Headlines

ಹಾರರ್ ಪ್ರಿಯರಿಗೆ ಸವಾಲು; ನೈಜ ಘಟನೆ ಆಧರಿಸಿದ ಈ ಸರಣಿ ನೋಡಲು ಎರಡು ಗುಂಡಿಗೆ ಬೇಕು – Kannada News | Do Not miss This Web Series Bhay: The Gaurav Tiwari Mystery Must watch Series

ದೆವ್ವ ಅಥವಾ ಇಲ್ಲ ಎಂಬ ಚರ್ಚೆ ತುಂಬಾನೇ ಹಳೆಯದು. ಇದೇ ಕಲ್ಪನೆ ಇಟ್ಟುಕೊಂಡು ಸಾಕಷ್ಟು ಸಿನಿಮಾ ಹಾಗೂ ವೆಬ್ ಸರಣಿಗಳು ಬಂದು ಹೋಗಿವೆ. ಕೆಲವು ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಆಗಿವೆ. ಈಗ ಹಾರರ್ ಸಿನಿಮಾ ಪ್ರಿಯರ ಎದೆಯೂ ನಡುಗುವ ರೀತಿಯ ಹಾರರ್ ಚಿತ್ರವೊಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಅಷ್ಟಕ್ಕೂ ಯಾವುದು ಈ ಸರಣಿ? ‘ಭಯ್: ದಿ ಗೌರವ್ ತಿವಾರಿ ಮಿಸ್ಟರಿ’. ಈ ಸರಣಿ ಹಿಂದಿಯಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿದೆ. ಮಿಸ್ಟರಿ ಹಾಗೂ…

Read More

ಹಿಂದೂ ಯುವಕನೊಂದಿಗೆ ಅನ್ಯಕೋಮಿನ ಯುವತಿ ಓಡಾಟ; ಜೋಡಿಗೆ ಕಿರುಕುಳ ನೀಡಿದ ಅಪ್ರಾಪ್ತರು ಪೊಲೀಸ್ ವಶಕ್ಕೆ – Kannada News | Chikkaballapur Moral Policing: Minors Harass Inter community Friends

ನೈತಿಕ ಪೊಲೀಸ್​ಗಿರಿ ಮಾಡಿದ್ದಕ್ಕೆ ಬಾಲಕರು ಅಂದರ್ ಚಿಕ್ಕಬಳ್ಳಾಪುರ, ಫೆಬ್ರುವರಿ 03: ನಗರದಲ್ಲಿ (Chikkaballapur) ಅನ್ಯಕೋಮಿನ ಅಪ್ರಾಪ್ತ ಬಾಲಕರಿಂದ ನಡೆದ ನೈತಿಕ ಪೊಲೀಸ್‌ಗಿರಿ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟುಹಾಕಿದೆ. ಸ್ಥಳೀಯರು ಹೇಳಿರುವಂತೆ, ಹಿಂದೂ ಹುಡುಗನೊಂದಿಗೆ ಅನ್ಯಕೋಮಿನ ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರ ವೀಡಿಯೋ ಮಾಡಿದ್ದ ಪುಂಡರು, ಅವರನ್ನು ಅಡ್ಡಗಟ್ಟಿ ಕಿರುಕುಳ ನೀಡಿದ್ದಾರೆ. ನಾವಿಬ್ಬರೂ ಸ್ನೇಹಿತರೆಂದರೂ ಬಿಡದ ಪುಂಡರು ಶಿಡ್ಲಘಟ್ಟ ಮೂಲದ ವಿದ್ಯಾರ್ಥಿಗಳಿಬ್ಬರು ಪರಸ್ಪರ ಸ್ನೇಹಿತರಾಗಿದ್ದು, ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ….

Read More

IAS Officer Pulkit Garg: ದುಬಾರಿ ಬೇಬಿ ಸಿಟ್ಟಿಂಗ್​ ಬದಲಾಗಿ ತನ್ನ ಮಗಳನ್ನು ಅಂಗನವಾಡಿಗೆ ಸೇರಿಸಿದ IAS ಅಧಿಕಾರಿ – Kannada News | IAS Officer Pulkit Garg Enrolls Daughter in Anganwadi: A Model for Govt Schools

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರ ನಡುವೆ ಇಲೊಬ್ಬರು IAS ಅಧಿಕಾರಿ ತನ್ನ ಮೂರು ವರ್ಷ ಮಗಳನ್ನು ಅಂಗನವಾಡಿಗೆ ಸೇರಿಸುವ ಮೂಲಕ ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ. ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ (DM) ಪುಲ್ಕಿತ್ ಗರ್ಗ್ ಅವರು ತಮ್ಮ ಮಗಳು ಶಿಯಾನನ್ನು ಅಂಗನವಾಡಿಗೆ ಸೇರಿಸುವ ಮೂಲಕ ದುಬಾರಿ ಶಿಕ್ಷಣದತ್ತ ಮುಖ ಮಾಡದೆ ಸರಳತೆ ಮೆರೆದು ಜನರ ಮೆಚ್ಚುಗೆ ಪಡೆದಿದ್ದಾರೆ. ಭಾರತದಲ್ಲಿ ಅತ್ಯಂತ ಗೌರವಾನ್ವಿತ ಹಾಗೂ ಶಕ್ತಿಶಾಲಿ ನಾಗರಿಕ ಸೇವೆಯಲ್ಲಿರುವ ಪುಲ್ಕಿತ್ ಗರ್ಗ್ ಅವರಿಗೆ ತನ್ನ…

Read More

ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಸಿಸಿ ಕ್ಯಾಮರಾದಲ್ಲಿ ಎದೆ ಝಲ್​​ ಎನಿಸುವ ದೃಶ್ಯ ಸೆರೆ – Kannada News | Horrible Accident in Hiriyadka, Udupi: Incident Captured on CCTV Camera

ಉಡುಪಿ, ಫೆಬ್ರವರಿ 03: ತಾಲೂಕಿನ ಹಿರಿಯಡ್ಕ ಪೇಟೆಯಲ್ಲಿ ಭೀಕರ ಅಪಘಾತ (Accident) ಸಂಭವಿಸಿದೆ. ವೇಗವಾಗಿ ಬಂದ ಇನ್ನೋವಾ ಕಾರೊಂದು ಎದುರಿಗೆ ತೆರಳುತ್ತಿದ್ದ ಸ್ಕೂಟರ್​​ಗೆ ಮೊದಲು ಡಿಕ್ಕಿಯಾಗಿ ಬಳಿಕ ಆಟೋಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್​ ಮತ್ತೊಂದು ಬೈಕ್​​ಗೆ ಡಿಕ್ಕಿಯಾಗಿದೆ. ಈ ವೇಳೆ ಸ್ಕೂಟರ್​ ಸವಾರ ರಸ್ತೆಗೆ ಹಾರಿ ಬಿದ್ದಿದ್ದು, ಪವಾಡ ಸದೃಶರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಿರಿಯಡಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​…

Read More

Gold Rate Today: ಚಿನ್ನ, ಬೆಳ್ಳಿ ಬೆಲೆ ಮತ್ತೂ ಕುಸಿತ; ಇಲ್ಲಿದೆ ದರಪಟ್ಟಿ – Kannada News | Gold Price Today on 3rd February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 3: ಚಿನ್ನದ ಬೆಲೆಯ ಸತತ ಕುಸಿತ ಮುಂದುವರಿಯುತ್ತಿದೆ. ನಿನ್ನೆ ಸೋಮವಾರ ಸುಮಾರು 700-800 ರೂಗಳಷ್ಟು ಇಳಿದಿದ್ದ ಚಿನ್ನದ ಬೆಲೆ (Gold Rates) ಇವತ್ತು ಮಂಗಳವಾರ 100-150 ರೂ ಕಡಿಮೆಗೊಂಡಿದೆ. ಅಪರಂಜಿ ಚಿನ್ನದ ಬೆಲೆ 15,175-15,200 ರೂ ಶ್ರೇಣಿಯಲ್ಲಿದೆ. ಆಭರಣ ಚಿನ್ನದ ಬೆಲೆ 13,900 ರೂನಿಂದ 13,925 ರೂ ಶ್ರೇಣಿಯಲ್ಲಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆ ಸಖತ್ ಕುಸಿತವಾಗಿದೆ. ಬೆಳ್ಳಿ ಬೆಲೆಯ ಭರ್ಜರಿ ಕುಸಿತವೂ ಮುಂದುವರಿದಿದೆ. ಮಂಗಳವಾರ ಗ್ರಾಮ್​ಗೆ 20 ರೂ ಕಡಿಮೆ ಆಗಿದೆ….

Read More

ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು… – Kannada News | India among the countries with lowest US tariffs, markets react positively

ನವದೆಹಲಿ, ಫೆಬ್ರುವರಿ 3: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಎರಡು ದೇಶಗಳ ನಡುವೆ ವ್ಯಾಪಾರ ಒಪ್ಪಂದ ಏರ್ಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಭಾರತದ ಮೇಲೆ ಅಮೆರಿಕ ವಿಧಿಸಿರುವ ಶೇ. 25 ಪ್ರತಿಸುಂಕವನ್ನು ಶೇ. 18ಕ್ಕೆ ಇಳಿಸಲಾಗಿದೆ. ರಷ್ಯನ್ ತೈಲ ಖರೀದಿಸುವುದಕ್ಕೆ ಪ್ರತಿಯಾಗಿ ಭಾರತಕ್ಕೆ ದಂಡವಾಗಿ ವಿಧಿಸಿದ್ದ ಶೇ. 25 ಸುಂಕವನ್ನೂ ಕೈಬಿಡುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ. ಇದರೊಂದಿಗೆ ಭಾರತದ ಸರಕುಗಳ ಮೇಲೆ ಅಮೆರಿಕದ ಟ್ಯಾರಿಫ್ ಶೇ. 50ರಿಂದ ಶೇ. 18ಕ್ಕೆ ಇಳಿಯಲಿದೆ….

Read More

ಸಿಲಿಕಾನ್ ಸಿಟಿಗೇ ಬಂತು ಚಿರತೆ! ಬೆಂಗಳೂರಿನ ಅಂಜನಾಪುರದ ಬಳಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ವಿಡಿಯೋ ವೈರಲ್ – Kannada News | Leopard Spotted in Bengaluru’s Anjanapura, CCTV Video Sparks Panic Near Turahalli Forest

ಬೆಂಗಳೂರು, ಫೆಬ್ರವರಿ 3: ಅಂಜನಾಪುರ ಬಳಿ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭಾರಿ ಆತಂಕ ಮೂಡಿಸಿದೆ. ಅಂಜನಾಪುರ 7ನೇ ಬ್ಲಾಕ್ ರಸ್ತೆಯಲ್ಲಿ ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಚಿರತೆ ಓಡಾಡುತ್ತಿರುವ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ತುರಹಳ್ಳಿ ಅರಣ್ಯ ಪ್ರದೇಶದ ಸಮೀಪದಲ್ಲೇ ಅಂಜನಾಪುರ ಇರುವುದರಿಂದ ಅರಣ್ಯದಿಂದಲೇ ಚಿರತೆ ನುಗ್ಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಕರ್ನಾಟಕದ 3 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್​ ಕ್ಲಾಸ್ ಭಾಗ್ಯ! – Kannada News | Karnataka Govt Schools Get Rs.91.5 Cr for Smart Classes: Boosting Digital Education

ಕರ್ನಾಟಕದ 3 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್​ ಕ್ಲಾಸ್ ಭಾಗ್ಯ! ಬೆಂಗಳೂರು, ಫೆಬ್ರುವರಿ 03: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣ ವಿಸ್ತಾರಗೊಳಿಸಲು ಸಮಗ್ರ ಶಿಕ್ಷಣ ಕರ್ನಾಟಕದಡಿ ಸ್ಮಾರ್ಟ್ ಕ್ಲಾಸ್  (Smart Class) ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ. ಯೋಜನಾ ಅನುಮೋದನ ಮಂಡಳಿಯ ತೀರ್ಮಾನದಂತೆ, 3862 ಶಾಲೆಗಳಲ್ಲಿ 9154.80 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಯೋಜನೆ ಅನುಷ್ಠಾನಗೊಳ್ಳಲಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಶಿಕ್ಷಣವನ್ನು ಬಲಪಡಿಸುವ ಉದ್ದೇಶದಿಂದ 5,000 ಶಾಲೆಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯಗಳು…

Read More

Video: ಕಾಡುಕೋಣ ಹೇಗೆ ಘೀಳಿಡುತ್ತಿದೆ ಗೊತ್ತಾ? ಈ ವಿಡಿಯೋ ನೋಡಿ – Kannada News | Have you ever seen a wild gaur roar, video goes viral

ಮಾನವನ ಸ್ವಾರ್ಥಕ್ಕೆ ಕಾಡು ಪ್ರಾಣಿಗಳ (wild animals) ಆವಾಸ ಸ್ಥಾನಗಳು ನಾಶವಾಗುತ್ತಿದೆ. ಹೀಗಾಗಿ ಕ್ರೂರ ಪ್ರಾಣಿಗಳು ಜನವಸತಿ ಪ್ರದೇಶದತ್ತ ಬರುತ್ತಿವೆ. ಅದಲ್ಲದೇ, ಈ ಕಾಡುಕೋಣಗಳು ಜನರ ಮೇಲೆ ದಾಳಿ ಮಾಡುವ ಸುದ್ದಿಗಳನ್ನು ನೀವು ಕೇಳಿರುತ್ತೀರಿ.  ವೈರಲ್‌ ಆಗಿರುವ ಈ ವಿಡಿಯೋದಲ್ಲಿ ದೈತ್ಯಾಕಾರದ ಕಾಡು ಕೋಣ (wild gaur) ಘೀಳಿಡುವುದನ್ನು ನೋಡಿದ್ರೆ ಮೈ ಜುಮ್ ಎನ್ನುತ್ತೆ. ಇದಕ್ಕೆ ಸಂಬಂಧಿಸಿದ ಕ್ಲಿಪಿಂಗ್‌ ವೈರಲ್‌ ಆಗುತ್ತಿದ್ದಂತೆ ಈ ದೃಶ್ಯ ನೋಡಿದ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಸಿ ಆರ್ ನಾಗೇಶ್ (C. R…

Read More

ರೋಹಿತ್ ಶೆಟ್ಟಿ ಮನೆಮೇಲಿನ ದಾಳಿಗೆ ನಾಲ್ಕು ತಿಂಗಳ ಹಿಂದೆಯೇ ನಡೆದಿತ್ತು ಪ್ಲ್ಯಾನ್ – Kannada News | Rohit Shetty Attack: Bishnoi Gang Targets Bollywood, Police Probe Intensifies

ಬಾಲಿವುಡ್‌ನಲ್ಲಿ ಈಗ ಭಯದ ವಾತಾವರಣ ಸೃಷ್ಟಿ ಆಗಿದೆ. ಏಕೆಂದರೆ ಕಳೆದ ಕೆಲವು ತಿಂಗಳುಗಳಲ್ಲಿ, ಅನೇಕ ಪ್ರಸಿದ್ಧ ಮತ್ತು ಜನಪ್ರಿಯ ಸೆಲೆಬ್ರಿಟಿಗಳ ಮನೆಗಳ ಮೇಲೆ ಗುಂಡಿನ ದಾಳಿ ನಡೆದಿದೆ. ಕೆಲವು ದಿನಗಳ ಹಿಂದೆ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿತ್ತು. ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಗುಂಡಿನ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಪೋಸ್ಟ್ ಮಾಡುವ ಮೂಲಕ ಬಿಷ್ಣೋಯ್ ಗ್ಯಾಂಗ್ ಘಟನೆಯ ಜವಾಬ್ದಾರಿಯನ್ನು…

Read More