ಲಾಲ್‌ಬಾಗ್‌ನಲ್ಲಿ ಮಾವು-ಹಲಸು ಮೇಳದ ಸಖತ್ ಕ್ರೇಜ್! ಮೇಳದಲ್ಲಿ ಯಾವೆಲ್ಲಾ ಬಗೆಯ ಮಾವಿನ ಹಣ್ಣುಗಳಿದ್ದವು ನೋಡಿ
ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆಯು ಆಯೋಜಿಸಿರುವ ಮಾವು ಮತ್ತು ಹಲಸು ಮೇಳವು ಸಾರ್ವಜನಿಕರ ಭಾರೀ ಜನಮನ್ನಣೆಗೆ ಪಾತ್ರವಾಗಿದೆ. ಜೂನ್ 26 ರವರೆಗೆ ನಡೆಯಲಿರುವ ಈ ವಿಶೇಷ ಮೇಳದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ರೈತರು ಭಾಗವಹಿಸಿದ್ದು, ತಾವು ಬೆಳೆದ ತಾಜಾ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಉತ್ತಮ ವೇದಿಕೆ ಕಲ್ಪಿಸಲಾಗಿದೆ. ಮೇಳದಲ್ಲಿ ಮಾಲ್ಗೋಬ, ಮಲ್ಲಿಕಾ, ಸೆಂಧೂರ, ಬಾದಾಮಿ, ತೋತಾಪುರಿ ಹಾಗೂ ರಸಪುರಿ ಸೇರಿದಂತೆ ಹತ್ತಾರು ಜನಪ್ರಿಯ ತಳಿಯ ಮಾವಿನ ಹಣ್ಣುಗಳು ಗ್ರಾಹಕರ ಗಮನ ಸೆಳೆಯುತ್ತಿವೆ….