ದೇಶೀಯ ಏಕದಿನ ಟೂರ್ನಿಗೆ ದೆಹಲಿ, ಮುಂಬೈ ತಂಡಗಳು ಪ್ರಕಟ
ಡಿಸೆಂಬರ್ 24 ರಿಂದ ಶುರುವಾಗಲಿರುವ ವಿಜಯ ಹಝಾರೆ ಟೂರ್ನಿಗಾಗಿ ಮುಂಬೈ ಹಾಗೂ ದೆಹಲಿ ತಂಡಗಳನ್ನು ಪ್ರಕಟಿಸಲಾಗಿದೆ. ಈ ಎರಡು ತಂಡಗಳಲ್ಲಿ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಂಡಿರುವುದು ವಿಶೇಷ. ವಿರಾಟ್ ಕೊಹ್ಲಿ ದೆಹಲಿ ತಂಡದಲ್ಲಿದ್ದರೆ, ರೋಹಿತ್ ಶರ್ಮಾ ಮುಂಬೈ ಪರ ಕಣಕ್ಕಿಳಿಯಲಿದ್ದಾರೆ. ಇಲ್ಲಿ ದೆಹಲಿ ತಂಡದ ನಾಯಕನಾಗಿ ರಿಷಭ್ ಪಂತ್ ಕಾಣಿಸಿಕೊಳ್ಳಲಿದ್ದಾರೆ. ಅತ್ತ ಹಿಟ್ಮ್ಯಾನ್ನ ಒಳಗೊಂಡಿರುವ ಮುಂಬೈ ತಂಡವನ್ನು ಮುನ್ನಡೆಸಲಿರುವುದು ಶಾರ್ದೂಲ್ ಠಾಕೂರ್ ಎಂಬುದು ವಿಶೇಷ….