Headlines

ಟಿ20 ಕ್ರಿಕೆಟ್​ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಬಾಬರ್ ಆಝಂ – Kannada News | Babar Azam first batter to reach 4500 T20I runs

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 48 ಬ್ಯಾಟರ್​ಗಳು 2 ಸಾವಿರಕ್ಕಿಂತ ಅಧಿಕ ರನ್ ಕಲೆಹಾಕಿದ್ದಾರೆ. ಈ 48 ಬ್ಯಾಟರ್​ಗಳಲ್ಲಿ 12 ಮಂದಿ 3 ಸಾವಿರಕ್ಕಿಂತ ಅಧಿಕ ರನ್​ ಗಳಿಸಿದ್ದಾರೆ. ಇನ್ನು ಈ ಹನ್ನೆರಡು ಮಂದಿಯಲ್ಲಿ 4 ಸಾವಿರ ರನ್​ಗಳ ಗಡಿದಾಟಿರುವುದು ಕೇವಲ ಮೂವರು ಮಾತ್ರ. ಇವರಲ್ಲಿ ಅಗ್ರಸ್ಥಾನದಲ್ಲಿರುವುದು ಬಾಬರ್ ಆಝಂ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಬಾಬರ್ ಆಝಂ 36 ಎಸೆತಗಳಲ್ಲಿ ಅಜೇಯ 50 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ಬಾಬರ್…

Read More

Bengaluru Air Quality: ರಾಜ್ಯದ ಹಲವೆಡೆ ಏರ್ ಕ್ವಾಲಿಟಿ ಕುಸಿತ, ಬೆಂಗಳೂರಿನಲ್ಲಿ ಸುಧಾರಿಸಿಲ್ಲ ವಾಯು ಗುಣಮಟ್ಟ – Kannada News | Bangalore Air Pollution Crisis: Bengaluru, Ballary and Shivamogga Air quality is getting poor

ರಾಜ್ಯದ ಹಲವೆಡೆ ಏರ್ ಕ್ವಾಲಿಟಿ ಕುಸಿತ, ಬೆಂಗಳೂರಿನಲ್ಲಿ ಸುಧಾರಿಸಿಲ್ಲ ವಾಯು ಗುಣಮಟ್ಟ ಬೆಂಗಳೂರು, ಫೆಬ್ರುವರಿ 03: ಬೆಂಗಳೂರಿನ ವಾಯು ಗುಣಮಟ್ಟ (Bengaluru Air Quality) ದಿನಕ್ಕೊಂದು ರೀತಿ ಬದಲಾಗುತ್ತಿದೆ. ಅದರೊಂದಿಗೆ ಮಂಗಳೂರು, ಶಿವಮೊಗ್ಗ ಮತ್ತು ಬಳ್ಳಾರಿಯ ಏರ್ ಕ್ವಾಲಿಟಿ ಸಹ 200ಕ್ಕೆ ಹತ್ತಿರವಾಗುತ್ತಿರುವುದು ಸಾಕಷ್ಟು ಆತಂಕ ಸೃಷ್ಟಿಯಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಹಲವು ಜಿಲ್ಲೆಗಳಲ್ಲಿ ಕಲುಷಿತ ಗಾಳಿ ಕೆಲ ದಿನಗಳಿಂದಲೂ ಏರಿಕೆ ಕಾಣುತ್ತಿದ್ದ ಬಳ್ಳಾರಿಯ ಏರ್ ಕ್ವಾಲಿಟಿ, ಇಂದು 204ಕ್ಕೆ ಹೋಗಿ ತಲುಪಿದೆ. ಶಿವಮೊಗ್ಗದ…

Read More

ಇದೇನ್ ರೇಸಿಂಗಾ! ಅಗರ ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್ – Kannada News | Rash Driving on Agara Flyover Bengaluru, Biker Narrowly Escapes in Shocking Near Miss

ಬೆಂಗಳೂರು, ಫೆಬ್ರವರಿ 3: ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಮತ್ತು ಕೋರಮಂಗಲವನ್ನು ಸಂಪರ್ಕಿಸುವ ಅಗರ ಫ್ಲೈಓವರ್ ಮೇಲೆ ಇತ್ತೀಚೆಗೆ ನಡೆದ ಅತಿವೇಗದ ಮತ್ತು ಅಜಾಗರೂಕ ಕಾರು ಚಾಲನೆಯ ದೃಶ್ಯವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಒಂದು ಕಾರನ್ನು ಅತಿವೇಗದಿಂದ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಲಾಗಿದ್ದು, ಬೈಕ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಾರು ಚಾಲಕನು ಓವರ್‌ಟೇಕ್ ಮಾಡಲು ಯತ್ನಿಸಿದಾಗ ಈ ಘಟನೆ ನಡೆದಿದೆ. ಈ ಘಟನೆಯ ದೃಶ್ಯವು ಹಿಂಬದಿಯಲ್ಲಿ ಬರುತ್ತಿದ್ದ ಇನ್ನೊಂದು ಕಾರಿನ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಕರ್ನಾಟಕದ ಇನ್ನಷ್ಟು…

Read More

‘ಧುರಂಧರ್’ ಸಿನಿಮಾ ವಿಷಯದಲ್ಲಿ ಕೊನೆಗೂ ತಪ್ಪು ತಿದ್ದಿಕೊಂಡ ನೆಟ್​​ಫ್ಲಿಕ್ಸ್ – Kannada News | Dhurandhar Netflix OTT Release Fixed: Quality Issues Resolved After Audience Backlash

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರ ಇತ್ತೀಚೆಗೆ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸನ್ನು ಗಳಿಸಿದ ನಂತರ, ‘ಧುರಂಧರ್’ ಚಿತ್ರದ ಒಟಿಟಿ ಬಿಡುಗಡೆಯ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಇತ್ತು. ಆದ್ದರಿಂದ, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆದ ಕೇವಲ 24 ಗಂಟೆಗಳಲ್ಲಿ ಚಿತ್ರವು ಟ್ರೆಂಡಿಂಗ್‌ ಅಲ್ಲಿ ಮೊದಲ ಸ್ಥಾನದಲ್ಲಿ ಬರಲು ಪ್ರಾರಂಭಿಸಿತು. ಆದರೆ ‘ಧುರಂಧರ್’ ಚಿತ್ರದ ಒಟಿಟಿ ಆವೃತ್ತಿ ಪ್ರೇಕ್ಷಕರನ್ನು ದೊಡ್ಡ ಪ್ರಮಾಣದಲ್ಲಿ ನಿರಾಶೆಗೊಳಿಸಿತು. ಟೀಕೆ ವ್ಯಕ್ತವಾದ ಬಳಿಕ ನೆಟ್​ಫ್ಲಿಕ್ಸ್ ತಪ್ಪು ತಿದ್ದುಕೊಂಡಿದೆ. ಥಿಯೇಟರ್‌ಗೆ…

Read More

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಒಣ ಹವಾಮಾನ ಮುಂದುವರಿಕೆ – Kannada News | Bengaluru temperature: Dry weather all over karnataka, clear sky in bengaluru

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಒಣ ಹವಾಮಾನ ಮುಂದುವರಿಕೆ ಬೆಂಗಳೂರು, ಫೆಬ್ರುವರಿ 03: ರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ (Weather Forecast) ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನವಿರುವುದರಿಂದ ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಕ ಎಲ್ಲೆಲ್ಲಿ ಒಣಹವೆ? ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ…

Read More

ನಕಲಿ ವಸಂತ್ ಮಾಸ್ಟರ್​​ನ ಗೋಳು ಹೋಯ್ದುಕೊಂಡ ರಚಿತಾ ರಾಮ್-ನಯನಾ – Kannada News | Rachita Ram and Nayana Tease ‘Fake Vasanth Master’ on DKD 2025: Viral Fun

ಜೀ ಕನ್ನಡದ (Zee Kannada) ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೂಲಕ ಹಲವು ಪ್ರತಿಭೆಗಳಿಗೆ ವೇದಿಕೆ ಸಿಕ್ಕಿದೆ. ಅದೇ ರೀತಿ ಅನೇಕ ಡ್ಯಾನ್ಸ್ ಮಾಸ್ಟರ್​​​ಗಳಿಗೂ ತಮ್ಮ ಕಲೆಯನ್ನು ತೋರಿಸಲು ಒಂದು ವೇದಿಕೆ ಸಿಕ್ಕಂತೆ ಆಗಿದೆ. ಈಗ ವಸಂತ್ ಮಾಸ್ಟರ್ಸ್​ ಅವರ ಬಗ್ಗೆ ಚರ್ಚೆ ನಡೆದಿದೆ. ಜೀ ಕನ್ನಡದಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ವಸಂತ್ ಅವರಿಗೆ ಬೇಡಿಕೆ ಇದೆ. ಈ ವೇದಿಕೆ ಮೇಲೆ ನಕಲಿ ವಸಂತ್ ಮಾಸ್ಟರ್ಸ್​​ನ ರಚಿತಾ ರಾಮ್ ಹಾಗೂ ನಯನಾ ಗೋಳುಹೊಯ್ದುಕೊಂಡಿದ್ದು, ವಿಡಿಯೋ…

Read More

ಸಾಲ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯ ಕತ್ತು ಸೀಳಿದ ಪತಿ: ಜೀವ ಉಳಿಸೆಂದು ಬೇಡಿಕೊಂಡರೂ ಕರಗಲಿಲ್ಲ ಕ್ರೂರಿಯ ಮನ – Kannada News | Husband Slits Wife’s Throat Over Loan Dispute in Hubballi, Surrenders to Police

ಹುಬ್ಬಳ್ಳಿ, ಫೆಬ್ರವರಿ 3: ಸಾಲದ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯ ಕತ್ತು ಸೀಳಿ ಕೊಂದ ಅಮಾನುಷ ಘಟನೆ ಹುಬ್ಬಳ್ಳಿಯ (Hubballi) ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಇರ್ಫಾನ್ ಎಂಬಾತ ಪತ್ನಿ ಮಾಸಬ್ಬಿಯನ್ನು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಭೀಕರ ಕೃತ್ಯದಿಂದ ಇಡೀ ಏರಿಯಾವೇ ಬೆಚ್ಚಿಬಿದ್ದಿದೆ. ಮಾಸಬ್ಬಿ ಮತ್ತು ಇರ್ಫಾನ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದರು. ಆದರೂ, ಮನೆಯೊಳಗಿನ ಸಾಲದ ಸಂಕಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಗಾರೆ ಕೆಲಸ ಮಾಡಿಕೊಂಡಿದ್ದ…

Read More

‘ಚೆನ್ನಾಗಿರಲ್ಲ’; ತಪ್ಪಾಗಿ ನಡೆದುಕೊಂಡವರಿಗೆ ಸುದೀಪ್ ಎಚ್ಚರಿಕೆ – Kannada News | Kichcha Sudeep’s Stern Warning to Fans: Prioritizing Decorum at Public Events

ಕಿಚ್ಚ ಸುದೀಪ್ (Sudeep) ಅವರು ಹೋದಲ್ಲಿ ಬಂದಲ್ಲಿ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಅವರು ಯಾವುದಾದರೂ ವೇದಿಕೆ ಏರಿದರೆ ಸಾಕು, ಬೇರೆಯವರಿಗೆ ಮಾತನಾಡಲು ಅವಕಾಶ ಕೂಡ ಕೊಡದೇ, ‘ಕಿಚ್ಚ ಕಿಚ್ಚ’ ಎಂದು ಘೋಷಣೆ ಕೂಗುತ್ತಾರೆ. ಈಗ ಸುದೀಪ್ ಅವರು ವಾರ್ನಿಂಗ್ ಒಂದನ್ನು ಕೊಟ್ಟಿದ್ದಾರೆ. ವೇದಿಕೆಯಲ್ಲಿ ಮಾತನಾಡುವಾಗ ತಪ್ಪಾಗಿ ನಡೆದುಕೊಂಡು, ತೊಂದರೆ ಕೊಟ್ಟವರಿಗೆ ಕಿಚ್ಚನ ಖಡಕ್ ವಾರ್ನಿಂಗ್ ಪಾಸ್ ಆಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ ಸುದೀಪ್ ಅವರ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸಂಘಟಿತ ಆಟ ಪ್ರದರ್ಶನ…

Read More

ಸರ್ಕಾರ, ಸಚಿವರ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದಿಂದಲ್ಲೇ ಭ್ರಷ್ಟಾಚಾರದ ಡೀಲ್! ಆಡಿಯೋ ವೈರಲ್ – Kannada News | Corruption Deal In Karnataka Contractors’ Association Alleged Commission Against Karnataka Government, Audio Goes Viral

ಗುತ್ತಿಗೆದಾರರ ಸಂಘದಿಂದಲ್ಲೇ ಭ್ರಷ್ಟಾಚಾರದ ಡೀಲ್! ಆಡಿಯೋ ವೈರಲ್Image Credit source: tv9 ಬೆಂಗಳೂರು, ಫೆಬ್ರವರಿ 3: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರ ಹಾಗೂ ಸಚಿವರ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್ ಆರೋಪ ಕೇಳಿಬಂದ ಬೆನ್ನಲ್ಲೇ, ಇದೀಗ ಅದೇ ಗುತ್ತಿಗೆದಾರರ ಸಂಘದೊಳಗೇ (Karnataka Contractors’ Association) ಭ್ರಷ್ಟಾಚಾರದ ಡೀಲ್ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೇ ಬಡ ಗುತ್ತಿಗೆದಾರರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದಲ್ಲದೇ, ಅದಕ್ಕೆ ಸಂಬಂಧಿಸಿದ…

Read More