‘ಶಿವಣ್ಣನಿಗೂ ಹೀಗೆ ಕೇಳ್ತೀರಾ’; ಸಂಚಿತ್ ಎಂಟ್ರಿ ನೆಪೋಟಿಸಂ ಎಂದವರಿಗೆ ಸುದೀಪ್ ಖಡಕ್ ಉತ್ತರ – Kannada News
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸುದೀಪ್ ಅವರಿಗೆ ಮಾಧ್ಯಮಗಳಿಂದ ‘ನೆಪೋಟಿಸಂ’ ಕುರಿತು ನೇರ ಪ್ರಶ್ನೆ ಎದುರಾಗಿದೆ. ಈ ವೇಳೆ ಸುದೀಪ್ ಹಾಗೂ ಸಂಚಿತ್ ಇಬ್ಬರೂ ಖಡಕ್ ಉತ್ತರ ನೀಡಿದ್ದಾರೆ. ಖುಷಿ ಎಲ್ಲರಿಗೂ ಕಾಣುತ್ತಿದೆ ಎಂದ ಸಂಚಿತ್: ಮೊದಲ ಸಿನಿಮಾದಲ್ಲೇ ತಮ್ಮ ನಟನೆಯ ಮೂಲಕ ಪ್ರೇಕ್ಷಕರ…