Category Archives: Blog

Your blog category

‘ಮೋದಿ ನಿರ್ಧರಿಸಿದರೆ ಪಾಕ್ ಕ್ರಿಕೆಟ್ ದಿವಾಳಿ ಆಗುತ್ತೆ’; ಮಾಜಿ ನಾಯಕ ರಮೀಜ್ ರಾಜಾ – Kannada News | PCB Financial Crisis: Ramiz Raja Warns India’s Power Amid T20 WC Stance

ಟೀಂ ಇಂಡಿಯಾ ವಿರುದ್ಧ ಟಿ20 ವಿಶ್ವಕಪ್ ಪಂದ್ಯವನ್ನಾಡುವುದಿಲ್ಲ ಎಂದಿರುವ ಪಾಕಿಸ್ತಾನಕ್ಕೆ ಮುಂದೆ ಎದುರಾಗಲಿರುವ ಸಮಸ್ಯೆಗಳ ಬಗ್ಗೆ ಅರಿವಿಲ್ಲ ಎಂದೆನಿಸುತ್ತದೆ. ಏಕೆಂದರೆ ಈಗಾಗಲೇ ನೂರಾರು ಸಮಸ್ಯೆಗಳಿಂದ ಬಳಲುತ್ತಿರುವ ಪಾಕ್ ಕ್ರಿಕೆಟ್ ಮಂಡಳಿ ಇದೀಗ ಐಸಿಸಿ ಈವೆಂಟ್​ನಿಂದ ಬರುತ್ತಿದ್ದ ನೂರಾರು ಕೋಟಿ ರೂಗಳ ಆದಾಯವನ್ನು ಕಳೆದುಕೊಂಡಿದೆ. ಇದರ ಜೊತೆಗೆ ಐಸಿಸಿಯ ಕೋಪಕ್ಕೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟಕ್ಕೊಳಗಾಗುವುದಂತೂ ಖಚಿತ. ಇದೆಲ್ಲದರ ನಡುವೆ ಪಾಕಿಸ್ತಾನದ ಮಾಜಿ ನಾಯಕ ಮತ್ತು ಮಾಜಿ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಅವರ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಮನಸ್ಸು ಮಾಡಿದರೆ ಪಾಕಿಸ್ತಾನ ಕ್ರಿಕೆಟ್ ಹೇಗೆ ಹಾಳಾಗಬಹುದು ಎಂಬುದನ್ನು ವಿವರಿಸಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಮೀಜ್ ರಾಜಾ, ‘ಪಾಕಿಸ್ತಾನ ಮಂಡಳಿಯು ಐಸಿಸಿಯಿಂದ 50% ಹಣವನ್ನು ಪಡೆಯುತ್ತದೆ. ಐಸಿಸಿ ಪಂದ್ಯಾವಳಿಗಳನ್ನು ಆಯೋಜಿಸುತ್ತದೆ ಮತ್ತು ಅದರಿಂದ ಬರುವ ಲಾಭವನ್ನು ಸದಸ್ಯ ರಾಷ್ಟ್ರಗಳಿಗೆ ಹಂಚುತ್ತದೆ. ಆದರೆ ಬರುವ ಆದಾಯದಲ್ಲಿ ಶೇ. 90 ರಷ್ಟು ಹಣ ಭಾರತೀಯ ಕ್ರಿಕೆಟ್ ಮಾರುಕಟ್ಟೆಯಿಂದ ಬರುತ್ತದೆ. ಒಂದು ರೀತಿಯಲ್ಲಿ, ಭಾರತೀಯ ವ್ಯಾಪಾರ ಸಂಸ್ಥೆಗಳು ಪಾಕಿಸ್ತಾನ ಕ್ರಿಕೆಟ್ ಅನ್ನು ನಡೆಸುತ್ತಿವೆ. ನಾಳೆ ಭಾರತದ ಪ್ರಧಾನಿ ಪಾಕಿಸ್ತಾನಕ್ಕೆ ನಾವು ಹಣಕಾಸು ನೀಡುವುದಿಲ್ಲ ಎಂದು ನಿರ್ಧರಿಸಿದರೆ, ನಮ್ಮ ಕ್ರಿಕೆಟ್ ಮಂಡಳಿ ದಿವಾಳಿಯಾಗುತ್ತದೆ. ಹೀಗಾಗಿ ನಾವು ಬೇರೆಯವರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ನಾವು ನಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕಾಗುತ್ತದೆ. ಬಿಸಿಸಿಐ ಮೇಲಿನ ಅವಲಂಬನೆಯನ್ನು ಪ್ರತಿ ವರ್ಷ ಶೇ. 10 ರಷ್ಟು ಕಡಿಮೆ ಮಾಡಬೇಕು’ ಎಂದಿದ್ದಾರೆ.

Source link

ಧರ್ಮರಾಯಸ್ವಾಮಿ ದೇಗುಲದ ಚಿನ್ನದ ನಕ್ಲೇಸ್ ಕಳ್ಳತನ ಪ್ರಕರಣಕ್ಕೆ ಬಿಗ್ ಟಿಸ್ಟ್, ಇಒ ಹೇಳಿದ್ದೇನು? – Kannada News | Bengaluru Dharmaraya swamy Temple EO nagaraju suspended for gold necklace theft allegation

ಬೆಂಗಳೂರು, (ಫೆಬ್ರವರಿ 03): ಬೆಂಗಳೂರಿನ ಐತಿಹಾಸಿಕ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ  (Bengaluru Dharmaraya swamy Temple ) ಕಾಣಿಕೆ ರೂಪದಲ್ಲಿ ಬಂದಿದ್ದ ಚಿನ್ನದ ನಕ್ಲೇಸ್ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಇಓ ಅವರನ್ನ ಸಸ್ಪೆಂಡ್ ಮಾಡಲಾಗಿದೆ. ಹುಂಡಿ ಎಣಿಕೆ ಮಾಡುವಾಗ ಸಿಕ್ಕಿದ್ದ ದ್ರೌಪದಿ ದೇವಿಯ 120 ಗ್ರಾಂ ತೂಕದ ಚಿನ್ನದ ಸರವನ್ನು ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ (EO) ನಾಗರಾಜ್ ಅವರು ಕದ್ದು ಜೇಬಿಗೆ ಹಾಕಿಕೊಂಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಸತೀಶ್ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಮುಜರಾಯಿ ಇಲಾಖೆಯು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ. ನಾಗರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆದ್ರೆ, ಇದೀಗ ಈ ಪ್ರಕರಣಕ್ಕೆ ಅಮಾನತುಗೊಂಡ ನಾಗರಾಜು ಅವರು ಬಿಗ್ ಟ್ವಿಸ್ಟ್ ನೀಡಿದ್ದಾರೆ.

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಧರ್ಮರಾಯಸ್ವಾಮಿ ದೇವಸ್ಥಾನದ ಇಒ ನಾಗರಾಜ್, ನಾವು ಹುಂಡಿ ಎಣಿಕೆ ಮಾಡಿದಾಗ 68 ಗ್ರಾಂ ತೂಕ ಇತ್ತು. ಸಮೀಪದ ಚಿನ್ನದ ವ್ಯಾಪಾರಿಯಿಂದ ತೂಕ ಮಾಡಿಸಿ ಪರೀಕ್ಷೆ ಮಾಡಿಸಲಾಗಿತ್ತು. ಇದು ಬಿ ದರ್ಜೆಯ ದೇವಾಲಯ ಲಾಕರ್ ವ್ಯವಸ್ಥೆ, ಭದ್ರತೆ ಇಲ್ಲ. ಹಾಗಾಗಿ ಅಧಿಕೃತವಾಗಿ ಕಚೇರಿಗೆ ತೆಗೆದುಕೊಂಡು ಹೋಗಿದ್ದೆ. ಮರುದಿನ ಭಾನುವಾರ ಆಗಿದ್ದರಿಂದ ಸೋಮವಾರ ವಾಪಸ್ ತಂದಿದ್ದೇನೆ. ವಾಪಸ್ ತಂದಾಗಲೂ ಆ ಚಿನ್ನ 68 ಗ್ರಾಂ ತೂಕ ಇತ್ತು. ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಿಸಿದ್ದೇವೆ. ನಾನು ತಪ್ಪು ಮಾಡಿಲ್ಲ, ನನ್ನ ಬಳಿ ದಾಖಲೆ ಇದೆ. ಮೇಲಧಿಕಾರಿಗಳಿಗೆ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ನೋಡಿ: ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?

Source link

ಆಸ್ತಿಗಾಗಿ ಒಡಹುಟ್ಟಿದವನನ್ನೇ ಕೊಂದ ಪಾಪಿ: ಒಂದೂವರೆ ಎಕರೆ ಜಮೀನಿಗಾಗಿ ಹರಿದ ನೆತ್ತರು – Kannada News | Davangere Property Murder: Brother Kills Sibling Over 1.5 Acre Land Dispute

ಆರೋಪಿ ಚಂದ್ರಪ್ಪ ಮತ್ತು ಮೃತ ನೀಲಪ್ಪImage Credit source: Tv9 Kannada

ದಾವಣಗೆರೆ, ಫೆಬ್ರವರಿ 03: ತಂದೆಯ ಆಸ್ತಿಗಾಗಿ ಒಡಹುಟ್ಟಿದವನನ್ನೇ ಪಾಪಿ ಸಹೋದರನೋರ್ವ ಕೊಲೆ ಮಾಡಿರುವ ಆಘಾತಕಾರಿ ಘಟನೆ ದಾವಣಗೆರೆಯ ಮಾಯಕೊಂಡದಲ್ಲಿ ನಡೆದಿದೆ. ನೀಲಪ್ಪ ಮೃತ ವ್ಯಕ್ತಿಯಾಗಿದ್ದು, ಆತನ ಸಹೋದರ ಚಂದ್ರಪ್ಪನೇ ಆರೋಪಿ. ಕೇವಲ ಒಂದೂವರೆ ಎಕರೆ ಜಮೀನಿಗಾಗಿ ನಡೆದ ಕೌಟುಂಬಿಕ ಕಲಹ ಓರ್ವನ ಸಾವಲ್ಲಿ ಅಂತ್ಯ ಕಂಡಿದೆ.

ಚಂದ್ರಪ್ಪ ಮತ್ತು ನೀಲಪ್ಪಗೆ ಅವರ ತಂದೆ ಇರುವಾಗಲೇ ಅಂದ್ರೆ 1983ರಲ್ಲಿ ಆಸ್ತಿ ಪಾಲು ಮಾಡಲಾಗಿತ್ತು. ಈ ವೇಳೆ ತಂದೆ ಜೀವನೋಪಾಯಕ್ಕಾಗಿ ಒಂದೂವರೆ ಎಕರೆ ಜಮೀನನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಅವರು ನೀಲಪ್ಪ ಜೊತೆಗೇ ನೆಲೆಸಿದ್ದು, ಈ ವೇಳೆ ಒಮ್ಮೆಯೂ ಅಪ್ಪನ ಯೋಗಕ್ಷೇಮ ವಿಚಾರಿಸಲು ಚಂದ್ರಪ್ಪ ಬಂದಿರಲಿಲ್ಲ. ಕನಿಷ್ಠ ತಂದೆಯ ಅಂತ್ಯ ಸಂಸ್ಕಾರಕ್ಕೂ ಬಂದಿಲ್ಲ. ಇನ್ನು ತನ್ನನ್ನು ಕೊನೇಗಾಲದಲ್ಲಿ ನೀಲಪ್ಪ ನೋಡಿಕೊಂಡ ಕಾರಣ ಆತನ ಪುತ್ರ  ರಾಕೇಶ್​​ ಹೆಸರಿಗೆ ಬದುಕಿದ್ದಾಗಲೇ ಇವರ ತಂದೆ ಜಮೀನಿನ ಕಾಗದಪತ್ರ ಮಾಡಿಸಿದ್ದರು. ಇದೇ ಕಾರಣಕ್ಕೆ ಜಗಳ ತೆಗೆಯುತ್ತಿದ್ದ ಚಂದ್ರಪ್ಪ, ತನಗೂ ಆ ಜಮೀನಲ್ಲಿ ಪಾಲುಕೊಡುವಂತೆ ಪೀಡಿಸಿ ಸಹೋದರನನ್ನು ಬಡಿದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಹರಿದ ನೆತ್ತರು; ಗಲಾಟೆ ವೇಳೆ ಹೋಯ್ತು ಇಬ್ಬರ ಪ್ರಾಣ!

ಇನ್ನು ಈ ಹಿಂದೆಯೂ ತೋಟದಲ್ಲಿನ ಅಡಿಕೆ ಮರಗಳನ್ನು ಚಂದ್ರಪ್ಪ ಕಡಿದುಹಾಕಿದ್ದ. ಪೊಲೀಸ್​​ ಠಾಣೆ ಮೆಟ್ಟಿಲು ಹತ್ತಿ ಜೈಲಿಗೂ ಹೋಗಿಬಂದಿದ್ದ ಎನ್ನಲಾಗಿದೆ. ನೀಲಪ್ಪ ಕೊಲೆಗೆ ಈತ ಮಾತ್ರ ಕಾರಣನಲ್ಲ. ಬದಲಾಗಿ ಆತನ ಪುತ್ರರು ಮತ್ತು ಪತ್ನಿ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ನೀಲಪ್ಪನ ಕೊಂದು ಆತನ ಪುತ್ರ ರಾಕೇಶ್​​ಗೂ ಆರೋಪಿ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಒಟ್ಟಾರೆಯಾಗಿ ತನ್ನ ವೃದ್ಧಾಪ್ಯದಲ್ಲಿ ಸಲಹಿ- ಸೇವೆ ಮಾಡಿದ್ದ ಮಗನ ಕುಟುಂಬಕ್ಕೆ ಚಂದ್ರಪ್ಪ ತಂದೆ ಜಮೀನು ನೀಡಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿಹೋಗಿದೆ. ತಂದೆ ಬದುಕಿದ್ದಾಗ ತುತ್ತು ಅನ್ನ ಹಾಕದ ಈ ಪಾಪಿ ಈಗ ಜಮೀನಿನ ಆಸೆಗೆ ಮಾಡಬಾರದ ಕೆಲಸ ಮಾಡಿದ್ದಾನೆ. ಆತನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದು, ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

World Cancer day: ಕ್ಯಾನ್ಸರ್ ರೋಗಕ್ಕೆ ಯಾವ ಅಂಶಗಳು ಕಾರಣವಾಗುತ್ತೆ ಗೊತ್ತಾ? – Kannada News | Cancer Causes: Know the Risks & Prevention

ಕ್ಯಾನ್ಸರ್ (Cancer) ಎಂಬ ಮಹಾಮಾರಿ ದೇಶಾದ್ಯಂತ ಹರಡಿದೆ. ಗಾಳಿಯಿಂದ ನೀರು, ಆಹಾರ ಎಲ್ಲವೂ ಕಲುಷಿತವಾಗಿದ್ದು, ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ. ಈ ರೋಗಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ರೋಗಿಯ ಜೀವಕ್ಕೆ ಅಪಾಯಕಾರಿಯಾಗಬಲ್ಲದು ಎಂಬುದು ತಿಳಿದ ವಿಚಾರ. ಅದಕ್ಕಾಗಿಯೇ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿ ವರ್ಷ ಫೆಬ್ರವರಿ 4 ರಂದು ಆಚರಿಸಲಾಗುತ್ತದೆ. ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (UICC) ನೇತೃತ್ವದಲ್ಲಿ, ಜಾಗತಿಕ ಕ್ಯಾನ್ಸರ್ ಪ್ರಕರಣಗಳನ್ನು ಕಡಿಮೆ ಮಾಡಲು ಮತ್ತು ರೋಗಿಗಳಿಗೆ ಬೆಂಬಲ ನೀಡಲು ಈ ದಿನದಂದು ಜಾಗತಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ವಿಶ್ವ ಕ್ಯಾನ್ಸರ್ ದಿನದ ಇತಿಹಾಸ

ಸಾಮಾನ್ಯವಾಗಿ ಈ ದಿನವನ್ನು ಪ್ರತಿ ವರ್ಷ ಫೆಬ್ರವರಿ 4 ರಂದು ಆಚರಿಕೊಂಡು ಬರಲಾಗುತ್ತಿದೆ. 2000 ಫೆಬ್ರವರಿ 4 ರಂದು ವಿಶ್ವ ಶೃಂಗಸಭೆಯಲ್ಲಿ ವಿಶ್ವ ಕ್ಯಾನ್ಸರ್ ದಿನವು ಅಸ್ತಿತ್ವಕ್ಕೆ ಬಂದಿತು. ಪ್ಯಾರಿಸ್ ನಲ್ಲಿ ನಡೆದ ಶೃಂಗಸಭೆಯಲ್ಲಿ ಯುನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿ) ಮೂಲಕ ವಿಶ್ವ ಕ್ಯಾನ್ಸರ್​ ದಿನ ಆಚರಣೆಯನ್ನು ಜಾರಿಗೆ ತರಲಾಯಿತು. ಈ ದಿನದ ಆಚರಣೆ ರೋಗದ ಬಗ್ಗೆ ಜಾಗೃತಿ ಮೂಡಿಸಿ, ಅದನ್ನು ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ, ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶವನ್ನು ಹೊಂದಿದೆ.

ಇದನ್ನೂ ಓದಿ: World Leprosy Day 2026: ಜನವರಿ 30 ರಂದೇ ವಿಶ್ವ ಕುಷ್ಠ ರೋಗ ದಿನವನ್ನು ಆಚರಿಸುವುದು ಏಕೆ?

ಕ್ಯಾನ್ಸರ್ ರೋಗಕ್ಕೆ ಈ ಅಂಶಗಳು ಕಾರಣವಾಗಬಹುದು:

ಮಹಾಮಾರಿ ಕ್ಯಾನ್ಸರ್ ರೋಗ ಬರಲು ಇಂತಹದ್ದೆ ನಿರ್ದಿಷ್ಟವಾದ ಕಾರಣವಿಲ್ಲವಾದರೂ ಕೂಡ ಬದಲಾಗುತ್ತಿರುವ ನಮ್ಮ ಜೀವನಶೈಲಿ, ಆಹಾರ ಪದ್ಧತಿ ಇದಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ತಂಬಾಕಿನ ಸೇವನೆ, ಧೂಮಪಾನ, ಮದ್ಯಪಾನ, ಆಹಾರಪದ್ಧತಿ, ಎ ಹಾಗೂ ಸಿ ವಿಟಮಿನ್‌ ಕೊರತೆ, ಹಾರ್ಮೋನು ಅಸಮತೋಲನ ರಾಸಾಯನಿಕ ಸೌಂದರ್ಯ ವರ್ಧಕಗಳ ಅತಿಯಾದ ಬಳಕೆ, ಇದೆಲ್ಲದರ ಜೊತೆಗೆ ಅನುವಂಶಿಕವಾಗಿ ಕ್ಯಾನ್ಸರ್ ರೋಗ ಬರುವ ಸಾಧ್ಯತೆಯೂ ಹೆಚ್ಚು ಎನ್ನಲಾಗುತ್ತದೆ. ಆದರೆ ಪ್ರಾರಂಭದಲ್ಲಿ ಕ್ಯಾನ್ಸರ್ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಿ, ಸರಿಯಾದ ಚಿಕಿತ್ಸೆ ನೀಡಿದರೆ ಮಹಾಮಾರಿ ರೋಗದಿಂದ ಸ್ವಲ್ಪ ಮಟ್ಟಿಗೆ ಪಾರಾಗಬಹುದು. ಹಾಗಾಗಿ ಇವುಗಳ ಬಗ್ಗೆ ತಿಳಿದು, ಆರಂಭದಲ್ಲಿಯೇ ಲಕ್ಷಣಗಳನ್ನು ಪತ್ತೆ ಮಾಡಿ ಇದರಿಂದ ಪಾರಾಗುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:32 pm, Tue, 3 February 26

Source link

Madikeri: ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ! – Kannada News | Illegal Tree Felling in Madikeri: Doctor Accused of Destroying Two Acres for Resort

ಮಡಿಕೇರಿ, ಫೆಬ್ರವರಿ 03: ಕೊಡಗು ಜಿಲ್ಲೆಯಲ್ಲಿ ಮರಗಳ ಮಾರಣಹೋಮ ಮುಂದುವರಿದಿದ್ದು, ರೆಸಾರ್ಟ್​ಗಾಗಿ 2 ಎಕರೆಯಲ್ಲಿದ್ದ ಮರಗಳನ್ನು ವೈದ್ಯರೋರ್ವರು ಕಡಿಸಿರುವ ಆರೋಪ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿ ಕೇಳಿಬಂದಿದೆ. ವೈದ್ಯ ಶ್ಯಾಮ್​ ಅಪ್ಪಣ್ಣ ಎಂಬವರು ತಾವು ಖರೀದಿಸಿದ್ದ ಎರಡು ಎಕರೆ ಭೂಮಿಯಲ್ಲಿದ್ದ ಮರಗಳನ್ನು ಅರಣ್ಯ, ಕಂದಾಯ ಇಲಾಖೆ ಅನುಮತಿ ಪಡೆಯದೆ ಕಟಾವು ಮಾಡಿಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ವೈದ್ಯ ಶ್ಯಾಮ್​ ಅಪ್ಪಣ್ಣ, ಸಹಕರಿಸಿದ ವಿನಯ್, ಸಂದೀಪ್ ಪುಣೆ ಎಂಬುವರ ಮೇಲೂ ಅರಣ್ಯ ಇಲಾಖೆ FIR​ ದಾಖಲಿಸಿದೆ. ಆದರೆ ಎಫ್​ಐಆರ್​ನಲ್ಲಿ 14 ಮರಗಳು ಮಾತ್ರ ನಾಶ ಎಂದು ಉಲ್ಲೇಖಿಸಲಾಗಿದ್ದು, ಎರಡು ಎಕರೆಯಲ್ಲಿ 50ಕ್ಕೂ ಅಧಿಕ‌ ಮರಗಳು ನಾಶವಾಗಿರುವ ಶಂಕೆ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Kolar: ಚೀಟಿ ಹೆಸರಲ್ಲಿ 4 ಕೋಟಿ ಮಕ್ಮಲ್​​ ಟೋಪಿ; ಕಣ್ಣೀರು ಹಾಕಿದ ಸಂತ್ರಸ್ತರು – Kannada News | 4 Crore Chit Fund Fraud Rocks Shanti Nagar in Kolar City

ಕೋಲಾರ, ಫೆಬ್ರವರಿ 03: ಪಟಾಕಿ ಚೀಟಿ, ಯುಗಾದಿ ಚೀಟಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿರುವ ಆರೋಪ ಕೋಲಾರದ ಶಾಂತಿ ನಗರದಲ್ಲಿ ಕೇಳಿಬಂದಿದೆ. ವೆಂಕಟೇಶಪ್ಪ, ಗೌರಮ್ಮ ಹಾಗೂ ಪದ್ಮಾವತಿ ವಿರುದ್ಧ ದೂರು ಕೇಳಿಬಂದಿದ್ದು, ಕಳೆದ ಒಂದು ವರ್ಷದಿಂದ ಚೀಟಿ ಹಾಕಿದ್ದ ಜನರು ಕಂಗಾಲಾಗಿದ್ದಾರೆ. ಕೋಲಾರದ ಕಾರಂಜಿಕಟ್ಟೆಯ 500ಕ್ಕೂ ಹೆಚ್ಚು ನಿವಾಸಿಗಳಿಗೆ ಸುಮಾರು 4 ಕೋಟಿ ರೂಪಾಯಿಗಳಷ್ಟು ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಶಾಂತಿನಗರ ಒಂದರಲ್ಲೇ 94,52,000 ವಂಚನೆ ಮಾಡಲಾಗಿದೆ ಎಂದು ಹೇಳಲಾಗಿದೆ. ದೀಪಾವಳಿ, ಯುಗಾದಿ, ವರಮಹಾಲಕ್ಷ್ಮೀ ಹಬ್ಬದ ಹೆಸರಿನಲ್ಲಿ ಆರೋಪಿಗಳು ಚೀಟಿ ವ್ಯವಹಾರ ನಡೆಸಿದ್ದರು ಎನ್ನಲಾಗಿದ್ದು, ಕೋಲಾರ ನಗರ ಠಾಣೆ ಮುಂದೆ ಹಣ ಕಳೆದುಕೊಂಡವರು ಕಣ್ಣೀರು ಹಾಕಿದ್ದಾರೆ. ಪ್ರಕರಣ ಸಂಬಂಧ ಸದ್ಯ ವೆಂಕಟೇಶಪ್ಪನನ್ನು ವಶಕ್ಕೆ ಪಡೆದಿರುವ ಕೋಲಾರ ಠಾಣೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯಶ್ ತಾಯಿ ಮಾಡಿದ ಆರೋಪ ತಳ್ಳಿಹಾಕಿದ ಪಿಡಿಒ ನಟರಾಜ್; ವಿಡಿಯೋ ನೋಡಿ.. – Kannada News | PDO Nataraj refutes allegations made by Yash mother Pushpa Arun Kumar

ನಿವೇಶನವೊಂದಕ್ಕೆ ಸಂಬಂಧಪಟ್ಟಂತೆ ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರು ಪಿಡಿಒ ನಟರಾಜ್ ವಿರುದ್ಧ ಗುಡುಗಿದ್ದರು. ನಟರಾಜ್ ಮೇಲೆ ಕೆಲವು ಆರೋಪಗಳನ್ನು ಅವರು ಹೊರಿಸಿದ್ದರು. ಆ ಬಗ್ಗೆ ಸ್ವತಃ ನಟರಾಜ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ‘ಪುಷ್ಪಾ ಅವರು ಈ ರೀತಿ ಮಾತನಾಡಿರುವುದು ಸರಿಯಲ್ಲ. ನನ್ನ ಹೆಸರು ಹೇಳುವುದರಿಂದ ಅವರು ಸಮಾಜದಲ್ಲಿ ಅಧಃಪಥನಕ್ಕೆ ಇಳಿಯುತ್ತಿದ್ದಾರೆ. ಮನಸ್ಥಿತಿ ಹಾಳುಮಾಡಿಕೊಳ್ಳುತ್ತಿದ್ದಾರೆ. ಅದರಿಂದ ನನಗೆ ಬೇಜಾರು ಇಲ್ಲ. ನನ್ನಿಂದ ತಪ್ಪಾಗಿದ್ದರೆ ಅದನ್ನು ಸಂಬಂಧಪಟ್ಟವರಿಗೆ ನೀಡಲಿ’ ಎಂದು ಪಿಡಿಓ ನಟರಾಜ್ (PDO Nataraj) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ವಾಮೀಜಿ ಮಾತ್ರವಲ್ಲ ಹುಡುಗರ ಜೊತೆ ಪತ್ನಿ ಸಂಪರ್ಕ: ಹೆಂಡ್ತಿಯ ಮತ್ತಷ್ಟು ನವರಂಗಿ ಆಟ ಬಿಚ್ಚಿಟ್ಟ ಪತಿ – Kannada News | Not Only kamalakar bhat guruji, She Contact With Some Boys: Says Suchitra Husband Mahesh

ಕಾರವಾರ, (ಫೆಬ್ರವರಿ 03): ಕಮಲಾಕರ ಭಟ್ ಗುರೂಜಿ (kamalakar bhat guruji) ಹಾಗೂ ಸುಚಿತ್ರಾಳ ಅನೈತಿಕ ಸಂಬಂಧ ವಿಚಾರವಾಗಿ ನಡೆದ ಗಲಾಟೆ ಓರ್ವ ಸಾವಿನಲ್ಲಿ ಅಂತ್ಯವಾಗಿದೆ. ಗುರೂಜಿ ಜೊತೆ ಸುಚಿತ್ರಾ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ದೂರು ನೀಡಿದ್ದಕ್ಕೆ ಉತ್ತರ ಕನ್ನಡದ (Uttara Kannada) ಸಿದ್ಧಾಪುರದಲ್ಲಿ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಸುಚಿತ್ರಾಳ ಪತಿ ಮಹೇಶ್​​ನ ಸಹೋದರ ವಸಂತ್ ನಾಯ್ಕ ಮೃತಪಟ್ಟಿದ್ದಾನೆ. ಇನ್ನು ಘಟನೆಯಲ್ಲಿ ಸುಚಿತ್ರಾ ಪತಿ ಮಹೇಶ್​​ ಹಾಗೂ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಸಂಬಂಧ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಹಲ್ಲೆಗೊಳಗಾದ ಮಹೇಶ್, ಅವಳು ಸ್ವಾಮೀಜಿ ಜೊತೆ ಮಾತ್ರವಲ್ಲ ಇತರೆ ಹುಡುಗರ ಜೊತೆ ಸಂಪರ್ಕ ಹೊಂದಿದ್ದಳು. ಅವಳೇ ರೌಡಿಗಳಿಂದ ನಮ್ಮ ಮೇಲೆ ದಾಳಿ ಮಾಡಿಸಿದ್ದಾಳೆಂದು ಸುಚಿತ್ರಾಳ ಮತ್ತಷ್ಟು ನವರಂಗಿ ಆಟ ಬಿಚ್ಚಿಟ್ಟಿದ್ದಾರೆ.

ಹುಡುಗರ ಜೊತೆ ಪತ್ನಿ ಸಂಪರ್ಕ

ಇನ್ನು ಹಲ್ಲೆಗೊಳಗಾದ ಮಹೇಶ್ ಟಿವಿ9 ಜತೆ ಮಾತನಾಡಿದ್ದು, ಮದುವೆ ಆಗಿ 15 ವರ್ಷ ಆಗಿದೆ. ನಾನು ಬೆಂಗಳೂರಿನಲ್ಲಿ ಹೊಟೇಲ್ ಕೆಲಸ ಮಾಡುತ್ತಿದ್ದು, ಎರಡು ಮೂರು ತಿಂಗಳಿಗೆ ಒಮ್ಮೆ ಊರಿಗೆ ಬಂದು ಹೋಗುತ್ತಿದ್ದೆ. ಇತ್ತ ಪತ್ನಿ (ಸುಚಿತ್ರಾ) ಫೇಸ್ ಬುಕ್ ನಲ್ಲಿ ಹುಡುಗರ ಜೊತೆ ಪತ್ನಿ ಸಂಪರ್ಕ ಹೊಂದಿದ್ದಳು. ದೀಪು ಎನ್ನುವನ ಜೊತೆ ಸಂಪರ್ಕ ಹೊಂದಿರುವ ವಿಷಯ ನನಗೆ ಗೊತ್ತಾಯಿತು. ಬಳಿಕ ಈ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ಅವಳು ಜಗಳ ಮಾಡಿದ್ದಳು. ಆಗ ಅದರ ನಾಯಿ ಬುದ್ದಿ ಬೇಡ ಅಂತ ಸುಮ್ಮನಾದೆ ಎಂದು ಹೆಂಡ್ತಿ ಸುಚಿತ್ರಾಳ ಕಳ್ಳಾಟವನ್ನು ಬಿಚ್ಚಿಟ್ಟರು.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ: ದೂರು ನೀಡಿದ್ದಕ್ಕೆ ಹಲ್ಲೆ; ಓರ್ವ ಸಾವು

ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಮಹೇಶ್


ಕಳೆದ ಐದು ತಿಂಗಳ ಹಿಂದೆ ನನ್ನ ಎರಡು ಹೆಣ್ಣು ಮಕ್ಕಳನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ
ಜ್ಯೋತಿಷಿ ಜೊತೆ ಸೆಟ್ಲ್ ಆಗಿದ್ದಾಳೆ. ಆತನ ಜೊತೆ ಇದ್ದು ಐದು ತಿಂಗಳು ಆಗಿದೆ. ಆದ್ರೆ, ಮಗಳು ನನಗೆ ಮೆಸೇಜ್ ಹಾಕಿ ತಾಯಿ ಬಗ್ಗೆ ದೂರು ಹೇಳಿದ್ದಳು.ನಾನು ತಾಯಿ ಜೊತೆ ಇರುವುದಿಲ್ಲ ಬಂದು ಕರೆದುಕೊಂಡು ಹೋಗು ಅಂತಾ ಹೇಳಿದ್ದಳು. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಆಗ ವಾಪಸ್ ಊರಿಗೆ ಬಾ ಅಂತಾ ಮಗಳಿಗೆ ಹೇಳಿದ್ದೆ. ಮಗಳು ಸಿದ್ದಾಪುರ ಠಾಣೆಗೆ ಬಂದು ತಾಯಿ ವಿರುದ್ದ ದೂರು ನೀಡಿದ್ದಾಳೆ. ಬಳಿಕ ರಾತ್ರಿ ಪತ್ನಿ ಐವರು ಯುವಕರನ್ನು ಕರೆದುಕೊಂಡು ಬಂದು ನನ್ನ ಮತ್ತು ಅಣ್ಣ ಹಾಗೂ ಸ್ನೇಹಿತನ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದು, ಘಟನೆಯಲ್ಲಿ ಅಣ್ಣ ಮೃತಪಟ್ಟಿದ್ದಾನೆ. ನನಗೂ ಗಂಭೀರ ಗಾಯ ಆಗಿದ್ದು, ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವೆ. ಇನ್ನು ಸ್ನೇಹಿತನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಿವಿ ಬಳಿಕ ಚಿತ್ರಮಂದಿರಕ್ಕೆ ಬರಲಿರುವ ಹಾವು – Kannada News | Ektaa Kapoor planning to make movie on Nagin character

ಒಂದು ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ ಸಿನಿಮಾ (Cinema) ವೀಕ್ಷಕರ ಸಂಖ್ಯೆಗಿಂತಲೂ ಧಾರಾವಾಹಿ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಟಿವಿ ಧಾರಾವಾಹಿಗಳು ಸಿನಿಮಾಗಳಿಗಿಂತಲೂ ಹೆಚ್ಚು ಹಣ ಗಳಿಸುತ್ತವೆ ಎನ್ನಲಾಗುತ್ತದೆ. ಆದರೆ ಭಾರತದ ಧಾರವಾಹಿಗಳು ಅತ್ಯಂತ ಕಳಪೆ ಗುಣಮಟ್ಟವನ್ನು ಹೊಂದಿವೆ. ಕ್ಲೀಷೆ ಕತೆಗಳು, ತೀರ ಕಳಪೆ ಮಟ್ಟದ ಚಿತ್ರಕತೆ, ಕಳಪೆ ನಿರ್ಮಾಣ ಮತ್ತು ಪ್ರೊಡಕ್ಷನ್ ಕ್ವಾಲಿಟಿಯನ್ನು ಒಳಗೊಂಡಿರುತ್ತವೆ. ಹಾಗಿದ್ದರೂ ಸಹ ಹಲವಾರು ಧಾರಾವಾಹಿಗಳು ವರ್ಷಾನುಗಟ್ಟಲೆ ಪ್ರದರ್ಶನ ಕಂಡಿವೆ. ಅಂಥಹ ಧಾರಾವಾಹಿಗಳಲ್ಲಿ ‘ನಾಗಿನ್’ ಸಹ ಒಂದು.

ಟಿವಿ ಕ್ವೀನ್ ಎಂದೇ ಕರೆಯಲಾಗುವ ಏಕ್ತಾ ಕಪೂರ್ ನಾಗಿನ್ ಧಾರವಾಹಿಯ ನಿರ್ಮಾಪಕಿ ಆಗಿದ್ದು ಹಿಂದಿಯಲ್ಲಿ ನಾಗಿನ್ ಧಾರಾವಾಹಿ ಏಳು ಸೀಸನ್​ ಪೂರೈಸಿದೆ. ಹಿಂದಿಯ ‘ನಾಗಿನ್’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿದೆ. ಇದೀಗ ಏಕ್ತಾ ಕಪೂರ್, ಧಾರಾವಾಹಿ ಆಗಿದ್ದ ‘ನಾಗಿನ್’ ಅನ್ನು ಸಿನಿಮಾ ರೂಪಕ್ಕೆ ತರಲು ಸಜ್ಜಾಗಿದ್ದಾರೆ. ನಾಗಿನ್​​ಗೆ ಸಿನಿಮಾ ರೂಪ ನೀಡಲು ಏಕ್ತಾ ಸಜ್ಜಾಗಿದ್ದು, ಈ ಬಗ್ಗೆ ಚರ್ಚೆಗಳು ಚಾಲ್ತಿಯಲ್ಲಿವೆ ಎನ್ನಲಾಗುತ್ತಿದೆ.

‘ನಾಗಿನ್’ ಪಾತ್ರವನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾ ನಿರ್ಮಾಣ ಮಾಡಲು ಏಕ್ತಾ ಕಪೂರ್ ಮುಂದಾಗಿದ್ದಾರೆ. ಧಾರಾವಾಹಿಯಲ್ಲಿ ತೋರಿಸಿದ ಕತೆಗಿಂತಲೂ ಭಿನ್ನವಾದ ಕತೆಯನ್ನು ‘ನಾಗಿನ್’ ಸಿನಿಮಾನಲ್ಲಿ ತೋರಿಸುವ ಉದ್ದೇಶವನ್ನು ಏಕ್ತಾ ಹೊಂದಿದ್ದಾರೆ. ಸಿನಿಮಾಕ್ಕೆ ‘ನಾಗಿನ್: ದಿ ಎಪಿಕ್ ಟೇಲ್ ಆಫ್ ಲವ್ ಆಂಡ್ ಸ್ಯಾಕ್ರಿಫೈಸ್’ ಎಂದು ಹೆಸರಿಡಲಾಗಿದೆಯಂತೆ. ಸಿನಿಮಾನಲ್ಲಿ ನಾಗಿನ್ ಪಾತ್ರದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸಲಿದ್ದಾರೆ. ಇದೇ ಏಪ್ರಿಲ್​​ನಿಂದ ಸಿನಿಮಾದ ಚಿತ್ರೀಕರಣ ಶುರು ಆಗಲಿದ್ದು, ಸಿನಿಮಾದ ಹಲವು ಭಾಗಗಳು ಸಹ ಮುಂದಿನ ವರ್ಷಗಳಲ್ಲಿ ಬರಲಿದೆ.

ಇದನ್ನೂ ಓದಿ:ಮುರಿದು ಬಿತ್ತು ‘ರಾಧಾ ರಮಣ’ ಧಾರಾವಾಹಿ ನಟಿ ಅನುಷಾ ಹೆಗಡೆ ದಾಂಪತ್ಯ

ಧಾರಾವಾಹಿಯಲ್ಲಿ ಬಹಳ ಯಶಸ್ವಿ ಆದ ಪಾತ್ರಗಳನ್ನು ಇರಿಸಿಕೊಂಡು ಸಿನಿಮಾ ಮಾಡುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಭಾರಿ ಜನಪ್ರಿಯ ಆಗಿದ್ದ ‘ಶಕ್ತಿಮಾನ್’ ಧಾರಾವಾಹಿಯನ್ನು ಸಿನಿಮಾ ಮಾಡುವ ಚರ್ಚೆ ಬಾಲಿವುಡ್​​ನಲ್ಲಿ ಆಗಿತ್ತು. ಆದರೆ ಆ ಚರ್ಚೆ ಮುಂದುವರೆಯಲಿಲ್ಲ. ಧಾರಾವಾಹಿಗಳಾಗಿದ್ದ ‘ಮಹಾಭಾರತ’, ‘ರಾಮಾಯಣ’ಗಳನ್ನು ಈಗಾಗಲೇ ಸಿನಿಮಾ ಮಾಡಲಾಗಿದೆ. ಇದೀಗ ‘ನಾಗಿನ್’ ಧಾರಾವಾಹಿಯನ್ನು ಸಿನಿಮಾ ಮಾಡಲು ಯೋಜನೆ ಸಿದ್ಧವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಂಎಸ್​ಎಂಇಗಳನ್ನು ಬಲಪಡಿಸುವ ರವಿಚಂದ್ರರ IND Classifieds; ಇದು ಹೈಪರ್​ಲೋಕಲ್ ಪವರ್​ಹೌಸ್ – Kannada News | Building a hyperlocal powerhouse: Founder Ravi Chandra’s vision for IND Classifieds and MSMEs

ಬೆಂಗಳೂರು: ಭಾರತದ ಆನ್ಲೈನ್ ಪ್ರಪಂಚ ವೇಗವಾಗಿ ಬದಲಾಗುತ್ತಿರುವ ಸಂದರ್ಭದಲ್ಲೇ ಸ್ಥಳೀಯ ಅಂಗಡಿಗಳು, ಸಣ್ಣ ಉದ್ಯಮಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಷ್ಟಪಡುತ್ತಿವೆ. ಗ್ರಾಹಕರನ್ನು ಆಕರ್ಷಿಸಲು, ತಂತ್ರಜ್ಞಾನ ವೆಚ್ಚ ನಿಭಾಯಿಸಲು ಪರದಾಡುತ್ತಿವೆ. ಈ ಸಂದರ್ಭದಲ್ಲಿ ಆನ್​ಲೈನ್ ಪ್ರಪಂಚದ ವಿಸ್ತಾರದ ಮಧ್ಯೆ ಸ್ಥಳೀಯ ಬ್ಯುಸಿನೆಸ್​ಗಳು ಎದ್ದು ಕಾಣುವ ರೀತಿಯಲ್ಲಿ ನೆರವಾಗುವಂತಹ ಕೆಲಸವನ್ನು ಮಾಡುತ್ತಿದೆ. ಇದರ ಸಂಸ್ಥಾಪಕರು ರವಿಚಂದ್ರ. ರವಿಚಂದ್ರ ಅವರು ಉದ್ದಿಮೆಗಾರಿಕೆಯ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಹೊಸ ದೃಷ್ಟಿಯಲ್ಲಿ ಯೋಚಿಸತೊಡಗಿದರು. ಅದರ ಪರಿಣಾಮವೇ IND Classifieds ಎನ್ನುವ ಪ್ಲಾಟ್​ಫಾರ್ಮ್ ರೂಪಿಸಿದ್ದು. ಜನರಿಗೆ ಆನ್​ಲೈನ್​ನಲ್ಲಿ ಏನು ಬೇಕೋ ಅದನ್ನು ಹುಡುಕುವ ವಿಧಾನದಲ್ಲಿ ಬದಲಾವಣೆ ತಂದರು. ದೊಡ್ಡ ಮಟ್ಟದಲ್ಲಿ ಅದನ್ನು ಆರಂಭಿಸುವ ಬದಲು ನೈಜ ಅನುಭವಗಳ ಆಧಾರದ ಮೇಲೆ ಪ್ಲಾಟ್​ಫಾರ್ಮ್ ಕಟ್ಟತೊಡಗಿದರು.

ದೊಡ್ಡ ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ಗಮನ ಸೆಳೆಯುತ್ತವೆ. ಆದರೆ ಅವುಗಳೊಂದಿಗೆ ಜೋಡಿತವಾಗಲು ಹಣ, ಕೌಶಲ್ಯ ಮತ್ತು ಸಮಯ ಬೇಕು. ಸಣ್ಣ ಬ್ಯುಸಿನೆಸ್​ಗಳಿಗೆ ಇದು ಕಷ್ಟ. ಇದನ್ನು ಗಮನಿಸಿದ ರವಿಚಂದ್ರ ಅವರಿಗೆ ಒಂದು ಸರಳ ವಿಧಾನದ ಅಗತ್ಯ ಬೇಕು ಎನಿಸಿತು. ಬಹಳ ಕಡಿಮೆ ವೆಚ್ಚದ, ಸುಲಭ ಬಳಕೆ ಸಾಧ್ಯವಾಗುವಂತಹ ಮತ್ತು ಸ್ಥಳೀಯತೆಯನ್ನು ತೋರುವಂತಹ ಪ್ಲಾಟ್​ಫಾರ್ಮ್ ನಿರ್ಮಾಣಕ್ಕೆ ಇದು ಎಡೆ ಮಾಡಿಕೊಟ್ಟಿತು. ಇಲ್ಲಿ ಜನರು ತಾವು ಮಾರಾಟ ಮಾಡಲಿರುವ ಉತ್ಪನ್ನಗಳನ್ನು ಪೋಸ್ಟ್ ಮಾಡಬಹುದು. ಸಮೀಪದ ಗ್ರಾಹಕರಿಗೆ ಮಾತ್ರವೇ ಇದು ಕಾಣಿಸುತ್ತದೆ. ಬೇಡವಾಗಿರುವ ಇತರ ಪ್ರದೇಶಗಳಲ್ಲಿನ ಜನರಿಗೆ ಈ ಉತ್ಪನ್ನ ಕಾಣುವ ಬದಲು, ಸ್ಥಳೀಯ ಗ್ರಾಹಕರಿಗೆ ಮಾತ್ರವೇ ಗೋಚರಿಸುವಂತೆ ಮಾಡುವುದು ಇವರ ಪ್ಲಾಟ್​ಫಾರ್ಮ್​ನವಿಶೇಷತೆಯಾಗಿದೆ. ಇದರಿಂದ ಅನವಶ್ಯಕ ಸದ್ದು ತಪ್ಪುತ್ತದೆ. ಅವಶ್ಯಕತೆ ಇದ್ದವರಿಗೆ ಮಾತ್ರ ತಲುಪುತ್ತದೆ. ಹೀಗಾಗಿ, ಅಂಗಡಿ ಅಥವಾ ಬ್ಯುಸಿನೆಸ್ ಅನ್ನು ಗ್ರಾಹಕರು ಸಂಪರ್ಕಿಸುವ ಸಾಧ್ಯತೆ ಹೆಚ್ಚಿರುತ್ತದೆ. ದೂರ ಎನ್ನುವುದು ಸೂಕ್ತವಾಗಿದ್ದಾಗ, ವಿಶ್ವಾಸ ಸುಲಭವಾಗಿ ಬೆಳೆಯುತ್ತದೆ, ಫಲಿತಾಂಶ ವೇಗವಾಗಿ ಸಿಕ್ಕುತ್ತದೆ.

ಈ IND Classifieds ಪ್ಲಾಟ್​ಫಾರ್ಮ್​ನ ವಿಶೇಷತೆ ಇರುವುದು, ಎಂಎಸ್​ಎಂಇಗಳ ಮೇಲಿನ ಅದರ ಗಮನದಿಂದಾಗಿ. ಸಣ್ಣ ಬ್ಯುಸಿನೆಸ್ ಮಾಲೀಕರಿಗೆ ಹೊಸ ಬ್ಯುಸಿನೆಸ್ ಆರಂಭಿಸುವುದು ಸವಾಲಿನ ಕೆಲಸವಾಗಿರುತ್ತದೆ. ಜಾಹೀರಾತು ವೆಚ್ಚ, ತಾಂತ್ರಿಕ ಜ್ಞಾನದ ಕೊರತೆಯು ಹಿನ್ನಡೆ ಎನಿಸುತ್ತದೆ. IND Classifieds ನಲ್ಲಿ ಸರಳವಾದ ನೊಂದಣಿ ಪ್ರಕ್ರಿಯೆ ಇರುತ್ತದೆ. ದೊಡ್ಡ ಪ್ಲಾಟ್​ಫಾರ್ಮ್​ಗಳಿಗೆ ನೀಡಲಾಗುವಂತೆ ಇದು ಹೆಚ್ಚು ಹಣದ ಹೊರೆ ಹೊರಿಸುವುದಿಲ್ಲ. ತಂತ್ರಜ್ಞಾನ ಬಳಕೆಯಲ್ಲಿ ಅನುಭವ ಇಲ್ಲದವರೂ ಕೂಡ ಸುಲಭವಾಗಿ ಮತ್ತು ವೇಗವಾಗಿ ಆನ್​ಲೈನ್ ಉಪಸ್ಥಿತಿ ಪಡೆಯಬಹುದು. ಹೆಚ್ಚು ಖರ್ಚು ಮಾಡದೆಯೇ ಗ್ರಾಹಕರನ್ನು ಸೆಳೆಯಬಹುದು. ರವಿಚಂದ್ರ ಅವರಿಗೆ ಕ್ಲಾಸಿಫೈಡ್ ಸೈಟ್ ಆರಂಭಿಸುವ ಉದ್ದೇಶ ಮಾತ್ರವೇ ಅಲ್ಲ, ಸಣ್ಣ ಬ್ಯುಸಿನೆಸ್​ಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಶಕ್ತಿ ತುಂಬುವುದು ಧ್ಯೇಯವಾಗಿತ್ತು. ತಮ್ಮ ಪ್ಲಾಟ್​ಫಾರ್ಮ್​ಗೆ ಲಾಭದ ಗುರಿ ಇಟ್ಟುಕೊಳ್ಳದೆ ಅವರು ಸ್ಥಳೀಯ ಉದ್ದಿಮೆದಾರರ ವಿಶ್ವಾಸ ಗಳಿಸುವುದಕ್ಕೆ ಆದ್ಯತೆ ಕೊಟ್ಟರು. ಇಲ್ಲಿ ಬದಲಾವಣೆ ಬಹಳ ನಿಧಾನವಾಗಿ ಬರುತ್ತದೆ. ಬಳಸಿದವರು ತೃಪ್ತರಾಗಿ, ಕ್ರಮೇಣವಾಗಿ ಪ್ಲಾಟ್​ಫಾರ್ಮ್ ವಿಶ್ವಾಸಾರ್ಹತೆ ಹೆಚ್ಚಾಗುತ್ತಾ ಹೋಗುತ್ತದೆ. ಇವತ್ತು IND Classifieds ಎಂಬುದು ಒಂದು ಡೈರೆಕ್ಟರಿ ಮಾತ್ರವೇ ಆಗಿ ಉಳಿದಿಲ್ಲ, ಸಣ್ಣ ಉದ್ದಿಮೆಗಳನ್ನು ನೇರವಾಗಿ ಬೆಂಬಲಿಸುವ ಪ್ಲಾಟ್​ಫಾರ್ಮ್ ಆಗಿದೆ.

ಭಾರತದಲ್ಲಿ ಹೆಚ್ಚೆಚ್ಚು ಜನರು ಮೊಬೈಲ್ ಮತ್ತು ಆನ್ಲೈನ್ ಸಾಧನಗಳನ್ನು ಬಳಸುವುದು ಹೆಚ್ಚಾದಂತೆ ಸ್ಥಳೀಯ ಮಾರುಕಟ್ಟೆಗಳ ಪ್ಲಾಟ್​ಫಾರ್ಮ್​ಗಳ ಪ್ರಾಮುಖ್ಯತೆ ಹೆಚ್ಚುತ್ತಿದೆ. IND Classifieds ಸೂಕ್ತ ಎನಿಸುವುದು ಇಲ್ಲೆ. ಸಣ್ಣ ಅಂಗಡಿಗಳು ತಮ್ಮ ಸಾಯುದಾಯಿಕ ಬೇರುಗಳನ್ನು ಒಳಗೊಂಡೇ ಅವರನ್ನು ಡಿಜಿಟಲ್ ಪ್ರಪಂಚಕ್ಕೆ ತರುವ ಕೆಲಸ ಮಾಡುತ್ತದೆ IND Classifieds. ಹೆಲ್ತ್​ಕೇರ್, ಆಹಾರ, ಶಾಪಿಂಗ್, ಕೌಶಲ್ಯದ ಕೆಲಸ ಇತ್ಯಾದಿ ಬಹಳಷ್ಟು ಕೆಟಗರಿಗಳನ್ನು ಈ ಪ್ಲಾಟ್​ಫಾರ್ಮ್​ನಲ್ಲಿ ನೋಡಬಹುದು.

ಮುಂದಿನ ದಿನಗಳಲ್ಲಿ, IND Classifieds ಬಲಿಷ್ಠ ತಂತ್ರಜ್ಞಾನ ವ್ಯವಸ್ಥೆಗಳು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತೃತ ಹಾಜರಾತಿ, ಹಾಗೆಯೇ ಸಣ್ಣ ತಯಾರಕರು ಮತ್ತು ಅಂಗಡಿಗಳಿಗೆ ಇನ್ನಷ್ಟು ಆಳವಾದ ಸ್ಥಳೀಯ ಗಮನವನ್ನು ಉದ್ದೇಶಿಸಿದೆ. ಬೆಳವಣಿಗೆ ಇದ್ದರೂ, ಮನೆಮಾತಾಗಿರುವ ಉದ್ಯಮಿಗಳಿಗೆ ಸುಲಭ ಪ್ರವೇಶ ಎಂಬ ಮೂಲತತ್ತ್ವವನ್ನು ಕಳೆದುಕೊಳ್ಳದೇ ಮುಂದುವರಿಯುವುದು ಇದರ ಗುರಿ. ಆನ್‌ಲೈನ್ ಮಾರುಕಟ್ಟೆಯಲ್ಲಿ ಹೊಸ ಆಟಗಾರರು ಬಂದರೂ, ಪ್ರತಿಯೊಂದು ಸಮುದಾಯದಲ್ಲಿಯೂ ಸ್ಪಷ್ಟ ಮತ್ತು ನೆಲೆಯೂರಿದ ಹಾಜರಾತಿ ಇದನ್ನು ವಿಭಿನ್ನವಾಗಿರಿಸುತ್ತದೆ.

ಸಣ್ಣ ಕನಸುಗಳಿಂದ ಆರಂಭವಾದ IND Classifieds, ಅನೇಕ ಭಾರತೀಯ ಉದ್ಯಮಿಗಳ ಆಶೆಯನ್ನು ಪ್ರತಿಧ್ವನಿಸುತ್ತದೆ — ಕಾಣಿಸಿಕೊಳ್ಳುವುದು, ಅವಕಾಶಗಳನ್ನು ಕಂಡುಕೊಳ್ಳುವುದು, ದೀರ್ಘಕಾಲ ಬಲವಾಗಿರುವುದು. ರವಿ ಚಂದ್ರ ಅವರ ನಾಯಕತ್ವದಲ್ಲಿ, ಈ ಸೇವೆ ನಿಧಾನವಾಗಿ ಸ್ಥಳೀಯ ಪ್ರಯತ್ನಗಳನ್ನು ಪ್ರಾದೇಶಿಕ ಶಕ್ತಿಯಾಗಿ ರೂಪಿಸುತ್ತಿದೆ; ಸಣ್ಣ ಮಾರಾಟಗಾರರು ಮತ್ತು ನಿರ್ಮಾತೃಗಳಿಗೆ ಆನ್‌ಲೈನ್ ಜೀವನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತಿದೆ. ನೆರೆಹೊರೆಯ ಉದ್ಯಮಗಳು ಡಿಜಿಟಲ್ ವಿಶ್ವಾಸ ಗಳಿಸಿದಾಗಲೇ ಒಂದು ದೇಶ ಹೇಗೆ ಸಮೃದ್ಧಿಯಾಗುತ್ತದೆ ಎಂಬುದಕ್ಕೆ ಇದು ಜೀವಂತ ಉದಾಹರಣೆ.

(ಗಮನಿಸಿ: ಇದು ಪ್ರಾಯೋಜಿತ ಸುದ್ದಿ)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link