Category Archives: Blog

Your blog category

ರಾಮಲಿಂಗಾರೆಡ್ಡಿಗೆ ಮಾತು ಕೊಟ್ಟಿದ್ದು ನಿಜ: ಖಾತೆ ಹಂಚಿಕೆ ಒಳ ರಹಸ್ಯ ಬಿಚ್ಚಿಟ್ಟ ಡಿಕೆ ಶಿವಕುಮಾರ್ – Kannada News

ಬೆಂಗಳೂರು, (ಜೂನ್ 05):ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರೇ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ಸಚಿವ ರಾಮಲಿಂಗಾರೆಡ್ಡಿಗೆ (Ramalinga Reddy) ಮಾತು ಕೊಟ್ಟಿದ್ದರು. ಆದ್ರೆ, ಕೊನೆಕ್ಷಣದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆ (Bengaluru Development Portfolio)  ಮತ್ತೋರ್ವ ಪ್ರಭಾವಿ ನಾಯಕ ಕೃಷ್ಣಭೈರೇಗೌಡ ಪಾಲಾಗಿದೆ. ಇದರಿಂದ ಅಸಮಾಧಾನಗೊಂಡ ಪ್ರಭಾವಿ ನಾಯಕ, ಹಿರಿಯ ಶಾಸಕ ಆಗಿರೋ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾರೆಡ್ಡಿ, ಡಿಕೆಶಿ ಕೊಟ್ಟ ಮಾತನ್ನೇ ಉಲ್ಲೇಖಿಸಿದ್ದು, ಅವತ್ತೇ ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನಿನಗೆ ಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ರು. ಆದ್ರೆ ಇದೀಗ ನೋಡಿದ್ರೆ ಜಲಸಂಪನ್ಮೂಲ ಕೊಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಇದೀಗ ಸ್ವತಃ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ರಾಮಲಿಂಗಾರೆಡ್ಡಿಗೆ ನಾವು ಮಾತು ಕೊಟ್ಟಿದ್ದು ನಿಜ. ನಾನು ನನ್ನ ತಮ್ಮ ಹೋಗಿ ಮಾತು ಕೊಟ್ಟಿದ್ದೇವು ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಖಾತೆ ಕೈತಪ್ಪಿರುವ ಬಗ್ಗೆಯೂ ಬಿಚ್ಚಿಟ್ಟಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?

ರಾಮಲಿಂಗಾರೆಡ್ಡಿ ರಾಜೀನಾಮೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನಾನು ನನ್ನ ತಮ್ಮ ಹೋಗಿ ಮಾತನಾಡಿದ್ದು ನಿಜ. ಬೆಂಗಳೂರು ಅಭಿವೃದ್ಧಿ ಖಾತೆ ಕೊಡಿಸುತ್ತೇವೆ ಎಂದು ಹೇಳಿದ್ವಿ. ಆದರೆ ಹೈಕಮಾಂಡ್ ನಿರ್ಧಾರ ಏನು ಮಾಡೋದು ಎಂದು ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ. ಈ ಮೂಲಕ ನಗರಾಭಿವೃದ್ಧಿ ಖಾತೆಯನ್ನು ಕೃಷ್ಣಭೈರೇಗೌಡ ಅವರಿಗೆ ಕೊಟ್ಟಿರುವುದು ಹೈಕಮಾಂಡ್ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ: ರಾಮಲಿಂಗಾರೆಡ್ಡಿ ರಾಜೀನಾಮೆ: ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಯಾಕಿಷ್ಟು ಡಿಮ್ಯಾಂಡ್?

ರಾಮಲಿಂಗಾರೆಡ್ಡಿಯವರು ಹೊರಗಡೆ ಇದ್ದಾರೆ. ಖುದ್ದಾಗಿ ನಾನೇ ಭೇಟಿಯಾಗಿ ಮಾತನಾಡ್ತೇನೆ. ಮುನಿಯಪ್ಪ ಜೊತೆ ಮಾತನಾಡಿದ್ದು ಆಯ್ತು, ರಾಹುಲ್‌ಗಾಂಧಿ ಹೇಳಿದ್ದು ಆಯ್ತು. ಮುನಿಯಪ್ಪ ಈಗ ಖುಷಿಯಾಗಿದ್ದಾರೆ.
ಯಾವ ಖಾತೆ ಕೊಟ್ಟರೂ ಕೆಲಸ ಮಾಡ್ತೀನಿ ಅಂದಿದ್ಧಾರೆ ಎಂದು ಹೇಳಿದರು.

ಕೇಳದೇ ಕೃಷ್ಣಭೈರೇಗೌಡ ಸಿಕ್ತಾ ಪ್ರಬಲ ಖಾತೆ?

ಸಚಿವರಾದ ಬಳಿಕ ಮಾಧ್ಯಮಳಿಗೆ ಪ್ರತಿಕ್ರಿಯಿಸಿದ್ದ ಕೃಷ್ಣಭೈರೇಗೌಡ, ಕಂದಾಯ ಇಲಾಖೆಯಲ್ಲಿ ಹಲವು ಕೆಲಸಗಳು ಅರ್ಧಕ್ಕೆ ನಿಂತಿವೆ. ಹೀಗಾಗಿ ಕಂದಾಯ ಇಲಾಖೆ ಕೊಟ್ಟರೇ ಅವುಗಳನ್ನು ಪೂರ್ಣಗೊಳಿಸುವ ಗುರಿ ಇದೆ ಎಂದಿದ್ದರು. ಹೀಗೆ ಅವರೇ ಕಂದಾಯ ಕೊಟ್ರೆ ಸಾಕು ಎಂದಿದ್ದಾಗ ಏಕಾಏಕಿ ಪ್ರಬಲ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಕ್ಕಿದ್ಹೇಗೆ ಎನ್ನುವುದು ನಿಗೂಢವಾಗಿದೆ. ಮೂಲಗಳ ಪ್ರಕಾರ, ಕೃಷ್ಣಭೈರೇಗೌಡ ಅವರು ಸೈಲೆಂಟ್ ಆಗಿದ್ದರೂ ಸಹ ಅವರು ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ. ಅವರ ಕೆಲಸ ಕಾರ್ಯಗಳು, ಇಲಾಖೆಯ ಕಾರ್ಯವೈಖರಿಯಿಂದ ಹೈಕಮಾಂಡ್ ಕೃಷ್ಣಭೈರೇಗೌಡ ಅವರನ್ನ ಮೆಚ್ಚಿಕೊಂಡಿದೆ. ಹೀಗಾಗಿ ಕೃಷ್ಣಭೈರೇಗೌಡ ಅವರಿಗೆ ಹೈಕಮಾಂಡ್ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿದೆ ಎಂದು ಹೇಳಲಾಗುತ್ತಿದೆ.

ಯಾರ ಸಂಪರ್ಕಕ್ಕೆ ಸಿಗದ ರಾಮಲಿಂಗಾರೆಡ್ಡಿ

ರಾಹುಲ್ ಗಾಂಧಿ, ಸುರ್ಜೆವಾಲ, ವೇಣುಗೋಲಾಲ್, ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಬಂದಿದ್ದು, ಕರೆದು ಮನವೊಲಿಸುವ ಯತ್ನ  ಮಾಡುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ರಾಮಲಿಂಗಾರೆಡ್ಡಿ ಫೋನ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಮೂಲಕಗಳ ಪ್ರಕಾರ ಬೆಂಗಳೂರು ಬಿಟ್ಟು ತಮಿಳುನಾಡು ಕಡೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಕೊಟ್ಟ ಮಾತಿನಂತೆ ಖಾತೆ ಕೊಟ್ಟಿಲ್ಲವೆಂದು ಮುನಿಸಿಕೊಂಡಿರುವ ರಾಮಲಿಂಗಾರೆಡ್ಡಿ ಅವರನ್ನು ಸಿಎಂ ಸಮಾಧಾನಪಡಿಸುವ ಮಾತುಗಳನ್ನಾಡಿದ್ದಾರೆ. ಆದ್ರೆ, ರಾಮಲಿಂಗಾರೆಡ್ಡಿ ಮನವೊಲಿಕೆಯಾಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿ ಹೋಟೆಲ್ ದುರಂತ; ಅಕ್ರಮ ಬಾಂಗ್ಲಾದೇಶಿಗರಿಗೆ ನಕಲಿ ಭಾರತೀಯ ದಾಖಲೆ ನೀಡುತ್ತಿದ್ದ ಮಾಲೀಕ! – Kannada News

ನವದೆಹಲಿ, ಜೂನ್ 5: ದೆಹಲಿಯ ಮಾಳವೀಯ ನಗರದ ‘ಫ್ಲರಿಶ್ ಸ್ಟೇ’ ಬೆಡ್ ಆ್ಯಂಡ್ ಬ್ರೇಕ್‌ಫಾಸ್ಟ್ (BnB) ಹೋಟೆಲ್‌ನಲ್ಲಿ ಬುಧವಾರ ನಡೆದ ಭೀಕರ ಅಗ್ನಿ ದುರಂತದಲ್ಲಿ (Delhi Fire Accident) 21 ಜನರು ಸಜೀವ ದಹನವಾಗಿದ್ದರು. ಈ ಹೋಟೆಲ್‌ನ ಮಾಲೀಕ 60 ವರ್ಷದ ಲವ್ಕೇಶ್ ಬಜಾಜ್ ಈ ಹಿಂದೆಯೂ ಅನೇಕ ಅಪರಾಧಗಳನ್ನು ಎಸಗಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಪ್ರಜೆಗಳಿಗೆ ಪಾಸ್‌ಪೋರ್ಟ್ ಹಾಗೂ ಆಧಾರ್ ಕಾರ್ಡ್ ಸೇರಿದಂತೆ ನಕಲಿ ಭಾರತೀಯ ದಾಖಲೆಗಳನ್ನು ಒದಗಿಸಿ, ಅವರು ದೆಹಲಿಯಲ್ಲಿ ಕಾನೂನುಬಾಹಿರವಾಗಿ ನೆಲೆಸಲು ಸಹಾಯ ಮಾಡಿದ ಆರೋಪದ ಮೇಲೆ ಈತನನ್ನು 2025ರಲ್ಲೇ ದೆಹಲಿ ಪೊಲೀಸರು ಬಂಧಿಸಿದ್ದರು.

2025ರ ಜನವರಿಯಲ್ಲಿ ಬಾಂಗ್ಲಾದೇಶದ ಕುಟುಂಬವೊಂದು ನಕಲಿ ದಾಖಲೆಗಳನ್ನು ಬಳಸಿಕೊಂಡು ಸೆಂಟ್ರಲ್ ದೆಹಲಿಯ ಪಹಡ್‌ಗಂಜ್ ಪ್ರದೇಶದಲ್ಲಿ ವಾಸಿಸುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ತಕ್ಷಣ ದಾಳಿ ನಡೆಸಿದ ಪೊಲೀಸರು ಸ್ವೀಟಿ ಸರ್ಕಾರ್ ಮತ್ತು ಆಕೆಯ ಮಗಳು ಪುಷ್ಪೋ ಸರ್ಕಾರ್ ಎಂಬ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದಿದ್ದರು. ಅವರ ಬಳಿ ಯಾವುದೇ ಭಾರತೀಯ ಗುರುತಿನ ಚೀಟಿಗಳು ಇರಲಿಲ್ಲ.

ಇದನ್ನೂ ಓದಿ: ದೆಹಲಿ ಬೆಂಕಿ ದುರಂತ; ಹೋಟೆಲ್ ಮಾಲೀಕ ಬಂಧನ, ನ್ಯಾಯಾಂಗ ತನಿಖೆಗೆ ಆದೇಶ

ಆದರೆ, ಅವರ ಮನೆಯನ್ನು ಶೋಧಿಸಿದಾಗ 2 ಬಾಂಗ್ಲಾದೇಶಿ ಪಾಸ್‌ಪೋರ್ಟ್‌ಗಳು, 1 ನಕಲಿ ಭಾರತೀಯ ಪಾಸ್‌ಪೋರ್ಟ್, ಹಲವು ಆಧಾರ್ ಕಾರ್ಡ್‌ಗಳು ಮತ್ತು ಬ್ಯಾಂಕ್ ದಾಖಲೆಗಳು ಪತ್ತೆಯಾಗಿದ್ದವು. ಆಶ್ಚರ್ಯದ ಸಂಗತಿಯೆಂದರೆ, ಎಲ್ಲಾ ದಾಖಲೆಗಳಲ್ಲಿದ್ದ ಹೆಸರು ಮತ್ತು ವಿಳಾಸಗಳು ಬೇರೆಯಾಗಿದ್ದರೂ, ಫೋಟೋ ಮಾತ್ರ ಇವರಿಬ್ಬರದೇ ಆಗಿತ್ತು.

ಸ್ವೀಟಿ ಸರ್ಕಾರ್ ಹೊಂದಿದ್ದ ನಕಲಿ ಭಾರತೀಯ ಪಾಸ್‌ಪೋರ್ಟ್‌ನಲ್ಲಿ ದೆಹಲಿಯ ಛತ್ತರ್‌ಪುರ ಎನ್‌ಕ್ಲೇವ್‌ನ ವಿಳಾಸವಿತ್ತು. ಪೊಲೀಸರು ಈ ವಿಳಾಸವನ್ನು ಪರಿಶೀಲಿಸಿದಾಗ, ಅದು ಸದ್ಯ ದೆಹಲಿಯ ಹೋಟೆಲ್ ದುರಂತದ ಆರೋಪಿಯಾಗಿರುವ ಲವ್ಕೇಶ್ ಬಜಾಜ್‌ಗೆ ಸೇರಿದ್ದು ಎಂದು ತಿಳಿದುಬಂದಿತ್ತು. ವಿಚಾರಣೆ ವೇಳೆ, ಹಣದ ಆಸೆಗಾಗಿ ಬಾಂಗ್ಲಾದೇಶಿ ಕುಟುಂಬಕ್ಕೆ ಭಾರತೀಯ ದಾಖಲೆಗಳನ್ನು ಪಡೆಯಲು ತಮ್ನ ವಸತಿ ವಿಳಾಸವನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾಗಿ ಬಜಾಜ್ ಒಪ್ಪಿಕೊಂಡಿದ್ದ. ಆಗ ಪೊಲೀಸರು ಮೂವರನ್ನು ಬಂಧಿಸಿ ತಿಹಾರ್ ಜೈಲಿಗಟ್ಟಿದ್ದರು. ಸುಮಾರು 15 ದಿನಗಳ ನಂತರ ಬಜಾಜ್ ಜಾಮೀನಿನ ಮೇಲೆ ಹೊರಬಂದಿದ್ದ ಮತ್ತು ಈ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ.

ಇದನ್ನೂ ಓದಿ: ದೆಹಲಿಯ ಬೆಂಕಿ ದುರಂತದಲ್ಲಿ ಬಾಂಗ್ಲಾ, ಅಫ್ಘಾನ್, ಆಫ್ರಿಕಾದ ಪ್ರವಾಸಿಗರೂ ಸಾವು; ಹೋಟೆಲ್ ಮಾಲೀಕ ಪರಾರಿ

ಮೊನ್ನೆ ನಡೆದ 12 ವಿದೇಶಿಗರು ಸೇರಿದಂತೆ 21 ಜನರನ್ನು ಬಲಿಪಡೆದ ಮಾಳವೀಯ ನಗರದ ಹೋಟೆಲ್ ಅಗ್ನಿ ದುರಂತದ ಬಳಿಕ ಲವ್ಕೇಶ್ ಬಜಾಜ್ ಮತ್ತೆ ಜೈಲು ಪಾಲಾಗಿದ್ದಾನೆ. ಬುಧವಾರ ರಾತ್ರಿ ನಡೆದ ವಿಚಾರಣೆಯಲ್ಲಿ ಈತ, “ಹೋಟೆಲ್ ಉರಿಯುತ್ತಿರುವುದನ್ನು ಮತ್ತು ಜನರು ಸಿಲುಕಿಕೊಂಡಿರುವುದನ್ನು ನೋಡಿದರೂ ನಾನು ಸಹಾಯ ಮಾಡಲು ನಿಲ್ಲದೆ, ಭಯದಿಂದ ಅಲ್ಲಿಂದ ಕಾರು ಚಲಾಯಿಸಿಕೊಂಡು ಓಡಿಹೋದೆ” ಎಂದು ಒಪ್ಪಿಕೊಂಡಿದ್ದಾನೆ. ಆತನ ಮಕ್ಕಳೂ ವಿದೇಶದಲ್ಲಿ ನೆಲೆಸಿರುವುದರಿಂದ ಆತ ದೇಶ ಬಿಟ್ಟು ಓಡಿಹೋಗುವ ಮುನ್ಸೂಚನೆ ಅರಿತ ಪೊಲೀಸರು, ಆತನ ಮತ್ತು ಆತನ ಪತ್ನಿಯ ವಿರುದ್ಧ ಲುಕೌಟ್ ನೋಟಿಸ್ (LOC) ಜಾರಿಗೊಳಿಸಿದ್ದರು.

ತನಿಖೆಯ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿದೆ. ಈ ಹೋಟೆಲ್‌ಗೆ ಯಾವುದೇ ಅಗ್ನಿಶಾಮಕ ಇಲಾಖೆಯ NOC ಇರಲಿಲ್ಲ. ನಿಯಮಗಳ ಪ್ರಕಾರ ಕೇವಲ 6 ರೂಮ್‌ಗಳನ್ನು ನಡೆಸಲು ಮಾತ್ರ ಅನುಮತಿ ಇತ್ತು, ಆದರೆ ಬೇಸ್‌ಮೆಂಟ್ ಸೇರಿದಂತೆ ಒಟ್ಟು 25 ರೂಮ್‌ಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಇಡೀ 5 ಅಂತಸ್ತಿನ ಕಟ್ಟಡಕ್ಕೆ ಕೇವಲ ಒಂದೇ ಪ್ರವೇಶ ಮತ್ತು ನಿರ್ಗಮನ ದ್ವಾರವಿದ್ದಿದ್ದರಿಂದ ಹಾಗೂ ಕಿಟಕಿಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದ್ದರಿಂದ ಜನರು ಹೊರಬರಲಾಗದೆ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಧಿಕಾರ ಕಳೆದುಕೊಂಡ ನಂತರ ಒಬ್ಬಂಟಿಯಾದ ಸಿದ್ದರಾಮಯ್ಯ: ಸಿದ್ದು ಒಂಟಿ ಪಯಣದ ವಿಡಿಯೋ ವೈರಲ್ – Kannada News

ಬೆಂಗಳೂರು, ಜೂ.5: ಕರ್ನಾಟಕ ರಾಜಕಾರಣದ ಅತ್ಯಂತ ಪ್ರಭಾವಿ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಹೊರಾಂಗಣದಲ್ಲಿ ಯಾರು ಇಲ್ಲದೆ ಒಬ್ಬಂಟಿಯಾಗಿ ಓಡಾಡುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸದಾ ಬೆಂಬಲಿಗರು, ಶಾಸಕರು ಹಾಗೂ ಅಭಿಮಾನಿಗಳಿಂದ ಸುತ್ತುವರೆದಿರುತ್ತಿದ್ದ ನಾಯಕನೊಬ್ಬ, ಅಧಿಕಾರ ಕೈತಪ್ಪಿದ ಬಳಿಕ ಹೀಗೆ ಒಂಟಿಯಾಗಿ ಕಾಣಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ. ವಿಧಾನಸೌಧದ ಕಾರಿಡಾರ್ ಹಾಗೂ ಹೊರಾಂಗಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗಂಭೀರ ಆಲೋಚನೆಯಲ್ಲಿ ಮುಳುಗಿ, ಕೈಗಳನ್ನು ಹಿಂದೆ ಕಟ್ಟಿಕೊಂಡು ಒಬ್ಬರೇ ನಡೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿದೆ. ಸಾಮಾನ್ಯವಾಗಿ ಮುಖ್ಯಮಂತ್ರಿಯಾಗಿದ್ದಾಗ ಅಥವಾ ಅಧಿಕಾರದಲ್ಲಿದ್ದಾಗ ಅವರ ಹಿಂದೆ ನೂರಾರು ಜನರ ದಂಡೇ ಇರುತ್ತಿತ್ತು. ಆದರೆ, ಪ್ರಸ್ತುತ ರಾಜಕೀಯ ಬದಲಾವಣೆಗಳ ನಂತರ ಅವರು ಈ ರೀತಿ ಒಂಟಿಯಾಗಿ ಓಡಾಡುತ್ತಿರುವುದನ್ನು ಕಂಡು ನೆಟ್ಟಿಗರು “ಅಧಿಕಾರ ಹೋದ ಮೇಲೆ ರಾಜಕಾರಣಿಗಳು ಒಬ್ಬಂಟಿಯಾಗುವುದು ಸಹಜ” ಎಂದು ವಿಶ್ಲೇಷಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಎಕ್ಸ್ (ಟ್ವಿಟರ್), ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಈ ವಿಡಿಯೋ ಶೇರ್ ಆಗುತ್ತಿದ್ದು, ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಸಿದ್ದರಾಮಯ್ಯ ಅವರ ವಿರೋಧಿಗಳು “ಅಧಿಕಾರ ಕಳೆದುಕೊಂಡ ನಂತರ ಲೀಡರ್ ಒಬ್ಬಂಟಿಯಾಗಿದ್ದಾರೆ” ಎಂದು ಲೇವಡಿ ಮಾಡುತ್ತಿದ್ದರೆ, ಅವರ ಅಭಿಮಾನಿಗಳು “ಅವರು ಒಬ್ಬಂಟಿಯಾಗಿಲ್ಲ, ಅವರ ಹಿಂದೆ ಕೋಟ್ಯಂತರ ಜನರಿದ್ದಾರೆ. ಅವರು ಸದಾ ಜನರ ನಾಯಕ” ಎಂದು ಬೆಂಬಲವಾಗಿ ಕಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗರ್ಭಕೋಶದಿಂದ 8 ಕೆಜಿ ಗಡ್ಡೆ ಹೊರತೆಗೆದ ಸರ್ಕಾರಿ ಆಸ್ಪತ್ರೆ ವೈದ್ಯರು: ಮಹಿಳೆಗೆ ಮರುಜನ್ಮ – Kannada News

ಗಡ್ಡೆ ಹೊರತೆಗೆದ ವೈದ್ಯರುImage Credit source: tv9 kannada

ಉಡುಪಿ, ಜೂನ್​​ 05: ಉಡುಪಿ (udupi) ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ತಂಡ ಅಪರೂಪದ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ 44 ವರ್ಷದ ಮಹಿಳೆಯ ಗರ್ಭಕೋಶದಲ್ಲಿದ್ದ ಸುಮಾರು 8 ಕೆಜಿ ತೂಕದ ಫೈಬ್ರಾಯ್ಡ್ ಗಡ್ಡೆಯನ್ನು ಹೊರತೆಗೆದಿದೆ. ಕಳೆದ ಒಂದು ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಕೊನೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಸಮಯೋಚಿತ ನಿರ್ಧಾರ ಮಹಿಳೆಗೆ (Woman) ಹೊಸ ಬದುಕು ನೀಡಿದೆ.

ಮುಖ್ಯಾಂಶಗಳು

  • 44 ವರ್ಷದ ಮಹಿಳೆಯ ಗರ್ಭಕೋಶದಲ್ಲಿದ್ದ 8 ಕೆಜಿ ತೂಕದ ಗಡ್ಡೆ ಪತ್ತೆ
  • ಖಾಸಗಿ ಆಸ್ಪತ್ರೆಗಳಲ್ಲಾಗದ ಪವಾಡ ಸರ್ಕಾರಿ ಆಸ್ಪತ್ರೆಯಲ್ಲಿ ಸೂಪರ್ ಸಕ್ಸಸ್!
  • ವೈದ್ಯರ ಸಮಯೋಚಿತ ನಿರ್ಧಾರದಿಂದ ಮಹಿಳೆಗೆ ಹೊಸ ಬದುಕು

ಮಹಿಳೆಯ ಗರ್ಭಕೋಶದಲ್ಲಿ ಗಡ್ಡೆ  

44 ವರ್ಷದ ಮಹಿಳೆ ಕಳೆದ ಒಂದು ವರ್ಷದಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿರಲಿಲ್ಲ. ಬಳಿಕ ಉಡುಪಿ ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ವೈದ್ಯರು ಸಮಗ್ರ ತಪಾಸಣೆ ಮಾಡಿದ್ದಾರೆ. ಈ ವೇಳೆ ಮಹಿಳೆಯ ಹೊಟ್ಟೆ ಗರ್ಭಿಣಿಯರ ಹೊಟ್ಟೆಯಂತೆ ಉಬ್ಬಿಕೊಂಡಿರುವುದು ವೈದ್ಯರ ಗಮನಕ್ಕೆ ಬಂದಿದೆ. ತಕ್ಷಣ ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನ್ ಪರೀಕ್ಷೆ ಮಾಡಿದಾಗ ಗರ್ಭಕೋಶದಲ್ಲಿ ದೊಡ್ಡ ಗಾತ್ರದ ಫೈಬ್ರಾಯ್ಡ್ ಗಡ್ಡೆ ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಇಂದಿರಾಗಾಂಧಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ವರ್ಷವಿಡೀ ಬೆಡ್ ಹಿಡಿದಿದ್ದ ಬಾಲಕ; ಖಾಸಗಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖ!

ಪ್ರಕರಣದ ಗಂಭೀರತೆಯನ್ನು ಅರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದು, ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ-ಮಕ್ಕಳ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಹೆಚ್. ಅಶೋಕ್ ಅವರ ಸಲಹೆಯಂತೆ ಕ್ರಮಕೈಗೊಳ್ಳಲಾಗಿದೆ. ಸ್ತ್ರೀರೋಗ ತಜ್ಞರಾದ ಡಾ. ಶಶಾಂಕ್ ಕಿಣಿ, ಡಾ. ಜಾಸ್ಮಿನ್‌, ಡಾ. ಕವಿತಾ ಹಾಗೂ ಡಾ. ಅಮೃತಾಂಶ್ ನೇತೃತ್ವದ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು 8 ಕೆಜಿ ತೂಕದ ಫೈಬ್ರಾಯ್ಡ್ ಗಡ್ಡೆಯನ್ನು ಹೊರತೆಗೆದಿದ್ದಾರೆ. ಅರವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ ಮತ್ತು ಡಾ. ರಾಜಗೋಪಾಲ್ ಭಂಡಾರಿ ಚಿಕಿತ್ಸೆಗೆ ಸಹಕರಿಸಿದ್ದು, ಶುಶ್ರೂಷಾಧಿಕಾರಿ ರಕ್ಷಿತಾ ಹಾಗೂ ಓಟಿ ಸಹಾಯಕಿ ಸಂಗೀತ ಭಾಗಿಯಾಗಿದ್ದರು.

ವೈದ್ಯ ತಂಡದ ಕಾರ್ಯಕ್ಕೆ ಮೆಚ್ಚುಗೆ

ಸದ್ಯ ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳ ಮೇಲಿನ ಜನರ ವಿಶ್ವಾಸವನ್ನೂ ಈ ಘಟನೆ ಮತ್ತಷ್ಟು ಹೆಚ್ಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನೀನ್ಯಾರು? ಯಾವ ರಾಜ್ಯದವನು?’ ಪ್ರಕಾಶ್ ರೈಗೆ ತೆಲುಗು ನಿರ್ಮಾಪಕ ಪ್ರಶ್ನೆ – Kannada News

ಪ್ರಕಾಶ್ ರೈ (Prakash Raj) ಬಹುಭಾಷಾ ನಟ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ವರ್ಷಗಳಿಂದಲೂ ನಟಿಸುತ್ತಾ ಬರುತ್ತಿದ್ದಾರೆ. ಮೂಲತಃ ಕರ್ನಾಟಕದವರಾದರೂ ಪ್ರಕಾಶ್ ರೈ ಹೆಚ್ಚಿಗೆ ನಟಿಸಿರುವುದು ತೆಲುಗು ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲೇ. ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಅವರು ರಾಜಕೀಯದಲ್ಲಿ, ಸಾಮಾಜಿಕವಾಗಿಯೂ ಸಕ್ರಿಯವಾಗಿರುತ್ತಾರೆ. ಲೋಕಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಪ್ರಕಾಶ್ ರೈ, ಕರ್ನಾಟಕದ ಮಾತ್ರವಲ್ಲ ಬೇರೆ ಬೇರೆ ರಾಜ್ಯಗಳ ರಾಜಕೀಯದ ಬಗ್ಗೆಯೂ ಆಸಕ್ತಿ ಉಳ್ಳವರಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ರಾಜಕೀಯ ವಿದ್ಯಮಾನಗಳ ಟೀಕೆ, ವಿಮರ್ಶೆಗಳನ್ನು ಮಾಡುತ್ತಾರೆ. ಆದರೆ ಇದೇ ಕಾರಣಕ್ಕೆ ಖುದ್ದು ಸಾಕಷ್ಟು ಟೀಕೆ ಮತ್ತು ನಿಂದನೆಗೂ ಗುರಿ ಆಗುತ್ತಾರೆ.

ಪ್ರಕಾಶ್ ರೈ, ಬಿಜೆಪಿಯ ವಿರುದ್ಧ ಪದೇ ಪದೇ ಮಾತನಾಡುತ್ತಿರುತ್ತಾರೆ. ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ ಅವರು ಬಿಜೆಪಿ ಜೊತೆ ಕೈಜೋಡಿಸಿದ ಬಳಿಕ ಅವರನ್ನೂ ಸಹ ಆಗಾಗ್ಗೆ ಟೀಕೆ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಪವನ್ ಕಲ್ಯಾಣ್ ಅವರು ತೆಲಂಗಾಣ ರಾಜ್ಯದಲ್ಲಿ ಬಹಿರಂಗ ಸಮಾವೇಶ ಮಾಡಲು ಕೋರಿದ್ದ ಅನುಮತಿಯನ್ನು ತೆಲಂಗಾಣ ಸರ್ಕಾರ ನಿರಾಕರಿಸಿತ್ತು. ಇದರ ವಿರುದ್ಧ ಮಾತನಾಡಿದ್ದ ಡಿಸಿಎಂ ಪವನ್ ಕಲ್ಯಾಣ್, ‘ತೆಲಂಗಾಣ ಯಾರ ಅಪ್ಪನ ಆಸ್ತಿ ಅಲ್ಲ’ ಎಂದು ಗುಡುಗಿದ್ದರು.

ಈ ಬಗ್ಗೆ ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ‘ನೀವು ಬರುವುದಾದರೆ ಬನ್ನಿ, ಆದರೆ ಏಕೆ ಬರುತ್ತಿದ್ದೀರಿ ಎಂದು ಹೇಳಿ ಬನ್ನಿ, ಸುಮ್ಮನೆ ಬರುತ್ತಿದ್ದೀರಾ? ಏನಾದರೂ ಕೆಲಸ ಇದ್ದು ಬರುತ್ತಿದ್ದೀರಾ? ಒಬ್ಬರೇ ಬರುತ್ತಿದ್ದೀರಾ? ಜೊತೆಗಾರರನ್ನೂ ಕರೆದುಕೊಂಡು ಬರುತ್ತಿದ್ದೀರಾ?’ ಎಂದು ಕಾಲೆಳೆದಿದ್ದರು. ಇದೀಗ ತೆಲುಗು ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಹಾಗೂ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಬಂಡ್ಲ ಗಣೇಶ್, ಪ್ರಕಾಶ್ ರೈ ಅವರನ್ನು ಏಕ ವಚನದಲ್ಲಿ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ:‘ಫೈಲ್ಸು-ಪೈಲ್ಸು’ಗಳಿಗೆಲ್ಲ ಪ್ರಶಸ್ತಿ: ಪ್ರಕಾಶ್ ರೈ ವ್ಯಂಗ್ಯ

ಪ್ರಕಾಶ್ ರೈ ಅವರ ಟ್ವೀಟ್​​ಗೆ ಮರು ಟ್ವೀಟ್ ಮಾಡಿರುವ ಬಂಡ್ಲ ಗಣೇಶ್, ‘ಸುಮ್ಮನೆ ಯಾಕೆ ಎಲ್ಲದರಲ್ಲೂ ಮೂಗು ತೂರಿಸುವುದು? ನೀನ್ಯಾರು?, ನೀನು ತೆಲುಗಿನವನಾ? ತಮಿಳಿನವನಾ? ಅಥವಾ ಕನ್ನಡಿಗನಾ? ನಿನ್ನ ಊರು ಯಾವುದು? ನಿನ್ನ ಕತೆ ಏನು? ಪ್ರತಿ ವಿಷಯದಲ್ಲೂ ಜಡ್ಜ್​​ಮೆಂಟ್ ಕೊಡಲು ನೀನೇನು ಕಲೆಕ್ಟರ್ರಾ? ಅಥವಾ ದೇಶದ ಪ್ರಧಾನಿಯಾ? ಎಲ್ಲಿ ನೋಡಿದರೂ ನೀನೆ, ನಿನ್ನ ಜೀವನಕ್ಕೆ ಏನಾದರೂ ಕೆಲಸ ಹುಡುಕಿಕೊ, ಪ್ರತಿ ವಿಷಯದಲ್ಲೂ ಮಧ್ಯಕ್ಕೆ ತೂರಿ ಹೀರೋ ಅಂದುಕೊಳ್ಳಬೇಡ. ಮೊದಲು ನಿನ್ನ ಅಡ್ರೆಸ್ ನೀನು ಹುಡುಕಿಕೊ, ನಂತರ ಪ್ರಪಂಚವನ್ನು ಬದಲಾಯಿಸಲು ಯತ್ನಿಸು’ ಎಂದಿದ್ದಾರೆ ಬಂಡ್ಲ ಗಣೇಶ್.

ಬಂಡ್ಲ ಗಣೇಶ್ ಅವರ ಪ್ರತಿಕ್ರಿಯೆಗೆ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಪ್ರಕಾಶ್ ರೈ ಅಂಥಹಾ ಹಿರಿಯ ನಟರನ್ನು ಏಕವಚನದಲ್ಲಿ ಟೀಕೆ ಮಾಡಿದ್ದಕ್ಕೆ ಕೆಲವರು ಆಕ್ಷೇಪಿಸಿದ್ದಾರೆ. ಬಂಡ್ಲ ಗಣೇಶ್ ಅವರು ಪವನ್ ಕಲ್ಯಾಣ್ ಅವರ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಬಂಡ್ಲ ಗಣೇಶ್, ತಮ್ಮ ಆಕ್ರೋಶ ಭರಿತ ಭಾಷಣಗಳು, ಸಂದರ್ಶನಗಳಿಂದಲೇ ಜನಪ್ರಿಯರು. ಈಗ ಪ್ರಕಾಶ್ ರೈ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವ ಕ್ರಿಕೆಟ್​ನಲ್ಲಿ ಈಗ ವೈಭವ್​ದೇ ಮಾತು; ಟೆಸ್ಟ್​ಗೆ ಆಯ್ಕೆ ಮಾಡಿ ಎಂದ ದಿಗ್ಗಜ ಕ್ರಿಕೆಟಿಗರು – Kannada News

ಕೇವಲ 15ನೇ ವರ್ಷಕ್ಕೆ ತನ್ನ ಆಟದ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಸದ್ದು ಮಾಡುತ್ತಿರುವ ವೈಭವ್ ಸೂರ್ಯವಂಶಿ (Vaibhav Suryavanshi), 2026 ರ ಐಪಿಎಲ್​ನಲ್ಲಿ 750 ಕ್ಕೂ ಹೆಚ್ಚು ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಗೆದ್ದಿದ್ದಲ್ಲದೆ ಅತಿ ಕಡಿಮೆ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಇದರ ಜೊತೆಗೆ ಈ ಸೀಸನ್​ನಲ್ಲಿ ಅತ್ಯಧಿಕ 5 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು. ವೈಭವ್ ಅವರ ಆಟಕ್ಕೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ. ಮಾಜಿ ಕ್ರಿಕೆಟಿಗರು ಕೂಡ ವೈಭವ್ ಅವರ ಆಟಕ್ಕೆ ಫ್ಯಾನ್ ಆಗಿಬಿಟ್ಟಿದ್ದಾರೆ. ಪ್ರಸ್ತುತ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ವೈಭವ್, ತ್ರಿಕೋನ ಸರಣಿಗಾಗಿ ಶ್ರೀಲಂಕಾಕ್ಕೆ ಹಾರಿದ್ದಾರೆ. ಈ ಸರಣಿಯಲ್ಲಿ ವೈಭವ್ ಅವರ ಪ್ರದರ್ಶನ ಇದೇ ರೀತಿ ಮುಂದುವರೆದರೆ ಅವರಿಗೆ ಭಾರತ ಟಿ20 ತಂಡದಲ್ಲಿ ಖಾಯಂ ಸ್ಥಾನ ಖಚಿತ.

ವೈಭವ್​ಗೆ ಟೆಸ್ಟ್ ತಂಡದಲ್ಲಿ ಸ್ಥಾನ?

ಆದಾಗ್ಯೂ ವೈಭವ್ ಭಾರತ ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ಇನ್ನು ಕಾಯಬೇಕಾಗುತ್ತದೆ. ಆದಾಗ್ಯೂ ವೈಭವ್ ಅವರ ಆಟವನ್ನು ಮೆಚ್ಚಿರುವ ಮಾಜಿ ಕ್ರಿಕೆಟಿಗರಾದ ನಾಸರ್ ಹುಸೇನ್ ಮತ್ತು ಸೈಮನ್ ಡೌಲ್ ವೈಭವ್ ಸೂರ್ಯವಂಶಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಬೇಕು ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಪ್ರಸ್ತುತ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಇಯಾನ್ ವಾರ್ಡ್, ಭಾರತ ಟೆಸ್ಟ್ ತಂಡದಲ್ಲಿ ಸೂರ್ಯವಂಶಿ ಅವರನ್ನು ಆರಂಭಿಕನಾಗಿ ಆಡಿಸಬೇಕು ಎಂದರು.

ಸಚಿನ್ ತೆಂಡೂಲ್ಕರ್​ಗೆ ಹೋಲಿಕೆ

ಇದಕ್ಕೆ ಪ್ರತಿಕ್ರಿಯಿಸಿದ ನಾಸರ್ ಹುಸೇನ್, ಆ ದಿನ ದೂರವಿಲ್ಲ, ನಾನು ಕೂಡ ಅದನ್ನು ಎದುರು ನೋಡುತ್ತಿದ್ದೇನೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ವೈಭವ್​ಗೆ ಬಿಸಿಸಿಐ, ಭಾರತ ಟೆಸ್ಟ್ ತಂಡದಲ್ಲಿ ಜಾಗ ಮಾಡಿಕೊಡಬೇಕು ಎಂದರು. ಇತ್ತ ಸೈಮನ್ ಡೌಲ್ ಈ ಮಾತನ್ನು ಕೇಳಿ ನಕ್ಕರಾದರೂ, ನಾನು ಕೂಡ ವೈಭವ್ ಅವರ ಆಟಕ್ಕೆ ಅಭಿಮಾನಿಯಾಗಿದ್ದೇನೆ. ಅವರ ಪ್ರಸ್ತುತ ಆಟ ನನಗೆ ಸಚಿನ್ ತೆಂಡೂಲ್ಕರ್ ಅವರ ಆರಂಭಿಕ ದಿನಗಳನ್ನು ನೆನಪಿಸುತ್ತದೆ ಎಂದರು. ಈ ಮೂವರ ಅಭಿಪ್ರಾಯ ಏನೇ ಇದ್ದರೂ ವೈಭವ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಇನ್ನು ಕಾಯಬೇಕಾಗಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:52 pm, Fri, 5 June 26

Source link

ಸಿಮ್ ಸ್ವಾಪಿಂಗ್ ಹುಷಾರ್..! ದಿಢೀರನೇ ಸಿಮ್ ಡೀಆ್ಯಕ್ಟಿವೇಟ್ ಆಯ್ತು, ನೋಡನೋಡುತ್ತಿದ್ದಂತೆ ಬ್ಯಾಂಕ್ ಖಾತೆಯಿಂದ ಹಣ ಮಾಯ ಆಯ್ತು – Kannada News

ಬೆಂಗಳೂರು, ಜೂನ್ 5: ಉದ್ಯಾನನಗರಿಯಲ್ಲಿ ಅತ್ಯಂತ ಶಾಕಿಂಗ್ ಆದ ‘ಸಿಮ್ ಸ್ವ್ಯಾಪ್’ (SIM Swap) ಅಥವಾ ಸಿಮ್ ಪೋರ್ಟಿಂಗ್ ಸೈಬರ್ ವಂಚನೆ ನಡೆದಿದೆ. ಸಂತ್ರಸ್ತ ವ್ಯಕ್ತಿಯ ಮೊಬೈಲ್ ಸಿಮ್ ಅನ್ನು ಆತನ ಅರಿವಿಲ್ಲದೆಯೇ ಬೇರೆ ನೆಟ್ವರ್ಕ್​ಗೆ ಪೋರ್ಟ್ ಮಾಡಲಾಗಿದೆ. ಅದಾಗಿ ಕೆಲವೇ ದಿನಗಳಲ್ಲಿ ಆತನ ಬ್ಯಾಂಕ್ ಅಕೌಂಟ್​ನಿಂದ 7.2 ಲಕ್ಷ ರೂ ಮಂಗಮಾಯವಾಗಿದೆ.

ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿಯಾದ ಬಿಹಾರ ಮೂಲದ ಕಮಲೇಶ್ ಕುಮಾರ್ ಎಂಬಾತ ಸಂತ್ರಸ್ತ ವ್ಯಕ್ತಿ. ಇವರು ನೀಡಿರುವ ದೂರಿನ ಪ್ರಕಾರ ಮೇ 25ರಂದು ಯಾವುದೇ ಮುನ್ಸೂಚನೆ ಇಲ್ಲದೆಯೇ ಅವರ ಏರ್​ಟೆಲ್ ಸಿಮ್ ಕಾರ್ಡ್ ಕೆಲಸ ಮಾಡುವುದನ್ನು ದಿಢೀರನೆ ನಿಲ್ಲಿಸಿತ್ತು. ಮರುದಿನ ಇವರು ಏರ್​ಟೆಲ್ ಔಟ್​ಲೆಟ್​ಗೆ ಹೋಗಿ ವಿಚಾರಿಸಿದಾಗ ಇವರ ಸಿಮ್ ಅನ್ನು ಜಿಯೋ ನೆಟ್ವರ್ಕ್​ಗೆ ಪೋರ್ಟ್ (SIM Ported) ಮಾಡಲಾಗಿತ್ತು. ಆದರೆ, ಇದ್ಯಾವುದೂ ಕೂಡ ಕಮಲೇಶ್​ಗೆ ಗೊತ್ತಾಗಿರಲಿಲ್ಲ.

ಜಿಯೋ ಸ್ಟೋರ್​ನಲ್ಲಿ ವಿಚಾರಿಸಿದಾಗ, ಸಿಮ್ ಕಾರ್ಡ್ ಅನ್ನು ಶಹಬಾಜ್ ಅನ್ಸಾರಿ ಎನ್ನುವ ಹೆಸರಿನಲ್ಲಿ ಪಡೆಯಲಾಗಿತ್ತು. ಆ ವ್ಯಕ್ತಿ ತನಗೆ ಗೊತ್ತೇ ಇಲ್ಲ ಎನ್ನುತ್ತಾರೆ ಕಮಲೇಶ್. ಮೇ 27ರಂದು ಅವರು ಮೈಕೋ ಲೇ ಔಟ್ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತಾರೆ.

ಬ್ಯಾಂಕ್ ಖಾತೆಗೆ ಕನ್ನ: ಒಮ್ಮೆ ಸಿಮ್ ವಂಚಕರ ಕೈ ಸೇರಿದಾಗ, ಸಂತ್ರಸ್ತ ವ್ಯಕ್ತಿಯ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಫೋನ್ ಸಂಖ್ಯೆಗೆ ಬರುವ ಎಲ್ಲಾ ಒಟಿಪಿಗಳು (OTP – One Time Password) ವಂಚಕರ ಮೊಬೈಲ್‌ಗೆ ಹೋಗಲು ಶುರುವಾಗಿದೆ. ಇದನ್ನು ಬಳಸಿಕೊಂಡು ವಂಚಕರು ಮೇ 27ರಿಂದ 29ರವವರೆಗಿನ ಅವಧಿಯಲ್ಲಿ ಅವರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 7.2 ಲಕ್ಷ ರೂ ಅನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆರ್ಥಿಕತೆಯಲ್ಲಿ ಭರ್ಜರಿ ಕ್ಯಾಷ್ ಇದ್ದರೂ ಎಟಿಎಂಗಳಲ್ಲಿ ಇಲ್ಲ ಹೆಚ್ಚು ನೋಟು; ಕರ್ನಾಟಕದಲ್ಲೇ ಅತಿಹೆಚ್ಚು ಕೊರತೆ; ಯಾಕೆ ಈ ಕಥೆ?

ತಮ್ಮ ಫೋನ್ ನೆಟ್‌ವರ್ಕ್ ಇಲ್ಲದಿರುವುದನ್ನು ಗಮನಿಸಿ, ಟೆಲಿಕಾಂ ಆಫೀಸ್‌ಗೆ ಹೋಗಿ ಹೊಸ ಸಿಮ್ ಪಡೆದು ಆಕ್ಟಿವೇಟ್ ಮಾಡಿದಾಗ ಸಂತ್ರಸ್ತರಿಗೆ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಲೂಟಿಯಾಗಿರುವುದು ಗೊತ್ತಾಗಿದೆ. ತಕ್ಷಣ ಅವರು ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಸಿಮ್ ಸ್ವ್ಯಾಪ್’ ವಂಚನೆ ಹೇಗೆ ನಡೆಯುತ್ತದೆ?

ಸಿಮ್ ಸ್ವಾಪಿಂಗ್ ಎಂಬುದು ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಬಳಸುತ್ತಿರುವ ಅತ್ಯಂತ ಅಪಾಯಕಾರಿ ತಂತ್ರವಾಗಿದೆ. ಮೊದಲಿಗೆ ವಂಚಕರು ಫಿಶಿಂಗ್ ಇಮೇಲ್, ನಕಲಿ ಲಿಂಕ್‌ಗಳು ಅಥವಾ ಸೋಶಿಯಲ್ ಇಂಜಿನಿಯರಿಂಗ್ ಮೂಲಕ ನಿಮ್ಮ ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಮಾಹಿತಿಯನ್ನು ಕದಿಯುತ್ತಾರೆ.

ಈ ದಾಖಲೆಗಳನ್ನು ಬಳಸಿ ನಿಮ್ಮ ಹೆಸರಿನಲ್ಲಿ ಟೆಲಿಕಾಂ ಆಪರೇಟರ್‌ಗೆ ಕರೆ ಮಾಡಿ “ನನ್ನ ಸಿಮ್ ಕಳೆದುಹೋಗಿದೆ” ಎಂದು ಹೊಸ ಸಿಮ್ ಕೇಳುತ್ತಾರೆ ಅಥವಾ ಬೇರೆ ನೆಟ್‌ವರ್ಕ್‌ಗೆ ಪೋರ್ಟ್ ಮಾಡಲು ವಿನಂತಿಸುತ್ತಾರೆ.

ಟೆಲಿಕಾಂ ಕಂಪನಿಯು ಹೊಸ ಸಿಮ್ ಆಕ್ಟಿವೇಟ್ ಮಾಡಿದ ತಕ್ಷಣ, ನಿಮ್ಮ ಫೋನ್‌ನಲ್ಲಿರುವ ಅಸಲಿ ಸಿಮ್ ಸಿಗ್ನಲ್ ಕಳೆದುಕೊಳ್ಳುತ್ತದೆ (No Service ಬರುತ್ತದೆ).

ಇದನ್ನೂ ಓದಿ: ಬಂಡವಾಳ ಆಕರ್ಷಿಸಲು ಬ್ಯಾಂಕುಗಳಿಗೆ ಹೆಡ್ಡಿಂಗ್ ಸಪೋರ್ಟ್​ನಿಂದ ಹಿಡಿದು ಎನ್​ಆರ್​ಐ ಹೂಡಿಕೆ ಮಿತಿ ಹೆಚ್ಚಳದವರೆಗೆ ಆರ್​ಬಿಐನಿಂದ 5 ಕ್ರಮಗಳು

ನಿಮ್ಮ ಫೋನ್ ಬಂದ್ ಆಗಿರುವ ಸಮಯದಲ್ಲಿ, ವಂಚಕರು ನಿಮ್ಮ ಬ್ಯಾಂಕ್ ಖಾತೆಯ ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ರಿಸೆಟ್ ಮಾಡಿ, ಅವರ ಬಳಿ ಇರುವ ಸಿಮ್‌ಗೆ ಬರುವ ಒಟಿಪಿ ಬಳಸಿ ಹಣ ಲೂಟಿ ಮಾಡುತ್ತಾರೆ.

ಸೈಬರ್ ಸುರಕ್ಷತಾ ಮುನ್ನೆಚ್ಚರಿಕೆ: ನಿಮ್ಮ ಮೊಬೈಲ್‌ನಲ್ಲಿ ಯಾವುದೇ ಕಾರಣವಿಲ್ಲದೆ ದಿಢೀರನೆ ಸಿಗ್ನಲ್ ಸಂಪೂರ್ಣವಾಗಿ ಕಟ್ ಆಗಿ “No Service” ಅಥವಾ “Invalid SIM” ಎಂದು ಬಂದರೆ ನಿರ್ಲಕ್ಷಿಸಬೇಡಿ. ತಕ್ಷಣವೇ ನಿಮ್ಮ ಟೆಲಿಕಾಂ ಕಂಪನಿಯನ್ನು ಸಂಪರ್ಕಿಸಿ ವಿಚಾರಿಸಿ ಮತ್ತು ನಿಮ್ಮ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿ. ಇಂತಹ ವಂಚನೆಗೆ ಒಳಗಾದರೆ ತಕ್ಷಣ 1930 ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ದೂರು ನೀಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಮಲಿಂಗಾ ರೆಡ್ಡಿ ರಾಜೀನಾಮೆ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಹೆಚ್​ಕೆ ಪಾಟೀಲ್ ಶಾಕಿಂಗ್ ಮಾತು – Kannada News

ಬೆಂಗಳೂರು, ಜೂನ್ 5: ಖಾತೆ ಹಂಚಿಕೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ (Congress) ಪಕ್ಷದಲ್ಲಿ ಸ್ಫೋಟಗೊಂಡಿರುವ ಅಸಮಾಧಾನದ ಜ್ವಾಲೆ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ದಿಢೀರ್ ರಾಜೀನಾಮೆ ನಿರ್ಧಾರವು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಈ ಕುರಿತು ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ಹೆಚ್​​ಕೆ ಪಾಟೀಲ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಲಿಂಗಾ ರೆಡ್ಡಿ ರಾಜೀನಾಮೆ ನಡೆ ಸರ್ಕಾರ ಹಾಗೂ ಪಕ್ಷದ ನಾಯಕತ್ವಕ್ಕೆ ಒಂದು ದೊಡ್ಡ ಎಚ್ಚರಿಕೆ ಗಂಟೆ (Wake-up call) ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಾಂಶಗಳು

  • ರಾಮಲಿಂಗಾ ರೆಡ್ಡಿ ರಾಜೀನಾಮೆ ಕೇವಲ ವೈಯಕ್ತಿಕ ನಿರ್ಧಾರವಲ್ಲ: ಹೆಚ್​ಕೆ ಪಾಟೀಲ್.
  • ಇದು ಹೈಕಮಾಂಡ್‌ಗೆ ಒಂದು ಗಂಭೀರ ಎಚ್ಚರಿಕೆ ಗಂಟೆ ಎಂದ ಹಿರಿಯ ನಾಯಕ.
  • ನಿರ್ಧಾರ ಪುನರ್ಪರಿಶೀಲಿಸುವಂತೆ ರಾಮಲಿಂಗಾ ರೆಡ್ಡಿಗೆ ಮನವಿ.

ಸ್ನೇಹಿತನಿಗೆ ಕರೆ ಮಾಡಿ ಮನವೊಲಿಸಲು ಯತ್ನ

ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಶಾಸಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಚ್​ಕೆ ಪಾಟೀಲ್, ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಷಯವನ್ನು ನಾನು ಮಾಧ್ಯಮಗಳಲ್ಲಿ ನೋಡಿದೆ. ತಕ್ಷಣವೇ ನನ್ನ ಆಪ್ತ ಸ್ನೇಹಿತರಾದ ಅವರಿಗೆ ಫೋನ್ ಮಾಡಿ ಮಾತನಾಡಿದ್ದೇನೆ. ಅವರು ತಮ್ಮ ಆಂತರಿಕ ಅಭಿಪ್ರಾಯ ಹಾಗೂ ಬೇಸರವನ್ನು ನನ್ನ ಬಳಿ ಹಂಚಿಕೊಂಡಿದ್ದಾರೆ. ಅವರು ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ನಾನು ವಿನಂತಿಸುತ್ತೇನೆ ಎಂದರು.

ಹೆಚ್​ಕೆ ಪಾಟೀಲ್ ಮಾತಿನ ವಿಡಿಯೋ


ತಕ್ಷಣ ಮಧ್ಯಪ್ರವೇಶಿಸುವಂತೆ ಹೈಕಮಾಂಡ್‌ಗೆ ಒತ್ತಾಯ

ಪಕ್ಷದಲ್ಲಿ ಉದ್ಭವಿಸಿರುವ ಈ ಬಿಕ್ಕಟ್ಟಿನ ಕುರಿತು ಉನ್ನತ ನಾಯಕತ್ವ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ‘ಸಂಬಂಧಪಟ್ಟ ನಾಯಕರು ಇಂತಹ ಸಂದರ್ಭದಲ್ಲಿ ತಕ್ಷಣವೇ ಗಂಭೀರವಾಗಿ ಗಮನಹರಿಸಬೇಕು. ಇದೊಂದು ರೀತಿಯ ದೊಡ್ಡ ಎಚ್ಚರಿಕೆ ಗಂಟೆ. ದಯಮಾಡಿ ಹಿರಿಯ ನಾಯಕರು ಈ ವಿಚಾರವನ್ನು ಲಘುವಾಗಿ ಪರಿಗಣಿಸದೆ, ತಕ್ಷಣವೇ ಸರಿಪಡಿಸುವ ಕೆಲಸಕ್ಕೆ ಮುಂದಾಗಬೇಕು’ ಎಂದು ಹೈಕಮಾಂಡ್‌ಗೆ ವಿನಂತಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಿರೋಧ, 1 ಪೀಠಕ್ಕೆ ಮೂರು ಜಿಲ್ಲೆ ನಡುವೆ ಹಗ್ಗ ಜಗ್ಗಾಟ – Kannada News

ಕಾರವಾರ, (ಜೂನ್ 04): ಸದ್ಯ ಕರ್ನಾಟಕದಲ್ಲಿ (Karnataka) ಕಲಬುರಗಿ ಹಾಗೂ ಧಾರವಾಡ ಹೈಕೋರ್ಟ್​​​ ಪೀಠ (High Court Bench) ಇದ್ದು, ಇದೀಗ ಕರಾವಳಿ (Karavali) ಹಾಗೂ ಮಲೆನಾಡು (malenadu) ಭಾಗದ ಜನರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಮಂಗಳೂರಿನಲ್ಲಿ ಮತ್ತೊಂದು ಹೈಕೋರ್ಟ್ ಪೀಠ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದೆ. ಆದ್ರೆ, ಮಂಗಳೂರಿನಲ್ಲಿ ಸ್ಥಾಪನೆ ಮಾಡುವುದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗಿವೆ. ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಜನರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಆಗಬೇಕೆಂದು ಆಗ್ರಹಿಸಿದ್ದಾರೆ. ಹೀಗಾಗಿ ಒಂದು ಪೀಠಕ್ಕೆ ಮೂರು ಜಿಲ್ಲೆಗಳ ನಡುವೆ ಹಗ್ಗ ಜಗ್ಗಾಟ ನಡೆದಿದೆ.

ಧಾರವಾಡವೇ ಹತ್ತಿರ, ಮಂಗಳೂರು ಭೌಗೋಳಿಕವಾಗಿ ದೂರ

ರಾಜ್ಯದಲ್ಲೇ ಭೌಗೋಳಿಕವಾಗಿ ದೊಡ್ಡದಾಗಿರುವ ಉತ್ತರ ಕನ್ನಡ ಜಿಲ್ಲೆ. ಜಿಲ್ಲೆಯಲ್ಲಿ ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಹೋಗುವುದೇ ಭಾರಿ ಕಷ್ಟ. ಹೀಗಿರುವಾಗ ಆರೋಗ್ಯ , ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಇಲ್ಲಿನ ಜನ ಬೇರೆ ಜಿಲ್ಲೆಯನ್ನೆ ಅವಲಂಬಿಸಿದ್ದಾರೆ. ಪ್ರಮುಖವಾಗಿ ಐದು ಜಿಲ್ಲೆಗಳಿಗೆ ಹೊಂದಿಕೊಂಡಿರುವುದರಿಂದ ಆಯಾ ತಾಲೂಕಿನವರು ಸಮಿಪದ ಜಿಲ್ಲೆಗಳನ್ನೆ ಹೆಚ್ಚಾಗಿ ಅವಲಂಬಿಸಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪೀಠ ಆಗಬೇಕೆಂದು ಕಾರವಾರ ವಕೀಲರ ಸಂಘ ಆಗ್ರಹಿಸಿದೆ.

ಇದನ್ನೂ ಓದಿ: ಇಂದಿನಿಂದ ಜೂನ್ 11 ರವರೆಗೆ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ: ಮೀನುಗಾರರಿಗೆ, ಪ್ರವಾಸಿಗರಿಗೆ ಬಿಗ್​​​ ಅಲರ್ಟ್

ಉತ್ತರ ಕನ್ನಡ ಜಿಲ್ಲೆಯಲ್ಲಿ 11 ಬಾರ್ ಅಸೋಷಿಯೇಷನ್ ಇದ್ದು ,ಉಡುಪಿ 4 , ಮಂಗಳೂರಿನಲ್ಲಿ 6 ಬಾರ್ ಅಸೋಷಿಯನ್ ಇದೆ. ಇನ್ನೂ ಹೈಕೋರ್ಟ್ ನಲ್ಲಿರುವ ಕೇಸ್ ಗಳ ಪ್ರಮಾಣದಲ್ಲೂ ಉತ್ತರ ಕನ್ನಡ ಜಿಲ್ಲೆಯ ಪ್ರಕರಣಗಳು ಹೆಚ್ಚಿಗೆ ಇವೆ. ಹೀಗಾಗಿ ಮಂಗಳೂರಿನಲ್ಲಿ ಸ್ಥಾಫನೆ ಮಾಡುವುದರ ಬದಲು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸ್ಥಾಫನೆ ಮಾಡಿದ್ರೆ ಶಿವಮೊಗ್ಗ ಸೇರಿದಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೂ ಅನಕೂಲ ಆಗುತ್ತದೆ. ಒಂದು ವೇಳೆ ಮಾಡುವುದಕ್ಕೆ ಆಗದೆ ಇದ್ರೆ ಈ ಹಿಂದಿನಂತೆ ಉತ್ತರ ಕನ್ನಡ ಜಿಲ್ಲೆ ಧಾರವಾಡ ಪಿಠದಲ್ಲಿಯೇ ಮುಂದುವರೆಯಲಿ ಎಂದಿದ್ದಾರೆ.

ಮಂಗಳೂರಿನಲ್ಲೇ ಪೀಠ ಸ್ಥಾಪನೆ ಮಾಡಲು ಹೊರಟಿದ್ಯಾಕೆ?

ಕರಾವಳಿಯ ಮಂಗಳೂರು ಮತ್ತು ಉಡುಪಿ ಜಿಲ್ಲೆ ಬೆಂಗಳೂರಿನ ಹೈಕೋರ್ಟ್​​ ಪಿಠದಡಿಯಲ್ಲಿ ಇದ್ದರೇ, ಉತ್ತರ ಕನ್ನಡ ಜಿಲ್ಲೆ ಮಾತ್ರ ಧಾರವಾಡ ಹೈಕೋರ್ಟ್​ ಪೀಠದಡಿ ಬರುತ್ತದೆ. ಹೀಗಾಗಿ ಕರಾವಳಿ ಜಿಲ್ಲೆಗೆ ಪ್ರತ್ಯೇಕ ಹೈಕೋರ್ಟ ಪೀಠ ಬೇಕೆಂದು ಮಂಗಳೂರಿನಲ್ಲಿ ಹೋರಾಟ ಪ್ರಾರಂಭವಾಯಿತು. ಇದರ ಪ್ರತಿಫಲವಾಗಿ ಇದೀಗ ರಾಜ್ಯ ಸರ್ಕಾರ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒಲವು ತೋರಿದ್ದು, ಮಂಗಳೂರಿನಲ್ಲಿ ಹೈ ಕೋರ್ಟ್ ಪಿಠಕ್ಕೆ ಸಕಲ ವ್ಯವಸ್ಥೆ ಕಲ್ಪಿಸುವುದಾಗಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಪತ್ರ ಬರೆದಿತ್ತು. ಇದರ ಬೆನ್ನಲ್ಲೇ ಮಂಗಳೂರಿಗೆ ತೆರಳಿ ಸ್ಥಳ ಪರಿಶೀಲನೆ ಹಾಗೂ ಮೂಲಭೂತ ಸೌಕರ್ಯದ ಕುರಿತು ಪರಿಶೀಲನೆ ನಡೆಸಲಾಗಿದೆ. ಆದ್ರೆ ಇದೀಗ ವಿರೋಧ ವ್ಯಕ್ತವಾಗಿದೆ. ಹೈಕೋರ್ಟ್ ಪೀಠ ಸ್ಥಾಪನೆ ಮಾಡುವುದಾದರೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮಾಡಲಿ,ಇದರಿಂದ ಉಡುಪಿ,ಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ಲಾಭವಾಗಲಿದೆ ಎಂಬುವುದು ಉತ್ತರ ಕನ್ನಡ ಜಿಲ್ಲೆಯ ವಕೀಲರ ವಾದ.

ಶಿವಮೊಗ್ಗದಲ್ಲೆ ಪೀಠ ಸ್ಥಾಪನೆಗೆ ಆಗ್ರಹ

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಉತ್ತರ ಕನಡ ಜಿಲ್ಲೆ ಮಾತ್ರವಲ್ಲ ಶಿವಮೊಗ್ಗದವರು ಸಹ ವಿರೋಧ ವ್ಯಕ್ತಪಡಿಸಿದ್ದು, ಶಿವಮೊಗ್ಗದಲ್ಲೇ ಹೈಕೋರ್ಟ್​ ಪೀಠ ಸ್ಥಾಪನೆ ಮಾಡಬೇಕೆಂದು ಜಿಲ್ಲಾ ವಕೀಲರ ಸಂಘ ಆಗ್ರಹಿಸಿದೆ. ಹೀಗಾಗಿ ಒಂದು ಹೈಕೋರ್ಟ್ ಪೀಠಕ್ಕೆ ಮೂರು ಜಿಲ್ಲೆಗಳ ನಡುವೆ ಹಗ್ಗ ಜಗ್ಗಾಟ ನಡೆದಿದೆ.

ಒಟ್ಟಿನಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್​ ಪೀಠ ಸ್ಥಾಪನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗುತಿದ್ದು ,ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರಿನೊಂದಿಗೆ ಸೇರಿಸಿದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ಜಿಲ್ಲಾ ವಕೀಲರ ಸಂಘ ನೀಡಿದೆ. ಇನ್ನೊಂದೆಡೆ ಶಿವಮೊಗ್ಗದಲ್ಲಿ ಪೀಠ ಆಗಬೇಕೆಂದು ಆಗ್ರಹಗಳು ವ್ಯಕ್ತವಾಗುತ್ತಿದ್ದು, ಸರ್ಕಾರ ಯಾವ ತಿರ್ಮಾನ ಕೈಗೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:13 pm, Fri, 5 June 26

Source link

ಕೊನೆಯ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.8 ಏರಿಕೆ; ಇಡೀ ವರ್ಷದಲ್ಲಾದ ಆರ್ಥಿಕ ಬೆಳವಣಿಗೆ ಶೇ. 7.7 – Kannada News

ನವದೆಹಲಿ, ಜೂನ್ 5: ಕಳೆದ ಬಾರಿಯ ಹಣಕಾಸು ವರ್ಷದಲ್ಲಿ (2025-26) ಭಾರತದ ಆರ್ಥಿಕತೆ ಶೇ. 7.7ರಷ್ಟು ಹೆಚ್ಚಳ ಕಂಡಿದೆ. ಇದು ಸರ್ಕಾರ ಶುಕ್ರವಾರ (ಜೂನ್ 5) ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಿಂದ ತಿಳಿದುಬಂದಿದೆ. 2024-25ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (India GDP) ಶೇ. 7.1ರಷ್ಟು ಹಿಗ್ಗಿತ್ತು. 2025-26ರಲ್ಲಿ ಅದನ್ನೂ ಮೀರಿಸಿದ ಬೆಳವಣಿಗೆ ಸಾಧಿಸಿದೆ.

2025-26ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.8ರ ವಾರ್ಷಿಕ ದರದಲ್ಲಿ ಬೆಳವಣಿಗೆ ಹೊಂದಿದೆ ಎಂದು ದತ್ತಾಂಶದಲ್ಲಿ ತಿಳಿಸಲಾಗಿದೆ. ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಕ್ರಮವಾಗಿ ಶೇ. 7.8, ಶೇ. 8.2 ಮತ್ತು ಶೇ. 7.8ರಷ್ಟು ಬೆಳವಣಿಗೆ ದಾಖಲಾಗಿತ್ತು.

ಇದನ್ನೂ ಓದಿ: ಬಂಡವಾಳ ಆಕರ್ಷಿಸಲು ಬ್ಯಾಂಕುಗಳಿಗೆ ಹೆಡ್ಡಿಂಗ್ ಸಪೋರ್ಟ್​ನಿಂದ ಹಿಡಿದು ಎನ್​ಆರ್​ಐ ಹೂಡಿಕೆ ಮಿತಿ ಹೆಚ್ಚಳದವರೆಗೆ ಆರ್​ಬಿಐನಿಂದ 5 ಕ್ರಮಗಳು

ಹಣದುಬ್ಬರದ ಅಂಶವನ್ನೂ ಪರಿಗಣಿಸಿ ಲೆಕ್ಕ ಮಾಡಲಾದ ನೈಜ ಜಿಡಿಪಿ ಅಥವಾ ರಿಯಲ್ ಜಿಡಿಪಿ ಮೊತ್ತ 2025-26ರಲ್ಲಿ 323.12 ಲಕ್ಷ ಕೋಟಿ ರೂ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ (2024-25) ರಿಯಲ್ ಜಿಡಿಪಿ ಮೊತ್ತ 299.89 ಲಕ್ಷ ಕೋಟಿ ರೂ ಇತ್ತೆನ್ನಲಾಗಿದೆ.

ಇನ್ನು, ಹಣದುಬ್ಬರದ ಪರಿಣಾಮವನ್ನು ಒಳಗೊಂಡ ಲೆಕ್ಕಾಚಾರದ ನಾಮಿನಲ್ ಜಿಡಿಪಿ ಮೊತ್ತ 2025-26ರಲ್ಲಿ 346.36 ಲಕ್ಷ ಕೋಟಿ ರೂ ಇದೆ. ಇದು ಹಿಂದಿನ ವರ್ಷದಕ್ಕೆ ಹೋಲಿಸಿದರೆ ಶೇ. 8.9ರಷ್ಟು ಹೆಚ್ಚಳ ಕಂಡಿದೆ.

ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಯಾವ್ಯಾವ ಸೆಕ್ಟರ್​ಗಳ ಸಾಧನೆ ಹೇಗಿದೆ?

ಕೊನೆಯ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ 7.8ರಷ್ಟು ಹೆಚ್ಚಿದೆ. ಇದರಲ್ಲಿ ಸರ್ವಿಸ್ ಸೆಕ್ಟರ್​ನ ಕೊಡುಗೆ ಗಣನೀಯವಾಗಿದೆ. ಇದು ಶೇ. 9.9ರ ವಾರ್ಷಿಕ ದರದಲ್ಲಿ ಹಿಗ್ಗಿದೆ. ಮ್ಯಾನುಫ್ಯಾಕ್ಚರಿಂಗ್, ಕನ್ಸ್​ಟ್ರಕ್ಷನ್, ಯುಟಿಲಿಟಿ ಇತ್ಯಾದಿ ಇರುವ ಸೆಕೆಂಡರಿ ಸೆಕ್ಟರ್ ಉತ್ತಮವಾದ ಶೇ. 7.4ರಷ್ಟು ಹಿಗ್ಗಿದೆ.

ಇದನ್ನೂ ಓದಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆಬಿ ನೊಂದಣಿ ಇಲ್ಲದೇ ಎನ್​ಆರ್​ಐಗಳಿಗೆ ಹೂಡಿಕೆ ಮಿತಿ ಹೆಚ್ಚಳ

ವೈಯಕ್ತಿಕ ಸೆಕ್ಟರ್​ಗಳ ಪೈಕಿ ಟ್ರೇಡ್, ಹೋಟೆಲ್, ಟ್ರಾನ್ಸ್​ಪೋರ್ಟ್, ಕಮ್ಯೂನಿಕೇಶನ್, ಬ್ರಾಡ್ಕ್ಯಾಸ್ಟಿಂಗ್ ಸಂಬಂಧಿತ ಸೇವೆಗಳು ಕೊನೆಯ ಕ್ವಾರ್ಟರ್​ನಲ್ಲಿ ಅದ್ವಿತೀಯವೆನಿಸುವ ಶೇ. 12.5ರಷ್ಟು ಬೆಳವಣಿಗೆ ಕಂಡಿವೆ. ರಿಯಲ್ ಎಸ್ಟೇಟ್, ಐಟಿ ಸರ್ವಿಸ್, ವೃತ್ತಿಪರ ಸೇವೆ, ಹಣಕಾಸು ಸೇವೆಗಳು ಶೇ. 10.4ರಷ್ಟು ಹೆಚ್ಚಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link