Category Archives: Blog

Your blog category

ಕಾನೂನು ಎಲ್ಲರಿಗೂ ಒಂದೇ, ಮೀರಿದರೆ ಕ್ರಮ: ಸಭೆ ಬಳಿಕೆ ಎಚ್ಚರಿಕೆ ಕೊಟ್ಟ ಗೃಹ ಸಚಿವ ಖರ್ಗೆ – Kannada News

ಬೆಂಗಳೂರು, (ಜೂನ್ 05): ಗೃಹ ಸಚಿವರಾದ ಬಳಿಕ ಪ್ರಿಯಾಂಕ್ ಖರ್ಗೆ (Priyank Kharge) ಅವರು ಇಂದು (ಜೂನ್ 05) ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದರು. ಈ ವೇಳೆ ಬೆಂಗಳೂರು ಟ್ರಾಫಿಕ್​ ಸಮಸ್ಯೆ, ಮಹಿಳೆಯರ ಸುರಕ್ಷತೆ ಹಾಗೂ ಡ್ರಗ್ಸ್​ ಮಾಫಿಯಾ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಜೊತೆಗೆ ಕಾನೂನು ಸುವ್ಯವಸ್ಥೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.  ಇನ್ನು ಸಭೆ ಬಳಿಕ ಮಾತನಾಡಿದ ಖರ್ಗೆ, ಕಾನೂನು ಎಲ್ಲರಿಗೂ ಒಂದೆ. ಯಾರೇ ಇದ್ರೂ ಕಾನೂನಿನ ಚೌಕಟ್ಟಿನಲ್ಲಿದ್ರೆ ಓಕೆ. ಅದನ್ನ ಮೀರಿ ಮಾಡಿದ್ರೆ ಕ್ರಮ ಕೈಗೊಳ್ಳುವುದು ಖಚಿತ ಎಂದು ಖಡಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಮುಖ್ಯಾಂಶಗಳು

  • ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ
  • ಗೃಹ ಸಚಿವರಾದ ಬಳಿಕ ಮೊಲದ ಇಲಾಖಾ ಸಭೆ ಮಾಡಿದ ಪ್ರಿಯಾಂಕ್
  • ಕಾನೂನು ಎಲ್ಲರಿಗೂ ಒಂದೇ, ಕಾನೂನು ಮೀರಿದರೆ ಕ್ರಮ ಎಂದ ನೂತನ ಗೃಹ ಸಚಿವ

ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದಲ್ಲಿ ನನಗೊಂದು ದೊಡ್ಡ ಜವಾಬ್ದಾರಿ ವಹಿಸಿದ್ದಾರೆ. ಗೃಹ ಇಲಾಖೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೇನೆ. ಪರಮೇಶ್ವರ್ ಸಾಹೇಬರ ಕಾರ್ಯಕ್ರಮಗಳ ಬಗ್ಗೆ ಯಾವುದನ್ನು ಮುಂದುವರಿಸಬೇಕೆಂದು ಮಾಹಿತಿ ಪಡೆದಿದ್ದೇನೆ. ಬೆಂಗಳೂರು ಟ್ರಾಫಿಕ್​ ಸಮಸ್ಯೆ, ಮಹಿಳೆಯರ ಸುರಕ್ಷತೆ ಮತ್ತು ಡ್ರಗ್ಸ್​ ಮಾಫಿಯಾ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಜೊತೆಗೆ ಸಭೆಯಲ್ಲಿ ಕೆಲ ಸಲಹೆ ಸೂಚನೆಗಳನ್ನ ನೀಡಿದ್ದೇನೆ. ಕಾನೂನು ಎಲ್ಲರಿಗೂ ಒಂದೇ, ಕಾನೂನು ಮೀರಿದರೆ ಕ್ರಮ ಎಂದು ಹೇಳಿದರು.

ಇದನ್ನೂ ಓದಿ: ರಾಮಲಿಂಗಾರೆಡ್ಡಿಗೆ ಮಾತು ಕೊಟ್ಟಿದ್ದು ನಿಜ: ಖಾತೆ ಹಂಚಿಕೆ ಒಳ ರಹಸ್ಯ ಬಿಚ್ಚಿಟ್ಟ ಡಿಕೆ ಶಿವಕುಮಾರ್

ದ್ವೇಷ ಹುಟ್ಟಿಸುವ ಭಾಷಣ ಮಾಡಿದ್ರೆ ಕ್ರಮ

ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ಧಿ ವಿಚಾರದ ಬಗ್ಗೆ ಮಾತನಾಡಿ, ಐಟಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಚರ್ಚೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ದ್ವೇಷ ಹುಟ್ಟಿಸುವ ಹಾಗೆ ಭಾಷಣ ಮಾಡಿದ್ರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಸೋಷಿಯಲ್ ಮೀಡಿಯಾ ಬಗ್ಗೆ ಗಮನವಹಿಸಲಾಗುತ್ತಿದೆ. ಕಾನೂನಾತ್ಮಕವಾಗಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಆಗುತ್ತೆ ಎಂದು ಸ್ಪಷ್ಟಪಡಿಸಿದರು.

ರೌಡಿ ಪಡೆ ರಚನೆ ಮಾಡುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚನೆ ನೀಡಿರುವ ಬಗ್ಗೆ ಈಗಲೇ ಹೇಳುವುದಕ್ಕೆ ಆಗಲ್ಲ. ಈ ಯೋಜನೆ ಬಗ್ಗೆ ಬ್ಲೂ ಪ್ರಿಂಟ್ ರೆಡಿ ಮಾಡಬೇಕು. ಮುಂದಿನ ದಿನದಲ್ಲಿ ಈ ಬಗ್ಗೆ ಹೇಳುತ್ತೇವೆ ಎಂದು ಹೇಳಿದ ಖರ್ಗೆ,ವಿವಿಐಪಿ ಸಂಚಾರದ ವೇಳೆ ಜನರಿಗೆ ಸಮಸ್ಯೆ ಬಗ್ಗೆ ಇವತ್ತು ಚರ್ಚೆ ಮಾಡಿದ್ದೇವೆ. ಬೇರೆ ಏನಾದ್ರು ಮಾಡಬಹುದಾ ಗಮನವಹಿಸಲು ಹೇಳಿದ್ದೇನೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ ಎಂದು ತಿಳಿಸಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆತ್ಮನಿರ್ಭರ ಭಾರತವನ್ನು ಲೇವಡಿ ಮಾಡಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ – Kannada News

ಸೂರತ್, ಜೂನ್ 5: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಗುಜರಾತ್‌ನ ಸೂರತ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶದಲ್ಲಿರುವ ಕೆಲವು ನಿರಾಶಾವಾದಿಗಳು ಸದಾ ‘ಆತ್ಮನಿರ್ಭರ ಭಾರತ’ ಅಭಿಯಾನವನ್ನು ಲೇವಡಿ ಮಾಡುತ್ತಿದ್ದಾರೆ ಮತ್ತು ದೇಶದ ಸಂಕಲ್ಪವನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಪ್ರಧಾನಿ ಕಿಡಿಕಾರಿದರು. ಇತರರ ಮೇಲೆ ಅವಲಂಬಿತವಾಗಿರುವ ದೇಶವು ಎಂದಿಗೂ ತನಗೆ ಅರ್ಹವಾದ ಅಭಿವೃದ್ಧಿಯ ಎತ್ತರವನ್ನು ತಲುಪಲು ಸಾಧ್ಯವಿಲ್ಲ ಎಂಬುದನ್ನು ಇಂತಹ ಜನರು ಮರೆತಿದ್ದಾರೆ ಎಂದು ಮೋದಿ ಟೀಕಿಸಿದರು.

ಕಳೆದ 12 ವರ್ಷಗಳಿಂದ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅರಾಜಕತೆ ಮತ್ತು ಅನಿಶ್ಚಿತತೆಯನ್ನು ಹರಡುವ ಮೂಲಕ ರಾಜಕೀಯ ಅವಕಾಶಗಳನ್ನು ಹುಡುಕುತ್ತಿದೆ. ಆದರೆ, ದೇಶದ ಜನರು ಅವರಿಗೆ ಪದೇ ಪದೇ ತಕ್ಕ ಉತ್ತರ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ಜವಾಹರಲಾಲ್ ನೆಹರು- ನರೇಂದ್ರ ಮೋದಿ ಅವಧಿಯ ವ್ಯತ್ಯಾಸಗಳೇನು? ಇಬ್ಬರ ನಾಯಕತ್ವದ ಅವಲೋಕನ ಇಲ್ಲಿದೆ

“ಗುಜರಾತ್‌ನ ಜನರು ಈಗಾಗಲೇ ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಗಳಿರುವ ರಾಜ್ಯಗಳಲ್ಲೂ ಜನತೆ ಅವರ ದುರಾಡಳಿತದಿಂದ ಬೇಸತ್ತಿದ್ದಾರೆ. ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ, ಅಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆ ಪಕ್ಷಕ್ಕೆ ಹೀನಾಯ ಸೋಲಾಗಿದೆ. ಇದಕ್ಕೂ ಮುನ್ನ ಹರಿಯಾಣ ಮತ್ತು ಪಂಜಾಬ್‌ನ ಜನರೂ ಕಾಂಗ್ರೆಸ್‌ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅರಾಜಕತೆಯ ಮೂಲಕ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್‌ನ ರಾಜಕಾರಣ ಇನ್ನು ಮುಂದೆ ನಡೆಯುವುದಿಲ್ಲ” ಎಂದು ಮೋದಿ ವಾಗ್ದಾಳಿ ನಡೆಸಿದರು.

ಸಾರ್ವಜನಿಕ ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸೂರತ್‌ನಲ್ಲಿ ಸುಮಾರು 18,800 ಕೋಟಿ ರೂಪಾಯಿ ಮೌಲ್ಯದ ವಿವಿಧ ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಯಕಿಯ ‘ಅಂಗಾಂಗ’ಗಳ ಮೇಲೆ ‘ಕಣ್ಣು’, ‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ – Kannada News

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ನಿನ್ನೆ (ಜೂನ್ 04) ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಬಹಳ ಒಳ್ಳೆಯ ಸಂದೇಶವಿದೆ. ಹಲವು ಉತ್ತಮ ವಿಷಯಗಳನ್ನು ಸಿನಿಮಾ ಹೇಳುತ್ತಿದೆ. ಕ್ರೀಡೆಯ ಮಹತ್ವ, ಛಲ ಬಿಡದೆ ಹೋರಾಡುವ ಸ್ಪೂರ್ತಿ, ಗ್ರಾಮೀಣ ವಿಕಾಸ, ಮೂಲ ಸೌಕರ್ಯಗಳ ಅಗತ್ಯತೆ, ಅಂಗವೈಕಲ್ಯ ಶಾಪವಲ್ಲ ಎಂಬಿತ್ಯಾದಿ ಉತ್ತಮ ಸಂದೇಶಗಳನ್ನು ಈ ಸಿನಿಮಾ ಒಳಗೊಂಡಿದೆ. ಇಷ್ಟೆಲ್ಲ ಇದ್ದಾಗಿಯೂ ಸಹ ಸಿನಿಮಾನಲ್ಲಿ ನಾಯಕಿಯನ್ನು ತೋರಿಸುವ ವಿಧಾನದಿಂದಾಗಿ ಸಿನಿಮಾದ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ನಿರ್ದೇಶಕನ ಒಂದು ಕೆಟ್ಟ ನಿರ್ಧಾರದಿಂದ ಈಗ ಸಿನಿಮಾದ ಒಳ್ಳೆಯ ವಿಷಯಗಳು ಬದಿಗೆ ಸರಿದಿದೆ.

‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಎಂಎಲ್​​ಎ ಕ್ಯಾಂಡಿಡೇಟ್ ಒಬ್ಬಾತನ ಪುತ್ರಿ ಆಕೆ. ಮೊದಲಾರ್ಧದಲ್ಲಿ ಕೆಲವಾರು ಸೀನ್​​ಗಳಲ್ಲಿ ನಟಿ ಕಾಣಿಸಿಕೊಳ್ಳುತ್ತಾರೆ. ಆದರೆ ನಿರ್ದೇಶಕ ಬುಚ್ಚಿಬಾಬು ಸನಾ, ಜಾನ್ಹವಿಯನ್ನು ನಾಯಕಿಯಾಗಿ ಅಲ್ಲ ಬದಲಾಗಿ ಗ್ಲಾಮರ್ ಗೊಂಬೆಯಾಗಿ ಮಾತ್ರವೇ ಬಳಸಿದ್ದಾರೆ. ಸಿನಿಮಾದ ಮೊದಲಾರ್ಧದಲ್ಲಿ ಜಾನ್ಹವಿ ಸೀನ್ ಬಂದಾಗಲೆಲ್ಲ ಕ್ಯಾಮೆರಾ, ಜಾನ್ಹವಿಯ ಸೊಂಟ, ಎದೆಯ ಕಡೆಗೆ ಜಾರಿದೆ. ಜಾನ್ಹವಿಯ ಮುಖಕ್ಕಿಂತಲೂ ಹೆಚ್ಚಾಗಿ ಆಕೆಯ ಇತರೆ ಅಂಗಾಂಗಗಳನ್ನೇ ನಿರ್ದೇಶಕರು ತೋರಿಸಿದ್ದಾರೆ.

ಜಾನ್ಹವಿಯ ಪಾತ್ರವನ್ನು ಗ್ಲಾಮರ್ ಹೊರತಾಗಿ ಇನ್ಯಾವ ಕಾರಣಕ್ಕೂ ಬಳಸಿಕೊಳ್ಳಲಾಗಿಲ್ಲ ಎಂಬುದು ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ. ತೆಲುಗು ರಾಜ್ಯಗಳ ಯಾವ ಮೂಲೆಯಲ್ಲೂ ಧರಿಸದ ಗ್ಲಾಮರಸ್ ಉಡುಗೆಯನ್ನು ಧರಿಸಿ ಜಾನ್ಹವಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ನಾಯಕಿಯ ಒಪ್ಪಿಗೆ ಇಲ್ಲದೆ, ಕತ್ತಲಲ್ಲಿ ನಾಯಕ ಮುತ್ತು ಕೊಡುವ ದೃಶ್ಯವೂ ಸಹ ಇದೆ. ನಾಯಕಿಯನ್ನು ಅದೆಷ್ಟು ಸಾಧ್ಯವೋ ಅಷ್ಟು ಆಬ್ಜೆಕ್ಟಿಫೈ ಮಾಡಲಾಗಿದೆ. ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಖುದ್ದು ಜಾನ್ಹವಿ ಅವರೇ ಈ ಕುರಿತಾದ ಇನ್​ಸ್ಟಾಗ್ರಾಂ ಪೋಸ್ಟ್ ಒಂದಕ್ಕೆ ಲೈಕ್ ಒತ್ತುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಬಜೆಟ್ ಮತ್ತು ತಾರಾಗಣದ ಸಂಭಾವನೆ ವಿವರ ಇಲ್ಲಿದೆ

ಟೀಕೆಗಳು ಹೆಚ್ಚಾಗುತ್ತಿದ್ದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಬುಚ್ಚಿಬಾಬು ಸನಾ, ‘ಜಾನ್ಹವಿಯ ದೃಶ್ಯಗಳನ್ನು ಜನ ಇಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಎಣಿಸಿರಲಿಲ್ಲ’ ಎಂದಷ್ಟೆ ಹೇಳಿದ್ದಾರೆ. ಆದರೆ ಈ ವಿಷಯದ ಬಗ್ಗೆ ಬಲು ಗಂಭೀರ ಚರ್ಚೆಗಳಾಗುತ್ತಿದ್ದು, ಕನ್ನಡದ ನಟಿ ರಮ್ಯಾ ಸಹ, ‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿಯನ್ನು ಕೆಟ್ಟದಾಗಿ ತೋರಿಸಿರುವ ರೀತಿಯ ಬಗ್ಗೆ ಹಂಚಿಕೊಳ್ಳಲಾದ ಪೋಸ್ಟ್ ಒಂದನ್ನು ರೀಶೇರ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಜಾನ್ಹವಿ ಕಪೂರ್ ಅವರು ಈ ಹಿಂದೆಯೂ ಸಹ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾನಲ್ಲಿ ತುಸು ಹೆಚ್ಚೇ ಅವರನ್ನು ಆಬ್ಜೆಕ್ಟಿಫೈ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಅವರ ಎದೆ ಭಾಗ ಮತ್ತು ಸೊಂಟಗಳ ಮೇಲೆ ಕೆಟ್ಟದಾಗಿ ಫೋಕಸ್ ಮಾಡಲಾಗಿದೆ. ರಾಮ್ ಚರಣ್ ಅಂಥಹಾ ದೊಡ್ಡ ಸ್ಟಾರ್ ನಟ ಇದ್ದಾಗಿಯೂ ಜನರನ್ನು ಸೆಳೆಯಲು ನಾಯಕಿಯ ನಡು, ಎದೆಭಾಗದ ಮೇಲೆ ನಿರ್ದೇಶಕ ಬುಚ್ಚಿಬಾಬು ಡಿಪೆಂಡ್ ಆಗಿರುವುದು ಅವರ ಕತೆಯ ಬಗ್ಗೆ ಅವರಿಗಿದ್ದಿದ್ದ ನಂಬಿಕೆಯನ್ನು ತೋರಿಸುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:34 pm, Fri, 5 June 26

Source link

ಅಣ್ಣನ ಕಣ್ಣೆದುರೇ ತಮ್ಮ ಸಿಡಿಲಿಗೆ ಬಲಿ: ಮೃತದೇಹವನ್ನ ಹೆಗಲ ಮೇಲೆ ಹೊತ್ತು ತಂದ ಸಹೋದರ – Kannada News

ಗದಗ, ಜೂನ್​​ 05: ಅಣ್ಣನ ಕಣ್ಣೆದುರೇ ಸಿಡಿಲು (lightning) ಬಡಿದು ತಮ್ಮ ಸಾವನ್ನಪ್ಪಿದ (death) ದಾರುಣ ಘಟನೆಯೊಂದು ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ನಡೆದಿದೆ. ಪ್ರಶಾಂತ್ ಹುಡೇದ(19) ಮೃತ ಯುವಕ. ಜಾನುವಾರು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದ್ದು, ತಮ್ಮನ ಶವವನ್ನು ಹೊತ್ತು ಅಣ್ಣ ಊರಿಗೆ ಬಂದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಗದಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರಿ ಮಳೆ
  • ಸಿಡಿಲು ಬಡಿದು ಅಣ್ಣನ ಎದುರೇ ತಮ್ಮ ಸಾವು
  • ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು

ನಡೆದಿದ್ದೇನು?

ಗದಗ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ವರುಣರಾಯ ಇಂದು ಸಾಯಂಕಾಲ ಗುಡುಗು-ಸಿಡಿಲು ಭಾರಿ ಗಾಳಿ ಸಮೇತ ಆರ್ಭಟಿಸಿದ್ದಾನೆ. ಆದರೆ, ಇದೇ ಮಳೆರಾಯ ಗಜೇಂದ್ರಗಢ ತಾಲೂಕಿನ ರಾಜೂರು ಗ್ರಾಮದ ಕುಟುಂಬವೊಂದಕ್ಕೆ ಕರಾಳ ಶೋಕವನ್ನು ತಂದಿದೆ. ಯಮಸ್ವರೂಪಿ ಸಿಡಿಲಿನ ಹೊಡೆತಕ್ಕೆ ಕೇವಲ 19 ವರ್ಷದ ಪ್ರಶಾಂತ್ ಹುಡೇದ ಎಂಬ ಯುವಕ ಬಲಿಯಾಗಿದ್ದಾನೆ. ಕಣ್ಣು ಮುಚ್ಚಿ ಬಿಡುವುದರೊಳಗೆ ಒಡಹುಟ್ಟಿದ ತಮ್ಮ ಹೆಣವಾಗಿದ್ದು ಕಂಡು ಅಣ್ಣ ಅಕ್ಷರಶಃ ದಿಗ್ಭ್ರಾಂತ​ರಾಗಿದ್ದಾರೆ.

ಸಿಡಿಲು ಬಡಿದು ತಮ್ಮ ಸಾವು: ಅಣ್ಣ ಜಸ್ಟ್​ ಮಿಸ್​

ಅಷ್ಟಕ್ಕೂ ಜಮೀನಿನಲ್ಲಿ ಎಂದಿನಂತೆ ಜಾನುವಾರುಗಳನ್ನು ಮೇಯಿಸಲು ಸಹೋದರರಿಬ್ಬರು ಹೋಗಿದ್ದರು. ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು ಪ್ರಶಾಂತ್​​ ಬಲಿಯಾಗಿದ್ದು, 60 ಮೀಟರ್ ದೂರದಲ್ಲಿದ್ದ ಅಣ್ಣ ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಅಣ್ಣ ತನ್ನ ತಮ್ಮನ ಶವವನ್ನು ಹೊತ್ತುಕೊಂಡು ಊರಿಗೆ ಬಂದಿದ್ದಾರೆ.

ಹಲಸಿನ ಹಣ್ಣಿನ ಆಸೆಗೆ ಜೀವ ಕಳೆದುಕೊಂಡ ವಿದ್ಯಾರ್ಥಿ

ಹಲಸಿನ ಹಣ್ಣಿನ ಆಸೆಗೆ ವಿದ್ಯಾರ್ಥಿ ಜೀವ ಕಳೆದುಕೊಂಡ ಘಟನೆ ಬೆಂಗಳೂರಿನ ಯಲಹಂಕದ ಜಿಕೆವಿಕೆ ಆವರಣದಲ್ಲಿ ನಡೆದಿದೆ. ಹಲಸಿನ ಹಣ್ಣು ಕೀಳಲು ಹೋಗಿ ಮರದಿಂದ ಬಿದ್ದು ಆಕಾಶ್(23) ದುರ್ಮರಣ ಹೊಂದಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ವನ್ಯಜೀವಿ ಬೇಟೆಗಾರರನ್ನು ಬಂಧಿಸಲು ಹೋದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ! ನಾಲ್ವರ ಬಂಧನ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಮೂಲದ ವಿದ್ಯಾರ್ಥಿ ಆಕಾಶ್, ಜಿಕೆವಿಕೆಯಲ್ಲಿ ಸರ್ಕಾರಿ ಸೀಟ್ ಪಡೆದು ಎಂಎಸ್​ಸಿ ಕೃಷಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ರಾತ್ರಿ 12ರಿಂದ 1 ಗಂಟೆ ಅವಧಿಯಲ್ಲಿ ಮರದಿಂದ ಬಿದ್ದಿದ್ದಾನೆ. ಗಂಭೀರ ಗಾಯಗೊಂಡಿದ್ದ ಆಕಾಶ್​ನನ್ನು ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇನ್ನು ಆಕಾಶ್ ಎನ್​​ಎಸ್​​ಎಸ್​ನಲ್ಲಿ ರಾಷ್ಟ್ರಪತಿಯಿಂದ ಉತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದಿದ್ದ. 2024ರ ಗಣರಾಜ್ಯೋತ್ಸವ ಪರೇಡ್​ನಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

IND vs AFG: ಈತನಿಗೆ 3ನೇ ಕ್ರಮಾಂಕ, ಸ್ಪಿನ್ನರ್​ ಪಾದಾರ್ಪಣೆ; ಪ್ಲೇಯಿಂಗ್ 11 ಬಗ್ಗೆ ಗಂಭೀರ್ ಮಾತು – Kannada News

ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯ ಜೂನ್ 6 ರಿಂದ ಚಂಡೀಗಢದ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಯುವ ಅನುಭವಿ ಶುಭ್‌ಮನ್ ಗಿಲ್ (Shubman Gill) ನೇತೃತ್ವದ ಭಾರತ ತಂಡ ಬರೋಬ್ಬರಿ 193 ದಿನಗಳ ನಂತರ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಹೀಗಾಗಿ ಈ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ಪ್ರಶ್ನೆಯಾಗಿದೆ. ಇದೀಗ ಎಂದಿನಂತೆ ಟೆಸ್ಟ್ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ತಂಡದ ಆಡುವ ಹನ್ನೊಂದರ ಬಳಗಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸುದರ್ಶನ್​ಗೆ 3 ನೇ ಕ್ರಮಾಂಕ

ಈ ಮೊದಲಿನಂತೆ ಯಶಸ್ವಿ ಜೈಸ್ವಾಲ್ ಹಾಗೂ ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಆದರೆ 3ನೇ ಕ್ರಮಾಂಕ ಯಾರಿಗೆ ಸಿಗಲಿದೆ ಎಂಬುದು ಪ್ರಶ್ನೆಯಾಗಿತ್ತು. ಆ ಪ್ರಶ್ನೆಗೆ ಖಚಿತ ಉತ್ತರ ನೀಡಿರುವ ಗೌತಮ್ ಗಂಭೀರ್, ಸಾಯಿ ಸುದರ್ಶನ್​ಗೆ 3ನೇ ಕ್ರಮಾಂಕ ನೀಡುವುದಾಗಿ ಹೇಳಿದ್ದಾರೆ. ವಾಸ್ತವವಾಗಿ ಇಂಗ್ಲೆಂಡ್ ಸರಣಿಯಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡದ ಸಾಯಿ ಸುದರ್ಶನ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಆದಾಗ್ಯೂ, ಗಂಭೀರ್ ತಮ್ಮ ಪತ್ರಿಕಾಗೋಷ್ಠಿಯ ಮೂಲಕ ಅವೆಲ್ಲಕ್ಕೂ ಉತ್ತರಿಸಿ, ಕೇವಲ ನಾಲ್ಕು ಅಥವಾ ಐದು ಪಂದ್ಯಗಳಲ್ಲಿ ಅವರ ಪ್ರದರ್ಶನವನ್ನು ಆಧರಿಸಿ ನೀವು ಆಟಗಾರನನ್ನು ನಿರ್ಣಯಿಸಿದರೆ, ನೀವು ಬಲವಾದ ತಂಡವನ್ನು ನಿರ್ಮಿಸಲು ಸಾಧ್ಯವಿಲ್ಲ, ಅದಕ್ಕಾಗಿಯೇ ಸಾಯಿ ಸುದರ್ಶನ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದಾಗಿ ಹೇಳಿದರು.

ಟೆಸ್ಟ್​ನಲ್ಲಿ ಸುದರ್ಶನ್ ಪ್ರದರ್ಶನ

ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ 24 ವರ್ಷದ ಸಾಯಿ ಸುದರ್ಶನ್ ಅವರನ್ನು ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಯಿತು. ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಸಾಯಿ ಕೇವಲ ನಾಲ್ಕು ಎಸೆತಗಳನ್ನು ಎದುರಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದರು. ಆ ಸರಣಿಯ ಆಡಿದ 6 ಇನ್ನಿಂಗ್ಸ್‌ಗಳಲ್ಲಿ, ಅವರು 23.33 ರ ಸರಾಸರಿಯಲ್ಲಿ ಕೇವಲ 140 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಇದರಲ್ಲಿ ಎರಡು ಡಕ್ ಮತ್ತು ಕೇವಲ ಒಂದು ಅರ್ಧಶತಕ ಸೇರಿತ್ತು. ಸ್ಥಿರತೆಯ ಕೊರತೆಯಿಂದಾಗಿ ಅವರು ಆ ಸರಣಿಯಲ್ಲಿ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡರು. ಅದರ ನಂತರ, ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇನ್ನಿಂಗ್ಸ್‌ವೊಂದರಲ್ಲಿ 87 ರನ್ ಕಲೆಹಾಕಿದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ ಸುದರ್ಶನ್ ಆಡಿದ 2 ಇನ್ನಿಂಗ್ಸ್‌ಗಳಲ್ಲಿ ಕೇವಲ 29 ರನ್ ಕಲೆಹಾಕಿದರು. ಈ ಕಳಪೆ ದಾಖಲೆಯ ಹೊರತಾಗಿಯೂ ಗಂಭೀರ್, ಸುದರ್ಶನ್​ಗೆ ಮತ್ತೊಂದು ಅವಕಾಶವನ್ನು ನೀಡುತ್ತಿದ್ದಾರೆ.

ವಿಶ್ವ ಕ್ರಿಕೆಟ್​ನಲ್ಲಿ ಈಗ ವೈಭವ್​ದೇ ಮಾತು; ಟೆಸ್ಟ್​ಗೆ ಆಯ್ಕೆ ಮಾಡಿ ಎಂದ ದಿಗ್ಗಜ ಕ್ರಿಕೆಟಿಗರು

ಹೊಸ ಸ್ಪಿನ್ನರ್ ಪ್ರವೇಶ ಖಚಿತ

ಸಾಯಿ ಸುದರ್ಶನ್ ಜೊತೆಗೆ, ಸ್ಪಿನ್ ವಿಭಾಗದಲ್ಲಿ ಹೊಸ ಆಟಗಾರನ ಪ್ರವೇಶವನ್ನು ಗಂಭೀರ್ ಖಚಿತ ಪಡಿಸಿದ್ದಾರೆ. ಐಪಿಎಲ್ 2026 ರಲ್ಲಿ ಸ್ಪಿನ್ ಮ್ಯಾಜಿಕ್ ಮೂಲಕ ವಿಮರ್ಶಕರ ಮೆಚ್ಚುಗೆ ಪಡೆದ ಹರ್ಷ್ ದುಬೆ ಅಥವಾ ಮಾನವ್ ಸುತಾರ್ ಅವರಲ್ಲಿ ಒಬ್ಬರು ನಾಳೆ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವುದು ಖಚಿತ ಎಂದು ಕೋಚ್ ಹೇಳಿದ್ದಾರೆ. ಇಬ್ಬರೂ ಒಂದೇ ರೀತಿಯ ಕೌಶಲ್ಯಗಳನ್ನು ಹೊಂದಿದ್ದು, ಮುಂಬರುವ ಶ್ರೀಲಂಕಾ ಸರಣಿಗೆ ಸ್ಪಿನ್ನರ್‌ಗಳ ಅಗತ್ಯತೆ ಹೆಚ್ಚಿದೆ. ಹೀಗಾಗಿ ಶ್ರೀಲಂಕಾ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಈ ಇಬ್ಬರಲ್ಲಿ ಒಬ್ಬರನ್ನು ಇಲ್ಲಿ ಪರೀಕ್ಷಿಸಲು ಬಯಸುತ್ತೇನೆ ಎಂದಿದ್ದಾರೆ.

ಸಂಭಾವ್ಯ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಕೆಎಲ್ ರಾಹುಲ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷ್ ದುಬೆ ಅಥವಾ ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಣ್ವೀರ್ ಸಿಂಗ್ ಕೈಕೊಟ್ಟ ಬಳಿಕ ‘ಡಾನ್ 3’ಗೆ ಮತ್ತೊಬ್ಬ ಸ್ಟಾರ್ – Kannada News

ಫರ್ಹಾನ್ ಅಖ್ತರ್ ನಿರ್ದೇಶನದ ಮೊದಲೆರಡು ‘ಡಾನ್’ (Don) ಸಿನಿಮಾಗಳಲ್ಲಿ ಶಾರುಖ್ ಖಾನ್ (Shah Rukh Khan) ನಾಯಕನಾಗಿ ನಟಿಸಿದ್ದರು. ‘ಡಾನ್ 3’ ಸಿನಿಮಾಕ್ಕೂ ಶಾರುಖ್ ಖಾನ್ ಅವರನ್ನೇ ಫರ್ಹಾನ್ ಅಖ್ತರ್ ಆಯ್ಕೆ ಮಾಡುತ್ತಾರೆ ಎಂದಾಗಿತ್ತು. ಆದರೆ ಫರ್ಹಾನ್ ಅಖ್ತರ್ ರಣ್ವೀರ್ ಸಿಂಗ್ ಅವರನ್ನು ನಾಯಕನನ್ನಾಗಿ ಘೊಷಿಸಿದರು. ಆದರೆ ‘ಧುರಂಧರ್’ ಸಿನಿಮಾ ಗೆದ್ದು, ರಣ್ವೀರ್ ಅವರು ಫರ್ಹಾನ್ ಅಖ್ತರ್ ಕೈಕೊಟ್ಟ ಬಳಿಕ, ಇದೀಗ ನಿರ್ದೇಶಕ ಶಾರುಖ್ ಖಾನ್ ಬಳಿ ಹೋಗಲಾದೆ ಬಾಲಿವುಡ್​​ನ ಮತ್ತೊಬ್ಬ ಸ್ಟಾರ್ ನಟನ ಮನೆ ಬಾಗಿಲಿಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಅಸಲಿಗೆ ರಣವೀರ್ ಸಿಂಗ್ ಅವರನ್ನು ಹೊಸ ಡಾನ್ ಆಗಿ ಘೋಷಿಸಿದಾಗಿನಿಂದಲೂ ಚಿತ್ರದ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. ‘ಡಾನ್ 3’ಗೆ ತಮ್ಮನ್ನು ಪರಿಗಣಿಸದ ಕಾರಣ ಶಾರುಖ್ ಖಾನ್ ಸಹ ಫರ್ಹಾನ್ ಅಖ್ತರ್ ವಿರುದ್ಧ ಮುನಿಸಿಕೊಂಡಿದ್ದಾರಂತೆ. ಇದೇ ಕಾರಣಕ್ಕೆ ಫರ್ಹಾನ್ ಅಖ್ತರ್, ‘ಡಾನ್ 3’ ಕತೆ ತೆಗೆದುಕೊಂಡು ತಮ್ಮ ಹಳೆಯ ಗೆಳೆಯ ಹೃತಿಕ್ ರೋಷನ್ ಮನೆಗೆ ಹೋಗಿದ್ದಾರೆ. ಹೃತಿಕ್ ಅವರಿಗೂ ಸಹ ಕತೆ ಇಷ್ಟವಾಗಿದೆ ಎನ್ನಲಾಗುತ್ತಿದೆ. ಹೃತಿಕ್ ರೋಷನ್ ಅವರು ಫರಾನ್ ಅಖ್ತರ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಮಾಡಿರುವ ಒಂದು ಕಾಮೆಂಟ್ ಇಂಟರ್ನೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ. ಹೃತಿಕ್ ರೋಷನ್ ಅವರು ಈ ಆಕ್ಷನ್ ಫ್ರಾಂಚೈಸಿಯಲ್ಲಿ ರಣವೀರ್ ಸಿಂಗ್ ಅವರ ಸ್ಥಾನವನ್ನು ಪಡೆಯಲು ಸ್ವತಃ ತಾವೇ ಪಿಚ್ ಮಾಡುತ್ತಿದ್ದಾರೆಯೇ ಎಂದು ನೆಟ್ಟಿಗರು ಊಹಿಸಲು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ:‘ಡಾನ್ 3’ ಮಾತ್ರವಲ್ಲ, ನಿಂತು ಹೋದ ರಣ್ವೀರ್ ಸಿಂಗ್ ಸಿನಿಮಾಗಳಿವು

ನಿರ್ದೇಶಕ ಮತ್ತು ನಟ ಫರಾನ್ ಅಖ್ತರ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾವಿರುವ ಹೊಸದೊಂದು ಫೋಟೋವನ್ನು ಹಂಚಿಕೊಂಡಿದ್ದರು. ಇದಕ್ಕೆ ಹೃತಿಕ್ ರೋಷನ್, ‘ಫರ್ಹಾನ್, ಆ ಲುಕ್ ಅದ್ಭುತವಾಗಿದೆ. ನಾವು ಶೀಘ್ರದಲ್ಲೇ ಏನಾದರೂ ಮಾಡಬೇಕಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಈ ಸಾಮಾನ್ಯ ಕಾಮೆಂಟ್ ತಕ್ಷಣವೇ ಅಭಿಮಾನಿಗಳ ಗಮನ ಸೆಳೆದಿದ್ದು, ಹೃತಿಕ್ ಅವರು ‘ಡಾನ್ 3’ ಚಿತ್ರದ ರೇಸ್‌ಗೆ ಪ್ರವೇಶಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಸಲಿಗೆ ಫರ್ಹಾನ್ ಅಖ್ತರ್ ಮೊದಲ ‘ಡಾನ್’ ಕತೆ ಬರೆಯುವ ಮುಂಚೆ ಹೃತಿಕ್ ಅವರೇ ಅದರಲ್ಲಿ ನಟಿಸಬೇಕಿತ್ತು. ಆದರೆ ಕತೆ ಬರೆಯುವಾಗ ಫರ್ಹಾನ್ ಖಾನ್​​ಗೆ ಈ ಕತೆಗೆ ಶಾರುಖ್ ಹೆಚ್ಚು ಸೂಕ್ತ ಎನಿಸಿದರಂತೆ. ಹೃತಿಕ್ ಅವರು ಸಹ ಫರ್ಹಾನ್ ಅವರ ಅಭಿಪ್ರಾಯಕ್ಕೆ ಗೌರವ ನೀಡಿದ್ದರಂತೆ ಮಾತ್ರವಲ್ಲದೆ, ‘ಡಾನ್ 2’ ಚಿತ್ರದಲ್ಲಿ ಹೃತಿಕ್ ರೋಷನ್ ಅವರು ವಿಶೇಷ ಅತಿಥಿ ಪಾತ್ರದಲ್ಲಿ ಸಹ ನಟಿಸಿದ್ದರು. ಆದರೆ ಈಗ ‘ಡಾನ್ 3’ ಮತ್ತೆ ಹೃತಿಕ್ ರೋಷನ್ ಅವರಿಗೇ ಒಲಿದು ಬಂದಿದೆ.

ಹೃತಿಕ್ ರೋಷನ್ ಪ್ರಸ್ತುತ ‘ಕ್ರಿಶ್’ ಸರಣಿಯ ಹೊಸ ಸಿನಿಮಾದ ಪ್ರೀ ಪ್ರೊಡಕ್ಷನ್​​ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಖುದ್ದು ಹೃತಿಕ್ ಅವರೇ ನಿರ್ದೇಶನ ಮಾಡಲಿದ್ದಾರೆ. ಇದರ ಜೊತೆಗೆ ‘ವಾರ್ 3’ ಹಾಗೂ ಸಿದ್ಧಾರ್ಥ್ ಆನಂದ್ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Viral: ಬೆಂಗಳೂರಲ್ಲಿ 1.4 ಲಕ್ಷ ರೂ ಸಂಬಳ ಇದ್ರೂ , ಊರಲ್ಲಿ ಸಿಗುವ 40 ಸಾವಿರದಲ್ಲೇ ನಾನು ಶ್ರೀಮಂತ; ಯುವಕ ಹೀಗೆಂದಿದ್ದೇಕೆ? – Kannada News

ಒಂದೊಳ್ಳೆ ಜಾಬ್ ಸಿಗ್ಬೇಕು, ಲೈಫ್ ಸೆಟ್ಲ್ ಮಾಡ್ಕೊಳ್ಬೇಕು ಹೀಗೆ ಸಾಕಷ್ಟು ಆಸೆ ಹೊತ್ತು ಬೆಂಗಳೂರಿಗೆ (Bengaluru) ಬರ್ತಾರೆ. ಆದ್ರೆ ದಿನ ಕಳೆದಂತೆ ನಮ್ಮ ಊರು ನೆನಪಾಗುತ್ತದೆ, ಇಲ್ಲಿನ ಬದುಕಿಗಿಂತ ತಮ್ಮ ಊರೇ ಉತ್ತಮ ಎಂದೇನಿಸುತ್ತದೆ. ಇದೀಗ ಬೆಂಗಳೂರಿನಲ್ಲಿ 1.4 ಲಕ್ಷ ರೂಪಾಯಿ ದುಡಿಯುತ್ತಿದ್ದ ಈ ಯುವಕ ತನ್ನ ಊರಲ್ಲಿ 40 ಸಾವಿರ ರೂ ಸಂಪಾದನೆ ಮಾಡ್ತಾ ಇದ್ದಾನೆ. ಕಡಿಮೆ ಸಂಬಳ ಆದ್ರೂ ತನ್ನ ಹುಟ್ಟೂರಿನಲ್ಲಿ ನೆಮ್ಮದಿ ಖುಷಿಯಿದೆಯಂತೆ. ಯುವಕ ಮಾಡಿದ ರೆಡ್ಡಿಟ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

r/ India Money ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಗೆ ಯುವಕನೊಬ್ಬ ನನ್ನ ಹುಟ್ಟೂರಿನಲ್ಲಿ ಪಟ್ಟಣದಲ್ಲಿ
40 ಸಾವಿರ ರೂ ಸಂಬಳ, ಬೆಂಗಳೂರಿನ 1.4L ಗಿಂತ ಹೆಚ್ಚು ಶ್ರೀಮಂತಿಕೆ ಎನಿಸಿದ್ದು ಯಾಕೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾನೆ.

ರೆಡ್ಡಿಟ್ ಪೋಸ್ಟ್ ಇಲ್ಲಿದೆ

ಬೆಂಗಳೂರಿನಲ್ಲಿ ತಿಂಗಳಿಗೆ 1.4 ಲಕ್ಷ ರೂಪಾಯಿ ದುಡಿಯುತ್ತಿದ್ದೆ. ದೊಡ್ಡ ಸಿಟಿಯಲ್ಲಿ ಹೆಚ್ಚು ಸಂಬಳ ಬರೀ ಪೇಪರ್ ಮೇಲಿನ ಲೆಕ್ಕ. ನೋಡೋರಿಗೆ ಲಕ್ಷ ಲಕ್ಷ, ಆದರೆ ಈ ಬೆಂಗಳೂರಿನ ಲೈಫ್ ಸ್ಟೈಲ್ ಗೆ ಕೈಯಲ್ಲಿದ್ದ ದುಡ್ಡು ಖಾಲಿಯಾಗುತ್ತದೆ. ಬೆಂಗಳೂರು ಮತ್ತು ಹಾಗೂ ತನ್ನ ಹುಟ್ಟೂರಾದ ಉದಯಪುರದ ತಿಂಗಳ ಖರ್ಚು ವೆಚ್ಚಗಳ ಬಗ್ಗೆ ಎಂದು ವಿವರಿಸಿದ್ದಾನೆ.

2BHK ಫ್ಲ್ಯಾಟ್ ಬಾಡಿಗೆ 30,000 ರೂ, ದಿನಸಿ 6,000 ರೂ, ಮನೆಗೆಲಸದವರು ಹಾಗೂ ವೈಫೈಗೆ 3,000 ರೂ, ಆನ್‌ಲೈನ್‌ ಫುಡ್‌ ಡೆಲಿವರಿ ಆಯಪ್‌ಗಳಿಗೆ 7,000 ರೂ, ಕ್ಯಾಬ್ ಗೆ 5,000 ರೂ, ವೀಕೆಂಡ್ ಪಾರ್ಟಿ, ಟ್ರಾವೆಲಿಂಗ್ 8,000 ರೂ ಎತ್ತಿಡಬೇಕಿತ್ತು. ಅದಲ್ಲದೇ, ಅಮೆಜಾನ್ ಆರ್ಡರ್‌ಗಳು, ಕ್ವಿಕ್ ಕಾಮರ್ಸ್ ಆಯಪ್‌ಗಳು, ಇನ್ನಿತರ ಖರ್ಚುಗಳು ಸೇರಿ ಎಷ್ಟು ದುಡ್ಡಿದ್ರು ಸಾಲದಾಗಿತ್ತು. ತಿಂಗಳಿಗೆ 1.4 ಲಕ್ಷ ರೂಪಾಯಿ ಸಂಬಳ ಬಂದ್ರೂ, ಖರ್ಚು ಮಾತ್ರ ವಿಪರೀತ, ದುಡ್ಡು ಮಾತ್ರ ಉಳಿತ್ತಿರಲಿಲ್ಲ ಎಂದು ಹೇಳಿದ್ದಾನೆ.

ಲಕ್ಷ ಸಂಬಳ ಇದ್ರೂ ನಗರದ ಲೈಫ್ ಸ್ಟೈಲ್ ಹಾಗೂ ಖರ್ಚುಗಳಿಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಹೀಗಾಗಿ ನನ್ನ ಹುಟ್ಟೂರು ಉದಯಪುರಕ್ಕೆ ಮರಳಿದೆ. ಊರಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಮೊದ ಮೊದಲು ಸಂಬಳ ಕಡಿಮೆಯಿತ್ತು. 40 ಸಾವಿರ ರೂ ಸಿಗ್ತಾ ಇತ್ತು. ನನಗೆ ಹೆಚ್ಚು ಶ್ರೀಮಂತನಾದ ಹಾಗೆ ಅನಿಸುತ್ತಿದೆ. ಅದಕ್ಕಿಂತ ಹೆಚ್ಚು ಖುಷಿ, ನೆಮ್ಮದಿ, ಹಣಕಾಸಿನ ಭದ್ರತೆ ನನ್ನ ಊರಲ್ಲಿ ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 1BHK ಮನೆಗೆ 45,000 ರೂ ಬಾಡಿಗೆ; ಕಠಿಣ ನಿರ್ಧಾರ ಕೈಗೊಂಡ ಉದ್ಯೋಗಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ನಿರ್ಧಾರ ನಿಮಗೆ ಸರಿಯೆನಿಸಿದರೆ ಸಾಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ದುಡ್ಡಿಕ್ಕಿಂತ ನೆಮ್ಮದಿ ಮುಖ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬೆಂಗಳೂರಿನ ಜೀವನ ಶೈಲಿ ದುಬಾರಿ, ನಿಮ್ಮ ಮಾತು ನಾನು ಒಪ್ಪುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕ್ ಉಗ್ರನ ಜತೆ ಯುವಕರಿಬ್ಬರ ನಂಟು ಬೆಸಿದಿದ್ಹೇಗೆ? ಇಲ್ಲಿದೆ ಕರ್ನಾಟಕ-ಪಾಕ್ ಜಾಲದ ರಹಸ್ಯ – Kannada News

ತುಮಕೂರು, ಜೂನ್​​ 05: ದೇಶದ ಭದ್ರತೆಗೆ ಧಕ್ಕೆ ತರಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಮೋಸ್ಟ್ ವಾಂಟೆಡ್ ಉಗ್ರ ರಾಣಾ ಉನೇನ್ ಎಂಬಾತನ ವ್ಯವಸ್ಥಿತ ಜಾಲವನ್ನು ಕೇಂದ್ರ ಗುಪ್ತಚರ ಇಲಾಖೆ ಖಚಿತ ಮಾಹಿತಿ ಆಧರಿಸಿ ತುಮಕೂರು (tumakuru) ನಗರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಪಾಕ್ ಉಗ್ರನೊಂದಿಗೆ ಕಳೆದ ಕೇವಲ 20 ದಿನಗಳಿಂದ ನಿರಂತರ ಸಂಪರ್ಕದಲ್ಲಿದ್ದು ಆಂತರಿಕ ಭದ್ರತೆಗೆ ಕುತ್ತು ತರಲು ಯತ್ನಿಸುತ್ತಿದ್ದ ಆಪಾದನೆ ಮೇಲೆ, ತುಮಕೂರಿನ ಅಲ್ಲಾಬಕ್ಷು ಹಾಗೂ ದಾವಣಗೆರೆಯಲ್ಲಿ ತಲೆಮರೆಸಿಕೊಂಡಿದ್ದ ಜಮೀರ್ ಖಾನ್ ಎಂಬ ಇಬ್ಬರು ಯುವಕರನ್ನು ಉಗ್ರ ನಿಗ್ರಹ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

ಮುಖ್ಯಾಂಶಗಳು

  • ಪಾಕ್ ಉಗ್ರನ ಜಾಲಕ್ಕೆ ಬಿದ್ದ ರಾಜ್ಯದ ಯುವಕರು
  • ಇನ್‌ಸ್ಟಾಗ್ರಾಮ್ ಟು ವಾಟ್ಸ್ ಆ್ಯಪ್ ಗ್ರೂಪ್​​​ ಮೂಲಕ ಸಂಪರ್ಕ
  • ಇಬ್ಬರು ಯುವಕರನ್ನು ಬಂಧಿಸಿದ ಪೊಲೀಸರು

ವ್ಯವಸ್ಥಿತ ಸಂಚಿಗೆ ಭಾರತೀಯ ಯುವಕರು ಟಾರ್ಗೆಟ್?

ಪಾಕಿಸ್ತಾನದ ಅದೊಂದು ವ್ಯವಸ್ಥಿತ ಸಂಚಿಗೆ ಭಾರತೀಯ ಯುವಕರು ಟಾರ್ಗೆಟ್ ಆಗಿದ್ದಾರಾ ಅನ್ನೋ ಬಲವಾದ ಅನುಮಾನ ಈಗ ಶುರುವಾಗಿದೆ. ಏಕೆಂದರೆ ಗುಪ್ತಚರ ದಳ ನೀಡಿದ ಸ್ಪೋಟಕ ಮಾಹಿತಿ ಆಧರಿಸಿ ತುಮಕೂರು ಪೊಲೀಸರು ಇಬ್ಬರು ಯುವಕರನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರು ಕೇವಲ 20 ದಿನಗಳಲ್ಲಿ ನಡೆಸಿದ ಚರ್ಚೆಗಳು, ಈಗ ಹತ್ತಾರು ಆತಂಕಕಾರಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಮುದಾಯದ ಒಗ್ಗಟ್ಟು ಮುಖ್ಯ ಎಂದು ವಾಟ್ಸ್ ಆ್ಯಪ್ ಗ್ರೂಪ್‌ಗಳನ್ನು ಮಾಡಿಕೊಂಡು ಬ್ರೈನ್ ವಾಶ್ ಮಾಡುತ್ತಿದ್ದ ಪಾಕಿಸ್ತಾನಿ ಉಗ್ರನ ಭೀಕರ ತಂತ್ರ ಈಗ ಬಯಲಾಗಿದ್ದು, ಪೊಲೀಸರ ತನಿಖೆ ತೀವ್ರಗೊಂಡಿದೆ.

ಇದನ್ನೂ ಓದಿ: ವರ್ಷಗಳಿಂದ ಪರಪ್ಪನ ಅಗ್ರಹಾರ​ ಜೈಲಿನಲ್ಲಿದ್ದ ಶಂಕಿತ ಉಗ್ರ ಚಿಕಿತ್ಸೆ ಫಲಿಸದೆ ಸಾವು!

ರಾಣಾ ಉನೇನ್​ ಈತ ಸದ್ಯ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್. ಪಾಕಿಸ್ತಾನ ಮೂಲದ ಈ ಉಗ್ರ ಭಾರತದ ಹಲವು ಮುಗ್ಧ ಯುವಕರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿ, ವಿಧ್ವಂಸಕ ಕೃತ್ಯಗಳಿಗೆ ಸಂಘಟನೆ ಕಟ್ಟುತ್ತಿದ್ದ ಅನ್ನೋ ಆಘಾತಕಾರಿ ಸತ್ಯ ಈಗ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇನ್‌ಸ್ಟಾಗ್ರಾಮ್​​ ಮುಖಾಂತರ ಪರಿಚಯ

ಅಷ್ಟಕ್ಕೂ ಪೊಲೀಸರ ಬಲೆಗೆ ಬಿದ್ದಿರುವವರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಸಾಮಾನ್ಯ ಯುವಕರು. ಇವರಿಗೆ ಕಳೆದ ಒಂದು ತಿಂಗಳ ಹಿಂದೆ ಪ್ರತ್ಯೇಕವಾಗಿ ಇನ್‌ಸ್ಟಾಗ್ರಾಮ್​​ ಮುಖಾಂತರ ರಾಣಾ ಜೊತೆ ಪರಿಚಯವಾಗಿದೆ. ನಂತರ ಎಕ್ಸ್​​ನಲ್ಲಿ ಹಲವು ಸಲ ಚಾಟ್ ಮಾಡಿದ್ದಾರೆ. ನಂತರ ವಾಟ್ಸ್ ಆ್ಯಪ್ ಗ್ರೂಪ್​​ ಒಂದಕ್ಕೆ ಸೇರಿಕೊಂಡಿದ್ದಾರೆ. ಆರಂಭದಲ್ಲಿ ಇಸ್ಲಾಂ ಧರ್ಮದ ಕುರಿತು ಸಂದೇಶ, ಪ್ರವಾದಿಗಳ ಮಾತುಗಳನ್ನು ಚರ್ಚೆ ಮಾಡಿದ್ದ ರಾಣಾ, ನಂತರ ನಾವೆಲ್ಲಾ ಒಟ್ಟಾಗಬೇಕು ಅಂತೆಲ್ಲಾ ಪ್ರಚೋದಿಸಿ, ಕ್ರಮೇಣ ದೇಶದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಚರ್ಚೆ ಆರಂಭಿಸಿದ್ದ ಎನ್ನಲಾಗಿದೆ.

ಪುಣೆ ಮೌಲ್ವಿ ಹತ್ಯೆಗೆ ಪ್ರತೀಕಾರದ ಸ್ಕೆಚ್​​

ಇನ್ನು ಒಗ್ಗಟ್ಟಿನ ಸಂದೇಶ ನೀಡಿದ್ದ ರಾಣಾ ಪುಣೆಯಲ್ಲಿ ನಡೆದಿದ್ದ ಮೌಲ್ವಿ ಹತ್ಯೆಗೆ ಪ್ರತಿಕಾರದ ಮಾತುಗಳನ್ನಾಡಿದ್ದ ಎನ್ನಲಾಗಿದೆ. ಇದಕ್ಕೆ ಬೇಕಾದ ತಯಾರಿ ಬಗ್ಗೆ ಸಹ ಚರ್ಚೆ ನಡೆಸಿದ್ದ. ನಮ್ಮ ಸಮುದಾಯದವರೆಲ್ಲಾ ಒಗ್ಗಟ್ಟಾಗಿರಬೇಕು. ಯಾರನ್ನು ಯಾವ ಕಾರಣಕ್ಕೂ ಬಿಡಬಾರದು. ಪ್ರತಿಕಾರ ಇರಬೇಕೆಂದು ಹೇಳಿದ್ದನಂತೆ. ಇನ್ನು ದೇಶದ ಹಲವೆಡೆ ರಾಣಾ ಹಿಂಬಾಲಕರನ್ನು ಹೊಂದಿದ್ದು, ಅವರಲ್ಲಿ ಒಬ್ಬ ಅಲ್ಲಾಬಕ್ಷು ಹಾಗೂ ಜಮೀರ್ ಖಾನ್​ನನ್ನು ಪರಿಚಯ ಮಾಡಿದ್ದನಂತೆ.

ದಾವಣಗೆರೆ ಎಸ್​ಪಿ ಡಾ.ಎಚ್ ಟಿ ಶೇಖರ್ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ದಾವಣಗೆರೆ ಎಸ್​ಪಿ ಡಾ.ಎಚ್ ಟಿ ಶೇಖರ್​ ಮಾತನಾಡಿದ್ದು, ತುಮಕೂರು ಪೊಲೀಸರು ಬಂದಿದ್ದರು. ಸ್ಥಳೀಯ ಪೊಲೀಸರ ಸಹಕಾರದಿಂದ ಓರ್ವ ಯುವಕನನ್ನು ವಶಕ್ಕೆ ಪಡೆದಿರುವುದು ನಿಜ. ಆದರೆ ಇದರ ಬಗ್ಗೆ ಹೆಚ್ಚಿನ‌ ಮಾಹಿತಿ ತುಮಕೂರು ಪೊಲೀಸರಿಗೆ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪ: ಕೋಲಾರದ ಬಾಲಕ ಅರೆಸ್ಟ್

ಸದ್ಯ ರಾಣಾ ಜೊತೆ ಈ ಇಬ್ಬರು ಯುವಕರ ಸಂಪರ್ಕದ ಮಾಹಿತಿ ತಿಳಿದ ಗುಪ್ತಚರ ಇಲಾಖೆ ತುಮಕೂರು ನಗರ ಪೊಲೀಸರಿಗೆ ಮಾಹಿತಿ ನೀಡಿತ್ತು. ಮಾಹಿತಿ ಆಧರಿಸಿ ತುಮಕೂರಿನಲ್ಲಿ ಅಲ್ಲಾಬಕ್ಷು ಹಾಗೂ ದಾವಣಗೆರೆಯಲ್ಲಿ ಜಮೀರ್ ಖಾನ್​​ನನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ರಾಣಾನ ಹಿನ್ನೆಲೆ ಹಾಗೂ ಯಾವ ಸಂಘಟನೆಯಲ್ಲಿ ಈತ ತೊಡಗಿದ್ದಾನೆಂಬ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆ ಚುರುಕುಗೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:22 pm, Fri, 5 June 26

Source link

‘ಜನ ನಾಯಗನ್’: ವಿತರಕರಿಗೆ ಹಣ ಮರಳಿಸುವಂತೆ ನಿರ್ಮಾಪಕರಿಗೆ ವಿಜಯ್ ಸೂಚನೆ – Kannada News

ವಿಜಯ್ (Vijay) ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಇನ್ನೂ ಬಿಡುಗಡೆ ಆಗಿಲ್ಲ. ಜನವರಿ ತಿಂಗಳಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ರಾಜಕೀಯ ಕುತಂತ್ರಗಳಿಗೆ ಸಿಲುಕಿ ಇನ್ನೂ ಬಿಡುಗಡೆ ಆಗಿಲ್ಲ. ವಿತರಕರು, ಪ್ರದರ್ಶಕರು ನಿರ್ಮಾಪಕರಿಗೆ ಭಾರಿ ಮೊತ್ತದ ಹಣ ಕೊಟ್ಟು ಸಿನಿಮಾ ಬಿಡುಗಡೆ ಮಾಡಲು ಕಾಯುತ್ತಿರುವಾಗ, ಸಿನಿಮಾದ ಬಿಡುಗಡೆಯನ್ನು ಹಠಾತ್ತಾಗಿ ತಡೆ ಹಿಡಿಯಲಾಗಿತ್ತು. ಹಣ ಕೊಟ್ಟ ನಿರ್ಮಾಪಕರು ತಿಂಗಳಾನುಗಟ್ಟಲೆ ಕಾದರೂ ಸಹ ಸಿನಿಮಾ ಬಿಡುಗಡೆ ಆಗಿಲ್ಲ. ಇದೀಗ ವಿಜಯ್ ಸೂಚನೆ ಮೇರೆಗೆ ನಿರ್ಮಾಪಕರು ವಿತರಕರ ಹಣ ಮರಳಿಸಿದ್ದಾರೆ ಎನ್ನಲಾಗುತ್ತಿದೆ.

ಕೆವಿಎನ್ ನಿರ್ಮಾಣ ಸಂಸ್ಥೆಯು ‘ಜನ ನಾಯಗನ್’ ನಿರ್ಮಾಣ ಮಾಡಿದ್ದು, ವಿತರಕರಿಂದ ಹಣ ಪಡೆದು ಸಾಕಷ್ಟು ಮಂದಿಗೆ ಸಿನಿಮಾದ ಬಿಡುಗಡೆ ಹಕ್ಕು ನೀಡಿತ್ತು. ಆದರೆ ಸಿನಿಮಾ ಬಿಡುಗಡೆ ಮುಂದೂಡಿ ತಿಂಗಳುಗಳೇ ಕಳೆದರೂ ಸಹ ಸಿನಿಮಾ ಬಿಡುಗಡೆ ಬಗ್ಗೆ ಯಾವುದೇ ಖಾತ್ರಿ ಸಿಗುತ್ತಿಲ್ಲ. ಹೀಗಾಗಿ ವಿತರಕರಿಗೆ ಹಣ ಮರಳಿಸುವಂತೆ ವಿಜಯ್, ನಿರ್ಮಾಪಕರಿಗೆ ಹೇಳಿದ್ದು, ಅದರನ್ವಯ, ನಿರ್ಮಾಣ ಸಂಸ್ಥೆಯೂ ಸಹ ವಿತರಕರಿಗೆ ಹಣ ಮರಳಿಸಿದೆ ಎನ್ನಲಾಗಿದೆ.

ಇದನ್ನೂ ಓದಿ:ಸಿಎಂ ವಿಜಯ್ ಭೇಟಿ ಮಾಡಿದ ‘ಕರುಪ್ಪು’ ಸಿನಿಮಾದ ನಿರ್ದೇಶಕ ಆರ್.ಜೆ. ಬಾಲಾಜಿ

ಕೆವಿಎನ್ ನಿರ್ಮಾಣ ಸಂಸ್ಥೆಯ ಬ್ಯುಸಿನೆಸ್ ಹೆಡ್ ಆಗಿರುವ ಮೋಹಿತ್ ಅವರು ಮಾಧ್ಯಮಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾವು ಎಲ್ಲ ವಿತರಕರಿಗೆ ಹಣ ಮರಳಿಸಿರುವುದಾಗಿ ಹೇಳಿದ್ದಾರಂತೆ. ‘ಸಿನಿಮಾ ಬಿಡುಗಡೆ ಬಗ್ಗೆ ದಿನಾಂಕ ನಿಗದಿ ಆಗದೇ ಇರುವ ಕಾರಣಕ್ಕಾಗಿ, ಚಲನಚಿತ್ರ ವಿತರಕರಿಗೆ ಹಣವನ್ನು ಮರುಪಾವತಿಸಲು ನಿರ್ಧರಿಸಿದ್ದೇವೆ. ಅವರನ್ನು ಕಾಯುವಂತೆ ಮಾಡುವುದು ಅನ್ಯಾಯ ಎಂದು ನಾವು ಭಾವಿಸಿದ್ದೇವೆ, ಆದರೆ ನಾವು ಇನ್ನೂ ಸಂಭವನೀಯ ಬಿಡುಗಡೆ ದಿನಾಂಕಕ್ಕಾಗಿ ಕಾಯುತ್ತಿದ್ದೇವೆ’ ಎಂದಿದ್ದಾರೆ. ಕೆವಿಎನ್ ಅವರ ಈ ಉತ್ತಮ ನಿರ್ಧಾರದ ಹಿಂದೆ ವಿಜಯ್ ಇದ್ದಾರೆ ಎನ್ನಲಾಗುತ್ತಿದೆ.

ವಿಜಯ್ ಅವರು ರಾಜಕೀಯ ಪಕ್ಷ ಘೋಷಿಸಿದ ಬಳಿಕ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುಂಚೆ ‘ಜನ ನಾಯಗನ್’ ತಮ್ಮ ಕೊನೆಯ ಸಿನಿಮಾ ಎಂದಿದ್ದರು. ಕೆವಿಎನ್ ಅವರು ಸಿನಿಮಾಕ್ಕೆ ಬಂಡವಾಳ ಹೂಡಿ, ಎಚ್ ವಿನೋದ್ ನಿರ್ದೇಶನ ಮಾಡಿದ್ದ ‘ಜನ ನಾಯಗನ್’ ಅದ್ಧೂರಿಯಾಗಿ ನಿರ್ಮಾಣವಾಗಿತ್ತು. ಜನವರಿ ತಿಂಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಹಿಂದಿನ ದಿನ ಸಿಬಿಎಫ್​​ಸಿಯು ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಕೆವಿಎನ್ ನಿರ್ಮಾಣ ಸಂಸ್ಥೆ, ಸಿಬಿಎಫ್​​ಸಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿತಾದರೂ ಅದು ಉಪಯೋಗವಾಗಲಿಲ್ಲ. ಈಗ ವಿಜಯ್ ಸಿಎಂ ಆಗಿದ್ದಾರೆ. ಆದರೂ ಸಹ ಈ ವರೆಗೆ ಸಿನಿಮಾ ಬಿಡುಗಡೆಗೆ ಅನುಮತಿ ದೊರೆತಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಭಾರತ- ಅಫ್ಘನ್ ಟೆಸ್ಟ್ ಪಂದ್ಯ ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್​ನಲ್ಲಿ ನೇರಪ್ರಸಾರ? – Kannada News

ಟೀಂ ಇಂಡಿಯಾ ಬರೋಬ್ಬರಿ 193 ದಿನಗಳ ನಂತರ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗಿದೆ. ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಈ ಮಾದರಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದು ಕೇವಲ ಎರಡನೇ ಬಾರಿ. 2018 ರಲ್ಲಿ ಬೆಂಗಳೂರಿನಲ್ಲಿ ಉಭಯ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯ ನಡೆದಿತ್ತು, ಅಲ್ಲಿ ಭಾರತ ತಂಡ ಏಕಪಕ್ಷೀಯ ಪ್ರದರ್ಶನ ನೀಡಿ ಇನ್ನಿಂಗ್ಸ್ ಮತ್ತು 262 ರನ್‌ಗಳ ಅದ್ಭುತ ಜಯ ಸಾಧಿಸಿತು. ಈಗ, ಎಂಟು ವರ್ಷಗಳ ದೀರ್ಘ ಕಾಯುವಿಕೆಯ ನಂತರ, ಈ ಎರಡೂ ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೆ ಮುಖಾಮುಖಿಯಾಗಲು ಸಜ್ಜಾಗಿವೆ.

ಮುಖಾಮುಖಿ ದಾಖಲೆ ಹೇಗಿದೆ?

ಭಾರತ ತಂಡವು ಕಳೆದ ವರ್ಷ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿತು. ಅಂದಿನಿಂದ, ತಂಡವು ನಿರಂತರವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದೆ. ಹೀಗಾಗಿ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯವು ಆಟಗಾರರು ಮತ್ತು ಅಭಿಮಾನಿಗಳಿಗೆ 193 ದಿನಗಳ ಬರವನ್ನು ಕೊನೆಗೊಳಿಸಲಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ, ಯುವ ಮತ್ತು ಅನುಭವಿ ಆಟಗಾರರಿಂದ ತುಂಬಿರುವ ಭಾರತೀಯ ತಂಡವು ಈ ಪಂದ್ಯವನ್ನು ಆಡಲು ಸಜ್ಜಾಗಿದೆ. ಈ ಪಂದ್ಯವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಭಾಗವಾಗಿಲ್ಲದಿದ್ದರೂ, ಎರಡೂ ತಂಡಗಳು ತಮ್ಮ ರೆಡ್-ಬಾಲ್ ಸಿದ್ಧತೆಗಳನ್ನು ಪರೀಕ್ಷಿಸಲು ಇದು ಅತ್ಯುತ್ತಮ ವೇದಿಕೆಯಾಗಿದೆ.

IND vs AFG: ಟೀಂ ಇಂಡಿಯಾಗೆ ಆಘಾತ; ಟೆಸ್ಟ್ ಪಂದ್ಯಕ್ಕೆ ಸ್ಟಾರ್ ವೇಗಿ ಅಲಭ್ಯ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಜೂನ್ 6 ರಿಂದ ಆರಂಭವಾಗಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಎಷ್ಟು ಗಂಟೆಗೆ ಆರಂಭ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 9:30 ಕ್ಕೆ ಆರಂಭವಾಗಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯವನ್ನು ಎಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link