ಅಡುಗೆ ಎಣ್ಣೆ ಪ್ಯಾಕೆಟ್ ಗಾತ್ರ ಇಷ್ಟಬಂದಂತಿರುವಂತಿಲ್ಲ; 9 ಸ್ಟ್ಯಾಂಡರ್ಡ್ ಸೈಜ್ ನಿಗದಿ ಮಾಡಿದ ಸರ್ಕಾರ – Kannada News
ನವದೆಹಲಿ, ಜೂನ್ 7: ಇನ್ಮುಂದೆ ಕಂಪನಿಗಳು ತಮಗೆ ಇಷ್ಟಬಂದ ಅಳತೆಯಲ್ಲಿ ಎಣ್ಣೆ ಪ್ಯಾಕೆಟ್ ತಯಾರಿಸುವಂತಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿದ 9 ನಿರ್ದಿಷ್ಟ ಅಳತೆಗಳಲ್ಲಿ ಮಾತ್ರ ಅಡುಗೆ ಎಣ್ಣೆಯನ್ನು ಮಾರಾಟ ಮಾಡಬೇಕಾಗುತ್ತದೆ. ಪ್ಯಾಕೆಟ್‌ನ ಮೇಲೆ ಎಣ್ಣೆಯ ಪ್ರಮಾಣವನ್ನು ಲೀಟರ್ ಅಥವಾ ಮಿಲಿಲೀಟರ್‌ಗಳಲ್ಲಿ (Volume) ನಮೂದಿಸಿದರೆ, ಅದರ ಜೊತೆಗೆ ಕಡ್ಡಾಯವಾಗಿ ಅದಕ್ಕೆ ಸಮಾನವಾದ ಕಿಲೋಗ್ರಾಂ ಅಥವಾ ಗ್ರಾಮ್ (Weight) ತೂಕವನ್ನೂ ಮುದ್ರಿಸಬೇಕಾಗುತ್ತದೆ. ಗ್ರಾಹಕರು ಅಡುಗೆ ಎಣ್ಣೆ (Cooking Oil) ಖರೀದಿಸುವಾಗ ಎದುರಿಸುತ್ತಿದ್ದ ಗೊಂದಲವನ್ನು ನಿವಾರಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು…