ಬಾಲಿವುಡ್ ಸ್ಟಾರ್ ನಿರ್ದೇಶಕನ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್
ಮಲಯಾಳಂನಲ್ಲಿ ಸಿದ್ಧವಾದ ‘ದೃಶ್ಯಂ’ (Drishyam) ಸರಣಿ ಅದೇ ಹೆಸರಲ್ಲಿ ಹಿಂದಿಗೂ ರಿಮೇಕ್ ಆಗಿದೆ. ಈಗಾಗಲೇ ಎರಡು ಭಾಗ ತೆರೆಗೆ ಬಂದಿದ್ದು, ಮೂರನೇ ಭಾಗದ ಶೂಟಿಂಗ್ ಮುಕ್ತಾಯಗೊಂಡಿದೆ. ಈ ವರ್ಷದ ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಬಾರಿ ಈ ಚಿತ್ರದಲ್ಲಿ ಕನ್ನಡಿಗರು ಹೆಮ್ಮೆಪಡುವಂತಹ ದೊಡ್ಡ ಸುದ್ದಿಯೊಂದಿದೆ. ಹೌದು, ಭಾರತೀಯ ಚಿತ್ರರಂಗದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್, ಕನ್ನಡಿಗ ರವಿ ಬಸ್ರೂರು ಅವರಿಗೆ ‘ದೃಶ್ಯಂ 3’ ಚಿತ್ರಕ್ಕೆ ಸಂಗೀತ ನೀಡುವ ಆಫರ್ ಸಿಕ್ಕಿದೆ. ವಿಶೇಷವೆಂದರೆ, ‘ದೃಶ್ಯಂ’ ಸರಣಿಯ…