Category Archives: Blog

Your blog category

Belagavi: ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ – Kannada News | Lady Officer of the Department of Mines and Geology Rebels Against Illegal Mining in Belagavi Rura

ಬೆಳಗಾವಿ, ಫೆಬ್ರವರಿ 02: ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿಯೋರ್ವರು ಜೆಸಿಬಿ ವಾಹನಕ್ಕೆ ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದಿದೆ. ಅಕ್ರಮವಾಗಿ ನಡೆಯುತ್ತಿದೆ ಲ್ಯಾಟರೇಟ್ ಗಣಿಕಾರಿಕೆ ನಿಲ್ಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಬಿಂದನ್ ಪಾಟೀಲ್ ಸೂಚನೆ ನೀಡಿದ್ದರು. ಆದರೆ, ಅಧಿಕಾರಿ ಹೇಳಿದ್ರೂ ಕ್ಯಾರೇ ಎನ್ನದ ದಂಧೆಕೋರರು ತಮ್ಮ ಕೆಲಸ ಮುಂದುವರಿಸಿದ್ದಕ್ಕೆ ಜೆಸಿಬಿಗೆ ಕಲ್ಲು ಹೊಡೆದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಮನಗರ: ಅಡಿಗೆ ಅನಿಲ ಸೋರಕೆಯಿಂದ ಅಗ್ನಿ ಅವಗಢ; ಗಂಭೀರಗೊಂಡಿದ್ದ ಮೂವರ ಸಾವು! – Kannada News | Kanakapura Gas Leak Tragedy: Family of Three Dies from Kitchen Fire Accident

ಅಡಿಗೆ ಅನಿಲ ಸೋರಕೆಯಿಂದ ಅಗ್ನಿ ಅವಗಢ; ಗಂಭೀರಗೊಂಡಿದ್ದ ಮೂವರ ಸಾವು!

ರಾಮನಗರ, ಫೆಬ್ರುವರಿ 02: ಕನಕಪುರದ (Ramanagar) ಅಮರನಾರಾಯಣ ಬ್ಲಾಕ್‌ನಲ್ಲಿ ಜನವರಿ 26ರಂದು ಅಡಿಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಗಢ ಸಂಭವಿಸಿತ್ತು. ಈ ವೇಳೆ ಒಂದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಯದೇ ಸಾವನ್ನಪಿದ್ದಾರೆಂದು ತಡವಾಗಿ ಬೆಳಕಿಗೆ ಬಂದಿದೆ.

ಒಂದು ವಾರ ಸಾವು ಬದುಕಿನ ನಡುವೆ ಹೋರಾಡಿದ್ದ ಕುಟುಂಬ

ಸೋಮವಾರ (ಜ.26) ಅಡಿಗೆ ಅನಿಲ ಸೋರಿಕೆಯಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ ಮನೆ ಮಂದಿಯೆಲ್ಲಾ ಗಂಭೀರವಾಗಿ ಗಾಯಗೊಂಡಿದ್ದರು.  ಈ ವೇಳೆ ಸಿದ್ದರಾಜು (55), ಅವರ ಪತ್ನಿ ಚಂದ್ರಮ್ಮ (50) ಹಾಗೂ ಪುತ್ರ ಪ್ರಶಾಂತ್ (22) ಎಂಬ ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನದ್ದಾರೆ.

ಮನೆಯೊಳಗೆ ತಿಂಡಿ ತಯಾರಿಸುವ ವೇಳೆ ಅಡಿಗೆ ಅನಿಲ ಸೋರಿಕೆಯಾಗಿದ್ದು, ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ಈ ದುರಂತದಲ್ಲಿ ಮೂವರಿಗೂ ತೀವ್ರ ಸುಟ್ಟ ಗಾಯಗಳಾಗಿದ್ದು, ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದ್ದರೂ, ಮೂವರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಕನಕಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಗುವನ್ನು ಎದೆಗವಚಿಕೊಂಡು ಓಡಿದ ರಾಮ್ ಚರಣ; ಅಭಿಮಾನಿಗಳ ಹುಚ್ಚಾಟಕ್ಕೆ ನಲುಗಿಹೋದ ನಟ – Kannada News | Ram Charan, Klin Kaara Hospital Fiasco: Fan Mobbing Raises Safety Concerns

ರಾಮ್ ಚರಣ್ (Ram Charan) ಅವರ ಮನೆಯಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ರಾಮ್ ಹಾಗೂ ಅವರ ಪತ್ನಿ ಉಪಾಸನಾ ಅವಳಿ ಮಕ್ಕಳಿಗೆ ಪಾಲಕರಾಗಿದ್ದಾರೆ. ಈ ಮಧ್ಯೆ ಅವರು ನಲುಗಿ ಹೋಗುವ ಘಟನೆ ನಡೆದಿದೆ. ರಾಮ್ ಚರಣ್ ಅವರು ತಮ್ಮ ಮೊದಲ ಮಗು ಕ್ಲಿನ್​ಕಾರಾಳನ್ನು ಆಸ್ಪತ್ರೆಗೆ ಕರೆದು ತರುತ್ತಿದ್ದರು. ಈ ವೇಳೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಈ ಘಟನೆ ಶಾಕಿಂಗ್ ಎನಿಸಿದೆ. ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ರಾಮ್ ಚರಣ್ ಮುಖದಲ್ಲಿ ಭಯ ಸ್ಪಷ್ಟವಾಗಿ ಕಾಣಿಸಿದೆ.

ರಾಮ್ ಚರಣ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಾಗಿದೆ. ಅವರು ಎಲ್ಲೇ ಹೋದರೂ ಫ್ಯಾನ್ಸ್ ಹಾಜರಿರುತ್ತಾರೆ. ಅವರನ್ನು ನೋಡಬೇಕು, ಭೇಟಿ ಮಾಡಬೇಕು ಎಂದು ಫ್ಯಾನ್ಸ್ ಪ್ರಯತ್ನಿಸುತ್ತಾರೆ. ಅದೇ ರೀತಿ ಉಪಾಸನಾ ಅಡ್ಮಿಟ್ ಆಗಿರೋ ಆಸ್ಪತ್ರೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು.

ರಾಮ್ ಚರಣ್ ಅವರು ಮನೆಯಿಂದ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಎರಡು ವರ್ಷದ ಮಗಳು ಕೂಡ ಇದ್ದರು. ಆಸ್ಪತ್ರೆ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದನ್ನು ನೋಡಿ ರಾಮ್ ಚರಣ್ ಶಾಕ್ ಆಗಿದ್ದಾರೆ. ರಾಮ್ ಚರಣ್ ಅವರ ಭದ್ರತಾ ಸಿಬ್ಬಂದಿ, ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಅಭಿಮಾನಿಗಳನ್ನು ದೂರಕ್ಕೆ ತಳ್ಳೋಕೆ ಸಾಧ್ಯವಾಗಿಲ್ಲ.

ಅಭಿಮಾನಿಗಳ ಕಿರುಚಾಟ, ಕೂಗಾಟ, ತಳ್ಳಾಟದ ಮಧ್ಯೆಯೇ ಅವರು ಆಸ್ಪತ್ರೆಗೆ ಒಳಗೆ ಬಂದಿದ್ದಾರೆ. ರಾಮ್ ಚರಣ್ ಒಬ್ಬರೇ ಇದ್ದಿದ್ದರೆ ಇದನ್ನು ಹೇಗೋ ಮ್ಯಾನೇಜ್ ಮಾಡುತ್ತಿದ್ದರು. ಆದರೆ, ಅವರ ಬಳಿ ಮಗು ಇತ್ತು. ಇದನ್ನು ಕರೆದುಕೊಂಡು ಸೇಫ್ ಆಗಿ ಆಸ್ಪತ್ರೆ ಸೇರೋದು ದೊಡ್ಡ ಸವಾಲಾಗಿತ್ತು. ಮಗುವನ್ನು ಕರೆದುಕೊಂಡು ಒಳ ಹೋಗುವ ವೇಳೆಗೆ ಅವರು ಸುಸ್ತಾಗಿ ಹೋಗಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಅನ್ನು ಮುತ್ತಿಕೊಂಡ ಅಭಿಮಾನಿಗಳು: ವಿಡಿಯೋ

ಸದ್ಯ ಈ ವಿಡಿಯೋ ಚರ್ಚೆ ಆಗುತ್ತಿದೆ. ಮಗು ಎಷ್ಟು ಗಾಬರಿ ಆಗಿದ್ದಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಇನ್ನೂ ಕೆಲವರು ರಾಮ್ ಚರಣ್ ಅಭಿಮಾನಿಗಳು ಅನಾಗರೀಕರ ರೀತಿ ನಡೆದುಕೊಂಡಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಇದು ಚರ್ಚೆಯ ವಿಷಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಬ್ಬರು ಮಹಿಳಾ ಆತ್ಮಾಹುತಿ ಬಾಂಬರ್​ಗಳ ಚಿತ್ರ ಬಿಡುಗಡೆ ಮಾಡಿದ ಬಲೂಚ್ ಉಗ್ರಗಾಮಿ ಗುಂಪು – Kannada News | BLA’s Female Suicide Bombers: Photos Released After ISI Camp Attack in Balochistan

ಇಸ್ಲಾಮಾಬಾದ್, ಫೆಬ್ರವರಿ 02: ನಿಷೇಧಿತ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ, ಪಾಕಿಸ್ತಾನ(Pakistan)ದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪಾಕ್ ಐಎಸ್​ಐ ಶಿಬಿರದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಇಬ್ಬರು ಮಹಿಳಾ ಬಾಂಬರ್​ಗಳ ಫೋಟೊಗಳನ್ನು ಹಂಚಿಕೊಂಡಿದೆ. ಒಬ್ಬರನ್ನು ಹವಾ ಬಲೂಚ್ ಎಂದು ಗುರುತಿಸಲಾಗಿದ್ದು, ಅವರ ತಂದೆ 2021 ರಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟ ಬಿಎಲ್‌ಎ ಹೋರಾಟಗಾರರಾಗಿದ್ದರು, ಮತ್ತು ಇನ್ನೊಬ್ಬರು 2002 ರಲ್ಲಿ ಜನಿಸಿದ ಆಸಿಫಾ ಮೆಂಗಲ್, ನುಷ್ಕಿಯಲ್ಲಿನ ಐಎಸ್‌ಐ ಶಿಬಿರದ ಮೇಲೆ ಆತ್ಮಹತ್ಯಾ ದಾಳಿ ನಡೆಸಿದ್ದರು.

ಲಿಬರೇಷನ್ ಆರ್ಮಿಗೆ ಸೇರುವ ಮೊದಲು ಈ ಇಬ್ಬರು ಮಹಿಳೆಯರು ಶಿಕ್ಷಣ ಪಡೆದಿದ್ದರು, ಇದು ದಶಕಗಳ ಕಾಲ ನಡೆದ ಬಲೂಚ್ ಪ್ರತ್ಯೇಕತಾವಾದಿ ಚಳವಳಿಯಲ್ಲಿ ಯುವ, ವಿದ್ಯಾವಂತ ಮಹಿಳೆಯರು ಭಾಗವಹಿಸುವ ಹೆಚ್ಚುತ್ತಿರುವ ಪ್ರವೃತ್ತಿ ಹೆಚ್ಚಾಗಿದೆ ಎಂಬುದನ್ನು ಪ್ರತಿನಿಧಿಸುತ್ತದೆ. ಪಾಕಿಸ್ತಾನ ವಿರುದ್ಧದ ಅಭಿಯಾನದ ಭಾಗವಾಗಿ ಬಿಎಲ್‌ಎ ಭದ್ರತಾ ಸ್ಥಾಪನೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿರುವ ಬಲೂಚಿಸ್ತಾನದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಮಧ್ಯೆ ಈ ದಾಳಿಗಳು ನಡೆದಿವೆ.

ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಾದ್ಯಂತ ಮಾರಕ ಮತ್ತು ಸಂಘಟಿತ ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರು ಆತ್ಮಹತ್ಯಾ ದಾಳಿಕೋರರ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದೆ. ಇಬ್ಬರೂ ದಾಳಿಕೋರರು ಮಹಿಳೆಯರಾಗಿದ್ದು, ಬಲೂಚ್ ದಂಗೆಕೋರ ಗುಂಪುಗಳು ಬಳಸುವ ತಂತ್ರಗಳಲ್ಲಿನ ಗಮನಾರ್ಹ ಮತ್ತು ಗೊಂದಲದ ಬದಲಾವಣೆಯನ್ನು ಎತ್ತಿ ತೋರಿಸುತ್ತದೆ.

ಮತ್ತಷ್ಟು ಓದಿ: ಕಾಶ್ಮೀರದ ಗಡಿಯೊಳಗೆ ಬಂದ ಪಾಕಿಸ್ತಾನಿ ಡ್ರೋನ್​ಗಳು; ಭಾರತೀಯ ಸೇನೆಯಿಂದ ಗುಂಡಿನ ದಾಳಿ

ದಾಳಿಕೋರರಲ್ಲಿ ಒಬ್ಬಳನ್ನು ನುಷ್ಕಿ ಜಿಲ್ಲೆಯ ನಿವಾಸಿ ಹಾಗೂ ಮೊಹಮ್ಮದ್ ಇಸ್ಮಾಯಿಲ್ ಅವರ ಪುತ್ರಿ 24 ವರ್ಷದ ಆಸಿಫಾ ಮೆಂಗಲ್ ಎಂದು ಗುರುತಿಸಲಾಗಿದೆ. ಬಿಎಲ್‌ಎ ಪ್ರಕಾರ, ಮೆಂಗಲ್ ಅಕ್ಟೋಬರ್ 2, 2002 ರಂದು ಜನಿಸಿದರು, ತಮ್ಮ 21 ನೇ ಹುಟ್ಟುಹಬ್ಬದಂದು ಗುಂಪಿನ ಗಣ್ಯ ಆತ್ಮಹತ್ಯಾ ಘಟಕವಾದ ಮಜೀದ್ ಬ್ರಿಗೇಡ್‌ಗೆ ಸೇರಿದರು ಮತ್ತು ಜನವರಿ 2024 ರಲ್ಲಿ “ಫಿದಾಯಿ” (ಆತ್ಮಹತ್ಯಾ) ಕಾರ್ಯಾಚರಣೆಗೆ ಸ್ವಯಂಸೇವಕರಾದರು.

ನುಷ್ಕಿಯಲ್ಲಿರುವ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಉಗ್ರಗಾಮಿ ಗುಂಪು ಹೇಳಿಕೊಂಡಿದೆ. ಎರಡನೇ ಮಹಿಳಾ ದಾಳಿಕೋರನ ಗುರುತನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಎರಡನೇ ಮಹಿಳಾ ದಾಳಿಕೋರಳ ವೀಡಿಯೊ ಬಹಿರಂಗಗೊಂಡಿದೆ. ಬಿಎಲ್‌ಎ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ದಾಳಿಗೆ ಕೆಲವೇ ಕ್ಷಣಗಳ ಮೊದಲು ಎರಡನೇ ಮಹಿಳಾ ದಾಳಿಕೋರ ಹವಾ ಬಲೂಚ್, ಶಸ್ತ್ರಸಜ್ಜಿತ ಪುರುಷ ಉಗ್ರಗಾಮಿಗಳ ಪಕ್ಕದಲ್ಲಿ ನಿಂತಿರುವುದನ್ನು ತೋರಿಸಲಾಗಿದೆ. ಬಲೂಚಿಯಲ್ಲಿ ಮಾತನಾಡುತ್ತಾ, ಅವರು ಪಾಕಿಸ್ತಾನ ಸರ್ಕಾರವನ್ನು ಅಪಹಾಸ್ಯ ಮಾಡುತ್ತಿರುವುದು ಕಂಡುಬರುತ್ತದೆ, ದಂಗೆಕೋರರನ್ನು ನೇರವಾಗಿ ಎದುರಿಸುವ ಸಾಮರ್ಥ್ಯವಿಲ್ಲದಿದ್ದರೂ ಬಲೂಚ್ ಮಹಿಳೆಯರನ್ನು ದಮನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಶುಕ್ರವಾರ ರಾತ್ರಿ ಆರಂಭವಾಗಿ ಶನಿವಾರದವರೆಗೂ ನಡೆದ ಸಂಘಟಿತ ದಾಳಿಗಳಲ್ಲಿ ಕನಿಷ್ಠ 17 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಎರಡು ದಾಳಿಗಳಲ್ಲಿ ಮಹಿಳಾ ದುಷ್ಕರ್ಮಿಗಳು ಭಾಗಿಯಾಗಿದ್ದಾರೆ ಎಂದು ದೃಢಪಡಿಸಿದರು.

ಬಲೂಚಿಸ್ತಾನದಾದ್ಯಂತ ವ್ಯಾಪಕ ಹಿಂಸಾಚಾರ

ನುಷ್ಕಿ, ಹಬ್, ಚಮನ್, ನಸೀರಾಬಾದ್, ಗ್ವಾದರ್ ಮತ್ತು ಮಕ್ರಾನ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ದಾಳಿಗಳು ನಡೆದಿರುವುದು ವರದಿಯಾಗಿವೆ. ಪಾಕಿಸ್ತಾನದ ಕಿರಿಯ ಆಂತರಿಕ ಸಚಿವ ತಲಾಲ್ ಚೌಧರಿ, ಉಗ್ರಗಾಮಿಗಳು ನಾಗರಿಕರಂತೆ ವೇಷ ಧರಿಸಿ ಶಾಲೆಗಳು, ಮಾರುಕಟ್ಟೆಗಳು, ಬ್ಯಾಂಕುಗಳು ಮತ್ತು ಆಸ್ಪತ್ರೆಗಳಂತಹ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಿದ್ದಾರೆ ಎಂದು ಹೇಳಿದರು. ಭದ್ರತಾ ಪಡೆಗಳು ಯಾವುದೇ ನಗರ ಅಥವಾ ಕಾರ್ಯತಂತ್ರದ ಸ್ಥಾಪನೆಯನ್ನು ವಶಪಡಿಸಿಕೊಳ್ಳುವುದನ್ನು ಯಶಸ್ವಿಯಾಗಿ ತಡೆದವು ಎಂದು ಪಾಕಿಸ್ತಾನಿ ಸೇನೆ ಹೇಳಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rate Today: ಮುಂದುವರಿದ ಕುಸಿತ; ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ – Kannada News | Gold Price Today on 2nd February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 2: ಕಳೆದ ವಾರ ಶುರುವಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಕುಸಿತ ಈ ವಾರ ಮುಂದುವರಿಯುತ್ತಿರುವಂತಿದೆ. ಸೋಮವಾರ ಚಿನ್ನದ ಬೆಲೆಯಲ್ಲಿ (Gold Rates) ಒಂದು ಗ್ರಾಮ್​ಗೆ 830 ರೂನಷ್ಟು ಇಳಿಕೆ ಆಗಿದೆ. ಆಭರಣ ಚಿನ್ನದ ಬೆಲೆ 14,000 ರೂ ಗಡಿಯೊಳಗೆ ಬಂದಿದೆ. ಕಳೆದ ಕೆಲ ದಿನಗಳಿಂದ ಇದರ ಬೆಲೆಯಲ್ಲಿ ಬಹುತೇಕ ಎರಡು ಸಾವಿರ ರೂ ತಗ್ಗಿದೆ. ವಿದೇಶಗಳಲ್ಲೂ ಬಹುತೇಕ ಕಡೆ ಚಿನ್ನದ ಬೆಲೆಯಲ್ಲಿ ಕಡಿಮೆ ಆಗಿದೆ. ಬೆಳ್ಳಿ ಬೆಲೆಯೂ ಸೋಮವಾರ ಭರ್ಜರಿ ಇಳಿಕೆ ಆಗಿದೆ. ಗ್ರಾಮ್​ಗೆ 50 ರೂ ಕಡಿಮೆಗೊಂಡು 300 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,51,530 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 30,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 30,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 2ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,153 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,890 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,365 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,153 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,890 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,890 ರೂ
  • ಚೆನ್ನೈ: 13,950 ರೂ
  • ಮುಂಬೈ: 13,890 ರೂ
  • ದೆಹಲಿ: 13,905 ರೂ
  • ಕೋಲ್ಕತಾ: 13,890 ರೂ
  • ಕೇರಳ: 13,890 ರೂ
  • ಅಹ್ಮದಾಬಾದ್: 13,895 ರೂ
  • ಜೈಪುರ್: 13,905 ರೂ
  • ಲಕ್ನೋ: 13,905 ರೂ
  • ಭುವನೇಶ್ವರ್: 13,895 ರೂ

ಇದನ್ನೂ ಓದಿ: 16ನೇ ಹಣಕಾಸು ಆಯೋಗದ ಸೂತ್ರದಡಿ ಕರ್ನಾಟಕಕ್ಕೆ ಅತಿ ಹೆಚ್ಚು ಲಾಭ; ರಾಜ್ಯಕ್ಕೆ 63,050 ಕೋಟಿ ರೂ. ತೆರಿಗೆ ಪಾಲು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 625 ರಿಂಗಿಟ್ (14,538 ರುಪಾಯಿ)
  • ದುಬೈ: 545.75 ಡಿರಾಮ್ (13,624 ರುಪಾಯಿ)
  • ಅಮೆರಿಕ: 152 ಡಾಲರ್ (13,938 ರುಪಾಯಿ)
  • ಸಿಂಗಾಪುರ: 187.30 ಸಿಂಗಾಪುರ್ ಡಾಲರ್ (13,501 ರುಪಾಯಿ)
  • ಕತಾರ್: 542 ಕತಾರಿ ರಿಯಾಲ್ (13,637 ರೂ)
  • ಸೌದಿ ಅರೇಬಿಯಾ: 553 ಸೌದಿ ರಿಯಾಲ್ (13,519 ರುಪಾಯಿ)
  • ಓಮನ್: 57.90 ಒಮಾನಿ ರಿಯಾಲ್ (13,791 ರುಪಾಯಿ)
  • ಕುವೇತ್: 44.58 ಕುವೇತಿ ದಿನಾರ್ (13,389 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 300 ರೂ
  • ಚೆನ್ನೈ: 300 ರೂ
  • ಮುಂಬೈ: 300 ರೂ
  • ದೆಹಲಿ: 300 ರೂ
  • ಕೋಲ್ಕತಾ: 300 ರೂ
  • ಕೇರಳ: 300 ರೂ
  • ಅಹ್ಮದಾಬಾದ್: 300 ರೂ
  • ಜೈಪುರ್: 300 ರೂ
  • ಲಕ್ನೋ: 300 ರೂ
  • ಭುವನೇಶ್ವರ್: 300 ರೂ
  • ಪುಣೆ: 300

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ಯುವ ಮುಖಂಡನ ಮೇಲೆ ತಲ್ವಾರ್​ ದಾಳಿ: 5-6 ಜನರ ತಂಡದಿಂದ ಕೃತ್ಯ – Kannada News | Talwar Attack on Youth Congress Leader in Udupi

ಉಡುಪಿ, ಫೆಬ್ರವರಿ 02: ಕರಾವಳಿ ಜಿಲ್ಲೆ ಉಡುಪಿಯಲ್ಲಿ ತಲ್ವಾರ್​​ಗಳು ಝಳಪಿಸಿವೆ. ಕಾಂಗ್ರೆಸ್ ಯುವ ಮುಖಂಡನ ಮೇಲೆ ನಗರದ ಪಿಪಿಸಿ ಕ್ರಾಸ್ ಬಳಿ ದಾಳಿ ನಡೆಸಲಾಗಿದ್ದು, ಮಾತುಕತೆಗೆಂದು ಕರೆಸಿ ಅಟ್ಯಾಕ್​​ ಮಾಡಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್‌ ಗಂಭೀರ ಗಾಯಗೊಂಡಿದ್ದು, 6-7 ದುಷ್ಕರ್ಮಿಗಳ ತಂಡದಿಂದ ದಾಳಿ ನಡೆದಿದೆ. ಮಣಿಪಾಲ ಹೋಟೆಲ್‌ನಲ್ಲಿ ನಡೆದ ಗಲಾಟೆಯ ಮುಂದುವರಿದ ಭಾಗವಾಗಿ ಈ ಘಟನೆ ನಡೆದಿರುವ ಮಾಹಿತಿ ಇದೆ.

ಟಾಟಾ ಸಫಾರಿ, ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಆರೋಪಿಗಳು, ತಲ್ವಾರಿವಾರಿನಿಂದ ದಾಳಿ ನಡೆಸಿ ಕೊಲೆ ಯತ್ನ ನಡೆಸಿದ್ದಾರೆ. ಜೊತೆಗೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿಬಂದಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಖಾಕಿ ಹುಡುಕಾಟ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.

(ಮಾಹಿತಿ ಅಪ್ಡೇಟ್​​ ಆಗಲಿದೆ)

Source link

ಬಾಯ್ಕಾಟ್​ನಿಂದ ಪಾಕಿಸ್ತಾನ್ ಎದುರಿಸಲಿರುವ ಪರಿಣಾಮಗಳೇನು? – Kannada News | Implications Of Pakistan’s India Match Boycott In T20 World Cup 2026

ಟಿ20 ವಿಶ್ವಕಪ್​ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಸ ವರಸೆ ಶುರು ಮಾಡಿದೆ. ಅದು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡುವ ಮೂಲಕ. ಫೆಬ್ರವರಿ 15 ರಂದು ಕೊಲೊಂಬೊದಲ್ಲಿ ನಡೆಯಲಿರುವ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಪಿಸಿಬಿಯ ಈ ಹೇಳಿಕೆ ಬೆನ್ನಲ್ಲೇ ಐಸಿಸಿ ತುರ್ತು ಸಭೆ ಕರೆದಿದೆ.

ಈ ಸಭೆಯ ಬಳಿಕ ಪಾಕಿಸ್ತಾನ್ ತಂಡವನ್ನು ಟಿ20 ವಿಶ್ವಕಪ್​ನಲ್ಲಿ ಮುಂದುವರೆಸಬೇಕಾ ಅಥವಾ ಬೇಡವಾ ಎಂಬುದು ನಿರ್ಧಾರವಾಗಲಿದೆ. ಒಂದು ವೇಳೆ ಪಾಕ್ ತಂಡವನ್ನು ವಿಶ್ವಕಪ್​ನಲ್ಲಿ ಮುಂದುವರೆಸಬೇಕಿದ್ದರೆ ಭಾರತದ ವಿರುದ್ಧ ಪಂದ್ಯವಾಡಬೇಕೆಂದು ಒತ್ತಾಯಿಸಲಿದೆ.

ಇದಾಗ್ಯೂ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಿಂದ ಪಾಕಿಸ್ತಾನ್ ಹಿಂದೆ ಸರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಿದ್ದಾರೆ. ಈ ಕ್ರಮಗಳೇನು ಎಂದು ನೋಡುವುದಾದರೆ…

  • ಐಸಿಸಿ ನಿಯಮವನ್ನು ಉಲ್ಲಂಘಿಸಿದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ ಅನ್ನು ಅಮಾನತುಗೊಳಿಸಲಾಗುತ್ತದೆ.
  • ಪಾಕಿಸ್ತಾನ್ ಕ್ರಿಕೆಟ್ ತಂಡದ ಅಂತಾರಾಷ್ಟ್ರೀಯ ಮಾನ್ಯತೆಯನ್ನು ತಡೆ ಹಿಡಿಯಲಾಗುತ್ತದೆ. ಅಂದರೆ ಕೆಲ ವರ್ಷಗಳ ಕಾಲ ಪಾಕ್ ತಂಡ ಬ್ಯಾನ್ ಆಗಲಿದೆ.
  • ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ಗೆ ಐಸಿಸಿ ವಾರ್ಷಿಕ ಆದಾಯವನ್ನು ಪಾವತಿಸುವುದಿಲ್ಲ.
  • ಭಾರತದ ವಿರುದ್ಧದ ಪಂದ್ಯದಿಂದ ಹಿಂದೆ ಸರಿದರೆ ಆದಾಯ ನಷ್ಟಕ್ಕೆ ಜಿಯೋ-ಸ್ಟಾರ್‌ಗೆ ಸಂಪೂರ್ಣ ಪರಿಹಾರವನ್ನು ಪಾವತಿಸಲು ಪಿಸಿಬಿಯನ್ನು ಒತ್ತಾಯಿಸಲಿದೆ.
  • ಪಾಕಿಸ್ತಾನ್ ಸೂಪರ್ ಲೀಗ್​ ಆಡಲು ವಿದೇಶಿ ಆಟಗಾರರಿಗೆ ಎನ್​ಒಸಿ ನೀಡಲು ನಿರಾಕರಿಸಲಿದೆ.

ಪಾಕಿಸ್ತಾನ್ ಬ್ಯಾನ್?

ಐಸಿಸಿ ನಿಯಮ ಉಲ್ಲಂಘಿಸಿದರೆ ಪಾಕಿಸ್ತಾನ್ ತಂಡವನ್ನು ಬ್ಯಾನ್ ಮಾಡುವುದು ಬಹುತೇಕ ಖಚಿತ. ಇದರಿಂದ ಪಾಕಿಸ್ತಾನ್ ವಿರುದ್ಧ ಯಾವುದೇ ಕ್ರಿಕೆಟ್ ಪಂದ್ಯ ನಡೆಯುವುದಿಲ್ಲ. ಅಂದರೆ ಯಾವುದೇ ರಾಷ್ಟ್ರ ಕೂಡ ಪಾಕ್ ವಿರುದ್ಧ ಸರಣಿ ಆಡುವುದಿಲ್ಲ.

ಅಷ್ಟೇ ಅಲ್ಲದೆ ಐಸಿಸಿ ಆಯೋಜಿಸಲಿರುವ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡುವುದಿಲ್ಲ. ಅಂದರೆ ನಿರ್ದಿಷ್ಟ ಕಾಲದ ನಿಷೇಧ ತೆರವಾದ ಬಳಿಕ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಐಸಿಸಿ ಆತಿಥ್ಯದ ಹಕ್ಕನ್ನು ರದ್ದುಗೊಳಿಸಲಿದೆ. ಇದರಿಂದ ಕೂಡ ಪಿಸಿಬಿಯ ಆದಾಯಕ್ಕೆ ಹೊಡೆತ ಬೀಳಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿರುವ 20 ತಂಡಗಳು ಪ್ರಕಟ

ಒಟ್ಟಿನಲ್ಲಿ ಟಿ20 ವಿಶ್ವಕಪ್​ನಲ್ಲಿ ಹೊಸ ವರಸೆ ಶುರು ಮಾಡಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಬಹಿರಂಗ ಪತ್ರದ ಮೂಲಕ ಐಸಿಸಿ ತನ್ನ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೇಳಿಕೊಂಡಿದೆ. ಇದಾಗ್ಯೂ ಪಿಸಿಬಿ ತನ್ನ ನಿರ್ಧಾರ ಬದಲಿಸದೇ ಇದ್ದರೆ ಮೇಲಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮುಂದಿನ ನಡೆಯೇನು ಎಂಬುದೇ ಈಗ ಕುತೂಹಲ.

Published On – 11:31 am, Mon, 2 February 26

Source link

ಸಿ.ಜೆ ರಾಯ್ ಸಾವಿನ ಹಿಂದಿತ್ತಾ ಬೇರೆಯದೇ ಕಾರಣ? ಆತ್ಮಹತ್ಯೆಯ ಹಿಂದಿನ ದಿನ ನಡೆದಿದ್ದೇನು? – Kannada News | Confident Group Chairman C.J. Roy was suffering Mentally and Counseling Before Tragic Death

ಸಿ.ಜೆ ರಾಯ್ ಸಾವಿನ ಹಿಂದಿತ್ತಾ ಬೇರೆಯದೇ ಕಾರಣ?

ಬೆಂಗಳೂರು, ಫೆಬ್ರುವರಿ 02: ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಸಿ.ಜೆ. ರಾಯ್ (CJ Roy Death) ಆತ್ಮಹತ್ಯೆ ಕೇಸ್ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಐಟಿ ತನಿಖೆ ವೇಳೆಯೇ ಗುಂಡು ಹಾರಿಸಿಕೊಂಡ ಅವರ ಸಾವಿನ ಸುತ್ತ ಹಲವಾರು ಕಥೆಗಳು ಸುಳಿದಾಡುತ್ತಿವೆ. ಈ ಮಧ್ಯೆ ಇನ್ನೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಉದ್ಯಮಿಯ ಈ ದಿಢೀರ್ ನಿರ್ಧಾರಕ್ಕೆ ಅವರ ಮಾನಸಿಕ ಸ್ಥಿತಿಯೇ ಕಾರಣವೇ ಎಂಬ ಪ್ರಶ್ನೆ ಮೂಡಿದ್ದು, ಅದಕ್ಕೆ ಪುಷ್ಠಿ ಕೊಡುವಂತೆ ಹಲವು ದಿನಗಳಿಂದ ರಾಯ್ ಮನೋವೈದ್ಯರಿಂದ ಕೌನ್ಸಿಲಿಂಗ್ ಪಡೆಯುತ್ತಿದ್ದರೆಂಬುದೂ ತಿಳಿದು ಬಂದಿದೆ.

ಸಾವಿನ ಹಿಂದಿನ ದಿನ ಕೌನ್ಸಿಲಿಂಗ್ ಪಡೆದಿದ್ದ ಉದ್ಯಮಿ

ತಮ್ಮ ಕಚೇರಿಯಲ್ಲೇ ಎದೆಗೆ ಗುಂಡು ಹಾರಿಸಿಕೊಂಡಿದ್ದ ರಾಯ್​ಗೆ ಕೇವಲ 15 ನಿಮಿಷದಲ್ಲೇ  ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಯಾಕೆ ಬಂತು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಅದಕ್ಕೆ ಉತ್ತರವೆಂಬಂತೆ ಕಳೆದ ಕೆಲ ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ತಮ್ಮ ಒತ್ತಡ, ಖಿನ್ನತೆ ನಿವಾರಣೆಗಾಗಿ ಬೆಂಗಳೂರಿನ ಖ್ಯಾತ ಮನೋವಿಜ್ಞಾನಿ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.

ಆತ್ನಹತ್ಯೆಗೆ ಶರಣಾಗುವ ಹಿಂದಿನ ದಿನವಷ್ಟೇ ನಗರದ ಜಯನಗರ 8ನೇ ಬ್ಲಾಕ್‌ನಲ್ಲಿರುವ ಖ್ಯಾತ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಕೌನ್ಸಿಲಿಂಗ್ ಪಡೆದಿದ್ದರು ಎನ್ನಲಾಗಿದೆ. ಈ ವೇಳೆ ವೈದ್ಯರ ಬಳಿ ಜೀವನದ ಒತ್ತಡಗಳು, ವೈಯಕ್ತಿಕ ಸಂಕಷ್ಟಗಳ ಕುರಿತು ರಾಯ್ ಮನಬಿಚ್ಚಿ ಮಾತನಾಡಿದ್ದರಂತೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಅವರು ಜೀವನ ಮತ್ತು ಸಾವಿನ ಕುರಿತು ಪದೇಪದೇ ಚರ್ಚಿಸುತ್ತಿದ್ದರಲ್ಲದೆ, ಸಾವಿನ ವಿಷಯದ ಮೇಲೆ ಸಿನಿಮಾ ನಿರ್ಮಾಣಕ್ಕೂ ಅವರು ಕೈ ಹಾಕಿದ್ದರೆಂದೂ ಹೇಳಲಾಗಿದೆ.

ಹೊರಗಿನಿಂದ ಆರೋಗ್ಯವಾಗಿ ಕಾಣಿಸಿಕೊಂಡರೂ ಒಳಗೊಳಗೆ ತೀವ್ರ ಒತ್ತಡ ಅನುಭವಿಸುತ್ತಿದ್ದ ರಾಯ್, ಚಿಕಿತ್ಸೆ ಪಡೆಯುತ್ತಿದ್ದರೂ ಖಿನ್ನತೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗದೇ ಈ ದಿಢೀರ್ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ ಸಿ.ಜೆ ರಾಯ್ ಸಾವಿನ ಕೊನೆಯ ಕ್ಷಣ ಹೇಗಿತ್ತು; ಏನೆಲ್ಲಾ ಆಯ್ತು ಗೊತ್ತಾ?

ಸೌಂಡ್‌ಪ್ರೂಫ್ ರೂಮ್​ ಮಾಡಿಸಿಕೊಂಡಿದ್ದ ರಾಯ್

ರಾಯ್​ರ ಕಚೇರಿಯ ಚೇಂಬರ್ ಸಂಪೂರ್ಣವಾಗಿ ಸೌಂಡ್‌ಪ್ರೂಫ್ ಆಗಿದ್ದರಿಂದ ಘಟನೆ ನಡೆದು 20 ನಿಮಿಷಗಳಾದರೂ ಸಿಬ್ಬಂದಿಗೆ ತಿಳಿದಿರಲಿಲ್ಲೆ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ದೈನಂದಿನ ವ್ಯವಹಾರಗಳು ಹೊರಗೆ ಕೇಳಿಸದಂತೆ ವಿಶೇಷ ಇಂಟೀರಿಯರ್ ಮಾಡಿಸಿಕೊಂಡಿದ್ದ ರಾಯ್ ಕೊಠಡಿಯಲ್ಲಿ ಒಳಗಿನ ಶಬ್ದಗಳು ಹೊರಗೆ ಹೋಗುತ್ತಿರಲಿಲ್ಲ. ಇದರಿಂದಾಗಿ ಒಳಗೆ ಅಸಾಮಾನ್ಯ ಘಟನೆ ನಡೆದರೂ ಸಿಬ್ಬಂದಿಗೆ ಅನುಮಾನ ಉಂಟಾಗಿರಲಿಲ್ಲ ಎಂದು ಹೇಳಲಾಗಿದೆ. ಚೇಂಬರ್​ಗೆ ಹೋಗಿ ಬಹುಕಾಲ ಪ್ರತಿಕ್ರಿಯೆ ಇಲ್ಲದ ಹಿನ್ನೆಲೆ ಸಿಬ್ಬಂದಿ ಬಾಗಿಲು ತಟ್ಟಿದರೂ ರಾಯ್​ರಿಂದ ಉತ್ತರ ಸಿಗದ ಕಾರಣ ಬಾಗಿಲು ತೆರೆಯಲಾಗಿದ್ದು, ಈ ವೇಳೆ ರಾಯ್ ಅವರು ಕುರ್ಚಿಯ ಮೇಲೆ ಕುಸಿದ ಬಿದ್ದಿದ್ದರೆಂದು ಕಂಡುಬಂದಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತೆಂದು ತಿಳಿದುಬಂದಿದೆ.

 ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿನಿಮಾ ಸ್ಟೈಲಲ್ಲಿ ಯುವಕನ ಅಡ್ಡಗಟ್ಟಿ, ಲಾಂಗ್ ಬೀಸಿ 31 ಕ್ಷ ರೂ. ದರೋಡೆ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ಕೃತ್ಯ – Kannada News | Cinematic Daylight Robbery in Bengaluru: Rs31.38 Lakh Looted at Long Knife Point Caught on CCTV

ಆನೇಕಲ್ ದರೋಡೆಯ ಸಿಸಿಟಿವಿ ದೃಶ್ಯದ ಸ್ಕ್ರೀನ್​​ಗ್ರ್ಯಾಬ್Image Credit source: tv9

ಆನೇಕಲ್, ಫೆಬ್ರವರಿ 2: ಬೆಂಗಳೂರಿನ (Bangalore) ಹೊರವಲಯದ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ ಹಾಡಹಗಲೇ ನಡೆದ ಸಿನಿಮಾಶೈಲಿಯ ದರೋಡೆ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಯುವಕನೊಬ್ಬನ ಬೈಕ್ ಅಡ್ಡಗಟ್ಟಿ, ಲಾಂಗ್ ಬಳಸಿ ಬೆದರಿಸಿ, ಬೈಕ್ ಸಮೇತ 31.38 ಲಕ್ಷ ರೂ. ಹಣವನ್ನು ದರೋಡೆ ಮಾಡಿ ನಾಲ್ವರು ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಭಾನುವಾರ ಸಂಜೆ ಸುಮಾರು 4.20ರ ವೇಳೆಗೆ ಈ ಘಟನೆ ನಡೆದಿದ್ದು, ಕೈಲಾಸ್ ಎಂಬ ಯುವಕನಿಂದ ದರೋಡೆ ಮಾಡಲಾಗಿದೆ. ರಾಕೇಶ್ ಎಂಬುವರ ಬಳಿ ಕ್ಯಾಷ್ ಪಿಕಪ್ ಕೆಲಸ ಮಾಡಿಕೊಂಡಿದ್ದ ಕೈಲಾಸ್, ಉಡಾನ್ ಕಂಪನಿಯ ವಿವಿಧ ಬ್ರಾಂಚ್‌ಗಳಲ್ಲಿ ಬೈಕ್ ಮೂಲಕ ತೆರಳಿ ಹಣ ಸಂಗ್ರಹಿಸುವ ಜವಾಬ್ದಾರಿ ಹೊಂದಿದ್ದರು.

ಭಯಾನಕ ಸಿಸಿಟಿವಿ ವಿಡಿಯೋ ಇಲ್ಲಿ ನೋಡಿ

ಎಂದಿನಂತೆಯೇ ಭಾನುವಾರ ಕೂಡ ಉಡಾನ್ ಕಂಪನಿಯ ಮೂರು ಶಾಖೆಗಳಿಂದ ಕೈಲಾಸ್ ಒಟ್ಟು 31,38,625 ರೂ. ಹಣವನ್ನು ಸಂಗ್ರಹಿಸಿ, ಜೂಪಿಟರ್ ಬೈಕ್‌ನ ಡಿಕ್ಕಿಯಲ್ಲಿ ಇಟ್ಟುಕೊಂಡು ಸಕಲವಾರ ಕಡೆಯಿಂದ ಬನ್ನೇರುಘಟ್ಟ ರಸ್ತೆಯತ್ತ ತೆರಳುತ್ತಿದ್ದರು. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಆತನ ಬೈಕ್‌ನ್ನು ಅಡ್ಡಗಟ್ಟಿ, ಲಾಂಗ್‌ನಿಂದ ಹಲ್ಲೆ ನಡೆಸಿ ಬೆದರಿಸಿ ಬೈಕ್ ಸಮೇತ ದರೋಡೆ ನಡೆಸಿದ್ದಾರೆ.

ಬೈಕ್ ಬಿಟ್ಟು ಹಣ ಸಮೇತ ಪರಾರಿಯಾದ ದುಷ್ಕರ್ಮಿಗಳು

ದರೋಡೆ ಬಳಿಕ ದುಷ್ಕರ್ಮಿಗಳು ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಬೈಕ್‌ ಬಿಟ್ಟು, ಅದರಲ್ಲಿ ಇದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಸಂಪೂರ್ಣ ದರೋಡೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ನೇಪಾಳಿ ದಂಪತಿಗೆ ಬಲೆ ಬೀಸಿದ ಪೊಲೀಸರು!

ಘಟನೆಯ ಮಾಹಿತಿ ತಿಳಿದ ತಕ್ಷಣ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹಾಡಹಗಲೇ ಇಂತಹ ದೊಡ್ಡ ಮಟ್ಟದ ದರೋಡೆ ನಡೆದಿರುವುದು ಬೆಂಗಳೂರಿನಲ್ಲಿ ಆತಂಕಕ್ಕೆ ಕಾರಣವಾಗಿದೆ.ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನ್ನ ಗೋವಿಂದ ಮಧ್ಯೆ ಏನು ಇರಲಿಲ್ಲ’; ಸ್ಪಷ್ಟನೆ ಕೊಟ್ಟ ನಟಿ – Kannada News | Govinda Neelam Relationship: Kothari Breaks Silence Amidst Wife’s Allegations

ಬಾಲಿವುಡ್‌ನ ಒಂದು ಕಾಲದ ಸೂಪರ್ ಸ್ಟಾರ್ ನಟ ಗೋವಿಂದ ಕಳೆದ ಕೆಲವು ತಿಂಗಳುಗಳಿಂದ ತಮ್ಮ ಖಾಸಗಿ ಜೀವನದ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ಗೋವಿಂದ (Govinda) ಅವರು ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪಿಸಿದ್ದಾರೆ ಎಂದು ಪತ್ನಿ ಸುನೀತಾ ಅಹುಜಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಗೋವಿಂದ ವಿರುದ್ಧ ವಿಚ್ಛೇದನ ಅರ್ಜಿಯನ್ನೂ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ಗೋವಿಂದ ಮತ್ತು ನಟಿ ನೀಲಂ ಕೊಠಾರಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳೂ ಇದ್ದವು. ಈಗ ನೀಲಂ ಸ್ವತಃ ಈ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ಗೋವಿಂದ ಮತ್ತು ನನ್ನ ನಡುವೆ ಅಂತಹದ್ದೇನೂ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉಷಾ ಕಾಕಡೆ ಪ್ರೊಡಕ್ಷನ್ಸ್ ಜೊತೆ ಮಾತನಾಡಿದ ನೀಲಂ, ಗೋವಿಂದ ಜೊತೆಗಿನ ಪ್ರೇಮ ಸಂಬಂಧದ ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ‘ಇದನ್ನು ಹೇಳಿದ್ದು ಯಾರು? ಗೋವಿಂದ ತುಂಬಾ ಒಳ್ಳೆಯವರು. ಆದರೆ ಈ ಪ್ರಶ್ನೆ ನಿಜವಲ್ಲ. ಅವರು ಒಬ್ಬ ವ್ಯಕ್ತಿಯಾಗಿ ತುಂಬಾ ಒಳ್ಳೆಯವರು ಮತ್ತು ನಾವು ಅನೇಕ ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಆದರೆ ಇದು ನಿಜವಲ್ಲ. ನಮ್ಮ ನಡುವೆ ಈ ರೀತಿಯ ಏನೂ ಇರಲಿಲ್ಲ’ ಎಂದಿದ್ದಾರೆ ಅವರು.

‘ತೊಂಬತ್ತರ ದಶಕದಲ್ಲಿನ ಸಂಪರ್ಕವೇ ಇದಕ್ಕೆಲ್ಲಾ ಮೂಲ ಎಂದು ನಾನು ಭಾವಿಸುತ್ತೇನೆ. ಆ ಸಮಯದಲ್ಲಿ, ಈ ವಿಷಯವನ್ನು ವಿವರಿಸಲು ಯಾರೂ ಇರಲಿಲ್ಲ. ಅವರು ಏನು ಬೇಕಾದರೂ ಪ್ರಕಟಿಸುತ್ತಿದ್ದರು. ನಿಜ ಹೇಳಬೇಕೆಂದರೆ, ಆ ಸಮಯದಲ್ಲಿ ನಾವು ಪತ್ರಿಕಾ ಮಾಧ್ಯಮಗಳಿಗೆ ತುಂಬಾ ಹೆದರುತ್ತಿದ್ದೆವು. ಏಕೆಂದರೆ ಅವರ ಲೇಖನಿಯ ಶಕ್ತಿಯೇ ಎಲ್ಲವೂ ಆಗಿತ್ತು. ನಟರ ಜೊತೆ ಎರಡು-ಮೂರು ಚಲನಚಿತ್ರಗಳನ್ನು ಮಾಡಿದರೆ, ನೀವು ಪ್ರೇಮ ಸಂಬಂಧ ಹೊಂದಿದ್ದೀರಿ ಎಂದು ಭಾವಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ನಾವು ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ ಮತ್ತು ನಾವು ಆಗಾಗ್ಗೆ ಭೇಟಿಯಾಗುತ್ತಿದ್ದೆವು. ನಾನು ಅವರನ್ನು ತಿಳಿದುಕೊಳ್ಳಲು ಪ್ರಾರಂಭಿಸಿದಾಗ, ನಾನು ಅವರನ್ನು ಇಷ್ಟಪಡಲು ಪ್ರಾರಂಭಿಸಿದೆ. ಅವರು ಎಲ್ಲರಿಗೂ ಇಷ್ಟ ಆಗುತ್ತಿದ್ದ ಮಹಿಳೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಬಾಲಿವುಡ್​ಗೆ ಮತ್ತೊಂದು ಶಾಕ್; ಕುಸಿದುಬಿದ್ದು ಆಸ್ಪತ್ರೆ ಸೇರಿದ ನಟ ಗೋವಿಂದ

ನೀಲಂ ಕೊಠಾರಿ ಮೊದಲು ಇಂಗ್ಲಿಷ್ ಉದ್ಯಮಿ ರಿಷಿ ಸೇಥಿಯಾ ಅವರನ್ನು ವಿವಾಹವಾದರು. ಆದರೆ ಅವರು 2011 ರಲ್ಲಿ ವಿಚ್ಛೇದನ ಪಡೆದರು. ನಂತರ, ಅವರು ನಟ ಸಮೀರ್ ಸೋನಿ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ಇಬ್ಬರೂ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ಮತ್ತೊಂದೆಡೆ, ಗೋವಿಂದ 1987 ರಲ್ಲಿ ಸುನೀತಾ ಅಹುಜಾ ಅವರನ್ನು ವಿವಾಹವಾದರು. ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link