ಕ್ರಿಸ್ಮಸ್ ದಿನವೇ ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ – Kannada News | US Conducts Targeted Strikes Against ISIS Positions in Nigeria
ನೈಜೀರಿಯಾ, ಡಿಸೆಂಬರ್ 26: ನೈಜೀರಿಯಾದಲ್ಲಿ ಕ್ರಿಶ್ಚಿಯನ್ನರನ್ನು ಕೊಲ್ಲುವುದನ್ನು ನಿಲ್ಲಿಸುವಂತೆ ಐಸಿಸ್ಗೆ ಎಚ್ಚರಿಕೆ ನೀಡಿರುವ ಟ್ರಂಪ್, ಕ್ರಿಸ್ಮಸ್ ಹಬ್ಬದ ದಿನವೇ ಐಸಿಸ್ ನೆಲೆಗಳ ಮೇಲೆ ಮಾರಕ ದಾಳಿ ನಡೆಸಿದ್ದಾರೆ. ನೈಜೀರಿಯಾ ಅಧಿಕಾರಿಗಳ ಕೋರಿಕೆಯ ಮೇರೆಗೆ ನಡೆಸಿದ ದಾಳಿಯಲ್ಲಿ ಹಲವು ಐಸಿಸ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆ ಹೇಳಿದೆ. ಕ್ರೈಸ್ತರ ಹತ್ಯೆಯನ್ನು ನಿಲ್ಲಿಸದಿದ್ದರೆ, ನರಕದಂಥಾ ಶಿಕ್ಷೆ ಇಲ್ಲೇ ಕಾಣುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ. ನಮ್ಮ ಸೇನೆಗೆ ದೇವರ ಆಶೀರ್ವಾದ ಸದಾ ಇರಲಿ, ಮೃತ ಭಯೋತ್ಪಾದಕರು ಸೇರಿದಂತೆ ಎಲ್ಲರಿಗೂ ಕ್ರಿಸ್ಮಸ್…