ಸಿನಿಮಾ ಸ್ಟೈಲಲ್ಲಿ ಯುವಕನ ಅಡ್ಡಗಟ್ಟಿ, ಲಾಂಗ್ ಬೀಸಿ 31 ಕ್ಷ ರೂ. ದರೋಡೆ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ಕೃತ್ಯ – Kannada News | Cinematic Daylight Robbery in Bengaluru: Rs31.38 Lakh Looted at Long Knife Point Caught on CCTV
ಆನೇಕಲ್ ದರೋಡೆಯ ಸಿಸಿಟಿವಿ ದೃಶ್ಯದ ಸ್ಕ್ರೀನ್ಗ್ರ್ಯಾಬ್Image Credit source: tv9 ಆನೇಕಲ್, ಫೆಬ್ರವರಿ 2: ಬೆಂಗಳೂರಿನ (Bangalore) ಹೊರವಲಯದ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ ಹಾಡಹಗಲೇ ನಡೆದ ಸಿನಿಮಾಶೈಲಿಯ ದರೋಡೆ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಯುವಕನೊಬ್ಬನ ಬೈಕ್ ಅಡ್ಡಗಟ್ಟಿ, ಲಾಂಗ್ ಬಳಸಿ ಬೆದರಿಸಿ, ಬೈಕ್ ಸಮೇತ 31.38 ಲಕ್ಷ ರೂ. ಹಣವನ್ನು ದರೋಡೆ ಮಾಡಿ ನಾಲ್ವರು ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಭಾನುವಾರ ಸಂಜೆ ಸುಮಾರು 4.20ರ ವೇಳೆಗೆ ಈ ಘಟನೆ ನಡೆದಿದ್ದು, ಕೈಲಾಸ್…