Category Archives: Blog

Your blog category

ಅಡುಗೆ ಎಣ್ಣೆ ಪ್ಯಾಕೆಟ್ ಗಾತ್ರ ಇಷ್ಟಬಂದಂತಿರುವಂತಿಲ್ಲ; 9 ಸ್ಟ್ಯಾಂಡರ್ಡ್ ಸೈಜ್ ನಿಗದಿ ಮಾಡಿದ ಸರ್ಕಾರ – Kannada News

ನವದೆಹಲಿ, ಜೂನ್ 7: ಇನ್ಮುಂದೆ ಕಂಪನಿಗಳು ತಮಗೆ ಇಷ್ಟಬಂದ ಅಳತೆಯಲ್ಲಿ ಎಣ್ಣೆ ಪ್ಯಾಕೆಟ್ ತಯಾರಿಸುವಂತಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿದ 9 ನಿರ್ದಿಷ್ಟ ಅಳತೆಗಳಲ್ಲಿ ಮಾತ್ರ ಅಡುಗೆ ಎಣ್ಣೆಯನ್ನು ಮಾರಾಟ ಮಾಡಬೇಕಾಗುತ್ತದೆ. ಪ್ಯಾಕೆಟ್‌ನ ಮೇಲೆ ಎಣ್ಣೆಯ ಪ್ರಮಾಣವನ್ನು ಲೀಟರ್ ಅಥವಾ ಮಿಲಿಲೀಟರ್‌ಗಳಲ್ಲಿ (Volume) ನಮೂದಿಸಿದರೆ, ಅದರ ಜೊತೆಗೆ ಕಡ್ಡಾಯವಾಗಿ ಅದಕ್ಕೆ ಸಮಾನವಾದ ಕಿಲೋಗ್ರಾಂ ಅಥವಾ ಗ್ರಾಮ್ (Weight) ತೂಕವನ್ನೂ ಮುದ್ರಿಸಬೇಕಾಗುತ್ತದೆ. ಗ್ರಾಹಕರು ಅಡುಗೆ ಎಣ್ಣೆ (Cooking Oil) ಖರೀದಿಸುವಾಗ ಎದುರಿಸುತ್ತಿದ್ದ ಗೊಂದಲವನ್ನು ನಿವಾರಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ‘ಲೀಗಲ್ ಮೆಟ್ರೋಲಜಿ’ (Legal Metrology) ನಿಯಮಾವಳಿಗಳ ಅಡಿಯಲ್ಲಿ ಹೊಸ ಕಡ್ಡಾಯ ನಿಯಮಗಳನ್ನು ಜಾರಿಗೆ ತರುತ್ತಿದೆ. ಅಡುಗೆ ಎಣ್ಣೆ ಕಂಪನಿಗಳಿಗೆ ಈ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲು ಸರ್ಕಾರ 3 ತಿಂಗಳ ಕಾಲಾವಕಾಶ (Transition Period) ನೀಡಿದೆ.

ಗ್ರಾಹಕರಿಗೆ ಇದ್ದ ಗೊಂದಲವೇನು?

ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಗಳು 650g, 700g, 810g, 850g, 870g 970g ಇತ್ಯಾದಿ ವಿಚಿತ್ರ ಅಳತೆಗಳ ಪ್ಯಾಕೆಟ್‌ಗಳಲ್ಲಿ ಲಭ್ಯವಿವೆ. ಇವು ನೋಡಲು ಒಂದೇ ತರಹ ಕಂಡರೂ ತೂಕದಲ್ಲಿ ವ್ಯತ್ಯಾಸ ಇರುತ್ತದೆ. ಇದರಿಂದಾಗಿ ಗ್ರಾಹಕರಿಗೆ ಎರಡು ವಿಭಿನ್ನ ಬ್ರ್ಯಾಂಡ್‌ಗಳ ಬೆಲೆಯನ್ನು ಹೋಲಿಕೆ ಮಾಡಿ, ಯಾವುದು ಅಗ್ಗ ಮತ್ತು ಯಾವುದು ದುಬಾರಿ ಎಂದು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ಕಂಪನಿಗಳು ಬೆಲೆ ಕಡಿಮೆ ಇರುವಂತೆ ತೋರಿಸಲು ಪ್ಯಾಕೆಟ್‌ನ ತೂಕವನ್ನು ಗುಟ್ಟಾಗಿ ಕಡಿಮೆ ಮಾಡುತ್ತಿದ್ದವು (ಇದನ್ನು ‘ಶ್ರಿಂಕ್‌ಫ್ಲೇಷನ್’ ಎನ್ನಲಾಗುತ್ತದೆ). ಮಹಾಭಾರತದಲ್ಲಿ ಧರ್ಮರಾಯ ದ್ರೋಣನಿಗೆ ‘ಅಶ್ವತ್ಥಾಮ ಹತಃ ನರಃ ವಾ ಕುಂಜರಃ’ (ಅಶ್ವತ್ಥಾಮ ಎನ್ನುವ ಮನುಷ್ಯನೋ ಅಥವಾ ಆನೆಯೋ ಕೊಲಲ್ಪಟ್ಟಿದೆ) ಎಂದು ಹೇಳುವಾಗ ಶ್ರೀಕೃಷ್ಣನು ‘ನರಃ’ ಪದ ಕೇಳಿಸದಂತೆ ಶಂಖ ಊದುತ್ತಾನೆ. ಆ ರೀತಿಯ ಕಂಡೂ ಕಾಣದ ಸತ್ಯವನ್ನು ಅಡುಗೆ ಎಣ್ಣೆಯ ಪ್ಯಾಕೆಟ್​ಗಳಲ್ಲಿ ಹಾಕಲಾಗುತ್ತದೆ.

ಇದನ್ನೂ ಓದಿ: ಸ್ಪೇಸ್​ಎಕ್ಸ್ ಕಂಪ್ಯೂಟಿಂಗ್ ಬಳಸಲು ತಿಂಗಳಿಗೆ 9,000 ಕೋಟಿ ರೂ ಬಾಡಿಗೆ ಪಾವತಿಸುವ ಗೂಗಲ್

ನಿಗದಿಪಡಿಸಲಾದ 9 ಸ್ಟ್ಯಾಂಡರ್ಡ್ ಸೈಜ್‌ಗಳು

ಹೊಸ ನಿಯಮದ ಪ್ರಕಾರ, ಪ್ರಮುಖ ಅಡುಗೆ ಎಣ್ಣೆಗಳಾದ ಪಾಮ್ ಆಯಿಲ್, ಸೂರ್ಯಕಾಂತಿ (Sunflower), ಸಾಸಿವೆ (Mustard), ಸೋಯಾಬೀನ್, ಶೇಂಗಾ (Groundnut), ಎಳ್ಳೆಣ್ಣೆ, ತೌಡು ಎಣ್ಣೆ (Rice Bran), ಹತ್ತಿಬೀಜದ ಎಣ್ಣೆ ಮತ್ತು ಜೋಳದ ಎಣ್ಣೆಗಳನ್ನು ಈ ಕೆಳಗಿನ ಸೈಜ್‌ಗಳಲ್ಲಿ ಮಾತ್ರ ಪ್ಯಾಕ್ ಮಾಡಬೇಕು:

ಸಣ್ಣ ಮತ್ತು ಮಧ್ಯಮ ಪ್ಯಾಕ್: 200 ml/g, 500 ml/g, 1 ಲೀಟರ್/kg, 2 ಲೀಟರ್/kg, 3 ಲೀಟರ್/kg, 4 ಲೀಟರ್/kg, 5 ಲೀಟರ್/kg.

ಬಲ್ಕ್ (ದೊಡ್ಡ) ಪ್ಯಾಕ್: 15 ಲೀಟರ್/kg ಮತ್ತು 20 ಲೀಟರ್/kg.

ಬಜೆಟ್ ಪ್ಯಾಕ್​ಗಳಿಗೆ ವಿನಾಯಿತಿ

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸುಲಭ ಬೆಲೆಯಲ್ಲಿ ಸಿಗುವ 200 ಮಿಲಿಲೀಟರ್ ಅಥವಾ 200 ಗ್ರಾಮ್‌ಗಿಂತ ಕಡಿಮೆ ಇರುವ ಸಣ್ಣ ಸ್ಯಾಚೆಟ್‌ಗಳಿಗೆ (Sachets) ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಹಾಗೆಯೇ ಬಾದಾಮಿ ಎಣ್ಣೆ, ಆಲಿವ್ ಆಯಿಲ್, ಅಕ್ರೋಟ್ (Walnut) ಎಣ್ಣೆಯಂತಹ ಮೈನರ್/ನಿಶ್ (Minor/Niche) ತೈಲಗಳಿಗೂ ಇದರಿಂದ ವಿನಾಯಿತಿ ಇದೆ.

ಇದನ್ನೂ ಓದಿ: ಎಲ್ ನಿನೊ ಪರಿಣಾಮ; ಭಾರತದ ಆರ್ಥಿಕತೆಗೆ 1 ಬಿಲಿಯನ್ ಡಾಲರ್ ಗಂಡಾಂತರ? ಇದು ಹೇಗೆ ಸಾಧ್ಯ?

ತೂಕ ಮತ್ತು ಲೀಟರ್ ಲೆಕ್ಕ ಕಡ್ಡಾಯ

ತಾಪಮಾನಕ್ಕೆ ಅನುಗುಣವಾಗಿ ಎಣ್ಣೆಯ ಸಾಂದ್ರತೆ (Density) ಬದಲಾಗುತ್ತದೆ. ಉದಾಹರಣೆಗೆ, 1 ಲೀಟರ್ ಅಡುಗೆ ಎಣ್ಣೆಯ ತೂಕ ಸಾಮಾನ್ಯವಾಗಿ ಸುಮಾರು 910 ಗ್ರಾಮ್ ಇರುತ್ತದೆ. ಈ ವ್ಯತ್ಯಾಸದಿಂದ ಗ್ರಾಹಕರು ಮೋಸ ಹೋಗಬಾರದು ಎಂಬ ಕಾರಣಕ್ಕೆ ಲೀಟರ್ ಜೊತೆಗೆ ಅದರ ನಿಖರ ತೂಕವನ್ನೂ (ಗ್ರಾಮ್/ಕೆಜಿ ಯಲ್ಲಿ) ಕಡ್ಡಾಯವಾಗಿ ಮುದ್ರಿಸಲು ಸೂಚಿಸಲಾಗಿದೆ.

ಕಂಪನಿಗಳು ತಮ್ಮ ಹಳೆಯ ಪ್ಯಾಕೇಜಿಂಗ್ ಸ್ಟಾಕ್ ಅನ್ನು ಖಾಲಿ ಮಾಡಲು 3 ತಿಂಗಳ ಸಮಯಾವಕಾಶ ನೀಡಲಾಗಿದ್ದು, ಇಲಾಖೆಯ ಈ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಬರಲಿದೆ ಮತ್ತು ಗ್ರಾಹಕರು ಸುಲಭವಾಗಿ ಬೆಲೆಗಳನ್ನು ಹೋಲಿಕೆ ಮಾಡಿ ಖರೀದಿಸಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

WTC 2025-27: ಜೋ ರೂಟ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಶುಭ್​ಮನ್ ಗಿಲ್

Source link

ಬೆಳಗಾವಿಯ ಶಿವಾನಂದ ನೀಲಣ್ಣವರನ ಸಾವಿರಾರು ಕೋಟಿ ರೂ. ರಹಸ್ಯ ಬಯಲು: ಎಳೆ ಎಳೆಯಾಗಿ ಬಿಚ್ಚಿಟ್ಟ ಸಿಐಡಿ – Kannada News

ಬೆಳಗಾವಿ, (ಜೂನ್.07): ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಬರೋಬ್ಬರಿ 4500 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಶಿವಂ ಅಸೋಸಿಯೇಟ್ ಸಂಸ್ಥೆ (Shivam associates) ಮಾಲೀಕ ಶಿವಾನಂದ ನೀಲಣ್ಣನವರ್‌ (shivanand neelannavar) ಅವರನ್ನು ಈಗಾಗಲೇ ಸಿಐಡಿ ಪೊಲೀಸರು ಬಂಧಿಸಿದ್ದು, ತನಿಖೆಯಲ್ಲಿ ಶಿವಾನಂದ ನೀಲಣ್ಣವರ್ ವಂಚನೆ ಮಾಡಿರುವುದು ಸಾಬೀತಾಗಿದೆ. ಈ ಬಗ್ಗೆ ಬೆಳಗಾವಿಯಲ್ಲಿ ಸಿಐಡಿ ಡಿಐಜಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದು, ಈವರೆಗೂ ಸಾರ್ವಜನಿಕರಿಂದ 2,400 ಕೋಟಿ ರೂ. ಸಂಗ್ರಹಿಸಿದ್ದಾರೆ. ಇದರಲ್ಲಿ ಸುಮಾರು ದುಡ್ಡು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾನೆ. ಹೊಸದಾಗಿ ಹೂಡಿಕೆಯಾದ ಹಣವನ್ನು ಹಳಬರಿಗೆ ಬಡ್ಡಿ ರೂಪದಲ್ಲಿ ಕೊಡುತ್ತಿದ್ದ. ಸಂಗ್ರಹದ ಹಣಕ್ಕಿಂತ ಬಡ್ಡಿ ಕೊಡುವ ಹಣ ಹೆಚ್ಚಾದರೆ ಸಮಸ್ಯೆ ಆಗುತ್ತಿತ್ತು ಎಂದು ವಂಚನೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಮುಖ್ಯಾಂಶಗಳು

  • ಬೆಳಗಾವಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣ
  • ಶಿವಾನಂದ ನೀಲಣ್ಣವರ್ ವಂಚನೆ ಮಾಡಿರುವುದು ಸಾಬೀತಾಗಿದೆ
  • ಶಿವಂ ಅಸೋಸಿಯೇಟ್‌ನ ಮಾಲೀಕ ಶಿವಾನಂದ ನೀಲಣ್ಣವರ್
  • ಈವರೆಗೂ ಸಾರ್ವಜನಿಕರಿಂದ 2,400 ಕೋಟಿ ರೂ. ಸಂಗ್ರಹಿಸಿದ್ದಾನೆ
  • ಬೆಳಗಾವಿಯಲ್ಲಿ ಸಿಐಡಿ ಡಿಐಜಿಪಿ ಭೀಮಾಶಂಕರ್ ಗುಳೇದ್ ಹೇಳಿಕೆ

ಶಿವಂ ಅಸೋಶಿಯೇಟ್ ಕಂಪನಿಯಿಂದ ಸಾವಿರಾರು ಕೋಟಿ ವಂಚನೆ ಪ್ರಕರಣ ಸಂಬಂಧ ಬೆಳಗಾವಿಯಲ್ಲಿ ಸಿಐಡಿ ಡಿಐಜಿ ಡಾ. ಭೀಮಾಶಂಕರ್ ಗುಳೇದ್ ಮಹತ್ವದ ಸುದ್ಧಿಗೋಷ್ಠಿ ನಡೆಸಿ ಕೆಲವು ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ದಾಳಿ ನಡೆದಿದ್ದು, ಇದೀಗ ಪ್ರಕರಣ ಸಿಐಡಿಗೆ ಹಸ್ತಾಂತರ ಆಗಿತ್ತು. ಸಾಮಾನ್ಯವಾಗಿ ತನಿಖೆ ನಡೆಯುವಾಗ ಸುದ್ಧಿಗೋಷ್ಠಿ ಮಾಡಲ್ಲ. ಇವತ್ತಿಗೂ ಶಿವಂ ಅಸೋಸಿಯೇಟ್ ಕಂಪನಿಗೆ ಜನರು ಹಣ ಹಾಕ್ತಿದಾರೆ. ಎಫ್ಐಆರ್ ಆದ ಬಳಿಕ ಈವರೆಗೆ ಐದು ಕೋಟಿ ಮತ್ತೇ ಹೂಡಿಕೆ ಆಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸುದ್ದಿಗೋಷ್ಠಿ ಮಾಡ್ತಿದ್ದೇವೆ ಎಂದರು.

ಇದನ್ನೂ ಓದಿ: ನಾನು ಸಿಎಂ ಆಗ್ಲಾ? ಎಂದವನ ಬಂಡವಾಳ ಬಯಲು: 4500 ಕೋಟಿ ವಂಚಿಸಿದ ಶಿವಂ ಅಸೋಸಿಯೇಟ್ಸ್ ಮಾಲೀಕನ ಮನೆ, ಕಚೇರಿ ಸೀಜ್

ಹಣದ ರಹಸ್ಯ ಬಿಚ್ಚಿಟ್ಟ ಸಿಐಡಿ ಡಿಐಜಿಪಿ

ಶಿವಂ ಅಸೋಸಿಯೇಟ್‌ನ ಮಾಲೀಕ ಶಿವಾನಂದ ನೀಲಣ್ಣವರ್ ಈವರೆಗೂ ಸಾರ್ವಜನಿಕರಿಂದ 2,400 ಕೋಟಿ ರೂ. ಸಂಗ್ರಹಿಸಿದ್ದಾನೆ. ಇದರಲ್ಲಿ ಸುಮಾರು ದುಡ್ಡು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾನೆ. ಹೊಸದಾಗಿ ಹೂಡಿಕೆಯಾದ ಹಣವನ್ನು ಹಳಬರಿಗೆ ಬಡ್ಡಿ ಕೊಡುತ್ತಿದ್ದ. ಆದ್ರೆ, ಸಂಗ್ರಹದ ಹಣಕ್ಕಿಂತ ಬಡ್ಡಿ ಕೊಡುವ ಹಣ ಹೆಚ್ಚಾದರೆ ಸಮಸ್ಯೆ ಆಗುತ್ತಿತ್ತು. 540 ಕೋಟಿ ರೂಪಾಯಿಯನ್ನು ಸ್ಟಾಕ್ ಮಾರ್ಕೆಟ್‌ನಲ್ಲಿ ಹಾಕಿದ್ದು, ಈ ಪೈಕಿ ಸ್ಟಾಕ್ ಮಾರ್ಕೆಟ್‌ನಲ್ಲಿ 170 ಕೋಟಿ ರೂ. ಕಳೆದುಕೊಂಡಿದ್ದಾನೆ. ಈವರೆಗಿನ ತನಿಖೆಯಲ್ಲಿ 660 ಕೋಟಿ ರೂ. ಶಾರ್ಟೇಜ್‌ ಕಂಡುಬಂದಿದ್ದು, 330 ಕೋಟಿ ರೂಪಾಯಿ ರಿಕವರಿ ಆಗುತ್ತೆ ಎಂದು ಮಾಹಿತಿ ನೀಡಿದರು.

ಶಿವಾನಂದ ನೀಲಣ್ಣವರ್ 40,700 ಜನರಿಂದ ಹೂಡಿಕೆ ಮಾಡಿಕೊಂಡಿದ್ದು, ಈತನೊಟ್ಟಿಗೆ ಇನ್ನೊಬ್ಬ ಪಾಲುದಾರ ಸಹ ಇದ್ದಾನೆ. ಕಂಪನಿಯಿಂದ ಅಕ್ರಮವಾಗಿ ನೀಲಣ್ಣವರ್ 55 ಕೋಟಿ ರೂ. ಹಾಕಿಕೊಂಡಿದ್ದಾನೆ. ಈಗಾಗಲೇ ಐದು ಐಷಾರಾಮಿ ಕಾರು ಜಪ್ತಿ ಮಾಡಿಕೊಂಡಿದ್ದೇವೆ.ಇನ್ನೂ 11 ವೋಲ್ವೋ ಎಕ್‌ಸಿ90 ಕಾರು ಖರೀದಿ ಮಾಡಿದ್ದು, ಅವುಗಳನ್ನೂ ಶೀಘ್ರದಲ್ಲಿ ಜಪ್ತಿ ಮಾಡುತ್ತೇವೆ. ಈವರೆಗೂ 400 ಕೋಟಿ ರೂ. ಹೆಚ್ಚುವರಿಯಾಗಿ ಹೂಡಿಕೆದಾರರಿಗೆ ಹೋಗಿದೆ. ಆ ಹಣವನ್ನೂ ವಾಪಸ್ ಪಡೆದು ಇನ್ನುಳಿದ ಹೂಡಿಕೆದಾರರಿಗೆ ನೀಡುತ್ತೇವೆ ಎಂದು ಹೇಳಿದರು.

ಎಫ್ಐಆರ್ ಆದ ಮೇಲೆ ನಾಲ್ಕೈದು ಕೋಟಿ ರೂ.ಡೆಪಾಸಿಟ್ ಆಗಿದ್ದು, 30 ಅಕೌಂಟ್ ಸಿಕ್ಕಿದ್ದು ಇದರಲ್ಲಿ 7 ಅಕೌಂಟ್‌ಗಳಲ್ಲಿ ಹೆಚ್ಚಿನ ಹಣ ವರ್ಗಾವಣೆ. 36,200 ಪೇಜ್ ಒಂದೇ ಅಕೌಂಟ್‌ನಲ್ಲಿ ಆಗಿದ್ದು ತನಿಖೆ ನಡೆಯುತ್ತಿದೆ. ಸಿನಿಮಾ ಸ್ಟಾರ್‌ಗಳಿಗೆ ಶಿವಂ ಅಸೋಸಿಯೇಟ್‌ನಿಂದ ಹಣ ಹೋಗಿದ್ದರೆ ಅವರಿಗೂ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಕರೆಯುತ್ತೇವೆ. ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಲಾಗಿದ್ದು,ಮಹಾರಾಷ್ಟ್ರದ ಪೊಲೀಸರ ಸಹಕಾರ ಪಡೆದು ತನಿಖೆ ಕೈಗೊಳ್ಳಲಾಗಿದೆ. ಹಣ ರಿಕವರಿ ಬಳಿಕ ಬಡ್ಸ್ ಕಾಯ್ದೆ ಮುಖ್ಯಸ್ಥ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ಕೊಡುತ್ತೇವೆ. ಬಳಿಕ ಅವರು ಸಾರ್ವಜನಿಕರಿಗೆ ಹಣ ವಾಪಸ್ ಕೊಡುತ್ತಾರೆ. ಕಂಪನಿ ಮುಳುಗುವ ಮುನ್ನ ದಾಳಿ ಮಾಡಿ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Source link

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ಎಸ್‌ಎಸ್‌ಸಿ ಸ್ಟೆನೋಗ್ರಾಫರ್ ಹುದ್ದೆಗಳ ಸಂಖ್ಯೆ 1,170ಕ್ಕೆ ಹೆಚ್ಚಳ! – Kannada News

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿImage Credit source: Pinterest

ದೇಶಾದ್ಯಂತ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಪಡೆಯಲು ಸಿದ್ಧತೆ ನಡೆಸುತ್ತಿರುವವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಸಿಬ್ಬಂದಿ ನೇಮಕಾತಿ ಆಯೋಗವು (SSC) ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ಗ್ರೇಡ್ ‘ಡಿ’ ನೇಮಕಾತಿ 2026ರ ಪರಿಷ್ಕೃತ (Revised) ಹುದ್ದೆಗಳ ವಿವರವನ್ನು ಬಿಡುಗಡೆ ಮಾಡಿದೆ. ಈ ಹೊಸ ಪ್ರಕಟಣೆಯ ಪ್ರಕಾರ, ಒಟ್ಟು ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಈಗ ಒಟ್ಟು 1,170 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹಿಂದೆ ಘೋಷಿಸಲಾಗಿದ್ದ ಹುದ್ದೆಗಳಿಗಿಂತ ಇದು ಹೆಚ್ಚಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶವಾಗಿದೆ.

ಗ್ರೇಡ್ ‘ಸಿ’ ಮತ್ತು ‘ಡಿ’ ಇಲಾಖಾವಾರು ಹುದ್ದೆಗಳ ವಿವರ:

ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 1,170 ಹುದ್ದೆಗಳನ್ನು ಎರಡು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಅನ್ವಯ ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ವಿಭಾಗದಲ್ಲಿ 261 ಹುದ್ದೆಗಳು ಮತ್ತು ಸ್ಟೆನೋಗ್ರಾಫರ್ ಗ್ರೇಡ್ ‘ಡಿ’ ವಿಭಾಗದಲ್ಲಿ 909 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಅವರ ಆಸಕ್ತಿ ಮತ್ತು ಅರ್ಹತೆಗೆ ಅನುಗುಣವಾಗಿ ಇಲಾಖಾವಾರು ಹುದ್ದೆಗಳ ಹಂಚಿಕೆಯನ್ನು ಅಗತ್ಯಕ್ಕೆ ತಕ್ಕಂತೆ ಮಾಡಲಾಗುವುದು ಎಂದು ಸಿಬ್ಬಂದಿ ನೇಮಕಾತಿ ಆಯೋಗವು ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಕೆಲಸದ ಅವಕಾಶ:

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ವಿವಿಧ ಪ್ರಮುಖ ಸಚಿವಾಲಯಗಳು (Ministries) ಮತ್ತು ಇಲಾಖೆಗಳಲ್ಲಿ ನೇಮಕಾತಿ ಸಿಗಲಿದೆ. ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಸದಾ ಹೆಚ್ಚಿನ ಬೇಡಿಕೆ ಇರುವುದರಿಂದ, ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಮತ್ತು ಪ್ರತಿಷ್ಠಿತ ಕಚೇರಿಗಳಲ್ಲಿ ಕೆಲಸ ಮಾಡಲು ಬಯಸುವ ಯುವಕರಿಗೆ ಇದು ಅತ್ಯಂತ ಮಹತ್ವದ ಹಾಗೂ ಗೌರವಾನ್ವಿತ ಅವಕಾಶವೆಂದು ಪರಿಗಣಿಸಲಾಗಿದೆ.

ಕಠಿಣ ಪರೀಕ್ಷೆ ಮತ್ತು ಅರ್ಹತೆಯ ಆಧಾರದ ಮೇಲೆ ಆಯ್ಕೆ:

ಎಸ್‌ಎಸ್‌ಸಿ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಕಟ್ಟುನಿಟ್ಟಾದ ಲಿಖಿತ ಪರೀಕ್ಷೆ ಮತ್ತು ಸ್ಟೆನೋಗ್ರಫಿ ಕೌಶಲ್ಯ ಪರೀಕ್ಷೆಯಲ್ಲಿ ಅವರು ಪ್ರದರ್ಶಿಸುವ ಪ್ರತಿಭೆಯ ಆಧಾರದ ಮೇಲೆಯೇ ಮಾಡಲಾಗುತ್ತದೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳು ಮುಂದಿನ ಹಂತದ ದಾಖಲಾತಿ ಪರಿಶೀಲನೆ ಸೇರಿದಂತೆ ನಿಯಮಿತ ಪ್ರಕ್ರಿಯೆಗಳಿಗೆ ಒಳಪಡಬೇಕಾಗುತ್ತದೆ. ಅಂತಿಮವಾಗಿ ಮೆರಿಟ್ ಪಟ್ಟಿ ಮತ್ತು ಸರ್ಕಾರದ ಮೀಸಲಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುತ್ತದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಹುದ್ದೆಗಳ ಹೆಚ್ಚಳದಿಂದ ಉದ್ಯೋಗಾಕಾಂಕ್ಷಿಗಳಿಗೆ ಭಾರಿ ಲಾಭ:

ಪರೀಕ್ಷೆಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಿಗೆ ಹುದ್ದೆಗಳ ಸಂಖ್ಯೆಯಲ್ಲಿ ಆಗಿರುವ ಈ ಹೆಚ್ಚಳವು ಭರವಸೆಯ ಬೆಳಕಾಗಿದೆ. ಹುದ್ದೆಗಳ ಸಂಖ್ಯೆ ಹೆಚ್ಚಾದಷ್ಟೂ ಕಟ್-ಆಫ್ ಅಂಕಗಳಲ್ಲಿ ಧನಾತ್ಮಕ ಬದಲಾವಣೆಯಾಗಿ, ಕಠಿಣ ಪರಿಶ್ರಮ ಪಡುತ್ತಿರುವ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ. ಆದ್ದರಿಂದ, ಸ್ಟೆನೋಗ್ರಾಫರ್ ಪರೀಕ್ಷೆಯ ದಿನಾಂಕಕ್ಕೂ ಮುನ್ನವೇ ಅಭ್ಯರ್ಥಿಗಳು ತಮ್ಮ ತಯಾರಿಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡು ಈ ಸುವರ್ಣಾವಕಾಶದ ಪೂರ್ಣ ಲಾಭವನ್ನು ಪಡೆದುಕೊಳ್ಳಬೇಕಾಗಿದೆ.

ಕೇಂದ್ರ ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವ ಯುವಕರಿಗೆ ಎಸ್‌ಎಸ್‌ಸಿ ನೀಡಿರುವ ಈ ಉಡುಗೊರೆ ನಿಜಕ್ಕೂ ಪ್ರೇರಣಾದಾಯಕವಾಗಿದೆ. ಸ್ಪರ್ಧೆ ಎಷ್ಟೇ ಕಠಿಣವಾಗಿದ್ದರೂ, ಹುದ್ದೆಗಳ ಸಂಖ್ಯೆ ಹೆಚ್ಚಿರುವುದರಿಂದ ಸರಿಯಾದ ಯೋಜನಾಬದ್ಧ ಸಿದ್ಧತೆ ಮತ್ತು ನಿರಂತರ ಅಭ್ಯಾಸದಿಂದ ಈ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು. ಉದ್ಯೋಗಾಕಾಂಕ್ಷಿಗಳು ಸಮಯ ವ್ಯರ್ಥ ಮಾಡದೆ ಇಂದಿನಿಂದಲೇ ತಮ್ಮ ರಿವಿಷನ್ ಹಾಗೂ ಮಾಕ್ ಟೆಸ್ಟ್‌ಗಳ ಕಡೆಗೆ ಗಮನ ಹರಿಸಿ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IND vs AFG: ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌; ದಿಗ್ಗಜರನ್ನು ಹಿಂದಿಕ್ಕಿದ ರಿಷಭ್ ಪಂತ್

Source link

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ! – Kannada News

ಬೆಂಗಳೂರು, ಜೂನ್ 07: ಕಾಲೇಜು ಶುಲ್ಕ ಪಾವತಿಸುವ ಗಡುವಿನ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ವಿದ್ಯಾರ್ಥಿನಿಯೊಬ್ಬರ ಕುಟುಂಬಕ್ಕೆ ಸೈಬರ್ ವಂಚಕರು (Cyber Crime) ಒಂದು ಲಕ್ಷ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವಿದೇಶದಲ್ಲಿ ಎಂಬಿಬಿಎಸ್ ಓದುತ್ತಿರುವ ಯುವತಿಯ ಕಾಲೇಜು ಫೀಸ್ ಕಟ್ಟುವ ನೆಪದಲ್ಲಿ ಈ ವಂಚನೆ ಎಸಗಲಾಗಿದೆ.

ಮುಖ್ಯಾಂಶಗಳು

  • ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯ ಕುಟುಂಬಕ್ಕೆ ವಂಚನೆ ಮಾಡಲಾಗಿದೆ.
  • ಪರೀಕ್ಷೆಯ ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಸೈಬರ್ ಖದೀಮರು ದುರುಪಯೋಗಪಡಿಸಿಕೊಂಡಿದ್ದಾರೆ.
  • ಸ್ನೇಹಿತೆಯ ಸೋಗಿನಲ್ಲಿ ಬಂದು ಒಂದು ಲಕ್ಷ ರೂಪಾಯಿ ಪಡೆದು ನಾಪತ್ತೆಯಾಗಿದ್ದಾರೆ.

ಪರೀಕ್ಷೆಯ ನೆಪ ಹೇಳಿ ವಂಚನೆ

ಬೆಂಗಳೂರು ನಿವಾಸಿಯೊಬ್ಬರ ಸಂಬಂಧಿಕರ ಮಗಳು ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಪರೀಕ್ಷೆಗಳು ಹತ್ತಿರ ಬರುತ್ತಿದ್ದರಿಂದ ತುರ್ತಾಗಿ ಕಾಲೇಜು ಶುಲ್ಕ ಪಾವತಿಸಬೇಕಾಗಿತ್ತು. ನಿಗದಿತ ಸಮಯಕ್ಕೆ ಹಣ ಪಾವತಿಸದಿದ್ದರೆ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ಸಿಗುವುದಿಲ್ಲ ಎಂದು ವಿದ್ಯಾರ್ಥಿನಿ ತನ್ನ ಕುಟುಂಬಕ್ಕೆ ತಿಳಿಸಿದ್ದರು. ಈ ಸಂದರ್ಭವನ್ನು ಸೈಬರ್ ಅಪರಾಧಿಗಳು ತಮಗೆ ಪೂರಕವಾಗಿ ಬಳಸಿಕೊಂಡಿದ್ದಾರೆ.

ಸ್ನೇಹಿತೆಯ ಸೋಗಿನಲ್ಲಿ ವಂಚನೆ

ಹಣ ವರ್ಗಾವಣೆಯ ತುರ್ತಿನಲ್ಲಿದ್ದ ನವೀನ್ ಕುಟುಂಬವನ್ನು ದೀಪಿಕಾ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಸಂಪರ್ಕಿಸಿದ್ದಾಳೆ. ತಾನು ವಿದ್ಯಾರ್ಥಿನಿಯ ಸ್ನೇಹಿತೆ ಎಂದು ನಂಬಿಸಿದ ಆಕೆ, ವಿದೇಶಿ ವಿನಿಮಯದ (ಫಾರೆಕ್ಸ್) ಯಾವುದೇ ಕಡಿತವಿಲ್ಲದೆ ನೇರವಾಗಿ ಹಣವನ್ನು ತಲುಪಿಸಲು ಒಂದು ಪರ್ಯಾಯ ಮಾರ್ಗವನ್ನು ಸೂಚಿಸಿದ್ದಾಳೆ. ತನ್ನ ಪರಿಚಿತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿದರೆ, ಯಾವುದೇ ಶುಲ್ಕ ಕಡಿತವಾಗದೆ ಸಂಪೂರ್ಣ ಮೊತ್ತ ವಿದ್ಯಾರ್ಥಿನಿಗೆ ತಲುಪುತ್ತದೆ ಎಂದು ಆಕೆ ನಂಬಿಸಿದ್ದಾಳೆ.

ದೂರು ದಾಖಲು

ಆಕೆಯ ಮಾತನ್ನು ನಿಜವೆಂದು ನಂಬಿದ ನವೀನ್ ಮೇ 9 ರಂದು ಗೂಗಲ್ ಪೇ (Google Pay) ಮೂಲಕ ಆಕೆ ನೀಡಿದ ಖಾತೆಗೆ ಹಂತ ಹಂತವಾಗಿ ಒಟ್ಟು ಒಂದು ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಕೈ ಸೇರಿದ ಬೆನ್ನಲ್ಲೇ ಆ ಮಹಿಳೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾಳೆ. ಎಷ್ಟು ಪ್ರಯತ್ನಿಸಿದರೂ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ತಮಗೆ ವಂಚನೆಯಾಗಿರುವುದು ಕುಟುಂಬಕ್ಕೆ ಮನವರಿಕೆಯಾಗಿದೆ.

ಕುಟುಂಬದ ಸದಸ್ಯರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರಿಂದ ದೂರು ನೀಡಲು ಕೊಂಚ ತಡವಾಗಿದೆ. ಸದ್ಯ ಹಣ ಕಳೆದುಕೊಂಡ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್ಎಸ್ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಿನ್ನ ಪಾತ್ರದಲ್ಲಿ ಸಾಯಿ ಪಲ್ಲವಿ, ಮೊದಲ ಬಾರಿ ರಗಡ್ ಲುಕ್ – Kannada News

ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾವಂತ ಮತ್ತು ಬಲು ಬೇಡಿಕೆಯ ನಟಿ. ಇತರೆ ನಟಿಯರಿಗಿಂತಲೂ ಬಹಳ ಭಿನ್ನ ನಟಿಯಾಗಿರುವ ಸಾಯಿ ಪಲ್ಲವಿ, ಸಿನಿಮಾಗಳ ಆಯ್ಕೆ ವಿಷಯದಲ್ಲಿ ಬಲು ಚ್ಯೂಸಿ. ತಮ್ಮ ಪಾತ್ರಕ್ಕೆ ತೂಕವಿದ್ದರಷ್ಟೆ ಅವರು ಒಪ್ಪಿಕೊಳ್ಳುವುದು. ದೊಡ್ಡ ಸ್ಟಾರ್ ಜೊತೆಗಿನ ಸಿನಿಮಾ ಆಗಿದ್ದರೂ ಸರಿಯೇ ರೀಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಸಂದೇಶವುಳ್ಳ ಚಿತ್ರಗಳಿಗೆ ಮೊದಲ ಆದ್ಯತೆ. ಜಾಹೀರಾತುಗಳಲ್ಲಿ ಯಾವ ಕಾರಣಕ್ಕೂ ನಟಿಸುವುದಿಲ್ಲ, ಸಿನಿಮಾನಲ್ಲಿ ಉಡುವ ಉಡುಗೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾರೆ. ಇದೇ ಕಾರಣಕ್ಕೆ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಅಂದಹಾಗೆ ಸಾಯಿ ಪಲ್ಲವಿ ಈ ವರೆಗೆ ನಟಿಸಿರುವುದು ಸೌಮ್ಯ ನಾಯಕಿಯ ಪಾತ್ರಗಳು. ಒಂದು ಸಿನಿಮಾನಲ್ಲಿ ನಕ್ಸಲೈಟ್, ಮತ್ತೊಂದು ಸಿನಿಮಾನಲ್ಲಿ ದೇವದಾಸಿಯಾಗಿ ನಟಿಸಿದ್ದಾರಾದರೂ ಆ ಸಿನಿಮಾಗಳಲ್ಲಿಯೂ ಅವರದ್ದು ಸೌಮ್ಯವಾದ ಪಾತ್ರಗಳೇ. ಆದರೆ ಇದೇ ಮೊದಲ ಬಾರಿಗೆ ಸಾಯಿ ಪಲ್ಲವಿ, ಈ ವರೆಗೆ ಪ್ರಯತ್ನಿಸದ ರೀತಿಯ ಅವರ ಪಾಲಿಗೆ ಬಹಳ ಹೊಸದಾದ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

ಸಾಯಿ ಪಲ್ಲವಿ ಇದೇ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ. ಅದೂ ಸಾಮಾನ್ಯ ಪೊಲೀಸ್ ಅಲ್ಲ, ಬಲು ರಗಡ್ ಆದ ಪೊಲೀಸ್. ಈ ಹಿಂದೆ ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ ನಿರ್ದೇಶಿಸಿದ್ದ ರಾಜಕುಮಾರ್ ಪೆರಿಸ್ವಾಮಿ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ಸಾಯಿ ಪಲ್ಲವಿ ಅವರದ್ದು ಪೊಲೀಸ್ ಪಾತ್ರ. ಸಿನಿಮಾದ ನಾಯಕ ಧನುಶ್.

ಇದನ್ನೂ ಓದಿ:ಸಹೋದರಿಯ ಜೊತೆ ಕ್ಯೂಟ್ ವಿಡಿಯೋ ಹಂಚಿಕೊಂಡ ಸಾಯಿ ಪಲ್ಲವಿ

ಧನುಶ್ ಜೊತೆಗೆ ಸಾಯಿ ಪಲ್ಲವಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಇವರು ‘ಮಾರಿ 2’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಈ ಹೊಸ ಸಿನಿಮಾನಲ್ಲಿ ಧನುಶ್ ಕಳ್ಳನ ಪಾತ್ರದಲ್ಲಿ ನಟಿಸಿದರೆ ಸಾಯಿ ಪಲ್ಲವಿ ಪೊಲೀಸ್ ಅಂತೆ. ಇಬ್ಬರ ನಡುವೆ ಸ್ಪಷ್ಟ ವೈರತ್ವ ಇರಲಿದೆ ಎನ್ನಲಾಗುತ್ತಿದೆ. ಆದರೆ ಎರಡೂ ಪಾತ್ರಗಳಿಗೆ ಸಮಾನ ಅವಕಾಶ ಮತ್ತು ಪ್ರಾಧಾನ್ಯತೆ ಇರಲಿದೆ ಎನ್ನಲಾಗುತ್ತಿದೆ.

ಸಾಯಿ ಪಲ್ಲವಿ ಪಾಲಿಗೆ ಇದು ಬಲು ಸವಾಲಿನ ಪಾತ್ರ ಆಗಲಿದೆ. ಸಾಯಿ ಪಲ್ಲವಿ ಅವರ ಸಿನಿಮಾಗಳ ಪಾತ್ರದ ರೀತಿಯಲ್ಲಿಯೇ ಬಲು ಸೌಮ್ಯ ವ್ಯಕ್ತಿತ್ವದವರು. ಆದರೆ ಪೊಲೀಸ್ ಪಾತ್ರಗಳಿಗೆ ಅದರದ್ದೇ ಆದ ಗಡಸು ವ್ಯಕ್ತಿತ್ವ ಬೇಕಾಗಿರುತ್ತದೆ. ಸಾಯಿ ಪಲ್ಲವಿ ಈ ಪಾತ್ರವನ್ನು ಹೇಗೆ ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಸಿನಿಮಾ ಪ್ರೇಮಿಗಳದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಾರುಖ್ ಖಾನ್ ಅಲಭ್ಯತೆ; ‘ಜೈಲರ್ 2’ ಸಿನಿಮಾದಲ್ಲಿ ಅತಿಥಿ ಪಾತ್ರವೇ ಡಿಲೀಟ್

ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ನಟನೆಯ, 2026ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಜೈಲರ್ 2’ (Jailer 2) ಸದ್ಯ ಭಾರಿ ಚರ್ಚೆಯಲ್ಲಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಸೀಕ್ವೆಲ್‌ನಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ (Shah Rukh Khan) ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಬಳಿಕ ಕೇಳಿಬಂದ ಮಾಹಿತಿ ಪ್ರಕಾರ, ಶಾರುಖ್ ಅವರು ಈ ಆಫರ್ ನಿರಾಕರಿಸಿದರು. ಬಳಿಕ ಬೇರೆ ನಟರನ್ನು ಚಿತ್ರತಂಡ ಸಂಪರ್ಕಿಸಿತ್ತು. ಆದರೆ ಈಗ ಆ ಪಾತ್ರವನ್ನೇ ಚಿತ್ರದಿಂದ ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.

ವರದಿಗಳ ಪ್ರಕಾರ, ಶಾರುಖ್ ಖಾನ್ ಅವರಿಗಾಗಿ ಸೃಷ್ಟಿಸಲಾಗಿದ್ದ ಇಡೀ ಪಾತ್ರವನ್ನು ಸ್ಕ್ರಿಪ್ಟ್‌ನಿಂದ ತೆಗೆದುಹಾಕಲು ‘ಜೈಲರ್ 2’ ತಂಡ ಮುಂದಾಗಿದೆ. ರಜನಿಕಾಂತ್ ಅವರು ಸದ್ಯ ಪ್ರವಾಸ ಮುಗಿಸಿ ಹಿಂತಿರುಗಲಿದ್ದು, ಜೂನ್ 8 ಅಥವಾ 9ರಂದು ಅವರೊಂದಿಗೆ ಒಂದು ಸಣ್ಣ ಪ್ಯಾಚ್‌ವರ್ಕ್ ಶೂಟಿಂಗ್ ನಡೆಸಲು ಚಿತ್ರತಂಡ ಯೋಜಿಸಿದೆ. ಆದರೆ, ಈ ಬಗ್ಗೆ ಚಿತ್ರದ ನಿರ್ಮಾಪಕರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಮೊದಲಿಗೆ ಶಾರುಖ್ ಖಾನ್ ಮತ್ತು ರಜನಿಕಾಂತ್ ಇಬ್ಬರೂ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಭಾರಿ ರೋಮಾಂಚನ ಉಂಟುಮಾಡಿತ್ತು. ಆದರೆ ಶಾರುಖ್ ಅವರು ತಮ್ಮ ಮುಂಬರುವ ‘ಕಿಂಗ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ ಈ ಅವಕಾಶವನ್ನು ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಶಾರುಖ್ ನಂತರ ಆ ಪಾತ್ರಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ ಅವರನ್ನು ಪರಿಗಣಿಸಲಾಗುತ್ತಿದೆ ಎಂಬ ವದಂತಿಗಳು ಕೇಳಿಬಂದಿದ್ದರೂ, ಅದಕ್ಕೂ ಯಾವುದೇ ಗಟ್ಟಿ ಪುರಾವೆ ಸಿಕ್ಕಿಲ್ಲ.

‘ಜೈಲರ್ 2’ ಚಿತ್ರದಲ್ಲಿ ರಜನಿಕಾಂತ್ ಮತ್ತೆ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಈ ಬಾರಿ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ ಮತ್ತು ಸೂರಜ್ ವೆಂಜಾರಮೂಡು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಮೊದಲ ಭಾಗದಲ್ಲಿದ್ದ ಮೋಹನ್‌ಲಾಲ್ ಮತ್ತು ಶಿವರಾಜ್‌ಕುಮಾರ್ ಕೂಡ ಸೀಕ್ವೆಲ್‌ನಲ್ಲಿ ಮುಂದುವರಿಯಲಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಸಿಗದ 5 ಕೋಟಿ ರೂಪಾಯಿ ಬೆಲೆಯ ಹೊಸ ಕಾರು ತರಿಸಿಕೊಂಡ ಶಾರುಖ್ ಖಾನ್

ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಘೋಷಿಸದಿದ್ದರೂ, ಮೂಲಗಳ ಪ್ರಕಾರ ಸಿನಿಮಾ ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ತೆರೆಕಾಣುವ ಸಾಧ್ಯತೆ ಇದೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಆಗಾಗ ಸುದ್ದಿ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

PhD Research Rules: ಪಿಎಚ್‌ಡಿ ಸಂಶೋಧಕರ ಗಮನಕ್ಕೆ; ಎಐ ಬಳಕೆ ಮತ್ತು ಕೃತಿಚೌರ್ಯಕ್ಕೆ ಬೀಳಲಿದೆ ಬ್ರೇಕ್! – Kannada News

ಪಿಎಚ್‌ಡಿ ಸಂಶೋಧಕರ ಗಮನಕ್ಕೆImage Credit source: Pinterest

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆ ದಿನೇದಿನೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, UGC ಪಿಎಚ್‌ಡಿ ಸಂಶೋಧನಾ ಪ್ರಬಂಧಗಳಲ್ಲಿ (Thesis) ಕಂಡುಬರುತ್ತಿರುವ ಕೃತಿಚೌರ್ಯ (Plagiarism) ಮತ್ತು ಎಐ ಉಪಕರಣಗಳ ದುರುಪಯೋಗವನ್ನು ತಡೆಯಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ನಿಯಮಗಳ ಮುಖ್ಯ ಉದ್ದೇಶ ಸಂಶೋಧನಾ ಕಾರ್ಯಗಳ ನೈಜತೆಯನ್ನು ಕಾಪಾಡುವುದು ಮತ್ತು ದೇಶದ ಉನ್ನತ ಶಿಕ್ಷಣ ಹಾಗೂ ಸಂಶೋಧನೆಯ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯುವುದಾಗಿದೆ. ಇದರೊಂದಿಗೆ, ಸಂಶೋಧನಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ಈ ನಿಯಮಗಳ ಬಗ್ಗೆ ಸಂಶೋಧಕರಿಗೆ ಕಡ್ಡಾಯವಾಗಿ ಮಾಹಿತಿ ನೀಡುವಂತೆ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಯುಜಿಸಿ ಸೂಚನೆ ನೀಡಿದೆ.

ಕೃತಿಚೌರ್ಯದ ಪ್ರಮಾಣಕ್ಕೆ ತಕ್ಕಂತೆ ಕಠಿಣ ದಂಡನೆ:

ಯುಜಿಸಿ ತನ್ನ ಹೊಸ ಮಾರ್ಗಸೂಚಿಗಳಲ್ಲಿ ಪಿಎಚ್‌ಡಿ ಪ್ರಬಂಧಗಳ ಕೃತಿಚೌರ್ಯಕ್ಕೆ (ನಕಲು ಮಾಡುವುದು) ಸಂಬಂಧಿಸಿದಂತೆ ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ನಕಲು ಮಾಡಿದ ಪ್ರಮಾಣದ ಆಧಾರದ ಮೇಲೆ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ:

  • ಶೇಕಡಾ 10 ರಿಂದ 40 ರಷ್ಟು ನಕಲು: ಸಂಶೋಧನಾ ಪ್ರಬಂಧದಲ್ಲಿ ಈ ಪ್ರಮಾಣದ ಕೃತಿಚೌರ್ಯ ಕಂಡುಬಂದರೆ, ಅದನ್ನು ತಿದ್ದುಪಡಿಗಾಗಿ ವಿದ್ಯಾರ್ಥಿಗೆ ವಾಪಸ್ ನೀಡಲಾಗುತ್ತದೆ. ಇಂತಹ ಸಂಶೋಧಕರು ಮುಂದಿನ ಆರು ತಿಂಗಳ ಒಳಗಾಗಿ ಅಗತ್ಯ ಬದಲಾವಣೆಗಳನ್ನು ಮಾಡಿ ಪ್ರಬಂಧವನ್ನು ಮರುಸಲ್ಲಿಸಬೇಕಾಗುತ್ತದೆ.
  • ಶೇಕಡಾ 40 ರಿಂದ 60 ರಷ್ಟು ನಕಲು: ಒಂದು ವೇಳೆ ಪ್ರಬಂಧದಲ್ಲಿ ಕೃತಿಚೌರ್ಯದ ಪ್ರಮಾಣವು ಶೇಕಡಾ 40 ರಿಂದ 60 ರಷ್ಟಿದ್ದರೆ, ಆ ಸಂಶೋಧಕರಿಗೆ ಮುಂದಿನ ಒಂದು ವರ್ಷದವರೆಗೆ ಪ್ರಬಂಧವನ್ನು ಸಲ್ಲಿಸಲು ಅನುಮತಿ ನೀಡುವುದಿಲ್ಲ.
  • ಶೇಕಡಾ 60 ಕ್ಕಿಂತ ಹೆಚ್ಚು ನಕಲು: ಪ್ರಬಂಧದಲ್ಲಿ ಶೇಕಡಾ 60 ಕ್ಕಿಂತಲೂ ಅಧಿಕ ಪ್ರಮಾಣದ ಮಾಹಿತಿ ನಕಲು ಆಗಿರುವುದು ಸಾಬೀತಾದರೆ, ಅಂತಹ ವಿದ್ಯಾರ್ಥಿಯ ಪಿಎಚ್‌ಡಿ ನೋಂದಣಿಯನ್ನೇ (Registration) ಶಾಶ್ವತವಾಗಿ ರದ್ದುಗೊಳಿಸಲಾಗುತ್ತದೆ. ಈ ಮೂಲಕ ಸಂಶೋಧನೆಯಲ್ಲಿ ಕೇವಲ ನೈಜತೆಗೆ ಮಾತ್ರ ಮನ್ನಣೆ ಸಿಗುವಂತೆ ಯುಜಿಸಿ ನೋಡಿಕೊಳ್ಳುತ್ತಿದೆ.

ತಪ್ಪು ಮಾಡಿದರೆ ಸಂಶೋಧನಾ ಮಾರ್ಗದರ್ಶಕರಿಗೂ ಶಿಕ್ಷೆ:

ಹೊಸ ನಿಯಮಗಳ ಪ್ರಕಾರ, ಸಂಶೋಧನಾ ಪ್ರಬಂಧದಲ್ಲಿ ನಿಯಮಗಳ ಉಲ್ಲಂಘನೆಯಾದರೆ ಕೇವಲ ವಿದ್ಯಾರ್ಥಿ ಮಾತ್ರವಲ್ಲದೆ, ಅವರ ಸಂಶೋಧನಾ ಮಾರ್ಗದರ್ಶಕರು (ಗೈಡ್ ಅಥವಾ ಸೂಪರ್‌ವೈಸರ್) ಸಹ ನೇರ ಹೊಣೆಗಾರರಾಗುತ್ತಾರೆ. ಯಾವುದೇ ಒಬ್ಬ ವಿದ್ಯಾರ್ಥಿಯ ಪ್ರಬಂಧದಲ್ಲಿ ಗಂಭೀರ ಮಟ್ಟದ ಕೃತಿಚೌರ್ಯ ಕಂಡುಬಂದಲ್ಲಿ ಅಥವಾ ಇಂತಹ ತಪ್ಪುಗಳು ಪದೇಪದೇ ಮರುಕಳಿಸಿದರೆ, ಸಂಬಂಧಪಟ್ಟ ಮಾರ್ಗದರ್ಶಕರಿಗೆ ಹೊಸ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದನ್ನು ನಿರ್ಬಂಧಿಸಲಾಗುತ್ತದೆ. ಅಷ್ಟೇ ಅಲ್ಲದೆ, ತಪ್ಪು ಗಂಭೀರ ಸ್ವರೂಪದ್ದಾಗಿದ್ದರೆ ಅವರ ಗೈಡ್‌ಶಿಪ್ ಮಾನ್ಯತೆಯನ್ನೂ ಸಹ ಸಂಪೂರ್ಣವಾಗಿ ರದ್ದುಗೊಳಿಸುವ ಅಧಿಕಾರವನ್ನು ವಿಶ್ವವಿದ್ಯಾಲಯಗಳಿಗೆ ನೀಡಲಾಗಿದೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಕೃತಕ ಬುದ್ಧಿಮತ್ತೆ (AI) ಬಳಕೆಗೆ ಯುಜಿಸಿಯಿಂದ ಸ್ಪಷ್ಟ ಲಕ್ಷ್ಮಣ ರೇಖೆ:

ಪ್ರಬಂಧ ರಚನೆಯಲ್ಲಿ ಎಐ (AI) ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದಂತೆ ಯುಜಿಸಿ ಅತ್ಯಂತ ಸ್ಪಷ್ಟವಾದ ನೀತಿಯನ್ನು ರೂಪಿಸಿದೆ. ಸಂಶೋಧಕರು ತಮ್ಮ ಪ್ರಬಂಧದ ವ್ಯಾಕರಣ ದೋಷಗಳನ್ನು ತಿದ್ದಿಕೊಳ್ಳಲು, ಭಾಷಾ ಸಂಪಾದನೆಗೆ (Language Editing) ಮತ್ತು ಇತರ ಸಾಮಾನ್ಯ ಕಾರ್ಯಗಳಿಗಾಗಿ ಚಾಟ್‌ಜಿಪಿಟಿಯಂತಹ ಎಐ ಉಪಕರಣಗಳನ್ನು ಬಳಸಬಹುದು. ಆದರೆ, ತಾವು ಎಲ್ಲಿ ಮತ್ತು ಯಾವ ಕೆಲಸಕ್ಕಾಗಿ ಎಐ ಬಳಸಿದ್ದೇವೆ ಎಂಬುದನ್ನು ಪ್ರಬಂಧದಲ್ಲಿ ಕಡ್ಡಾಯವಾಗಿ ಉಲ್ಲೇಖಿಸಬೇಕಾಗುತ್ತದೆ. ಆದರೆ ನೆನಪಿರಲಿ, ಸಂಶೋಧನೆಯ ಮುಖ್ಯ ತಿರುಳಾದ ತೀರ್ಮಾನಗಳು (Conclusions), ಸಾರಾಂಶ (Summary) ಅಥವಾ ದತ್ತಾಂಶ ವಿಶ್ಲೇಷಣೆಯನ್ನು (Data Analysis) ಸಿದ್ಧಪಡಿಸಲು ಎಐನಿಂದ ಪಡೆದ ಸಿದ್ಧ ಸಾಮಗ್ರಿಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಯುಜಿಸಿಯ ಈ ಕ್ರಾಂತಿಕಾರಿ ಹೆಜ್ಜೆಯು ಭಾರತೀಯ ಉನ್ನತ ಶಿಕ್ಷಣ ವಲಯದಲ್ಲಿ ಗುಣಮಟ್ಟದ ಸಂಶೋಧನೆಗೆ ಹೊಸ ದಾರಿಯನ್ನು ತೋರಿಸಲಿದೆ. ಎಐ ತಂತ್ರಜ್ಞಾನವನ್ನು ಕೇವಲ ಒಂದು ಸಹಾಯಕರ ವಸ್ತುವಾಗಿ ಬಳಸಬೇಕೇ ಹೊರತು, ಅದು ಸಂಶೋಧಕನ ಸ್ವಂತ ಬುದ್ಧಿಮತ್ತೆಗೆ ಪರ್ಯಾಯವಾಗಬಾರದು ಎಂಬುದನ್ನು ಈ ನಿಯಮಗಳು ಸ್ಪಷ್ಟಪಡಿಸುತ್ತವೆ. ಇನ್ಮುಂದೆ ಪಿಎಚ್‌ಡಿ ಪದವಿ ಪಡೆಯಲು ಕೇವಲ ಕಠಿಣ ಪರಿಶ್ರಮ ಮತ್ತು ಸಂಶೋಧನೆಯ ನೈಜತೆ ಮಾತ್ರವೇ ಮಾನದಂಡವಾಗಲಿದ್ದು, ಶಾರ್ಟ್‌ಕಟ್ ಹುಡುಕುವವರಿಗೆ ಯುಜಿಸಿ ಸೂಕ್ತ ರೀತಿಯಲ್ಲಿ ಬ್ರೇಕ್ ಹಾಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿಂಗಾಪುರದಲ್ಲಿ ಭಾರತೀಯ ಸಮುದಾಯದ ವಿರುದ್ಧದ 14 ದ್ವೇಷಪೂರಿತ ಪೋಸ್ಟ್‌ಗಳಿಗೆ ನಿರ್ಬಂಧ – Kannada News

ಸಿಂಗಾಪುರ, ಜೂನ್ 07: ಸಿಂಗಾಪುರ(Singapore)ದಲ್ಲಿ ಭಾರತೀಯ ಸಮುದಾಯದ ಬಗ್ಗೆ ವಿಷಬೀಜ ಬಿತ್ತುತ್ತಿದ್ದ 14 ಪೋಸ್ಟ್​ಗಳನ್ನು ಸರ್ಕಾರ ನಿರ್ಬಂಧಿಸಿದೆ. ಜಾಗತಿಕ ಮಟ್ಟದಲ್ಲಿ ಬಹುಸಂಸ್ಕೃತಿ ಹಾಗೂ ವಿವಿಧ ಜನಾಂಗಗಳ ಸೌಹಾರ್ದಯುತ ಸಹಬಾಳ್ವೆಗೆ ಹೆಸರಾಗಿರುವ ಸಿಂಗಾಪುರ ಸರ್ಕಾರವು ತನ್ನ ದೇಶದಲ್ಲಿರುವ ಭಾರತ ಮೂಲದ ನಾಗರಿಕರ ಹಿತರಕ್ಷಣೆಗಾಗಿ ಅತ್ಯಂತ ಶ್ಲಾಘನೀಯ ಹಾಗೂ ದೃಢವಾದ ಹೆಜ್ಜೆಯನ್ನಿಟ್ಟಿದೆ. ಸಿಂಗಾಪುರದಲ್ಲಿರುವ ಭಾರತೀಯ ಸಮುದಾಯವನ್ನು ನಕಾರಾತ್ಮಕವಾಗಿ ಚಿತ್ರಿಸಲು ಹಾಗೂ ಜನಾಂಗೀಯ ವಿಭಜನೆ ಸೃಷ್ಟಿಸಲು ವಿದೇಶಿ ಮೂಲಗಳಿಂದ ಹರಡಲಾಗುತ್ತಿದ್ದ 14 ದ್ವೇಷಪೂರಿತ ಆನ್‌ಲೈನ್ ಪೋಸ್ಟ್‌ಗಳನ್ನು ಅಲ್ಲಿನ ಸರ್ಕಾರ ತಕ್ಷಣವೇ ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಸರ್ಕಾರದ ಈ ತ್ವರಿತ ಮತ್ತು ಕಟ್ಟುನಿಟ್ಟಿನ ಕ್ರಮವು ಸಿಂಗಾಪುರದಲ್ಲಿರುವ ಲಕ್ಷಾಂತರ ಭಾರತೀಯರಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸಿದೆ ಮತ್ತು ದೇಶದ ಸಾಮಾಜಿಕ ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಸಿಂಗಾಪುರದ ಗೃಹ ವ್ಯವಹಾರಗಳ ಸಚಿವಾಲಯವು (MHA) ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ‘ಆನ್‌ಲೈನ್ ಕ್ರಿಮಿನಲ್ ಹಾರ್ಮ್ಸ್ ಆಕ್ಟ್ 2023’ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಚಲಾಯಿಸಿದೆ.

ಯೂಟ್ಯೂಬ್, ಫೇಸ್‌ಬುಕ್ ಮತ್ತು ಎಕ್ಸ್ (ಟ್ವಿಟರ್) ನಂತಹ ಪ್ರಮುಖ ಅಂತಾರಾಷ್ಟ್ರೀಯ ಇಂಟರ್ನೆಟ್ ಮಾಧ್ಯಮ ವೇದಿಕೆಗಳಿಗೆ ಸಿಂಗಾಪುರ ಪೊಲೀಸರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈ ಪೋಸ್ಟ್‌ಗಳು ಸಿಂಗಾಪುರದ ಯಾವುದೇ ಬಳಕೆದಾರರಿಗೆ ಗೋಚರಿಸದಂತೆ ತಕ್ಷಣವೇ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಆದೇಶಿಸಲಾಗಿದೆ.

ಲಿಟಲ್ ಇಂಡಿಯಾದ ಜನನಿಬಿಡ ಬೀದಿಗಳು ಹಾಗೂ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳ ಚಿತ್ರಗಳನ್ನು ದುರುಪಯೋಗಪಡಿಸಿಕೊಂಡು ವಾಸ್ತವವನ್ನು ವಿರೂಪಗೊಳಿಸಲು ಯತ್ನಿಸಿದ ಜಾಲವನ್ನು ಸರ್ಕಾರ ಯಶಸ್ವಿಯಾಗಿ ಹತ್ತಿಕ್ಕಿದೆ.

ಮತ್ತಷ್ಟು ಓದಿ: Video: ಖಾಲಿ ರಸ್ತೆಯಲ್ಲೂ ಗ್ರೀನ್ ಸಿಗ್ನಲ್ ಬರುವವರೆಗೂ ಕಾದು ನಿಂತ ವ್ಯಕ್ತಿ

‘ಚಾನೆಲ್ ನ್ಯೂಸ್ ಏಷ್ಯಾ’ ವರದಿಯ ಪ್ರಕಾರ, ಉನ್ನತ ಮಟ್ಟದ ತನಿಖಾ ಸಂಸ್ಥೆಗಳು ಈ ಆಕ್ಷೇಪಾರ್ಹ ಪೋಸ್ಟ್‌ಗಳ ಮೂಲವನ್ನು ಪತ್ತೆಹಚ್ಚಿದ್ದು, ಇವು ಚೀನಾದ ಆನ್‌ಲೈನ್ ಪ್ಲಾಟ್‌ಫಾರ್ಮ್ ಒಂದರಲ್ಲಿ ಹುಟ್ಟಿಕೊಂಡಿದ್ದವು ಎಂಬುದನ್ನು ಬಹಿರಂಗಪಡಿಸಿವೆ. ಅಲ್ಲಿಂದ ಇವುಗಳನ್ನು ಇತರ ವೆಬ್‌ಸೈಟ್‌ಗಳು ಹಂಚಿಕೊಂಡಿದ್ದವು.

ಕಾನೂನು ಸಚಿವ ಎಡ್ವಿನ್ ಟಾಂಗ್ ಅವರು ಮಾತನಾಡಿ, ಯಾವುದೇ ವಿದೇಶಿ ಸರ್ಕಾರಗಳು ಈ ವಿಷಯದ ಹರಡುವಿಕೆಯನ್ನು ಸಂಘಟಿಸಿವೆ ಎಂಬುದಕ್ಕೆ ಪ್ರಸ್ತುತ ಯಾವುದೇ ಪುರಾವೆಗಳಿಲ್ಲ. ಆದರೆ, ಮೂಲ ಯಾವುದೇ ಇರಲಿ, ನಮ್ಮ ಸಮಾಜದಲ್ಲಿ ಸೌಹಾರ್ದತೆಯನ್ನು ಕೆಡಿಸುವ ಇಂತಹ ಪ್ರಯತ್ನಗಳನ್ನು ನಾವು ಕಟುವಾಗಿ ವಿರೋಧಿಸುತ್ತೇವೆ, ಎಂದು ಸ್ಪಷ್ಟಪಡಿಸಿದ್ದಾರೆ.

ಸಿಂಗಾಪುರವು ಬಹುಸಂಸ್ಕೃತಿಯ ಸುಂದರ ಸಮಾಜವಾಗಿದ್ದು, ಇಲ್ಲಿ ಎಲ್ಲಾ ಜನಾಂಗೀಯ ಮತ್ತು ಧಾರ್ಮಿಕ ಸಮುದಾಯಗಳನ್ನು ಸಮಾನ ಗೌರವ ಮತ್ತು ಪ್ರೀತಿಯಿಂದ ನೋಡಲಾಗುತ್ತದೆ. ಭಾರತೀಯರ ಸಮಗ್ರತೆ ಮತ್ತು ಘನೆತೆಗೆ ಧಕ್ಕೆ ತರುವ ಯಾವುದೇ ದ್ವೇಷ ಸಂದೇಶಗಳನ್ನು ನಮ್ಮ ದೇಶದಲ್ಲಿ ಸಹಿಸುವುದಿಲ್ಲ.

ಜನಾಂಗೀಯ ಸಾಮರಸ್ಯ ಮತ್ತು ಸಾಮಾಜಿಕ ಸಮತೋಲನವನ್ನೇ ತನ್ನ ಅತಿ ದೊಡ್ಡ ಶಕ್ತಿ ಎಂದು ನಂಬಿರುವ ಸಿಂಗಾಪುರ ಸರ್ಕಾರವು, ಯಾವುದೇ ವದಂತಿಗಳನ್ನು ಕುರುಡಾಗಿ ನಂಬದಂತೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ತನ್ನ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಸಿಂಗಾಪುರ ಸರ್ಕಾರದ ಈ ಮಾದರಿ ನಡೆ ಜಾಗತಿಕ ಮಟ್ಟದಲ್ಲಿ ಭಾರತೀಯ ಸಮುದಾಯದ ರಕ್ಷಣೆಗೆ ದಿಕ್ಸೂಚಿಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link