ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್ – Kannada News | Shahbaz Ahmed Takes 11 Wickets for Bengal
ರಣಜಿ ಟೂರ್ನಿಯ ಎಲೈಟ್ ಗ್ರೂಪ್-ಸಿ ಪಂದ್ಯದಲ್ಲಿ ಹರ್ಯಾಣ ವಿರುದ್ಧ ಶಹಬಾಝ್ ಅಹ್ಮದ್ ಬರೋಬ್ಬರಿ 11 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಾಲ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 193 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಹರ್ಯಾಣ ತಂಡವನ್ನು ಕೇವಲ 100 ರನ್ಗಳಿಗೆ ಆಲೌಟ್ ಮಾಡುವಲ್ಲಿ ಶಹಬಾಝ್ ಅಹ್ಮದ್ ಪ್ರಮುಖ ಪಾತ್ರವಹಿಸಿದರು. ಪ್ರಥಮ ಇನಿಂಗ್ಸ್ನಲ್ಲಿ 11.1 ಓವರ್ಗಳನ್ನು ಎಸೆದ ಶಹಬಾಝ್ ಅಹ್ಮದ್ ಕೇವಲ 42 ರನ್ ನೀಡಿ 5 ವಿಕೆಟ್ ಕಬಳಿಸಿದರು….