ಷೇರುಪೇಟೆ ಮೇಲೆ ಪರಿಣಾಮ ಬೀರಬಲ್ಲ ಪ್ರಮುಖ ಬಜೆಟ್ ಘೋಷಣೆಗಳು – Kannada News | Union Budget 2026 27, key announcements having impact on markets
ನವದೆಹಲಿ, ಫೆ. 1: ಈ ಬಾರಿಯ ಬಜೆಟ್‌ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಸರ್ಕಾರದ ಬಂಡವಾಳ ವೆಚ್ಚವನ್ನು (Capital Expenditure) ಗಣನೀಯವಾಗಿ ಹೆಚ್ಚಿಸಲಾಗಿದೆ. ಕೆಲ ಆದಾಯ ತೆರಿಗೆಯಲ್ಲಿ ಮಾರ್ಪಾಡು ಮಾಡಲಾಗಿದೆ. ಬಂಡವಾಳ ಹಿಂತೆಗೆತದ ಗುರಿಯನ್ನು (Divestment target) ಎರಡಕ್ಕೂ ಹೆಚ್ಚು ಪಟ್ಟು ಹೆಚ್ಚಿಸಲಾಗಿದೆ. ನಿರ್ಮಲಾ ಸೀತಾರಾಮನ್ (Nirmala Sitharaman) ತಮ್ಮ 9ನೇ ಬಜೆಟ್‌ನಲ್ಲಿ (2026-27) ಷೇರು ಹೂಡಿಕೆದಾರರಿಗೆ ಮುಖ್ಯವೆನಿಸುವ ಕೆಲ ಘೋಷಣೆಗಳು ಇಂತಿವೆ: ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ನಲ್ಲಿ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಅಥವಾ ಎಸ್ಟಿಟಿಯನ್ನು ಶೇ….