Headlines

ಚಿಕ್ಕಬಳ್ಳಾಪುರದಲ್ಲಿ ಹೆಲಿಕಾಪ್ಟರ್ ಮೂಲಕ ಚಿನ್ನ ನಿಕ್ಷೇಪ ಹುಡುಕಾಟ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಸಿ – Kannada News | Chikkaballapur: GSI Aerial Survey for gold deposits by helicopter; DC reveals explosive information

ಹೆಲಿಕಾಪ್ಟರ್ ಮೂಲಕ ಶೋಧImage Credit source: tv9 kannada ಚಿಕ್ಕಬಳ್ಳಾಪುರ, ಫೆಬ್ರವರಿ 02: ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಹೆಲಿಕಾಪ್ಟರ್ (Helicopter survey) ಮೂಲಕ ಬಂಗಾರ ಸೇರಿದಂತೆ ಭೂಗರ್ಭದಲ್ಲಿರುವ ನಿಧಿ-ನಿಕ್ಷೇಪಗಳ ಶೋಧಕಾರ್ಯ ನಡೆಯುತ್ತಿದೆ. ಇದರಿಂದ ಸ್ಥಳೀಯರಲ್ಲಿ ಕುತೂಹಲ ಹೆಚ್ಚಾಗಿದೆ. ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (ಜಿಎಸ್‌ಐ) ವತಿಯಿಂದ ಈ ಏರಿಯಲ್ ಸರ್ವೆ ನಡೆಸಲಾಗುತ್ತಿದೆ. ಹೆಲಿಕಾಪ್ಟರ್ ಹಾಗೂ ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳನ್ನು ಬಳಸಿ ಭೂಗರ್ಭದ ಖನಿಜ ಸಂಪತ್ತಿನ ಕುರಿತು ಸಮಗ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ….

Read More

ಪಿಲಿಕುಳ ಝೂ ಅವ್ಯವಸ್ಥೆಗೆ ಹೈಕೋರ್ಟ್​​ ಗರಂ: ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದ ಪೀಠ – Kannada News | Pilikula Zoo Neglect: Karnataka High Court Angry with Government Over Poor Maintenance

ಪಿಲಿಕುಳ ಜೈವಿಕ ಉದ್ಯಾನವನImage Credit source: Google ಮಂಗಳೂರು, ಫೆಬ್ರವರಿ 02: ಕರಾವಳಿಗರ ಮೆಚ್ಚಿನ ತಾಣ ಪಿಲಿಕುಳ ಝೂ‌‌ ಕಳೆದ ಕೆಲ ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ಇಲ್ಲಿಯ ಸ್ಥಿತಿ ಕಂಡು ಸ್ವತಃ ಹೈಕೋರ್ಟ್ ನ್ಯಾಯಾಧೀಶರೇ ಶಾಕ್ ಆಗಿದ್ದಾರೆ. ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪ್ರಾಣಿಗಳು ನರಳುತ್ತಿರೋ ಫೋಟೋಗಳನ್ನು ನೋಡಿ ನ್ಯಾಯಪೀಠ ಗರಂ ಆಗಿದೆ. ಅವುಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ರೆ ತಕ್ಷಣ ಬಂದ್ ಮಾಡಿ…

Read More

ಬಜೆಟ್ 2026: ಸರ್ಕಾರಕ್ಕೆ ಎಲ್ಲೆಲ್ಲಿಂದ ಆದಾಯ; ಎಲ್ಲೆಲ್ಲಿಗೆ ಖರ್ಚು? ಇಲ್ಲಿದೆ ಆಯ ಮತ್ತು ವ್ಯಯಗಳ ಲೆಕ್ಕ – Kannada News | Union budget 2026 of over Rs 53 trillion size, where govt gets money, where it spends, details here

2026ರ ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು 53.47 ಲಕ್ಷ ಕೋಟಿ ರೂ ಮೊತ್ತದ ಬಜೆಟ್ (Union Budget 2026) ಮಂಡಿಸಿದ್ದಾರೆ. ಇದೂವರೆಗಿನ ಅತಿದೊಡ್ಡ ಗಾತ್ರದ ಬಜೆಟ್ ಇದಾಗಿದೆ. ಕೆಲ ಪ್ರಮುಖ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಯಶಸ್ವಿಯಾದ ಅನೇಕ ಹಳೆಯ ಯೋಜನೆಗಳನ್ನು ಮುಂದುವರಿಸಲಾಗಿದೆ. ನೀತಿ ಸ್ಥಿರತೆಯಿಂದ ಈ ಬಜೆಟ್ ಗಮನ ಸೆಳೆದಿದೆ. ಭವಿಷ್ಯದ ದೃಷ್ಟಿಯಲ್ಲಿ ರೂಪುಗೊಂಡ ಬಜೆಟ್ ಎಂದು ಹಲವು ವಿಶ್ಲೇಷಕರು ಹೇಳುತ್ತಿದ್ದಾರೆ. ಸರ್ಕಾರಕ್ಕೆ ಆದಾಯ ಎಲ್ಲೆಲ್ಲಿಂದ? ಸಾಲಗಳು ಮತ್ತು ಹೊಣೆಗಾರಿಕೆಗಳು: ಶೇ. 24 ಆದಾಯ ತೆರಿಗೆ:…

Read More

ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ: ಕೊಳೆತ ಸ್ಥಿತಿಯಲ್ಲಿ ಮತದೇಹ ಪತ್ತೆ – Kannada News | 14 Year Old Boy Dies After Falling into BWSSB Pipeline Sump in Bengaluru

ಬೆಂಗಳೂರು, ಫೆಬ್ರವರಿ 02:  ತಾಳಗುಣಿ ಸಮೀಪ ಜಲಮಂಡಳಿ (BWSSB) ಕಾಮಗಾರಿ ವೇಳೆ ಇಲಾಖೆ ನಿರ್ಲಕ್ಷ್ಯಕ್ಕೆ ಬಾಲಕನೋರ್ವ ಬಲಿಯಾಗಿರುವ ಘಟನೆ ನಡೆದಿದೆ. ಕನಕಪುರ ರಸ್ತೆಯ ಪೈಪ್ಲೈನ್ ರೋಡ್​​ನಲ್ಲಿ ಕಾಮಗಾರಿ ವೇಳೆ ಮುಚ್ಚಳವಿಲ್ಲದೆ ತೆರೆದಿದ್ದ ಸಂಪಿಗೆ ಬಿದ್ದು ಪ್ರೀತಂ (14) ಮೃತಪಟ್ಟಿದ್ದಾನೆ. ತಾಳಗುಣಿಯ ನಿವಾಸಿ ರಮೇಶ್ ಅವರ ಪುತ್ರ ಪ್ರೀತಂ, ಜನವರಿ 28ರಂದು ನಾಪತ್ತೆಯಾಗಿದ್ದ. ಮೂರು ದಿನಗಳ ಕಾಲ ಕುಟುಂಬಸ್ಥರು ಬಾಲಕನ ಹುಡುಕಾಟ ನಡೆಸಿದ್ದರು. ಜನವರಿ 29ರಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ…

Read More

ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ: ಸದನದಲ್ಲಿ ಅಶೋಕ್‌-ಸಿದ್ದರಾಮಯ್ಯ ಕಾಮಿಡಿ – Kannada News | CM Siddaramaiah Taunts To R Ashok In Assembly Session about beer Price

ಬೆಂಗಳೂರು, (ಫೆಬ್ರವರಿ 02): ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯನವರು ಇಂದು (ಫೆಬ್ರವರಿ 02) ಅಧಿವೇಶನದಲ್ಲಿ ಉತ್ತರ ನೀಡಿದರು. ಈ ವೇಳೆ ಸಿದ್ದರಾಮಯ್ಯ ಬಿಯರ್ ಬಗ್ಗೆ ಮಾತನಾಡಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮದ್ಯದ ದರ ಏರಿಕೆ ಸಂಬಂಧ ವಿಪಕ್ಷ ನಾಯಕ ಅಶೋಕ್ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ, ನೀನು ಕುಡಿದಿದ್ದೀಯೆನಯ್ಯ? ನೀನು ಕುಡಿದಿದ್ರೆ ತಾನೇ ಗೊತ್ತಾಗೋದು. ಕಿಂಗ್ ಪಿಶರ್ 225 ರೂ ಇದೆ. ತೆಲಂಗಾದಲ್ಲಿ 125  ರೂಪಾಯಿ…

Read More

ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ – Kannada News | Gilli Nata Singer Mangli Shivarajkumar and others attend Kanakotsava

ಅದ್ದೂರಿಯಾಗಿ ‘ಕನಕೋತ್ಸವ’ (Kanakotsava) ನಡೆಯಿತು. ಕನಕಪುರದಲ್ಲಿ ನಡೆದ ಈ ಉತ್ಸವದ ವೇದಿಕೆಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟ, ಗಾಯಕಿ ಮಂಗ್ಲಿ, ಗಾಯಕ ವಿಜಯ್ ಪ್ರಕಾಶ್ ಮುಂತಾದವರು ಕಾಣಿಸಿಕೊಂಡರು. ಅನುಶ್ರೀ ಅವರ ಕಾಲಿಗೆ ಬಿದ್ದ ಗಿಲ್ಲಿ, ‘ಇವರೇ ನನ್ನ ಗಾಡ್ ಮದರ್’ ಎಂದು ಹೇಳಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಎದುರಲ್ಲಿ ಗಿಲ್ಲಿ ನಟ (Gilli Nata) ಅವರು ಭರ್ಜರಿ ಡೈಲಾಗ್ ಹೇಳಿ ರಂಜಿಸಿದರು. ಅನಾರೋಗ್ಯ ಪೀಡಿತ ಮಗುವಿನ ಜೊತೆ ಅವರು ಆ…

Read More

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಹಿಳೆಯ ಮಾಂಗಲ್ಯ ಸರ ಕದ್ದು ಎಸ್ಕೇಪ್​! – Kannada News | Bengaluru Chain Snatching: Mangalsutra Stolen After Diverting Woman’s Attention

ನೆಲಮಂಗಲ, ಫೆಬ್ಬರವರಿ 02: ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ನಿರಂತರವಾಗಿ ಹೆಚ್ಚಾಗುತ್ತಿದೆ. ಮಾದನಾಯಕನಹಳ್ಳಿಯ ದಾಸನಪುರದಲ್ಲಿ ಇಂತಹದೇ ಒಂದು ಘಟನೆ ನಡೆದಿದ್ದು, ಟೀ ಮತ್ತು ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದ ವ್ಯಕ್ತಿಯೋರ್ವ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಹಳದಿ ಬೋರ್ಡ್​ ಕಾರಿನಲ್ಲಿ ಇಬ್ಬರು ಬಂದಿದ್ದು, ಆ ಪೈಕಿ ಒಬ್ಬ ಕಾರಿನಿಂದ ಇಳಿದು ಅಂಗಡಿಗೆ ಬಂದು ಟೀ ಮತ್ತು ಸಿಗರೇಟ್ ಬೇಕು ಎಂದು ಕೇಳಿದ್ದಾನೆ. ನಂತರ ಫೋನ್ ಪೇ ಮೂಲಕ ಹಣ ಪಾವತಿಸುವುದಾಗಿ ಹೇಳಿ, ಕ್ಯೂಆರ್​​ ಕೋಡ್​​  ಕೇಳಿದ್ದಾನೆ….

Read More

Chanakya Niti: ಸ್ನೇಹಿತರು, ಸಂಬಂಧಿಕರಿಗೆ ಹಣ ಸಾಲ ನೀಡುವ ಮುನ್ನ ನೀವು ಈ ಪ್ರಶ್ನೆಗಳನ್ನು ಕೇಳಲೇಬೇಕು – Kannada News | Chanakya Niti: Chanakya says you should ask these questions before lending money to friends and relatives

ಇಂದಿನ ಕಾಲದಲ್ಲಿ, ಹಣ ಸಂಪಾದಿಸುವುದು ಎಷ್ಟು ಕಷ್ಟಕರವೋ, ಅದನ್ನು ಉಳಿಸುವುದು ಮತ್ತು ಬುದ್ಧಿವಂತಿಕೆಯಿಂದ ಬಳಸುವುದು ಇನ್ನೂ ಹೆಚ್ಚು ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಣದ (money) ವಿಚಾರವಾಗಿ ತುಂಬಾನೇ ಜಾಗರೂಕರಾಗಿರಬೇಕು. ಅದರಲ್ಲೂ ನಿಮ್ಮ ಫ್ರೆಂಡ್ಸ್‌ ಮತ್ತು ಸಂಬಂಧಿಕರು ಆರ್ಥಿಕ ಸಹಾಯವನ್ನು ಕೇಳಿದಾಗ, ನೀವು ವೃತ್ತಿಪರವಾಗಿ ನಡೆದುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇವರು ತಮ್ಮ ನೀತಿಶಾಸ್ತ್ರದಲ್ಲಿ ಹಣಕಾಸಿನ ವಹಿವಾಟುಗಳ ಕುರಿತು ಸ್ಪಷ್ಟ ಮತ್ತು ಕಠಿಣ ನಿಯಮಗಳ ಬಗ್ಗೆ ತಿಳಿಸಿದ್ದಾರೆ. ಅದರಲ್ಲಿ ಹತ್ತಿರದವರಿಗೆ ಸಾಲ ನೀಡುವ ಮೊದಲು ಏನೆಲ್ಲಾ…

Read More

ತತ್​ಕ್ಷಣದ ಪರಿಹಾರ ಮತ್ತು ಭವಿಷ್ಯದ ಪ್ರಗತಿ ಮಧ್ಯೆ ನೀತಿ ಸೇತುವಾಗಿರುವ ಬಜೆಟ್ 2026 – Kannada News | Union Budget 2026: Driving India’s Manufacturing, AI & Economic Future

ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತಪಡಿಸಿದ ಕೇಂದ್ರ ಬಜೆಟ್ 2026 (Union Budget) ಅನ್ನು ಭಾರತದ ಹಿಂದಿನ ಸಾಧನೆಗಳು ಹಾಗೂ ಭವಿಷ್ಯದ ಆಶೋತ್ತರಗಳ ನಡುವೆ ಕೊಂಡಿಯಾಗುವ ‘ನೀತಿ ಸೇತು’ (Policy Bridge) ಎಂದು ಬಣ್ಣಿಸಲಾಗುತ್ತಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಎಐ ಸನ್ನದ್ಧತೆ (AI preparedness) ಮೇಲೆ ಗಮನ ಹರಿಸುತ್ತಾ ಪ್ರಗತಿಗೆ ಪುಷ್ಟಿ ಕೊಡುವ ಈ ಬಜೆಟ್, ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುವ ಆರ್ಥಿಕತೆ ಎನ್ನುವ ಸ್ಥಾನ ಭಾರತಕ್ಕೆ ಮುಂದುವರಿಯುವಂತೆ ಮಾಡುತ್ತದೆ. ಈ ಬಜೆಟ್​ನಲ್ಲಿ ನೀತಿ ಮುಂದುವರಿಕೆ (ಶೇ. 60-70)…

Read More

ಕೋಲಾರದಲ್ಲಿ ಜೀರೋ ಹೆಸರಿನಲ್ಲಿ ಭೂ ಹಗರಣ: ವಾರಸುದಾರರಿಲ್ಲದ ಭೂಮಿ ಲಪಟಾಯಿಸಿದ ಪ್ರಭಾವಿಗಳು – Kannada News | Kolar Land Grab: Shivarapattana 80 Cr Zero Bin Zero Scam Exposed

ಕೋಲಾರ, ಫೆಬ್ರವರಿ 02: ಅದು ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೈಗಾರಿಕಾ ಪ್ರದೇಶ. ಅಲ್ಲಿ ಭೂಮಿಗೆ (Land) ಬಂಗಾರದ ಬೆಲೆ ಇದೆ. ಅಂಥ ಜಾಗದಲ್ಲಿ ಯಾರೂ ವಾರಸುದಾರರಿಲ್ಲದ ಭೂಮಿ ಇದೆ ಎಂದಾಗ ಭೂಗಳ್ಳರು, ಪ್ರಭಾವಿಗಳು ಸುಮ್ಮನೆ ಬಿಡುತ್ತಾರಾ, ಸಾಧ್ಯವೇ ಇಲ್ಲ. ಇಂಥಾದೊಂದು ಜಾಗ ಇದೇ ಅಂಥ ಗೊತ್ತಾಗಿದ್ದೇ ನೋಡಿ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಕೋಟ್ಯಂತರ ರೂ. ಭೂಮಿಯನ್ನು ತಿಂದು ತೇಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣ ಶಿಲ್ಪಿಗಳ ತವರೂರು. ಇದಕ್ಕೆ ಇಂಥದೊಂದು ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಶಿವಾರಪಟ್ಟಣ…

Read More