Category Archives: Blog

Your blog category

ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟ: ವಾರ್ಡರ್ ಮೇಲೆ ಹಲ್ಲೆಗೆ ಯತ್ನ! – Kannada News

ಬೆಂಗಳೂರು, ಜೂನ್ 07: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಾಂಬ್ ಸ್ಫೋಟ ಪ್ರಕರಣದ ಕೈದಿಗಳು (Inmates) ಜೈಲು ಸಿಬ್ಬಂದಿ ಜೊತೆ ವಾಗ್ವಾದ ನಡೆಸಿ, ಧರ್ಮದ ಪರ ಘೋಷಣೆಗಳನ್ನು ಕೂಗಿ ಪುಂಡಾಟ ನಡೆಸಿರುವ ಗಂಭೀರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮೂರು ದಿನಗಳ ಹಿಂದೆ ನಡೆದ ಈ ಘಟನೆಯಿಂದಾಗಿ ಜೈಲು ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಮುಖ್ಯಾಂಶಗಳು

  • ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಾಂಬ್ ಸ್ಫೋಟದ ಕೈದಿಗಳು ಪುಂಡಾಟ ನಡೆಸಿದ್ದಾರೆ.
  • ನಿಯಮ ಉಲ್ಲಂಘನೆ ಪ್ರಶ್ನಿಸಿದ ಜೈಲು ವಾರ್ಡರ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ.
  • ಐವತ್ತಕ್ಕೂ ಹೆಚ್ಚು ಕೈದಿಗಳು ಒಟ್ಟಾಗಿ ಧರ್ಮದ ಪರ ಘೋಷಣೆ ಕೂಗಿದ್ದಾರೆ.

ಘಟನೆಯ ಹಿನ್ನೆಲೆ ಮತ್ತು ವಾಗ್ವಾದ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಕೈದಿಗಳು (ಉಗ್ರರು) ಜೈಲು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಆದರೆ, ಅವರು ನಿಯಮ ಉಲ್ಲಂಘಿಸಿ ಬೇರೆ ಕೈದಿಯ ಹೆಸರಿನಲ್ಲಿ ಆಸ್ಪತ್ರೆಗೆ ದಾಖಲಾಗಲು ಯತ್ನಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ಜೈಲು ವಾರ್ಡರ್ ದಾಖಲೆಗಳನ್ನು ಪರಿಶೀಲಿಸಿದಾಗ ಇಬ್ಬರು ಕೈದಿಗಳ ಗುರುತು ಪತ್ತೆಯಾಗಿದೆ. ಬೇರೆ ಕೈದಿ ಹೆಸರಿನಲ್ಲಿ ಯಾಕೆ ಬಂದಿದ್ದೀರಿ ಎಂದು ವಾರ್ಡರ್ ಪ್ರಶ್ನಿಸಿದಾಗ, ಉಗ್ರರು ಮತ್ತು ವಾರ್ಡರ್ ಮಧ್ಯೆ ತೀವ್ರ ವಾಗ್ವಾದ ಹಾಗೂ ಮಾತಿನ ಚಕಮಕಿ ಆರಂಭವಾಗಿದೆ.

ಖೈದಿಗಳ ಜಮಾವಣೆ

ವಾರ್ಡರ್ ಪ್ರಶ್ನಿಸುತ್ತಿದ್ದಂತೆ ಜೈಲಿನಲ್ಲಿದ್ದ ಇತರ ಬಾಂಬ್ ಸ್ಫೋಟ ಪ್ರಕರಣದ 50ಕ್ಕೂ ಹೆಚ್ಚು ಉಗ್ರ ಕೈದಿಗಳು ತಕ್ಷಣ ಒಂದೆಡೆ ಜಮಾವಣೆಗೊಂಡಿದ್ದಾರೆ. ವಾರ್ಡರ್ ಕ್ರಮವನ್ನು ವಿರೋಧಿಸಿದ ಕೈದಿಗಳ ಗುಂಪು, ಜೈಲಿನೊಳಗೇ ಒಂದು ಧರ್ಮದ ಪರವಾಗಿ ಜೋರಾಗಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದೆ. ಅಷ್ಟೇ ಅಲ್ಲದೆ, ಕರ್ತವ್ಯದಲ್ಲಿದ್ದ ಜೈಲು ವಾರ್ಡರ್ ಮೇಲೆ ಹಲ್ಲೆ ಮಾಡಲು ಸಹ ಕೈದಿಗಳು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ

ಘಟನೆಯಿಂದ ಜೈಲಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಎಚ್ಚೆತ್ತ ಜೈಲಿನ ಹಿರಿಯ ಅಧಿಕಾರಿಗಳು ಮತ್ತು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಕೈದಿಗಳನ್ನು ಮನವೊಲಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಜೈಲಿನಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ವಹಿಸಲಾಗಿದೆ. ಆದರೆ, ಇಷ್ಟೆಲ್ಲಾ ಹಂಗಾಮಾ ನಡೆದಿದ್ದರೂ ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Vasthu Tips: ದಾಂಪತ್ಯದಲ್ಲಿ ಕಲಹವೇ? ನಿಮ್ಮ ಬೆಡ್‌ರೂಮ್‌ನ ಈ ವಾಸ್ತು ದೋಷಗಳೇ ಕಾರಣ! – Kannada News

ದಾಂಪತ್ಯದಲ್ಲಿ ಕಲಹವೇ? Image Credit source: Pinterest

ಪತಿ-ಪತ್ನಿಯರ ಸಂಬಂಧವನ್ನು ಅತ್ಯಂತ ಪವಿತ್ರ ಮತ್ತು ಪ್ರಮುಖವಾದುದು ಎಂದು ಪರಿಗಣಿಸಲಾಗುತ್ತದೆ. ಈ ದಾಂಪತ್ಯ ಜೀವನದಲ್ಲಿ ಸದಾ ಪ್ರೀತಿ ಮತ್ತು ಸಾಮರಸ್ಯ ನೆಲೆಸಬೇಕಾದರೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ (Positive energy) ಇರುವುದು ಅತ್ಯಂತ ಅವಶ್ಯಕ. ಆದರೆ, ಹಲವು ಬಾರಿ ಎಷ್ಟೇ ಪ್ರಯತ್ನಿಸಿದರೂ ಯಾವುದೇ ಕಾರಣವಿಲ್ಲದೆ ಪತಿ-ಪತ್ನಿಯರ ನಡುವೆ ಅನಗತ್ಯ ಜಗಳ ಮತ್ತು ಮುನಿಸು ಉಂಟಾಗುತ್ತದೆ. ಇಂತಹ ಸನ್ನಿವೇಶಗಳ ಹಿಂದೆ ಬೆಡ್‌ರೂಮ್‌ನ (ಮಲಗುವ ಕೋಣೆ) ವಾಸ್ತು ದೋಷ ಪ್ರಮುಖ ಕಾರಣವಾಗಿರಬಹುದು.

ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ದೋಷಗಳಿದ್ದರೆ ಪತಿ-ಪತ್ನಿಯರ ನಡುವೆ ಅಂತರ ಹೆಚ್ಚಾಗತೊಡಗುತ್ತದೆ. ಒಂದು ವೇಳೆ ನೀವು ಕೂಡ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಿಮ್ಮ ಬೆಡ್‌ರೂಮ್‌ನಲ್ಲಿ ಈ ಕೆಳಗಿನ ವಾಸ್ತು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ದಾಂಪತ್ಯವನ್ನು ಮಧುರವಾಗಿಸಿಕೊಳ್ಳಬಹುದು.

ಬೆಡ್‌ರೂಮ್ ಮತ್ತು ಮಲಗುವ ದಿಕ್ಕು ಸರಿಯಾಗಿರಲಿ:

ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಮಲಗುವ ಕೋಣೆಗೆ ದಕ್ಷಿಣ-ಪಶ್ಚಿಮ (ನೈಋತ್ಯ) ದಿಕ್ಕನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಬೆಡ್‌ರೂಮ್ ಇರುವುದರಿಂದ ದಂಪತಿಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಇದರೊಂದಿಗೆ, ಮಲಗುವಾಗ ನಿಮ್ಮ ತಲೆ ಯಾವಾಗಲೂ ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ. ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗಿ ನೆಮ್ಮದಿ ಸಿಗುತ್ತದೆ. ಇನ್ನು ನೀವು ಬಳಸುವ ಮಂಚವು (ಬೆಡ್) ಯಾವಾಗಲೂ ಆಯತಾಕಾರದಲ್ಲಿರಬೇಕೇ ವಿನಃ ಅಡ್ಡಾದಿಡ್ಡಿ ಆಕಾರದಲ್ಲಿರಬಾರದು.

ಗೋಡೆಗಳ ಬಣ್ಣಗಳ ಆಯ್ಕೆ ಆಹ್ಲಾದಕರವಾಗಿರಲಿ:

ಬೆಡ್‌ರೂಮ್‌ನ ಗೋಡೆಗಳಿಗೆ ಹಚ್ಚುವ ಬಣ್ಣಗಳು ನಮ್ಮ ಮನಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯ ಗೋಡೆಗಳಿಗೆ ಯಾವಾಗಲೂ ತಿಳಿ ಗುಲಾಬಿ (Light Pink) ಅಥವಾ ಪೀಚ್ (Peach) ಬಣ್ಣಗಳನ್ನು ಬಳಸುವುದು ಉತ್ತಮ. ಇಂತಹ ತಿಳಿ ಬಣ್ಣಗಳು ದಂಪತಿಗಳ ನಡುವೆ ಪ್ರೀತಿ ಮತ್ತು ಮನಸ್ಸಿಗೆ ಶಾಂತಿಯನ್ನು ವೃದ್ಧಿಸಲು ಸಹಾಯ ಮಾಡುತ್ತವೆ. ಗಾಢವಾದ ಅಥವಾ ಕತ್ತಲೆಯ ಅನುಭವ ನೀಡುವ ಬಣ್ಣಗಳನ್ನು ಬೆಡ್‌ರೂಮ್‌ನಲ್ಲಿ ಬಳಸಬೇಡಿ.

ಕನ್ನಡಿಯ ಸ್ಥಾನದ ಬಗ್ಗೆ ಇರಲಿ ಎಚ್ಚರ:

ಅನೇಕರು ತಮಗರಿವಿಲ್ಲದೇ ಮಾಡುವ ದೊಡ್ಡ ವಾಸ್ತು ತಪ್ಪು ಎಂದರೆ ಬೆಡ್‌ರೂಮ್‌ನಲ್ಲಿ ಕನ್ನಡಿ (Glass) ಇಡುವ ಜಾಗ. ಮಲಗುವ ಕೋಣೆಯಲ್ಲಿ ಮಂಚದ ನೇರ ಎದುರುಗಡೆ ಅಂದರೆ ನೀವು ಮಲಗಿದ್ದಾಗ ನಿಮ್ಮ ಪ್ರತಿಬಿಂಬ ಕಾಣಿಸುವಂತೆ ಎಂದಿಗೂ ಕನ್ನಡಿಯನ್ನು ಅಳವಡಿಸಬಾರದು. ಈ ರೀತಿಯ ತಪ್ಪು ವಾಸ್ತು ಸ್ಥಿತಿಯಿಂದಾಗಿ ದಂಪತಿಗಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಮತ್ತು ಪರಸ್ಪರ ಅಪನಂಬಿಕೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಪ್ರೀತಿಯ ಸಂಕೇತದ ಚಿತ್ರಗಳನ್ನು ಅಲಂಕರಿಸಿ:

ದಾಂಪತ್ಯ ಜೀವನದಲ್ಲಿ ಸಂತೋಷ ಮೂಡಲು ಬೆಡ್‌ರೂಮ್‌ನಲ್ಲಿ ಲವ್‌ಬರ್ಡ್ಸ್ (Lovebirds) ಅಥವಾ ಹಂಸಗಳ ಜೋಡಿಯ ಸುಂದರವಾದ ಚಿತ್ರಗಳನ್ನು ಹಾಕಬೇಕು. ಇದು ವೈವಾಹಿಕ ಜೀವನದಲ್ಲಿ ಸಂತಸವನ್ನು ತರುತ್ತದೆ. ಇದರೊಂದಿಗೆ, ದಂಪತಿಗಳು ತಮ್ಮದೇ ಆದ ನಗುತ್ತಿರುವ ಸುಂದರ ಭಾವಚಿತ್ರವನ್ನು (Couple photo) ಕೋಣೆಯ ದಕ್ಷಿಣ-ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ ಹಾಕಬಹುದು. ಆದರೆ ನೆನಪಿರಲಿ, ಬೆಡ್‌ರೂಮ್‌ನಲ್ಲಿ ಯುದ್ಧದ ದೃಶ್ಯಗಳು, ಉಗ್ರ ಪ್ರಾಣಿಗಳು ಅಥವಾ ಒಂಟಿತನ ಹಾಗೂ ಉದಾಸೀನತೆ ಬಿಂಬಿಸುವ ಚಿತ್ರಗಳನ್ನು ಯಾವುದೇ ಕಾರಣಕ್ಕೂ ಹಾಕಬಾರದು.

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ:

ನಿಮ್ಮ ಮಲಗುವ ಕೋಣೆಯಲ್ಲಿ ಕಸ-ಕಡ್ಡಿ, ಅನಗತ್ಯ ವಸ್ತುಗಳು ಅಥವಾ ಕೆಟ್ಟುಹೋದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಎಂದಿಗೂ ಇಡಬೇಡಿ. ಬೆಡ್‌ರೂಮ್‌ನಲ್ಲಿ ಇಂತಹ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿಡುವುದರಿಂದ ಅಲ್ಲಿ ನಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ಇದು ಪತಿ-ಪತ್ನಿಯರ ನಡುವೆ ಸಣ್ಣ ವಿಷಯಗಳಿಗೂ ದೊಡ್ಡ ಮಟ್ಟದ ಜಗಳಗಳು ಮತ್ತು ಅಸಮಾಧಾನಗಳು ಸೃಷ್ಟಿಯಾಗಲು ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ಕೋಣೆಯನ್ನು ಸದಾ ಸ್ವಚ್ಛವಾಗಿಡಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 2,750 ರೂ ಇಳಿಕೆ; ಬೆಳ್ಳಿಯೂ ಅಗ್ಗ – Kannada News

ನವದೆಹಲಿ, ಜೂನ್ 7: ಈ ವಾರಾಂತ್ಯದಲ್ಲಿ ಭಾರತವೂ ಒಳಗೊಂಡಂತೆ ಬಹುತೇಕ ಕಡೆ ಚಿನ್ನದ ಬೆಲೆಯಲ್ಲಿ (Gold Price) ಭರ್ಜರಿ ಇಳಿಕೆ ಆಗಿದೆ. ಭಾರತದಲ್ಲಿ ಹತ್ತು ಗ್ರಾಮ್ ಆಭರಣ ಚಿನ್ನದ ಬೆಲೆ 2,750 ರೂನಷ್ಟು ಕಡಿಮೆಗೊಂಡಿದೆ. ಇದರ ಬೆಲೆ ಗ್ರಾಮ್​ಗೆ 14,000 ರೂ ಮಟ್ಟಕ್ಕೆ ತಗ್ಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಕಡಿಮೆಗೊಂಡಿದೆ. ಬೆಳ್ಳಿ ಬೆಲೆಯೂ ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,40,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 7ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,273 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,000 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,455 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,273 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,000 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,000 ರೂ
  • ಚೆನ್ನೈ: 14,200 ರೂ
  • ಮುಂಬೈ: 14,000 ರೂ
  • ದೆಹಲಿ: 14,015 ರೂ
  • ಕೋಲ್ಕತಾ: 14,000 ರೂ
  • ಕೇರಳ: 14,000 ರೂ
  • ಅಹ್ಮದಾಬಾದ್: 14,005 ರೂ
  • ಜೈಪುರ್: 14,015 ರೂ
  • ಲಕ್ನೋ: 14,015 ರೂ
  • ಭುವನೇಶ್ವರ್: 14,000 ರೂ

ಇದನ್ನೂ ಓದಿ: Domestic LPG Cylinder Price Hike: ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಶಾಕ್! ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 29 ರೂ. ಹೆಚ್ಚಳ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 576 ರಿಂಗಿಟ್ (13,633 ರುಪಾಯಿ)
  • ದುಬೈ: 521.75 ಡಿರಾಮ್ (13,546 ರುಪಾಯಿ)
  • ಅಮೆರಿಕ: 142.50 ಡಾಲರ್ (13,588 ರುಪಾಯಿ)
  • ಸಿಂಗಾಪುರ: 190.50 ಸಿಂಗಾಪುರ್ ಡಾಲರ್ (14,074 ರುಪಾಯಿ)
  • ಕತಾರ್: 522 ಕತಾರಿ ರಿಯಾಲ್ (13,653 ರೂ)
  • ಸೌದಿ ಅರೇಬಿಯಾ: 537 ಸೌದಿ ರಿಯಾಲ್ (13,638 ರುಪಾಯಿ)
  • ಓಮನ್: 54.85 ಒಮಾನಿ ರಿಯಾಲ್ (13,586 ರುಪಾಯಿ)
  • ಕುವೇತ್: 43.81 ಕುವೇತಿ ದಿನಾರ್ (13,610 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 270 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 270 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಮ್ಮು ಮತ್ತು ಕಾಶ್ಮೀರ: ಉಗ್ರ ವಿರೋಧಿ ಕಾರ್ಯಾಚರಣೆ ವೇಳೆ ಕಂದಕಕ್ಕೆ ಬಿದ್ದು ಯೋಧ ಹುತಾತ್ಮ – Kannada News

ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ

ರಾಜೌರಿ, ಜೂನ್ 07: ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ರಾಜೌರಿಯಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ವೇಳೆ ಕಂದಕಕ್ಕೆ ಬಿದ್ದು ಸೈನಿಕರೊಬ್ಬರು ಹುತಾತ್ಮರಾಗಿರುವ ಘಟನೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಕಠಿಣ ಪರ್ವತ ಪ್ರದೇಶಗಳಲ್ಲಿ ದೇಶದ ಭದ್ರತೆಗಾಗಿ ಹಾಗೂ ಗಡಿಗಳನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಲು ಅಪ್ರತಿಮ ಧೈರ್ಯದಿಂದ ಹೋರಾಡುತ್ತಿದ್ದ ಭಾರತೀಯ ಸೇನೆಯ ವೀರ ಅಧಿಕಾರಿ, ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಅವರು ಶನಿವಾರ ಸಂಜೆ ಕರ್ತವ್ಯದ ಅವಧಿಯಲ್ಲಿ ಹುತಾತ್ಮರಾಗಿದ್ದಾರೆ.

ರಾಜೌರಿಯ ದುರ್ಗಮ ಕಾಡುಗಳಲ್ಲಿ ಅಡಗಿರುವ ಪಾಕಿಸ್ತಾನಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಕಳೆದ 15 ದಿನಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಜಂಟಿ ಕಾರ್ಯಾಚರಣೆಯಾದ ‘ಆಪರೇಷನ್ ಶೇರುವಾಲಿ’ ನೇತೃತ್ವವನ್ನು ಇವರು ವಹಿಸಿದ್ದರು.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸೇನೆ, ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಅರೆಸೈನಿಕ ಪಡೆಗಳು ಜಂಟಿಯಾಗಿ ನಡೆಸುತ್ತಿದ್ದ ಈ ಮಹತ್ವದ ಶೋಧ ಕಾರ್ಯಾಚರಣೆಯು ಯಶಸ್ಸಿನ ಹಂತ ತಲುಪಿತ್ತು. ಶನಿವಾರ ಸಂಜೆ ಡೋರಿಮಲ್ ಪ್ರದೇಶದ ಕಡಿದಾದ ಬಂಡೆಗಳು ಹಾಗೂ ದುರ್ಗಮ ಪರ್ವತಗಳ ನಡುವೆ ಕಾರ್ಯಾಚರಣೆಯಲ್ಲಿದ್ದಾಗ, ಹವಾಮಾನ ವೈಪರೀತ್ಯ ಹಾಗೂ ಅಪಾಯಕಾರಿ ಭೌಗೋಳಿಕ ಪರಿಸ್ಥಿತಿಯಿಂದಾಗಿ ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಅವರು ಆಕಸ್ಮಿಕವಾಗಿ 30 ಮೀಟರ್ ಆಳದ ಕಂದಕಕ್ಕೆ ಜಾರಿ ಬಿದ್ದರು.

ಮತ್ತಷ್ಟು ಓದಿ: Video: ನಾನೇನು ಪಾಕಿಸ್ತಾನಿನಾ ನಾನೂ ಭಾರತೀಯನೆ ಪ್ರವಾಸಿಗರಿಗೆ ಕಾಶ್ಮೀರಿ ವ್ಯಕ್ತಿ ಕೊಟ್ಟ ಉತ್ತರ ಕೇಳಿ

ತಕ್ಷಣವೇ ಸಹ ಸೈನಿಕರು ಅತ್ಯಂತ ವೇಗವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ಹೊರತೆಗೆದರಾದರೂ, ಗಂಭೀರ ಗಾಯಗಳಾಗಿದ್ದರಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವೀರ ಅಧಿಕಾರಿಯ ಈ ಅತ್ಯುನ್ನತ ದೇಶಭಕ್ತಿಯನ್ನು ಶ್ಲಾಘಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹಂಚಿಕೊಂಡಿರುವ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ತೀವ್ರ ಸಂತಾಪ ಸೂಚಿಸಿದೆ.

ಅಪಾಯಕಾರಿ ಮತ್ತು ಕಠಿಣ ಪರಿಸ್ಥಿತಿಗಳಲ್ಲೂ ಧೃತಿಗೆಡದೆ ರಾಷ್ಟ್ರ ರಕ್ಷಣೆಗಾಗಿ ಸರ್ವೋಚ್ಚ ತ್ಯಾಗ ಮಾಡಿದ ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಅವರ ಶೌರ್ಯಕ್ಕೆ ಇಡೀ ದೇಶ ತಲೆಬಾಗುತ್ತದೆ. ಕರ್ತವ್ಯ ಪ್ರಜ್ಞೆ, ಧೈರ್ಯ ಮತ್ತು ರಾಷ್ಟ್ರಕ್ಕೆ ಅವರು ನೀಡಿದ ನಿಸ್ವಾರ್ಥ ಸೇವೆ ಸಮಾಜದ ಎಲ್ಲಾ ವರ್ಗಗಳಿಗೆ ಮತ್ತು ಮುಂಬರುವ ಯುವ ಪೀಳಿಗೆಗೆ ಎಂದಿಗೂ ಸ್ಫೂರ್ತಿಯ ಮೂಲವಾಗಿ ಮುಂದುವರೆಯುತ್ತದೆ.

ಅಧಿಕಾರಿಯ ತ್ಯಾಗವನ್ನು ವ್ಯರ್ಥವಾಗಲು ಬಿಡದ ಭಾರತೀಯ ಸಶಸ್ತ್ರ ಪಡೆಗಳು, ರಾಜೌರಿ ಪ್ರದೇಶವನ್ನು ಭಯೋತ್ಪಾದಕರಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ತನ್ನ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿವೆ. ಹೆಚ್ಚುವರಿ ಪಡೆಗಳನ್ನು ಗಡಿಗೆ ನಿಯೋಜಿಸಲಾಗಿದ್ದು, ಆಧುನಿಕ ಡ್ರೋನ್‌ಗಳು ಮತ್ತು ಅತ್ಯಾಧುನಿಕ ತಾಂತ್ರಿಕ ಕಣ್ಗಾವಲು ವಿಧಾನಗಳನ್ನು ಬಳಸಿ ಇಡೀ ಕಾಡನ್ನು ಸುತ್ತುವರಿಯಲಾಗಿದೆ. ದೇಶದ ಗಡಿ ಕಾಯುವಲ್ಲಿ ಮತ್ತು ನಾಗರಿಕರ ರಕ್ಷಣೆಯಲ್ಲಿ ಭಾರತೀಯ ಸೇನೆ ತೋರುತ್ತಿರುವ ಈ ಅದಮ್ಯ ಬದ್ಧತೆ ಮತ್ತು ದೇಶಭಕ್ತಿ ಇಡೀ ಭಾರತೀಯರ ಹೆಮ್ಮೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:24 am, Sun, 7 June 26

Source link

ರಾಜ್ಯಸಭೆ ಚುನಾವಣೆ ನಾಮಪತ್ರಕ್ಕೆ ನಾಳೆ ಕೊನೆ ದಿನ: ಅಭ್ಯರ್ಥಿಯನ್ನ ಅಂತಿಮಗೊಳಿಸದ ಬಿಜೆಪಿ, ಜೆಡಿಎಸ್; ಇಂದು ಘೋಷಣೆ ಸಾಧ್ಯತೆ – Kannada News

ಬೆಂಗಳೂರು, ಜೂನ್​ 07: ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆಯ ದಿನ. ಇತ್ತ ಬಿಜೆಪಿ (BJP) ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು (HD Deve Gowda) ಎನ್‌ಡಿಎ ಅಭ್ಯರ್ಥಿಯಾಗಿ ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಬಿಜೆಪಿ ಹೈಕಮಾಂಡ್ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಇಂದು ಮಧ್ಯಾಹ್ನದ ಬಳಿಕ ಬಿಜೆಪಿ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ. ಒಂದು ವೇಳೆ ದೇವೇಗೌಡರು ಸ್ಪರ್ಧಿಸಲು ಒಪ್ಪದಿದ್ದರೆ, ಉಭಯ ಪಕ್ಷಗಳಿಗೂ ಸಮ್ಮತಿಯಾಗುವ ಹೋಟೆಲ್ ಉದ್ಯಮಿಯೊಬ್ಬರಿಗೆ ಟಿಕೆಟ್ ನೀಡುವ ಬಗ್ಗೆಯೂ ತೆರೆಮರೆಯ ಗಂಭೀರ ಚರ್ಚೆಗಳು ನಡೆಯುತ್ತಿವೆ.

ಮುಖ್ಯಾಂಶಗಳು

  • ರಾಜ್ಯಸಭೆ ಮತ್ತು ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು
  • ರಾಜ್ಯಸಭೆಯ 1 ಸ್ಥಾನಕ್ಕೆ ರೇಸ್​ನಲ್ಲಿ ಮೂವರು
  • ಇಂದು ಮಧ್ಯಾಹ್ನದ ಬಳಿಕ ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ ಸಾಧ್ಯತೆ

ಯಾರೆಲ್ಲಾ ರೇಸ್​ನಲ್ಲಿ? 

ಇನ್ನು ರಾಜ್ಯಸಭೆಯ ಆ ಒಂದು ಸ್ಥಾನಕ್ಕೆ ದೇವೇಗೌಡರು ಕಣಕ್ಕಿಳಿಯದಿದ್ದರೆ ಮಾತ್ರ ಬಿಜೆಪಿ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಸದ್ಯ ಈ 1 ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ರೇಸ್​ನಲ್ಲಿ ಮೂವರು ಇದ್ದಾರೆ. ಮಾಜಿ ಸಿಎಂ ಡಿವಿ ಸದಾನಂದಗೌಡ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಹಿರಿಯ ನಾಯಕ ನಿರ್ಮಲ್ ಕುಮಾರ್ ಸುರಾನಾ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಆದರೆ ದೇವೇಗೌಡರು ಸ್ಪರ್ಧಿಸುವುದು ಖಚಿತವಾದರೆ, ಬಿಜೆಪಿ ಕೇವಲ ವಿಧಾನಪರಿಷತ್​​ನ ಎರಡು ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನ ಘೋಷಣೆ ಮಾಡಲಿದೆ. ಹೀಗಾಗಿ ಹೈಕಮಾಂಡ್‌ನ ಮುಂದಿನ ನಿರ್ಧಾರದ ಮೇಲೆ ಇದೀಗ ಮೈತ್ರಿಕೂಟದ ಎಲ್ಲಾ ನಾಯಕರ ಕಣ್ಣು ನೆಟ್ಟಿದೆ.

ಮಹಿಳಾ ಮಣಿಗಳ ಮಧ್ಯೆ ತೀವ್ರ ಪೈಪೋಟಿ

ವಿಧಾನಪರಿಷತ್‌ನ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲೂ ಬಿಜೆಪಿಯಲ್ಲಿ ಭಾರಿ ಪೈಪೋಟಿ ಶುರುವಾಗಿದೆ. ಆಕಾಂಕ್ಷಿಗಳ ರೇಸ್‌ನಲ್ಲಿ ನಟಿ ಶ್ರುತಿ, ಸಿ. ಮಂಜುಳಾ, ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್, ಎನ್. ಮಹೇಶ್, ನಳೀನ್ ಕುಮಾರ್ ಕಟೀಲ್ ಹಾಗೂ ವೇಣುಗೋಪಾಲ್ ಇದ್ದಾರೆ. ಇವರಲ್ಲಿ ಮಹಿಳಾ ಕೋಟಾದಡಿ ಟಿಕೆಟ್ ಗಿಟ್ಟಿಸಿಕೊಳ್ಳಲು ನಟಿ ಶ್ರುತಿ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್ ಖರ್ಗೆ

ಪರಿಷತ್ ಟಿಕೆಟ್ ಹಂಚಿಕೆಯಲ್ಲಿ ‘ಒಬ್ಬ ಮಹಿಳೆ ಮತ್ತು ಒಬ್ಬ ಲಿಂಗಾಯತ’ ಅಥವಾ ‘ಒಬ್ಬ ಮಹಿಳೆ ಮತ್ತು ಒಬ್ಬ ಒಬಿಸಿ’ ಸೂತ್ರಕ್ಕೆ ಚಿಂತನೆ ನಡೆಸಲಾಗುತ್ತಿದೆ. ಆದರೆ ಕೊನೆಯ ಕ್ಷಣದಲ್ಲಿ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿರುವ ಪಟ್ಟಿಯನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟು ಹೊಸ ಮುಖಗಳಿಗೆ ಹೈಕಮಾಂಡ್​ ಮಣೆ ಹಾಕುವ ಸಾಧ್ಯತೆ ಕೂಡ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಹಾವನ್ನು ಹಿಡಿದು ಬ್ಯಾಗ್​ಗೆ ತುಂಬಿದ ಬ್ಲಿಂಕಿಟ್ ಡೆಲಿವರಿ ಬಾಯ್

ಮುಂಬೈ, ಜೂನ್ 07: ಜನರಲ್ಲಿ ಆತಂಕ ಸೃಷ್ಟಸಿದ್ದ ಹಾವನ್ನು ಬ್ಲಿಂಕಿಟ್ ಡೆಲಿವರಿ ಬಾಯ್ ಹಿಡಿದು ಬ್ಯಾಗ್​ಗೆ ತುಂಬಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. ರಸ್ತೆಯೊಂದರಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವಲ್ಲಿ ಬ್ಲಿಂಕಿಟ್ (Blinkit) ಸಂಸ್ಥೆಯ ಡೆಲಿವರಿ ಏಜೆಂಟ್ ತೋರಿರುವ ಅದ್ಭುತ ಧೈರ್ಯ ಮತ್ತು ಸಮಯಪ್ರಜ್ಞೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ರಸ್ತೆಯ ಮಧ್ಯದಲ್ಲಿ ಸಾರ್ವಜನಿಕರಿಗೆ ಆತಂಕ ಮೂಡಿಸಿದ್ದ ಹಾವೊಂದನ್ನು ಯಾವುದೇ ಅಂಜಿಕೆಯಿಲ್ಲದೆ, ಹಿಡಿದು ಸುರಕ್ಷಿತವಾಗಿ ಬ್ಯಾಗ್​ಗೆ ಹಾಕಿರುವ ಈ ಯುವಕನ ಸಾಹಸಕ್ಕೆ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ 19 ವರ್ಷದ ಮಿರಾ ಆಂಡ್ರೀವಾ – Kannada News

ಪ್ಯಾರಿಸ್‌ನ ಕ್ಲೇ ಕೋರ್ಟ್‌ನಲ್ಲಿ ನಡೆದ ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್) 2026ರ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ  19 ವರ್ಷದ ರಷ್ಯಾದ ಆಟಗಾರ್ತಿ ಮಿರಾ ಆಂಡ್ರೀವಾ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಜೂನ್ 6ರಂದು ನಡೆದ ಅಂತಿಮ ಹಣಾಹಣಿಯಲ್ಲಿ ಪೋಲೆಂಡ್‌ನ ಮಾಯಾ ಚ್ವಾಲಿನ್ಸ್ಕಾ ವಿರುದ್ಧ 6-3, 6-2 ನೇರ ಸೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಆಂಡ್ರೀವಾ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕೋರ್ಟ್ ಫಿಲಿಪ್-ಚಾಟ್ರಿಯರ್‌ನಲ್ಲಿ ನಡೆದ ಈ ಪಂದ್ಯದ ಆರಂಭದಲ್ಲಿ ಉಭಯ ಆಟಗಾರ್ತಿಯರ ನಡುವೆ ತೀವ್ರ ಪೈಪೋಟಿ ಕಂಡುಬಂತು. ಮೊದಲ ಐದು ಗೇಮ್‌ಗಳಲ್ಲಿ ಚ್ವಾಲಿನ್ಸ್ಕಾ 3-2 ಮುನ್ನಡೆ ಕಾಯ್ದುಕೊಂಡಿದ್ದರು.

ಆ ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದ 8ನೇ ಶ್ರೇಯಾಂಕಿತೆ ಆಂಡ್ರೀವಾ, ಸತತ 9 ಗೇಮ್‌ಗಳನ್ನು ಗೆಲ್ಲುವ ಮೂಲಕ ಎದುರಾಳಿಗೆ ದಿಕ್ಕುತೋಚದಂತೆ ಮಾಡಿದರು. ಈ ಮೂಲಕ ಮೊದಲ ಸೆಟ್ ಅನ್ನು 6-3 ಅಂತರದಿಂದ ಗೆದ್ದುಕೊಂಡರು.

ಎರಡನೇ ಸೆಟ್‌ನಲ್ಲಿ 5-0 ಭಾರಿ ಮುನ್ನಡೆ ಪಡೆದ ಆಂಡ್ರೀವಾ, ಅಂತಿಮವಾಗಿ ಎದುರಾಳಿಯ ಸರ್ವ್ ಅನ್ನು ಬ್ರೇಕ್ ಮಾಡಿ 6-2 ಅಂತರದಿಂದ ದ್ವಿತೀಯ ಸೆಟ್​ ಗೆದ್ದುಕೊಂಡರು.

ಈ ಮೂಲಕ ಪೋಲೆಂಡ್‌ನ ಮಾಯಾ ಚ್ವಾಲಿನ್ಸ್ಕಾ ಅವರನ್ನು 6-3, 6-2 ಅಂತರದಿಂದ ಸೋಲಿಸಿ ಮಿರಾ ಆಂಡ್ರೀವಾ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಿರಾ ಸಾಧನೆ:

  • ಕಿರಿಯ ವಯಸ್ಸಿನ ಚಾಂಪಿಯನ್: 19 ವರ್ಷದ ಮಿರಾ ಆಂಡ್ರೀವಾ, 1992ರಲ್ಲಿ ಮೋನಿಕಾ ಸೆಲೆಸ್ (18 ವರ್ಷ) ಪ್ರಶಸ್ತಿ ಗೆದ್ದ ನಂತರ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  •  ಕೋಚ್ ಪ್ರೇರಣೆ: ಮಾಜಿ ಚಾಂಪಿಯನ್ ಕಾನ್ಚಿತಾ ಮಾರ್ಟಿನೆಜ್ ಅವರ ಮಾರ್ಗದರ್ಶನದಲ್ಲಿ ಆಡುತ್ತಿರುವ ಆಂಡ್ರೀವಾ, ಈ ಗೆಲುವಿನೊಂದಿಗೆ ಡಬ್ಲ್ಯೂಟಿಎ (WTA) ರೇಂಕಿಂಗ್‌ನಲ್ಲಿ ಅಗ್ರಸ್ಥಾನದತ್ತ ಮುನ್ನಡೆದಿದ್ದಾರೆ.

ಮಾಯಾ ಸಾಧನೆ:

  •  ಚ್ವಾಲಿನ್ಸ್ಕಾ ಮಿಂಚಿಂಗ್: ಫೈನಲ್ ಪಂದ್ಯದಲ್ಲಿ ಸೋತರೂ ಸಹ, ವಿಶ್ವ ರ್ಯಾಂಕಿಂಗ್​​ನಲ್ಲಿ 114ನೇ ಸ್ಥಾನದಲ್ಲಿದ್ದ ಪೋಲೆಂಡ್‌ನ 24 ವರ್ಷದ ಮಾಯಾ ಚ್ವಾಲಿನ್ಸ್ಕಾ ಕ್ವಾಲಿಫೈಯರ್ ಹಂತದಿಂದ ಫೈನಲ್ ತಲುಪಿದ ಮೊದಲ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.
  • ರ್ಯಾಂಕಿಂಗ್​ನಲ್ಲಿ ಜಿಗಿತ: ಈ ರನ್ನರ್-ಅಪ್ ಪ್ರಶಸ್ತಿಯೊಂದಿಗೆ ಅವರು ವಿಶ್ವ ರ್ಯಾಂಕಿಂಗ್​​ನಲ್ಲಿ ಮಾಯಾ ಚ್ವಾಲಿನ್ಸ್ಕಾ  21ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಇದನ್ನೂ ಓದಿ: ವಿಶ್ವ ದಾಖಲೆ: ಕೇವಲ 5 ಎಸೆತಗಳಲ್ಲಿ ಮುಗಿದ ಟಿ20 ಪಂದ್ಯ

ಪುರುಷರ ಫೈನಲ್ ಯಾವಾಗ?

ಫ್ರೆಂಚ್ ಓಪನ್ 2026ರ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯವು ಇಂದು ಭಾನುವಾರ, 7 ಜೂನ್ 2026 ರಂದು ನಡೆಯಲಿದೆ. ಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೇರೆಫ್ ಮತ್ತು ಇಟಲಿಯ ಯುವ ಆಟಗಾರ ಫ್ಲೇವಿಯೊ ಕೊಬೊಲ್ಲಿ  ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

Published On – 10:20 am, Sun, 7 June 26

Source link

Poha Day: ಇಂದು ವಿಶ್ವ ಅವಲಕ್ಕಿ ದಿನ, ಹೊಟ್ಟೆಗೆ ಹಗುರ, ಬೇಗ ಜೀರ್ಣವಾಗುವ ಪೋಹಾ ಬಗ್ಗೆ ಒಂದಿಷ್ಟು ಮಾಹಿತಿ – Kannada News

ನವದೆಹಲಿ, ಜೂನ್ 07: ಇಂದು ವಿಶ್ವ ಅವಲಕ್ಕಿ ದಿನ(Poha Day), ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಪೌಷ್ಠಿಕ ಆಹಾರಗಳಲ್ಲಿ ಅವಲಕ್ಕಿ ಕೂಡಾ ಒಂದು. ಹೊಟ್ಟೆಗೆ ಹಗುರ ಹಾಗೂ ಬೇಗ ಜೀರ್ಣವಾಗುವ ಆಹಾರ. 100 ಗ್ರಾಂ ಅವಲಕ್ಕಿಯಲ್ಲಿ ಸುಮಾರು 25 ಮಿ.ಗ್ರಾಂ ನಷ್ಟು ಕಬ್ಬಿಣಾಂಶವಿದ್ದು, ಇದು ಮಕ್ಕಳ ಬೆಳವಣಿಗೆಗೆ ಮತ್ತು ರಕ್ತಹೀನತೆ ತಡೆಯಲು ಅತ್ಯುತ್ತಮ. ಈ ಪೋಹಾವನ್ನು ಮಹಾರಾಷ್ಟ್ರ, ಪುಣೆ ಭಾಗಗಳಲ್ಲಿ ಹೆಚ್ಚಾಗಿ ಕಾಣಬಹುದು. ಇನ್ನು ಕರ್ನಾಟಕದಲ್ಲೂ ಕೂಡ ಅವಲಕ್ಕಿ ಹೆಸರಿನಿಂದ ಪ್ರಚಲಿತದಲ್ಲಿದೆ.

ಕೇವಲ 15 ನಿಮಿಷಗಳಲ್ಲಿ ಒಗ್ಗರಣೆ ಅವಲಕ್ಕಿ, ಮೊಸರು ಅವಲಕ್ಕಿ, ಮಸಾಲೆ ಅವಲಕ್ಕಿ ತಯಾರಿಸಬಹುದು. ಇಂದೋರ್​ನಲ್ಲಿ ಪೋಹಾ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಹಲವಾರು ಸ್ಥಳೀಯ ದತ್ತಿ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದವು. ಸಂಸ್ಥೆಗಳ ಸದಸ್ಯರು ತಮ್ಮ ಕೈಗಳಿಂದಲೇ ಬಿಸಿ ಪೋಹಾವನ್ನು ತಯಾರಿಸಿ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಬಡಿಸಿದರು.

ರಾಜವಾಡದ ಮುಂದೆ ನೂರಾರು ಜನರು ಏಕಕಾಲದಲ್ಲಿ ಇಂದೋರ್‌ನ ಪೋಹಾವನ್ನು ಸವಿದರು. ಈ ಕಾರ್ಯಕ್ರಮವು ಪರಿಸರ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿ ತೊಡಗಿಕೊಂಡಿತು, ಜೊತೆಗೆ ಇಂದೋರ್‌ನ ಸಮುದಾಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿತು.
ಮಹಾರಾಷ್ಟ್ರದ ನಾಗ್ಪುರದಲ್ಲಿ ಜೂನ್ 7 ರ ಭಾನುವಾರದಂದು ‘ವಿಶ್ವ ಪೋಹಾ ದಿನ’ವನ್ನು (World Poha Day) ಅತ್ಯಂತ ಸಡಗರ ಮತ್ತು ದಾಖಲೆಯೊಂದಿಗೆ ಆಚರಿಸಲಾಗಿದೆ. ಭಾರತದ ಖ್ಯಾತ ಶೆಫ್ ವಿಷ್ಣು ಮನೋಹರ್ ಅವರು ಈ ವಿಶೇಷ ದಿನದ ಅಂಗವಾಗಿ ಬರೋಬ್ಬರಿ 3,000 ಕೆಜಿ ತೂಕದ ಬೃಹತ್ ‘ತರ್ಲಿ ಪೋಹಾ’ (Tarri Poha) ಸಿದ್ಧಪಡಿಸುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.

ಮತ್ತಷ್ಟು ಓದಿ: Avalakki: ಅಕ್ಕಿ ಆರೋಗ್ಯಕ್ಕೆ ಒಳ್ಳೆಯದೇ? ಅವಲಕ್ಕಿ ಉತ್ತಮ ಆರೋಗ್ಯಕ್ಕೆ ನಿಜಕ್ಕೂ ಲಕ್ಕಿನಾ? ಡಯೆಟಿಷಿಯನ್ ಹೇಳೋದೇನು?

ಏನಿದರ ವಿಶೇಷತೆ?: ಪೋಹಾ (ಅವಲಕ್ಕಿ ಉಪ್ಪಿಟ್ಟು) ಕೇವಲ ಒಂದು ಉಪಹಾರವಲ್ಲ, ಇದು ಭಾರತದಾದ್ಯಂತ ಅತ್ಯಂತ ಜನಪ್ರಿಯ, ಆರೋಗ್ಯಕರ, ಸುಲಭವಾಗಿ ಜೀರ್ಣವಾಗುವ ಮತ್ತು ಬಡವರಿಂದ ಶ್ರೀಮಂತರವರೆಗೆ ಎಲ್ಲರಿಗೂ ಕೈಗೆಟುಕುವ ಅತ್ಯುತ್ತಮ ದೇಶಿ ಆಹಾರವಾಗಿದೆ. ಇದರ ಮಹತ್ವವನ್ನು ಸಾರಲು ಈ ದಿನವನ್ನು ಆಚರಿಸಲಾಗುತ್ತದೆ.

ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಇದನ್ನು ವಿಭಿನ್ನವಾಗಿ ಕರೆಯಲಾಗುತ್ತದೆ ಮತ್ತು ಸಿದ್ಧಪಡಿಸಲಾಗುತ್ತದೆ. ಮಧ್ಯಪ್ರದೇಶದ ‘ಇಂದೋರಿ ಪೋಹಾ’ (ಜೀರಾಲು ಪುಡಿ ಮತ್ತು ಸೇವ್‌ ಹಾಕಿ ಮಾಡುವುದು) ಮತ್ತು ಮಹಾರಾಷ್ಟ್ರದ ‘ನಾಗ್ಪುರಿ ತರಿ ಪೋಹಾ’ ಜಾಗತಿಕವಾಗಿ ಪ್ರಸಿದ್ಧವಾಗಿವೆ. ಕರ್ನಾಟಕದಲ್ಲೂ ಅವಲಕ್ಕಿ ಉಪ್ಪಿಟ್ಟು, ಗೊಜ್ಜವಲಕ್ಕಿ ಮತ್ತು ಮೊಸರವಲಕ್ಕಿ ಅತ್ಯಂತ ಪ್ರೀತಿಯ ಆಹಾರಗಳಾಗಿವೆ.

ಸಂಪೂರ್ಣ ಪ್ರೊಟೀನ್ ಮತ್ತು ಪೋಷಕಾಂಶಗಳಿಂದ ಕೂಡಿದ ಈ 3,000 ಕೆಜಿ ಬೃಹತ್ ಪೋಹಾವನ್ನು ನಂತರ ನಾಗ್ಪುರದ ಸಾವಿರಾರು ನಾಗರಿಕರು, ಅನಾಥಾಶ್ರಮಗಳು ಮತ್ತು ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ವಿತರಿಸಿ, ವಿಶ್ವ ಪೋಹಾ ದಿನಕ್ಕೆ ಅತ್ಯಂತ ಸೌಹಾರ್ದಯುತ ಹಾಗೂ ಸ್ವಾದಿಷ್ಟ ಮುನ್ನುಡಿ ಬರೆಯಲಾಯಿತು.

ಒಗ್ಗರಣೆ ಅವಲಕ್ಕಿ ಮಾಡುವ ವಿಧಾನ
ಮೊದಲು ದಪ್ಪ ಅವಲಕ್ಕಿಯನ್ನು ಒಂದು ಜರಡಿಯಲ್ಲಿ ಅಥವಾ ಪಾತ್ರೆಯಲ್ಲಿ ಹಾಕಿ, ಚೆನ್ನಾಗಿ ತೊಳೆದುಕೊಳ್ಳಿ (ಅವಲಕ್ಕಿ ತುಂಬಾ ಮೆತ್ತಗಾಗಬಾರದು, ಕೇವಲ ತೇವವಾಗಬೇಕು). ನಂತರ ಅದಕ್ಕೆ ನೀರನ್ನು ಸಂಪೂರ್ಣವಾಗಿ ಸೋಸಿ, 5 ರಿಂದ 10 ನಿಮಿಷಗಳ ಕಾಲ ಪಕ್ಕಕ್ಕೆ ಇಡಿ. ಅವಲಕ್ಕಿ ಚೆನ್ನಾಗಿ ಉದುರು ಉದುರಾಗಿ ಅರಳುತ್ತದೆ.
-ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ ಹಾಕಿ ಸಿಡಿಸಿ
-ಈಗ ಕಡಲೆಕಾಯಿ ಬೀಜಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ
-ನಂತರ ಕಡಲೆಬೇಳೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ ಸ್ವಲ್ಪ ಕೈಯಾಡಿಸಿ
-ಈಗ ಹೆಚ್ಚಿದ ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಹಾಕಿ, ಈರುಳ್ಳಿ ಮೃದುವಾಗುವವರೆಗೆ (ಹೊಂಬಣ್ಣ ಬರುವವರೆಗೆ) ಚೆನ್ನಾಗಿ ಹುರಿಯಿರಿ.
-ನಂತರ ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ.
-ಈಗ ಒಗ್ಗರಣೆಗೆ ನೆನೆಸಿಟ್ಟ ಅವಲಕ್ಕಿಯನ್ನು ಸೇರಿಸಿ
-ಅದರ ಜೊತೆಗೆ ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಿಟಿಕೆ ಸಕ್ಕರೆಯನ್ನು ಹಾಕಿ.
-ಉರಿ ಸಣ್ಣಗೆ ಮಾಡಿ, ಒಗ್ಗರಣೆ ಮತ್ತು ಅವಲಕ್ಕಿ ಚೆನ್ನಾಗಿ ಹೊಂದಿಕೊಳ್ಳುವಂತೆ ಹಗುರವಾಗಿ ಕೈಯಾಡಿಸಿ
-ಬಾಣಲೆಯ ಮೇಲೆ ಮುಚ್ಚಳವನ್ನು ಮುಚ್ಚಿ, ಸಣ್ಣ ಉರಿಯಲ್ಲಿ 2 ನಿಮಿಷಗಳ ಕಾಲ ಚೆನ್ನಾಗಿ ಆರಲು ಬಿಡಿ.
ಕೊನೆಯಲ್ಲಿ ಒಲೆಯನ್ನು ಆಫ್ ಮಾಡಿ, ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿ ತೆಂಗಿನಕಾಯಿ ತುರಿ ಮತ್ತು ನಿಂಬೆ ರಸವನ್ನು ಹಿಂಡಿ ಚೆನ್ನಾಗಿ ಮಿಕ್ಸ್ ಮಾಡಿ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:23 am, Sun, 7 June 26

Source link

Optical Illusion: ನಿಮ್ಮ ಕಣ್ಣು ಚುರುಕಾಗಿದ್ದರೆ ಈ ಚಿತ್ರದಲ್ಲಿರುವ ಜಿರಾಫೆಯನ್ನು ಕಂಡುಹಿಡಿಯಿರಿ – Kannada News

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: shutterstock.com

ಬುದ್ಧಿವಂತಿಕೆಗೆ ಸವಾಲೊಡ್ಡುವ, ಮೆದುಳಿಗೆ ವ್ಯಾಯಾಮ ನೀಡುವ ಮನೋರಂಜನಾತ್ಮಕ ಈ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಆಟಗಳನ್ನು ನೀವು ಆಡಿರುತ್ತೀರಿ. ಆದರೆ ಕೆಲವರು ಹೆಚ್ಚು ಸಮಯ ತೆಗೆದುಕೊಂಡು ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳುತ್ತಾರೆ. ಇದೀಗ ಇಲ್ಲೊಂದು ಅಂತಹದ್ದೇ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಹರಿದಾಡುತ್ತಿದ್ದು, ಇಲ್ಲಿ ಅಡಗಿ ಕುಳಿತಿರುವ ಜಿರಾಫೆಯನ್ನು ಕಂಡುಹಿಡಿಯಬೇಕು. ಆದರೆ ಈ ಒಗಟು ಬಿಡಿಸಲು ನಿರ್ದಿಷ್ಟ ಸಮಯಾವಕಾಶ ನೀಡಲಾಗಿದೆ. ಈ ಒಗಟಿನ ಆಟ ಆಡಲು ನೀವು ರೆಡಿ ಇದ್ದೀರಾ.

ಈ ಚಿತ್ರ ನೋಡಿದಾಗ ನಿಮಗೇನು ಅನಿಸಿತು?

ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಒಗಟಿನ ಚಿತ್ರ ನಿಮ್ಮ ಕಣ್ಣ ಮುಂದಿದೆ. ಸುಂದರವಾದ ಸೂರ್ಯಸ್ತದ ನೋಟ ಇಲ್ಲಿದೆ. ಇಲ್ಲಿ ಮೂರು ನಾಲ್ಕು ಮರಗಳಿದ್ದು ಈ ಚಿತ್ರವು ನಿಮ್ಮನ್ನು ಆಕರ್ಷಿಸುತ್ತದೆ. ಆದರೆ ಇಲ್ಲಿ ನಿಮಗೊಂದು ಟಾಸ್ಕ್ ನೀಡಲಾಗಿದೆ. ಈ ಚಿತ್ರದಲ್ಲಿ ಅಡಗಿರುವ ಜಿರಾಫೆಯನ್ನು ನೀವು ಕೇವಲ 5 ಸೆಕೆಂಡುಗಳಲ್ಲಿ ಗುರುತಿಸಬೇಕು.

ಇದನ್ನೂ ಓದಿ: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿರುವ ಮುಖಗಳನ್ನು ಗುರುತಿಸಿ

ಜಿರಾಫೆ ನಿಮ್ಮ ಕಣ್ಣಿಗೆ ಕಂಡಿತೇ?

ಈ ಚಿತ್ರದಲ್ಲಿ ಅಡಗಿರುವ ಜಿರಾಫೆಯನ್ನು ಕೊಟ್ಟಿರುವ ಸಮಯದೊಳಗೆ ಗುರುತಿಸಿದ್ದೀರಾ, ನಿಮ್ಮ ಕಣ್ಣಿಗೆ ಈ ಪ್ರಾಣಿ ಕಾಣಿಸಿಕೊಂಡಿದ್ದರೆ ನಿಮ್ಮ ಕಣ್ಣುಗಳು ಚುರುಕಾಗಿ ಕೆಲಸ ಮಾಡುತ್ತಿವೆ ಎಂದರ್ಥ. ಆದರೆ ಈ ಮರದ ಕೊಂಬೆಯ ಮೇಲೆ ಜಿರಾಫೆಯ ಆಕಾರವನ್ನು ನೋಡಬಹುದು. ಈ ಸುಳಿವು ನೀಡಿದ ಮೇಲೂ ಈ ಪ್ರಾಣಿಯನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದಾದರೆ ಕೆಳಗಿನ ಚಿತ್ರದಲ್ಲಿ ಜಿರಾಫೆಯನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Graha Dosha: ಗ್ರಹ ದೋಷ ಎಂದರೇನು? ಭಯಪಡುವ ಅಗತ್ಯವಿಲ್ಲ, ಇಲ್ಲಿವೆ ಸರಳ ಪರಿಹಾರಗಳು! – Kannada News

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಮ್ಮ ಜೀವನದಲ್ಲಿ ನಾವು ಎದುರಿಸುವ ಕೆಲವು ಅನಿರೀಕ್ಷಿತ ಸವಾಲುಗಳು, ಅಡೆತಡೆಗಳು ಮತ್ತು ಮಾನಸಿಕ ಒತ್ತಡಗಳು ಗ್ರಹಗಳ ಪ್ರತಿಕೂಲ ಸ್ಥಾನಕ್ಕೆ ಸಂಬಂಧಿಸಿವೆ ಎಂದು ನಂಬಲಾಗಿದೆ. ಜಾತಕದಲ್ಲಿ ಯಾವುದಾದರೂ ಒಂದು ಗ್ರಹವು ದುರ್ಬಲವಾಗಿರುವುದರಿಂದ ಅಥವಾ ನಕಾರಾತ್ಮಕ ಸ್ಥಾನದಲ್ಲಿರುವುದರಿಂದ ಉಂಟಾಗುವ ಇಂತಹ ಪರಿಸ್ಥಿತಿಯನ್ನೇ ‘ಗ್ರಹ ದೋಷ’ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಗ್ರಹ ದೋಷವಿದೆ ಎಂದ ತಕ್ಷಣ ಭಯಪಡುವ ಅಗತ್ಯವಿಲ್ಲ. ಸರಿಯಾದ ಪರಿಹಾರಗಳು, ಮಂತ್ರ ಪಠಣ, ಆಧ್ಯಾತ್ಮಿಕ ಅಭ್ಯಾಸಗಳು ಮತ್ತು ಸಕಾರಾತ್ಮಕ ಜೀವನಶೈಲಿಯಿಂದ ಅವುಗಳ ದುಷ್ಪರಿಣಾಮಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಜಾತಕದಲ್ಲಿ ಗ್ರಹದೋಷವಿದೆಯೇ ಎಂದು ಗುರುತಿಸುವುದು ಹೇಗೆ?

ನಮ್ಮ ಜೀವನದಲ್ಲಿ ಗ್ರಹ ದೋಷವಿದ್ದಾಗ ಕೆಲವು ಸಾಮಾನ್ಯ ಚಿಹ್ನೆಗಳು ಎದ್ದು ಕಾಣಿಸುತ್ತವೆ. ವೃತ್ತಿ ಅಥವಾ ವ್ಯವಹಾರದಲ್ಲಿ ಅನಿರೀಕ್ಷಿತ ಅಡೆತಡೆಗಳು ಎದುರಾಗುವುದು, ಉತ್ತಮವಾಗಿ ನಡೆಯುತ್ತಿರುವ ಯೋಜನೆಗಳು ಹಠಾತ್ತನೆ ನಿಂತುಹೋಗುವುದು ಇದರ ಮುಖ್ಯ ಲಕ್ಷಣಗಳಾಗಿವೆ. ಇದರೊಂದಿಗೆ, ಪ್ರೇಮ ಜೀವನದಲ್ಲಿ ಅಥವಾ ವೈವಾಹಿಕ ಜೀವನದಲ್ಲಿ ಅನಗತ್ಯ ತಪ್ಪು ತಿಳುವಳಿಕೆ, ಘರ್ಷಣೆಗಳು ಮತ್ತು ಕುಟುಂಬದಲ್ಲಿ ಶಾಂತಿಯ ಕೊರತೆ ಎದುರಾದರೆ ಅದನ್ನು ಗ್ರಹ ದೋಷಗಳ ಪ್ರಭಾವ ಎನ್ನಬಹುದು. ಇನ್ನು ಕೆಲವರಿಗೆ ಆದಾಯವನ್ನು ಮೀರಿದ ವೆಚ್ಚಗಳು, ಕಠಿಣ ಪರಿಶ್ರಮದ ಹೊರತಾಗಿಯೂ ನಿರೀಕ್ಷಿತ ಫಲಿತಾಂಶ ಸಿಗದಿರುವುದು, ತೀವ್ರ ಮಾನಸಿಕ ಆತಂಕ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳೂ ಕಾಡಬಹುದು.

ಕಠಿಣ ಪರಿಶ್ರಮಕ್ಕೆ ಸಿಗದ ಮನ್ನಣೆ ಮತ್ತು ಗ್ರಹಗಳ ಪ್ರಭಾವ:

ಕೆಲವು ವ್ಯಕ್ತಿಗಳು ತಮ್ಮ ಜೀವನದಲ್ಲಿ ನಿರಂತರವಾಗಿ ಕಠಿಣ ಪರಿಶ್ರಮ ಪಟ್ಟರೂ ಅವರಿಗೆ ಅರ್ಹವಾದ ಮನ್ನಣೆ ಅಥವಾ ಯಶಸ್ಸು ಸಿಗುವುದಿಲ್ಲ. ಕೊನೆಯ ಕ್ಷಣದಲ್ಲಿ ಉತ್ತಮ ಅವಕಾಶಗಳು ಕೈತಪ್ಪಿ ಹೋಗುವುದು ಮತ್ತು ನಿರಂತರವಾಗಿ ಭವಿಷ್ಯದ ಬಗ್ಗೆ ಚಿಂತೆ ಕಾಡುವುದು ಇವರನ್ನು ಸದಾ ಬೇಸರದಲ್ಲಿಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇಂತಹ ಸಂದರ್ಭಗಳನ್ನು ಗ್ರಹಗಳ ಪ್ರತಿಕೂಲ ಪ್ರಭಾವವೆಂದು ಪರಿಗಣಿಸಲಾಗುತ್ತದೆ. ಈ ಪರಿಸ್ಥಿತಿಯು ಮನುಷ್ಯನ ಆತ್ಮವಿಶ್ವಾಸವನ್ನು ಕುಗ್ಗಿಸಿದರೂ, ಇದು ಶಾಶ್ವತವಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

ಸಾಮಾನ್ಯ ಗ್ರಹ ದೋಷಗಳು ಮತ್ತು ಅವುಗಳ ವಿಭಿನ್ನ ಲಕ್ಷಣಗಳು:

ಎಲ್ಲಾ ಗ್ರಹ ದೋಷಗಳು ಒಂದೇ ರೀತಿಯ ಫಲಿತಾಂಶವನ್ನು ನೀಡುವುದಿಲ್ಲ; ಜಾತಕದಲ್ಲಿ ಯಾವ ಗ್ರಹವು ದುರ್ಬಲವಾಗಿದೆ ಎಂಬುದರ ಆಧಾರದ ಮೇಲೆ ಸಮಸ್ಯೆಗಳು ಬದಲಾಗುತ್ತವೆ. ಉದಾಹರಣೆಗೆ, ಜಾತಕದಲ್ಲಿ ಚಂದ್ರ ದೋಷವಿದ್ದರೆ ಮಾನಸಿಕ ಶಾಂತಿಯ ಕೊರತೆ, ಆತಂಕ ಮತ್ತು ಭಾವನಾತ್ಮಕ ಅಸ್ಥಿರತೆ ಉಂಟಾಗುತ್ತದೆ. ಸೂರ್ಯ ದೋಷವಿದ್ದರೆ ವ್ಯಕ್ತಿಯ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳು ದುರ್ಬಲಗೊಳ್ಳುತ್ತವೆ. ಬುಧ ದೋಷವು ಆಲೋಚನಾ ಶಕ್ತಿ, ಸಂವಹನ ಕೌಶಲ್ಯ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ, ಗುರು ದೋಷದಿಂದಾಗಿ ಶುಭ ಕಾರ್ಯಗಳು ವಿಳಂಬವಾಗುತ್ತವೆ ಮತ್ತು ಶನಿ, ರಾಹು ಹಾಗೂ ಕೇತುವಿನ ಪ್ರಭಾವದಿಂದ ಜೀವನದಲ್ಲಿ ಕಠಿಣ ಪರೀಕ್ಷೆಗಳು, ವಿಳಂಬಗಳು ಮತ್ತು ಅನಿರೀಕ್ಷಿತ ಬದಲಾವಣೆಗಳು ಎದುರಾಗುತ್ತವೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಗ್ರಹ ದೋಷಗಳಿಗೆ ಸರಿಯಾದ ಪರಿಹಾರಗಳನ್ನು ಕಂಡುಹಿಡಿಯುವುದು ಹೇಗೆ?

ಪ್ರತಿಯೊಬ್ಬ ವ್ಯಕ್ತಿಯ ಜಾತಕವು ವಿಶಿಷ್ಟವಾಗಿರುತ್ತದೆ, ಆದ್ದರಿಂದ ಒಬ್ಬರಿಗೆ ಸರಿಹೊಂದುವ ಪರಿಹಾರವು ಇನ್ನೊಬ್ಬರಿಗೆ ಕಡ್ಡಾಯವಾಗಿ ಅನ್ವಯಿಸುವುದಿಲ್ಲ. ಇದೇ ಕಾರಣಕ್ಕೆ, ನಿಮ್ಮ ಜಾತಕವನ್ನು ಪರೀಕ್ಷಿಸಿದ ಅನುಭವಿ ಜ್ಯೋತಿಷಿಯ ಸಲಹೆಯನ್ನು ಪಡೆಯುವುದು ಸೂಕ್ತವಾಗಿದೆ. ದೋಷದ ಸ್ವರೂಪ ಮತ್ತು ತೀವ್ರತೆಯನ್ನು ಅವಲಂಬಿಸಿ, ಅವರು ಮಂತ್ರ ಪಠಣ, ದಾನ ಧರ್ಮಗಳು, ಉಪವಾಸ, ದೇವತಾ ಪೂಜೆ, ಗ್ರಹ ಶಾಂತಿ ಹೋಮಗಳು ಅಥವಾ ಕೆಲವು ಸರಳ ಜೀವನಶೈಲಿಯ ಬದಲಾವಣೆಗಳನ್ನು ಸೂಚಿಸಬಹುದು. ಇವುಗಳನ್ನು ಪೂರ್ಣ ನಂಬಿಕೆ ಮತ್ತು ಶಿಸ್ತಿನಿಂದ ಅನುಸರಿಸುವುದರಿಂದ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು.

ಗ್ರಹದೋಷಕ್ಕೆ ಭಯ ಬೇಡ:

ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರವಿದ್ದೇ ಇರುತ್ತದೆ. ಗ್ರಹ ದೋಷದ ಅಸ್ತಿತ್ವದ ಬಗ್ಗೆ ನಿರಾಶೆಗೊಳ್ಳುವ ಬದಲು, ಅದನ್ನು ಸರಿಯಾಗಿ ಅರ್ಥಮಾಡಿಕೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ ಎಂದು ತಜ್ಞರು ಸೂಚಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಜಾತಕದಲ್ಲಿನ ದೋಷಗಳನ್ನು ಎಂದಿಗೂ ಇತರರೊಂದಿಗೆ ಹೋಲಿಸಿಕೊಳ್ಳಬೇಡಿ, ಏಕೆಂದರೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಕಂಡುಬರುವ ಪರಿಣಾಮಗಳು ಇನ್ನೊಬ್ಬರಿಗೆ ಒಂದೇ ಆಗಿರುವುದಿಲ್ಲ. ಇತರರಿಗೆ ಸೂಚಿಸಿದ ಪರಿಹಾರಗಳು ನಿಮಗೂ ಕೆಲಸ ಮಾಡುತ್ತವೆ ಎಂದು ಭಾವಿಸುವುದು ತಪ್ಪು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link