Category Archives: Blog

Your blog category

Silver Jewellery: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು! – Kannada News | Astrology: Which Zodiac Signs Should Wear Silver for Prosperity and Health?

ಜ್ಯೋತಿಷ್ಯದಲ್ಲಿ ಬೆಳ್ಳಿಯನ್ನು ಬಹಳ ಮುಖ್ಯ ಮತ್ತು ವಿಶೇಷವೆಂದು ಪರಿಗಣಿಸಲಾಗುತ್ತದೆ. ಬೆಳ್ಳಿ ಚಂದ್ರ ಮತ್ತು ಶುಕ್ರನೊಂದಿಗೆ ಸಂಬಂಧ ಹೊಂದಿದೆ. ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ಚಂದ್ರನ ಸ್ಥಾನ ಬಲವಾಗಿದ್ದರೆ ವ್ಯಕ್ತಿಯು ಉತ್ತಮ ಆರೋಗ್ಯವನ್ನು ಹೊಂದಿರುತ್ತಾನೆ ಮತ್ತು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಮೇಲುಗೈ ಸಾಧಿಸುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿಯೇ ಜನರು ತಮ್ಮ ಕೈಗಳಿಗೆ ಬೆಳ್ಳಿ ಉಂಗುರಗಳು ಅಥವಾ ಬಳೆಗಳನ್ನು ಧರಿಸುತ್ತಾರೆ. ಹಾಗಾದರೆ, ಯಾವ ರಾಶಿಗಳಿಗೆ ಬೆಳ್ಳಿ ಬಳೆ ಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಯಾವ ರಾಶಿಯವರು ಬೆಳ್ಳಿ ಬಳೆ ಧರಿಸುವುದನ್ನು ತಪ್ಪಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಈ ಮೂರು ರಾಶಿಗಳಿಗೆ ಬೆಳ್ಳಿ ತುಂಬಾ ಶುಭ:

ಜ್ಯೋತಿಷ್ಯದ ಪ್ರಕಾರ, ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಯ ಅಡಿಯಲ್ಲಿ ಜನಿಸಿದವರು ಖಂಡಿತವಾಗಿಯೂ ಬೆಳ್ಳಿಯ ಧರಿಸಬೇಕು. ಬೆಳ್ಳಿ ಈ ಮೂರು ರಾಶಿಗಳಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ಮೂರೂ ರಾಶಿಗಳನ್ನು ನೀರಿನ ಅಂಶಕ್ಕೆ ಸೇರಿದವು ಎಂದು ಪರಿಗಣಿಸಲಾಗುತ್ತದೆ. ಬೆಳ್ಳಿಯು ನೀರಿನ ಅಂಶದೊಂದಿಗೆ ಸಹ ಸಂಬಂಧಿಸಿದೆ. ಆದ್ದರಿಂದ, ಈ ಮೂರು ರಾಶಿಗಳ ಅಡಿಯಲ್ಲಿ ಜನಿಸಿದವರಿಗೆ ಬೆಳ್ಳಿ ಧರಿಸುವುದು ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಬೆಳ್ಳಿಯು ಚಂದ್ರ ಮತ್ತು ಶುಕ್ರನೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ. ಚಂದ್ರನನ್ನು ಮನಸ್ಸು, ಆಲೋಚನೆಗಳು ಮತ್ತು ಮಾನಸಿಕ ಶಾಂತಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಶುಕ್ರವು ಸಂತೋಷ, ಸೌಂದರ್ಯ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಈ ಎರಡು ಗ್ರಹಗಳು ವ್ಯಕ್ತಿಯ ಜಾತಕದಲ್ಲಿ ಬಲವಾಗಿದ್ದರೆ, ಜೀವನದಲ್ಲಿ ಶಾಂತಿ ಮತ್ತು ಸಮತೋಲನವು ಆಳುತ್ತದೆ ಎಂದು ಹೇಳಲಾಗುತ್ತದೆ.

ಯಾವ ರಾಶಿಯವರು ಬೆಳ್ಳಿ ಧರಿಸಬಾರದು?

ಜ್ಯೋತಿಷ್ಯದ ಪ್ರಕಾರ, ಮೇಷ, ಸಿಂಹ ಮತ್ತು ಧನು ರಾಶಿಯ ಅಡಿಯಲ್ಲಿ ಜನಿಸಿದವರು ಬೆಳ್ಳಿ ಬಳೆ ಅಥವಾ ಅದರಿಂದ ಮಾಡಿದ ಆಭರಣ ಧರಿಸುವುದನ್ನು ತಪ್ಪಿಸಬೇಕು. ಬೆಳ್ಳಿ ಧರಿಸುವುದರಿಂದ ಮಾನಸಿಕ ಒತ್ತಡ, ಆರ್ಥಿಕ ನಷ್ಟ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು, ಆದ್ದರಿಂದ ಈ ಮೂರು ರಾಶಿಗಳಲ್ಲಿ ಜನಿಸಿದವರು ಬೆಳ್ಳಿ ಬಳೆ ಅಥವಾ ಇತರ ಬೆಳ್ಳಿ ಆಭರಣಗಳನ್ನು ಧರಿಸುವುದನ್ನು ತಪ್ಪಿಸಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಲ್ಯಾಂಡ್​​​ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ – Kannada News | Landlord Movie Tax Exemption: Duniya Vijay’s Social Drama Gets CM Siddaramaiah’s Support

ಸಾಮಾಜಿಕ ಅಸಮಾನತೆ ಹಾಗೂ ಜಾತಿ ಶೋಷಣೆ ವಿಷಯವಿರುವ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್​​​ಲಾರ್ಡ್’ ಸಿನಿಮಾ (Land Lord Movie) ಜನವರಿ 23ರಂದು ರಿಲೀಸ್ ಆಗಿದೆ. ವಿಮರ್ಶಕರಿಂದ ಈ ಚಿತ್ರ ಮೆಚ್ಚುಗೆ ಪಡೆದಿದೆ. ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಇದರಿಂದ ಚಿತ್ರಕ್ಕೆ ಮತ್ತಷ್ಟು ಬೆಂಬಲ ಸಿಕ್ಕಂತೆ ಆಗಿದ್ದು, ಹೆಚ್ಚು ಜನರನ್ನು ತಲುಪಲು ಈ ಬೆಳವಣಿಗೆ ಸಹಕಾರಿ ಆಗಲಿದೆ.

‘ಲ್ಯಾಂಡ್​​ಲಾರ್ಡ್ 70ರ ದಶಕದ ಕಥೆ ಹೊಂದಿದೆ. ರಾಚಯ್ಯ (ದುನಿಯಾ ವಿಜಯ್), ನಿಂಗವ್ವ (ರಚಿತಾ ರಾಮ್) ಮಗಳು ಭಾಗ್ಯಾ (ರಿತನ್ಯಾ ರಾಮ್) ಜೊತೆ ಹಾಯಾಗಿ ಜೀವನ ನಡೆಸುತ್ತಿರುತ್ತಾರೆ. ಆ ಊರಿನಲ್ಲಿ ಸಣ್ಣ ಧಣಿ (ರಾಜ ಬಿ. ಶೆಟ್ಟಿ) ಪಾರುಪತ್ಯ. ಆತ ಹೇಳಿದಂತೆ ನಡೆಯಬೇಕು. ಯಾರ ಬಳಿಯೂ ಜಮೀನು ಇರಬಾರದು ಎಂಬುದು ಆತನ ಆಜ್ಞೆ. ತಾವೇ ಬೆಳೆದ ಬೆಳೆಯಲ್ಲಿ ಸಿಗೋದು ಒಂದು ಹಿಡಿ ಮಾತ್ರ. ಇದನ್ನು ಪ್ರಶ್ನಿಸಿದ ಭಾಗ್ಯಾಳ ಪ್ರಿಯಕರನ ಸುಟ್ಟು ಕೊಲ್ಲಲಾಗುತ್ತದೆ. ಈ ಅಸಮಾನತೆ ವಿರುದ್ಧ ರಾಚಯ್ಯ ಸಿಡಿದೇಳುತ್ತಾರೆ. ಈ ರೀತಿಯಲ್ಲಿ ಸಿನಿಮಾ ಇದೆ.

‘ಲ್ಯಾಂಡ್​​ಲಾರ್ಡ್’ ಚಿತ್ರವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದಾರೆ. ಈ ಮೊದಲು ವಿಜಯ್ ಹಾಗೂ ಜಡೇಶ್ ಕುಮಾರ್ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ತೆರಿಗೆ ವಿನಾಯಿತಿ
ಕೊಡುವಂತೆ ಮನವಿ ಮಾಡಿದ್ದರು. ಈ ವೇಳೆ ಸಿನಿಮಾ ನೋಡದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈಗ ಸಂಬಂಧಪಟ್ಟ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ನೀಡಲು ಸೂಚನೆ ಸಿದ್ದರಾಮಯ್ಯ ನೀಡಿದ್ದಾರೆ. ತೆರಿಗೆ ವಿನಾಯಿತಿ ಸಿಗುವುದರಿಂದ ಟಿಕೆಟ್ ದರ ಕಡಿಮೆ ಆಗಲಿದೆ.

ಇದನ್ನೂ ಓದಿ: ಭೂತ-ಪ್ರೇತಗಳ ‘ರಕ್ಕಸಪುರ’ದಲ್ಲಿ ರಾಜ್ ಬಿ ಶೆಟ್ರು ರಕ್ಷಕನಾ-ರಾಕ್ಷಸನಾ?

‘ಲ್ಯಾಂಡ್​​ಲಾರ್ಡ್’ ಸಿನಿಮಾ ಜನವರಿ 23ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಬುಕ್ ಮೈ ಶೋನನಲ್ಲಿ ಸುಮಾರು ಮೂರು ಸಾವಿರ ಜನ ರೇಟಿಂಗ್ ನೀಡಿದ್ದು, 9.4/10 ಸಿಕ್ಕಿದೆ. ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ನಟನೆಯನ್ನು ಕೊಂಡಾಡಿದ್ದಾರೆ. ಈ ಚಿತ್ರದ ಮೂಲಕ ದುನಿಯಾ ವಿಜಯ್ ಮಗಳು ರಿತನ್ಯ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ ಎಂಬುದು ವಿಶೇಷ.

ವರದಿ: ಈರಣ್ಣಾ ಬಸವ 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:15 pm, Tue, 3 February 26

Source link

ತೀವ್ರವಾಗಿ ಕುಸಿದ ‘ಬಾರ್ಡರ್ 2’ ಸಿನಿಮಾ ಕಲೆಕ್ಷನ್; ಮುಂದೇನು ಪರಿಸ್ಥಿತಿ? – Kannada News | Border 2 movie box office collection reaches single digit on 11th day

ಬಹುತಾರಾಗಣ ಇರುವ ‘ಬಾರ್ಡರ್ 2’ ಸಿನಿಮಾ (Border 2 Movie) ಆರಂಭದಲ್ಲೇ ಜೋರಾಗಿ ಅಬ್ಬರಿಸಿತು. ದೇಶಭಕ್ತಿ ಕಥೆ ಹೊಂದಿರುವ ಈ ಚಿತ್ರಕ್ಕೆ ಜನರಿಂದ ಮೆಚ್ಚುಗೆ ಸಿಕ್ಕಿತು. ಅದರ ಪರಿಣಾಮವಾಗಿ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಕಲೆಕ್ಷನ್ ಆಯಿತು. ಆದರೆ ಈಗ ಈ ಸಿನಿಮಾದ ಕಲೆಕ್ಷನ್ (Border 2 Collection) ಕುಸಿತ ಕಂಡಿದೆ. 11ನೇ ದಿನಕ್ಕೆ ಈ ಸಿನಿಮಾದ ಕಲೆಕ್ಷನ್ ತೀವ್ರವಾಗಿ ಕುಸಿದಿದೆ. ಸನ್ನಿ ಡಿಯೋಲ್, ವರುಣ್ ಧವನ್, ಅಹಾನ್ ಶೆಟ್ಟಿ, ದಿಲ್ಜಿತ್ ದೊಸಾಂಜ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಮೊದಲ ದಿನ ‘ಬಾರ್ಡರ್ 2’ ಸಿನಿಮಾ 30 ಕೋಟಿ ರೂಪಾಯಿ ಗಳಿಸಿತ್ತು. 2ನೇ ದಿನ 36.5 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಮೂರನೇ ದಿನ 54.5 ಕೋಟಿ ರೂಪಾಯಿ ಗಳಿಕೆ ಆಯಿತು. 4ನೇ ದಿನ ಬರೋಬ್ಬರಿ 59 ಕೋಟಿ ರೂಪಾಯಿ ಆದಾಯ ಹರಿದುಬಂತು. ಆ ಬಳಿಕ ‘ಬಾರ್ಡರ್ 2’ ಸಿನಿಮಾದ ಕಲೆಕ್ಷನ್​​ನಲ್ಲಿ ಕುಸಿತ ಕಾಣಲು ಆರಂಭ ಆಯಿತು.

‘ಬಾರ್ಡರ್ 2’ ಚಿತ್ರದ ಕಲೆಕ್ಷನ್ 11ನೇ ದಿನಕ್ಕೆ ಒಂದಕ್ಕಿಗೆ ಕುಸಿದಿದೆ. Sacnilk ವರದಿ ಪ್ರಕಾರ 11ನೇ ದಿನ ಈ ಸಿನಿಮಾಗೆ ಕೇವಲ 5.75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಆದ್ದರಿಂದ ಚಿತ್ರತಂಡಕ್ಕೆ ಮುಂದೇನು ಎಂಬ ಚಿಂತೆ ಶುರು ಆಗಿರುತ್ತದೆ. ವಾರಾಂತ್ಯದ ದಿನಗಳಲ್ಲಿ ಮಾತ್ರ ಸ್ವಲ್ಪ ಚೇತರಿಕೆ ಕಾಣುವ ಸಾಧ್ಯತೆ ಇರುತ್ತದೆ. ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಈವರೆಗೂ ಭಾರತದ ಬಾಕ್ಸ್ ಆಫೀಸ್​​ನಲ್ಲಿ ‘ಬಾರ್ಡರ್ 2’ ಸಿನಿಮಾಗೆ 281 ಕೋಟಿ ರೂಪಾಯಿ ಕಮಾಯಿ ಆಗಿದೆ. ಇದು ಉತ್ತಮ ಕಲೆಕ್ಷನ್ ಹೌದಾದರೂ ದೊಡ್ಡ ಮಟ್ಟದ ನಿರೀಕ್ಷೆಯನ್ನು ತಲುಪಿಲ್ಲ ಎನ್ನಬಹುದು. ವಿಮರ್ಶೆಯ ದೃಷ್ಟಿಯಿಂದ ನೋಡಿದರೆ ಪ್ರೇಕ್ಷಕರು ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ವಿಎಫ್​ಎಕ್ಸ್ ಗುಣಮಟ್ಟದ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ‘ಬಾರ್ಡರ್ 2’ ಸಿನಿಮಾ ಯಶಸ್ಸು: ‘ಬಾರ್ಡರ್ 3’ ಬರೋದು ಖಚಿತ

‘ಧುರಂಧರ್’ ಸಿನಿಮಾದಲ್ಲಿ ಕೂಡ ದೇಶಭಕ್ತಿ ಕಥಾಹಂದರ ಇತ್ತು. ಆ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ಬಳಿಕ ರಿಲೀಸ್ ಆಗಿದ್ದೇ ‘ಬಾರ್ಡರ್ 2’ ಸಿನಿಮಾ. ಈ ಸಿನಿಮಾ ನೋಡಿದ ಎಲ್ಲರೂ ‘ಧುರಂದರ್’ ಜೊತೆ ಹೋಲಿಕೆ ಮಾಡಲು ಆರಂಭಿಸಿದರು. ಜನರಿಗೆ ‘ಧುರಂಧರ್’ ರೀತಿಯ ಗುಣಮಟ್ಟ ‘ಬಾರ್ಡರ್ 2’ ಸಿನಿಮಾದಲ್ಲಿ ಕಾಣಿಸಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

10 ವರ್ಷಗಳ ದ್ವೇಷಕ್ಕೆ ಹರಿದ ನೆತ್ತರು: ತಾಯಿ ಜೊತೆ ಓಡಿ ಹೋದವನ ಬರ್ಬರವಾಗಿ ಕೊಂದ ವ್ಯಕ್ತಿ – Kannada News | Belagavi Revenge Murder: Man Hacked 16 Times Over Decade Old Elopement

ಬೆಳಗಾವಿ, ಫೆಬ್ರವರಿ 03: ಅನೈತಿಕ ಸಂಬಂಧ ವಿಚಾರವಾಗಿ ವ್ಯಕ್ತಿಯೋರ್ವನನ್ನು ಮಚ್ಚಿನಿಂದ ಸಿಕ್ಕ ಸಿಕ್ಕ ಕಡೆ ಕೊಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟಿಯಲ್ಲಿ ನಡೆದಿದೆ. ಸಡೋಣಿ ಗ್ರಾಮದ ಬಸಪ್ಪ ಹೊಸಮನಿ(51) ಕೊಲೆಯಾದ ವ್ಯಕ್ತಿಯಾಗಿದ್ದು, ಈರಯ್ಯ ಮಠಪತಿ ಆರೋಪಿಯಾಗಿದ್ದಾನೆ. ಭೀಕರ ಕೊಲೆ ಕಂಡು ಗ್ರಾಮಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿದೆ.

10 ವರ್ಷಗಳ ಹಿಂದೆ ಈರಯ್ಯ ತಾಯಿ ಜೊತೆ ಬಸಪ್ಪ ಮಹಾರಾಷ್ಟ್ರದ ಕೊಲ್ಹಾಪುರಕ್ಕೆಓಡಿಹೋಗಿದ್ದ. ಈ ವೇಳೆ ಆರೋಪಿ ಈರಯ್ಯನಿಗೆ 18 ವರ್ಷ ವಯಸ್ಸು. ಹಲವು ವರ್ಷಗಳ ಬಳಿಕ ಈರಯ್ಯನ ತಾಯಿಯನ್ನ ಕೊಲ್ಹಾಪುರದಲ್ಲಿ ಬಿಟ್ಟು ಗ್ರಾಮಕ್ಕೆ ನಾಲ್ಕು ದಿನಗಳ ಹಿಂದೆಯಷ್ಟೇ ಬಸಪ್ಪ ಬಂದಿದ್ದ. ಇದೇ ವಿಚಾರವಾಗಿ ದ್ವೇಷ ಸಾಧಿಸುತ್ತಿದ್ದ ಆರೋಪಿ ಈರಯ್ಯ ಆತನನ್ನು ಕೊಲೆ ಮಾಡಿದ್ದಾನೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನು ಬಸಪ್ಪ ಹೊಸಮನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಸಿನಿಮಾ ಸ್ಟೈಲ್​ನಲ್ಲಿ ಶವದ ಮೇಲೆ ಕಾಲಿಟ್ಟು ಆರೋಪಿ ಈರಯ್ಯನೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ನಿನ್ನೆ ಸಂಜೆ ಬಸಪ್ಪನ ಅಡ್ಡಗಟ್ಟಿ 16 ಬಾರಿ ಮಚ್ಚಿನಿಂದ ಕೊಚ್ಚಿ ಕೊಂದಿದ್ದ ಈತ, ಪೊಲೀಸರು ಬರುವವರೆಗೂ ಶವದ ಮೇಲೆ ಕಾಲಿಟ್ಟು ನಿಂತಿದ್ದ ಎನ್ನಲಾಗಿದೆ. ಪ್ರಕರಣ ಸಂಬಂಧ ಆರೋಪಿ ಈರಯ್ಯನ ಬಂಧಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಪತ್ನಿಯೊಂದಿಗೆ ಅನೈತಿಕ ಸಂಬಂಧ ಶಂಕೆ; ಮದ್ಯ ಕುಡಿಸಿ ಸ್ನೇಹಿತನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಯುವಕ

ಕೌಟುಂಬಿಕ ಕಲಹಕ್ಕೆ ಯುವತಿ ಬಲಿ

ಕೌಟುಂಬಿಕ ಕಲಹಕ್ಕೆ ಯುವತಿ ಬಲಿಯಾಗಿರುವ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ತೂಮಿನಾಡಿನಲ್ಲಿ ನಡೆದಿದೆ.  ಜುಮೈಲ(18) ಮೃತ ಯುವತಿಯಾಗಿದ್ದು, ಆರೋಪಿ ಉಮರ್ ಫಾರೂಕ್​​ನ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಫಾರೂಕ್​ ಹಾಗೂ ಪತ್ನಿ ತಾಹಿರ ನಡುವೆ ಕೌಟುಂಬಿಕ ಕಲಹ ಇತ್ತು ಎನ್ನಲಾಗಿದ್ದು, ಫಾರೂಕ್​ನ‌ ನಾದಿನಿ ಮನೆಯಲ್ಲಿ ಪತ್ನಿ ತಾಹಿತ ಮತ್ತು ಪುತ್ರಿ ಜುಮೈಲ ವಾಸವಿದ್ದರು. ಕೌಟುಂಬಿಕ ಕಲಹ ತಾರಕಕ್ಕೇರಿ ವಿಚ್ಛೇದನದ ಮಾತುಕತೆ ಕೂಡ ನಡೆದಿತ್ತು. ಈ ವೇಳೆ ತನ್ನ ಹೆಸರಿಗೆ ಆಸ್ತಿ ಮಾಡಿಕೊಡುವಂತೆ ಫಾರೂಕ್​ ಬೇಡಿಕೆ ಇಟ್ಟಿದ್ದ. ಇದೇ ವಿಚಾರವಾಗಿ ನಿನ್ನೆ ಉಮರ್ ಫಾರೂಕ್​ ಹಾಗೂ ಜುಮೈಲ ಚಿಕ್ಕಪ್ಪನ ನಡುವೆ ಜಗಳ ನಡೆದಿದೆ. ಜಗಳ ಬಿಡಿಸುವ ವೇಳೆ ಕತ್ತಿ ತಗುಲಿ ಜುಮೈಲ ಮೃತಪಟ್ಟಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Tuesday Rituals: ಮಂಗಳವಾರ ಈ ವಸ್ತುಗಳನ್ನು ಖರೀದಿಸಲೇಬೇಡಿ; ಅಪಾಯ ತಪ್ಪಿದ್ದಲ್ಲ! – Kannada News | Tuesday Hanuman Rituals: What Not to Do for Good Fortune and Peace

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಮಂಗಳವಾರವನ್ನು ಶ್ರೀ ರಾಮನ ಪರಮ ಭಕ್ತ ಹಾಗೂ ಶಿವನ ರುದ್ರ ಅವತಾರವಾದ ಹನುಮಂತನಿಗೆ ಸಮರ್ಪಿಸಲಾಗಿದೆ. ಈ ದಿನ ಬಜರಂಗಬಲಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ಮತ್ತು ಅನೇಕ ಭಕ್ತರು ಮಂಗಳವಾರ ಉಪವಾಸವನ್ನು ಆಚರಿಸುತ್ತಾರೆ. ಹನುಮಂತನನ್ನು ಭಕ್ತಿ, ಶಕ್ತಿ ಮತ್ತು ನಿರ್ಭಯತೆಯ ಸಂಕೇತವಾಗಿ ಪೂಜಿಸಲಾಗುತ್ತದೆ.

ಧಾರ್ಮಿಕ ನಂಬಿಕೆಯಂತೆ, ಮಂಗಳವಾರ ಹನುಮಂತನನ್ನು ನಿಷ್ಠೆಯಿಂದ ಪೂಜಿಸಿದರೆ, ಜೀವನದಲ್ಲಿನ ದುಃಖ–ತೊಂದರೆಗಳು ದೂರವಾಗುತ್ತವೆ, ಶತ್ರುಭಯ ನಿವಾರಣೆಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ಲಭಿಸುತ್ತದೆ. ಮಂಗಳವಾರವು ಹನುಮಂತನ ಜೊತೆಗೆ ಮಂಗಳ ಗ್ರಹಕ್ಕೂ ಸಂಬಂಧಿಸಿದೆ. ಆದ್ದರಿಂದ, ಈ ದಿನದಂದು ಕೆಲವು ನಿಯಮಗಳನ್ನು ಪಾಲಿಸುವುದು ಮತ್ತು ಕೆಲವು ವಸ್ತುಗಳನ್ನು ತಪ್ಪಿಸುವುದು ಶುಭಕರವೆಂದು ಶಾಸ್ತ್ರಗಳು ಹೇಳುತ್ತವೆ.

ಮಂಗಳವಾರ ಈ ಕೆಲಸ ಮಾಡಲೇಬೇಡಿ:

ಮಂಗಳವಾರದಂದು ಕಪ್ಪು ಬಟ್ಟೆಗಳನ್ನು ಧರಿಸುವುದು ಅಥವಾ ಖರೀದಿಸುವುದು ಶುಭಕರವಲ್ಲ ಎಂದು ನಂಬಲಾಗಿದೆ. ಕಪ್ಪು ಬಣ್ಣವನ್ನು ಈ ದಿನ ನಕಾರಾತ್ಮಕ ಶಕ್ತಿಯೊಂದಿಗೆ ಸಂಪರ್ಕಿಸಲಾಗುತ್ತದೆ. ಇದೇ ರೀತಿ, ಗಾಜಿನಿಂದ ಮಾಡಿದ ವಸ್ತುಗಳನ್ನು ಖರೀದಿಸುವುದನ್ನು ಸಹ ತಪ್ಪಿಸಬೇಕು. ಧಾರ್ಮಿಕ ನಂಬಿಕೆಯಂತೆ, ಈ ದಿನ ಗಾಜಿನ ವಸ್ತು ಖರೀದಿಸುವುದು ಆರ್ಥಿಕ ನಷ್ಟ ಅಥವಾ ಅಸ್ಥಿರತೆ ಉಂಟಾಗಬಹುದು.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಮಂಗಳವಾರ ಹೊಸ ಭೂಮಿ ಖರೀದಿಸುವುದು ಅಥವಾ ಭೂಮಿ ಪೂಜೆ ಮಾಡುವುದು ಕೂಡ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಭೂಮಿ ಸಂಬಂಧಿತ ಕಾರ್ಯಗಳು ಮಾಡಿದರೆ, ಮನೆಯಲ್ಲಿನ ಸಮೃದ್ಧಿ ಕುಗ್ಗಬಹುದು ಎಂಬ ನಂಬಿಕೆಯಿದೆ. ಇದಲ್ಲದೇ ಈ ದಿನ ಮಾಂಸ, ಮದ್ಯ ಹಾಗೂ ತಾಮಸಿಕ ಆಹಾರವನ್ನು ಸೇವಿಸುವುದು, ಖರೀದಿಸುವುದನ್ನೂ ತಪ್ಪಿಸುವುದು ಉತ್ತಮ. ವಿಶೇಷವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸಬಾರದು ಎಂದು ಶಾಸ್ತ್ರಗಳು ಸೂಚಿಸುತ್ತವೆ. ಮಂಗಳವಾರ ಶುದ್ಧತೆ ಮತ್ತು ಸಂಯಮದ ದಿನವಾಗಿರುವುದರಿಂದ ಸಾತ್ವಿಕ ಜೀವನಶೈಲಿಗೆ ಒತ್ತು ನೀಡುವುದು ಅಗತ್ಯ.

ಅದೇ ರೀತಿ, ಸೌಂದರ್ಯವರ್ಧಕ ವಸ್ತುಗಳನ್ನು ಮಂಗಳವಾರ ಖರೀದಿಸುವುದನ್ನು ಸಹ ನಿಷೇಧಿಸಲಾಗಿದೆ. ಕಾರಣ, ಈ ದಿನ ಹನುಮಂತನಿಗೆ ಸಿಂಧೂರ ಅರ್ಪಣೆ ಮಾಡಲಾಗುತ್ತದೆ. ಆದ್ದರಿಂದ, ಸಿಂಧೂರ ಅಥವಾ ಸೌಂದರ್ಯ ಸಂಬಂಧಿತ ವಸ್ತುಗಳನ್ನು ಸ್ವಂತ ಉಪಯೋಗಕ್ಕಾಗಿ ಖರೀದಿಸುವುದನ್ನು ಅಶುಭವೆಂದು ಪರಿಗಣಿಸಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡ: ಇಲ್ಲಿ ಇಡೀ ಗ್ರಾಮಕ್ಕೇ ಸಿಸಿಟಿವಿ ಕಣ್ಗಾವಲು! ಅಪರಾಧ ಕೃತ್ಯವೂ ಇಳಿಕೆ – Kannada News | Dharwad Mummigatti Village Under Full CCTV Surveillance: Crime Rate Drops, Model Gram Panchayat Emerges

ಇಡೀ ಮುಮ್ಮಿಗಟ್ಟಿ ಗ್ರಾಮಕ್ಕೇ ಸಿಸಿಟಿವಿ ಕಣ್ಗಾವಲು!Image Credit source: tv9

ಧಾರವಾಡ, ಫೆಬ್ರವರಿ 3: ಧಾರವಾಡ (Dharawad) ತಾಲೂಕಿನ ಮುಮ್ಮಿಗಟ್ಟಿ ಗ್ರಾಮ ಸುಮಾರು 12 ಸಾವಿರ ಜನಸಂಖ್ಯೆ ಹೊಂದಿದ್ದು, ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡೇ ಇದೆ. ಈ ಗ್ರಾಮದ ಪಕ್ಕ ಹೋಗುವ ವಾಹನಗಳ ಮೂಲಕ ಹೊರಗಿನ ಜನರು ಅಕ್ರಮಗಳನ್ನು ಎಸಗುವುದು ಸಾಮಾನ್ಯದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್​ನಲ್ಲಿ ಮುಖ್ಯವಾದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಗ್ರಾಮ ಪಂಚಾಯತ್​​ಗಳ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡಬೇಕೆಂದರೂ ಅನುದಾನದ ಕೊರತೆ ಎದ್ದು ಕಾಣುತ್ತೆ. ಆದರೆ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವರ್ಷಕ್ಕೆ 50 ಲಕ್ಷ ರೂಪಾಯಿ ತೆರಿಗೆ ಸಂಗ್ರಹಿಸಿದ ಸಾಧನೆ ಒಂದು ಕಡೆಯಾದರೆ, ಇದೀಗ ಇಡೀ ಗ್ರಾಮದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿರುವುದು ಮತ್ತೊಂದು ಸಾಧನೆ.

ಬಹುತೇಕ ಗ್ರಾಮ ಪಂಚಾಯತ್​ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನೆರವೇರಿಸಲು ಅನುದಾನ ಕೊರತೆ ಇರುತ್ತದೆ. ಆದರೆ, ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಿದ ಮೇಲೂ ಉಳಿದ ಹಣದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಅಹಿತರ ಘಟನೆಗಳು ನಡೆಯುವುದು ನಿಂತು ಹೋಗಿವೆ.

7.5 ಲಕ್ಷ ರೂ.ನಲ್ಲಿ ಹೆಚ್​ಡಿ ಸಿಸಿಟಿವಿ ಕ್ಯಾಮರಾ ಅಳವಡಿಕೆ

ಇದೀಗ ಒಟ್ಟು 22 ಹೈ ಡೆಫಿನಿಶನ್ ಸಿಸಿ ಟಿವಿ ಕ್ಯಾಮರಾಗಳನ್ನು ಗ್ರಾಮದಲ್ಲಿ ಅಳವಡಿಸಲಾಗಿದ್ದು, ಇದಕ್ಕೆ ಸುಮಾರು 7.5 ಲಕ್ಷ ರೂಪಾಯಿ ಖರ್ಚಾಗಿದೆ. ಅಲ್ಲದೇ ಸುಮಾರು ಒಂದು ತಿಂಗಳವರೆಗೆ ಬ್ಯಾಕ್ ಅಪ್ ಇಟ್ಟುಕೊಳ್ಳಬಹುದಾಗಿದೆ. ಎಲ್ಲವನ್ನೂ ಗ್ರಾಮ ಪಂಚಾಯತ್ ಕಚೇರಿಯಿಂದಲೇ ನಿರ್ವಹಿಸಲಾಗುತ್ತಿದೆ. ಅಲ್ಲದೇ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಉಳಿದ ಸದಸ್ಯರೆಲ್ಲ ಸೇರಿ ಸಭೆ ನಡೆಸಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಮೊದಲಿಗೆ ಎಲ್ಲರೂ ಗ್ರಾಮದಲ್ಲಿ ತಿರುಗಾಡಿ ಎಲ್ಲೆಲ್ಲ ಈ ಕ್ಯಾಮೆರಾಗಳನ್ನು ಅಳವಡಿಸಬೇಕು ಅನ್ನೋದನ್ನು ನಿರ್ಧರಿಸಿದರು. ಬಳಿಕ ಗರಗ್ ಠಾಣೆಯ ಪೊಲೀಸರಿಗೂ ಈ ಮಾಹಿತಿಯನ್ನು ನೀಡಲಾಗಿ, ಅವರು ಕೂಡ ಸಲಹೆಗಳನ್ನು ನೀಡಿದರು. ಅದೆಲ್ಲದರ ಪರಿಣಾಮವಾಗಿ ಇಂದು ಇಡೀ ಗ್ರಾಮವೇ ಸಿಸಿ ಟಿವಿ ಕ್ಯಾಮೆರಾಗಳ ಕಣ್ಗಾವಲಿಗೆ ಬಂದಿದೆ.

ಇನ್ನು ಗ್ರಾಮದ ಪಕ್ಕದಲ್ಲಿಯೇ ಸಾಕಷ್ಟು ಕೈಗಾರಿಕೆಗಳಿದ್ದು, ಬೇರೆ ಕಡೆಯಿಂದ ಬಂದಿರುವ ಅನೇಕರು ಇಲ್ಲಿಯೇ ನೆಲೆಸಿದ್ದಾರೆ. ಅಂಥವರೇನಾದರೂ ಅಕ್ರಮ ಕೃತ್ಯ ಎಸಗಿದರೆ ಪತ್ತೆಹಚ್ಚಲು ಈ ಕ್ಯಾಮರಾಗಳ ಮೂಲಕ ಸಾಕಷ್ಟು ಸಹಾಯವಾಗುತ್ತದೆ. ಅಲ್ಲದೇ ಗ್ರಾಮದಲ್ಲಿ ಯುವತಿಯರನ್ನು ಚುಡಾಯಿಸುವುದು, ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಇದೀಗ ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದರಿಂದಾಗಿ, ಅಂಥ ಕೃತ್ಯಗಳಿಗೆ ಬ್ರೇಕ್ ಬಿದ್ದಿದೆ. ಅಲ್ಲದೆ ಮಹಿಳೆಯರು, ಯುವತಿಯರು, ಮಕ್ಕಳು ನೆಮ್ಮದಿಯಾಗಿ ಓಡಾಡಬಹುದು ಎಂಬುದು ಸ್ಥಳೀಯರ ಅನಿಸಿಕೆ.

ಹಿಟ್ ಆ್ಯಂಡ್ ರನ್ ಪ್ರಕರಣಗಳ ಪತ್ತೆಗೂ ನೆರವಾಗ್ತಿವೆ ಸಿಸಿಟಿವಿ

ಜಿಲ್ಲೆಯಲ್ಲಿ ಅತಿ ಹೆಚ್ಚು ಅಪಘಾತ ನಡೆಯುವ ಸ್ಥಳಗಳ ಪೈಕಿ ಈ ಗ್ರಾಮವೂ ಒಂದು. ಅಂಥ ಅಪಘಾತಗಳ ಪೈಕಿ ಹಿಟ್ ಆ್ಯಂಡ್ ರನ್ ಕೇಸುಗಳೇ ಹೆಚ್ಚಾಗಿರುತ್ತವೆ. ಇದೀಗ ಕ್ಯಾಮರಾ ಅಳವಡಿಸಿರುವುದರಿಂದ ಅಪಘಾತ ಮಾಡಿ ಪರಾರಿಯಾದವರು ತಪ್ಪಿಸಿಕೊಳ್ಳುವುದು ಸುಲಭವಲ್ಲ.

ಇದನ್ನೂ ಓದಿ: ಸಾಲ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯ ಕತ್ತು ಸೀಳಿದ ಪತಿ: ಜೀವ ಉಳಿಸೆಂದು ಬೇಡಿಕೊಂಡರೂ ಕರಗಲಿಲ್ಲ ಕ್ರೂರಿಯ ಮನ

ಒಟ್ಟಿನಲ್ಲಿ ಎಷ್ಟೋ ಗ್ರಾಮ ಪಂಚಾಯತ್​ಗಳು ಕುಡಿಯುವ ನೀರನ್ನು ಪೂರೈಸಲು ಹಣವಿಲ್ಲದೇ ಒದ್ದಾಡುವ ಪರಿಸ್ಥಿತಿಯಲ್ಲಿರುವಾಗ ಈ ಗ್ರಾಮ ಪಂಚಾಯತ್ ಅಚ್ಚರಿ ಮೂಡಿಸುವಂಥ ಅಭಿವೃದ್ಧಿಗೆ ಮುಂದಾಗಿರುವುದು ನಿಜಕ್ಕೂ ಅಚ್ಚರಿಯೇ ಸರಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಸ್ಟಾರ್ಟ್ಅಪ್‌ ಕಂಪನಿಯ ಕೆಲಸದ ಸಂಸ್ಕೃತಿಯನ್ನು ಟೀಕಿಸಿದ ಬೆಂಗಳೂರಿನ ಯುವಕ, ಕಾರಣ ಇದೇ ನೋಡಿ – Kannada News | Bengaluru: Startup company fires employee before probation period ends

ಬೆಂಗಳೂರು, ಫೆಬ್ರವರಿ 3: ಬಹುತೇಕ ಖಾಸಗಿ ಕಂಪೆನಿಗಳು(Private Company) ಏಕಾಏಕಿ ಸಂಸ್ಥೆಯಲ್ಲಿರುವ ಕೆಲಸಗಾರರನ್ನು ಅಮಾನತು ಮಾಡುವುದಿದೆ. ಕಂಪೆನಿಯ ಈ ರೀತಿ ನಿರ್ಧಾರಗಳಿಂದ ಉದ್ಯೋಗಸ್ಥರಲ್ಲಿ ಮುಂದೇನು ಎನ್ನುವ ಪ್ರಶ್ನೆಯೊಂದು ಕಾಡುತ್ತದೆ. ಇದೇ ರೀತಿಯ ಅನುಭವ ಬೆಂಗಳೂರಿನ (Bengaluru) ಯುವಕನಿಗೆ ಆಗಿದೆ. ತನ್ನನ್ನು ಕೆಲಸದಿಂದ ವಜಾಗೊಳಿಸಿದ ಸ್ಟಾರ್ಟ್ಅಪ್ ಕಂಪನಿಯ ಕೆಲಸದ ಸಂಸ್ಕೃತಿಯನ್ನು ಟೀಕಿಸಿದ್ದಾನೆ. ಈ ಕುರಿತಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

@_.jeevan._n ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಳ್ಳಲಾದ ಈ ವಿಡಿಯೋದಲ್ಲಿ ಬೆಂಗಳೂರಿನ ಯುವಕ ಸ್ಟಾರ್ಟ್ಅಪ್ ಕಂಪನಿಯ ಬಗ್ಗೆ ಮಾತನಾಡಿದ್ದು, ನನ್ನ 3 ತಿಂಗಳ ಪ್ರೊಬೇಷನರಿ ಅವಧಿ ಪೂರ್ಣಗೊಳ್ಳುವ ಕೆಲವೇ ದಿನಗಳ ಮೊದಲೇ ಅಂದರೆ ಜನವರಿ 30 ರಂದು ತನ್ನನ್ನು ಈ ಕೆಲಸದಿಂದ ವಜಾಗೊಳಿಸಲಾಗಿದೆ. ನನ್ನ ಪ್ರವೇಶವನ್ನು ರದ್ದುಪಡಿಸಲಾಯಿತು. ನಾನು ಈ ಹುದ್ದೆಗಾಗಿ ನನ್ನ ರಕ್ತ ಮತ್ತು ಬೆವರನ್ನು ಅರ್ಪಿಸಿದೆ. ನಾನು 10-7 ದಿನ ಕೆಲಸ ಮಾಡಿದೆ. ಗೊಂದಲದಲ್ಲೇ ಮುನ್ನಡೆದೆ. ಆದರೆ ನಾನು ನನ್ನ ದೃಷ್ಟಿಕೋನಕ್ಕೆ 100% ಬದ್ಧನಾಗಿದ್ದೇನೆ. ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯೂ ಕೇಳಬೇಕಾದ ವಾಸ್ತವ ಪರಿಶೀಲನೆ ಇಲ್ಲಿದೆ: ನಿನ್ನೆ, ಸಂಸ್ಥಾಪಕರು ನನ್ನ ಎದುರು ಕುಳಿತು ಈ ತಂಡದಿಂದ ತೆಗೆದು ಹಾಕುವ ಚರ್ಚೆಗಳು 9 ರಿಂದ 10 ತಿಂಗಳುಗಳಿಂದ ನಡೆಯುತ್ತಿವೆ ಎಂದು ಹೇಳಿದರು ಎಂದು ಇಲ್ಲಿ ಉಲ್ಲೇಖಿಸಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ನೀವು ಮನುಷ್ಯರನ್ನು ಮುಳುಗುವ ಹಡಗಿಗೆ ಕೂರಿಸಿದ್ದೀರಿ. ಕೆಲವು ತಿಂಗಳುಗಳ ಶ್ರಮವನ್ನು ಬಳಸಿಕೊಂಡಿದ್ದೀರಿ. ಒಂದು ತಿಂಗಳ ಮುಂಚೆಯೇ ನಿಮಗೆ ಬೇರೆ ಕೆಲಸ ಹುಡುಕಲು ಅವಕಾಶ ನೀಡಲಾಗಿದೆ. ಅದಕ್ಕಾಗಿ ನೀವು ಕೃತಜ್ಞರಾಗಿರಬೇಕು ಎಂದು ಹೇಳಲಾಯಿತು. ಆದರೆ ಈ ವೃತ್ತಿಜೀವನದ ಅಂತರಕ್ಕೆ ಯಾರು ಉತ್ತರಿಸುತ್ತಾರೆ? ಮಾನಸಿಕ ಬಳಲಿಕೆಗೆ ಯಾರು ಉತ್ತರ ನೀಡುತ್ತಾರೆ? ಸಂದರ್ಶನದ ಸಮಯದಲ್ಲಿ ನಮಗೆ ಹೇಳಿದ ಸುಳ್ಳಿಗೆ ಯಾರು ಉತ್ತರಿಸುತ್ತಾರೆ. 2026 ರಲ್ಲಿ ಉದ್ಯೋಗ ಭದ್ರತೆ ಎನ್ನುವುದು ಕಹಿ ಸತ್ಯ. ಈ ನೇಮಕ ಪ್ರಕ್ರಿಯೆ ಹಾಗೂ ವಜಾಗೊಳಿಸುವಿಕೆಯ ವಿರುದ್ಧ ನಾವು ಧ್ವನಿ ಎತ್ತದಿದ್ದರೆ, ಏನೂ ಬದಲಾಗುವುದಿಲ್ಲ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಕ್ಯಾಬ್ ಡ್ರೈವರ್ ಆಗಿ ಬದುಕು ಕಟ್ಟಿಕೊಂಡ ಈ ವ್ಯಕ್ತಿಯ ದಿನದ ಸಂಪಾದನೆ ಕೇಳಿದ್ರೆ ನೀವು ಶಾಕ್ ಆಗ್ತೀರಾ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದ್ದಂತೆ, ಒಬ್ಬ ಬಳಕೆದಾರ, ನಾವು ಎಷ್ಟು ಬೇಡವಾದರೂ ಎಂದು ಅರಿತುಕೊಳ್ಳುವುದು ಭಯಾನಕವಾಗಿದೆ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಸಮಯ ಪ್ರತಿಫಲ ನೀಡುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೆಚ್ಚು ಚಿಂತಿಸಬೇಡಿ, ನಿಮ್ಮ ಪ್ರಯತ್ನದಲ್ಲೇ ಮುಂದುವರೆಯಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡುವ ಹೆಚ್ಚಿನವರ ಪರಿಸ್ಥಿತಿ ಇದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಟೀಸರ್ ನೋಡಿದವರಿಗೆ ಭಾರೀ ನಿರಾಸೆ; ರಿಲೀಸ್ ದಿನಾಂಕವೂ ರಿವೀಲ್ – Kannada News | Dhurandhar 2 Teaser: Ranveer Singh’s Film Disappoints Fans; Release Date Revealed

ರಣವೀರ್ ಸಿಂಗ್ ನಟನೆಯ, ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ (Dhurandhar Movie) ಮಾಡಿದ ದಾಖಲೆಗಳು ಹಲವು. ಕಳೆದ ವರ್ಷ ಡಿಸೆಂಬರ್​​ನಲ್ಲಿ ‘ಧುರಂಧರ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ. ಸಾಮಾನ್ಯವಾಗಿ ಸೀಕ್ವೆಲ್ ಎಂದಾಗ ಒಂದಷ್ಟು ಸಮಯ ತೆಗೆದುಕೊಳ್ಳಲಾಗುತ್ತದೆ. ಆದರೆ ಆದಿತ್ಯ ಧಾರ್ ಹಾಗಲ್ಲ. ಕೇವಲ ಮೂರೇ ತಿಂಗಳಿಗೆ ಸೀಕ್ವೆಲ್ ತರುತ್ತಿದ್ದಾರೆ. ಮೊದಲೇ ಶೂಟಿಂಗ್ ಮುಗಿದಿರುವುದರಿಂದ, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಸಲಾಗುತ್ತಿದೆ. ಈಗ ಸಿನಿಮಾದ ರಿಲೀಸ್ ದಿನಾಂಕವನ್ನು ಟೀಸರ್ ಮೂಲಕ ಖಚಿತಪಡಿಸಿಯಾಗಿದೆ. ಆದರೆ, ಟೀಸರ್ ನೋಡಿದ ಅನೇಕರಿಗೆ ನಿರಾಸೆ ಆಗಿದೆ.

ರಣವೀರ್ ಸಿಂಗ್ ಅವರು ‘ಧುರಂಧರ್’ ಸಿನಿಮಾದಲ್ಲಿ ಸ್ಪೈ ಆಗಿ ಕಾಣಿಸಿಕೊಳ್ಳುತ್ತಾರೆ. ಪಾಕಿಸ್ತಾನಕ್ಕೆ ತೆರಳೋ ಈ ವ್ಯಕ್ತಿ ಅಲ್ಲಿ ಉಗ್ರಗಾಮಿಗಳ ಜೊತೆ ಬೆರೆತು ಭಾರತಕ್ಕೆ ಸಹಾಯ ಮಾಡುತ್ತಾರೆ. ಇದರಿಂದ ಸಾಕಷ್ಟು ಉಪಯೋಗ ಆಗುತ್ತದೆ. ‘ಧುರಂಧರ್’ ಕ್ಲೈಮ್ಯಾಕ್ಸ್ ಅಲ್ಲಿ ಎರಡನೇ ಪಾರ್ಟ್​ ಹೇಗಿರಲಿದೆ ಎಂಬುದನ್ನು ತೋರಿಸಿದ್ದರು. ಈಗ ಅದನ್ನೇ ಟೀಸರ್ ಎಂದು ಬಿಡಲಾಗಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.
ಇದನ್ನೂ ಓದಿ: ‘ಟಾಕ್ಸಿಕ್​​’ಗೆ ಸೆಡ್ಡು ಹೊಡೆಯಲು ದೊಡ್ಡ ತಂತ್ರ ರೂಪಿಸಿದ ‘ಧುರಂಧರ್’ ನಿರ್ದೇಶಕ

‘ಧುರಂಧರ್ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಸೃಷ್ಟಿಸಿದೆ. ಆ ನಿರೀಕ್ಷೆ ತಲುಪಬೇಕು ಎಂದರೆ ಅದಕ್ಕೆ ತಕ್ಕಂತೆ ಟೀಸರ್ ಬಿಡುಗಡೆ ಮಾಡಬೇಕು. ಆದರೆ, ಹಳೆಯ ವಿಷಯವನ್ನೇ ಮತ್ತೆ ತೋರಿಸಿದರೆ ಸಹಜವಾಗಿಯೇ ಬೇಸರ ಆಗಿಯೇ ಆಗುತ್ತದೆ. ಕನ್ನಡ ಟೀಸರ್ ಕೊನೆಯಲ್ಲಿ, ‘ಇದು ಹೊಸ ಭಾರತ, ಇದು ಮನೆಯ ಒಳಗೆ ನುಗ್ಗಿ ಹೊಡೆಯುತ್ತದೆ, ಕೊಲ್ಲುತ್ತದೆ’ ಎಂಬ ಸಾಲುಗಳು ಇವೆ. ಇದು ಸರಿ ಹೊಂದುತ್ತಿಲ್ಲ. ಈ ಬೆಳವಣಿಗೆಯಿಂದ ‘ಟಾಕ್ಸಿಕ್’ ಚಿತ್ರಕ್ಕೆ ಲಾಭ ಆಗೋ ಸಾಧ್ಯತೆ ಹೆಚ್ಚು.

‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಅವರು ಹಮ್ಜಾ ಅಲಿ ಮಜಾರಿ ಪಾತ್ರ ಮಾಡಿದ್ದಾರೆ. ಜಸ್ಕಿರತ್ ಸಿಂಗ್ ರಂಗಿ ಹೇಗೆ ಹಮ್ಜಾ ಆದರು ಎಂಬ ಜರ್ನಿಯನ್ನು ‘ಧುರಂಧರ್ 2’ ಸಿನಿಮಾದಲ್ಲಿ ಹೇಳಲಾಗುತ್ತಿದೆ ಎನ್ನಲಾಗಿದೆ. ರಿಲೀಸ್​​ಗೆ ಕೆಲವು ದಿನ ಮೊದಲು ‘ಧುರಂಧರ್ 2’ ಟ್ರೇಲರ್ ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ. ಆಗ ಇನ್ನೊಂದಷ್ಟು ಹೊಸ ವಿಷಯಗಳನ್ನು ನಿರೀಕ್ಷಿಸಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತದ ಕಾನೂನು ಅನುಸರಿಸಲು ಆಗಲ್ಲವೆಂದರೆ ಇಲ್ಲಿಂದ ನಿರ್ಗಮಿಸಿ: ವಾಟ್ಸಾಪ್ ವಿರುದ್ಧ ಸುಪ್ರೀಂ ಎಚ್ಚರಿಕೆ – Kannada News | Supreme Court asks WhatsApp and Meta to exit India if they can’t obey Indian laws

ನವದೆಹಲಿ, ಫೆಬ್ರುವರಿ 3: ವಾಟ್ಸಾಪ್​ನ ಗೌಪ್ಯತಾ ನೀತಿ (WhasApp Privacy Policy) ವಿಚಾರವಾಗಿ ಮೆಟಾ ಸಂಸ್ಥೆಯನ್ನು ಭಾರತದ ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ. ‘ನೀವು ಭಾರತೀಯ ಬಳಕೆದಾರರ ಗೌಪ್ಯತೆಯೊಂದಿಗೆ ಆಟವಾಡಬೇಡಿ. ನಮ್ಮ ಒಂದು ಡಿಜಿಟ್ ಡಾಟಾವನ್ನೂ ಪಡೆಯಲು ನಿಮಗೆ ಅವಕಾಶ ಕೊಡಲ್ಲ. ಗೌಪ್ಯತೆ ಉಳಿಸೋದಕ್ಕೆ ಆಗಲ್ಲ ಅಂದರೆ ಭಾರತದಿಂದ ನಿರ್ಗಮಿಸಿ’ ಎಂದು ವಾಟ್ಸಾಪ್​ನ ಮಾತೃ ಸಂಸ್ಥೆಯಾದ ಮೆಟಾಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ (ಫೆ. 3) ತಪರಾಕಿ ಹಾಕಿದೆ.

ವಾಟ್ಸಾಪ್​ನ 2021ರ ಪ್ರೈವೆಸಿ ಪಾಲಿಸಿ ವಿಚಾರವಾಗಿ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುವ ವೇಳೆ ಈ ಅಭಿಪ್ರಾಯಪಟ್ಟಿದೆ. ವಾಟ್ಸಾಪ್ ತನ್ನ ಗೌಪ್ಯತಾ ನೀತಿಯನ್ನು ಬಳಸಿಕೊಂಡು ಬಳಕೆದಾರರ ದತ್ತಾಂಶವನ್ನು ವಾಣಿಜ್ಯಾತ್ಮಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದು ಪ್ರಮುಖ ಆರೋಪ. ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ, ಮೆಟಾಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…

‘ನಿಮಗೆ ನಮ್ಮ ಸಂವಿಧಾನವನ್ನು ಅನುಸರಿಸಲು ಆಗುವುದಿಲ್ಲವೆಂದರೆ ಭಾರತದಿಂದ ನಿರ್ಗಮಿಸಿ. ಯಾವುದೇ ಭಾರತಯ ಪ್ರಜೆಯ ಗೌಪ್ಯತೆ ರಾಜಿಯಾಗಲು ನಾವು ಅವಕಾಶ ಕೊಡುವುದಿಲ್ಲ’ ಎಂದು ಸಿಜೆಐ ಸೂರ್ಯಕಾಂತ್ ತಿಳಿಸಿದ್ದಾರೆ.

ವಾಟ್ಸಾಪ್​ನ ಗೌಪ್ಯತಾ ನೀತಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆಯೇ ಇಲ್ಲ ಎಂಬುದು ನ್ಯಾಯಾಲಯದ ಮತ್ತೊಂದು ಅಸಮಾಧಾನ. ‘ದೇಶದಲ್ಲಿರುವ ಕೋಟ್ಯಂತ ಅನಕ್ಷರಸ್ಥ ಮತ್ತು ಬಡವರಿಗೆ ಈ ಗೌಪ್ಯತಾ ನೀತಿ ಎಷ್ಟು ಅರ್ಥ ಆಗುತ್ತದೆ? ರಸ್ತೆಬದಿ ಅಂಗಡಿ ಇಟ್ಟುಕೊಂಡಿರುವವರೋ, ಬಡ ಮಹಿಳೆಯೋ, ಬಿಹಾರದ ಗ್ರಾಮೀಣ ಭಾಗದಲ್ಲಿರುವ ಜನರೋ, ತಮಿಳುನಾಡಿನಲ್ಲಿ ತಮಿಳಷ್ಟೇ ಮಾತನಾಡುವವ ವ್ಯಕ್ತಿಗಳೋ, ಇವರಲ್ಲೆಷ್ಟು ಜನರಿಗೆ ನಿಮ್ಮ ಗೌಪ್ಯತಾ ನೀತಿ ಅರ್ಥ ಆಗುತ್ತದೆ?’ ಎಂದು ಸಿಜೆಐ ಸೂರ್ಯಕಾಂತ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಸಿಗರೇಟ್ ಮೇಲೆ ಹೊಸ ಅಬಕಾರಿ ಸುಂಕ; ಧೂಮಪಾನಿಗಳಿಗೆ ಮತ್ತಷ್ಟು ದುಬಾರಿ ಜೀವನ

‘ನಿಮ್ಮ ನೀತಿಗಳನ್ನು ಅರ್ಥ ಮಾಡಿಕೊಳ್ಳಲು ನಮಗೆಯೇ ಕೆಲವೊಮ್ಮೆ ಕಷ್ಟವಾಗುತ್ತದೆ. ಬಿಹಾರದ ಕುಗ್ರಾಮದಲ್ಲಿರುವವರೆಗೆ ಅದು ಹೇಗೆ ಅರ್ಥವಾಗುತ್ತದೆ?’ ಎಂದಿದೆ ಸರ್ವೋಚ್ಚ ನ್ಯಾಯಪೀಠ.

‘ವಾಟ್ಸಾಪ್​ನಲ್ಲಿ ಒಬ್ಬ ವೈದ್ಯರು ಮೂರು ಔಷಧಗಳನ್ನು ಕಳುಹಿಸುತ್ತಾರೆ. ಐದೇ ನಿಮಿಷದಲ್ಲಿ ಅದೇ ಔಷಧಗಳಿಗೆ ಸಂಬಂಧಿಸಿದ ಜಾಹೀರಾತುಗಳ ಪ್ರವಾಹವೇ ಬಂದುಬಿಡುತ್ತದೆ’ ಎಂದು ವಾಟ್ಸಾಪ್​ನ ದತ್ತಾಂಶ ದುರ್ಬಳಕೆ ವಿಚಾರವಾಗಿ ಮುಖ್ಯ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

2026ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳಲ್ಲಿ ನಂ.1 ಸ್ಥಾನ ಪಡೆದ ‘ಟಾಕ್ಸಿಕ್’ – Kannada News | Yash starrer Toxic film tops the list of most anticipated Indian movies 2026 in IMDb

ಮಾರ್ಚ್ 19ರಂದು ಬಿಡುಗಡೆ ಆಗಲಿರುವ ‘ಟಾಕ್ಸಿಕ್’ ಸಿನಿಮಾ ನೋಡಲು ಯಶ್ (Yash) ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಎಷ್ಟಿದೆ ಎಂಬುದಕ್ಕೆ ಈಗ ಹೊಸ ಸಾಕ್ಷಿ ಸಿಕ್ಕಿದೆ. ಐಎಂಡಿಬಿ (IMDb) ವರದಿ ಪ್ರಕಾರ, 2026ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ‘ಟಾಕ್ಸಿಕ್’ ಸಿನಿಮಾ (Toxic) ನಂಬರ್ ಸ್ಥಾನ ಪಡೆದುಕೊಂಡಿದೆ. ಪರಭಾಷೆಯ ಘಟಾನುಘಟಿ ಸ್ಟಾರ್ ಹೀರೋಗಳ ಸಿನಿಮಾಗಳನ್ನು ಕೂಡ ಈ ಚಿತ್ರ ಹಿಂದಿಕ್ಕಿದೆ.

‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಿಂದ ಯಶ್ ಅವರು ದೇಶಾದ್ಯಂತ ಫೇಮಸ್ ಆದರು. ಆ ಸಿನಿಮಾದ ಬಳಿಕ ಯಶ್ ಒಪ್ಪಿಕೊಂಡ ಸಿನಿಮಾ ‘ಟಾಕ್ಸಿಕ್’. ಆದ್ದರಿಂದ ಸಹಜವಾಗಿಯೇ ನಿರೀಕ್ಷೆ ಜಾಸ್ತಿ ಆಗಿದೆ. ಯಶ್ ಅವರ ಕೆಲಸದ ಮೇಲೆ ಅಭಿಮಾನಿಗಳಿಗೆ ಇರುವ ಭರವಸೆ ದೊಡ್ಡದು. ಈ ಸಿನಿಮಾದಲ್ಲಿ ಯಶ್ ಅವರು ರಾಯ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ.

ಇದೊಂದು ಮಾಸ್ ಸಿನಿಮಾ. ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಟಾಪ್ 10 ಸಿನಿಮಾಗಳ ಜನಪ್ರಿಯತೆಯ ಆಧಾರದಲ್ಲಿ ‘ಟಾಕ್ಸಿಕ್’ ಸಿನಿಮಾ ಶೇಕಡ 28.2 ಪಾಲನ್ನು ಹೊಂದಿದೆ. ಆ ಮೂಲಕ ‘ಧುರಂಧರ್ 2’, ‘ಓ ರೋಮಿಯೋ’, ‘ದಿ ಪ್ಯಾರಡೈಸ್’, ‘ಪೆದ್ದಿ’ ಮುಂತಾದ ಸಿನಿಮಾಗಳನ್ನು ಹಿಂದಿಕ್ಕಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಹಲವಾರು ಕಲಾವಿದರು ನಟಿಸುತ್ತಿದ್ದಾರೆ. ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಶಿ ಅವರ ಪಾತ್ರಗಳ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಯಶ್ ಅವರ ಪಾತ್ರ ಪರಿಚಯ ಮಾಡಿಕೊಡುವ ಟೀಸರ್ ಧೂಳೆಬ್ಬಿಸಿದೆ. ಟೀಸರ್ ಬಿಡುಗಡೆ ಆದ ನಂತರ ಈ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿದೆ.

ಇದನ್ನೂ ಓದಿ: ‘ಟಾಕ್ಸಿಕ್​​’ಗೆ ಸೆಡ್ಡು ಹೊಡೆಯಲು ದೊಡ್ಡ ತಂತ್ರ ರೂಪಿಸಿದ ‘ಧುರಂಧರ್’ ನಿರ್ದೇಶಕ

ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಮಾರ್ಚ್ 19 ಒಂದು ಮಹತ್ವದ ದಿನವಾಗಲಿದೆ. ಒಂದೇ ದಿನ ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾಗಳು ರಿಲೀಸ್ ಆಗಲಿವೆ. ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿವೆ. ಯಾವ ಸಿನಿಮಾಗೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link