Category Archives: Blog

Your blog category

ದೇವಸ್ಥಾನದ ಸುಪ್ರಭಾತ ಹಾಡು ಹಾಕಿರುವುದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್ – Kannada News | War of Words Between Hindu muslim about Morning God Songs In Temple at Doddaballapur

ದೊಡ್ಡಬಳ್ಳಾಪುರ, ಫೆಬ್ರವರಿ 02): ದೇವಸ್ಥಾನದ (Temple) ಸುಪ್ರಭಾತ ಹಾಡಿನ ವಿಚಾರಕ್ಕೆ ಹಿಂದೂ ಹಾಗೂ ಮುಸ್ಲಿಂ (Hindu And Muslim) ಯುವಕರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಶಾಂತಿ ನಗರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ನಗರದ ಶಾಂತಿ ನಗರದ ಶನಿಮಹಾತ್ಮ ದೇವಸ್ಥಾನದಲ್ಲಿ ಇಂದು (ಫೆಬ್ರವರಿ 02) ಬೆಳಗ್ಗೆ ಸುಪ್ರಭಾತ ಹಾಡು ಹಾಕಿದ್ದು, ಇದಕ್ಕೆ ಮುಸ್ಲಿಂ ಯುವಕನೋರ್ವ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಮನೆಯಲ್ಲಿ ತಾಯಿ ಮಲಗಿದ್ದಾಳೆ ಸೌಂಡ್ ಕಡಿಮೆ ಮಾಡು ಎಂದಿದ್ದಾನೆ. ಇದಕ್ಕೆ ಆಕ್ರೋಶಗೊಂಡು ಹಿಂದೂಗಳು ಮಸೀದಿಯಲ್ಲಿ ಅಜಾನ್ ಕೂಗಿದರೆ ನಾವು ಹೀಗೆ ಕೇಳುತ್ತೀವಾ ಎಂದು ಪ್ರಶ್ನಿಸಿದ್ದಾರೆ. ಹೀಗೆ ಎರಡು ಗುಂಪಿನ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ದೇವಸ್ಥಾನದ ಪೂಜಾರಿ ನೀಡಿದ ದೂರಿನನ್ವಯ ದೊಡ್ಡಬಳ್ಳಾಪುರ ನಗರ ಪೊಲೀಸರಿಂದ ಎನ್ಸಿಆರ್ ದಾಖಲಾಗಿದ್ದು, ಎರಡು ಕಡೆಯವರಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಕಟವಾಗದ ಪುಸ್ತಕದಲ್ಲಿರುವ ವಿಷಯ ಉಲ್ಲೇಖಿಸಲು ಹೋಗಿ ಸದನದ ಬಾಯಿಗೆ ಆಹಾರವಾದ್ರಾ ರಾಹುಲ್ ಗಾಂಧಿ – Kannada News | Lok Sabha Disrupted After Rahul Gandhi Quotes Former Army Chief’s Memoir

ನವದೆಹಲಿ, ಫೆಬ್ರವರಿ 02: ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಹೇಳಿಕೆ ಕೋಲಾಹಲವನ್ನೇ ಸೃಷ್ಟಿಸಿದೆ. ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ,  ರಾಹುಲ್ ಗಾಂಧಿ  ರಾಷ್ಟ್ರಪತಿ ಭಾಷಣದ ಬಗ್ಗೆ ಚರ್ಚಿಸುವಾಗ ಡೋಕ್ಲಾಮ್ ಬಗ್ಗೆ ಪ್ರಸ್ತಾಪಿಸಿದರು. ರಾಹುಲ್ ಗಾಂಧಿ ಡೋಕ್ಲಾಮ್ ಬಗ್ಗೆ ಚರ್ಚಿಸಲು ಪ್ರಾರಂಭಿಸಿದ ತಕ್ಷಣ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿಯವರು ಮಾಜಿ ಸೇನಾ ಮುಖ್ಯಸ್ಥ ನರವಾಣೆ ಅವರ ಚೀನಾ ಮತ್ತು ಡೋಕ್ಲಾಮ್ ಬಗ್ಗೆ ಬರೆದ ಪುಸ್ತಕವನ್ನು ಉಲ್ಲೇಖಿಸಲು ಬಯಸಿದ್ದರು. ಆದರೆ, ರಾಜನಾಥ್ ಸಿಂಗ್ ಅವರು ಆಕ್ಷೇಪ ವ್ಯಕ್ತಪಡಿಸಿ, ನೀವು ಉಲ್ಲೇಖಿಸುತ್ತಿರುವ ಪುಸ್ತಕ ಎಂದಿಗೂ ಪ್ರಕಟವಾಗಿಲ್ಲ ಎಂದು ಹೇಳಿದರು.

ಅವರ ಉಲ್ಲೇಖ ತಪ್ಪಾಗಿತ್ತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ರಾಹುಲ್ ಗಾಂಧಿಯವರ ಮಾತಿಗೆ ಅಡ್ಡಿಪಡಿಸಿದರು, ಪ್ರಕಟವಾಗದ ಪುಸ್ತಕವನ್ನು ಸಂಸತ್ತಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ರಾಹುಲ್ ಗಾಂಧಿಯವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ, ಪುಸ್ತಕ ಪ್ರಕಟವಾಗಿದೆಯೋ ಇಲ್ಲವೋ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಹೇಳಿದರು.

ನಂತರ ರಾಜನಾಥ್ ಸಿಂಗ್ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿಕೊಂಡು, ಸದನವನ್ನು ದಾರಿ ತಪ್ಪಿಸಲು ಪ್ರಯತ್ನಿಸಬೇಡಿ ಮತ್ತು ಇಲ್ಲಿ ಅನಗತ್ಯ ಹೇಳಿಕೆಗಳನ್ನು ನೀಡಬೇಡಿ ಎಂದು ಹೇಳಿದರು.
ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ಎದ್ದು ನಿಂತು ರಾಹುಲ್ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದರು. ರಾಹುಲ್ ಅವರಿಗೆ ಪುಸ್ತಕದ ಕುರಿತು ಮಾತನಾಡಲು ಅವಕಾಶ ನೀಡುವಂತೆ ಅವರು ಲೋಕಸಭಾ ಸ್ಪೀಕರ್ ಅವರನ್ನು ಒತ್ತಾಯಿಸಿದರು. ಚೀನಾ ವಿಷಯವು ಸೂಕ್ಷ್ಮವಾಗಿದೆ.

ಮತ್ತಷ್ಟು ಓದಿ: ರಾಹುಲ್ ಗಾಂಧಿ ಮತಗಳ್ಳತನ ಆರೋಪ ಸಿಎಂ ಸಿದ್ದರಾಮಯ್ಯ ಬುಡಕ್ಕೆ!

ಆದರೆ ಸ್ಪೀಕರ್ ನಂತರ ರಾಹುಲ್ ಅವರಿಗೆ ಅವರು ಸದನದ ಅಲಂಕಾರವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಹೇಳಿದರು. ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡ ರಾಹುಲ್, ಅವರು ಪುಸ್ತಕಕ್ಕೆ ಹೆದರುತ್ತಾರೆ. ಅವರಿಗೆ ಭಯವಿಲ್ಲದಿದ್ದರೆ, ನನಗೆ ಓದಲು ಅವಾಶ ಮಾಡಿಕೊಡಬೇಕಿತ್ತು ಎಂದು ರಾಹುಲ್​ಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿರುಗೇಟುನೀಡಿ, ಸದನವು ನಿಯಮಗಳ ಪ್ರಕಾರ ನಡೆಯುತ್ತದೆ ಎಂದು ಹೇಳಿದರು.

ಭಾನುವಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2026-27ರ ಕೇಂದ್ರ ಬಜೆಟ್ ಅನ್ನು ಮಂಡಿಸಿದರು, ಇದು ಅವರ ಸತತ ಒಂಬತ್ತನೇ ಕೇಂದ್ರ ಬಜೆಟ್ ಆಗಿತ್ತು. ಫೆಬ್ರವರಿ 8ರಂದು ಪ್ರಧಾನಿ ನರೇಂದ್ರ ಮೋದಿ ಸದನವನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆ ಇದೆ.

ಡೋಕ್ಲಾಮ್ ಬಿಕ್ಕಟ್ಟಿ‌ನ ಕುರಿತು M.M.ನರವಾಣೆ ಬರೆದಿರುವ ಪುಸ್ತಕದ ಪ್ರಕಟಣೆಯನ್ನು ಬಿಜೆಪಿ ಸರ್ಕಾರ ತಡೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.ಅದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ರಾಜನಾಥ್ ಸಿಂಗ್, ಕಿರಣ್ ರಿಜಿಜು, ಇನ್ನೂ ಪ್ರಕಟವಾಗದ ಪುಸ್ತಕದ ವಿಷಯಗಳನ್ನು ಉಲ್ಲೇಖಿಸಬೇಡಿ ಎಂದರು.
ಚೀನಾಕ್ಕೆ ಸಂಬಂಧಿಸಿದ ವಿಷಯವು ತುಂಬಾ ಸೂಕ್ಷ್ಮವಾಗಿದೆ, ರ್ಚೆಗೆ ಅವಕಾಶ ‌ನೀಡಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

3 ತಿಂಗಳಿಂದ ಬಾಂಗ್ಲಾದೇಶದ ಜೈಲಿನಲ್ಲಿದ್ದ ಆಂಧ್ರದ 9 ಮೀನುಗಾರರು ಭಾರತಕ್ಕೆ ವಾಪಾಸ್ – Kannada News | 9 fishermen from Andhra Pradesh return home after being detained in Bangladesh for 3 months

ಹೈದರಾಬಾದ್, ಫೆಬ್ರವರಿ 2: ಬಾಂಗ್ಲಾದೇಶದಲ್ಲಿ ಕಳೆದ 3 ತಿಂಗಳಿನಿಂದ ಬಂಧನದಲ್ಲಿದ್ದ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ 9 ಮೀನುಗಾರರು (Fishermen) ಸ್ವದೇಶಕ್ಕೆ ಮರಳಿದ್ದಾರೆ. ಜನವರಿ 29ರಂದು ಬಾಂಗ್ಲಾದೇಶದ ಕೋಸ್ಟ್ ಗಾರ್ಡ್ ಮೀನುಗಾರರನ್ನು ಭಾರತದ ಕೋಸ್ಟ್​ ಗಾರ್ಡ್​ಗೆ ಹಸ್ತಾಂತರಿಸಲಾಯಿತು. ನಂತರ ಅವರು ಅವರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರು.

2025ರ ಅಕ್ಟೋಬರ್‌ನಲ್ಲಿ ಮೀನುಗಾರಿಕೆಗೆ ಹೋಗಿದ್ದ 9 ಮೀನುಗಾರರು ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆ ಮಾಡುವಾಗ ಅಜಾಗರೂಕತೆಯಿಂದ ಸಮುದ್ರದ ಗಡಿಯನ್ನು ದಾಟಿದ್ದರು. ಹೀಗಾಗಿ, ಬಾಂಗ್ಲಾದೇಶದ ನೌಕಾಪಡೆಯ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ನಂತರ ಅವರನ್ನು ಬಗೇರ್‌ಹಟ್ ಜೈಲಿನಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ: Chanchal Bhowmik: ಬಾಂಗ್ಲಾದೇಶದಲ್ಲಿ ಮತ್ತೊಂದು ಹಿಂದೂ ಯುವಕನ ಹತ್ಯೆ; ಗ್ಯಾರೇಜ್‌ನೊಳಗೆ ಸಜೀವ ದಹನ

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಮಾತುಕತೆಗಳ ನಂತರ ಮೀನುಗಾರರನ್ನು ಬಿಡುಗಡೆ ಮಾಡಲಾಯಿತು. ಬಾಂಗ್ಲಾದಿಂದ ಬಿಡುಗಡೆಯಾದ ಅವರು ಇಂದು ವಿಶಾಖಪಟ್ಟಣಂ ಕರಾವಳಿಗೆ ತಲುಪಿದ್ದಾರೆ.

ಬಾಂಗ್ಲಾದೇಶದಿಂದ ಬಿಡುಗಡೆಯಾದ ಮೀನುಗಾರರನ್ನು ಮರುಪಲ್ಲಿ ಚಿನ್ನಪ್ಪಣ್ಣ, ರಮೇಶ್ ಅಪ್ಪಲಕೊಂಡ, ಪ್ರವೀಣ್, ರಾಮು, ನಕ್ಕ ರಾಮು, ಸೀತಯ್ಯ ಎಂದು ಗುರುತಿಸಲಾಗಿದೆ. ಅವರಲ್ಲಿ 6 ಮಂದಿ ಭೋಗಪುರಂ ಮಂಡಲದ ಕೊಂಡರಾಜುಪಾಲಂ ಗ್ರಾಮದವರು ಮತ್ತು ಮೂವರು ವಿಜಯನಗರಂ ಜಿಲ್ಲೆಯ ತಿಪ್ಪಲವಲಸ ಗ್ರಾಮದವರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫೆ.6ರಂದು ರಿಲೀಸ್ ಆಗಲಿದೆ ಗಿಲ್ಲಿ ನಟ ಅಭಿನಯದ ‘ಸರ್ಕಾರಿ ಶಾಲೆ H8’ ಸಿನಿಮಾ – Kannada News | Gilli Nata starrer Sarkari Shale H8 Movie Releasing on 6 February

ಹಾಸ್ಯ ಕಲಾವಿದ ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ಶೋನಿಂದ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಬಿಗ್ ಬಾಸ್ ಟ್ರೋಫಿ ವಿನ್ ಆದ ಬಳಿಕ ಹಲವು ಊರುಗಳಲ್ಲಿ ಮೆರವಣಿಗೆ ಮಾಡಿದ್ದೇ ಅವರ ಜನಪ್ರಿಯತೆಗೆ ಸಾಕ್ಷಿ ಆಗಿದೆ. ಬಿಗ್ ಬಾಸ್​​ನಲ್ಲಿ ಸ್ಪರ್ಧಿಸುವುದಕ್ಕೂ ಮುನ್ನವೇ ಅವರು ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆ ಪೈಕಿ ‘ಸರ್ಕಾರಿ ಶಾಲೆ H8’ (Sarkari Shale H8) ಕೂಡ ಇದೆ. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿಯಿಂದ 6ರಂದು ಈ ಚಿತ್ರ ರಿಲೀಸ್ ಆಗಲಿದೆ. ಇದರಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಕಹಾನಿ ಇದೆ.

‘ಸರ್ಕಾರಿ ಶಾಲೆ H8’ ಸಿನಿಮಾದಲ್ಲಿ ಗಿಲ್ಲಿ ನಟ ಮಾತ್ರವಲ್ಲದೇ ಗುಣ ಹರಿಯಬ್ಬೆ, ಮೇಘಶ್ರೀ, ಜನಪದ ಕಲಾವಿದ ಮೋಹನ್, ಸುಚೇಂದ್ರ ಪ್ರಸಾದ್ ಮುಂತಾದವರು ಅಭಿನಯಿಸಿದ್ದಾರೆ. ಗುಣ ಹರಿಯಬ್ಬೆ ಅವರು ಕಥೆ, ಚಿತ್ರಕಥೆ ಬರೆದು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಗಿರಿಚಂದ್ರ ಪ್ರೊಡಕ್ಷನ್ಸ್’ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ತೇಜಸ್ವಿನಿ ಎಸ್. ಅವರು ಬಂಡವಾಳ ಹೂಡಿದ್ದಾರೆ.

ಕೆಲವು ಕಾರಣಗಳಿಂದಾಗಿ ‘ಸರ್ಕಾರಿ ಶಾಲೆ H8’ ಸಿನಿಮಾ ಮೇಲೆ ನಿರೀಕ್ಷೆ ಇದೆ. ಟೈಟಲ್ ಗಮನ ಸೆಳೆದಿದೆ. ಗಿಲ್ಲಿ ನಟ ಅಭಿನಯದ ಸಿನಿಮಾ ಆದ್ದರಿಂದ ಅವರ ಅಭಿಮಾನಿಗಳಲ್ಲಿ ಹೈಪ್ ಇದೆ. ಈ ಸಿನಿಮಾದ ಕಥೆಯು ಒಂದು ವಿಗ್ರಹದ ಸುತ್ತ ಸುತ್ತಲಿದೆಯಂತೆ. ಈ ಸಿನಿಮಾಗೆ ಬೆಂಗಳೂರು, ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.

‘ಸರ್ಕಾರಿ ಶಾಲೆ H8’ ಸಿನಿಮಾಗೆ ವಿಜೇತ್ ಮಂಜಯ್ಯ ಅವರ ಸಂಗೀತ ನಿರ್ದೇಶನ ಮಾಡಿದ್ದಾರೆ. 3 ಹಾಡುಗಳು ಈ ಸಿನಿಮಾದಲ್ಲಿವೆ. ಕಾಮಿಡಿ ಸಿನಿಮಾಗಳ ಮೂಲಕ ಫೇಮಸ್ ಆದ ನಟ ಶರಣ್ ಮತ್ತು ಮೆಹಬೂಬ್ ಸಾಬ್ ಒಂದೊಂದು ಹಾಡನ್ನು ಹಾಡಿದ್ದಾರೆ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ರಚಿಸಿದ್ದಾರೆ.

ಇದನ್ನೂ ಓದಿ: ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ

ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್, ಜಗಪ್ಪ, ನವಾಜ್, ಸುಶ್ಮಿತಾ ಜಗಪ್ಪ, ಜೋತಿರಾಜ್, ಕಡ್ಡಿ ವಿಶ್ವ, ನಮ್ರತಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರವಿ ರಾಮದುರ್ಗ ಮತ್ತು ವೀನಸ್ ಮೂರ್ತಿ ಅವರು ‘ಸರ್ಕಾರಿ ಶಾಲೆ H8’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ರವಿತೇಜ ಸಿ.ಹೆಚ್. ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಅಬ್ಬಾ ! ಒಂದು ಎಕರೆ ತೆಂಗಿನ ತೋಟದಲ್ಲಿ 28 ಲಕ್ಷ ರೂ ಗಳಿಸಬಹುದಂತೆ; ಹೇಗೆ? ಇಲ್ಲಿದೆ ವಿಡಿಯೋ – Kannada News | One can earn Rs 28 lakh from one acre of coconut plantation, Video goes viral

ಇತ್ತೀಚೆಗಿನ ದಿನಗಳಲ್ಲಿ ಕೃಷಿಯತ್ತ (agriculture) ಮುಖ ಮಾಡುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಅದಲ್ಲದೇ ಆಧುನಿಕ ಕೃಷಿಯಲ್ಲಿ ಟ್ರಾಕ್ಟರ್‌ಗಳು, ಡ್ರೋನ್‌ಗಳು, ಸ್ಮಾರ್ಟ್ ನೀರಾವರಿ, ಮತ್ತು ಜೈವಿಕ ತಂತ್ರಜ್ಞಾನದಂತಹ ಆಧುನಿಕ ಪರಿಕರಗಳ ಬಳಕೆಯ ಮೂಲಕ ಇಳುವರಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ಕೃಷಿಯಲ್ಲಿ ಆಸಕ್ತಿ ಇದ್ದು, ತೆಂಗಿನ ತೋಟ ಮಾಡಬೇಕೆಂದು ಕೊಂಡವರು ಈ ವಿಧಾನ ಅನುಸರಿಸಿದ್ರೆ 28 ಲಕ್ಷ ರೂ ಆದಾಯ ಬರೋದು ಗ್ಯಾರಂಟಿಯಂತೆ. ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೈತ ಪ್ರಗತಿ (Raita Pragati) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತೆಂಗಿನ ತೋಟದಲ್ಲಿ ಹೆಚ್ಚು ಆದಾಯ ಗಳಿಸುವುದು ಹೇಗೆಂದು ವಿವರಿಸಿದ್ದಾರೆ. ಒಂದು ಎಕರೆ ತೆಂಗಿನ ತೋಟದಲ್ಲಿ 28 ಲಕ್ಷ ದುಡಿಯಬಹುದಂತೆ. ತೆಂಗಿನ ತೋಟದಲ್ಲಿ ಹೆಚ್ಚು ಆದಾಯ ಬರಲು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕೆಂದು ವಿವರಿಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ಹಳ್ಳಿ ಜೀವನದ ಗಮ್ಮತ್ತು; ಕೃಷಿ ಕಾಯಕದಲ್ಲಿ ನಿರತರಾಗಿರುವ ಹಳ್ಳಿ ಜನ್ರು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಒಳ್ಳೆಯ ಮಾಹಿತಿ ಎಂದರೆ, ಮತ್ತೊಬ್ಬರು, ಇವರ ಹೇಳಿಕೆಯಲ್ಲಿ ವಿಸ್ತಾರವಾದ ಅರ್ಥವಿದೆ. ವೈಜ್ಞಾನಿಕವಾಗಿ ಚಿಂತಿಸಿ ಅರ್ಥ ಮಾಡಿಕೊಳ್ಳಿ, ಇಂದಿನ ದಿನಮಾನದಲ್ಲಿ ಯಾವುದೂ ಕಷ್ಟವಲ್ಲ. ಇವರೇ ಹೇಳಿದ್ದು ಒಂದು ಎಕರೆ ತೆಂಗಿನ ಜೊತೆಗೆ ಹಲವಾರು ಬೆಳೆಗಳನ್ನು ಕೂಡ ಹೇಳಿದ್ದಾರೆ ಅಮೌಂಟ್ ಸ್ವಲ್ಪ ಹೆಚ್ಚಿಗೆ ಹೇಳಿದ್ದಾರೆ ಆದರೆ ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಾಡು ಪ್ರಾಣಿಗಳು ಬಿಟ್ರೆ ನಮಗೆ ಫಸಲು ಸಿಗೋದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:02 pm, Mon, 2 February 26

Source link

ಬಿಳಿ ಬಟ್ಟೆಯ ಮೇಲಿನ ಹಠಮಾರಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿವೆ ಸರಳ ಉಪಾಯ – Kannada News | Here are some simple tips to easily remove stubborn stains from white clothes

ಇತರೆ ಬಣ್ಣದ ಬಟ್ಟೆಗಳಿಗೆ ಹೋಲಿಸಿದರೆ ಬಿಳಿ ಬಟ್ಟೆಗಳ (white clothes) ಮೇಲೆ  ಸುಲಭವಾಗಿ ಕಲೆಗಳಾಗುತ್ತದೆ. ಎಣ್ಣೆ, ಪದಾರ್ಥ ಶಾಯಿ, ಚಹಾ ಕಲೆಗಳು, ಬಣ್ಣಗಳು ಸುಲಭವಾಗಿ ಬಿಳಿ ಬಟ್ಟೆಯ ಮೇಲೆ ಅಂಟಿಕೊಳ್ಳುತ್ತದೆ. ಈ ಸಣ್ಣ ಕಲೆ ಕೂಡ ಬಿಳಿ ಬಟ್ಟೆಯ ಅಂದವನ್ನೇ ಹಾಳು ಮಾಡುತ್ತದೆ. ಜೊತೆಗೆ ಕಲೆಗಳನ್ನು ತೊಡೆದುಹಾಕುವುದು ಕೂಡ ದೊಡ್ಡ ಸವಾಲಿನ ಸಂಗತಿ. ಹೌದು ಬಿಳಿ ಬಟ್ಟೆಯ ಮೇಲೆ ಕಲೆಯಾದ್ರೆ ಎಷ್ಟೇ ತಿಕ್ಕಿದ್ರೂ ಸಹ ಆ ಕಲೆಗಳು ಮಾತ್ರ ಹೋಗುವುದೇ ಇಲ್ಲ. ಅಲ್ಲದೆ  ಪದೇ ಪದೇ ತೊಳೆದ ನಂತರವೂ ಈ ಕಲೆಗಳು ಹಾಗೆಯೇ ಇರುತ್ತವೆ ಮತ್ತು ಬಟ್ಟೆಯು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಹೀಗಿರುವಾಗ  ಈ ಕೆಲವು ಸುಲಭ ಸಲಹೆಗಳನ್ನು ಪಾಲಿಸುವ ಮೂಲಕ ಬಿಳಿ ಬಟ್ಟೆಯ ಮೇಲಿನ ಮೊಂಡುತನದ ಕಲೆಗಳನ್ನು ಸುಲಭವಾಗಿ ತೆಗೆದು ಹಾಕಬಹುದು.

ಬಿಳಿ ಬಟ್ಟೆಗಳ ಕಲೆಗಳನ್ನು ತೆಗದುಹಾಕಲು ಇಲ್ಲಿವೆ ಸುಲಭ ಸಲಹೆ:

ಅಡಿಗೆ ಸೋಡಾ ಮತ್ತು ವಿನೆಗರ್: ಬಿಳಿ ಬಟ್ಟೆಗಳಿಂದ ಕಲೆಗಳನ್ನು ತೆಗೆದುಹಾಕಲು ನೀವು ಅಡಿಗೆ ಸೋಡಾ ಮತ್ತು ವಿನೆಗರ್ ಅನ್ನು ಬಳಸಬಹುದು. ಒಂದು ಬಕೆಟ್ ಉಗುರು ಬೆಚ್ಚಗಿನ ನೀರಿಗೆ 1 ಕಪ್ ವಿನೆಗರ್ ಮತ್ತು 2 ಟೀ ಚಮಚ ಅಡಿಗೆ ಸೋಡಾ ಸೇರಿಸಿ, ನೀರನ್ನು ಚೆನ್ನಾಗಿ ಬೆರೆಸಿ. ಬಟ್ಟೆಯನ್ನು ಈ ದ್ರಾವಣದಲ್ಲಿ ನೆನೆಸಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಶುದ್ಧ ನೀರಿನಿಂದ ಈ ಬಟ್ಟೆಯನ್ನು ತೊಳೆಯಿರಿ. ಇದು ನಿಮ್ಮ ಬಿಳಿ ಬಟ್ಟೆಯನ್ನು ನಿಮಿಷಗಳಲ್ಲಿ ಹೊಸದರಂತೆ ಹೊಳೆಯುವಂತೆ ಮಾಡುತ್ತದೆ.

ನಿಂಬೆ ಮತ್ತು ಉಪ್ಪು: ಬಿಳಿ ಬಟ್ಟೆಗಳಿಂದ ಮೊಂಡುತನದ ಕಲೆಗಳನ್ನು ತೆಗೆದುಹಾಕಲು ನಿಂಬೆ ಮತ್ತು ಉಪ್ಪನ್ನು ಸಹ ಬಳಸಬಹುದು.  ಇದನ್ನು ಮಾಡಲು, ನಿಂಬೆ ರಸವನ್ನು ಉಪ್ಪಿನೊಂದಿಗೆ ಬೆರೆಸಿ ಒಂದು ದ್ರಾವಣವನ್ನು ತಯಾರಿಸಿ. ಈ ಮಿಶ್ರಣವನ್ನು ಬಟ್ಟೆಗೆ ಅಂಟಿರುವ ಕಲೆಯ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಲು ಬಿಡಿ. ಈ ತಂತ್ರ ಕಲೆಗಳನ್ನು ತೆಗೆದುಹಾಕುತ್ತದೆ ಮತ್ತು ಬಟ್ಟೆಯ ಹೊಳಪನ್ನು ಕಾಪಾಡಿಕೊಳ್ಳುತ್ತದೆ.

ಪಾತ್ರೆ ತೊಳೆಯುವ ದ್ರವ: ಬಿಳಿ ಬಟ್ಟೆಯ ಮೇಲೆ ಆಹಾರದ ಕಲೆಗಳಾದರೆ ಅದನ್ನು ತೆಗೆದುಹಾಕಲು ಡಿಶ್‌ ವಾಶ್‌ ಲಿಕ್ವಿಡ್‌ ಅನ್ನು ಬಳಸಬಹುದು. ಅದಕ್ಕಾಗಿ ಬಟ್ಟೆಯ ಮೇಲೆ ಕಲೆ ಇರುವ ಪ್ರದೇಶಕ್ಕೆ ಪಾತ್ರೆ ತೊಳೆಯುವ ದ್ರವವನ್ನು ಹಚ್ಚಿ ನಿಧಾನವಾಗಿ ಉಜ್ಜಿಕೊಳ್ಳಿ. ನಂತರ, ಬಟ್ಟೆಯನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದು ಎಣ್ಣೆ ಮತ್ತು ಆಹಾರದ ಕಲೆಗಳನ್ನು ತ್ವರಿತವಾಗಿ ತೆಗೆದುಹಾಕುತ್ತದೆ.

ಇದನ್ನೂ ಓದಿ: ಶೂನಿಂದ ಬರುವ ಕೆಟ್ಟ ವಾಸನೆಯನ್ನು ತೊಡೆದು ಹಾಕಲು ಸಿಂಪಲ್‌ ಟಿಪ್ಸ್‌ ಪಾಲಿಸಿ

ಬಿಳಿ ವಿನೆಗರ್: ಬಿಳಿ ವಿನೆಗರನ್ನು ನೈಸರ್ಗಿಕ ಕ್ಲೀನರ್ ಎಂದು ಪರಿಗಣಿಸಲಾಗುತ್ತದೆ. ಇದು ಬಿಳಿ ಬಟ್ಟೆಯ ಮೇಲೆ ಅಂಟಿರುವ ಎಣ್ಣೆ, ಚಹಾ ಅಥವಾ ಕಾಫಿ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದಕ್ಕಾಗಿ ಬಟ್ಟೆಯಲ್ಲಿ ಕಲೆಯಾದ ಜಾಗಕ್ಕೆ ವಿನೆಗರ್‌ ಹಾಕಿ 10 ನಿಮಿಷಗಳ ಕಾಲ ಬಿಡಿ. ನಂತರ, ಸೋಪ್ ಹಚ್ಚಿ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಟೂತ್‌ಪೇಸ್ಟ್: ಬಿಳಿ ಟೂತ್‌ಪೇಸ್ಟನ್ನು ಬಿಳಿ ಬಟ್ಟೆಯ ಮೇಲೆ ಅಂಟಿರುವ ಕಲೆಗಳ ಮೇಲೆ  ಹಚ್ಚಿ ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಅದನ್ನು ಟೂತ್ ಬ್ರಷ್‌ನಿಂದ ಸ್ಕ್ರಬ್ ಮಾಡಿ. ಇದು ಹಠಮಾರಿ ಕಲೆಯನ್ನು ಸುಲಭವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಬಗ್ಗೆ ಇಲಾನ್ ಮಸ್ಕ್ ಟ್ವೀಟ್; ರಾಹುಲ್ ಮತ್ತು ವಿಪಕ್ಷಗಳನ್ನು ಝಾಡಿಸಿದ ಕೇಂದ್ರ ಸಚಿವರು – Kannada News | Central ministers quote Elon Musk’s tweet to lash out against Rahul Gandhi and opposition on Indian Economy

ನವದೆಹಲಿ, ಫೆಬ್ರುವರಿ 2: ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಕಳವಳ ಮತ್ತು ಟೀಕೆ ಮಾಡುತ್ತಲೇ ಬಂದಿರುವ ರಾಹುಲ್ ಗಾಂಧಿ ಹಾಗೂ ವಿಪಕ್ಷಗಳ ವಿರುದ್ಧ ಸರ್ಕಾರ ಹರಿಹಾಯಲು ಹೊಸ ಅಸ್ತ್ರ ಸಿಕ್ಕಿದೆ. ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಸ್ಕ್ (Elon Musk) ಅವರು ಭಾರತದ ಆರ್ಥಿಕ ಉನ್ನತಿಯನ್ನು ಪುಷ್ಟೀಕರಿಸಿ ಮಾಡಿರುವ ಟ್ವೀಟ್​ವೊಂದು ಈಗ ಸರ್ಕಾರಕ್ಕೆ ಹೊಸ ಶಸ್ತ್ರವಾಗಿ ಪರಿಣಮಿಸಿದೆ.

‘ಭಾರತೀಯರಲ್ಲದವರು ನೀಡುವ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸುವುದಕ್ಕೆ ಹೋಗುವುದಿಲ್ಲ. ರಾಹುಲ್ ಗಾಂಧಿಗೆ ತಿಳಿಹೇಳಲು ಇಲಾನ್ ಮಸ್ಕ್ ಅವರ ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದೇನೆ. ಸರ್ಕಾರವನ್ನು ಟೀಕಿಸುವುದು ಪ್ರಜಾತಾಂತ್ರಿಕ ಹಕ್ಕು ಹೌದಾದರೂ ಭಾರತವನ್ನು ಹೀಯಾಳಿಸುವುದು ತರವಲ್ಲ. ಭಾರತದ ಸಾಧನೆಯನ್ನು ಯಾವತ್ತೂ ಹಂಗಿಸಬೇಡಿ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕೀರೆನ್ ರೀಜಿಜು ಟ್​ವೀಟ್ ಮಾಡಿದ್ದಾರೆ.

ಕಿರೆನ್ ರಿಜಿಜು ಅವರ ಟ್ವೀಟ್

ನಿನ್ನೆ ಬಜೆಟ್ ಮಂಡಿಸಿದ ಬಳಿಕ ನಿರ್ಮಲಾ ಸೀತಾರಾಮನ್ ಅವರು ವಿದ್ಯಾರ್ಥಿಗಳ ಗುಂಪೊಂದಿಗೆ ಸಂವಾದ ನಡೆಸುತ್ತಿದ್ದಾಗ ಇಲಾನ್ ಮಸ್ಕ್ ಅವರ ಟ್ವೀಟ್ ಅನ್ನು ಪ್ರಸ್ತಾಪಿಸಿದರು. ಭಾರತದ ಆರ್ಥಿಕ ಶಕ್ತಿಯು ಇಲಾನ್ ಮಸ್ಕ್ ಅವರ ಗಮನ ಸೆಳೆದಿರುವ ಸಂಗತಿಯನ್ನು ಅವರು ಎತ್ತಿತೋರಿಸಿದರು.

ಇದನ್ನೂ ಓದಿ: ಬಜೆಟ್​​ ಬಗ್ಗೆ ನನಗೆ ಅರ್ಥವಾಗ್ತಿಲ್ಲ, ಆದ್ರೂ ಕೇಳೋಕೆ ಚೆನ್ನಾಗಿದೆ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​​​ಗಳ ಹವಾ

ಇಲಾನ್ ಮಸ್ಕ್ ಹೇಳಿದ್ದೇನು?

2026ರಲ್ಲಿ ಜಾಗತಿಕ ಜಿಡಿಪಿ ಹೆಚ್ಚಳದಲ್ಲಿ ಅತಿಹೆಚ್ಚು ಕೊಡುಗೆ ನೀಡಲಿರುವ ದೇಶಗಳ ಪಟ್ಟಿಯೊಂದನ್ನು ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ಅಕೌಂಟ್​ನಿಂ ಟ್ವೀಟ್ ಮಾಡಲಾಗಿದೆ. ಚೀನಾ ಶೇ. 26.6 ಕೊಡುಗೆಯೊಂದಿಗೆ ಅಗ್ರಸ್ಥಾನದಲ್ಲಿದೆ. ಭಾರತ ಶೇ. 17 ಕೊಡುಗೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಶೇ. 9.9ರಷ್ಟು ಮಾತ್ರ ಕೊಡುಗೆ ನೀಡಲಿದ್ದು, ಮೂರನೇ ಸ್ಥಾನದಲ್ಲಿದೆ. ಐಎಂಎಫ್​ನ ಡಾಟಾ ಆಧರಿಸಿ ಈ ಪಟ್ಟಿ ಮಾಡಲಾಗಿದೆ.

ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್​ನ ಈ ಟ್ವೀಟ್ ಅನ್ನು ಇಲಾನ್ ಮಸ್ಕ್ ಹಂಚಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ‘ಅಧಿಕಾರದ ಸಮತೋಲನ ಬದಲಾಗುತ್ತಿದೆ’ ಎಂದು ನಿಗೂಢವೆನಿಸುವ ಹೇಳಿಕೆ ನೀಡಿದ್ದಾರೆ. ಅಮೆರಿಕದ ಶಕ್ತಿಯನ್ನು ಚೀನಾ ಮತ್ತು ಭಾರತ ಹಿಂದಿಕ್ಕಿರುವುದನ್ನು ಇಲಾನ್ ಮಸ್ಕ್ ಗುರುತಿಸಿದಂತಿತ್ತು ಆ ಟ್ವೀಟ್.

‘ಇಂಥದ್ದೊಂದು ಶಕ್ತಿಯನ್ನು ಭಾರತ ಈಗ ಸಂಪಾದಿಸಿದೆ. ಚೀನಾ ನಂತರ ನಾವಿದ್ದೇವೆ. ಸದ್ಯ ಅಂತರ ಹೆಚ್ಚಿರಬಹುದು. ಆದರೆ ನಾವದನ್ನು ತುಂಬುತ್ತೇವೆ’ ಎಂದು ನಿರ್ಮಲಾ ಸೀತಾರಾಮನ್ ಅವರು ವಿಶ್ವಾಸದಿಂದ ಹೇಳಿದ್ದಾರೆ.

ಇಲಾನ್ ಮಸ್ಕ್ ಅವರ ಟ್ವೀಟ್

ಇದನ್ನೂ ಓದಿ: ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

ಬಜೆಟ್ ಬಗ್ಗೆ ರಾಹುಲ್ ಟೀಕೆ

ಭಾರತದ್ದು ಸತ್ತ ಆರ್ಥಿಕತೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಅನುಮೋದಿಸಿದ್ದ ರಾಹುಲ್ ಗಾಂಧಿ, ನಿನ್ನೆಯ ಬಜೆಟ್ ಅನ್ನೂ ಲೇವಡಿ ಮಾಡಿದ್ದಾರೆ. ‘ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳದ ಈ ಬಜೆಟ್ ಭಾರತದ ನಿಜವಾದ ಬಿಕ್ಕಟ್ಟುಗಳಿಗೆ ಕುರುಡಾಗಿದೆ’ ಎಂದು ಟೀಕಿಸಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ನಿರ್ಮಲಾ ಸೀತಾರಾಮನ್, ‘ಯಾವ ತಪ್ಪು ಸರಿಪಡಿಸಿಕೊಳ್ಳುವ ಬಗ್ಗೆ ಅವರು ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ, ಆರ್ಥಿಕತೆ ಹಾಗೂ ಅದರ ಮೂಲಾಂಶಗಳು ಪ್ರಬಲವಾಗಿವೆ’ ಎಂದು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಟ ಯಶ್​ ತಾಯಿ ಪುಷ್ಪಾರ ಜಾಗ ವಿವಾದಕ್ಕೆ ಹೊಸ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ? – Kannada News | Yash’s Mother Pushpa’s Land Dispute: Officials Accused of Double Property Registration?

ಹಾಸನ, ಫೆಬ್ಬರವರಿ 02: ಜಾಗದ ವಿಚಾರವಾಗಿ ನಟ ಯಶ್​​ ತಾಯಿ ಪುಷ್ಪಾ ಮತ್ತು ದೇವರಾಜ್​​ ನಡುವಿನ ಜಾಗದ ವಿವಾದ ವಿಚಾರಕ್ಕೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ಒಂದೇ ನಿವೇಶನಕ್ಕೆ ಎರಡೆರಡು ಜನರಿಗೆ ಖಾತೆ, ಸರ್ವೆನಂಬರ್, ಇ ಸ್ವತ್ತು ನೀಡಿ ಅಧಿಕಾರಿಗಳು ಮಾಡಿರುವ ಗೋಲ್ಮಾಲ್​​ನಿಂದಲೇ ಈ ಗಲಾಟೆ ಸೃಷ್ಟಿಯಾಯ್ತಾ ಎನ್ನುವ ಪ್ರಶ್ನೆಯೀಗ ಉದ್ಭವಿಸಿದೆ. ಸೈಟ್ ತಮ್ಮದು ಎನ್ನುವ ಬಗ್ಗೆ ಪುಷ್ಪಾ ಅವರು 1982ರಿಂದ ಇರುವ ಸಂಪೂರ್ಣ ದಾಖಲೆ ತೋರಿಸ್ತಿದ್ದಾರೆ. ನಮ್ಮ ವಕೀಲರು ಎಲ್ಲವನ್ನೂ ನೋಡಿಯೇ ಜಾಗ ಖರೀದಿ ಮಾಡಿದ್ದಾರೆ. 1982ರಿಂದ ಸುಮಾರು 44 ವರ್ಷ ಕಾಣದಾಗಿದ್ದ ಲಕ್ಷ್ಮಮ್ಮ ದಿಢೀರ್​​ ಹೇಗೆ ಬಂದ್ರು ಎಂದು ಅವರು ಪ್ರಶ್ನಿಸಿದ್ದಾರೆ. ಈ ಸೈಟ್​​ನ 1982ರಲ್ಲಿ ಕೆಪಿ ಶ್ರೀಮತಿ ಖರೀದಿ ಮಾಡಿದ್ದು, ಅವರು ಸುಮಾರು 23 ವರ್ಷ ಇದರ ಮಾಲೀಕತ್ವ ಹೊಂದಿದ್ದರು. ನಂತರ 2007ರಲ್ಲಿ ಗಿರೀಶ್ ಕೋಂ ಮಹಲಿಂಗಪ್ಪ ಅವರು ಜಾಗ ಖರೀದಿ ಮಾಡಿದ್ದು, ಅವರು 2020ರ ವರೆಗೆ ಅಂದರೆ 13 ವರ್ಷ ಇದರ ಮಾಲಕರಾಗಿದ್ದರು. ನಂತರ 2020ರಿಂದ ಅಂದರೆ ಆರು ವರ್ಷದಿಂದ ನನ್ನ ಸ್ವಾಧೀನದಲ್ಲಿ ಸೈಟ್ ಇದೆ. ಈ ಹಿಂದೆ ಇಲ್ಲದ ವ್ಯಾಜ್ಯ ಈಗೇಕೆ?. ದೇವರಾಜ್​​ ಹೇಳುವಂತೆ ಇದು ಅವರ ಸೈಟ್​​ ಆಗಿದ್ದರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿಯೇ ಮೋಸ ಆಗಿದ್ಯಾ ಇಲ್ಲವೇ ಗ್ರಾಮ ಪಂಚಾಯತ್​​ನಲ್ಲಿ ಎರಡೆರಡು ದಾಖಲೆ ಮಾಡಲಾಗಿದ್ಯಾ ಎಂದು ಪುಷ್ಪಾ ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ದೇವರಾಜ್​​ ಕೂಡ ಜಾಗದ ದಾಖಲೆ ತೋರಿಸುತ್ತಿದ್ದು, 2020ರಲ್ಲಿ ಲಕ್ಷ್ಮಮ್ಮ ಅವರಿಂದ ಜಿಪಿಎ ಪಡೆದುಕೊಂಡಿರೋದಾಗಿ ಹೇಳುತ್ತಿರುವ ಕಾರಣ ಎಲ್ಲವೂ ಗೊಂದಲದ ಗೂಡಾಗಿ ಮಾರ್ಪಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟೆಂಟ್ ಹಾಕಿ ಮಲಗಬಹುದು; ಹೈಲಕ್ಸ್ ಖರೀದಿಸಿ ಮಾಡಿಫಿಕೇಷನ್​ ಮಾಡಿಸಿದ ಪ್ರಕಾಶ್ ರಾಜ್ – Kannada News | Prakash Raj’s Modified Toyota Hilux: Camping Ready Pickup Truck Transformation

ಪ್ರಕಾಶ್ ರಾಜ್Image Credit source: 𝗪𝗿𝗮𝗽𝗭𝗶𝗹𝗹𝗮 Instagram

ಪ್ರಕಾಶ್ ರಾಜ್ (Prakash Raj) ಅವರು ತಮ್ಮ ಸಿದ್ಧಾಂತಗಳ ಮೂಲಕ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರು ನಟನೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಅವರು ಟೊಯಾಟೋ ಹೈಲಕ್ಸ ಪಿಕಪ್ ಕಾರು ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲ, ಅದರಲ್ಲಿ ಸಾಕಷ್ಟು ಬದಲಾವಣೆಗಳನ್ನು ಕೂಡ ಮಾಡಿಸಿದ್ದಾರೆ. ವಿಶೇಷ ಎಂದರೆ ಈ ವಾಹನದಲ್ಲಿ ಕ್ಯಾಪಿಂಗ್ ಮಾಡೋ ವ್ಯವಸ್ಥೆ ಕೂಡ ಇದೆ ಎಂದು ಹೇಳಲಾಗುತ್ತಾ ಇದೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಿದೆ.

ಪ್ರಕಾಶ್ ಅವರು ದಕ್ಷಿಣದ ಖ್ಯಾತ ಹೀರೋ. ಅವರಿಗೆ ವಾಹನಗಳ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಅವರ ಬಳಿ ಸಾಕಷ್ಟು ದುಬಾರಿ ಕಾರುಗಳು ಇವೆ. ಈಗ ಅವರ ಹೈಲಕ್ಸ್ ಟ್ರಕ್​​ನ ವಿಡಿಯೋನ ವ್ರಾಪ್​​ಜಿಲ್ಲಾ (Wrapzilla) ಹೆಸರಿನ ಇನ್​​ಸ್ಟಾ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ. ಈ ಸಂಸ್ಥೆ ಈ ಮೊದಲು ಪ್ರಕಾಶ್ ರಾಜ್ ಅವರ ಹಲವು ಕಾರುಗಳನ್ನು ಅಲ್ಟ್ರೇಷನ್ ಮಾಡಿತ್ತು ಎನ್ನಲಾಗಿದೆ. ಈಗ ಅವರು ಪಿಕಪ್ ಟ್ರಕ್​​​ಗೆ ಹಲವು ಬದಲಾವಣೆ ಮಾಡಿಸಿದ್ದಾರೆ.

ಪ್ರಕಾಶ್ ರಾಜ್ ಅವರೇ ಮುಂದೆ ನಿಂತು ಬದಲಾವಣೆಗಳನ್ನು ಮಾಡಿಸಿದ್ದಾರೆ. ಈ ಟ್ರಕ್​​ ಹಿಂಭಾಗದಲ್ಲಿ ಅವರು ಟೆಂಟ್ ಹಾಕಿಸೋ ವ್ಯವಸ್ಥೆ ಮಾಡಿಸಿದ್ದಾರೆ. ಈ ಕಾರನ್ನು ಎಲ್ಲಾದರೂ ಆಫ್​​ರೋಡ್ ತೆಗೆದುಕೊಂಡು ಹೋದರೆ ಅಲ್ಲಿಯೇ ಕ್ಯಾಂಪ್ ಹಾಕಿ ಹಾಯಾಗಿ ಮಲಗಬಹುದು.

ಪ್ರಕಾಶ ರಾಜ್ ಅವರ ಕಾರನ್ನು ಅನೇಕರು ಇಷ್ಟಪಟ್ಟಿದ್ದಾರೆ. ಹಣವನ್ನು ಅವರು ತಮ್ಮ ಕನಸುಗಳನ್ನು ಸಹಕಾರ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿರುವ ಬಗ್ಗೆ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ‘ಪ್ರಕಾಶ್ ರಾಜ್ ಅನೇಕರ ಕನಸುಗಳನ್ನು ಜೀವಿಸುತ್ತಿದ್ದಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಹೈಲಕ್ಸ್ ಇದು ಕಾರಿನ ಕ್ಯಾಟೆಗರಿಗೆ ಬರೋದಿಲ್ಲ. ಇದು ಪಿಕಪ್ ಟ್ರಕ್. ಇದರಲ್ಲಿ ಐದು ಜನ ಕುಳಿತುಕೊಳ್ಳಬಹುದು. ಹಿಂಭಾಗದಲ್ಲಿ ಬೈಕ್ ಅಥವಾ ಇತರ ವಸ್ತುಗಳನ್ನು ಇಟ್ಟುಕೊಂಡು ಹೋಗಲು ಅವಕಾಶ ಇರುತ್ತದೆ. ಈ ಕಾರಿನ ಆನ್​ ರೋಡ್ ಬೆಲೆ 50 ಲಕ್ಷ ರೂಪಾಯಿ ಆಸುಪಾಸಿನಲ್ಲಿ ಇದೆ. ಮಾಡಿಫಿಕೇಷನ್ ಮಾಡಿಸಿದರೆ ಮತ್ತಷ್ಟು ಹಣ ಖರ್ಚಾಗಲಿದೆ.

ಇದನ್ನೂ ಓದಿ: ಪ್ಯಾಲೆಸ್ತೀನ್ ಸಿನಿಮಾ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಬಿಡುತ್ತಿಲ್ಲ: ಪ್ರಕಾಶ್ ರಾಜ್ ಅಸಮಾಧಾನ

ಹೈಲಕ್ಸ್ ಕಾರಿನಲ್ಲಿ ಮ್ಯಾನ್ಯುವಲ್ ಆಯ್ಕೆಯನ್ನು ಭಾರತದಲ್ಲಿ ನಿಲ್ಲಿಸಲಾಗಿದ್ದು, ಆಟೋಮ್ಯಾಟಿಕ್ ಆಯ್ಕೆ ಮಾತ್ರ ಲಭ್ಯವಿದೆ. 2.8 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಇಂಜಿನ್​​ನ ಇದು ಹೊಂದಿದ್ದು, 202 ಎಚ್​​​ಪಿ ಹಾರ್ಸ್​ ಪವರ್​​ನ ಇನು ಜನರೇಟ್ ಮಾಡಲಿದೆ. ಇದಕ್ಕೆ 500 ಎನ್​​​ಎಂ ಟಾರ್ಕ್ ಇದೆ. ಟಾಟಾ ಪಂಚ್ ಕಾರಿನಲ್ಲಿ ಇರೋದು ಕೇವಲ 115 ಎನ್​​ಎಂ ಟಾರ್ಕ್. ಇದಕ್ಕಿಂತ 5 ಪಟ್ಟು ಹೆಚ್ಚು ಟಾರ್ಕ್ ಈ ಪಿಕಪ್ ಟ್ರಕ್​​ಗೆ ಇದೆ. ಇದರಿಂದ ಭಾರತದ ವಸ್ತುಗಳನ್ನು ಎಳೆಯಲು ಸಹಕಾರಿ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಾಕೊಲೇಟ್ ಕೊಡುವ ನೆಪದಲ್ಲಿ ಹೇಯ ಕೃತ್ಯ: 8 ವರ್ಷದ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ – Kannada News | Hubballi: Elderly Man Arrested for POCSO After Physical assaulting 8 Year Old Girl

ಅಶೋಕನಗರ ಪೊಲೀಸ್ ಠಾಣೆImage Credit source: tv9 kannada

ಹುಬ್ಬಳ್ಳಿ, ಫೆಬ್ರವರಿ 02: ಕ್ಯಾನ್ಸರ್ ಪೀಡಿತ 75 ವರ್ಷದ ವೃದ್ಧನಿಂದ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವಂತಹ ಘಟನೆ ಹುಬ್ಬಳ್ಳಿಯ (Hubballi) ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 29ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಾಕೊಲೇಟ್ ಕೊಡುವುದಾಗಿ ಹೇಳಿ ಪಕ್ಕದ ಮನೆಯ ಬಾಲಕಿಯನ್ನ ಮನೆಗೆ ಕರೆಸಿಕೊಂಡು ವೃದ್ಧ ಕೃತ್ಯವೆಸಗಿದ್ದಾನೆ. ಹುಬ್ಬಳ್ಳಿಯ ಅಶೋಕನಗರ ಠಾಣೆಯಲ್ಲಿ ಪೋಕ್ಸೋ ಕೇಸ್ (POCSO Case) ದಾಖಲಾಗಿದ್ದು, ಸದ್ಯ ಆರೋಪಿ ವೃದ್ಧನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಸಾಲ ತೀರಿಸು ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಪತಿ ಕೊಲೆಗೈದಿರುವಂತಹ ಘಟನೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆ ಮುಂದೆಯೇ ಪತ್ನಿ ತೆಹಸಿನ್(28)ರನ್ನು ಪತಿ ಇರ್ಫಾನ್ ಬರ್ಬರವಾಗಿ ಹತ್ಯೆಗೈದಿದ್ದಾರೆ. ಗೋಕುಲ್​ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆರತಕ್ಷತೆಗೆ ತೆರಳುವಾಗ ಅಡ್ಡಗಟ್ಟಿ ವರನಿಗೆ ಚಾಕು ಇರಿತ ಕೇಸ್​​​ಗೆ ಬಿಗ್ ಟ್ವಿಸ್ಟ್​, ಮದ್ವೆಯಾಗಬೇಕಿದ್ದವಳೇ ವಿಲನ್

ಕೊಲೆ ಮಾಡಿ ಕೆಲ ಹೊತ್ತು ತಲೆ ಮರೆಸಿಕೊಂಡಿದ್ದ ಇರ್ಫಾನ್, ಬಳಿಕ ತಾವೇ ಮಗುವಿನೊಂದಿಗೆ ಬಂದು ಕೇಶ್ವಾಪುರ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ತೆಗೆದುಕೊಂಡಿದ್ದ ಸಾಲವನ್ನು ದುಡಿದು ತುಂಬುವಂತೆ ತೆಹಸಿನ್​​ ಹೇಳಿದ್ದಾರೆ. ಇದೇ ವಿಚಾರವಾಗಿ ದಂಪತಿ ಮಧ್ಯೆ ಪದೇ ಪದೇ ಜಗಳ ಕೂಡ ನಡೆದಿದೆ. ಹೀಗಾಗಿ ಆಕ್ರೋಶಗೊಂಡು ಕೊಲೆ ಮಾಡಲಾಗಿದೆ. ಕುತ್ತಿಗೆ ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಚಲಿಸುತ್ತಿದ್ದ ಆಲ್ಟೋ ಕಾರಿಗೆ ಕ್ಯಾಂಟರ್ ಲಾರಿ ಡಿಕ್ಕಿ: ಇಬ್ಬರು ಸಾವು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಉಳ್ಳೂರು ಗ್ರಾಮದ ಮುಡಿಂಗೆಮಟ್ಟೆ ಕ್ರಾಸ್ ಬಳಿ ಕ್ಯಾಂಟರ್​ ಡಿಕ್ಕಿಯಾಗಿ ಆಲ್ಟೋ ಕಾರು ಚಾಲಕ ಸೇರಿ ಇಬ್ಬರು ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಕಾರು ಚಾಲಕ ವೀರೇಶ್, ಪವಿತ್ರಾ ಮೃತರು.

ಇದನ್ನೂ ಓದಿ: ಹಣಕ್ಕಾಗಿ ತ್ರಿವಳಿ ಕೊಲೆ ಶಂಕೆ: ತಂಗಿ ಗರ್ಭಿಣಿ ಎಂದು ಖಾಕಿ ಮುಂದೆ ಕತೆ ಹೇಳಿದ್ನಾ ಕಿರಾತಕ?

ಆನಂದಪುರದಲ್ಲಿ ಸ್ನೇಹಿತರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಸಾಗರ ಪಟ್ಟಣಕ್ಕೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಕ್ಯಾಂಟರ್ ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:17 pm, Mon, 2 February 26

Source link