ರೈಲು ವಿಳಂಬದಿಂದ ಪರೀಕ್ಷೆ ಮಿಸ್: ವಿದ್ಯಾರ್ಥಿನಿಗೆ ರೈಲ್ವೆಯಿಂದ 9 ಲಕ್ಷ ರೂ. ಪರಿಹಾರ – Kannada News | Indian Railways Fined 9.1 Lakh for Train Delay; Student Missed Exam, 8 Year Legal Battle Ends
ಉತ್ತರ ಪ್ರದೇಶ, ಫೆ.2: ರೈಲು ವಿಳಂಬದಿಂದಾಗಿ ಪರೀಕ್ಷೆ ತಪ್ಪಿಸಿಕೊಂಡ ಉತ್ತರ ಪ್ರದೇಶದ ವಿದ್ಯಾರ್ಥಿನಿಗೆ ಭಾರತೀಯ ರೈಲ್ವೆಯು (Indian Railways) 9 ಲಕ್ಷ ರೂ. ಪರಿಹಾರ ನೀಡಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 2018ರಿಂದ ಈ ವಿಚಾರವಾಗಿ ಗ್ರಾಹಕ ಆಯೋಗ ತನಿಖೆ ನಡೆಸಿತ್ತು. ಇದೀಗ ಈ ವಿಚಾರಗಾಗಿ ಗ್ರಾಹಕ ಆಯೋಗ ಮಹತ್ವದ ಆದೇಶ ನೀಡಿದೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಸಮೃದ್ಧಿ ಎಂಬ ವಿದ್ಯಾರ್ಥಿನಿ 2018ರಲ್ಲಿ ಲಕ್ನೋದಲ್ಲಿ ನಡೆಯಬೇಕಿದ್ದ ಬಿ.ಎಸ್ಸಿ ಬಯೋಟೆಕ್ನಾಲಜಿ ಪ್ರವೇಶ ಪರೀಕ್ಷೆಗೆ…