Category Archives: Blog

Your blog category

ಸಂಸಾರ ಹಾಳು ಮಾಡಿದವನ ಸಂಹಾರ: ಕೊಲೆ ಮಾಡಿ ಫೇಸ್ಬುಕ್​​ನಲ್ಲಿ ತಪ್ಪೊಪ್ಪಿಕೊಂಡ ಖದೀಮರು – Kannada News | Kolar Murder: a man Killed in Revenge, Accused Confesses on Facebook, 3 Arrests

ಕೋಲಾರ, ಫೆಬ್ರವರಿ 01: ವ್ಯಕ್ತಿಯೋರ್ವನನ್ನು ಕೊಲೆ (murder) ಮಾಡಿ ಬಳಿಕ ಫೇಸ್‌ಬುಕ್​​ನಲ್ಲಿ ಆರೋಪಿ ತಪ್ಪೊಪ್ಪಿಕೊಂಡ ವಿಚಿತ್ರ ಘಟನೆಯೊಂದು ಕೋಲಾರದಲ್ಲಿ (Kolar) ನಡೆದಿದೆ. ಜನವರಿ 27ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯಲ್ಲೇಶ್​​ ಕೊಲೆಯಾದ ವ್ಯಕ್ತಿ. ಬಿಂದುಕುಮಾರ್ (20) ಕಿರಣ್​ (19) ಮತ್ತು ಅಕ್ಷಯ್​ (20) ಬಂಧಿತರು. ಹಳೆ ಸೇಡು ತೀರಿಸಿಕೊಳ್ಳಲು ಕೊಲೆ ಮಾಡಲಾಗಿದೆ. ಹತ್ಯೆ ಬಳಿಕ ಆರೋಪಿಗಳು ಫೇಸ್‌ಬುಕ್​​ನಲ್ಲಿ ವಿಡಿಯೋ ಮಾಡಿದ್ದರು. ಸದ್ಯ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು? 

ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬಳಿ ಜನವರಿ 27ರ ರಾತ್ರಿ ನರಸಾಪುರ ಗ್ರಾಮದ ಯಲ್ಲೇಶ್​ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ರಾಜಕೀಯ ಮುಖಂಡರ ಜೊತೆಗೆ ಗುರುತಿಸಿಕೊಂಡಿದ್ದ ಯಲ್ಲೇಶ್​, ಕೊಲೆಗೆ ಕಾರಣ ಏನು ಅನ್ನೋದನ್ನು ಹುಡುಕಲು ಹೊರಟ ಪೊಲೀಸರಿಗೆ ಅಲ್ಲೊಂದು ಅಕ್ರಮ ಸಂಬಂಧ ಸೇರಿದಂತೆ ಒಂದು ಕುಟುಂಬದ ಹೆಸರು ಕೇಳಿ ಬಂದಿತ್ತು.

ಇದನ್ನೂ ಓದಿ: ವಿಜಯನಗರ: ತ್ರಿವಳಿ ಕೊಲೆಯ ಕಾರಣ ಬಯಲು, ಲವ್ವಿಡವ್ವಿಯಿಂದ ತಂಗಿ ಗರ್ಭಿಣಿಯಾದ್ದು ತಿಳಿದು ಕುಟುಂಬವನ್ನೇ ಮುಗಿಸಿದ ಅಣ್ಣ!

ಆರಂಭದಲ್ಲಿ ಯಲ್ಲೇಶ್​​ನನ್ನು ನರಸಾಪುರ ಗ್ರಾಮದ ಸಂತೋಷ್ ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿತ್ತು. ಕಾರಣ ಯಲ್ಲೇಶ್, ಸಂತೋಷ್​ನ ಹೆಂಡತಿಯನ್ನು ಕರೆದುಕೊಂಡು ಹೋಗಿ ಆಕೆಯೊಂದಿಗೆ  ಕಳೆದ ಆರೇಳು ವರ್ಷಗಳಿಂದ ಸಂಸಾರ ಮಾಡುತ್ತಿದ್ದ. ಇದರಿಂದ ಕೋಪಗೊಂಡಿದ್ದ ಸಂತೋಷ್, ಯಲ್ಲೇಶ್ ನನ್ನು ಮುಗಿಸುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದ, ಹಾಗಾಗಿ ಅವನೇ ಕೊಲೆ ಮಾಡಿದ್ದಾನೆ ಎಂದುಕೊಂಡಿದ್ದರು. ಆದರೆ ಸಂತೋಷ್​ ಕೊಲೆಯಾದ ಮರುದಿನವೇ ಒಡಿಸ್ಸಾದಲ್ಲಿದ್ದುಕೊಂಡು ಫೇಸ್‌ಬುಕ್​ನಲ್ಲಿ ವಿಡಿಯೋ ಮಾಡಿ ನನಗೂ ಕೊಲೆಗೂ ಸಂಬಂಧವಿಲ್ಲ. ಬದಲಾಗಿ ನನ್ನ ಮಗ ಬಿಂದುಕುಮಾರ್​ ಕೊಲೆ ಮಾಡಿರುವ ಅನುಮಾನವಿದೆ ಎಂದಿದ್ದ.

ಯಲ್ಲೇಶ್​​ ನನ್ನ ಸಂಸಾರವನ್ನು ಹಾಳು ಮಾಡಿದ್ದ. ಜೊತೆಗೆ ನನ್ನ ಮಗಳ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿ ಆ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಹೀಗಾಗಿ ನನ್ನ ಮಗನೇ ಕೊಲೆ ಮಾಡಿರುವ ಅನುಮಾನವಿದೆ ಎಂದು ಹೇಳಿದ್ದ. ಆದರೆ ಸಂತೋಷ್​ನನ್ನು ಬಿಟ್ಟು ಹೋಗಿದ್ದ ಆತನ ಹೆಂಡತಿ ಮಾತ್ರ ಸಂತೋಷ್​​ನೇ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಫೇಸ್‌ಬುಕ್​ ಲೈವ್ ಕೊಲೆ ಮಾಡಿರುವುದಾಗಿ ಒಪ್ಪಿಗೆ

ಇನ್ನು ಇದಾದ ಕೆಲವೇ ನಿಮಿಷಗಳಲ್ಲಿ ಸಂತೋಷ್​​​​ ಮಗ ಬಿಂದುಕುಮಾರ್ ಫೇಸ್‌ಬುಕ್​ ಲೈವ್​​ ಬಂದು ಯಲ್ಲೇಶ್​ನನ್ನು ತಾನೇ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದ. ಅಲ್ಲದೆ ಅವನು ತನ್ನ ತಂಗಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನನ್ನ ತಾಯಿಯನ್ನು ಪುಸಲಾಯಿಸಿ ತನ್ನ ತಂದೆಯಿಂದ ದೂರ ಮಾಡಿದ್ದ. ಅಲ್ಲದೆ ನನ್ನನ್ನು ಕೊಲೆ ಮಾಡುವ ಪ್ಲ್ಯಾನ್​​ ಮಾಡಿದ್ದ ಅನ್ನೋ ಕಾರಣಕ್ಕೆ ನಾನು ಒಂದು ಪುಟ್ಟ ಗ್ಯಾಂಗ್ ಕಟ್ಟಿಕೊಂಡು ಅವನನ್ನು ಕೊಲೆ ಮಾಡಿರುವುದಾಗಿ ಹೇಳಿದ್ದ. ಅಷ್ಟೇ ಅಲ್ಲದೆ ನಾವು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಶರಣಾಗುತ್ತೇವೆಂದು ಹೇಳಿ ನಂತರ ಮೊಬೈಲ್ ಸ್ವಿಚ್ ಆಫ್​ ಮಾಡಿಕೊಂಡಿದ್ದರು.

ಇನ್ನು ಕೊಲೆ ಮಾಡಿದ್ದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೂ ಕೊಲೆ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಕೊಲೆ ಮಾಡಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದವರ ಬಂಧನಕ್ಕಾಗಿ ಬಲೆಬೀಸಿದ್ದರು. ಆರೋಪಿಗಳು ಬೆಂಗಳೂರು ಬಳಿ ತಲೆಮರೆಸಿಕೊಂಡಿರುವುದು ತಿಳಿದು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ. ಸಂತೋಷ್​ನ ಮಗ ಬಿಂದುಕುಮಾರ್​ ಹಾಗೂ ಆತನ ಸ್ನೇಹಿತರಾದ ಕಿರಣ್​, ಅಕ್ಷಯ್ ಎಂಬುವರನ್ನು ಬಂಧಿಸಿರುವ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.  ಇನ್ನು ಕೊಲೆಗೆ ಸಹಕಾರ ನೀಡಿದ ತಂದೆ ಸಂತೋಷ್​ ಕೂಡ ಈ ಕೊಲೆ ಪ್ರಕರಣದಲ್ಲಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಬಂಧನಕ್ಕೆ ಬಂದ ಪೊಲೀಸರ ಮೇಲೆಯೇ ‘ಕೈ’ ಮುಖಂಡನ ಪುತ್ರನಿಂದ ನಡೀತಾ ಹಲ್ಲೆ?

ಅತ್ತ ಗಂಡನನ್ನು ಬಿಟ್ಟು ಮತ್ತೊಬ್ಬನ ಜೊತೆಗಿದ್ದ ತಾಯಿ, ಹೆಂಡಿಯಿಂದ ದೂರಾದ ಗಂಡ, ತಂದೆ ತಾಯಿಯಿಂದ ಸಂಸ್ಕಾರ ಕಲಿಯದ ಮಗ, ಎಲ್ಲರ ಬದುಕು ದಿಕ್ಕಾಪಾಲಾಗಿ ಹೋಗಿರೋದಂತು ಸುಳ್ಳಲ್ಲ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸತತ 2 ಜೀವದಾನ ಸಿಕ್ಕರೂ ಪಾಕ್ ವಿರುದ್ಧ ಮುಗ್ಗರಿಸಿದ ವೈಭವ್ ಸೂರ್ಯವಂಶಿ – Kannada News | U19 World Cup Vaibhav Suryavanshi Fails to Convert Lifelines vs Pakistan

ಅಂಡರ್-19 ವಿಶ್ವಕಪ್​ನಲ್ಲಿ (U19 World Cup) ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಎಲ್ಲರ ದೃಷ್ಟಿ ವೈಭವ್ ಸೂರ್ಯವಂಶಿ (Vaibhav Suryavanshi) ಮೇಲಿದ್ದವು. ಆದರೆ ಈ ಪಂದ್ಯದಲ್ಲಿ ವೈಭವ್​ಗೆ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಲಿಲ್ಲ. ಪಾಕ್ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸತತ ಎರಡು ಎಸೆತಗಳಲ್ಲಿ ಮೂರು ಜೀವದಾನ ಸಿಕ್ಕರೂ ಅದನ್ನು ಸದುಪಯೋಗಪಡಿಸಿಕೊಳ್ಳಲಾಗದೆ 30 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ವಿಶ್ವದ ಬಲಿಷ್ಠ ತಂಡಗಳೆದುರು ಅಬ್ಬರಿಸಿರುವ ವೈಭವ್​ಗೆ ಪಾಕಿಸ್ತಾನದ ವಿರುದ್ಧ ಮಾತ್ರ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ನಡೆದಿದ್ದ ಅಂಡರ್ 19 ಏಷ್ಯಾಕಪ್ ಫೈನಲ್​ನಲ್ಲೂ ವೈಭವ್​ ಬ್ಯಾಟ್ ಅಬ್ಬರಿಸಿರಲಿಲ್ಲ. ಇದೀಗ ವಿಶ್ವಕಪ್​ನಲ್ಲೂ ಅದೇ ಸಂಭವಿಸಿದೆ.

ಸತತ 2 ಜೀವದಾನ

ಈ ಪಂದ್ಯದಲ್ಲಿ ವೈಭವ್ ಮತ್ತು ಆರನ್ ಜಾರ್ಜ್ ಮೊದಲ ಎರಡು ಅಥವಾ ಮೂರು ಓವರ್‌ಗಳಲ್ಲಿ ಎಚ್ಚರಿಕೆಯಿಂದ ಆಡಿದರಾದರೂ ಬೇಗನೇ ವಿಕೆಟ್ ಕಳೆದುಕೊಂಡರು. ವಿಶೇಷವಾಗಿ ಆಕ್ರಮಣಕಾರಿ ಆಟಕ್ಕೆ ಮುಂದಾದ ವೈಭವ್ ನಾಲ್ಕನೇ ಓವರ್‌ನಲ್ಲಿ ಎರಡು ಬೌಂಡರಿ ನಂತರ ಏಳನೇ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಆದರೆ 8ನೇ ಓವರ್‌ನಲ್ಲಿ ಎಲ್ಲವೂ ಇದ್ದಕ್ಕಿದ್ದಂತೆ ಬದಲಾಯಿತು. ಎಡಗೈ ವೇಗದ ಬೌಲರ್ ಮೊಹಮ್ಮದ್ ಸಯಾಮ್ ಎಸೆದ ಈ ಓವರ್‌ನಲ್ಲಿ, ವೈಭವ್ ಸತತ ಎರಡು ಎಸೆತಗಳಲ್ಲಿ ಮೂರು ಬಾರಿ ಪಾಕಿಸ್ತಾನಕ್ಕೆ ವಿಕೆಟ್ ಪಡೆಯುವ ಅವಕಾಶ ನೀಡಿದರು.

ಹೌದು, ವೈಭವ್ ಎರಡು ಎಸೆತಗಳಲ್ಲಿ ಪಾಕಿಸ್ತಾನಕ್ಕೆ ಮೂರು ಅವಕಾಶಗಳನ್ನು ಸೃಷ್ಟಿಸಿದರು. ಓವರ್‌ನ ಮೂರನೇ ಎಸೆತದಲ್ಲಿ, ವೈಭವ್ ಪುಲ್ ಮಾಡಲು ಪ್ರಯತ್ನಿಸಿದರು, ಆದರೆ ಚೆಂಡು ಮಿಡ್‌ವಿಕೆಟ್‌ನಲ್ಲಿ ಗಾಳಿಯಲ್ಲಿ ಎತ್ತರಕ್ಕೆ ಹಾರಿಹೋಯಿತು. ಫೀಲ್ಡರ್ ಸುಲಭವಾದ ಕ್ಯಾಚ್ ಅನ್ನು ಕೈಬಿಟ್ಟರು. ಆದಾಗ್ಯೂ, ಈ ಸಮಯದಲ್ಲಿ, ಇಬ್ಬರು ಭಾರತೀಯ ಬ್ಯಾಟ್ಸ್‌ಮನ್‌ಗಳ ನಡುವೆ ರನ್ ಓಡುವ ಬಗ್ಗೆ ಗೊಂದಲ ಉಂಟಾದ್ದರಿಂದ ವೈಭವ್ ರನೌಟ್​ಗೆ ಬಲಿಯಾಗಬೇಕಿತ್ತು. ಆದರೆ ಕ್ಯಾಚ್ ಬಿಟ್ಟ ಫೀಲ್ಡರ್ ಚೆಂಡನ್ನು ವಿಕೆಟ್​ನತ್ತ ಎಸೆದರು, ಅಲ್ಲಿ ಕೀಪರ್ ಇರದ ಕಾರಣ ರನೌಟ್​ನಿಂದಲೂ ಪಾರಾದರು.

30 ರನ್ ಗಳಿಸಿ ಔಟಾದ ವೈಭವ್

ಒಂದೇ ಚೆಂಡಿನಲ್ಲಿ ಎರಡು ಬಾರಿ ಔಟ್ ಆಗುವುದನ್ನು ತಪ್ಪಿಸಿಕೊಂಡ ನಂತರ ವೈಭವ್ ಮತ್ತು ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ ಮುಂದಿನ ಎಸೆತದಲ್ಲಿಯೇ ವೈಭವ್ ಮತ್ತೆ ಅದೇ ಹೊಡೆತವನ್ನು ಆಡಲು ಯತ್ನಿಸಿ ವಿಕೆಟ್ ಕೀಪರ್​ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಅಂತಿಮವಾಗಿ ವೈಭವ್ 22 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು. ಪಾಕಿಸ್ತಾನ ವಿರುದ್ಧ ಇದು ಸತತ ಮೂರನೇ ಪಂದ್ಯವಾಗಿದ್ದು, ಇದಕ್ಕೂ ಮೊದಲು ಅವರು ಏಷ್ಯಾಕಪ್‌ನ ಎರಡು ಪಂದ್ಯಗಳಲ್ಲಿ 5 ಮತ್ತು 26 ರನ್ ಬಾರಿಸಿದ್ದರು.

U19 World Cup 2026: ಅತಿ ವೇಗದ, ಅತಿ ಕಿರಿಯ; ವಿಶ್ವದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ

ಕ್ಯಾಪ್ಟನ್ ಮ್ಹಾತ್ರೆ ಮತ್ತೆ ವಿಫಲ

ವೈಭವ್ ಔಟಾದ ನಂತರ ಭಾರತ ಕೇವಲ ನಾಲ್ಕು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಎಂಟನೇ ಓವರ್‌ನ ನಾಲ್ಕನೇ ಎಸೆತದಲ್ಲಿ ವೈಭವ್ ಔಟಾದರೆ, ಎರಡು ಎಸೆತಗಳ ನಂತರ, ಹೊಸ ಬ್ಯಾಟ್ಸ್‌ಮನ್ ಮತ್ತು ನಾಯಕ ಆಯುಷ್ ಮ್ಹಾತ್ರೆ ರನ್ ಗಳಿಸದೆ ಅದೇ ಬೌಲರ್‌ಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ, ಮ್ಹಾತ್ರೆ ಅವರ ಕಳಪೆ ಪ್ರದರ್ಶನ ಈ ಪಂದ್ಯದಲ್ಲೂ ಮುಂದುವರೆಯಿತು. ಮುಂದಿನ ಓವರ್‌ನ ಮೊದಲ ಎಸೆತದಲ್ಲಿಯೇ, ಆರಂಭಿಕ ಆಟಗಾರ ಆರನ್ ಜಾರ್ಜ್ (16) ಕ್ಲೀನ್ ಬೌಲ್ಡ್ ಆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:27 pm, Sun, 1 February 26

Source link

ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ – Kannada News | Wild elephant chased Forest Department Staff at mandya Video Goes viral

ಮಂಡ್ಯ, (ಫೆಬ್ರವರಿ 01): ಕಾಡಿನಿಂದ ನಾಡಿಗೆ ಬಂದ ಒಂಟಿ ಸಲಗ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಗುಂಡಾಪುರ ಗ್ರಾಮದಲ್ಲಿ ನಡೆದಿದೆ. ಏಕಾಂಗಿಯಾಗಿ ಗುಂಡಾಪುರ ಗ್ರಾಮಕ್ಕೆ ಕಾಡಾನೆ ನುಗ್ಗಿದ್ದು, ಇದನ್ನ ಓಡಿಸಲು ಹೋದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಹಿಮ್ಮಟ್ಟಿಸಿದೆ. ಪ್ರಾಣ ಭಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಪಿಸ್ತೂಲ್​​ ಹಿಡಿದುಕೊಂಡೇ ಎದ್ನೋ ಬಿದ್ನೋ ಅಂತ ಓಡಿ ಹೋಗಿ ಆನೆಯಿಂದ ತಪ್ಪಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Job Growth: 2030ರ ವೇಳೆಗೆ ಆರೋಗ್ಯ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶ; ಬಜೆಟ್‌ನಲ್ಲಿ ಘೋಷಣೆ – Kannada News | Union Budget 2026 Boosts Healthcare: Training, Infrastructure and Job Growth in India

ಕೇಂದ್ರ ಸರ್ಕಾರದ ಬಜೆಟ್ 2026 ಆರೋಗ್ಯ ಮತ್ತು ಆರೈಕೆ ವಲಯವನ್ನು ಬಲಪಡಿಸುವ ಜೊತೆಗೆ ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ ನೀಡಿದೆ. ಆರೋಗ್ಯ ಸೇವೆಗಳು, ತರಬೇತಿ, ವೈದ್ಯಕೀಯ ಶಿಕ್ಷಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಣಕಾಸು ಸಚಿವರು ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಮುಂಬರುವ ವರ್ಷಗಳಲ್ಲಿ ದೇಶದಾದ್ಯಂತ ಲಕ್ಷಾಂತರ ಯುವಕರಿಗೆ ತರಬೇತಿ ನೀಡಿ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಉಪಕ್ರಮಗಳ ಮೂಲಕ ಭಾರತದಲ್ಲಿ ಸುಧಾರಿತ ಆರೋಗ್ಯ ಸೇವೆಗಳು ಲಭ್ಯವಾಗುವುದರ ಜೊತೆಗೆ ಆರೋಗ್ಯ ವೃತ್ತಿಗೆ ಹೊಸ ಗುರುತನ್ನು ನೀಡುವ ಪ್ರಯತ್ನವೂ ನಡೆಯುತ್ತಿದೆ.

ಆರೋಗ್ಯ ವಲಯ – ಉದ್ಯೋಗದ ಪ್ರಮುಖ ಮೂಲ:

ಸರ್ಕಾರದ ಅಂದಾಜು ಪ್ರಕಾರ, 2030ರ ವೇಳೆಗೆ ಆರೋಗ್ಯ ಮತ್ತು ಆರೈಕೆ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇದಕ್ಕಾಗಿ ತರಬೇತಿ ಸಂಸ್ಥೆಗಳ ಮೇಲ್ದರ್ಜೆ, ಹೊಸ ಕೋರ್ಸ್‌ಗಳ ಪರಿಚಯ, ಆರೋಗ್ಯ ಮೂಲಸೌಕರ್ಯದ ವಿಸ್ತರಣೆಗಳ ಮೇಲೆ ವಿಶೇಷ ಒತ್ತು ನೀಡಲಾಗಿದೆ.

ಆರೋಗ್ಯ ವೃತ್ತಿಪರರಿಗೆ (Allied Health Professionals) ಹೊಸ ಯೋಜನೆ:

ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಅಲೈಡ್ ಹೆಲ್ತ್ ಪ್ರೊಫೆಷನಲ್ಸ್ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಈ ಯೋಜನೆಯ ಅಡಿಯಲ್ಲಿ ಈ ಪ್ರಮುಖ ಕ್ಷೇತ್ರಗಳಾದ ಆಪ್ಟೋಮೆಟ್ರಿ, ರೇಡಿಯಾಲಜಿ, ಅರಿವಳಿಕೆ (Anesthesia), OT ತಂತ್ರಜ್ಞಾನ, ಮನೋವಿಜ್ಞಾನ ಸಂಸ್ಥೆಗಳ ಸುಧಾರಣೆ ಮತ್ತು ಹೊಸ ಸಂಸ್ಥೆಗಳ ಸ್ಥಾಪನೆ ನಡೆಯಲಿದೆ.

ಆರೈಕೆದಾರರಿಗೆ (Caregivers) ದೊಡ್ಡ ಮಟ್ಟದ ತರಬೇತಿ:

ಆರೈಕೆ ಕ್ಷೇತ್ರವನ್ನು ಬಲಪಡಿಸಲು ಸುಮಾರು 1.5 ಲಕ್ಷ ಆರೈಕೆದಾರರಿಗೆ ಬಹು-ಕೌಶಲ್ಯ ತರಬೇತಿ ನೀಡುವ ಯೋಜನೆಯೂ ಘೋಷಿಸಲಾಗಿದೆ. ವೃದ್ಧರ ಆರೈಕೆ, ಕ್ಷೇಮ ಸೇವೆಗಳು, ಯೋಗ ಬೆಂಬಲ ಮತ್ತು ಆಧುನಿಕ ವೈದ್ಯಕೀಯ ಸಾಧನಗಳ ನಿರ್ವಹಣೆಯಲ್ಲಿ ಈ ತರಬೇತಿ ಪಡೆದವರು ಮಹತ್ವದ ಪಾತ್ರ ವಹಿಸಲಿದ್ದಾರೆ.

ವೈದ್ಯಕೀಯ ಮೌಲ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ:

ಭಾರತವನ್ನು ವೈದ್ಯಕೀಯ ಮೌಲ್ಯ ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ ರೂಪಿಸಲು ಖಾಸಗಿ ವಲಯದ ಸಹಯೋಗದೊಂದಿಗೆ ಐದು ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಸರ್ಕಾರ ತಿಳಿಸಿದೆ. ಇದರಿಂದ ಸಂಶೋಧನೆ, ಚಿಕಿತ್ಸೆ ಮತ್ತು ಪುನರ್ವಸತಿ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಮಾನಸಿಕ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ NIMHANS ಮಾದರಿಯ ಹೊಸ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಕ್ರಮಗಳು ಆರೋಗ್ಯ ವೃತ್ತಿಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲಿದ್ದು, ಯುವಕರಿಗೆ ಗೌರವಯುತ ಹಾಗೂ ಭವಿಷ್ಯಭರಿತ ವೃತ್ತಿ ಮಾರ್ಗವನ್ನು ತೆರೆದಿಡಲಿವೆ.

ಆರೋಗ್ಯ ವೃತ್ತಿಗೆ ಹೊಸ ಗುರುತು:

ಈ ಎಲ್ಲಾ ಕ್ರಮಗಳ ಮೂಲಕ ಆರೋಗ್ಯ ಮತ್ತು ಆರೈಕೆ ಕ್ಷೇತ್ರದಲ್ಲಿ ಕೆಲಸ ಮಾಡುವ ಯುವಜನರನ್ನು ಕೇವಲ ಸಹಾಯಕ ಸಿಬ್ಬಂದಿಯಾಗಿ ಮಾತ್ರವಲ್ಲ, ತರಬೇತಿ ಪಡೆದ ವೃತ್ತಿಪರರಾಗಿ ಗುರುತಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದರಿಂದ ಜಾಗತಿಕ ಆರೋಗ್ಯ ಪೂರೈಕೆ ಸರಪಳಿಯಲ್ಲಿ ಭಾರತದ ಪಾತ್ರ ಮತ್ತಷ್ಟು ಬಲಗೊಳ್ಳಲಿದೆ.

ಬಜೆಟ್ ಲೈವ್​ ಅಪ್​ಡೇಟ್ಸ್​ಗೆ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Budget 2026: ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ – Kannada News | Union Budget 2026 Nirmala Sitharaman Briefs Media After Budget Speech

ನವದೆಹಲಿ, ಫೆಬ್ರವರಿ 1: ಇಂದು ದಾಖಲೆಯ 9ನೇ ಬಾರಿಗೆ ಬಜೆಟ್ (Budget 2026)  ಮಂಡಿಸಿದ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಈ ವರ್ಷದ ಬಜೆಟ್​​ನ ಹೈಲೈಟ್​ಗಳನ್ನು ತಿಳಿಸಿದ್ದಾರೆ. ಭಾರತದ ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ. ಉತ್ತೇಜನ ಸಿಗುತ್ತದೆ. ಸೆಮಿಕಂಡಕ್ಟರ್ ಮಿಷನ್ ಭಾರತದ ಸ್ಟಾಕ್ ಅನ್ನು ಬಲಪಡಿಸುವ ಮತ್ತು ಐಪಿ-ಸಂಬಂಧಿತ ವಿಷಯಗಳನ್ನು ಪರಿಹರಿಸುವ 2 ಪ್ರಮುಖ ಘೋಷಣೆಗಳನ್ನು ಒಳಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದರು. 40,000 ಕೋಟಿಗಳ ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನಾ ಯೋಜನೆಯು ಎಲೆಕ್ಟ್ರಾನಿಕ್ಸ್ ವಲಯವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದರು.

“ಭಾರತವು ತನ್ನದೇ ಆದ ವಸ್ತುಗಳ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡಲು ಅಪರೂಪದ ಭೂಮಿಯ ಕಾರಿಡಾರ್‌ಗಳ ಸ್ಥಾಪನೆಯನ್ನು ಸರ್ಕಾರ ಘೋಷಿಸಿದೆ. ಈ ಖನಿಜಗಳನ್ನು ಗುರುತಿಸಿ, ಅನ್ವೇಷಿಸಿ, ಸಂಸ್ಕರಿಸಿ ದೇಶೀಯವಾಗಿ ಲಭ್ಯವಾಗುವಂತೆ ಮಾಡಿದ ನಂತರ ಭೂಮಿಯ ಬಾಹ್ಯ ಮೂಲಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಈ ಕಾರಿಡಾರ್‌ಗಳಿಗಾಗಿ ಗುರುತಿಸಲಾದ ರಾಜ್ಯಗಳು ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು. ಇವು ಭಾರತೀಯ ಆರ್ಥಿಕತೆಯ ಮೇಲೆ ವ್ಯಾಪಕ ಪರಿಣಾಮ ಬೀರುವ ಪ್ರಮುಖ ಬೆಳವಣಿಗೆಗಳಾಗಿವೆ. ಇದು ಆಯಸ್ಕಾಂತಗಳು ಮತ್ತು ಅಪರೂಪದ ಭೂಮಿಯ ಆಮದುಗಳ ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಮ್ಯಾನುಫ್ಯಾಕ್ಚರಿಂಗ್​ನಿಂದ ಹಿಡಿದು ಎಂಎಸ್​ಎಂಇವರೆಗೆ, ಆರ್ಥಿಕ ಪ್ರಗತಿಗೆ ಆರಂಶಗಳನ್ನು ತಿಳಿಸಿದ ನಿರ್ಮಲಾ ಸೀತಾರಾಮನ್

ಔಷಧಗಳು ಮತ್ತು ವಿಶೇಷ ವೈದ್ಯಕೀಯ ಆಹಾರಕ್ಕಾಗಿ ಆಮದು ಸುಂಕ ವಿನಾಯಿತಿಯ ಅಡಿಯಲ್ಲಿ 7 ಹೆಚ್ಚುವರಿ ಅಪರೂಪದ ಕಾಯಿಲೆಗಳನ್ನು ಸೇರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. “ಆಮದು ಸುಂಕ ವಿನಾಯಿತಿ ಪಟ್ಟಿಗೆ ಇನ್ನೂ 7 ಅಪರೂಪದ ಕಾಯಿಲೆಗಳನ್ನು ಸೇರಿಸಲಾಗಿದೆ. ಪ್ರಯಾಣದ ಸಮಯದಲ್ಲಿ ತಂದ ಬ್ಯಾಗೇಜ್ ಕ್ಲಿಯರೆನ್ಸ್ ಮತ್ತು ವೈಯಕ್ತಿಕ ವಸ್ತುಗಳಿಗೆ ವರ್ಧಿತ ಸುಂಕ ರಹಿತ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ, ಹಲವಾರು ನೇರ ಮತ್ತು ಪರೋಕ್ಷ ತೆರಿಗೆ ಪ್ರಸ್ತಾವನೆಗಳಿವೆ” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

“21ನೇ ಶತಮಾನವು ಸಂಪೂರ್ಣವಾಗಿ ತಂತ್ರಜ್ಞಾನದಿಂದ ನಡೆಸಲ್ಪಡುತ್ತದೆ, ಅದು ಸಾಮಾನ್ಯ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಪ್ರಾಥಮಿಕವಾಗಿ, ನಾವು ರಚನಾತ್ಮಕ ಸುಧಾರಣೆಗಳೊಂದಿಗೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನ ಹರಿಸಿದ್ದೇವೆ. ಆ ಬಗ್ಗೆ ಸುಧಾರಣಾ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದೇವೆ. ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಉದ್ಯೋಗ ಸೃಷ್ಟಿಯಾಗುವುದನ್ನು ಹೆಚ್ಚಿಸಲು ನಾವು ಸಾಕಷ್ಟು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತೇವೆ. 21ನೇ ಶತಮಾನವು ಸಂಪೂರ್ಣವಾಗಿ ತಂತ್ರಜ್ಞಾನದಿಂದ ನಡೆಸಲ್ಪಡುತ್ತದೆ. ಆದ್ದರಿಂದ ಸಾಮಾನ್ಯ ಜನರಿಗೆ ಪ್ರಯೋಜನವಾಗುವಂತೆ ತಂತ್ರಜ್ಞಾನವನ್ನು ಜಾರಿಗೆ ತರುವುದು ನಮ್ಮ ಉದ್ದೇಶ” ಎಂದು ಬಜೆಟ್ ಮಂಡಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದರು.

ಇದನ್ನೂ ಓದಿ: ಮ್ಯಾನುಫ್ಯಾಕ್ಚರಿಂಗ್​ನಿಂದ ಹಿಡಿದು ಎಂಎಸ್​ಎಂಇವರೆಗೆ, ಆರ್ಥಿಕ ಪ್ರಗತಿಗೆ ಆರಂಶಗಳನ್ನು ತಿಳಿಸಿದ ನಿರ್ಮಲಾ ಸೀತಾರಾಮನ್

“ಸುಧಾರಣಾ ಸೂಚನೆಗಳು ಉತ್ತಮ ಹಾದಿಯಲ್ಲಿವೆ ಮತ್ತು ನಮ್ಮ ಕರ್ತವ್ಯಗಳನ್ನು ಪೂರೈಸಲು ನಮಗೆ ಸಹಾಯ ಮಾಡಲು ಅದರ ಆವೇಗವನ್ನು ಕಾಯ್ದುಕೊಳ್ಳುತ್ತದೆ. ನಾವು 12 ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡಾಗಿನಿಂದ ದೇಶದ ಆರ್ಥಿಕ ಪಥವು ಸ್ಥಿರತೆ, ಹಣಕಾಸಿನ ಶಿಸ್ತು, ನಿರಂತರ ಬೆಳವಣಿಗೆ ಮತ್ತು ಮಧ್ಯಮ ಹಣದುಬ್ಬರದಿಂದ ಗುರುತಿಸಲ್ಪಟ್ಟಿದೆ. ಅನಿಶ್ಚಿತತೆ ಮತ್ತು ಅಡೆತಡೆಗಳ ಸಮಯದಲ್ಲೂ ನಾವು ಮಾಡಿದ ಎಚ್ಚರಿಕೆಯ ಆಯ್ಕೆಗಳ ಫಲಿತಾಂಶ ಇದು” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:12 pm, Sun, 1 February 26

Source link

ಜೀವ ರಕ್ಷಕ ಔಷಧಿಗಳ ದರ ಇಳಿಕೆ, 3 ಹೊಸ ಏಮ್ಸ್ ಆಸ್ಪತ್ರೆ: ಬಜೆಟ್​​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಭರಪೂರ ಕೊಡುಗೆ – Kannada News | Union Budget 2026: Life Saving Drug Prices Slashed, 3 New AIIMS as Health Sector Gets Major Boost

ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್​​ನಲ್ಲಿ (Union Budget 2026) ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಸಾಮಾನ್ಯ ಜನರ ಆರೋಗ್ಯ ಮತ್ತು ಜೇಬು ಇವೆರಡನ್ನೂ ಗಮನದಲ್ಲಿಟ್ಟುಕೊಂಡು ಬಜೆಟ್ ಸಿದ್ಧಪಡಿಸಲಾಗಿದೆ. ಕ್ಯಾನ್ಸರ್ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ದುಬಾರಿ ಚಿಕಿತ್ಸೆಗಳೊಂದಿಗೆ ಹೋರಾಡುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಬಿಗ್ ಗಿಫ್ಟ್ ನೀಡಲಾಗಿದೆ. ಆರೋಗ್ಯವು ಶ್ರೀಮಂತರಿಗೆ ಮಾತ್ರವಲ್ಲದೆ, ಪ್ರತಿಯೊಬ್ಬ ನಾಗರಿಕನಿಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯುವಂತೆ ಮಾಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಯಾವೆಲ್ಲ ಔಷಧಿಗಳ ದರ ಇಳಿಕೆ?

ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಅಥವಾ ಮಧುಮೇಹದಂತಹ ಗಂಭೀರ ಕಾಯಿಲೆ ಪತ್ತೆಯಾದಾಗ, ಇಡೀ ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಈ ನೋವನ್ನು ಅರ್ಥಮಾಡಿಕೊಂಡ ಹಣಕಾಸು ಸಚಿವರು, ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳನ್ನು ಈಗ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ದರ ಇಳಿಕೆ ಮಾಡಿ ಘೋಷಣೆ ಮಾಡಿದ್ದಾರೆ. ಈ ಉಪಕ್ರಮದಿಂದ ಮಧ್ಯಮ ವರ್ಗ ಮತ್ತು ಬಡವರಿಗೆ ಪ್ರಯೋಜನವಾಗಲಿದೆ. ಸರ್ಕಾರದ ಈ ನಿರ್ಧಾರವು ರೋಗಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಲ್ಲದೆ, ಹಣದ ಕೊರತೆಯಿಂದಾಗಿ ಚಿಕಿತ್ಸೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ.

ಇದಲ್ಲದೆ, ಔಷಧ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ‘ಬಯೋ-ಫಾರ್ಮಾ ಶಕ್ತಿ’ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಯಡಿ 10,000 ಕೋಟಿ ರೂ.ಗಳ ಹೂಡಿಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ದೇಶದಾದ್ಯಂತ ಮೂರು ಹೊಸ ಏಮ್ಸ್ ಆಸ್ಪತ್ರೆ ಸ್ಥಾಪನೆ

ಜನರು ಚಿಕಿತ್ಸೆಗಾಗಿ ದೆಹಲಿ ಅಥವಾ ಮುಂಬೈನಂತಹ ಪ್ರಮುಖ ನಗರಗಳಿಗೆ ಧಾವಿಸುತ್ತಿರುವುದನ್ನು ತಪ್ಪಿಸಲು ದೇಶಾದ್ಯಂತ ಮೂರು ಹೊಸ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಆಸ್ಪತ್ರೆ ನಿರ್ಮಾಣವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ದೇಶದ ಎಲ್ಲ ಭಾಗದ ಜನರಿಗೆ ವಿಶ್ವ ದರ್ಜೆಯ ವೈದ್ಯಕೀಯ ಸೌಲಭ್ಯಗಳು ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಈ ಘೋಷಣೆ ಮಾಡಲಾಗಿದೆ.

ಇದಲ್ಲದೆ, ಐದು ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಕೇಂದ್ರಗಳು ಚಿಕಿತ್ಸೆಯನ್ನು ಒದಗಿಸುವುದು ಮಾತ್ರವಲ್ಲದೆ ವೈದ್ಯಕೀಯ ಸಂಶೋಧನೆ ಮತ್ತು ತರಬೇತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಈ ಕೇಂದ್ರಗಳು ಆರೋಗ್ಯ ಸೌಲಭ್ಯಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತವೆ ಮತ್ತು ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ. ಈ ಕೇಂದ್ರಗಳ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಯೋಜಿಸಿದೆ.

ಆಯುರ್ವೇದಕ್ಕೆ ಜಾಗತಿಕ ಮನ್ನಣೆ ದೊರಕಿಸಲು ಕ್ರಮ

ಪ್ರಧಾನ ಮಂತ್ರಿಯವರು ಯೋಗಕ್ಕೆ ವಿಶ್ವಾದ್ಯಂತ ಹೊಸ ಗುರುತನ್ನು ನೀಡಿದಂತೆಯೇ, ಆಯುರ್ವೇದಕ್ಕೆ ಅಂತರರಾಷ್ಟ್ರೀಯ ಮನ್ನಣೆ ನೀಡುವ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ. ಸಾಂಪ್ರದಾಯಿಕ ಔಷಧಗಳ ಕುರಿತು ಸಂಶೋಧನೆಯನ್ನು ಉತ್ತೇಜಿಸಲು ಗುಜರಾತ್‌ನ ಜಾಮ್‌ನಗರದಲ್ಲಿ ವಿಶೇಷ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ನಮ್ಮ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯು ಅನೇಕ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ಸರ್ಕಾರ ನಂಬುತ್ತದೆ, ಅದನ್ನು ಈಗ ಪ್ರಪಂಚದ ಗಮನಕ್ಕೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.

ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಬಗ್ಗೆಯೂ ಮಹತ್ವದ ಘೋಷಣೆ ಮಾಡಲಾಗಿದೆ. ಆರೋಗ್ಯ ಸೇವೆಗಳನ್ನು ಸುಧಾರಿಸಲು ಸರ್ಕಾರವು 150,000 ಆರೈಕೆದಾರರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ನರ್ಸಿಂಗ್ ಮತ್ತು ರೋಗಿಗಳ ಆರೈಕೆ ಕ್ಷೇತ್ರಗಳಲ್ಲಿ ಯುವಜನರಿಗೆ ಉದ್ಯೋಗಾವಕಾಶ ಹೆಚ್ಚಲಿದೆ.

ಬಜೆಟ್ ಲೈವ್​ ಅಪ್​ಡೇಟ್ಸ್​ಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Seat Edge Movie Review: ನಗಿಸುತ್ತಾ ಹೆದರಿಸುವ ‘ಸೀಟ್ ಎಡ್ಜ್’ ಸಿನಿಮಾ – Kannada News | Seat Edge Kannada Movie Review Horror Film With Comedy plot

ಸೀಟ್ ಎಡ್ಜ್

UA

  • Time – 128 Minutes
  • Released – January 30, 2026
  • Language – Kannada
  • Genre – Horror, Thriller

Cast – ಸಿದ್ದು ಮೂಲಿಮನಿ, ರವೀಕ್ಷಾ ಶೆಟ್ಟಿ, ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್ ನಾಯಕ್ ಮುಂತಾದವರು.

Director – ಚೇತನ್ ಶೆಟ್ಟಿ

ನಟ ಸಿದ್ದು ಮೂಲಿಮನಿ (Siddu Moolimani) ಅವರು ಎಲ್ಲ ಬಗೆಯ ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಅವರು ನಟಿಸಿರುವ ‘ಸೀಟ್ ಎಡ್ಜ್’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಅವರು ಯೂಟ್ಯೂಬರ್ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾರರ್​ ಸಿನಿಮಾ. ಆದರೆ ಇಲ್ಲಿ ಕೇವಲ ಭಯ ಮಾತ್ರ ಇಲ್ಲ. ಅದರ ಜೊತೆಗೆ ಕಾಮಿಡಿ ಕೂಡ ಇದೆ. ಅಂದರೆ, ಪ್ರೇಕ್ಷಕರನ್ನು ನಗಿಸುತ್ತಲೇ ಆಗಾಗ ಹೆದರಿಸುವ ಗುಣ ಈ ಸಿನಿಮಾಗಿದೆ. ‘ಸೀಟ್ ಎಡ್ಜ್’ ಸಿನಿಮಾ (Seat Edge Movie) ವಿಮರ್ಶೆ ಇಲ್ಲಿದೆ ಓದಿ..

‘ಸೀಟ್​ ಎಡ್ಜ್’ ಸಿನಿಮಾದಲ್ಲಿ ಸಿದ್ದು ಮೂಲಿಮನಿ ಅವರ ಜೊತೆ ರವೀಕ್ಷಾ ಶೆಟ್ಟಿ, ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್ ನಾಯಕ್ ಅವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಚೇತನ್ ಶೆಟ್ಟಿ ನಿರ್ದೇಶಿಸಿರುವ ಈ ಸಿನಿಮಾಗೆ ಗಿರಿಧರ ಟಿ. ವಸಂತಪುರ ಅವರು ಬಂಡವಾಳ ಹೂಡಿದ್ದಾರೆ.

ಇದು ಯೂಟ್ಯೂಬ್, ಇನ್​ಸ್ಟಾಗ್ರಾಮ್ ಜಮಾನ. ಈ ಕಾಲದಲ್ಲಿ ಜನರು ವ್ಯೂಸ್, ಲೈಕ್ ಪಡೆಯಲು ಏನು ಬೇಕಾದರೂ ಮಾಡುತ್ತಾರೆ. ಅಂಥ ಒಬ್ಬ ವ್ಲಾಗರ್ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಯೂಟ್ಯೂಬರ್ ಸಿದ್ದು ಆರಂಭದಲ್ಲಿ ಏನೇನೋ ವಿಡಿಯೋ ಮಾಡುತ್ತಾನೆ. ಅದನ್ನು ಜನರು ಟ್ರೋಲ್ ಮಾಡುತ್ತಾರೆ. ಏನಾದರೂ ಮಾಡಿ ಜನರ ಮೆಚ್ಚುಗೆ ಗಳಿಸಬೇಕು ಎಂಬ ಹಠದಿಂದ ಘೋಸ್ಟ್ ಹಂಟಿಂಗ್ ಮಾಡಲು ಆತ ನಿರ್ಧರಿಸುತ್ತಾನೆ.

ಪ್ರಾಣವನ್ನು ಪಣಕ್ಕಿಟ್ಟು ಭೂತ ಬಂಗಲೆಗೆ ಹೋಗುವ ಸಿದ್ದುಗೆ ಚಿತ್ರ-ವಿಚಿತ್ರ ಅನುಭವಗಳು ಆಗುತ್ತವೆ. ಆ ಬಂಗಲೆಗೆ ಹೋದವರು ಯಾರೂ ಜೀವಂತವಾಗಿ ವಾಪಸ್ ಬರಲ್ಲ ಎಂಬ ಮಾತಿದೆ. ಹಾಗಾದರೆ ಸಿದ್ದು ಬದುಕಿಬರುತ್ತಾನಾ? ಆತನ ಘೋಸ್ಟ್ ಹಂಟಿಂಗ್ ಕೆಲಸ ಯಶಸ್ವಿ ಆಗುತ್ತಾ? ಅಲ್ಲಿ ದೆವ್ವ ಆಗಿರುವುದು ಯಾರು? ಇತ್ಯಾದಿ ವಿಷಯಗಳು ಕ್ಲೈಮ್ಯಾಕ್ಸ್​ನಲ್ಲಿ ತಿಳಿಯುತ್ತದೆ.

ಇಡೀ ಸಿನಿಮಾದಲ್ಲಿ ಇರುವುದು ಕೆಲವೇ ಪಾತ್ರಗಳು. ಆ ಪಾತ್ರಗಳ ಮೂಲಕವೇ ಪ್ರೇಕ್ಷಕರನ್ನು ನಗಿಸುವ ಮತ್ತು ಹೆಸರಿಸುವ ಪ್ರಯತ್ನ ಮಾಡಲಾಗಿದೆ. ಸಿನಿಮಾದ ಮೊದಲಾರ್ಥದಲ್ಲಿ ಕಾಮಿಡಿಗೆ ಹೆಚ್ಚು ಮಹತ್ವ ನೀಡಲಾಗಿದೆ. ನಿಜವಾದ ಹಾರರ್ ಫೀಲ್ ಶುರುವಾಗುವುದೇ ಮಧ್ಯಂತರದ ಬಳಿಕ. ಹೀಗೆ.. ನಗು ಮತ್ತು ಭಯವನ್ನು ಬ್ಯಾಲೆನ್ಸ್ ಮಾಡುತ್ತಾ ಈ ಸಿನಿಮಾ ಸಾಗುತ್ತದೆ.

ಗಿರೀಶ್ ಶಿವಣ್ಣ ಮತ್ತು ರಘು ರಾಮನಕೊಪ್ಪ ಅವರು ಕಾಮಿಡಿ ಕಿಕ್ ನೀಡುತ್ತಾರೆ. ಅವರಿಗೆ ಸಿದ್ದು ಕೂಡ ಚೆನ್ನಾಗಿ ಸಾಥ್ ನೀಡುತ್ತಾರೆ. ಹಾರರ್ ಪ್ರಿಯರು ಇಷ್ಟಪಡುವಂತಹ ಹಲವು ದೃಶ್ಯಗಳು ಈ ಸಿನಿಮಾದಲ್ಲಿ ಇವೆ. ಪಾಳುಬಿದ್ದ ಬಂಗಲೆಯಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಕ್ಲೈಮ್ಯಾಕ್ಸ್ ಸಮೀಪ ಆಗುವಾಗ ಶೀರ್ಷಿಕೆಗೆ ತಕ್ಕಂತೆಯೇ ಪ್ರೇಕ್ಷಕರು ಸೀಟಿನ ತುದಿಯಲ್ಲಿ ಕುಳಿತು ಸಿನಿಮಾ ನೋಡುವಂತಾಗುತ್ತದೆ.

ಇದನ್ನೂ ಓದಿ: Chowkidar Review: ಅಪ್ಪನ ಅಗಾಧ ಪ್ರೀತಿಯ ಪ್ಲಸ್, ಮೈನಸ್ ತೋರಿಸುವ ‘ಚೌಕಿದಾರ್’

ಆಕಾಶ್ ಪರ್ವ ಅವರ ಹಿನ್ನೆಲೆ ಸಂಗೀತದಿಂದ ‘ಸೀಟ್ ಎಡ್ಜ್’ ಚಿತ್ರದ ಹಾರರ್ ಎಫೆಕ್ಟ್ ಹೆಚ್ಚಿದೆ. ದೀಪಕ್ ಕುಮಾರ್ ಜೆ.ಕೆ. ಅವರ ಛಾಯಾಗ್ರಹಣಕ್ಕೂ ಮೆಚ್ಚುಗೆ ಸಲ್ಲುತ್ತದೆ. ಇವುಗಳ ನಡುವೆ ಕೆಲವು ಮೈಸನ್ ಅಂಶಗಳು ಕೂಡ ಈ ಚಿತ್ರದಲ್ಲಿ ಇವೆ. ಹಳೇ ಹಾರರ್ ತಂತ್ರಗಳನ್ನೇ ಬಳಸಿಕೊಂಡು ಪ್ರೇಕ್ಷಕರನ್ನು ಹೆದರಿಸಲು ಪ್ರಯತ್ನಿಸಲಾಗಿದೆ. ಹೊಸತನ ಬಯಸುವ ಪ್ರೇಕ್ಷಕರಿಗೆ ಇದರಿಂದ ಸ್ವಲ್ಪ ಬೇಸರ ಆಗಬಹುದು. ದ್ವಿತೀಯಾರ್ಧದಲ್ಲಿ ಬರುವ ಡ್ಯುಯೆಟ್ ಸಾಂಗ್​ನಿಂದ ಚಿತ್ರದ ಓಟಕ್ಕೆ ಅಡೆತಡೆ ಆದಂತಾಗಿದೆ. ಇಂಥ ಕೆಲವು ಅಂಶಗಳನ್ನು ಬದಿಗಿಟ್ಟು ನೋಡಿದರೆ ಹಾರರ್​ ಪ್ರಿಯರಿಗೆ ‘ಸೀಟ್ ಎಡ್ಜ್’ ಸಿನಿಮಾ ಹಿಡಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಪೋಲೋ ಆಸ್ಪತ್ರೆಗಳು 24×7 ಆರೋಗ್ಯ ಸೇವೆಗೆ ಬದ್ಧ: ಐಎಚ್​ಡಿ ಸಮಾವೇಶದಲ್ಲಿ ಘೋಷಣೆ – Kannada News | Apollo Hyderabad: 24/7 Healthcare and Future Hospital Vision from Int’l Health Dialogue

ಹೈದರಾಬಾದ್, ಫೆಬ್ರುವರಿ 01: ಅಪೋಲೋ ಹಾಸ್ಪಿಟಲ್ಸ್ (Apollo Hospitals)​​ ವತಿಯಿಂದ ಹೈದರಾಬಾದ್​​​ನಲ್ಲಿ ಆಯೋಜಿಸಲಾಗಿದ್ದ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್ (International Health Dialogue)​​ ಸಂವಾದ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ವರ್ಷದ 365 ದಿನವೂ ತನ್ನ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಭವಿಷ್ಯದ ಆಸ್ಪತ್ರೆ ನಿರ್ಮಿಸುವ ಯೋಜನೆಯನ್ನು ಅಪೋಲೋ ಘೋಷಿಸಿದೆ. ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ಹಾಗೂ ಆನ್‌ಲೈನ್ ಮೂಲಕ 27,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಜನರು ಅನಾರೋಗ್ಯಕ್ಕೆ ಒಳಗಾದಾಗ ಆರೋಗ್ಯ ಕ್ಷೇತ್ರ ನಿದ್ರಿಸಲು ಸಾಧ್ಯವಿಲ್ಲ: ಡಾ. ಪ್ರತಾಪ್ ಸಿ. ರೆಡ್ಡಿ

ಅಪೋಲೋ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ ಮಾತನಾಡಿ, ಅಪೋಲೋ ಆಸ್ಪತ್ರೆಗಳು ರಜಾದಿನಗಳು ಸೇರಿದಂತೆ ವರ್ಷದ 365 ದಿನಗಳು 24×7 ಕಾರ್ಯನಿರ್ವಹಿಸಲಿವೆ ಎಂದು ಘೋಷಿಸಿದರು. ಜನರು ಅನಾರೋಗ್ಯಕ್ಕೆ ಒಳಗಾದಾಗ ಆರೋಗ್ಯ ಕ್ಷೇತ್ರ ನಿದ್ರಿಸಲು ಸಾಧ್ಯವಿಲ್ಲ. ಕೆಲಸದ ದಿನಗಳಲ್ಲಿ ಮಾತ್ರವಲ್ಲದೆ ಪ್ರತಿದಿನವೂ ಆರೋಗ್ಯ ರಕ್ಷಣೆಗೆಗಾಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕು. ಆರೋಗ್ಯ ರಕ್ಷಣೆ ಆಸ್ಪತ್ರೆಗಳಲ್ಲಿ ಮಾತ್ರ ಅಲ್ಲ, ನಮ್ಮ ದೈನಂದಿನ ಜೀವನದಲ್ಲಿದೆ ಎಂದು ಹೇಳಿದ್ದಾರೆ.

ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ ಹೇಳಿದ್ದಿಷ್ಟು 

ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ ಮಾತನಾಡಿ, ಅಪೋಲೋ ಸಂಸ್ಥೆಯ ತಂತ್ರಜ್ಞಾನ ಮಾರ್ಗಸೂಚಿಯನ್ನು ವಿವರಿಸಿದರು. ಆಸ್ಪತ್ರೆಗಳೊಳಗಿನ ಸೀಮಿತ ಚಿಕಿತ್ಸೆಯಿಂದ ಹೊರಬಂದು, ನಿರಂತರ ಆರೋಗ್ಯ ನಿರ್ವಹಣೆಯತ್ತ ಸಾಗುವ ವ್ಯವಸ್ಥೆಯೇ ಅಪೋಲೋದ ಗುರಿ ಎಂದರು. ಹೈದರಾಬಾದ್‌ನಲ್ಲಿ ನಿರ್ಮಾಣವಾಗಲಿರುವ ಹೊಸ ಸೌಲಭ್ಯವುಳ್ಳ ಆಸ್ಪತ್ರೆ ವಿಶಾಲ ಆರೋಗ್ಯ ವ್ಯವಸ್ಥೆ ನಿರ್ಮಿಸುವ ಪ್ರಯತ್ನದ ಒಂದು ಭಾಗವಾಗಿರುತ್ತದೆ ಎಂದಿದ್ದಾರೆ.

ಆರೋಗ್ಯ ಕ್ಷೇತ್ರಕ್ಕೆ ಗಣನೀಯವಾಗಿ ಬೆಳೆಯುವ, ಹೊಸ ರೀತಿಯ ಪರಿಹಾರಗಳು ಅಗತ್ಯ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಉಪಕ್ರಮಗಳು ಆರಂಭವಾಗಿವೆ. ವೈದ್ಯಕೀಯವಲ್ಲದ ರೋಗಿಗಳ ಬೇಡಿಕೆಗಳನ್ನು ನಿರ್ವಹಿಸುವ ‘ಡಯಲ್50’ ಸೇವೆ, ಅಪಾಯ ಮೌಲ್ಯಮಾಪನ ಮತ್ತು ಆರೋಗ್ಯ ಮಾರ್ಗಸೂಚಿಗಳ ಮೂಲಕ ತಡೆಗಟ್ಟುವ ಚಿಕಿತ್ಸೆಗೆ ನೆರವಾಗುವ ಕೃತಕ ಬುದ್ಧಿಮತ್ತೆ ಆಧಾರಿತ ವೇದಿಕೆ, ಇವು ಈಗ ಲಕ್ಷಾಂತರ ಎಪಿಐ ಕರೆಗಳನ್ನು ಸಂಸ್ಕರಿಸುತ್ತಿವೆ. ಅದೇ ರೀತಿ, ಅಪೋಲೋ 24/7 ಎಂಬ ಟೆಲಿಹೆಲ್ತ್ ವೇದಿಕೆ ಈಗಾಗಲೇ 4 ಕೋಟಿಗೂ ಅಧಿಕ ಬಳಕೆದಾರರಿಗೆ ಸೇವೆ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

‘ಗ್ಲೋಬಲ್ ವಾಯ್ಸಸ್, ಒನ್ ವಿಶನ್’ ಎಂಬ ಥೀಮ್‌ನಡಿ ನಡೆದ ಈ ಸಮ್ಮೇಳನವು ಭಾರತ ಹಾಗೂ ವಿದೇಶಗಳಿಂದ ವೈದ್ಯರು, ತಜ್ಞರು, ಪರಿಣತರು, ತಂತ್ರಜ್ಞಾನ ತಜ್ಞರು ಮತ್ತು ಆರೋಗ್ಯ ಸಂಘ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾದರು. ಜವಾಬ್ದಾರಿಯುತ ಡಿಜಿಟಲ್ ಪರಿವರ್ತನೆ ಕುರಿತು ಆಳವಾದ ಮತ್ತು ವೈವಿಧ್ಯಮಯ ಚರ್ಚೆಗಳು ನಡೆದವು. ಈ ವೇಳೆ ವಿಶ್ವದ 75ಕ್ಕೂ ಹೆಚ್ಚು ಸಂಸ್ಥೆಗಳಿಂದ 300ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಹಾಗೂ 120ಕ್ಕೂ ಹೆಚ್ಚು ಪ್ರಶಸ್ತಿ ಅರ್ಜಿಗಳು ಸಲ್ಲಿಸಲಾಗಿತ್ತು.

ಇದನ್ನೂ ಓದಿ: ಜನವರಿ 30-31ರಂದು ಹೈದರಾಬಾದ್​ನಲ್ಲಿ ಅಪೋಲೋ ಹಾಸ್ಪಿಟಲ್ಸ್​ನಿಂದ ‘ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್’

ತೆಲಂಗಾಣ ಲೋಕಸಭಾ ಸದಸ್ಯ ಕೊಂಡಾ ವಿಶ್ವೇಶ್ವರ ರೆಡ್ಡಿ, ಅಂತಾರಾಷ್ಟ್ರೀಯ (ಜೆಸಿಐ) ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೊನಾಥನ್ ಬಿ. ಪರ್ಲಿನ್, ಅಂತಾರಾಷ್ಟ್ರೀಯ ಸೊಸೈಟಿ (ಐಎಸ್‌ಕ್ಯೂಎ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಸ್ಟನ್ ಎಂಗೆಲ್, ರಾಷ್ಟ್ರೀಯ ಮಾನ್ಯತೆ ಮಂಡಳಿಯ (ಎನ್‌ಎಬಿಹೆಚ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅತುಲ್ ಮೋಹನ್ ಕೊಚ್ಚರ್, ಕಾಂಗೋ ಗಣರಾಜ್ಯದ ಆರೋಗ್ಯ ಮತ್ತು ಜನಸಂಖ್ಯೆಯ ಗೌರವಾನ್ವಿತ ಸಚಿವ ಜೀನ್ ರೋಸೈರ್ ಇಬಾರಾ, ಘಾನಾದ ಉಪಮಂತ್ರಿ ಗ್ರೇಸ್ ಅಯೆನ್ಸು-ಡನ್ಕ್ವಾ, ದಕ್ಷಿಣ ಸುಡಾನ್ ಆರೋಗ್ಯ ಸಚಿವ ಸಾರಾ ಕ್ಲೆಟೊ ರಿಯಾಲ್ ಮತ್ತು ಟೋಂಗಾದ ಆರೋಗ್ಯ ಸಚಿವ ಹುಕಾವಮೆಲಿಕು ಸಿಯೋಸಿ ಸೊವಾಲೆನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:37 pm, Sun, 1 February 26

Source link

Union Budget 2026-27: ಬಜೆಟ್​​ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ – Kannada News | Union Budget 2026–27: Government Announces Major Push for Education, Skills and Employment

ನವದೆಹಲಿ, ಫೆ. 1: ಕೇಂದ್ರ ಬಜೆಟ್ 2026–27ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಶಿಕ್ಷಣ–ಉದ್ಯೋಗ–ಉದ್ಯಮ’ ಕುರಿತ ಉನ್ನತ ಮಟ್ಟದ ಸ್ಥಾಯಿ ಸಮಿತಿ ಸ್ಥಾಪನೆ ಮಾಡುವುದಾಗಿ ಸಚಿವರು ಪ್ರಕಟಿಸಿದ್ದು, ಈ ಸಮಿತಿ ಸೇವಾ ಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಂಡು ಉದ್ಯೋಗ ಸೃಷ್ಟಿ, ಕೌಶಲ್ಯ ಅಗತ್ಯಗಳು ಹಾಗೂ ರಫ್ತು ಅವಕಾಶಗಳ ಕುರಿತು ಶಿಫಾರಸುಗಳನ್ನು ನೀಡಲಿದೆ. ಜೊತೆಗೆ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಪರಿಣಾಮವನ್ನು ಪರಿಶೀಲಿಸಿ, ಶಾಲಾ ಹಂತದಿಂದಲೇ ಪಠ್ಯಕ್ರಮದಲ್ಲಿ ಅವುಗಳನ್ನು ಸೇರಿಸಲು ನೆರವಾಗಲಿದೆ.

ಪ್ರತಿ ಜಿಲ್ಲೆಗೆ  ಬಾಲಕಿಯರ ಹಾಸ್ಟೆಲ್

ಮಹಿಳಾ ವಿದ್ಯಾರ್ಥಿನಿಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಉನ್ನತ ಶಿಕ್ಷಣದ STEM ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಒಂದು ಬಾಲಕಿಯರ ಹಾಸ್ಟೆಲ್ ನಿರ್ಮಿಸುವುದಾಗಿ ಸರ್ಕಾರ ಘೋಷಿಸಿದೆ. ಸೃಜನಾತ್ಮಕ ಶಿಕ್ಷಣ ಕ್ಷೇತ್ರದಲ್ಲಿಯೂ ಬಜೆಟ್​​​ನಲ್ಲಿ ಗಮನಹರಿಸಲಾಗಿದ್ದು, ಅನಿಮೇಷನ್, ವಿಸುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC) ಕ್ಷೇತ್ರವನ್ನು ಉತ್ತೇಜಿಸಲು 15,000 ಪ್ರೌಢಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಅಲ್ಲದೆ, ಪೂರ್ವ ಭಾರತದ ಭಾಗದಲ್ಲಿ ಹೊಸ ರಾಷ್ಟ್ರೀಯ ವಿನ್ಯಾಸ ಸಂಸ್ಥೆ (National Institute of Design) ಸ್ಥಾಪನೆಯ ಪ್ರಸ್ತಾಪ ಮಾಡಲಾಗಿದೆ.

ಇದನ್ನೂ ಓದಿ:  1 ಗಂಟೆ 26 ನಿಮಿಷಗಳ ಕಾಲ ಬಜೆಟ್​​ ಮಂಡಿಸಿದ ವಿತ್ತ ಸಚಿವೆ; ಆಯವ್ಯಯ ಮಂಡನೆಯಲ್ಲೂ ದಾಖಲೆ

ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ನಾಲ್ಕು ಟೆಲಿಸ್ಕೋಪ್ ಮೂಲಸೌಕರ್ಯ ಕೇಂದ್ರಗಳನ್ನು ಸ್ಥಾಪಿಸುವ ಅಥವಾ ನವೀಕರಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ಇದು ಖಗೋಳಶಾಸ್ತ್ರ ಮತ್ತು ಅಸ್ಟ್ರೋಫಿಸಿಕ್ಸ್ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ನೆರವಾಗಲಿದೆ. ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಪ್ರವಾಸೋದ್ಯಮಕ್ಕಾಗಿ 5 ಹಬ್​​ಗಳು ಹಾಗೂ ಆಯುರ್ವೇದಕ್ಕಾಗಿ 3 ಹೊಸ ಅಖಿಲ ಭಾರತ ಸಂಸ್ಥೆಗಳ ಸ್ಥಾಪನೆ ಬಗ್ಗೆಯೂ ಸಚಿವರು ಬಜೆಟ್​​ನಲ್ಲಿ ಘೋಷಿಸಿದ್ದಾರೆ. ಉನ್ನತ ಶಿಕ್ಷಣ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ, ಪ್ರಮುಖ ಕೈಗಾರಿಕಾ ಮತ್ತು ಲಾಜಿಸ್ಟಿಕ್ ಮಾರ್ಗಗಳ ಸಮೀಪ ಐದು ವಿಶ್ವವಿದ್ಯಾಲಯ ನಗರಗಳನ್ನು (University Townships) ಸ್ಥಾಪಿಸಲು ರಾಜ್ಯಗಳಿಗೆ ಸರ್ಕಾರ ನೆರವು ನೀಡಲಿದೆ. ಈ ಶೈಕ್ಷಣಿಕ ವಲಯಗಳಲ್ಲಿ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು, ಕೌಶಲ್ಯ ಕೇಂದ್ರಗಳು ಹಾಗೂ ವಸತಿ ಸೌಲಭ್ಯಗಳು ಒಟ್ಟಾಗಿ ಇರಲಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Chanakya Niti: ಈ ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸಬಹುದು… ಎಚ್ಚರ! – Kannada News | Chanakya Niti: These habits can make you mentally weak

ಮನುಷ್ಯನ ಏಳು-ಬೀಳು, ಯಶಸ್ಸು ಇವೆಲ್ಲವೂ ಆತನ ಅಭ್ಯಾಸಗಳಿಂದಲೂ (habits) ನಿರ್ಧಾರವಾಗುತ್ತದೆ. ಹೌದು ಆತ ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದರೆ ಖಂಡಿತವಾಗಿಯೂ ಆತ ಯಶಸ್ಸನ್ನು ಸಾಧಿಸಲಾರ. ಅದೇ ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ಖಂಡಿತವಾಗಿಯೂ ಆತ ಜೀವನದಲ್ಲಿ ಜಯಿಸುತ್ತಾನೆ. ಅದರಂತೆ ಕೆಲವೊಂದು ಅಭ್ಯಾಸಗಳ ಕಾರಣದಿಂದ ವ್ಯಕ್ತಿ ಮಾನಸಿಕವಾಗಿ ದುರ್ಬಗೊಳ್ಳುತ್ತಾನೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ನಿಮ್ಮಲ್ಲೂ ಆ ಅಭ್ಯಾಸಗಳಿದ್ದರೆ ತಕ್ಷಣ ತ್ಯಜಿಸಿ, ಹೀಗೆ ಮಾಡಿದಾಗ ಮಾತ್ರ ನಿಮ್ಮ ಆಲೋಚನೆ, ಗಮನ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳು ಬಲಗೊಳ್ಳುತ್ತವೆ.

ಮಾನಸಿಕ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಅಭ್ಯಾಸಗಳಿವು:

ನಕಾರಾತ್ಮಕ ಚಿಂತನೆ: ನೀವು ನಿರಂತರವಾಗಿ ನಕಾರಾತ್ಮಕವಾಗಿ ಯೋಚಿಸಿದರೆ, ನಿಮ್ಮ ಮನಸ್ಸು ವೇಗವಾಗಿ ದುರ್ಬಲಗೊಳ್ಳುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಅವರ ಪ್ರಕಾರ, ಮನಸ್ಸಿನಲ್ಲಿನ ನಕಾರಾತ್ಮಕ ಆಲೋಚನೆಗಳು ಭಯ ಮತ್ತು ಆತಂಕದ ಜೀವನಕ್ಕೆ ಕಾರಣವಾಗುತ್ತವೆ. ನೀವು ನಕಾರಾತ್ಮಕವಾಗಿ ಮಾತ್ರ ಯೋಚಿಸಿದಾಗ, ನಿಮ್ಮ ಸೃಜನಶೀಲತೆ ನಾಶವಾಗುತ್ತದೆ ಮತ್ತು ನೀವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಯಾವಾಗಲೂ ನಿಮಗೆ ಸಂಕಷ್ಟಗಳೇ ಎದುರಾಗುತ್ತದೆ. ಆದ್ದರಿಂದ ಎಂತಹದ್ದೇ ಪರಿಸ್ಥಿತಿಯಲ್ಲೂ ಸಕಾರಾತ್ಮಕವಾಗಿರಿ.

ಕೆಟ್ಟವರ ಸಹವಾಸ: ಚಾಣಕ್ಯ ನೀತಿಯ ಪ್ರಕಾರ, ನೀವು ಕೆಟ್ಟವರ ಸಹವಾಸದಲ್ಲಿದ್ದರೆ ನಿಮ್ಮ ಮನಸ್ಸು ಬಲು ಬೇಗನೇ ದುರ್ಬಲಗೊಳ್ಳುತ್ತದೆ. ಹೌದು ನೀವು ನಕಾರಾತ್ಮಕ ಮತ್ತು ಸೋಮಾರಿ ಜನರ ಸಹವಾಸದಲ್ಲಿದ್ದರೆ ಅವರಂತೆ ನೀವು ಕೂಡಾ ನಕಾರಾತ್ಮಕತೆಯಿಂದ ತುಂಬಿ ಹೋಗುತ್ತೀರಿ. ಈ ಕಾರಣದಿಂದ ನಿಮ್ಮ ಮನಸ್ಸು ಬೇಗನೆ ದುರ್ಬಲಗೊಳ್ಳುತ್ತದೆ. ಮುಖ್ಯವಾಗಿ ನೀವು ನಿಮ್ಮ ಜೀವನದ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಜೀವನದಲ್ಲಿ ಸಂಕಷ್ಟ ಎದುರಾಗಬಾರದೆಂದರೆ ನಿಮ್ಮ ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿಡಿ

ಅಪೂರ್ಣ ಜ್ಞಾನ, ಅಧ್ಯಯನದಿಂದ ದೂರ ಉಳಿಯುವುದು: ಹೊಸ ವಿಷಯಗಳನ್ನು ಅಧ್ಯಯನ ಮಾಡಲು ಅಥವಾ ಕಲಿಯಲು ಹಿಂಜರಿಯುವ ವ್ಯಕ್ತಿಯ ಮನಸ್ಸು  ಕ್ರಮೇಣ ದುರ್ಬಲಗೊಳ್ಳುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ನೀವು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡಾಗ, ನಿಮ್ಮ ಆಲೋಚನಾ ಸಾಮರ್ಥ್ಯವು ಸುಧಾರಿಸುತ್ತದೆ, ಬುದ್ಧಿವಂತಿಕೆಯು ಹೆಚ್ಚಾಗುತ್ತದೆ ಮತ್ತು ನೀವು ಆತ್ಮವಿಶ್ವಾಸದಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಒತ್ತಡ ಮತ್ತು ಆತಂಕ: ಚಾಣಕ್ಯ ನೀತಿಯ ಪ್ರಕಾರ, ಅತಿಯಾದ ಒತ್ತಡ ಮತ್ತು ಚಿಂತೆ ನಿಮ್ಮ ಮನಸ್ಸಿಗೆ ತುಂಬಾ ಹಾನಿಕಾರಕವಾಗಿದೆ. ಮಾನಸಿಕ ಶಾಂತಿ ಇಲ್ಲದೆ, ನಿಮ್ಮ ಬುದ್ಧಿಶಕ್ತಿ ಮತ್ತು ಗಮನ ಎಂದಿಗೂ ಕೇಂದ್ರೀಕೃತವಾಗಿರಲು ಸಾಧ್ಯವಿಲ್ಲ. ನೀವು ಒತ್ತಡದಲ್ಲಿದ್ದಾಗ, ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸ್ಮರಣಶಕ್ತಿ ಎರಡೂ ದುರ್ಬಲಗೊಳ್ಳುತ್ತವೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಆದ್ದರಿಂದ ಸಾಧ್ಯವಾದಷ್ಟು ಒತ್ತಡದಿಂದ ಮುಕ್ತರಾಗಿರಲು ಪ್ರಯತ್ನಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link