3 ತಿಂಗಳಿಂದ ಬಾಂಗ್ಲಾದೇಶದ ಜೈಲಿನಲ್ಲಿದ್ದ ಆಂಧ್ರದ 9 ಮೀನುಗಾರರು ಭಾರತಕ್ಕೆ ವಾಪಾಸ್ – Kannada News | 9 fishermen from Andhra Pradesh return home after being detained in Bangladesh for 3 months
ಹೈದರಾಬಾದ್, ಫೆಬ್ರವರಿ 2: ಬಾಂಗ್ಲಾದೇಶದಲ್ಲಿ ಕಳೆದ 3 ತಿಂಗಳಿನಿಂದ ಬಂಧನದಲ್ಲಿದ್ದ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ 9 ಮೀನುಗಾರರು (Fishermen) ಸ್ವದೇಶಕ್ಕೆ ಮರಳಿದ್ದಾರೆ. ಜನವರಿ 29ರಂದು ಬಾಂಗ್ಲಾದೇಶದ ಕೋಸ್ಟ್ ಗಾರ್ಡ್ ಮೀನುಗಾರರನ್ನು ಭಾರತದ ಕೋಸ್ಟ್ ಗಾರ್ಡ್ಗೆ ಹಸ್ತಾಂತರಿಸಲಾಯಿತು. ನಂತರ ಅವರು ಅವರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರು. 2025ರ ಅಕ್ಟೋಬರ್‌ನಲ್ಲಿ ಮೀನುಗಾರಿಕೆಗೆ ಹೋಗಿದ್ದ 9 ಮೀನುಗಾರರು ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆ ಮಾಡುವಾಗ ಅಜಾಗರೂಕತೆಯಿಂದ ಸಮುದ್ರದ ಗಡಿಯನ್ನು ದಾಟಿದ್ದರು. ಹೀಗಾಗಿ, ಬಾಂಗ್ಲಾದೇಶದ ನೌಕಾಪಡೆಯ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ನಂತರ ಅವರನ್ನು ಬಗೇರ್‌ಹಟ್ ಜೈಲಿನಲ್ಲಿ…