Headlines

ವಿಶ್ವ ಕ್ರಿಕೆಟ್​ನಲ್ಲಿ ಈಗ ವೈಭವ್​ದೇ ಮಾತು; ಟೆಸ್ಟ್​ಗೆ ಆಯ್ಕೆ ಮಾಡಿ ಎಂದ ದಿಗ್ಗಜ ಕ್ರಿಕೆಟಿಗರು – Kannada News

ಕೇವಲ 15ನೇ ವರ್ಷಕ್ಕೆ ತನ್ನ ಆಟದ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಸದ್ದು ಮಾಡುತ್ತಿರುವ ವೈಭವ್ ಸೂರ್ಯವಂಶಿ (Vaibhav Suryavanshi), 2026 ರ ಐಪಿಎಲ್​ನಲ್ಲಿ 750 ಕ್ಕೂ ಹೆಚ್ಚು ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಗೆದ್ದಿದ್ದಲ್ಲದೆ ಅತಿ ಕಡಿಮೆ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಇದರ ಜೊತೆಗೆ ಈ ಸೀಸನ್​ನಲ್ಲಿ ಅತ್ಯಧಿಕ 5 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು. ವೈಭವ್ ಅವರ ಆಟಕ್ಕೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ. ಮಾಜಿ ಕ್ರಿಕೆಟಿಗರು ಕೂಡ…

Read More

ಸಿಮ್ ಸ್ವಾಪಿಂಗ್ ಹುಷಾರ್..! ದಿಢೀರನೇ ಸಿಮ್ ಡೀಆ್ಯಕ್ಟಿವೇಟ್ ಆಯ್ತು, ನೋಡನೋಡುತ್ತಿದ್ದಂತೆ ಬ್ಯಾಂಕ್ ಖಾತೆಯಿಂದ ಹಣ ಮಾಯ ಆಯ್ತು – Kannada News

ಬೆಂಗಳೂರು, ಜೂನ್ 5: ಉದ್ಯಾನನಗರಿಯಲ್ಲಿ ಅತ್ಯಂತ ಶಾಕಿಂಗ್ ಆದ ‘ಸಿಮ್ ಸ್ವ್ಯಾಪ್’ (SIM Swap) ಅಥವಾ ಸಿಮ್ ಪೋರ್ಟಿಂಗ್ ಸೈಬರ್ ವಂಚನೆ ನಡೆದಿದೆ. ಸಂತ್ರಸ್ತ ವ್ಯಕ್ತಿಯ ಮೊಬೈಲ್ ಸಿಮ್ ಅನ್ನು ಆತನ ಅರಿವಿಲ್ಲದೆಯೇ ಬೇರೆ ನೆಟ್ವರ್ಕ್​ಗೆ ಪೋರ್ಟ್ ಮಾಡಲಾಗಿದೆ. ಅದಾಗಿ ಕೆಲವೇ ದಿನಗಳಲ್ಲಿ ಆತನ ಬ್ಯಾಂಕ್ ಅಕೌಂಟ್​ನಿಂದ 7.2 ಲಕ್ಷ ರೂ ಮಂಗಮಾಯವಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿಯಾದ ಬಿಹಾರ ಮೂಲದ ಕಮಲೇಶ್ ಕುಮಾರ್ ಎಂಬಾತ ಸಂತ್ರಸ್ತ ವ್ಯಕ್ತಿ. ಇವರು ನೀಡಿರುವ ದೂರಿನ ಪ್ರಕಾರ ಮೇ 25ರಂದು…

Read More

ರಾಮಲಿಂಗಾ ರೆಡ್ಡಿ ರಾಜೀನಾಮೆ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಹೆಚ್​ಕೆ ಪಾಟೀಲ್ ಶಾಕಿಂಗ್ ಮಾತು – Kannada News

ಬೆಂಗಳೂರು, ಜೂನ್ 5: ಖಾತೆ ಹಂಚಿಕೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ (Congress) ಪಕ್ಷದಲ್ಲಿ ಸ್ಫೋಟಗೊಂಡಿರುವ ಅಸಮಾಧಾನದ ಜ್ವಾಲೆ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ದಿಢೀರ್ ರಾಜೀನಾಮೆ ನಿರ್ಧಾರವು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಈ ಕುರಿತು ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ಹೆಚ್​​ಕೆ ಪಾಟೀಲ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಲಿಂಗಾ ರೆಡ್ಡಿ ರಾಜೀನಾಮೆ ನಡೆ ಸರ್ಕಾರ ಹಾಗೂ ಪಕ್ಷದ ನಾಯಕತ್ವಕ್ಕೆ ಒಂದು ದೊಡ್ಡ ಎಚ್ಚರಿಕೆ…

Read More

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಿರೋಧ, 1 ಪೀಠಕ್ಕೆ ಮೂರು ಜಿಲ್ಲೆ ನಡುವೆ ಹಗ್ಗ ಜಗ್ಗಾಟ – Kannada News

ಕಾರವಾರ, (ಜೂನ್ 04): ಸದ್ಯ ಕರ್ನಾಟಕದಲ್ಲಿ (Karnataka) ಕಲಬುರಗಿ ಹಾಗೂ ಧಾರವಾಡ ಹೈಕೋರ್ಟ್​​​ ಪೀಠ (High Court Bench) ಇದ್ದು, ಇದೀಗ ಕರಾವಳಿ (Karavali) ಹಾಗೂ ಮಲೆನಾಡು (malenadu) ಭಾಗದ ಜನರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಮಂಗಳೂರಿನಲ್ಲಿ ಮತ್ತೊಂದು ಹೈಕೋರ್ಟ್ ಪೀಠ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದೆ. ಆದ್ರೆ, ಮಂಗಳೂರಿನಲ್ಲಿ ಸ್ಥಾಪನೆ ಮಾಡುವುದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗಿವೆ. ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಜನರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಆಗಬೇಕೆಂದು ಆಗ್ರಹಿಸಿದ್ದಾರೆ. ಹೀಗಾಗಿ ಒಂದು ಪೀಠಕ್ಕೆ ಮೂರು…

Read More

ಕೊನೆಯ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.8 ಏರಿಕೆ; ಇಡೀ ವರ್ಷದಲ್ಲಾದ ಆರ್ಥಿಕ ಬೆಳವಣಿಗೆ ಶೇ. 7.7 – Kannada News

ನವದೆಹಲಿ, ಜೂನ್ 5: ಕಳೆದ ಬಾರಿಯ ಹಣಕಾಸು ವರ್ಷದಲ್ಲಿ (2025-26) ಭಾರತದ ಆರ್ಥಿಕತೆ ಶೇ. 7.7ರಷ್ಟು ಹೆಚ್ಚಳ ಕಂಡಿದೆ. ಇದು ಸರ್ಕಾರ ಶುಕ್ರವಾರ (ಜೂನ್ 5) ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಿಂದ ತಿಳಿದುಬಂದಿದೆ. 2024-25ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (India GDP) ಶೇ. 7.1ರಷ್ಟು ಹಿಗ್ಗಿತ್ತು. 2025-26ರಲ್ಲಿ ಅದನ್ನೂ ಮೀರಿಸಿದ ಬೆಳವಣಿಗೆ ಸಾಧಿಸಿದೆ. 2025-26ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.8ರ ವಾರ್ಷಿಕ ದರದಲ್ಲಿ ಬೆಳವಣಿಗೆ ಹೊಂದಿದೆ ಎಂದು ದತ್ತಾಂಶದಲ್ಲಿ ತಿಳಿಸಲಾಗಿದೆ. ಮೊದಲ…

Read More

ಪೂಜೆಯ ಬಳಿಕ ಆರತಿ ತಟ್ಟೆಗೆ ಕಡ್ಡಾಯವಾಗಿ ಹಣ ಹಾಕಬೇಕು ಯಾಕೆ? ಇದರ ಹಿಂದೆ ಇದೆ ಸೈನ್ಸ್ – Kannada News

ಸನಾತನ ಹಿಂದೂ ಧರ್ಮದಲ್ಲಿ ದೇವಸ್ಥಾನಗಳಿಗಾಗಲಿ ಅಥವಾ ಮನೆಯಲ್ಲಾಗಲಿ ಪೂಜೆ ಮುಗಿದ ನಂತರ ದೇವರಿಗೆ ಮಹಾಮಂಗಳಾರತಿ ಮಾಡುವುದು ಕಡ್ಡಾಯ. ಆದರೆ, ಆರತಿ ತಟ್ಟೆಯನ್ನು ಭಕ್ತರ ಮುಂದೆ ತಂದಾಗ ಅದಕ್ಕೆ ಕಡ್ಡಾಯವಾಗಿ ಹಣ ಅಥವಾ ನಾಣ್ಯಗಳನ್ನು ಹಾಕುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ. ಇದು ಕೇವಲ ಮೂಢನಂಬಿಕೆಯಲ್ಲ ಅಥವಾ ಬಲವಂತದ ಆಚರಣೆಯಲ್ಲ. ಇದರ ಹಿಂದೆ ಆಳವಾದ ಧಾರ್ಮಿಕ, ಐತಿಹಾಸಿಕ ಮತ್ತು ವೈಜ್ಞಾನಿಕ ಕಾರಣಗಳಿವೆ ಎಂದು ಶಾಸ್ತ್ರ ಹೇಳಿದೆ. ಅಹಂಕಾರದ ತ್ಯಾಗ ಮತ್ತು ಋಣ ಮುಕ್ತಿ ಶಾಸ್ತ್ರಗಳ ಪ್ರಕಾರ, ಭಗವಂತನು ನಮಗೆ…

Read More

ಅಸ್ಸಾಂನಲ್ಲಿ ಕ್ಯಾಬಿನೆಟ್ ವಿಸ್ತರಣೆ; ಹಿಮಂತ ಬಿಸ್ವ ಶರ್ಮಾ ಸಂಪುಟಕ್ಕೆ 12 ನೂತನ ಸಚಿವರ ಸೇರ್ಪಡೆ – Kannada News

ಗುವಾಹಟಿ, ಜೂನ್ 5: ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ನೇತೃತ್ವದ ಎನ್‌ಡಿಎ (NDA) ಸರ್ಕಾರದ ಸಂಪುಟ ವಿಸ್ತರಣೆಯಾಗಿದ್ದು, ಒಟ್ಟು 12 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಯ ಅಶ್ವಿನಿ ರಾಯ್ ಸರ್ಕಾರ್, ನಿಲಿಮಾ ದೇವಿ ಮತ್ತು ಸುಶಾಂತ ಬೊರ್ಗೊಹೈನ್ ಅವರಂತಹ ಹೊಸ ಮುಖಗಳಿಗೆ ಮೊದಲ ಬಾರಿಗೆ ಸಚಿವ ಸ್ಥಾನ ನೀಡಲಾಗಿದೆ. ಅಸ್ಸಾಂ ವಿಧಾನಸಭೆಯ ಮಾಜಿ ಸ್ಪೀಕರ್ ಬಿಸ್ವಜಿತ್ ದೈಮರಿ ಅವರು ಕೂಡ ನೂತನ…

Read More

ರಾಹುಲ್ ಗಾಂಧಿ ಮಹತ್ವದ ಭರವಸೆ: ಐ ಆ್ಯಮ್​ ಹ್ಯಾಪಿ ಎಂದ ಸಚಿವ ಕೆ.ಹೆಚ್​.ಮುನಿಯಪ್ಪ – Kannada News

ಬೆಂಗಳೂರು, (ಜೂನ್ 05): ಡಿಕೆ ಶಿವಕುಮಾರ್ (DK Shivakumar) ಸರ್ಕಾರದಲ್ಲಿ ಖಾತೆ (Ministers portfolio )ಕ್ಯಾತೆ ಶುರುವಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕೈತಪ್ಪಿದ್ದಕ್ಕೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರ ಹಠಾತ್ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಹಿಂದೆ ನಿಭಾಯಿಸಿದ್ದ ಆಹಾರ ಇಲಾಖೆ ಜವಾಬ್ದಾರಿ ನೀಡಿದ್ದಕ್ಕೆ ಮತ್ತೊಬ್ಬ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಖುದ್ದು ರಾಹುಲ್ ಗಾಂಧಿ ಬಳಿಯೇ ತಮ್ಮ ಅಸಮಾಧಾನ ತೋಡಿಕೊಂಡಿದ್ದು, ಈ ವೇಳೆ…

Read More

ಶೂಟಿಂಗ್​​ನಲ್ಲಿ ಕುದುರೆ ಮೇಯಿಸಿದ ಅಕ್ಷಯ್, ಬಕರಾ ಆದ ಹಾಸ್ಯನಟ ರಾಜ್​ಪಾಲ್ – Kannada News

ಅಕ್ಷಯ್ ಕುಮಾರ್​ (Akshay Kumar) ವರ್ಷಕ್ಕೆ ಅತಿ ಹೆಚ್ಚು ಸಿನಿಮಾ ಮಾಡುವ ಭಾರತದ ಸ್ಟಾರ್ ನಟ. ಇತರೆ ಸ್ಟಾರ್ ನಟರುಗಳು ಒಂದು ಸಿನಿಮಾ ಮಾಡಲು ಎರಡು-ಮೂರು ವರ್ಷ ತೆಗೆದುಕೊಂಡರೆ, ಅಕ್ಷಯ್ ಕುಮಾರ್ ಒಂದೇ ವರ್ಷದಲ್ಲಿ ಮೂರು ನಾಲ್ಕು ಸಿನಿಮಾ ಮುಗಿಸಿ ಇನ್ನೆರಡರ ಶೂಟಿಂಗ್ ಪ್ರಾರಂಭಿಸಿರುತ್ತಾರೆ. ಶೂಟಿಂಗ್ ವಿಷಯದಲ್ಲಿ ಬಲು ಶಿಸ್ತಿನ ವ್ಯಕ್ತಿ ಆಗಿರುವ ಅಕ್ಷಯ್ ಕುಮಾರ್, ಬೆಳಿಗ್ಗೆ 6 ಗಂಟೆಗೆ ಶೂಟಿಂಗ್ ಆರಂಭಿಸಿದರೆ ಸಂಜೆ 4 ಅಥವಾ 5 ಕ್ಕೆ ಮುಗಿಸಿ ಬಿಡುತ್ತಾರೆ. ಶೂಟಿಂಗ್ ಸಮಯದಲ್ಲಿಯೂ ಸಹ…

Read More

SSC Recruitment 2026: ಹುದ್ದೆಗಳ ಸಂಖ್ಯೆ 731ರಿಂದ 1170ಕ್ಕೆ ಏರಿಕೆ; ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶ! – Kannada News

ಕೇಂದ್ರ ಸರ್ಕಾರಿ ಉದ್ಯೋಗImage Credit source: Pinterest ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸಿಬ್ಬಂದಿ ಆಯ್ಕೆ ಆಯೋಗ (SSC) ಸಿಹಿಸುದ್ದಿ ನೀಡಿದೆ. ದೇಶಾದ್ಯಂತದ ವಿವಿಧ ಕೇಂದ್ರ ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಮತ್ತು ಕಚೇರಿಗಳಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ಗ್ರೇಡ್ ‘ಡಿ’ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕಟಿಸಿದ್ದ ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ಹಿಂದೆ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದ ಅಧಿಸೂಚನೆಯಲ್ಲಿ ಒಟ್ಟು 731 ಹುದ್ದೆಗಳ ನೇಮಕಾತಿ ಘೋಷಿಸಲಾಗಿತ್ತು….

Read More