Category Archives: Blog

Your blog category

ಕ್ರಿಸ್ಮಸ್ ದಿನವೇ ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ – Kannada News | US Conducts Targeted Strikes Against ISIS Positions in Nigeria

ನೈಜೀರಿಯಾ, ಡಿಸೆಂಬರ್ 26: ನೈಜೀರಿಯಾದಲ್ಲಿ ಕ್ರಿಶ್ಚಿಯನ್ನರನ್ನು ಕೊಲ್ಲುವುದನ್ನು ನಿಲ್ಲಿಸುವಂತೆ ಐಸಿಸ್​ಗೆ ಎಚ್ಚರಿಕೆ ನೀಡಿರುವ ಟ್ರಂಪ್, ಕ್ರಿಸ್​ಮಸ್ ಹಬ್ಬದ ದಿನವೇ ಐಸಿಸ್ ನೆಲೆಗಳ ಮೇಲೆ ಮಾರಕ ದಾಳಿ ನಡೆಸಿದ್ದಾರೆ. ನೈಜೀರಿಯಾ ಅಧಿಕಾರಿಗಳ ಕೋರಿಕೆಯ ಮೇರೆಗೆ ನಡೆಸಿದ ದಾಳಿಯಲ್ಲಿ ಹಲವು ಐಸಿಸ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆ ಹೇಳಿದೆ. ಕ್ರೈಸ್ತರ ಹತ್ಯೆಯನ್ನು ನಿಲ್ಲಿಸದಿದ್ದರೆ, ನರಕದಂಥಾ ಶಿಕ್ಷೆ ಇಲ್ಲೇ ಕಾಣುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ. ನಮ್ಮ ಸೇನೆಗೆ ದೇವರ ಆಶೀರ್ವಾದ ಸದಾ ಇರಲಿ, ಮೃತ ಭಯೋತ್ಪಾದಕರು ಸೇರಿದಂತೆ ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು, ಕ್ರಿಶ್ಚಿಯನ್ನರ ಮೇಲಿನ ದಾಳಿ ಮುಂದುವರೆದರೆ, ಉಗ್ರರು ಇನ್ನೂ ಕೆಟ್ಟ ಸಾವನ್ನು ಕಾಣುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಕ್ಯಾಪ್ಟನ್ ಮಾಡಲು ಬಿಗ್ ಬಾಸ್​ನಿಂದಲೇ ಪ್ಲ್ಯಾನ್? ಸೂರಜ್ ಆರೋಪ – Kannada News | Bigg Boss Kannada: Will Gilli Finally Become Captain? Family Week Twist

ಬಿಗ್ ಬಾಸ್ (Bigg Boss) ಮನೆ ಕಳೆದ ಕೆಲವು ವಾರಗಳಿಂದ ಸ್ಪರ್ಧಿಳ ಕಲರವದಿಂದ ತುಂಬಿತ್ತು.ಈ ವಾರ ಫ್ಯಾಮಿಲಿ ವೀಕ್. ಹೀಗಾಗಿ, ಕುಟುಂಬದವರ ನಗು, ಖುಷಿ ಸ್ಪರ್ಧಿಗಳ ಸಂತೋಷ ಹೆಚ್ಚಿಸಿದೆ. ಹಲವು ವಾರಗಳಿಂದ ಗಿಲ್ಲಿ ಅವರು ಆಟ ಆಡುತ್ತಿದ್ದಾರೆ. ಅವರು ಕ್ಯಾಪ್ಟನ್ ಆಗಿಯೇ ಇಲ್ಲ. ಈ ವಾರ ಅವರಿಗೆ ಕ್ಯಾಪ್ಟನ್ ಆಗುವ ಚಾನ್ಸ್ ಸಿಗೋ ಸಾಧ್ಯತೆ ಇದೆ. ಎಲ್ಲರ ಮನೆಯವರು ಆಗಮಿಸಿ ಸ್ಪರ್ಧಿಗಳಿಗೆ ವಿಶ್ ಮಾಡುತ್ತಿದ್ದಾರೆ. ತಮ್ಮವರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಬಂದವರಲ್ಲಿ ಬಹುತೇಕರು ಗಿಲ್ಲಿಯೇ ಕ್ಯಾಪ್ಟನ್ ಆಗಲಿ ಎಂದು ಬಯಸುತ್ತಿದ್ದಾರೆ. ಈ ಬಗ್ಗೆ ಸೂರಜ್ ಪ್ರಶ್ನೆ ಎತ್ತಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ಅವರು ಅದ್ಭುತವಾಗಿ ಮನರಂಜನೆ ನೀಡುತ್ತಿದ್ದಾರೆ. ಕೆಲವೊಮ್ಮೆ ಅವರ ಮಾತು ಮಿತಿ ಮೀರಿದ ಉದಾಹರಣೆ ಇದೆ. ಆದರೆ, ಇತ್ತೀಚಿನ ವಾರಗಳಲ್ಲಿ ಅದು ಸಂಪೂರ್ಣವಾಗಿ ಬದಲಾಗಿದೆ. ಅವರು ತಮ್ಮನ್ನು ತಾವು ತಿದ್ದುಕೊಂಡಿದ್ದಾರೆ. ಗಿಲ್ಲಿ ಆಟವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಹೊರಗಿನಿಂದ ಬಂದವರಿಗೆ ಗಿಲ್ಲಿ ಆಟ ಇಷ್ಟ ಆಗುತ್ತಿದೆ.

ಎಲ್ಲಾ ಸದಸ್ಯರ ಕುಟುಂಬದವರಿಗೆ ಸ್ಪರ್ಧಿಗಳಿಗೆ ಗಿಲ್ಲಿಯೇ ಫೇವರಿಟ್. ಈ ವಿಷಯ ಸ್ಪಷ್ಟವಾಗಿ ಕಾಣುತ್ತಿದೆ. ಬಂದ ಎಲ್ಲರೂ ಗಿಲ್ಲಿಯನ್ನು ಹೊಗಳುತ್ತಿದ್ದಾರೆ. ಗಿಲ್ಲಿ ಕಾಮಿಡಿ ಇಷ್ಟ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಗಿಲ್ಲಿಯಲ್ಲಿ ಇಷ್ಟ ಆಗುವ ಗುಣ ಹೇಳುತ್ತಿದ್ದಾರೆ. ಗಿಲ್ಲಿ ಇಲ್ಲದೆ ಇದ್ದಿದ್ದರೆ ಇಡೀ ಮನೆ ಡಲ್ ಆಗುತ್ತಿತ್ತು ಎಂದು ಕೆಲವರು ನೇರವಾಗಿ ಹೇಳಿದ್ದು ಇದೆ. ಹೀಗಾಗಿ, ಕ್ಯಾಪ್ಟನ್ ಯಾರಾಗಬೇಕು ಎಂದು ಹೇಳಿದರೆ ಬಹುತೇಕರು ಗಿಲ್ಲಿ ಹೆಸರು ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂತು ಗಿಲ್ಲಿ ಕುಟುಂಬ; ಮಾಡಿದ ಕಂಪ್ಲೇಂಟ್ ಏನು?

ಈ ವಿಷಯದ ಬಗ್ಗೆ ಚರ್ಚೆ ನಡೆದಿದೆ. ರಘು ಹಾಗೂ ಸೂರಜ್ ಈ ಬಗ್ಗೆ ಮಾತನಾಡಿಕೊಂಡಿದ್ದಾರೆ.
‘ಗಿಲ್ಲಿ ಇವತ್ತು ಮಲಗೋದಿಲ್ಲ. ಈಗಾಗಲೇ ನಾಲ್ಕು ವೋಟ್ ಸಿಕ್ಕಿದೆ. ಅವನು ಗೇಮ್ ಆಡಿಯಂತೂ ಕ್ಯಾಪ್ಟ್ ಆಗಲ್ಲ, ಹೀಗಾದರೂ ಮಾಡೋಣ ಅಂತ’ ಎಂದರು ರಘು. ಆಗ ಸೂರಜ್ ಅವರು, ‘ಬಿಗ್ ಬಾಸ್​ ಪ್ಲ್ಯಾನ್ ಹಾಕಿದಾರೆ’ ಎಂದರು. ಇದು ಸರಿ ಅಲ್ಲ ಎಂದು ವೀಕ್ಷಕರು ಹೇಳಿದ್ದಾರೆ.ಈ ಮೊದಲು ವೋಟಿಂಗ್ ಮೂಲಕ ಧನುಷ್, ಕಾವ್ಯಾ ಕೂಡ ಕ್ಯಾಪ್ಟನ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಾತ್ರೆ, ಪೆಟ್ರೋಲ್ ಬಂಕ್ ಸೇರಿ ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್ – Kannada News | Vijayanagara Police Bust Fake Currency Gang Operating at Fairs and Petrol Bunks

ವಿಜಯನಗರ, ಡಿಸೆಂಬರ್ 26: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ, ಜಾತ್ರೆಗಳು, ಪೆಟ್ರೋಲ್ ಬಂಕ್​ಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೋಟಾ ನೋಟು ಚಲಾವಣೆ ಮಾಡುತ್ತಿದ್ದ ಗ್ಯಾಂಗ್‌ ಅನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಹಾಗೂ ಒಬ್ಬ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 500 ರೂಪಾಯಿ ಮುಖಬೆಲೆಯ ಒಟ್ಟು 40 ನಕಲಿ ನೋಟುಗಳು ಹಾಗೂ ಒಂದು ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರಸೀಕೆರೆಯ ದಂಡಿ ದುರ್ಗಮ್ಮನ ಜಾತ್ರೆಯಲ್ಲಿ ನೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು ಕಳೆದ ಹಲವು ದಿನಗಳಿಂದ ವಿವಿಧ ಜಾತ್ರೆಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಗ್ರಾಮೀಣ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಜಾತ್ರೆಗಳಲ್ಲಿನ ಜನಸಂದಣಿ ಹಾಗೂ ಚಿಲ್ಲರೆ ವ್ಯವಹಾರಗಳನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯ ನಡೆಸಲಾಗುತ್ತಿತ್ತು ಎನ್ನಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ; ರಾಜ್ಯದೆಲ್ಲೆಡೆ ಒಣಹವೆ – Kannada News | Bengaluru temperature: Cold with misty weather in Bengaluru, Dry weather elsewhere

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ

ಬೆಂಗಳೂರು, ಡಿಸೆಂಬರ್ 26: ರಾಜ್ಯದಲ್ಲಿ ಇಂದು ಹಲವೆಡೆ ಚಳಿಯ ವಾತಾವರಣವಿದ್ದು (Weather Forecast) , ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣವೂ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳಗಿನ ಸಮಯ ದಟ್ಟ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಮಂಜು

ಕಳೆದ ಕೆಲ ದಿನಗಳಿಂದ ರಾಜಧಾನಿಯ ವಾತಾವರಣದಲ್ಲಿ ಸಾಕಷ್ಟು ಏರು ಪೇರಾಗುತ್ತಿದ್ದು, ಚಳಿಯ ಪ್ರಮಾಣ ಹೆಚ್ಚುತ್ತಿದೆ. ಈ ಮಧ್ಯೆ ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.

ಎಲ್ಲೆಲ್ಲಿ ಒಣ ಹವೆ

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:29 am, Fri, 26 December 25

Source link

ಮಕ್ಕಳ ಜೊತೆ ಕ್ರಿಸ್​​​ಮಸ್ ಆಚರಿಸಿದ ರಾಧಿಕಾ ಪಂಡಿತ್; ಇಲ್ಲಿದೆ ಕ್ಯೂಟ್ ಫೋಟೋಸ್

Source link

Video: ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ, ಆಮೇಲೆ ನಡೆದಿದ್ದೇ ರೋಚಕ – Kannada News | Man Survives 10th Floor Fall After Leg Gets Caught in Building Grille

ಸೂರತ್, ಡಿಸೆಂಬರ್ 26: ವ್ಯಕ್ತಿಯೊಬ್ಬರು 10ನೇ ಮಹಡಿಯಲ್ಲಿರುವ ತಮ್ಮ ಫ್ಲ್ಯಾಟ್​ನಲ್ಲಿ ಮಲಗಿದ್ದರು. ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ಎರಡು ಮಹಡಿಗಳ ಕೆಳಗಿನ ಗ್ರಿಲ್​ಗಳ ನಡುವೆ ಸಿಲುಕಿದ್ದರು. 57 ವರ್ಷದ ನಿತಿನ್ ಭಾಯ್ ಆದಿಯಾ ಸೂರತ್‌ನ ಜಹಾಂಗೀರ್‌ಪುರದಲ್ಲಿರುವ ಟೈಮ್ಸ್ ಗ್ಯಾಲಕ್ಸಿ ಕಟ್ಟಡದಲ್ಲಿರುವ ತಮ್ಮ ಮನೆಯ ಕಿಟಕಿಯ ಬಳಿ ಮಲಗಿದ್ದಾಗ ಆಯತಪ್ಪಿ ಬಿದ್ದು, ಎಂಟನೇ ಮಹಡಿಯಲ್ಲಿ ಗ್ರಿಲ್‌ನಿಂದ ಆಯತಪ್ಪಿ ಬಿದ್ದಿದ್ದು, ಅವರ ಕಾಲು ಸಿಲುಕಿಕೊಂಡಿದೆ.

ನಂತರ ಒಂದು ಗಂಟೆಯ ಕಾಲ ಅಗ್ನಿಶಾಮಕ ದಳದ ಅಧಿಕಾರಿಗಳು ಹಗ್ಗಗಳು ಮತ್ತು ಸುರಕ್ಷತಾ ಬೆಲ್ಟ್‌ಗಳನ್ನು ಬಳಸಿಕೊಂಡು ನಿರಂತರ ಪ್ರಯತ್ನ ಪಟ್ಟು ಸುರಕ್ಷಿತವಾಗಿ ಅವರನ್ನು ಕೆಳಗಿಳಿಸಲಾಯಿತು. ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ, ವೀಡಿಯೊಗಳಲ್ಲಿ ಆದಿಯಾ ತಲೆಕೆಳಗಾಗಿ ನೇತಾಡುತ್ತಿರುವುದು ಕಂಡುಬಂದಿದ್ದು, ಅವರ ಕಾಲು ಮೇಲಿನಿಂದ ಗ್ರಿಲ್ ಬಾಕ್ಸ್‌ಗೆ ತೀವ್ರವಾಗಿ ಬಿಗಿದಂತಾಗಿರುವುದನ್ನು ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾಂಗ್ರೆಸ್ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ, ಸುಮ್ನೆ ಭಾಷಣ ಮಾಡಿ ಹೋಗಿಲ್ಲ: ಖರ್ಗೆ ನಿವಾಸದ ಎದುರೇ ಡಿಕೆಶಿ ಖಡಕ್ ಮಾತು – Kannada News | Karnataka Congress Power sharing issue: DK Shivakumar’s Strong Message Outside Mallikarjun Kharge’s Residence

ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದರು

ಬೆಂಗಳೂರು, ಡಿಸೆಂಬರ್ 26: ಕರ್ನಾಟಕ ರಾಜಕೀಯದಲ್ಲಿ, ವಿಶೇಷವಾಗಿ ಕಾಂಗ್ರೆಸ್ (Congress) ಪಕ್ಷದೊಳಗಿನ ನಾಯಕತ್ವ ಬದಲಾವಣೆ ವಿಚಾರ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಸ್ಥಳೀಯವಾಗಿ ಸೃಷ್ಟಿಯಾಗಿರುವ ಸಮಸ್ಯೆಯನ್ನು ಅಲ್ಲಿನವರೇ ಬಗೆಹರಿಸಿಕೊಳ್ಳಬೇಕು’ ಎಂದು ಹೇಳಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಬ್ಬರೂ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂಬ ಸಂದೇಶವಾಗಿಯೇ ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ರಾಹುಲ್ ಗಾಂಧಿಯವರೇ ಬಗೆಹರಿಸಬೇಕೆಂದು ಹೇಳಿರುವುದು, ಹೈಕಮಾಂಡ್ ಮೇಲೆಯೇ ನಿರ್ಧಾರದ ಹೊಣೆ ಹಾಕುವ ಪ್ರಯತ್ನವೆಂದು ಹೇಳಲಾಗುತ್ತಿದೆ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಭೇಟಿ ಮಾಡಲು ಯತ್ನಿಸಿದ್ದರೂ, ಭೇಟಿ ಸಾಧ್ಯವಾಗದೆ ವಾಪಸ್ ಬಂದಿದ್ದಾರೆ.

ಈ ಬೆಳವಣಿಗೆಯ ಬೆನ್ನಲ್ಲೇ ಡಿಕೆ ಶಿವಕುಮಾರ್ ತಮ್ಮ ಪಕ್ಷ ನಿಷ್ಠೆ ವಿಚಾರವನ್ನು ಮುಂಚೂಣಿಗೆ ತರುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಿವಾಸದ ಮುಂದೆಯೇ ಮಾತನಾಡಿದ ಡಿಕೆ ಶಿವಕುಮಾರ್, ‘ನಾನು ಈ ಪಕ್ಷವನ್ನು ಕಟ್ಟಿದ್ದೇನೆ, ಬಾವುಟ ಕಟ್ಟಿದ್ದೇನೆ, ಕಸವೂ ಗುಡಿಸಿದ್ದೇನೆ. ಕೇವಲ ಬಂದು ಭಾಷಣ ಮಾಡಿ ಹೋಗಿಲ್ಲ’ ಎಂದು ಹೇಳುವ ಮೂಲಕ ತಮ್ಮ ಹೋರಾಟದ ಹಿನ್ನೆಲೆಯನ್ನು ನೆನಪಿಸಿದ್ದಾರೆ. ಒಂದು ದಿನ ಹಿಂದಷ್ಟೇ, ತಾನು ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದಿದ್ದ ಡಿಕೆ, ಮರುದಿನವೇ ಪಕ್ಷ ಕಟ್ಟಿದ ಮಾತುಗಳನ್ನಾಡಿದ್ದಾರೆ.

‘ನನ್ನಿಂದ ಪಕ್ಷ ಅಧಿಕಾರಕ್ಕೆ ಬಂತು, ನಾನೇ ಪಕ್ಷ ಕಟ್ಟಿದ್ದು’ ಎಂದು ಯಾರೂ ಹೇಳಬಾರದು ಎಂದು ಖರ್ಗೆ ಎರಡು ದಿನಗಳ ಹಿಂದಷ್ಟೇ ಹೇಳಿದ್ದರು. ಆದರೆ, ಇದೀಗ ಡಿಕೆಶಿ ಮತ್ತದೇ ಮಾತುಗಳನ್ನಾಡಿದ್ದಾರೆ. ಹೀಗಾಗಿ, ‘ಪಕ್ಷಕ್ಕೆ ನಾನು ಎಲ್ಲವನ್ನೂ ಕೊಟ್ಟಿದ್ದೇನೆ’ ಎಂಬ ಡಿಕೆ ಮಾತುಗಳು ಕಾಂಗ್ರೆಸ್ ಒಳಗಿನ ಅಸಮಾಧಾನವನ್ನು ಬಹಿರಂಗಪಡಿಸಿದಂತಿವೆ.

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ 2 ಬಾರಿ ಒಟ್ಟಾಗಿ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ನಡೆಸಿ ‘ನಾವು ಒಟ್ಟಿಗೆ’ ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದರೂ, ಇಬ್ಬರ ನಡೆ ಮತ್ತು ನುಡಿ ಒಂದೇ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂಬ ಚರ್ಚೆ ಗಟ್ಟಿಯಾಗುತ್ತಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಮೇಲೆಯೇ ಭಾರ ಹಾಕಿದ್ದು, ತಮ್ಮ ಸ್ಥಾನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ ಎನ್ನಲಾಗುತ್ತಿದೆ.

ಡಿಕೆ ಸುರೇಶ್ ಮಾರ್ಮಿಕ ಪೋಸ್ಟ್

ಈ ನಡುವೆ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಸಾಮಾಜಿಕ ಜಾಲತಾಣದಲ್ಲಿ ಮಾರ್ಮಿಕವಾಗಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ‘ಗುರಿಯನ್ನು ಬೇಗ ತಲುಪಬೇಕೆಂದವರು ದಾರಿಯಲ್ಲಿ ವಿಶ್ರಾಂತಿ ಪಡೆಯುತ್ತಾ ಕುಳಿತುಕೊಳ್ಳಬಾರದು’ ಎಂಬ ಪಾಟೀಲ್ ಪುಟ್ಟಪ್ಪನವರ ಉಕ್ತಿಯನ್ನು ಅವರು ಉಲ್ಲೇಖಿಸಿದ್ದು, ರಾಜಕೀಯದಲ್ಲಿ ಹಲವು ಅರ್ಥಗಳಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಕಾಂಗ್ರೆಸ್ ಕಾರ್ಯಕಾರಣಿ ಸಭೆಗೆ ಡಿಕೆ ಶಿವಕುಮಾರ್​ಗಿಲ್ಲ ಆಹ್ವಾನ!

ಡಿಸೆಂಬರ್ 27ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕಾರಣಿ (CWC) ಸಭೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಈ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಡಿಕೆಗೆ ಆಹ್ವಾನ ನೀಡಲಾಗಿಲ್ಲ ಎನ್ನಲಾಗಿದೆ. ಅದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ಬಂದಿದ್ದು, ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ: ಮಾರ್ಮಿಕವಾಗಿ ಮಾಜಿ ಸಂಸದ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಒಟ್ಟಿನಲ್ಲಿ, ಕಾಂಗ್ರೆಸ್ ಒಳಗಿನ ಪಟ್ಟದಾಟದಲ್ಲಿ ಅಡೆತಡೆಗಳಿದ್ದರೂ, ಡಿಕೆ ಶಿವಕುಮಾರ್ ಅವರ ಪ್ರಯತ್ನ ಮಾತ್ರ ನಿಲ್ಲುತ್ತಿಲ್ಲ. ‘ನಾನು ಪಕ್ಷಕ್ಕಾಗಿ ಬಾವುಟ ಕಟ್ಟಿದ್ದೇನೆ’ ಎಂಬ ಮಾತಿನ ಮೂಲಕ, ಅವರು ತಮ್ಮ ಎದುರಾಳಿಗಳಿಗೆ ಪರೋಕ್ಷವಾಗಿ ಖಡಕ್ ಸಂದೇಶ ರವಾನಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ? – Kannada News | Daily Devotional: The Astrological Significance of the Index Finger and Its Impact on Destiny

ಬೆಂಗಳೂರು, ಡಿಸೆಂಬರ್ 26: ಶಾಸ್ತ್ರಗಳ ಪ್ರಕಾರ, ಮಾನವ ದೇಹದ ಅಂಗಾಂಗಗಳು, ಅದರಲ್ಲೂ ವಿಶೇಷವಾಗಿ ತೋರು ಬೆರಳಿನ ಆಕಾರವು ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಹೆಬ್ಬೆರಳನ್ನು ಶುಕ್ರನಿಗೆ, ತೋರು ಬೆರಳನ್ನು ಗುರು (ಬೃಹಸ್ಪತಿ) ಗ್ರಹಕ್ಕೆ, ಮಧ್ಯದ ಬೆರಳನ್ನು ಶನಿಗೆ, ಉಂಗುರದ ಬೆರಳನ್ನು ರವಿಗೆ (ಸೂರ್ಯ) ಮತ್ತು ಕಿರು ಬೆರಳನ್ನು ಬುಧನಿಗೆ ಹೋಲಿಸಲಾಗುತ್ತದೆ.

ತೋರು ಬೆರಳಿನ ಆಕಾರದಿಂದ ವ್ಯಕ್ತಿಯ ಗುಣಲಕ್ಷಣಗಳನ್ನು ಅರಿಯಲು ಸಾಧ್ಯವಿದೆ. ಉದಾಹರಣೆಗೆ, ಉದ್ದವಾದ ತೋರು ಬೆರಳು ನಾಯಕತ್ವದ ಗುಣಗಳನ್ನು ಸೂಚಿಸುತ್ತದೆ. ಚಪ್ಪಟೆಯಾದ ಮತ್ತು ಅಗಲವಾದ ಉಗುರಿನ ಭಾಗವಿರುವ ತೋರು ಬೆರಳು ಆತ್ಮವಿಶ್ವಾಸ, ತೀಕ್ಷ್ಣ ಬುದ್ಧಿ ಮತ್ತು ಕೆಲಸದಲ್ಲಿ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿ, ದಪ್ಪನಾದ ತೋರು ಬೆರಳಿನ ತುದಿಯು ವಿಶಾಲ ಹೃದಯ ಮತ್ತು ದಾನ ಗುಣವನ್ನು ತೋರುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

Source link

ಮೊದಲ ದಿನವೇ ಅಬ್ಬರದ ಕಲೆಕ್ಷನ್ ಮಾಡಿದ ‘ಮಾರ್ಕ್’ ಹಾಗೂ ‘45’ ಸಿನಿಮಾ – Kannada News | 45 and Mark Movie Box Office: Sudeep And Shivarajkumar Movie Collections Revealed

ಕ್ರಿಸ್​ಮಸ್ ಪ್ರಯುಕ್ತ ರಿಲೀಸ್ ಆದ ‘45’ ಹಾಗೂ ‘ಮಾರ್ಕ್​’ ಸಿನಿಮಾಗಳು (Mark Movie) ಮೊದಲ ದಿನವೇ ಅಬ್ಬರದ ಕಲೆಕ್ಷನ್ ಮಾಡಿವೆ. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿವೆ. ಇಂದು ವಾರದ ದಿನ ಆಗಿರುವುದರಿಂದ, ಯಾವುದೇ ರಜೆ ಇಲ್ಲದಿರುವುದರಿಂದ ಕಲೆಕ್ಷನ್ ಕೊಂಚ ತಗ್ಗಬಹುದು. ಆದರೆ, ಶನಿವಾರ, ಭಾನುವಾರ ಮತ್ತು ಹೊಸ ವರ್ಷದಂದು ಈ ಚಿತ್ರ ಅಬ್ಬರದ ಕಲೆಕ್ಷನ್ ಮಾಡೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟಾಗುತ್ತದೆ ಎಂಬ ಕುತೂಹಲ ಮೂಡಿದೆ.

‘ಮಾರ್ಕ್​’ ಚಿತ್ರದ ಮೊದಲ ದಿನದ ಗಳಿಕೆ

‘ಮ್ಯಾಕ್ಸ್’ ಆದ ಬಳಿಕ ‘ಮಾರ್ಕ್’ ಸಿನಿಮಾ ರಿಲೀಸ್ ಆಯಿತು. ಕಳೆದ ವರ್ಷ ಡಿಸೆಂಬರ್ 25ರಂದು ‘ಮ್ಯಾಕ್ಸ್’ ಬಂದಿದ್ದರೆ ಈ ವರ್ಷ ಅದೇ ದಿನಾಂಕದಂದು ‘ಮಾರ್ಕ್’ ಬಂದಿದೆ. ಈ ಚಿತ್ರ ‘ಮ್ಯಾಕ್ಸ್’ ಸಿನಿಮಾ ಶೇಡ್​​ನಲ್ಲಿ ಇದೆ ಎಂಬ ಅಭಿಪ್ರಾಯವನ್ನು ಅನೇಕರು ಹೊರ ಹಾಕಿದ್ದಾರೆ. ಎರಡು ದಿನದಲ್ಲಿ ನಡೆಯೋ ಕಥೆ ಆಗಿರುವುದರಿಂದ ಸಿನಿಮಾ ವೇಗವಾಗಿ ಸಾಗುತ್ತದೆ. ಈ ಚಿತ್ರ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದೆ.

‘ಮಾರ್ಕ್​’ ಸಿನಿಮಾ ಮೊದಲ ದಿನ 6.28 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು sacnilk ವರದಿ ಮಾಡಿದೆ. ಮೊದಲ ದಿನವೇ ಸಿನಿಮಾ ಅಬ್ಬರಿಸಿದಂತಾಗಿದೆ. ಈ ಚಿತ್ರಕ್ಕೆ ಈಗಾಗಲೇ ಎಲ್ಲ ಕಡೆಗಳಲ್ಲಿ ಪಾಸಿಟಿವ್ ವಿಮರ್ಶೆಗಳು ಸಿಕ್ಕಿದ್ದು ಸಿನಿಮಾಗೆ ಸಹಕಾರಿ ಆಗುತ್ತಿದೆ. ಈ ಚಿತ್ರಕ್ಕೆ ಸುದೀಪ್ ಹೀರೋ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ನಿರ್ದೇಶನ ಸಿನಿಮಾಗೆ ಇದೆ.

‘45​’ ಚಿತ್ರದ ಮೊದಲ ದಿನದ ಗಳಿಕೆ

45 ಸಿನಿಮಾ ಕೂಡ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ. ಇದು ಮಲ್ಟಿ ಸ್ಟಾರರ್ ಚಿತ್ರ. ಉಪೇಂದ್ರ, ರಾಜ್ ಬಿ ಶೆಟ್ಟಿ, ಶಿವರಾಜ್​​ಕುಮಾರ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಕೂಡ ಮೊದಲ ದಿನ ಒಳ್ಳೆಯ ಓಪನಿಂಗ್ ಪಡೆದಿದೆ.

ಇದನ್ನೂ ಓದಿ: ‘ಡೆವಿಲ್’ ಬಳಿಕ ರೇಟಿಂಗ್ ಕೊಡದಂತೆ ಕೋರ್ಟ್​​ನಿಂದ ಆರ್ಡರ್ ತಂದ ‘45’, ‘ಮಾರ್ಕ್​​’

ಈ ಸಿನಿಮಾದ ಮೊದಲ ದಿನದ ಗಳಿಕೆ ಬಗ್ಗೆ sacnilk ಲೆಕ್ಕ ಕೊಟ್ಟಿದೆ. ಈ ಚಿತ್ರದ ಮೊದಲ ದಿನದ ಕಲೆಕ್ಷನ್ 4.25 ಕೋಟಿ ರೂಪಾಯಿ ಎನ್ನಲಾಗಿದೆ. ಪ್ರೀಮೀಯರ್ ಶೋಗಳ ಲೆಕ್ಕವೂ ಸೇರಿದರೆ 5 ಕೋಟಿ ರೂಪಾಯಿ ದಾಟಲಿದೆ. ಈ ಸಿನಿಮಾ ಅಭಿಮಾನಿಗಳು ಕೈ ಹಿಡಿಯುವ ಲಕ್ಷಣ ಗೋಚರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today 26 December: ಈ ರಾಶಿಗೆ ಇಂದು ಹಳೆಯ ಸಂಗಾತಿಯ ನೆನಪು ಮತ್ತೆ ಕಾಡಲಿದೆ – Kannada News | Horoscope Today in Kannada on 26 December Friday; Dina Bhavishya Tithi Panchanga Details here

ಮೇಷ ರಾಶಿ:

ಹಣವ್ಯಯವು ದಾನವಾಗಿ ಬದಲಾಗುವುದು. ಸಂಬಂಧಗಳಲ್ಲಿ ಕರುಣೆ ಮತ್ತು ಸಹಾನುಭೂತಿ ಹೆಚ್ಚಾಗುತ್ತದೆ. ಓಡಾಟ ಮನಸ್ಸಿಗೆ ಶಾಂತಿ ನೀಡುತ್ತದೆ. ಉದ್ಯೋಗದಲ್ಲಿ ಸೃಜನಶೀಲತೆ ಬೆಳೆಯುತ್ತದೆ. ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ನಿಮಗೆ ಆಗದು. ಇಂದು ನೀವು ಹೇಗೇ ಸಮಜಾಯಿಷಿ ಕೊಟ್ಟರೂ ತಪ್ಪು ನಿಮ್ಮದೇ ಆಗಿರುತ್ತದೆ. ಒಂದಿಲ್ಲೊಂದು ಆಲೋಚನೆಗಳು ಬರುತ್ತಲೇ ಇರುತ್ತವೆ. ನಿಮ್ಮ ವಸ್ತುವು ಕಳ್ಳತನವಾಗಬಹುದು ಎಂಬ ಭೀತಿಯು ಉಂಟಾಗಬಹುದು. ಇಂದು ನೀವು ನೆಮ್ಮದಿಯಿಂದ ಇರಲು ಹಿತಶತ್ರುಗಳು ಬಿಡರು. ಸ್ವಂತ ಉದ್ಯೋಗದ ಮೇಲೆ ಕಾಳಜಿಯು ಅನ್ಯ ಕಾರ್ಯದ ನಿಮಿತ್ತ ಕಡಿಮೆಯಾಗುವುದು. ಅಧಿಕಾರ ಸಂಬಂಧಿತ ಸಮಸ್ಯೆ ಪರಿಹಾರ. ವಿದೇಶ ಪ್ರಯಾಣ ಸೂಚನೆ. ನಿರುದ್ಯೋಗಿಗಳಿಗೆ ಭರವಸೆ ಸಿಗಲಿದೆ. ವೃತ್ತಿಪರರಾದ ನಿಮಗೆ ಕಛೇರಿಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸುವುದು ಬೇಡ. ಹಳೆಯ ಸಂಗಾತಿಯ ನೆನಪು ಮತ್ತೆ ಕಾಡಬಹುದು.‌ ಮನೆಯಲ್ಲಿ ಧಾರ್ಮಿಕ ಕಾರ್ಯವನ್ನು ಮಾಡಲು ಯೋಚಿಸುವಿರಿ. ಬಂಧುಗಳ ಕಡೆಯಿಂದ ವಿವಾಹ ಸಂಬಂಧವು ಬರಬಹುದು.

ವೃಷಭ ರಾಶಿ:

ಉದ್ಯೋಗದಲ್ಲಿ ನವೀನ ಆಲೋಚನೆಗಳಿಂದ ಮೆಚ್ಚುಗೆ ಪಡೆಯುವಿರಿ. ಸಂಬಂಧಗಳಲ್ಲಿ ಸ್ನೇಹಭಾವ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ತಂತ್ರಜ್ಞಾನದ ಬಳಕೆಯಾಗಲಿದೆ. ಹಣವ್ಯಯವು ಮಧ್ಯಮದಲ್ಲಿರಲಿದೆ. ಮಕ್ಕಳ ಕಾರಣದಿಂದ ನೀವು ವಿದೇಶ ಪ್ರಯಾಣ ಮಾಡಬೇಕಾಗಬಹುದು. ಆತ್ಮಸಾಕ್ಷಿ ಒಪ್ಪಿದರೆ ಮತ್ತೆ ಬೇಸರಿಸಬೇಕಿಲ್ಲ. ಸಂಗಾತಿಯು ನಿಮ್ಮ ನಡವಳಿಕೆಯ ಬಗ್ಗೆ ಏನಾದರೂ ಹೇಳಬಹುದು, ಕೇಳಿ ಸುಮ್ಮನಾಗಿ. ಉತ್ತರದಿಂದ ಮತ್ತೇನಾದರೂ ಆದೀತು. ಸುಲಭವಾಗಿ ಸಿಗುವ ಸಂಪತ್ತಿಗೆ ಆಸೆಪಡುವುದು ಬೇಡ. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಓಡಾಟ ಅನಿವಾರ್ಯವಾಗಿ ಹೆಚ್ಚಾಗುತ್ತದೆ. ವಾಹನ ಬದಲಾವಣೆಗೆ ಯೋಚನೆ. ಅಧಿಕಾರಿಗಳಿಗೆ ಹಲವರ ಬೆಂಬಲ. ನಿಮಗೆ ಕೊಟ್ಟ ಕಾರ್ಯವನ್ನು ಮರೆತು ಅನ್ಯರ ಕಾರ್ಯದಲ್ಲಿ ಮಗ್ನರಾಗುವಿರಿ. ಹಣವನ್ನೂ ಕೊಟ್ಟು ವಸ್ತುವನ್ನೂ ಕಳೆದುಕೊಳ್ಳಬೇಕಾಗಬಹುದು ಎಚ್ಚರ. ಕಛೇರಿಗೆ ವಿರಾಮವಿದ್ದರೂ ಅದರ ಕಾರ್ಯವನ್ನೇ ನೀವು ಮಾಡಬೇಕಾಗುವುದು. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ.

ಮಿಥುನ ರಾಶಿ:

ಕುಟುಂಬದ ಹೊಣೆಗಾರಿಕೆ ನಿಮ್ಮ ಸಮಯವನ್ನು ತೆಗೆದುಕೊಳ್ಳುತ್ತದೆ. ಜವಾಬ್ದಾರಿಯಿಂದ ಎಲ್ಲವನ್ನೂ ನಿರ್ವಹಿಸಬೇಕಾಗುತ್ತದೆ. ಉದ್ಯೋಗದಲ್ಲಿ ಸ್ಥಿರತೆ ಮತ್ತು ನಂಬಿಕೆ ತರಿಸಿಕೊಳ್ಳಿ. ಲೆಕ್ಕಾಚಾರವನ್ನು ಸರಿಯಾಗಿ ಇಟ್ಟುಕೊಳ್ಳದೇ ಎಲ್ಲರಿಗೂ ಗೊಂದಲವನ್ನು ಉಂಟುಮಾಡುವಿರಿ. ಬಹಳ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹದಂತೆ ಆಗುವುದು. ಸಾಮಾಜಿಕ ಕಾರ್ಯಗಳತ್ತ ಒಲವು ಮೂಡಬಹುದು. ಯಾವುದಕ್ಕೂ ಆರೋಗ್ಯವನ್ನು ಸುಧಾರಿಸಿಕೊಂಡು ಮುನ್ನಡೆಯುವುದು ಉತ್ತಮ.‌ ಗೊತ್ತಿರುವ ಕೆಲಸವನ್ನಷ್ಟೇ ಮಾಡಿ. ವ್ಯಾಪಾರ ನಿಧಾನವಾಗಿ ಬೆಳೆಯುತ್ತದೆ. ಅಧಿಕಾರಿಗಳಿಂದ ಮೆಚ್ಚುಗೆಗೆ ಗರ್ವ ಬೇಡ. ಸಂಬಂಧಗಳಲ್ಲಿ ಗಂಭೀರತೆ. ವಿದೇಶದ ಹೂಡಿಕೆಗೆ ಮಾರ್ಗದರ್ಶನ ಪಡೆಯುವಿರಿ. ದಾಂಪತ್ಯದಲ್ಲಿ ಮೌನವೇ ಸಂಭಾಷಣೆ ಆಗುವುದು. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟವಾಗುವುದು. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ.

ಕರ್ಕಾಟಕ ರಾಶಿ:

ಉದ್ಯೋಗದಲ್ಲಿ ಹೊಸ ಅವಕಾಶ ಮನಸ್ಸಿಗೆ ಧೈರ್ಯ ನೀಡುತ್ತದೆ. ಸಂಬಂಧಗಳಲ್ಲಿ ಉತ್ಸಾಹ ಸಿಕ್ಕಿದ್ದು ಹಿಂಜರಿತ ಇರದು. ತಂದೆಯ ವಿಚಾರದಲ್ಲಿ ನಿಮಗೆ ಅಸಮಾಧನವು ಇರುವುದು. ಮಾನಸಿಕ ಕಿರಿಕಿರಿಯಿಂದ ಕುಳಿತಲ್ಲಿ ಕುಳಿತುಕೊಳ್ಳುವುದು ಕಷ್ಟವಾದೀತು. ಯಾರ ಮೇಲೂ ಸಿಟ್ಟಿನಿಂದ ಮಾತನಾಡುವುದು ಬೇಡ. ತಂದೆಯ ಅಸಮಾಧಾನವನ್ನು ಕುಳಿತು ಬಗೆಹರಿಸಿ. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೋರಿಸಬೇಕಾಗುವುದು. ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವಿರಿ. ವ್ಯಕ್ತಿತ್ವವನ್ನು ಗಮನಿಸಿಕೊಂಡು ಯಾರ ಬಳಿಯಾದರೂ ಮಾತನಾಡಿ. ವ್ಯಾಪಾರ ವಿಸ್ತರಣೆಯನ್ನು ನಾನಾ ಪ್ರಕಾರಗಳಿಂದ ಸಾಧ್ಯವಾಗಿಸುವಿರಿ. ಕುಟುಂಬ ಬೆಂಬಲ ಗಟ್ಟಿಯಾಗುತ್ತದೆ. ಹಣವ್ಯಯ ಜಾಣ್ಮೆ ತೋರಿಸುವಿರಿ. ಅಧಿಕಾರಿಗಳಿಗೆ ತುರ್ತು ಪ್ರಯಾಣದ ಸೂಚನೆ ಬರಲಿದೆ. ಶುಭ ಅವಸರದಲ್ಲಿ ಸದುಪಯೋಗ ಮಾಡಿಕೊಳ್ಳಿ. ಹೆಚ್ವಿನ ಸಮಯವನ್ನು ಧಾರ್ಮಿಕ ಆಚರಣೆಗೆ ಮೀಸಲಿಡುವಿರಿ. ನಿಮ್ಮ ಮಾತುಗಳಿಂದ ನೋವಾಗಲಿದೆ.

ಸಿಂಹ ರಾಶಿ:

ಹಣವ್ಯಯವನ್ನು ತಡೆಹಿಡಿಯುವುದರಿಂದ ಬೇಸರ. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ಕುಟುಂಬದಲ್ಲಿ ಗುಪ್ತ ವಿಚಾರಗಳು ಚರ್ಚೆಗೆ ಬರುತ್ತವೆ. ವ್ಯಾಪಾರದಲ್ಲಿ ಅಪಾಯದ ನಿರ್ಣಯವನ್ನು ಮಾಡಿಬಿಡುಬಿರಿ. ಸಹೋದ್ಯೋಗಿಗಳ ಸಹಕಾರ ನಿಮಗೆ ಸಿಗದೇ ಹೋಗಬಹುದು. ಛಲದಿಂದ ಒಂಟಿಯಾಗಿ ನಿಮ್ಮ ಕಾರ್ಯವನ್ನು ಸಾಧಿಸುವಿರಿ. ಕೃಷಿಯಲ್ಲಿ ಕೆಲವು ತೊಂದರೆಯಾಗಬಹುದು. ಅದನ್ನು ಲೆಕ್ಕಿಸದೇ ನಿಮ್ಮ ಪೂರ್ಣ ಶ್ರಮವನ್ನು ಹಾಕುವಿರಿ. ಕಾರ್ಯಕ್ಕೆ ಎಲ್ಲರಿಂದ ಪ್ರಶಂಸೆ ಸಿಕ್ಕರೂ ನಿಮ್ಮ ಕೆಲಸವು ಸಮಾಧಾನ ಕೊಡದು. ಇಂದು ಬಂದ ಹಣವು ಸಾಲಕ್ಕೆ ಸರಿಯಾಗುವುದು. ಅವ್ಯವಹಾರವನ್ನು ಮಾಡಲು ಸಹೋದ್ಯೋಗಿಗಳು ಪ್ರೇರಿಸಬಹುದು. ಸಂಬಂಧಗಳು ಆಳ ಇಂದು ಸ್ಪಷ್ಟವಾಗಲಿದೆ. ಅಧಿಕಾರಿಗಳೊಂದಿಗೆ ಎಚ್ಚರದಲ್ಲಿ ವ್ಯವಹಾರವಿರಲಿ. ನಿರುದ್ಯೋಗಿಗಳು ತಾಳ್ಮೆ ಕಳೆದುಕೊಳ್ಳಬಹುದು. ಮನೆಗೆ ಬೇಕಾದ ಬಂಧುಗಳು ಬಾರದೇ ಹೋಗಬಹುದು. ಸಜ್ಜನರನ್ನು ನೀವು ದೂರ ಮಾಡಿಕೊಳ್ಳುವಿರಿ. ಯಾರ ಮೇಲೂ ಪೂರ್ವಾಗ್ರಹ ಬೇಡ.

ಕನ್ಯಾ ರಾಶಿ:

ಸಂಬಂಧಗಳಲ್ಲಿ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ವ್ಯಾಪಾರದಲ್ಲಿ ಪಾಲುದಾರಿಕೆ ಲಾಭ ತರುತ್ತದೆ. ಕುಟುಂಬದಲ್ಲಿ ಒಪ್ಪಂದದ ವಾತಾವರಣವಿರಲಿದೆ. ವಾಹನಕ್ಕೆ ಖರ್ಚು ಅನಿವಾರ್ಯವಾಗಬಹುದು. ಆಸ್ತಿಯ ಮೇಲೆ ಸಾಲವನ್ನು ಪಡೆಯುವ ಸಂದರ್ಭವು ಬರಬಹುದು. ಅನಿವಾರ್ಯವಾದುದನ್ನು ಮಾತ್ರ ಸಾಲ ಮಾಡಿ. ಅತಿಯಾಗಿ ಬೇಡ. ಸಂಗಾತಿಯ ಮನೋಭಾವವು ಬದಲಾದಂತೆ ಅನ್ನಿಸುವುದು. ಚರ್ಮಕ್ಕೆ ಸಂಬಂಧಿಸಿದಂತೆ ಏನಾದರೂ ಆಗಬಹುದು. ಸಮಾಧಾನಚಿತ್ತದಿಂದ ನೀವು ಇಂದಿನ ಮಧುರ ಕ್ಷಣಗಳನ್ನು ಆನಂದಿಸುವಿರಿ. ವಿದೇಶ ಸಂಪರ್ಕದಿಂದ ಶುಭವಾಗಲಿದೆ. ಉದ್ಯೋಗದಲ್ಲಿ ತಂಡದ ಸಹಕಾರದಿಂದ ಗೆಲವು. ಅಧಿಕಾರದಲ್ಲಿ ಸ್ಪಷ್ಟ ನಿರ್ಣಯ ಅಗತ್ಯ. ನಿರುದ್ಯೋಗಿಗಳಿಗೆ ಕೆಲಸಕ್ಕೆ ಕರೆ. ಸ್ವಾಭಿಮಾನಕ್ಕೆ ಆಪ್ತರಿಂದ ತೊಂದರೆಯಾಗಬಹುದು. ಸಂಗಾತಿಯ ಮೌನವು ನಿಮಗೆ ಕಷ್ಟವಾಗಬಹುದು. ಅಧಿಕ ಪ್ರಯಾಣದಿಂದ ಆಯಾಸವಾಗಬಹುದು.

ತುಲಾ ರಾಶಿ:

ವ್ಯಾಪಾರದಲ್ಲಿ ಲೆಕ್ಕಪತ್ರ ಜಾಗ್ರತೆ ಮುಖ್ಯ. ಸಂಬಂಧಗಳಲ್ಲಿ ಅತಿವಿಮರ್ಶೆ ಬೇಡ. ಸಣ್ಣ ಕಾರ್ಯಕ್ಕಾಗಿ ಅಧಿಕ ಓಡಾಟ. ಅಧಿಕಾರ ಸೂಚನೆಗಳನ್ನು ಕಷ್ಟವಾದರೂ ಪಾಲನೆ‌ಮಾಡಬೇಕು. ನಿರುದ್ಯೋಗಿಗಳಿಗೆ ಅಂತರಂಗ ಸಕಾರಾತ್ಮಕ ಸೂಚ‌ನೆ ಕೊಡಲಿದೆ. ವಿದೇಶ ಗಮನಕ್ಕೆ ಯತ್ನ ನಿಧಾನ. ಇಂದು ಉದ್ವೇಗವು ನಿಮ್ಮ ಕೆಲಸವನ್ನು ಅಸ್ತವ್ಯಸ್ತ ಮಾಡಲಿದೆ. ನಿಮಗೆ ಪ್ರೋತ್ಸಾಹದ ಕೊರತೆ ಅಧಿಕವಾಗಿ ಕಾಣಿಸುವುದು. ಪ್ರೀತಿಯಲ್ಲಿ ನಿಮಗೆ ನೋವಾಗುವ ಸಾಧ್ಯತೆ ಇದೆ. ಏನೂ ಬೇಡ ಎನಿಸಬಹುದು. ಸಣ್ಣ ಸಣ್ಣ ವಿಚಾರಗಳೂ ದೊಡ್ಡದಾಗಿ ಕಾಣಿಸುವುದು. ಅಧಿಕಾರಿಗಳಿಂದ ನಿಮಗೆ ಮಾನಸಿಕ ಹಿಂಸೆ ಆಗಬಹುದು. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ಸಾಮಾಜಿಕ‌ ಕೆಲಸದಿಂದ‌‌ ಸಾಧಿಸುವಿರಿ. ವಾಹನ ಸೇವೆ ಅಥವಾ ದುರಸ್ತಿ ಅಗತ್ಯ. ಉದ್ಯೋಗದಲ್ಲಿ ಪರಿಶ್ರಮ ಹೆಚ್ಚಿದರೂ ಫಲ ನಿಧಾನ. ಹಣವ್ಯಯ ಕಟ್ಟುನಿಟ್ಟಾಗಿ ನಿಯಂತ್ರಿಸಿ. ಕುಟುಂಬದ ಆರೋಗ್ಯದ ಕಡೆ ಗಮನ. ಮಕ್ಕಳ‌ ವಿವಾಹ ಚಿಂತೆಯನ್ನು ಬಿಡುವಿರಿ. ಯಾರ ಮಾತನ್ನೋ ಕೇಳಿ ಮಾಡುವ ಕೆಲಸಕ್ಕಿಂತ ನಿಮ್ಮ ಮನಸ್ಸಿಗೆ ಬಂದರೆ ಮಾತ್ರ ಮಾಡಿ.

ವೃಶ್ಚಿಕ ರಾಶಿ:

ಅಧಿಕಾರದಿಂದ ಗೌರವ ಹಾಗೂ ಗುರುತಿಸಿಕೊಳ್ಳುವಿಕೆಯಾಗಲಿದೆ. ವ್ಯಾಪಾರದಲ್ಲಿ ಧೈರ್ಯದ ನಿರ್ಣಯ ಲಾಭ ತರುತ್ತದೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಮೌಲ್ಯ. ಉದ್ಯೋಗದಲ್ಲಿ ಪದೋನ್ನತಿ ಚರ್ಚೆ. ಕೃಷಿಯಲ್ಲಿ ನೀವು ಬಹಳ‌ ಆಯ್ಕೆ ಸ್ವಭಾವವುಳ್ಳವರು. ಬಂಧುಗಳ‌ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು. ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಯಾವುದೋ ಆಲೋಚನೆಯಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮಾಡಲಾಗದು. ಸಂಬಂಧಗಳು ಅನ್ಯರ ಕಾರಣದಿಂದ ಗಟ್ಟಿಯಾಗುತ್ತವೆ. ವಿದೇಶ ಸಂಪರ್ಕ ಹೆಚ್ಚಾಗುತ್ತಿದ್ದು ಹೋಗುವ ಮಾರ್ಗದ ಪರೀಕ್ಷೆ ಮಾಡಿಕೊಳ್ಳಿ. ನಿರುದ್ಯೋಗಿಗಳಿಗೆ ಅವಕಾಶ ಸಿಕ್ಕೂ ನಿರಾಶೆಯಾಗಲಿದೆ. ಹಣವ್ಯಯ ಸಂತೋಷಕ್ಕಾಗಿ ಮಾಡುವಿರಿ. ಆರೋಗ್ಯವು ಸುಧಾರಿಸುತ್ತ ಬರಲಿದೆ. ನೀವು ಮಾತನಾಡುವ ವೇಗದಲ್ಲಿ ಏನನ್ನಾದರೂ ಹೇಳುವಿರಿ. ಅಧ್ಯಯನದಲ್ಲಿ ನಿಮಗೆ ಹೆಚ್ಚು ಆಸಕ್ತಿ ಇರುವುದು. ಆರ್ಥಿಕ ಹಿನ್ನಡೆಯನ್ನು ನೀವು ಲೆಕ್ಕಿಸುವುದಿಲ್ಲ.

ಧನು ರಾಶಿ:

ಅಧಿಕಾರದಿಂದ ಅನೇಕ ಉಪಯೋಗಗಳು ನಿಮಗಾಗಲಿದೆ. ವ್ಯಾಪಾರದಲ್ಲಿ ಹಳೆಯ ಸಂಪರ್ಕ ಲಾಭ. ಓಡಾಟ ಅಗತ್ಯವೂ ಬರಲಿದೆ. ನಿರುದ್ಯೋಗಿಗಳಿಗೆ ಮಾರ್ಗದರ್ಶನ. ನೀವು ಇಂದು ಮಾಡಿದ ತಪ್ಪನ್ನು ಮಾಡದೇ ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಒಂದು ಕೆಲಸವನ್ನು ಮೈ ಮೇಲೆ ಬಿದ್ದು ಮಾಡಿಸಿಕೊಳ್ಳಬೇಕಾಗುವುದು. ಕಲಾವಿದರು ಗೌರವವನ್ನೂ ಯಶಸ್ಸನ್ನೂ ಗಳಿಸುವರು. ನಿಮಗೆ ಆಗುವಷ್ಟೇ ಕೆಲಸವನ್ನು ಮಾಡಿ. ಮತ್ತೆ ಮತ್ತೆ ಬರುವ ಅಪರಿಚಿತ ಕರೆಗಳಿಂದ ಕುಗ್ಗುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ಧೈರ್ಯ ಮಾಡುವುದು ಬೇಡ. ಸಂಬಂಧಗಳಲ್ಲಿ ಭಾವನಾತ್ಮಕತೆ ಹೆಚ್ಚಾಗುತ್ತದೆ. ವಿದೇಶ ಪ್ರಯಾಣ ಅಥವಾ ಅಲ್ಲಿಂದ ಕರೆ ಸಾಧ್ಯ ಇದೆ. ಉದ್ಯೋಗದಲ್ಲಿ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ. ಹಣವ್ಯಯವು ಸಂಗಾತಿಯ ನಿಯಂತ್ರಣದಲ್ಲಿ ಇರುತ್ತದೆ. ಶತ್ರುಗಳ ವ್ಯವಹಾರವನ್ನು ಇನ್ನೊಬ್ಬರ ಮೂಲಕ ತಿಳಿದುಕೊಳ್ಳುವಿರಿ. ನಿಮ್ಮ ಮೇಲೆ ಯಾರದ್ದಾದರೂ ದೃಷ್ಟಿಯು ಬೀಳಬಹುದು. ದೃಷ್ಟಿಯನ್ನು ತೆಗೆದುಕೊಳ್ಳಿ. ಯಾರ ಬೆಂಬಲವನ್ನೂ ಅಪೇಕ್ಷಿಸದೇ ಕೆಲಸವನ್ನು ಮಾಡುವಿರಿ.

ಮಕರ ರಾಶಿ:

ವ್ಯಾಪಾರದಲ್ಲಿ ಜಾಹೀರಾತು ಮತ್ತು ಸಂಪರ್ಕಗಳಿಂದ ಲಾಭ ಸಿಗುತ್ತದೆ. ಸಂಬಂಧಗಳಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಗೊಂದಲ. ಅಧಿಕಾರಿಗಳ ಮಾತು ಜಾಗ್ರತೆಯಿಂದ ಕೇಳಿ. ಓಡಾಟ ಹೆಚ್ಚಾಗಿ ಮನಸ್ಸು ಅಶಾಂತವಾಗಲಿದೆ. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹೆಚ್ಚು ಖರ್ಚನ್ನು ಮಾಡಬೇಕಾಗುದು. ತಂದೆಯ ಆರೋಗ್ಯದ ಬಗ್ಗೆ ಗಮನ ಅಧಿಕವಾಗಿರಲಿ. ವಿದ್ಯಾಭ್ಯಾಸದ ಹಿನ್ನಡೆಗೆ ಕಾರಣವನ್ನು ಕಂಡುಕೊಳ್ಳುವಿರಿ. ಆಭರಣಪ್ರಿಯರಿಗೆ ಖರೀದಿಯ ಉತ್ಸಾಹ ಬರುವರು. ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸುವುದು ಬೇಡ. ನಿಮ್ಮಲ್ಲಿ ಆದ ಬದಲಾವಣೆಯನ್ನು ಸಹೋದ್ಯೋಗಿಗಳು ಗಮನಿಸಬಹುದು. ವಿದ್ಯಾರ್ಥಿಗಳು ಮನೆಯ ಜವಾಬ್ದಾರಿಯನ್ನೂ‌ ನಡೆಸುವ ಸಂದರ್ಭವು ಬರಬಹುದು.‌ ವಾಹನ ಸಂಬಂಧಿತ ಖರ್ಚಿನಿಂದ ಆತಂಕ. ಉದ್ಯೋಗ ಬದಲಾವಣೆ ಜೊತೆಗಾರರಿಂದ ಒತ್ತಡ. ಕುಟುಂಬ ಸಲಹೆ ಉಪಯುಕ್ತ. ವಿದೇಶ ಸಂಪರ್ಕ ಬೆಳೆಯುತ್ತದೆ. ನಿರುದ್ಯೋಗಿಗಳಿಗೆ ತರಬೇತಿಯಿಂದ ಆತ್ಮವಿಶ್ವಾಸ ಹೆಚ್ಚುವುದು. ಆರ್ಥಿಕಸ್ಥಿತಿಯು ಯಥಾಸ್ಥಿತಿಯಲ್ಲಿ ಇರಲಿದೆ‌. ಪ್ರಾಮಾಣಿಕ ಪ್ರಯತ್ನವು ನಿಮ್ಮ ಸಾಧನೆಯ ಗುಟ್ಟು.

ಕುಂಭ ರಾಶಿ:

ಇಂದು ವಿದೇಶ ಪ್ರಯತ್ನ ಫಲ ಕೊಡುತ್ತದೆ. ಹಣವ್ಯಯ ಯೋಜನೆಯಿಂದ ಲಾಭ. ಅಧಿಕಾರ ವಿಳಂಬ ಉಂಟುಮಾಡಬಹುದು. ವ್ಯಾಪಾರ ಒಪ್ಪಂದ ಸಾಧ್ಯ. ಆಸ್ತಿಯ ಮಾರಾಟದ ವಿಚಾರವು ಅಧಿಕವಾಗಿ ಕೇಳಿಬರಬಹುದು. ಉದ್ಯೋಗದ ಅವಕಾಶವನ್ನು ಬಿಟ್ಟುಬಿಡುವಿರಿ. ನಿಮ್ಮ ಊಹೆಯು ಸತ್ಯವಾಗಬಹುದು. ಬಂಧುಗಳು ನಿಮ್ಮ ಬಗ್ಗೆ ಮಾತನಾಡಿಕೊಳ್ಳುವರು. ಹಿರಿಯರ ಜೊತೆ ವಾಗ್ವಾದ ಆಗಬಹುದು. ಆಸ್ತಿ ಹಂಚಿಕೆ ವಿಚಾರಕ್ಕೆ ಸೊಪ್ಪು ಹಾಕದೇ ಇದ್ದರೆ ಅದು ಅಲ್ಲಿಯೇ ಶಾಂತವಾಗುವುದು. ರಾಜಕಾರಣವು ಬೇಸರ ತರಿಸಿ, ನಿಮಗೆ ಇಷ್ಟವಾಗದು. ಅಪರಿಚಿತರು ನಿಮ್ಮನ್ನು ವಶ ಮಾಡಿಕೊಳ್ಳಲು ಉಪಾಯವನ್ನು ಮಾಡಬಹುದು. ಕುಟುಂಬದ ಹೊಣೆಗಾರಿಕೆ ನಿಮ್ಮ ಮೇಲೆ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ನಂಬಿಕೆ ಗಟ್ಟಿಯಾಗುತ್ತದೆ. ಓಡಾಟ ದೈಹಿಕ ಆಯಾಸ ತರಬಹುದು. ಉದ್ಯೋಗದಲ್ಲಿ ಸ್ಥಿರತೆ ಇದ್ದರೂ ಪ್ರಗತಿ ನಿಧಾನ. ನಿರುದ್ಯೋಗಿಗಳಿಗೆ ಶುಭಸುದ್ದಿ. ವಾಹನ ದುರಸ್ತಿ ಅಗತ್ಯ. ನಿಮ್ಮದಲ್ಲದ ವಸ್ತುಗಳನ್ನು ಇತರರಿಗೆ ಕೊಟ್ಟುಬಿಡುವಿರಿ.

ಮೀನ ರಾಶಿ:

ಇಂದು ಹಣವ್ಯಯ ಅನಿವಾರ್ಯವಾದರೂ ಉಪಯುಕ್ತವಾಗಿರುತ್ತದೆ. ಸಂಬಂಧಗಳಲ್ಲಿ ನೇರ ಮಾತು ಅಗತ್ಯ. ವಾಹನ ಚಾಲನೆಯಲ್ಲಿ ಅಲಕ್ಷ್ಯ ಬೇಡ. ಕುಟುಂಬ ಬೆಂಬಲ ಶಕ್ತಿ ನೀಡುತ್ತದೆ. ವ್ಯಾಪಾರ ನಿಧಾನವಾಗಿ ಲಾಭ ತರುತ್ತದೆ. ಸಂಗಾತಿಯ ಮೇಲಿನ‌ ಪ್ರೀತಿ ಕಡಿಮೆ ಆಗಬಹುದು. ನಿಮಗೆ ಒತ್ತಡವು ಅಧಿಕವಾಗಿ ಇರಲಿದ್ದು, ಯಾವುದೋ ಭಯವು ಕಾಡಬಹುದು. ಅನಿವಾರ್ಯವಾಗಿ ನೀವು ಹಣವನ್ನು ಕೊಡಬೇಕಾಗಬಹುದು. ನಿಮ್ಮ‌ ಸ್ವಾಭಿಮಾನಕ್ಕೆ ತೊಂದರೆಯಾಗುವ ಮಾತುಗಳು ಬರಬಹುದು. ಎಲ್ಲ ಮಾತುಗಳನ್ನೂ ನೀವು ನಕಾರಾತ್ಮಕವಾಗಿಯೇ ತಿಳಿಯುವಿರಿ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ನಿಮ್ಮ ಆತ್ಮವಿಶ್ವಾಸವನ್ನು ಪರೀಕ್ಷಿಸುತ್ತದೆ. ಅಧಿಕಾರಿಗಳ ಗಮನ ಬೀಳುತ್ತದೆ. ನಿರುದ್ಯೋಗಿಗಳಿಗೆ ಸಂದರ್ಶನ. ವಿದೇಶ ಸಂಪರ್ಕ ವಿಸ್ತಾರ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವು ಕಾಡುವುದು. ಕಳೆದ ಸುಖದ ಕಾಲವನ್ನು ನೆನಪಿಸಿಕೊಳ್ಳುವಿರಿ. ಅರ್ಥಿಕ ವಿಷಯಕ್ಕೆ ಸಹೋದರರ ನಡುವೆ ಮಾತು ಬರಬಹುದು. ಮೋಸಗೊಳಿಸಲು ಹೋಗಿ ನಗೆಗೀಡಾಗುವಿರಿ.

25 ಡಿಸೆಂಬರ್​​ 2025ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸಿದ್ಧಿ, ಕರಣ : ತೈತಿಲ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 02 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:01 – 12:25, ಯಮಗಂಡ ಕಾಲ 15:14 – 16:38, ಗುಳಿಕ ಕಾಲ 08:12 – 09:36

-ಲೋಹಿತ ಹೆಬ್ಬಾರ್ – 8762924271 (what’s app only)

Source link