಮನಹಳ್ಳಿ ಟೋಲ್ ಬಳಿ ಗೋರಕ್ಷಕರು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಹನುಮನಹಳ್ಳಿ ಟೋಲ್ ಬಳಿ ಇಂದು (ಫೆ.3) ಸಂಜೆ ಈ ಘಟನೆ ನಡೆದಿದೆ. ಹೈದರಾಬಾದ್‌ನಿಂದ ಬೆಂಗಳೂರಿನ ಕಸಾಯಿಖಾನೆಗೆ ಅತಿ ಕ್ರೂರವಾಗಿ ಕಂಟೇನರ್‌ನಲ್ಲಿ ಗೋವುಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗೋರಕ್ಷಕ ದಳ ಹಾಗೂ ಭಜರಂಗದಳದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದರು. ಮುಚ್ಚಿದ ಕಂಟೇನರ್‌ನಲ್ಲಿ ಗಾಳಿ, ಬೆಳಕು, ಆಹಾರ ಮತ್ತು ನೀರಿಲ್ಲದೆ ಸುಮಾರು 70ಕ್ಕೂ ಹೆಚ್ಚು ದೇಸೀ ತಳಿಯ ಹಸುಗಳನ್ನು ತುಂಬಲಾಗಿತ್ತು. ದೀರ್ಘ ಪ್ರಯಾಣದ ಆಯಾಸ ಮತ್ತು ಉಸಿರುಗಟ್ಟಿಸುವ ವಾತಾವರಣದಿಂದಾಗಿ ಕಂಟೇನರ್‌ನಲ್ಲೇ ಕೆಲವು ಹಸುಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕಂಟೇನರ್ ತೆರೆದಾಗ ಗೋವುಗಳ ದಯನೀಯ ಸ್ಥಿತಿ ಕಂಡು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ರಾಜಿ ಮಾಡಿಕೊಂಡು ರಾಷ್ಟ್ರವನ್ನೇ ಮಾರಿದ್ದಾರೆ; ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಆರೋಪ – Kannada News | PM Modi is compromised, sold the nation Rahul Gandhi lashes out on US trade deal

ನವದೆಹಲಿ, ಫೆಬ್ರವರಿ 3: ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾಗ ಭಾರಿ ಗದ್ದಲ ಭುಗಿಲೆದ್ದಿತು. ಚೀನಾದ ವಿಷಯದ ಕುರಿತು ರಾಹುಲ್ ಗಾಂಧಿಯವರ ಭಾಷಣವನ್ನು ವಿರೋಧಿಸಿದ್ದರಿಂದ ಎರಡೂ ಕಡೆಯವರು ಗದ್ದಲ ಮಾಡುತ್ತಲೇ ಇದ್ದರು. ತನಗೆ ಮಾತನಾಡಲು ಬಿಡದಿದ್ದಕ್ಕೆ ಆಕ್ರೋಶಗೊಂಡ ರಾಹುಲ್ ಗಾಂಧಿ, “ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾನು ವಿರೋಧ ಪಕ್ಷದ ನಾಯಕ. ಸದನದಲ್ಲಿ ಮಾತನಾಡುವುದು ನನ್ನ ಹಕ್ಕಾಗಿದ್ದರೂ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ” ಎಂದು ಹೇಳಿದ್ದಾರೆ. ಅಮೆರಿಕದೊಂದಿಗಿನ ಒಪ್ಪಂದದ ಕುರಿತು ಪ್ರಧಾನಿ ಮೋದಿ ಒತ್ತಡದಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ಪ್ರಧಾನಿ ಮೋದಿಯವರು ಗೊಂದಲಕ್ಕೊಳಗಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಯುಎಸ್-ಭಾರತ ವ್ಯಾಪಾರ ಒಪ್ಪಂದಕ್ಕೆ ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ. ಅವರ ಮೇಲೆ ತೀವ್ರ ಒತ್ತಡವಿದೆ. ಇದು ನರೇಂದ್ರ ಮೋದಿಯವರ ಇಮೇಜ್‌ಗೆ ಹಾನಿಯಾಗಬಹುದು ಎಂದು ಅವರು ಆತಂಕಗೊಂಡಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭೆ ಅಧಿವೇಶನದಲ್ಲಿ ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದ 8 ಸಂಸದರ ಅಮಾನತು

ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಹೇಳುವ ಸಮಯದಲ್ಲಿ ಸತತ ಎರಡನೇ ದಿನವೂ ಚೀನಾ ವಿಷಯವನ್ನು ಪದೇ ಪದೇ ಪ್ರಸ್ತಾಪಿಸಿದ್ದರಿಂದ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗದ ಕಾರಣ ರಾಹುಲ್ ಗಾಂಧಿ ಕೋಪಗೊಂಡರು. ಭಾರತ-ಚೀನಾದ ಸಂಬಂಧಗಳ ಕುರಿತಾದ ಲೇಖನವನ್ನು ಉಲ್ಲೇಖಿಸಿ, ಹಿಂದಿನ ತೀರ್ಪು ಮತ್ತು ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿದ್ದಕ್ಕೆ ರಾಹುಲ್ ಗಾಂಧಿಯವರಿಗೆ ಅವಕಾಶ ನೀಡಲು ನಿರಾಕರಿಸಲಾಯಿತು.

“ನಮ್ಮ ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಇದರ ಬಗ್ಗೆ ಯೋಚಿಸಬೇಕು. ಮೊದಲ ಬಾರಿಗೆ, ವಿರೋಧ ಪಕ್ಷದ ನಾಯಕನಿಗೆ ಈ ಸದನದಲ್ಲಿ ರಾಷ್ಟ್ರಪತಿಗಳ ಭಾಷಣದ ಬಗ್ಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನರೇಂದ್ರ ಮೋದಿ ಅವರು ರಾಜಿ ಮಾಡಿಕೊಂಡ ಕಾರಣದಿಂದ ಈ ವ್ಯಾಪಾರ ಒಪ್ಪಂದದಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ಮಾರಾಟ ಮಾಡಿದ್ದಾರೆ. ಅವರು ದೇಶವನ್ನೇ ಮಾರಿದ್ದಾರೆ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಇದನ್ನೂ ಓದಿ: ಪ್ರಕಟವಾಗದ ಪುಸ್ತಕದಲ್ಲಿರುವ ವಿಷಯ ಉಲ್ಲೇಖಿಸಲು ಹೋಗಿ ಸದನದ ಬಾಯಿಗೆ ಆಹಾರವಾದ್ರಾ ರಾಹುಲ್ ಗಾಂಧಿ

ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, “ನಾವು ರಾಹುಲ್ ಗಾಂಧಿಯವರ ಮಾತು ಕೇಳಲು ಬಯಸಿದ್ದೆವು. ಆದರೆ ಅವರು ಒಂದೇ ಮಾತನ್ನು ಪದೇ ಪದೇ ಪುನರಾವರ್ತಿಸುತ್ತಿದ್ದಾರೆ. ಅವರು ನಿಯಮಗಳನ್ನು ಪಾಲಿಸಬೇಕು. ಅವರು ಒಂದೇ ಮಾತನ್ನು ಪದೇ ಪದೇ ಪುನರಾವರ್ತಿಸುವಂತಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ನನಗೆ ಯಾರು ಶತ್ರುಗಳಿಲ್ಲ, ಇರೋದೆಲ್ಲ ಶಕುನಿಗಳೆ; ವೈರಲ್ ಆಯ್ತು ಆಟೋ ಹಿಂಬದಿ ಬರೆದ ಸಾಲುಗಳು – Kannada News | The line written on the back of the auto, reddit post goes viral

ನೀವು ಆಟೋ, ಬೈಕ್ ಅಥವಾ ಕಾರಿನ ಹಿಂಭಾಗದಲ್ಲಿ ಕೆಲ ತಮಾಷೆಭರಿತ ಅಥವಾ ಅರ್ಥಪೂರ್ಣ ಸಾಲುಗಳನ್ನು ನೋಡಿರಬಹುದು. ಕೆಲವರು ತಮ್ಮ ವಾಹನದ ಹಿಂಭಾಗದಲ್ಲಿ ತಂದೆ ತಾಯಿಯ ಆಶೀರ್ವಾದ, ಕೈಕೊಟ್ಟ ಪ್ರೇಮಿಯ ಹೆಸರು ಹೀಗೆ ಕೆಲ ಸಾಲುಗಳನ್ನು ಬರೆದಿರುತ್ತಾರೆ. ಆದರೆ ಇಲ್ಲೊಬ್ಬ ಆಟೋ ಚಾಲಕ (Auto driver) ತನ್ನ ಆಟೋದ ಹಿಂಬದಿಯಲ್ಲಿ ಬರೆದ ಸಾಲುಗಳಲ್ಲಿ ಶಕುನಿಗಳನ್ನು ನೆನಪಿಸಿಕೊಂಡಿದ್ದಾನೆ. ನನಗೆ ಯಾರು ಶತ್ರುಗಳು ಇಲ್ಲ, ಇರೋದೆಲ್ಲ ಶಕುನಿಗಳೆ ಎಂದು ಬರೆದ ಸಾಲೊಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಆರ್‌/ ಬೆಂಗಳೂರು (r/Bengaluru) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಆಟೋ ಹಿಂಬದಿ ಬರೆದ ಬರಹವನ್ನು ಹಂಚಿಕೊಳ್ಳಲಾಗಿದೆ. ಈ ಆಟೋದ ಹಿಂಬದಿ, ‘ನನಗೆ ಯಾರು ಶತ್ರುಗಳು ಇಲ್ಲ, ಇರೋದೆಲ್ಲ ಶಕುನಿಗಳೆ ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ಓಡಿಸಿ ತಿಂಗಳಿಗೆ 45 ಸಾವಿರ ರೂ ಸಂಪಾದಿಸುವ ಮಹಿಳೆ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಎಂತಹ ಅದ್ಭುತ ಮಾತು ಎಂದಿದ್ದಾರೆ. ಮತ್ತೊಬ್ಬರು ವಾವ್ ಅದ್ಭುತ ಬ್ರದರ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಸತ್ಯವಾದ ಮಾತು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:19 pm, Tue, 3 February 26

Source link

India Post Recruitment 2026: 10th ಪಾಸಾದವರಿಗೆ ಲಿಖಿತ ಪರೀಕ್ಷೆಯಿಲ್ಲದೇ ಸರ್ಕಾರಿ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣವಕಾಶ – Kannada News | India Post GDS Recruitment 2026: 28,740 Posts for 10th Pass, No Exam! Apply Now

ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ

ದೇಶಾದ್ಯಂತ ಸರ್ಕಾರಿ ಉದ್ಯೋಗದ ಅವಕಾಶಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಂಡಿಯಾ ಪೋಸ್ಟ್ ದೊಡ್ಡ ಸುವರ್ಣಾವಕಾಶವನ್ನು ಘೋಷಿಸಿದೆ. ವಿವಿಧ ಅಂಚೆ ವೃತ್ತಗಳಲ್ಲಿ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ನೇಮಕಾತಿಗಾಗಿ ಒಟ್ಟು 28,740 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿಯ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ, ಕೇವಲ 10ನೇ ತರಗತಿಯ ಅಂಕಗಳ ಆಧಾರದ ಮೇಲೆ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) ಮತ್ತು ಡಾಕ್ ಸೇವಕ್ ಹುದ್ದೆಗಳನ್ನು ತಮ್ಮದೇ ಊರಿನ ಅಂಚೆ ಕಚೇರಿಗಳಲ್ಲಿ ಪಡೆಯುವ ಅವಕಾಶವಿದ್ದು, ಸ್ಥಳೀಯರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 14ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿದಾರರು ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಗಣಿತ, ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಯನ್ನು ಓದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಮತ್ತು ಸೈಕಲ್ ಸವಾರಿ ತಿಳಿದಿರಬೇಕು. ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು; ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ದೊರೆಯುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ 100ರೂ. ಅರ್ಜಿ ಶುಲ್ಕವಿದ್ದು, ಎಸ್‌ಸಿ, ಎಸ್‌ಟಿ, ಅಂಗವಿಕಲರು ಮತ್ತು ಟ್ರಾನ್ಸ್‌ವುಮೆನ್ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಅರ್ಜಿಯಲ್ಲಿ ದೋಷಗಳಿದ್ದರೆ ನಂತರ ತಿದ್ದುಪಡಿ ಮಾಡಲು ವಿಶೇಷ ಅವಕಾಶವೂ ನೀಡಲಾಗಿದೆ.

ಇದನ್ನೂ ಓದಿ: ಎಕ್ಸಿಮ್ ಬ್ಯಾಂಕ್​ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ತಿಂಗಳಿಗೆ 65,000ರೂ. ಸ್ಟೈಫಂಡ್

ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಹಾಗೂ ಸರ್ಕಾರಿ ಸೌಲಭ್ಯಗಳು ಲಭ್ಯವಿದ್ದು, BPM ಹುದ್ದೆಗೆ ತಿಂಗಳಿಗೆ 12,000 ರಿಂದ 29,380 ರೂ. ಮತ್ತು ABPM/ಡಾಕ್ ಸೇವಕ್ ಹುದ್ದೆಗೆ 10,000 ರಿಂದ 24,470ರೂ. ವರೆಗೆ ಸಂಬಳ ನೀಡಲಾಗುತ್ತದೆ. ಪರೀಕ್ಷೆಯ ಒತ್ತಡವಿಲ್ಲದೆ, ಕೇವಲ ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯುತ್ತಿರುವುದರಿಂದ, 10ನೇ ತರಗತಿ ಉತ್ತೀರ್ಣರಾದ ಯುವಕರಿಗೆ ಇದು ಅತ್ಯಂತ ಸುಲಭ ಮತ್ತು ಉತ್ತಮ ಸರ್ಕಾರಿ ಉದ್ಯೋಗಾವಕಾಶವಾಗಿದೆ. ಆದ್ದರಿಂದ ಆಸಕ್ತರು ಕೊನೆಯ ದಿನಾಂಕಕ್ಕೂ ಮುನ್ನ ಅರ್ಜಿ ಸಲ್ಲಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್, ಪೋಷಕರ ಹೊರೆ ಇಳಿಸಿದ ಸರ್ಕಾರ – Kannada News | Karnataka Governmnet Green Signal To Free textbooks And Note book to Class 1 12 students from next academic year

ಬೆಂಗಳೂರು, (ಫೆಬ್ರವರಿ 03): ಕರ್ನಾಟಕದ 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ  (Students)  ರಾಜ್ಯ ಸರ್ಕಾರ ಗುಡ್​ ನ್ಯೂಸ್ ನೀಡಿದೆ. ವಿದ್ಯಾ ವಿಕಾಸ ಯೋಜನೆಯಡಿ ( vidya vikas scheme) ಶಾಲಾ ಮಕ್ಕಳಿಗೆ ಪಠ್ಯಪುಸ್ತಕದ ಜೊತೆಗೆ ನೋಟ್ ಬುಕ್​ (Text And Note Bo0k) ವಿತರಣೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಹೌದು..2026 -27ನೇ ಸಾಲಿನ 1ರಿಂದ 10ನೇ ತರಗತಿಯವರೆಗೆ ಓದುತ್ತಿರುವ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ನೀಡಲು ಅನುಮೋದನೆ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಶುಭಮಂಗಳಾ ಅವರು ಆದೇಶ ಹೊರಡಿಸಿದ್ದಾರೆ.   ಇದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಸುಮಾರು 61 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ.ಈ ಮೂಲಕ ಮೊದಲ ಬಾರಿಗೆ 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕದ ಜೊತೆಗೆ ನೋಟ್‌ಬುಕ್ ಸಹ ವಿತರಣೆಗೆ ಮುಂದಾಗಿದೆ.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಶಿಕ್ಷಣ ಇಲಾಖೆ

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ 1ರಿಂದ 12ನೇ ತರಗತಿಯವರೆಗೆ ದಿನಚರಿ ಪುಸ್ತಕ ವಿತರಣೆ ಸಂಬಂಧ ಶಿಕ್ಷಣ ಇಲಾಖೆಯು 30 ಕೋಟಿ 83 ಲಕ್ಷದ 25 ಸಾವಿರ ಹಣದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆ ಸರ್ಕಾರ ಸಹ ಒಪ್ಪಿಗೆ ಸೂಚಿಸಿದ್ದು, 290.46 ಕೋಟಿ ರೂ ಅನುದಾನವನ್ನು ಶಾಲಾ ಶಿಕ್ಷಣ ಇಲಾಖೆಗೆ ಗ್ರೀನ್ ಸಿಗ್ನಲ್ ನೀಡಿದೆ. ಇದರ ಬೆನ್ನಲ್ಲೇ ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲು ತಯಾರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಶುಭ ಮಂಗಳ ಆದೇಶ ಹೊರಡಿಸಿದ್ದಾರೆ. ಇನ್ನು ಪಠ್ಯ ಪುಸ್ತಕದ ಕಾಗದ ಮತ್ತು ಮುದ್ರಣ ಗುಣಮಟ್ಟ ರಾಜಿ ಆಗೋ ಹಾಗಿಲ್ಲ . ಹೆಚ್ಚುವರಿ ಪುಸ್ತಕಕ್ಕೆ ಬೇಡಿಕೆ ಸಲ್ಲಿಸಿ ಕಳ್ಳಾಟ ಆಡೋ ಹಾಗಿಲ್ಲ . ಸರ್ಕಾರದ ಹಣ ದುರುಪಯೋಗ ಮಾಡಿದ್ರೆ ಕಠಿಣ ಕ್ರಮ ಎಂದು ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದ 3 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್​ ಕ್ಲಾಸ್ ಭಾಗ್ಯ!

ಪೋಷಕರ ಹೊರೆ ಇಳಿಸಿದ ಸರ್ಕಾರ

ಇನ್ನು 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದ ಕಡೆಯಿಂದಲೇ ಪಠ್ಯ ಪುಸ್ತಕ ಹಾಗೂ ನೋಟ್ ಬುಕ್ ಉಚಿತವಾಗಿ ನೀಡುವುದರಿಂದ ಪೋಷಕರ ಹೊರೆ ತಪ್ಪಲಿದೆ. 1ರಿಂದ 10ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿ ಪಠ್ಯ ಪುಸ್ತಕ ನೀಡಲಾಗುತ್ತಿತ್ತಾದರೂ ಪೋಷಕರು ನೋಟ್ ಬುಕ್ ಕೊಡಿಸಬೇಕಿತ್ತು. ಇನ್ನೂ 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೂ ಸಹ ಪುಸ್ತಕ ನೀಡುತ್ತಿರುವುದರಿಂದ ಪೋಷಕರ ಹೊರೆ ಕಡಿಮೆಯಾಗಲಿದೆ.

ಆದೇಶದಲ್ಲೇನಿದೆ?

ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ದ್ವಿಭಾಷಾ ಬಾಲ ಚೇತನ ಚಟುವಟಿಕೆ ಪುಸ್ತಕಗಳು, ಸರ್ಕಾರಿ ಶಾಲೆಗಳ 4ರಿಂದ 9ನೇ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ಮತ್ತು ಸರ್ಕಾರಿ ಶಾಲಾ ಕಾಲೇಜುಗಳ ಪೂರ್ವ ಪ್ರಾಥಮಿಕ ತರಗತಿಗಳಿಂದ 12ನೇ ತರಗತಿಯವರೆಗೆ ದಿನಚರಿ ಪುಸ್ತಕ ಮತ್ತು 1ರಿಂದ 10ನೇ ತರಗತಿಯವರೆಗೆ ಮೌಲ್ಯ ಶಿಕ್ಷಣ ಪುಸ್ತಕಗಳನ್ನು ವಿತರಿಸಲು ಸೂಚಿಸಲಾಗಿದೆ.

ಕೆಟಿಪಿಪಿ ಕಾಯ್ದೆ 1999ರ ಅಡಿ ರೂಪಿಸಿದ ನಿಯಮಗಳಂತೆ ಪಾರದರ್ಶಕ ಟೆಂಡರ್ ಕರೆದು ಕರ್ನಾಟಕ ಪುಸ್ತಕ ಸಂಘದ ಮೂಲಕ ಮುದ್ರಿಸಿ ವಿತರಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಲಾಗಿದೆ. ಒಟ್ಟು 264.62 ಕೋಟಿ ವೆಚ್ಚದಲ್ಲಿ ವಿದ್ಯಾ ವಿಕಾಸ ಯೋಜನೆ ಅಡಿ ಪುಸ್ತಕಗಳ ವಿತರಣೆಗೆ ಅನುಮೋದನೆ ನೀಡಲಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕದಡಿ ಹೊಸದಾಗಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳಿಗೆ 25.841 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಬೇಕು. ಎಸ್‌ಎಟಿಎಸ್ ಮೂಲಕ ಶಾಲೆಗಳಿಂದ ಪಠ್ಯಪುಸ್ತಕಗಳ ಬೇಡಿಕೆಯ ಮಾಹಿತಿ ಪಡೆದು ಎಲ್ಲಾ ವಿವರ ದಾಖಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಂದು ಹಾಡಿನಿಂದ 70 ಕೋಟಿ ಗಳಿಕೆ, ಗಾಯಕನಿಗೆ ಸಿಕ್ಕಿದ್ದೆಷ್ಟು? – Kannada News | Amaal Malik says his Sooraj Dooba Hai song earns 70 crore rs

ಸಿನಿಮಾಗಳ (Cinema) ಆಡಿಯೋ ಹಕ್ಕುಗಳು ಕೋಟ್ಯಂತರ ರೂಪಾಯಿಗೆ ಮಾರಾಟ ಆಗುತ್ತವೆ. ಮುಂಚೆಯೆಲ್ಲ ಜನ ಸಿನಿಮಾಗಳ ಸಿಡಿ, ಕ್ಯಾಸೆಟ್ ಖರೀದಿ ಮಾಡಿ ಹಾಡು ಕೇಳುತ್ತಿದ್ದರು. ಆದರೆ ಈಗ ಯೂಟ್ಯೂಬ್, ಸ್ಪೋಟಿಫೈ, ಅಮೆಜಾನ್ ಮ್ಯೂಸಿಕ್, ಜಿಯೋ ಸಾವನ್ ರೀತಿಯ ಅಪ್ಲಿಕೇಶನ್​​ಗಳಲ್ಲಿ ಹಾಡುಗಳನ್ನು ಕೇಳುತ್ತಾರೆ. ಯೂಟ್ಯೂಬ್​​ಗಳೆಲ್ಲ ಹಾಡುಗಳನ್ನು ಜನ ಉಚಿತವಾಗಿ ನೋಡುತ್ತಾರೆ. ಆದರೆ ಇದರಿಂದಲೇ ಆಡಿಯೋ ಸಂಸ್ಥೆಗಳಿಗೆ ಭಾರಿ ಮೊತ್ತದ ಹಣ ಬರುತ್ತದೆ. ಈ ಬಗ್ಗೆ ಇದೀಗ ಹಿಂದಿಯ ಸಂಗೀತ ನಿರ್ದೇಶಕರೊಬ್ಬರು ಮಾತನಾಡಿದ್ದಾರೆ.

ಅಮಾಲ್ ಮಲ್ಲಿಕ್, ಬಾಲಿವುಡ್​ನ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಸಹ. ಹಲವಾರು ಅತ್ಯುತ್ತಮ ಸಿನಿಮಾ ಹಾಡುಗಳನ್ನು ನೀಡಿದ್ದಾರೆ. ಆದರೆ ಕೆಲವು ವಿವಾದಗಳಿಗೆ ವಿಶೇಷವಾಗಿ ಸಂಗೀತ ಸಂಸ್ಥೆಗಳ ವಿರೋಧವನ್ನು ಕಟ್ಟಿಕೊಂಡು ಅವಕಾಶ ವಂಚಿತರಾಗಿದ್ದಾರೆ. ಈ ಬಗ್ಗೆ ಇದೀಗ ಅಮಾಲ್ ಮಲ್ಲಿಕ್ ಅವರು ಮಾತನಾಡಿದ್ದು, ಸಂಗೀತ ಸಂಸ್ಥೆಗಳು ಸಂಗೀತಗಾರರಿಗೆ ಮಾಡುವ ಅನ್ಯಾಯವನ್ನು ವಿವರಿಸಿದ್ದಾರೆ. ತಮ್ಮ ಒಂದೇ ಒಂದು ಹಾಡಿನಿಂದ ಸಂಗೀತ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಹಣ ಬಂತೆಂದು ತಿಳಿಸಿದ್ದಾರೆ.

ರಣ್​​ಬೀರ್ ಕಪೂರ್, ಅರ್ಜುನ್ ರಾಮ್​​ಪಾಲ್, ಜಾಕ್ವೆಲಿನ್ ಫರ್ನಾಂಡೀಸ್ ನಟನೆಯ ‘ರಾಯ್’ ಸಿನಿಮಾಕ್ಕೆ ಅಮಾಲ್ ಮಲ್ಲಿಕ್ ಸಂಗೀತ ನೀಡಿದ್ದರು. ಆ ಸಿನಿಮಾದ ‘ಸೂರಜ್ ಡೂಬಾ ಹೈ’ ಹಾಡು ಸಖತ್ ಹಿಟ್ ಆಗಿತ್ತು. ಟಿ ಸೀರೀಸ್​​ನವರು ಆಡಿಯೋ ಹಕ್ಕು ಖರೀದಿ ಮಾಡಿದ್ದರು. ಅಮಾಲ್ ಮಲ್ಲಿಕ್ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ ಆ ಒಂದು ಹಾಡಿನಿಂದ ಟಿ ಸೀರೀಸ್​​ಗೆ ಈ ವರೆಗೆ 70 ಕೋಟಿಗೂ ಹೆಚ್ಚು ಮೊತ್ತ ಸಿಕ್ಕಿದೆಯಂತೆ.

ಇದನ್ನೂ ಓದಿ:ತೀವ್ರವಾಗಿ ಕುಸಿದ ‘ಬಾರ್ಡರ್ 2’ ಸಿನಿಮಾ ಕಲೆಕ್ಷನ್; ಮುಂದೇನು ಪರಿಸ್ಥಿತಿ?

ಮ್ಯೂಸಿಕ್ ಕಂಪೆನಿಗೆ 60-70 ಕೋಟಿ ಕೇವಲ ಆ ಒಂದು ಹಾಡಿನಿಂದ ಬಂತು ಆದರೆ ನನಗೆ ಸಿಕ್ಕಿದ್ದು ಬಹಳ ಅತ್ಯಲ್ಪ. ನನಗೆ ಈ ವರೆಗೆ ಸುಮಾರು ಒಂದು ಕೋಟಿ ರೂಪಾಯಿ ಸಿಕ್ಕಿರಬಹುದು ಅಷ್ಟೆ. ಈ ಹಕ್ಕಿಗಾಗಿ ಹೋರಾಟ ಎಂಬುದು ಕೇವಲ ನನ್ನ ವೈಯಕ್ತಿಕ ಸಂಪತ್ತಿಗಾಗಿ ಅಲ್ಲ. ನಾನು ಜನರಿಗೆ ಸಹಾಯ ಮಾಡಲು ಆ ರೀತಿಯ ಹಣವನ್ನು ಗಳಿಸಲು ಬಯಸುತ್ತೇನೆ. ನಾನು ಜನ ಸೇವೆಯನ್ನು ನನ್ನದೇ ಆದ ರೀತಿಯಲ್ಲಿ ಮಾಡುತ್ತೇನೆ, ನಾನು ಮಾಡುವ ಹೋರಾಟದ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ, ಆದರೆ ಜನರಿಗೆ ಸಹಾಯ ಮಾಡಲು ನನಗೆ ಹಣ ಬೇಕು. ನನಗೆ ಹಕ್ಕುಗಳು ಅಥವಾ ಸಮಾನ ಹಕ್ಕುಗಳು ಅಥವಾ ಕೆಲವು ರೀತಿಯ ಹಕ್ಕುಗಳು ಇದ್ದಾಗ ಮಾತ್ರ ಅದು ಸಾಧ್ಯ’ ಎಂದಿದ್ದಾರೆ ಅಮಾಲ್.

ದಕ್ಷಿಣದ ಸಂಗೀತ ನಿರ್ದೇಶಕರುಗಳ ಬಗ್ಗೆ ಮಾತನಾಡಿರುವ ಅಮಾಲ್ ಮಲ್ಲಿಕ್, ‘ದಕ್ಷಿಣದ ಸಂಗೀತ ನಿರ್ದೇಶಕರು ದೊಡ್ಡ ಮೊತ್ತದ ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಎಆರ್ ರೆಹಮಾನ್ ಹಾಗೂ ಇನ್ನೂ ಕೆಲವರು ತಮ್ಮ ನಿರ್ಣಯಕ್ಕೆ ಗಟ್ಟಿಯಾಗಿ ನಿಂತು ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ’ ಎಂದು ಮಲ್ಲಿಕ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪದೇ ಪದೇ ಗಂಟಲು ನೋವು ಬರುವುದಕ್ಕೆ ಕಾರಣವೇನು? ಇದು ಯಾವ ರೋಗದ ಮುನ್ಸೂಚನೆ ತಿಳಿದುಕೊಳ್ಳಿ – Kannada News | Why Does Throat Pain Occur? Know the Reasons

ಕೆಲವರಿಗೆ ಗಂಟಲು ನೋವು (Throat Pain) ಪದೇ ಪದೇ ಕಂಡುಬರುತ್ತದೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿ ಇದರಿಂದ ಮುಕ್ತಿ ಪಡೆಯುವುದಕ್ಕಿಂತ ನಿರ್ಲಕ್ಷಿಸುವವರ ಸಂಖ್ಯೆಯೇ ಜಾಸ್ತಿ. ಆದರೆ ಆರೋಗ್ಯ ತಜ್ಞರು ಈ ಸಮಸ್ಯೆಯನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು ಎನ್ನುತ್ತಾರೆ. ಏಕೆಂದರೆ ಇದು ಕೆಲವೊಮ್ಮೆ ರೋಗದ ಲಕ್ಷಣವಾಗಿರಬಹುದು. ಗಂಟಲು ನೋವು ಅಥವಾ ತುರಿಕೆ ಹಲವಾರು ಕಾರಣಗಳಿಂದ ಉಂಟಾಗಬಹುದು. ಶೀತ, ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕಿನ ಜೊತೆಗೆ, ಅಲರ್ಜಿ, ಧೂಳು, ಹೊಗೆ, ಮಾಲಿನ್ಯ, ತುಂಬಾ ಬಿಸಿ ಅಥವಾ ತಣ್ಣನೆಯ ವಸ್ತುಗಳ ಸೇವನೆ ಮಾಡುವುದು ಅಥವಾ ಕುಡಿಯುವುದು, ಅದಲ್ಲದೆ ತುಂಬಾ ಜೋರಾಗಿ ಮಾತನಾಡುವುದು ಅಥವಾ ಕೂಗುವುದು ಸಹ ಗಂಟಲು ನೋವಿಗೆ ಕಾರಣವಾಗಬಹುದು. ಗಂಟಲು ನೋವು 3 ರಿಂದ 7 ದಿನಗಳಲ್ಲಿ ಗುಣವಾಗುತ್ತದೆ, ಆದರೆ ಅದು ಮುಂದುವರಿದರೆ ಅಥವಾ ಮತ್ತೆ ಮತ್ತೆ ಬರುತ್ತಿದ್ದರೆ, ಅದನ್ನು ನಿರ್ಲಕ್ಷಿಸಬಾರದು. ಬದಲಾಗಿ ಅದನ್ನು ಸರಿಯಾಗಿ ಗುರುತಿಸಿ ತಡೆಯುವುದು ಬಹಳ ಮುಖ್ಯ.

ಗಂಟಲು ನೋವು ಒಂದು ಕಾಯಿಲೆಯೇ?

ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ರವಿ ಮಹಾರ್ ಹೇಳುವ ಪ್ರಕಾರ, ಗಂಟಲು ನೋವು ಗಂಭೀರ ಕಾಯಿಲೆಯಲ್ಲ, ಆದರೆ ಇದು ವಿವಿಧ ಸೋಂಕುಗಳು ಅಥವಾ ಸಮಸ್ಯೆಗಳ ಸೂಚಕವಾಗಿರಬಹುದು. ಶೀತ, ಜ್ವರ ಅಥವಾ ಮಾನೋನ್ಯೂಕ್ಲಿಯೊಸಿಸ್‌ನಂತಹ ವೈರಲ್ ಸೋಂಕುಗಳು ಈ ಸಮಸ್ಯೆಗೆ ಕಾರಣವಾಗಿರಬಹುದು. ಕೆಲವೊಮ್ಮೆ ಬ್ಯಾಕ್ಟೀರಿಯಾ ಕೂಡ ಗಂಟಲು ನೋವು ಜ್ವರಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲ, ಗಂಟಲು ನೋವು ಅಲರ್ಜಿ, ಧೂಳು, ಹೊಗೆ, ಧೂಮಪಾನ ಅಥವಾ ಗಂಟಲಿನ ಆಯಾಸದಿಂದ ಕೂಡ ಉಂಟಾಗಬಹುದು. ನುಂಗಲು ತೊಂದರೆ, ಜ್ವರ, ಕುತ್ತಿಗೆ ಊತ ಅಥವಾ ಗಂಟಲಿನಲ್ಲಿ ಕೆಂಪು ಕಲೆ, ನೋವು ಇದ್ದಲ್ಲಿ ಅದು ಸೋಂಕು ಅಥವಾ ರೋಗದ ಮುನ್ಸೂಚನೆಯಾಗಿರಬಹುದು. ಈ ರೀತಿ ಕಂಡುಬರುವ ನಿರಂತರ ನೋವು ಅಥವಾ ಕೆಲವು ಲಕ್ಷಣಗಳನ್ನು ನಿರ್ಲಕ್ಷಿಸಬಾರದು.

ಇದನ್ನೂ ಓದಿ: ನಿಮ್ಮ ದೇಹದಲ್ಲಿ ಪ್ರೋಟೀನ್ ಕಡಿಮೆ ಇದೆ ಎಂಬುದನ್ನು ದೇಹ ನೀಡುವ ಈ 6 ಲಕ್ಷಣಗಳ ಮೂಲಕ ತಿಳಿಯಬಹುದು!

ಗಂಟಲು ನೋವನ್ನು ತಡೆಯಲು ಸಲಹೆಗಳು:

ಸಾಮಾನ್ಯವಾಗಿ ಗಂಟಲು ನೋವನ್ನು ತಡೆಗಟ್ಟಲು ಕೆಲವು ಸರಳ ಕ್ರಮಗಳನ್ನು ಪಾಲಿಸುವುದು ಒಳ್ಳೆಯದು. ಮೊದಲು, ನಿಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಕೊಳಕು, ಧೂಳು ಮತ್ತು ಹೊಗೆಯಿಂದ ದೂರವಿರಿ. ತುಂಬಾ ತಣ್ಣನೆಯ ಅಥವಾ ತುಂಬಾ ಬಿಸಿಯಾದ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಿ, ಜೊತೆಗೆ ತುಂಬಾ ಜೋರಾಗಿ ಮಾತನಾಡುವುದರಿಂದ ಅಥವಾ ಕೂಗುವುದನ್ನು ಕಡಿಮೆ ಮಾಡಿ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಪ್ರತಿನಿತ್ಯ ಹಣ್ಣು, ತರಕಾರಿ ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿರುವ ಸಮತೋಲಿತ ಆಹಾರ ಸೇವನೆ ಮಾಡಿ. ನಿಮಗೆ ಅಲರ್ಜಿ ಅಥವಾ ಉಸಿರಾಟ ಸಂಬಂಧಿ ಸಮಸ್ಯೆಗಳಿದ್ದಲ್ಲಿ ಈ ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ಗಂಟಲು ನೋವು ಮತ್ತು ಸೋಂಕುಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RRB Recruitment 2026: ರೈಲ್ವೆ ಇಲಾಖೆಯಲ್ಲಿ 21ಸಾವಿರಕ್ಕೂ ಅಧಿಕ ಉದ್ಯೋಗವಕಾಶ; 10th ಪಾಸಾಗಿದ್ರೆ ಸಾಕು! – Kannada News | RRB Group D Recruitment 2026: 21,997 Posts for 10th Pass Railway Jobs

ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಭಾರತೀಯ ರೈಲ್ವೆ ದೊಡ್ಡ ಗುಡ್​ ನ್ಯೂಸ್​ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ದೇಶದಾದ್ಯಂತ ಒಟ್ಟು 21,997 ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿದ್ದು, ಕಡಿಮೆ ವಿದ್ಯಾರ್ಹತೆಯೊಂದಿಗೆ ಕೇಂದ್ರ ಸರ್ಕಾರದ ಉದ್ಯೋಗ ಪಡೆಯಲು ಇದು ಉತ್ತಮ ಅವಕಾಶ. ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು rrbapply.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಫಾರ್ಮ್ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಕೆ ಜನವರಿ 31 ರಿಂದ ಪ್ರಾರಂಭವಾಗಿದ್ದು, ಮಾರ್ಚ್ 2ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಶುಲ್ಕ ಪಾವತಿ ಹಾಗೂ ತಿದ್ದುಪಡಿ ಮಾಡಲು ಪ್ರತ್ಯೇಕ ದಿನಾಂಕಗಳನ್ನು ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳು ಒಂದು ರೈಲ್ವೆ ವಲಯಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಒಂದಕ್ಕಿಂತ ಹೆಚ್ಚು ವಲಯಗಳನ್ನು ಆಯ್ಕೆ ಮಾಡಿದರೆ ಅರ್ಜಿ ತಿರಸ್ಕೃತವಾಗುತ್ತದೆ. ವಯೋಮಿತಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 33 ವರ್ಷಗಳಾಗಿದ್ದು, ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ಸಡಿಲಿಕೆ ದೊರೆಯುತ್ತದೆ. ಆಯ್ಕೆ ಪ್ರಕ್ರಿಯೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯಿಂದ ಆರಂಭವಾಗಿ, ನಂತರ ದೈಹಿಕ ದಕ್ಷತೆ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಪೂರ್ಣಗೊಳ್ಳುತ್ತದೆ. ಪರೀಕ್ಷೆಯಲ್ಲಿ ಸಾಮಾನ್ಯ ವಿಜ್ಞಾನ, ಗಣಿತ, ತಾರ್ಕಿಕತೆ ಮತ್ತು ಪ್ರಚಲಿತ ವಿದ್ಯಮಾನಗಳ ಪ್ರಶ್ನೆಗಳು ಇರಲಿವೆ.

ಇದನ್ನೂ ಓದಿ: ಎಕ್ಸಿಮ್ ಬ್ಯಾಂಕ್​ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ತಿಂಗಳಿಗೆ 65,000ರೂ. ಸ್ಟೈಫಂಡ್

ಆಯ್ಕೆಯಾದ ಅಭ್ಯರ್ಥಿಗಳಿಗೆ ಲೆವೆಲ್–1 ಅಡಿಯಲ್ಲಿ 18,000 ರೂ. ಮೂಲ ವೇತನದೊಂದಿಗೆ ಇತರೆ ಸರ್ಕಾರಿ ಭತ್ಯೆಗಳು ದೊರೆಯಲಿವೆ. ಅರ್ಜಿ ಶುಲ್ಕ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500ರೂ. ಆಗಿದ್ದು, ಪರೀಕ್ಷೆ ಬರೆದ ನಂತರ ಭಾಗಶಃ ಮರುಪಾವತಿಸಲಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 250ರೂ. ಶುಲ್ಕವನ್ನು ಸಂಪೂರ್ಣವಾಗಿ ಹಿಂತಿರುಗಿಸಲಾಗುತ್ತದೆ. ಹೀಗಾಗಿ ಕಡಿಮೆ ಅರ್ಹತೆಯೊಂದಿಗೆ ಸ್ಥಿರ ಹಾಗೂ ಸುರಕ್ಷಿತ ಸರ್ಕಾರಿ ಉದ್ಯೋಗ ಪಡೆಯಲು ಇದು ಅಪರೂಪದ ಅವಕಾಶವಾಗಿದ್ದು, ಆಸಕ್ತರು ಕೊನೆಯ ದಿನಾಂಕಕ್ಕೂ ಮುನ್ನವೇ ಅರ್ಜಿ ಸಲ್ಲಿಸುವುದು ಉತ್ತಮ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Mangaluru: ಕೌಟುಂಬಿಕ ಕಲಹಕ್ಕೆ ಹರಿದ ನೆತ್ತರು; ಗಲಾಟೆ ವೇಳೆ ಹೋಯ್ತು ಇಬ್ಬರ ಪ್ರಾಣ! – Kannada News | Domestic Row Claims Two Lives in Manjeshwara, Kasaragod

ಶೇಕುಂಞ ಮತ್ತು ಉಮರ್ ಫಾರೂಕ್​​ ಜೊತೆ ಜುಮೈಲImage Credit source: Tv9 Kannada

ಮಂಗಳೂರು, ಫೆಬ್ರವರಿ 03: ಕೌಟುಂಬಿಕ ಕಲಹಕ್ಕೆ ಇಬ್ಬರು ಬಲಿಯಾಗಿರುವ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ತೂಮಿನಾಡಿನಲ್ಲಿ ನಡೆದಿದೆ. ಜುಮೈಲ(18) ಮತ್ತು ಶೇಕುಂಞ(55) ಮೃತ ದುರ್ದೈವಿಗಳಾಗಿದ್ದು, ಆರೋಪಿ ಉಮರ್ ಫಾರೂಕ್​​ನ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಜಗಳ ಬಿಡಿಸಲು ಹೋದ ಜುಮೈಲ ಮೊದಲು ಮೃತ ಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಶೇಕುಂಞ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಫಾರೂಕ್​ ಹಾಗೂ ಪತ್ನಿ ತಾಹಿರ ನಡುವೆ ಕೌಟುಂಬಿಕ ಕಲಹ ಇತ್ತು ಎನ್ನಲಾಗಿದ್ದು, ಫಾರೂಕ್​ನ‌ ನಾದಿನಿ ಮನೆಯಲ್ಲಿ ಪತ್ನಿ ತಾಹಿತ ಮತ್ತು ಪುತ್ರಿ ಜುಮೈಲ ವಾಸವಿದ್ದರು. ಕೌಟುಂಬಿಕ ಕಲಹ ತಾರಕಕ್ಕೇರಿ ವಿಚ್ಛೇದನದ ಮಾತುಕತೆ ಕೂಡ ನಡೆದಿತ್ತು. ಈ ವೇಳೆ ತನ್ನ ಹೆಸರಿಗೆ ಆಸ್ತಿ ಮಾಡಿಕೊಡುವಂತೆ ಫಾರೂಕ್​ ಬೇಡಿಕೆ ಇಟ್ಟಿದ್ದ. ಇದೇ ವಿಚಾರವಾಗಿ ನಿನ್ನೆ ಉಮ್ಮರ್ ಮತ್ತು ಆತನ ಬಾವ ಶೇಕುಂಞ ನಡುವೆ ಜಗಳ ಆರಂಭವಾಗಿದ್ದು, ಅದು ವಿಕೋಪಕ್ಕೆ ಹೋದಾಗ ಜಗಳ ಬಿಡಿಸಲು ಹೋದ ಜುಮೈಲಾಗೆ ಕತ್ತಿ ತಗುಲಿದೆ. ಗಾಯಗೊಂಡ ಆಕೆ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ಕಮಲಾಕರ ಗುರೂಜಿ ಜೊತೆಗೆ ಸಂಬಂಧ; ಪುತ್ರಿಯಿಂದಲೇ ಮ್ಯಾಟರ್​​ ರಿವೀಲ್​

ಇನ್ನು ಆರೋಪಿ ಉಮ್ಮರ್ ಫಾರೂಖ್ ಕೆಲ‌ ತಿಂಗಳ ಹಿಂದಷ್ಟೇ ವಿದೇಶದಿಂದ ಬಂದಿರುವ ಮಾಹಿತಿ ಇದ್ದು, ಆತ ಇತ್ತೀಚೆಗೆ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ ಎಂದು ಕೂಡ ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಕಸ್ಟಡಿಗೆ ಪಡೆದಿರುವ ಮಂಜೇಶ್ವರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿ ಉಮ್ಮರ್ ಫಾರೂಖ್​​ಗೆ ತಕ್ಕ ಶಿಕ್ಷೆಯಾಗಬೇಕೆಂಬ ಆಗ್ರಹ ಕೇಳಿಬಂದಿದೆ.

ಕ್ಷುಲ್ಲಕ ಕಾರಣಕ್ಕೆ ವಕೀಲನ ಮೇಲೆ ಹಲ್ಲೆ

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡದಲ್ಲಿ ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ವಕೀಲನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಬೆನ್ ಚಿಂಚೊಳ್ಳಿ ನಿವಾಸಿಯಾಗಿರುವ 26 ವರ್ಷದ ಅನಿಲ್​ ಕುಮಾರ್ ಗಾಯಾಳುವಾಗಿದ್ದು, ಹಂದಿ ಸಾಕಾಣಿಕೆ ‌ವಿಚಾರವಾಗಿ ನಡೆದ ಜಗಳ ಸಂಬಂಧ ಠಾಣೆಗೆ ದೂರು ಕೊಡಲು ಹೋಗುತ್ತಿದ್ದಾಗ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ. ಘಟನೆ ಸಂಬಂಧ ‌ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಹಲ್ಲೆಗೊಳಗಾದ ಅನಿಲ್ ಕುಮಾರ್​ಗೆ ಬ್ರಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link