Category Archives: Blog

Your blog category

ಅಮೆರಿಕಕ್ಕೆ ಹೋಗಿ ದೊಡ್ಡ ಉದ್ಯಮಗಳನ್ನು ಕಟ್ಟಿದ ವಲಸಿಗರಲ್ಲಿ ಭಾರತೀಯರೇ ಅತಿಹೆಚ್ಚು – Kannada News

ವಾಷಿಂಗ್ಟನ್, ಜೂನ್ 4: ಅಮೆರಿಕದಲ್ಲಿ (US) ವಲಸಿಗರು ಸ್ಥಾಪಿಸಿದ ಪ್ರತಿ 5 ಯೂನಿಕಾರ್ನ್‌ಗಳಲ್ಲಿ (Unicorns – $1 ಬಿಲಿಯನ್ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಸ್ಟಾರ್ಟ್‌ಅಪ್ ಕಂಪನಿಗಳು) ಒಂದು ಕಂಪನಿಯು ಭಾರತೀಯ ಮೂಲದ ಸಂಸ್ಥಾಪಕರನ್ನು (Indian Founders) ಹೊಂದಿದೆ. ಇದು ನ್ಯಾಷನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ (ಎನ್​ಎಫ್​ಎಪಿ) ಪ್ರಸ್ತುತಪಡಿಸಿದ ವರದಿಯಿಂದ ತಿಳಿದುಬಂದಿದೆ. ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿ ಬಿಲಿಯನ್ ಡಾಲರ್ ಮೌಲ್ಯದ ಉದ್ಯಮಗಳನ್ನು ಸ್ಥಾಪಿಸಿರುವ ಭಾರತೀಯರ ಸಂಖ್ಯೆ 96 ಅಂತೆ.

ಅಮೆರಿಕದ ಪ್ರಮುಖ ಸ್ಟಾರ್ಟ್‌ಅಪ್‌ಗಳಲ್ಲಿ ಭಾರತೀಯರ ಪ್ರಭಾವ ಎಷ್ಟಿದೆ ಎಂಬುದನ್ನು ಈ ವರದಿ ತೋರಿಸುತ್ತದೆ. ಅಲ್ಲಿನ ಒಟ್ಟು ವಲಸಿಗ-ಸ್ಥಾಪಿತ ಯೂನಿಕಾರ್ನ್‌ಗಳಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ಕಂಪನಿಗಳನ್ನು ಭಾರತೀಯರೇ ಮುನ್ನಡೆಸುತ್ತಿದ್ದಾರೆ. ಯೂನಿಕಾರ್ನ್ ಮಟ್ಟದ ಕಂಪನಿಗಳನ್ನು ಸ್ಥಾಪಿಸಿರುವ ವಲಸಿಗರ ಮೂಲ 76 ದೇಶಗಳಿವೆ. ಈ ಪೈಕಿ ಭಾರತವೇ ಅಗ್ರಸ್ಥಾನದಲ್ಲಿದೆ. ವಲಸಿಗರ ಪೈಕಿ ಅತಿಹೆಚ್ಚು ಯುನಿಕಾರ್ನ್ ಸ್ಥಾಪಿಸಿರುವುದರಲ್ಲಿ ಭಾರತೀಯರೇ ಹೆಚ್ಚು.

ಇದನ್ನೂ ಓದಿ: ಪ್ರಧಾನಿ ಮೋದಿಯೊಂದಿಗೆ ವೆನಿಜುವೆಲಾ ಅಧ್ಯಕ್ಷೆ ಮಾತುಕತೆ; ಪ್ರಸ್ತಾಪಿತ ಇಂಧನ ಒಪ್ಪಂದದಿಂದ ಭಾರತಕ್ಕೇನು ಲಾಭ?

ಈ ಪಟ್ಟಿಯಲ್ಲಿ ಭಾರತದ ನಂತರದ ಸ್ಥಾನಗಳಲ್ಲಿ ಕೆನಡಾ, ಯುಕೆ (UK), ಇಸ್ರೇಲ್ ಮತ್ತು ಚೀನಾ ದೇಶಗಳು ಬರುತ್ತವೆ. ಆದರೆ ಭಾರತವು ಇವೆಲ್ಲಕ್ಕಿಂತ ಬಹುದೂರ ಮುಂದಿದೆ. ಭಾರತೀಯ ಮೂಲದ ಈ ಉದ್ಯಮಿಗಳು ಕೇವಲ ಕಂಪನಿಗಳನ್ನು ಸ್ಥಾಪಿಸಿಲ್ಲ, ಬದಲಿಗೆ ಅಮೆರಿಕದಲ್ಲಿ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದಾರೆ ಮತ್ತು ಜಾಗತಿಕ ತಂತ್ರಜ್ಞಾನ ಹಾಗೂ ಆರ್ಥಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ.

ಅಮೆರಿಕದಲ್ಲಿ ಅತಿಹೆಚ್ಚು ಬಿಲಿಯನ್ ಡಾಲರ್ ಸ್ಟಾರ್ಟಪ್​ಗಳನ್ನು ಸ್ಥಾಪಿಸಿರುವ ವಲಸಿಗರ ಮೂಲ ದೇಶ

  1. ಭಾರತ: 96
  2. ಇಸ್ರೇಲ್: 60
  3. ಯುಕೆ: 47
  4. ಚೀನಾ: 41
  5. ಕೆನಡಾ: 30
  6. ರಷ್ಯಾ: 23
  7. ಫ್ರಾನ್ಸ್: 21
  8. ಜರ್ಮನಿ: 18
  9. ಉಕ್ರೇನ್: 16
  10. ಆಸ್ಟ್ರೇಲಿಯಾ: 14

ಇದನ್ನೂ ಓದಿ: ವಿದೇಶಿ ಹೂಡಿಕೆದಾರರನ್ನು ಮರಳಿ ಆಕರ್ಷಿಸಲು ಸರ್ಕಾರದ ಯತ್ನ; ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಅನುಮೋದನೆ

ಈ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆಯದಿದ್ದರೂ ಪಾಕಿಸ್ತಾನೀ ಮೂಲದ ಯೂನಿಕಾರ್ನ್ ಉದ್ಯಮಿಗಳ ಸಂಖ್ಯೆ 10 ಇದೆ. ಈ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ ಪಾಕಿಸ್ತಾನ. ಅಮೆರಿಕದಲ್ಲಿರುವ ವಲಸಿಗ ಸಮುದಾಯದ ಉದ್ಯಮಿಗಳಲ್ಲಿ ಬಹಳ ದೊಡ್ಡ ಹೆಸರೆಂದರೆ ಇಲಾನ್ ಮಸ್ಕ್. ಇವರು ಸೌತ್ ಆಫ್ರಿಕಾ ಮೂಲದವರು. ಇವರೂ ಒಳಗೊಂಡಂತೆ ವಲಸಿಗರು ಆರಂಭಿಸಿರುವ 455 ಯೂನಿಕಾರ್ನ್ ಕಂಪನಿಗಳ ಒಟ್ಟು ಮೌಲ್ಯ 5 ಟ್ರಿಲಿಯನ್ ಡಾಲರ್ ಎನ್ನಲಾಗಿದೆ.

ಪ್ರಮುಖ ಭಾರತೀಯರ ಪೈಕಿ ಮೋಹಿತ್ ಆರೋನ್, ಜ್ಯೋತಿ ಬನ್ಸಾಲ್, ಆಶುತೋಷ್ ಗರ್ಗ್, ಅರವಿಂದ್ ಜೈನ್, ಸಚಿನ್ ನಾಯ್ಯರ್, ಅಜೀತ್ ಸಿಂಗ್ ಮೊದಲಾದವರಿದ್ದಾರೆ. ಅಮೆರಿಕದ ಅತ್ಯಂತ ಯಶಸ್ವಿ ಮತ್ತು ಬಿಲಿಯನ್ ಡಾಲರ್ ಮೌಲ್ಯದ ನವೋದ್ಯಮಗಳ (Startups) ಹಿಂದೆ ಭಾರತೀಯರ ಬುದ್ಧಿಶಕ್ತಿ ಮತ್ತು ಪರಿಶ್ರಮ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಈ ವರದಿ ಸಾಬೀತುಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳಲ್ಲಿ ಯೂರಿನ್ ಟೆಸ್ಟ್ ಮಾಡಿ ಆಟಿಸಂ ಲಕ್ಷಣಗಳನ್ನು ಪತ್ತೆಹಚ್ಚಬಹುದೇ? ಏನ್ ಹೇಳುತ್ತೆ ಅಧ್ಯಯನ? – Kannada News

Early Autism Screening Through Urine Test: What Study RevealsImage Credit source: Getty Images

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD) ಒಂದು ನ್ಯೂರೋಡೆವಲಪ್ಮೆಂಟಲ್ ಸಮಸ್ಯೆಯಾಗಿದ್ದು, ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ವರ್ತನೆ ಮೇಲೆ ಪರಿಣಾಮ ಬೀರುತ್ತದೆ. ಹಲವು ಬಾರಿ ಇದರ ಆರಂಭಿಕ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಆದರೆ ಇದೀಗ ಹೊಸ ಅಧ್ಯಯನವೊಂದು, ಯೂರಿನ್ ಟೆಸ್ಟ್ ಮೂಲಕ ಕೇವಲ 2 ವರ್ಷದ ಮಕ್ಕಳಲ್ಲೇ ಆಟಿಸಂಗೆ ಸಂಬಂಧಿಸಿದ ಸೂಚನೆಗಳನ್ನು ಪತ್ತೆಹಚ್ಚಬಹುದು ಎಂದು ಹೇಳಿದೆ. ಮೊಲಿಕ್ಯುಲರ್ ಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಹಾಗಾದರೆ ಆಟಿಸಂ ಅನ್ನು ಆರಂಭದಲ್ಲೇ ಗುರುತಿಸುವುದು ಯಾಕೆ ಮುಖ್ಯ, ಈ ಅಧ್ಯಯನದಿಂದ ಯಾವ ರೀತಿ ಲಾಭವಿದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆಟಿಸಂ ಅನ್ನು ಆರಂಭದಲ್ಲೇ ಗುರುತಿಸುವುದು ಯಾಕೆ ಮುಖ್ಯ?

ಸಾಮಾನ್ಯವಾಗಿ ಆಟಿಸಂ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಮಕ್ಕಳಿಗೆ ಸಮಯಕ್ಕೆ ಸರಿಯಾದ ಥೆರಪಿ, ಚಿಕಿತ್ಸೆ ಮತ್ತು ತಜ್ಞರ ಮಾರ್ಗದರ್ಶನ ದೊರೆಯಬಹುದು. ಆಟಿಸಂ ಪತ್ತೆ ಮಾಡಲು ಮಕ್ಕಳ ವರ್ತನೆ, ಮಾತಿನ ಬೆಳವಣಿಗೆ, ಸಾಮಾಜಿಕ ಪ್ರತಿಕ್ರಿಯೆ ಮತ್ತು ದೈನಂದಿನ ಚಟುವಟಿಕೆಗಳನ್ನು ಗಮನಿಸಲಾಗುತ್ತದೆ. ಆದರೆ ಈ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗಬಹುದು. ಇಂತಹ ಸಂದರ್ಭಗಳಲ್ಲಿ ಕಡಿಮೆ ವೆಚ್ಚದ, ಸರಳ ಯೂರಿನ್ ಟೆಸ್ಟ್ ಆರಂಭಿಕ ತಪಾಸಣೆಗೆ ಸಹಾಯವಾದರೆ ಅನೇಕ ಕುಟುಂಬಗಳಿಗೆ ಇದು ಉಪಯುಕ್ತವಾಗಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಯನ ಹೇಳುವುದೇನು?

ಈ ಅಧ್ಯಯನದಲ್ಲಿ ಸಂಶೋಧಕರು ಆಟಿಸಂ ಇರುವ ಮತ್ತು ಆಟಿಸಂ ಇಲ್ಲದ ಮಕ್ಕಳ ಯೂರಿನ್ ಸ್ಯಾಂಪಲ್‌ಗಳನ್ನು ವಿಶ್ಲೇಷಿಸಿದ್ದಾರೆ. ಪರೀಕ್ಷೆಯ ವೇಳೆ ಕೆಲವು ವಿಶೇಷ ಜೈವಿಕ ಸೂಚನೆಗಳು (Biological Markers) ಎರಡು ಗುಂಪುಗಳಲ್ಲಿ ವಿಭಿನ್ನ ಮಟ್ಟದಲ್ಲಿ ಕಂಡುಬಂದಿದ್ದು ಈ ವ್ಯತ್ಯಾಸಗಳ ಆಧಾರದ ಮೇಲೆ ಆಟಿಸಂಗೆ ಸಂಬಂಧಿಸಿದ ಸಾಧ್ಯ ಲಕ್ಷಣಗಳನ್ನು ಗುರುತಿಸಲು ಸಂಶೋಧಕರು ಪ್ರಯತ್ನಿಸಿದ್ದಾರೆ. ಅಧ್ಯಯನದ ಪ್ರಕಾರ, ಈ ಯೂರಿನ್ ಟೆಸ್ಟ್ ಆಟಿಸಂ ಇರುವ ಮಕ್ಕಳನ್ನು ಗುರುತಿಸುವಲ್ಲಿ ಸಾಕಷ್ಟು ನಿಖರತೆ ಕಂಡುಬಂದಿದೆ. ಆದರೆ, ಇದರ ಪರಿಣಾಮಕಾರಿತ್ವವನ್ನು ದೃಢೀಕರಿಸಲು ಇನ್ನಷ್ಟು ದೊಡ್ಡ ಮಟ್ಟದ ಅಧ್ಯಯನಗಳು ಅಗತ್ಯವಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಕ್ಕಳಲ್ಲಿ ಆಟಿಸಂ ಇರುವುದನ್ನು ಕಂಡುಹಿಡಿಯುವುದು ಹೇಗೆ? ಲಕ್ಷಣಗಳು ಹೇಗಿರುತ್ತವೆ?

ಯೂರಿನ್ ಟೆಸ್ಟ್ ಹೇಗೆ ಕೆಲಸ ಮಾಡುತ್ತದೆ?

ಈ ಪರೀಕ್ಷೆಯಲ್ಲಿ ಮೂತ್ರದಲ್ಲಿರುವ ಕೆಲವು ವಿಶೇಷ ರಾಸಾಯನಿಕಗಳು ಮತ್ತು ಜೈವಿಕ ಸೂಚನೆಗಳನ್ನು ಪರಿಶೀಲಿಸಲಾಗುತ್ತದೆ. ಇವು ದೇಹ ಹಾಗೂ ಅಂತರಗಳಲ್ಲಿ ಇರುವ ಮೈಕ್ರೋಬ್ಸ್ ಚಟುವಟಿಕೆಗಳಿಗೆ ಸಂಬಂಧಿಸಿರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಯೂರಿನ್ ಸ್ಯಾಂಪಲ್ ಅನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಿ, ಅದರಲ್ಲಿರುವ ವಿಶೇಷ ರಾಸಾಯನಿಕ ಮಾದರಿಗಳನ್ನು ವಿಶ್ಲೇಷಿಸಲಾಗುತ್ತದೆ. ಈ ಮಾದರಿಗಳು ಆಟಿಸಂಗೆ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಸಂಶೋಧಕರ ಪ್ರಕಾರ, ಈ ವಿಧಾನ ಸರಳವಾಗಿದ್ದು, ಕೇವಲ ಯೂರಿನ್ ಸ್ಯಾಂಪಲ್ ಸಾಕಾಗುತ್ತದೆ ಎಂಬುದು ಇದರ ಪ್ರಮುಖ ವಿಶೇಷತೆ. ಪ್ರಸ್ತುತ ಈ ಯೂರಿನ್ ಟೆಸ್ಟ್ ಇನ್ನೂ ಸಂಶೋಧನಾ ಹಂತದಲ್ಲಿದ್ದು, ಸಾಮಾನ್ಯ ವೈದ್ಯಕೀಯ ಪರೀಕ್ಷೆಯ ಭಾಗವಾಗಿಲ್ಲ. ತಜ್ಞರ ಪ್ರಕಾರ, ಆಟಿಸಂ ಪತ್ತೆಗಾಗಿ ಈಗಲೂ ಮಕ್ಕಳ ವರ್ತನೆ, ಬೆಳವಣಿಗೆ ಮತ್ತು ವೈದ್ಯರ ಪರಿಶೀಲನೆಯನ್ನೇ ಮುಖ್ಯವಾಗಿ ಅವಲಂಬಿಸಲಾಗುತ್ತಿದೆ. ಈ ಅಧ್ಯಯನದ ಫಲಿತಾಂಶಗಳು ಆಶಾದಾಯಕವಾಗಿದ್ದರೂ, ಇದನ್ನು ಅಧಿಕೃತ ವೈದ್ಯಕೀಯ ಪರೀಕ್ಷೆಯಾಗಿ ಬಳಸಲು ಇನ್ನಷ್ಟು ಸಂಶೋಧನೆ ಮತ್ತು ದೃಢೀಕರಣ ಅಗತ್ಯವಿದೆ.

ಪೋಷಕರು ಗಮನಿಸಬೇಕಾದ ಆರಂಭಿಕ ಲಕ್ಷಣಗಳು:

  • ಮಗು ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡದೇ ಇರಬಹುದು
  • ಹೆಸರು ಕರೆದಾಗ ಪ್ರತಿಕ್ರಿಯೆ ಕಡಿಮೆ ಇರಬಹುದು
  • ಮಾತಿನ ಬೆಳವಣಿಗೆ ತಡವಾಗಬಹುದು
  • ಇತರ ಮಕ್ಕಳೊಂದಿಗೆ ಬೆರೆಯಲು ಆಸಕ್ತಿ ತೋರದೇ ಇರಬಹುದು
  • ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡುವ ಸ್ವಭಾವ ಕಂಡುಬರಬಹುದು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

7.1 ಕೋಟಿ ರೂಪಾಯಿಗೆ 2 ಫ್ಲಾಟ್‌ ಮಾರಾಟ ಮಾಡಿದ ನಟ ಅಕ್ಷಯ್ ಕುಮಾರ್ – Kannada News

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಅವರು ಮುಂಬೈನ ಬೊರಿವಲಿ ಪ್ರದೇಶದಲ್ಲಿರುವ ತಮ್ಮ ಎರಡು ಐಷಾರಾಮಿ ಫ್ಲಾಟ್‌ಗಳನ್ನು ಬರೋಬ್ಬರಿ 7.1 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮುಂಬೈನ ಒಬೆರಾಯ್ ಸ್ಕೈ ಸಿಟಿ (Oberoi Sky City) ಅಪಾರ್ಟ್‌ಮೆಂಟ್‌ನಲ್ಲಿರುವ ಈ ಮನೆಗಳ ಮಾರಾಟದ ನೋಂದಣಿ ಪ್ರಕ್ರಿಯೆಯು ಜೂನ್ 2ರಂದು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂಬುದು ಆಸ್ತಿ ನೋಂದಣಿ ದಾಖಲೆಗಳಿಂದ (CRE Matrix) ತಿಳಿದುಬಂದಿದೆ. ಸುವರ್ಣ ರೂಪೇಶ್‌ಕುಮಾರ್ ಸಕ್ಪಾಲ್ ಎಂಬುವವರು ಅಕ್ಷಯ್ ಕುಮಾರ್ ಅವರಿಂದ ಈ ಎರಡೂ ಆಸ್ತಿಗಳನ್ನು ಖರೀದಿಸಿದ್ದಾರೆ.

ಅಕ್ಷಯ್ ಕುಮಾರ್ ಅವರು ಈ ಎರಡು ಫ್ಲಾಟ್‌ಗಳನ್ನು 2017ರ ನವೆಂಬರ್ ತಿಂಗಳಲ್ಲಿ ಇನ್‌ಕ್ಲೈನ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್‌ನಿಂದ ಖರೀದಿಸಿದ್ದರು. ಆಗ ಮೊದಲ ಫ್ಲಾಟ್‌ಗೆ 3 ಕೋಟಿ ರೂ. ಹಾಗೂ ಎರಡನೇ ಫ್ಲಾಟ್‌ಗೆ 67.55 ಲಕ್ಷ ರೂ. ಹೂಡಿಕೆ ಮಾಡಿದ್ದರು. ಕಳೆದ ಎಂಟು ವರ್ಷಗಳಲ್ಲಿ ಈ ಆಸ್ತಿಗಳ ಮೌಲ್ಯವು ಶೇಕಡಾ 92ಕ್ಕಿಂತಲೂ ಹೆಚ್ಚು ಹೆಚ್ಚಾಗಿದ್ದು, ನಟನಿಗೆ ಭರ್ಜರಿ ರಿಟರ್ನ್ಸ್ ತಂದುಕೊಟ್ಟಿದೆ.

ಮೊದಲ ಫ್ಲಾಟ್: ಅಪಾರ್ಟ್‌ಮೆಂಟ್‌ನ ಮೇಲಿನ ಮಹಡಿಯಲ್ಲಿರುವ 1,101 ಚದರ ಅಡಿ ಕಾರ್ಪೆಟ್ ಏರಿಯಾ ಹೊಂದಿರುವ ದೊಡ್ಡ ಫ್ಲಾಟ್ ಇದಾಗಿದೆ. ಇದನ್ನು 5.75 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದ್ದು, ಇದಕ್ಕೆ 28.75 ಲಕ್ಷ ರೂಪಾಯಿ ಮುದ್ರಾಂಕ ಶುಲ್ಕ (Stamp Duty) ಪಾವತಿಸಲಾಗಿದೆ. ಈ ಫ್ಲಾಟ್ ಜೊತೆಗೆ ಎರಡು ಕಾರ್ ಪಾರ್ಕಿಂಗ್ ಸ್ಥಳಗಳೂ ಸಿಗಲಿವೆ.

ಎರಡನೇ ಫ್ಲಾಟ್: ಅದೇ ಮಹಡಿಯಲ್ಲಿರುವ 252 ಚದರ ಅಡಿಯ ಮತ್ತೊಂದು ಸ್ಟುಡಿಯೋ ಅಪಾರ್ಟ್‌ಮೆಂಟ್ ಅನ್ನು 1.35 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಇದಕ್ಕೆ 6.75 ಲಕ್ಷ ರೂಪಾಯಿ ಮುದ್ರಾಂಕ ಶುಲ್ಕ ಪಾವತಿಸಲಾಗಿದ್ದು, ಒಂದು ಕಾರ್ ಪಾರ್ಕಿಂಗ್ ವ್ಯವಸ್ಥೆ ಇದರಲ್ಲಿದೆ. ಇತ್ತೀಚಿನ ದಿನಗಳಲ್ಲಿ ಅಕ್ಷಯ್ ಕುಮಾರ್ ಅವರು ರಿಯಲ್ ಎಸ್ಟೇಟ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ

ಅಕ್ಷಯ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಮುಂಬೈನಲ್ಲಿರುವ ತಮ್ಮ ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಸಕ್ರಿಯವಾಗಿ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ, ಅಂದರೆ ಕಳೆದ 2025ರ ಜನವರಿಯಲ್ಲೂ ಸಹ ಅಕ್ಷಯ್ ಕುಮಾರ್ ಅವರು ಬೊರಿವಲಿ ಪ್ರದೇಶದಲ್ಲೇ ಇದ್ದ ತಮ್ಮ 1,073 ಚದರ ಅಡಿಯ ಮತ್ತೊಂದು ಫ್ಲಾಟ್ ಅನ್ನು 4.25 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು ಎಂಬುದು ಗಮನಾರ್ಹ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊನೆಗೂ ಕೇರಳಕ್ಕೆ ಮುಂಗಾರು ಪ್ರವೇಶ: ಕರ್ನಾಟದಲ್ಲಿ 6 ದಿನ ಭಾರೀ ಮಳೆ, ಯೆಲ್ಲೋ- ಆರೇಂಜ್ ಅಲರ್ಟ್ – Kannada News

ಬೆಂಗಳೂರು, (ಜೂನ್ 04): ಕೊನೆಗೂ ಕೇರಳಕ್ಕೆ (Kerala) ಮುಂಗಾರು (Southwest Monsoon) ಪ್ರವೇಶಿಸಿದೆ. ಇಂದು (ಜೂನ್ 04) ಅಧಿಕೃತವಾಗಿ ನೈಋತ್ಯ ಮುಂಗಾರು ಕೇರಳ ಎಂಟ್ರಿಕೊಟ್ಟಿದ್ದು, ಕರ್ನಾಟಕದ (Karnataka) ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಈಗಾಗಲೇ ಮಳೆಯ ಅಬ್ಬರ ಶುರುವಾಗಿದೆ. ಇನ್ನುಳಿಂದಂತೆ ಇಂದಿನಿಂದ ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮುಂಗಾರು ಮಳೆ ವ್ಯಾಪಿಸಲಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ ಇಂದಿನಿಂದ ಜೂನ್ 9ರವರೆಗೂ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

6 ದಿನ ರಾಜ್ಯದಲ್ಲಿ ಮಳೆ ಮುನ್ಸೂಚನೆ

ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದ್ದರಿಂದ ಕರ್ನಾಟಕದಲ್ಲೂ ಮಳೆಗಾಲ ಆರಂಭವಾಗಲಿದ್ದು, ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗಲಿದೆ.  ಹೀಗಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಒಳನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.  ಇನ್ನು ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಕರಾವಳಿ ಕರ್ನಾಟಕ

ಜೂನ್ 4 ರಂದು ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಇನ್ನು ನಾಳೆಯಿಂದ ಅಂದರೆ ಜೂನ್ 5 ರಿಂದ ಜೂ. 10 ರವರೆಗೆ ಮಳೆಯ ತೀವ್ರತೆ ಗಮನಾರ್ಹವಾಗಿ ಹೆಚ್ಚಾಗಲಿದ್ದು, ಕರಾವಳಿ ಭಾಗದಲ್ಲಿ ವ್ಯಾಪಕ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡು (NIK)

ಜೂನ್ 4 ರವರೆಗೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜೂನ್ 5 ರಿಂದ ಜೂನ್ 10ರ ವರೆಗೂ ಇಡೀ ಪ್ರದೇಶದಲ್ಲಿ ಅಲ್ಲಲ್ಲಿ ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆ ಮತ್ತು ಕೆಲವು ಕಡೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ದಕ್ಷಿಣ ಒಳನಾಡು (SIK)

ಮುನ್ಸೂಚನೆಯ ಸಂಪೂರ್ಣ ಅವಧಿಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಮಲೆನಾಡು ಜಿಲ್ಲೆಗಳಲ್ಲಿ ಜೂನ್ 9 ರವರೆಗೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿವಮೊಗ್ಗದಲ್ಲಿ ವಿಶಿಷ್ಟ ಮಾವಿನ ಖಾದ್ಯಗಳ ಸ್ಪರ್ಧೆ: ಕೈಚಳಕ ತೋರಿಸಿದ ಮಹಿಳೆಯರು; ಇಲ್ಲಿವೆ ಫೋಟೋಸ್​ – Kannada News

ಮನೆಯಿಂದಲೇ ಸಿದ್ಧಪಡಿಸಿಕೊಂಡು ತಂದಿದ್ದ ಮಾವಿನ ಲಡ್ಡು, ಮ್ಯಾಂಗೋ ಮೂಸ್, ಚೀಸ್ ಕೇಕ್ ಹಾಗೂ ಶಾಯಿ ಟುಕ್ರಾ ಅಂತಹ ಹೊಸ ಬಗೆಯ ಖಾದ್ಯಗಳು ಕಂಡುಬಂದವು. ಮ್ಯಾಂಗೋ ಹೋಳಿಗೆ ಮತ್ತು ಗೋಲ್ಡೆನ್ ಪುಡ್ಡಿಂಗ್‌ಗಳಂತಹ ತರಹೇವಾರಿ ಸಿಹಿ ಪದಾರ್ಥಗಳು ಆಹಾರ ಪ್ರಿಯರ ಬಾಯಿರುಚಿಯನ್ನು ಹೆಚ್ಚಿಸಿದವು.

Source link

Video: ನಿನಗೆ ಬಿಸ್ಕೆಟ್ ಬೇಕಾ, ಇರು ತಂದು ಕೊಡ್ತೇನೆ: ಶ್ವಾನದ ಜತೆಗೆ ಪುಟಾಣಿಯ ಕ್ಯೂಟ್‌ ಸಂಭಾಷಣೆ – Kannada News

ಶ್ವಾನಗಳ (Dogs) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿಯೇ ಇಲ್ಲ. ಮನೆಯ ಸದಸ್ಯರಂತೆ ಇರುವ ಈ ಶ್ವಾನಗಳು ಮಕ್ಕಳ ಜತೆಗೆ ಮಕ್ಕಳಾಗುತ್ತವೆ. ಪುಟಾಣಿಗಳ ಪಾಲಿಗೆ ಈ ಶ್ವಾನಗಳು ಬಾಡಿ ಗಾರ್ಡ್ ನಂತೆ ಇರುತ್ತವೆ. ಇದೀಗ ಪುಟಾಣಿಯೊಂದು ಶ್ವಾನದ ಜತೆಗೆ ಸಂಭಾಷಣೆಗೆ ಇಳಿದಿದ್ದಾಳೆ. ಶ್ವಾನದ ಬಳಿ ನೀನು ಏನನ್ನೂ ತಿನ್ನಲು ಬಯಸುತ್ತೀಯಾ ಎಂದು ಪ್ರಶ್ನಿಸಿದ್ದಾಳೆ. ಈ ಕ್ಯೂಟ್ ವಿಡಿಯೋ ಆನ್ಲೈನ್ ನಲ್ಲಿ ನೆಟ್ಟಿಗರ ಹೃದಯ ಗೆದ್ದಿದೆ.

@kuhu_coo_bird ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪ್ ಗೆ ಡಾಗೇಶ್ ಭಾಯ್
ಯೊಂದಿಗೆ ಮುದ್ದಾದ ಸಂಭಾಷಣೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಶ್ವಾನವೊಂದು ಪ್ರಶಾಂತವಾದ ಸ್ಥಳದಲ್ಲಿ ಮಲಗಿರುವುದನ್ನು ಕಾಣಬಹುದು. ಪುಟಾಣಿಯೊಂದು ಅದರತ್ತ ಬಂದು ಸಂಭಾಷಣೆಗೆ ಇಳಿದಿದೆ. ಡಾಗ್ಗೀ ನಿನಗೆ ಬಿಸ್ಕೆಟ್ ಬೇಕಾ? ಬಿಸ್ಕೆಟ್ ಬೇಡ್ವಾ ಎನ್ನುತ್ತಾಳೆ. ಆ ಬಳಿಕ ಚಪಾತಿ ಬೇಕಾ? ಚಪಾತಿ ಕೂಡ ಬೇಡ್ವಾ ಎಂದು ಕೇಳುತ್ತಾಳೆ. ಆ ಬಳಿಕ ಬಿಸ್ಕೆಟ್ ಬೇಕಾ, ಇರು ಸ್ವಲ್ಪ ನಾನು ನಿನಗೆ ತರಿಸಿ ಕೊಡುತ್ತೇನೆ ಎಂದು ಪುಟ್ಟ ಶ್ವಾನದ ಬಳಿ ಹೇಳುತ್ತಿರುವುದನ್ನು ಕಾಣಬಹುದು. ಪುಟಾಣಿ ಇಷ್ಟು ಮಾತಾಡಿದ್ರು ಶ್ವಾನ ಯಾವುದಕ್ಕೂ ರಿಯಾಕ್ಷನ್ ಕೊಡದೇ ತನ್ನ ಪಾಡಿಗೆ ಇದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸ್ನೇಹ: ಬೀದಿ ನಾಯಿ ಜತೆಗೆ ಆಟವಾಡಿದ ಪುಟಾಣಿಗಳು

ಈ ವಿಡಿಯೋ 2 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ವೆಶ್ಚನ್ ಅಂಡ್ ಆನ್ಸರ್ ಸೆಶನ್ ಮುಕ್ತಾಯವಾಯಿತು ಎಂದಿದ್ದಾರೆ. ಇನ್ನೊಬ್ಬರು, ಶ್ವಾನ ನನಗೆ ಶಾಂತಿ ಬೇಕೆಂದು ಹೇಳುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಡಾಗೇಶ್ ಭಾಯ್ ಗೆ ಶಾಕ್ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೋಷಕರೇ… ನಿಮ್ಮ ಮಕ್ಕಳಿಗೆ ಹೋಮ್‌ವರ್ಕ್‌ ಮಾಡಿಸಲು ಈ ಟ್ರಿಕ್ಸ್‌ ಯೂಸ್‌ ಮಾಡಿ – Kannada News

ಸ್ಕೂಲ್‌ ಹೋಮ್‌ವರ್ಕ್‌ (homework) ಮಕ್ಕಳ  ಶಿಕ್ಷಣದ ಒಂದು ಪ್ರಮುಖ ಅಂಶವಾಗಿದೆ. ಇದು ಮಕ್ಕಳು ತರಗತಿಯಲ್ಲಿ ಕಲಿತದ್ದನ್ನು ನೆನಪಿಟ್ಟುಕೊಳ್ಳಲು, ಪ್ರಮುಖ ಶೈಕ್ಷಣಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಜವಾಬ್ದಾರಿ ಮತ್ತು ಸಮಯ ನಿರ್ವಹಣೆಯನ್ನು ಕಲಿಯಲು ಸಹಾಯ ಮಾಡುತ್ತದೆ. ಆದರೆ ಪೋಷಕರಿಗೆ ಮಾತ್ರ ತಮ್ಮ ಮಕ್ಕಳ ಕೈಯಲ್ಲಿ ಹೋಮ್‌ ವರ್ಕ್‌ ಮಾಡಿಸುವುದು ಸವಾಲಿನ ಸಂಗತಿ. ಹೌದು ಮಕ್ಕಳಂತೂ ಹೋಮ್‌ವರ್ಕ್‌ ಮಾಡಲು ನನ್ನಿಂದ ಸಾಧ್ಯವೇ ಇಲ್ಲ ಅಂತ ಹಠ ಹಿಡಿಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಹೊಡೆಯುವ ಅಥವಾ ಗದರಿಸುವ ಬದಲು ಈ ಕೆಲವು ಸರಳ ವಿಧಾನಗಳ ಮೂಲಕ ಮಕ್ಕಳ ಕೈಯಲ್ಲಿ ಸುಲಭವಾಗಿ ಹೋಮ್‌ವರ್ಕ್‌ ಮಾಡಿಸಬಹುದು.

ಮಕ್ಕಳಿಗೆ ಹೋಮ್‌ವರ್ಕ್‌ ಮಾಡಿಸುವ ಸರಳ ವಿಧಾನವಿದು:

ಅಧ್ಯಯನ ಸಮಯವನ್ನು ನಿಗದಿಪಡಿಸಿ: ಪ್ರತಿದಿನ ಅಧ್ಯಯನಕ್ಕಾಗಿ ಒಂದು ನಿರ್ದಿಷ್ಟ ಸಮಯವನ್ನು ಮೀಸಲಿಡಿ. ಈ ಅಭ್ಯಾಸವು ನಿಮ್ಮ ಮಗುವಿನಲ್ಲಿ ಶಿಸ್ತನ್ನು ತುಂಬುತ್ತದೆ. ಇದಲ್ಲದೆ, ನಿಮ್ಮ ಮಗುವಿಗೆ ಯಾವಾಗ ಅಧ್ಯಯನ ಮಾಡಬೇಕು ಮತ್ತು ಯಾವಾಗ ಆಟವಾಡಬೇಕು ಎಂದು ತಿಳಿದಾಗ, ಅವರು ತಮ್ಮ ಅಧ್ಯಯನದಿಂದ ಹಿಂದೆ ಸರಿಯುವುದಿಲ್ಲ.

ಯಾವಾಗಲೂ ಪ್ರತಿಫಲ ಅಥವಾ ಪ್ರಶಂಸೆ ನೀಡಿ: ಮಕ್ಕಳು ಪ್ರತಿಫಲವನ್ನು ಇಷ್ಟಪಡುತ್ತಾರೆ. ಅವರು ಒಳ್ಳೆಯ ಕೆಲಸ ಮಾಡಿದಾಗಲೆಲ್ಲಾ ಅವರಿಗೆ ಪ್ರತಿಫಲ ಅಥವಾ ಪ್ರಶಂಸೆ ನೀಡಬೇಕು. ಇದು ಅವರನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ. ಹೋಮ್‌ ವರ್ಕ್‌ ಮಾಡಿಸುವಾಗಲು ಇದೇ ತಂತ್ರವನ್ನು ಬಳಸಿ. ನಿಮ್ಮ ಮಗು ಸಮಯಕ್ಕೆ ಸರಿಯಾಗಿ ಹೋಮ್‌ ವರ್ಕ್‌ ಪೂರ್ಣಗೊಳಿಸಿದಾಗ, ಅವರನ್ನು ಹೊಗಳಿ ಮತ್ತು ಪ್ರತಿಫಲ ನೀಡಿ. ಪ್ರತಿಫಲವಾಗಿ, ನೀವು ಅವರಿಗೆ ಹೆಚ್ಚುವರಿ ಆಟದ ಸಮಯ, ವಾರಾಂತ್ಯದ ಪ್ರವಾಸ, ಹೊಸ ಉಡುಗೆ, ಆಟಿಕೆ, ಚಾಕೊಲೇಟ್ ಅಥವಾ ಅವರ ನೆಚ್ಚಿನ ಆಹಾರವನ್ನು ಉಣಬಡಿಸಬಹುದು.

ಹೋಮ್‌ ವರ್ಕ್‌ ಅನ್ನು ಆಟವನ್ನಾಗಿ ಪರಿವರ್ತಿಸಿ: ಮಕ್ಕಳ ಹೋಮ್‌ವರ್ಕ್‌ಗಳನ್ನು ಆಟದಂತೆ ಪರಿವರ್ತಿಸಿ. ನೀವು ಹೋಮ್‌ವರ್ಕ್‌ ಅನ್ನು ರಸಪ್ರಶ್ನೆಯನ್ನಾಗಿಯೂ ಪರಿವರ್ತಿಸಬಹುದು. ಇದು ಹೋಮ್‌ವರ್ಕ್‌ ಅನ್ನು ಆಸಕ್ತಿದಾಯಕವಾಗಿಸುತ್ತದೆ ಮತ್ತು ಮಕ್ಕಳು ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಇದಲ್ಲದೆ ನಿಮ್ಮ ಮಗು ತಮಾಷೆಯ ರೀತಿಯಲ್ಲಿ ಮಾಡಿದ ಅಧ್ಯಯನಗಳನ್ನು ಸುಲಭವಾಗಿ ಮರೆಯುವುದಿಲ್ಲ.

ಇದನ್ನೂ ಓದಿ: ಪೋಷಕರೇ ಮಕ್ಕಳ ಪಾಲಿನ ನಿಜವಾದ ಸೂಪರ್‌ ಹೀರೋ

ಹೋಮ್‌ ವರ್ಕ್‌ಗಳನ್ನು ಭಾಗಗಳಾಗಿ ವಿಂಗಡಿಸಿ: ಮಕ್ಕಳಿಗೆ ಹೋಮ್‌ವರ್ಕ್‌ ಒಂದೇ ಬಾರಿ ಮಾಡಿ ಮುಗಿಸಲು  ಯಾವುದೇ ಒತ್ತಡವನ್ನು ಹೇರಬೇಡಿ. ಹೋಮ್‌ವರ್ಕ್‌ ತುಂಬಾ ಹೆಚ್ಚಿದ್ದರೆ, ಅದನ್ನು ಸಣ್ಣ ಭಾಗಗಳಾಗಿ ವಿಭಜಿಸಿ. ಎಲ್ಲವನ್ನೂ ಒಂದೇ ಬಾರಿಗೆ ಪೂರ್ಣಗೊಳಿಸಲು ಪ್ರಯತ್ನಿಸುವ ಬದಲು, ನಿಮ್ಮ ಮಗುವಿಗೆ ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಪೂರ್ಣಗೊಳಿಸಲು ಬಿಡಿ. ಇದು ಮಕ್ಕಳಿಗೆ ಯಾವುದೇ ರೀತಿಯ ಒತ್ತಡವನ್ನು ಉಂಟುಮಾಡುವುದಿಲ್ಲ.

ನಿಮ್ಮ ಮಗುವಿನ ಆಸಕ್ತಿಯನ್ನು ಕಂಡುಕೊಳ್ಳಿ: ನಿಮ್ಮ ಮಗುವಿಗೆ ಅಧ್ಯಯನದಲ್ಲಿ ಆಸಕ್ತಿ ಇಲ್ಲದಿದ್ದರೆ, ಅವರ ಅಧ್ಯಯನವನ್ನು ಅವರಿಗೆ ಆಸಕ್ತಿ ಇರುವ ವಿಷಯದೊಂದಿಗೆ ಸಂಪರ್ಕಿಸಲು ಪ್ರಯತ್ನಿಸಿ. ಇದು ಅವರಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಹೊಂದಲು ಪ್ರೋತ್ಸಾಹಿಸುತ್ತದೆ.

ಸಕಾರಾತ್ಮಕ ವಾತಾವರಣ ಮತ್ತು ಪ್ರೇರಣೆಯನ್ನು ಒದಗಿಸಿ: ನಿಮ್ಮ ಮಕ್ಕಳನ್ನು ಬೈಯುವ ಬದಲು, ಅವರನ್ನು ಹೊಗಳಿ ಮತ್ತು ಸಣ್ಣ ಸಾಧನೆಗಳಿಗೂ ಪ್ರೋತ್ಸಾಹಿಸಿ. ಮನೆಯ ಅಧ್ಯಯನ ವಾತಾವರಣ ಶಾಂತ ಮತ್ತು ಸಕಾರಾತ್ಮಕವಾಗಿರಬೇಕು. ಈ  ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ, ಮಕ್ಕಳು ತಮ್ಮ ಹೋಮ್‌ವರ್ಕ್‌ಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ಕೇರಳ ಪ್ರವೇಶಿಸಿದ ಮುಂಗಾರು: ಇನ್ನೆರಡು ದಿನಗಳಲ್ಲಿ ಕರಾವಳಿಗೆ ಮಾನ್ಸೂನ್ ಆಗಮನ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹೈ ಅಲರ್ಟ್ – Kannada News

ಮಂಗಳೂರು, ಜೂನ್ 4: ಕೊನೆಗೂ ಮುಂಗಾರು (Monsoon) ಮಾರುತಗಳು ಕೇರಳ ಪ್ರವೇಶಿಸಿರುವುದಾಗಿ ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಇದರ ಬೆನ್ನಲ್ಲೇ ಇನ್ನೆರಡು ದಿನಗಳಲ್ಲಿ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೂ ಮುಂಗಾರು ಮಳೆ ಆಗಮನವಾಗುವ ನಿರೀಕ್ಷೆ ಇದೆ. ಮಳೆಗಾಲದ ಆರಂಭದ ಬೆನ್ನಲ್ಲೇ ಕರಾವಳಿಯಲ್ಲಿ ಸಂಭವಿಸಬಹುದಾದ ನೆರೆ, ಪ್ರವಾಹ ಹಾಗೂ ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಪೂರ್ಣವಾಗಿ ಸಜ್ಜಾಗಿದೆ.

ಮುಖ್ಯಾಂಶಗಳು

  • ತುರ್ತು ಸಂದರ್ಭಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24*7 ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಆರಂಭ.
  • ಜಿಲ್ಲೆಯಾದ್ಯಂತ 115 ಕಾಳಜಿ ಕೇಂದ್ರಗಳ ಸ್ಥಾಪನೆ.
  • ತುರ್ತು ಪರಿಹಾರ, ರಕ್ಷಣಾ ಕಾರ್ಯಾಚರಣೆಗಾಗಿ 3.25 ಕೋಟಿ ರೂ. ಅನುದಾನ ಮೀಸಲು.

ಅಧಿಕಾರಿಗಳಿಗೆ ಜವಾಬ್ದಾರಿ, ಕಂಟ್ರೋಲ್ ರೂಂ ಸ್ಥಾಪನೆ

ಕರಾವಳಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಅವಾಂತರಗಳು ಮತ್ತು ಪ್ರಾಣಹಾನಿಯ ಆತಂಕವನ್ನು ತಪ್ಪಿಸಲು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ನೇತೃತ್ವದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಲು 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು (Control Room) ತೆರೆಯಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ಪ್ರತ್ಯೇಕ ಇಂಜಿನಿಯರ್‌ಗಳನ್ನು, 223 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿಡಿಒಗಳನ್ನು (PDO) ಹಾಗೂ 13 ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿಗಳನ್ನು ‘ಇನ್ಸಿಡೆಂಟ್ ಕಮಾಂಡರ್’ಗಳಾಗಿ ನೇಮಕ ಮಾಡಲಾಗಿದ್ದು, ಇವರು ಜಿಲ್ಲಾಧಿಕಾರಿ ಕಚೇರಿಯ ಸಂಪರ್ಕದಲ್ಲಿರಲಿದ್ದಾರೆ.

ಎನ್‌ಡಿಆರ್‌ಎಫ್ ನಿಯೋಜನೆ, ಪ್ರವಾಸಿಗರಿಗೆ ನಿರ್ಬಂಧ

ಮುಂಜಾಗ್ರತಾ ಕ್ರಮವಾಗಿ 25 ಸಿಬ್ಬಂದಿ ಒಳಗೊಂಡ ಎನ್‌ಡಿಆರ್‌ಎಫ್ (NDRF) ತಂಡವನ್ನು ಪುತ್ತೂರು ತಾಲ್ಲೂಕಿನಲ್ಲಿ ಹಾಗೂ 10 ಸಿಬ್ಬಂದಿಯ ಮತ್ತೊಂದು ತಂಡವನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 92 ಪ್ರವಾಹ ಪೀಡಿತ ಪ್ರದೇಶಗಳು ಹಾಗೂ 88 ಸಂಭವನೀಯ ಭೂಕುಸಿತ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಗುಡ್ಡಗಾಡು ಪ್ರದೇಶಗಳಲ್ಲಿ ಚಾರಣ (ಟ್ರೆಕ್ಕಿಂಗ್) ಮಾಡುವುದನ್ನು, ನದಿ ತೀರ ಹಾಗೂ ಸಮುದ್ರ ತೀರಕ್ಕೆ ಇಳಿಯುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಕರಾವಳಿ-ಮಲೆನಾಡಿಗೆ ಮಳೆ ಸಿಂಚನ, ಉತ್ತರ ಕರ್ನಾಟಕಕ್ಕೆ ಸೂರ್ಯನ ತಾಪ!

ಅಲ್ಲದೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಮುಗಿಯುವವರೆಗೂ ಯಾವುದೇ ರೀತಿಯ ರಸ್ತೆ ಕಾಮಗಾರಿ, ಗುಡ್ಡ ಅಗೆಯುವುದು ಅಥವಾ ಮಣ್ಣು ಅಗೆಯುವ ಕೆಲಸಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲಾಡಳಿತ ವತಿಯಿಂದ ಮುಂಗಾರು ಎದುರಿಸಲು ಭರ್ಜರಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲಿಯುಗದ ‘ಶ್ರವಣ ಕುಮಾರ’; 90 ವರ್ಷದ ಅತ್ತೆಯನ್ನು ತಲೆ ಮೇಲೆ ಹೊತ್ತು 260 ಕಿ.ಮೀ ಪಾದಯಾತ್ರೆ ಮಾಡಿದ ಗಾಯಕಿ! – Kannada News

ಮಥುರಾ, ಜೂನ್ 4: ಇಂದಿನ ಆಧುನಿಕ ಯುಗದಲ್ಲಿ ಅತ್ತೆ-ಸೊಸೆಯರ ಸಂಬಂಧದ ಬಗ್ಗೆ ನೆಗೆಟಿವ್ ಸುದ್ದಿಗಳೇ ಹೆಚ್ಚಾಗಿ ಕೇಳಿಬರುವಾಗ ಹರಿಯಾಣದ ಪ್ರಸಿದ್ಧ ಜಾನಪದ ಗಾಯಕಿ ಕಾಜಲ್ ಚೌಧರಿ (Kajal Chaudhary) ಅವರು ಇಡೀ ಸಮಾಜಕ್ಕೇ ಮಾದರಿಯಾಗುವಂತಹ ಕೆಲಸ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ನಡೆಯಲು ಸಾಧ್ಯವಾಗದ ತಮ್ಮ 90 ವರ್ಷದ ಅತ್ತೆಯನ್ನು ವಿಶೇಷವಾಗಿ ಸಿದ್ಧಪಡಿಸಿದ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಕೂರಿಸಿಕೊಂಡು, ಆ ಬುಟ್ಟಿಯನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಬರೋಬ್ಬರಿ 260 ಕಿಲೋಮೀಟರ್ ದೂರದ ಪವಿತ್ರ ‘ಬ್ರಜ್ ಪರಿಕ್ರಮ’ (Brij Parikrama) ಯಾತ್ರೆಯನ್ನು ಕೈಗೊಂಡಿದ್ದಾರೆ!

ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಾಜಲ್ ಅವರ 90 ವರ್ಷದ ಅತ್ತೆ ಚಂದ್ರಿ ದೇವಿ ಅವರಿಗೆ ಶ್ರೀಕೃಷ್ಣನ ಪವಿತ್ರ ಭೂಮಿಯಾದ ಬ್ರಜ್ ಪ್ರದೇಶದ ಸುಮಾರು 260 ಕಿ.ಮೀ ಉದ್ದದ ಧಾರ್ಮಿಕ ಪ್ರದಕ್ಷಿಣೆ ಮಾಡಬೇಕೆಂಬುದು ಬಹುಕಾಲದ ಆಸೆಯಾಗಿತ್ತು. ಆದರೆ ವಯೋಸಹಜ ನಿಶ್ಯಕ್ತಿಯಿಂದಾಗಿ ಅವರಿಗೆ ನಡೆಯಲು ಸಾಧ್ಯವಿರಲಿಲ್ಲ. ಅತ್ತೆಯ ಈ ಕೊನೆಯ ಆಸೆಯನ್ನು ತಿಳಿದ ಸೊಸೆ ಕಾಜಲ್, ತಾವೇ ಅವರನ್ನು ಹೊತ್ತುಕೊಂಡು ಹೋಗಲು ನಿರ್ಧರಿಸಿದರು. ನೆಟ್ಟಿಗರು ಕಾಜಲ್ ಚೌಧರಿ ಅವರನ್ನು ಆಧುನಿಕ ಕಾಲದ ‘ಶ್ರವಣ ಕುಮಾರ’ ಎಂದು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ಪೆನ್ಷನ್ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಎತ್ತಿಕೊಂಡು 9 ಕಿ.ಮೀ ನಡೆದ ಬುಡಕಟ್ಟು ಮಹಿಳೆ

“ಇದು ಸಂಪೂರ್ಣವಾಗಿ ನನ್ನದೇ ನಿರ್ಧಾರ. ನನ್ನ ಅತ್ತೆ ನನ್ನ ಬಳಿ ಈ ರೀತಿ ಮಾಡುವಂತೆ ಎಂದಿಗೂ ಹೇಳಿರಲಿಲ್ಲ. ಅವರು ನನ್ನನ್ನು ಮಗಳಿಗಿಂತ ಹೆಚ್ಚಾಗಿ ಸಾಕಿ ಬೆಳೆಸಿದ್ದಾರೆ. ಅವರ ಮುಖದಲ್ಲಿ ಸಂತೋಷ ನೋಡುವುದು ಮತ್ತು ನನ್ನ ಆತ್ಮತೃಪ್ತಿಗಾಗಿ ನಾನು ಈ ಕಠಿಣ ಯಾತ್ರೆಯನ್ನು ಮಾಡುತ್ತಿದ್ದೇನೆ” ಎಂದು ಕಾಜಲ್ ಚೌಧರಿ ಹೇಳಿದ್ದಾರೆ.

ಹರಿಯಾಣದ ಬಂಚಾರಿ ಗ್ರಾಮದಿಂದ ಆರಂಭವಾದ ಈ ಪಯಣವು ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಗಡಿಗಳ ಮೂಲಕ ಸಾಗುತ್ತಿದೆ. ತಲೆಯ ಮೇಲೆ ಅತ್ತೆಯನ್ನು ಹೊತ್ತು ಸಾಗುತ್ತಿರುವ ಕಾಜಲ್ ಅವರನ್ನು ಕಂಡ ಸ್ಥಳೀಯ ಗ್ರಾಮೀಣರು ಮತ್ತು ಇತರ ಭಕ್ತರು ಆಶ್ಚರ್ಯಚಕಿತರಾಗಿದ್ದಾರೆ. ದಾರಿಯುದ್ದಕ್ಕೂ ಜನ ಇವರಿಗೆ ಹೂಮಾಲೆ ಹಾಕಿ, ಆರತಿ ಬೆಳಗಿ, ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬೇಸಿಗೆ ರಜೆ ಮುಗಿಸಿ ಅಜ್ಜಿ ಮನೆಯಿಂದ ಹೊರಟ ಮೊಮ್ಮಗನನ್ನು ಕಂಡು ಭಾವುಕರಾದ ಅಜ್ಜಿ

ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಈ ಯಾತ್ರೆಯು ಶ್ರೀಕೃಷ್ಣನ ಲೀಲೆಗಳಿಗೆ ಸಂಬಂಧಿಸಿದ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಪ್ರಮುಖ ದೇವಸ್ಥಾನಗಳು, ಕಾಡುಗಳು ಮತ್ತು ಪವಿತ್ರ ಸರೋವರಗಳ ಮೂಲಕ ಹಾದುಹೋಗುತ್ತದೆ. ಸಾಮಾನ್ಯವಾಗಿ ಭಕ್ತರು ಈ 260 ಕಿ.ಮೀ ದೂರದ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲು ಸುಮಾರು 40 ದಿನಗಳನ್ನು ತೆಗೆದುಕೊಳ್ಳುತ್ತಾರೆ. ಪ್ರಸ್ತುತ ಹಿಂದೂ ಕ್ಯಾಲೆಂಡರ್‌ನ ಪವಿತ್ರ ‘ಅಧಿಕ ಮಾಸ’ ನಡೆಯುತ್ತಿರುವುದರಿಂದ, ಈ ಅವಧಿಯಲ್ಲಿ ಪರಿಕ್ರಮ ಮಾಡುವುದರಿಂದ ವಿಶೇಷ ಪುಣ್ಯ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖ್ಯಾತ ನಿರ್ಮಾಪಕ, ಸಿಬಿಎಫ್‌ಸಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ನಿಧನ – Kannada News

ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ (76) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಹಿಂದಿ ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿದ್ದ ಪಹ್ಲಾಜ್ ನಿಹಲಾನಿ (Pahlaj Nihalani) ಅವರು ಪತ್ನಿ ನೀತಾ ಹಾಗೂ ವಿಶಾಲ್, ದೀಪೇಶ್, ಚಿರಾಗ್ ಎಂಬ ಮೂವರು ಪುತ್ರರನ್ನು ಅಗಲಿದ್ದಾರೆ.

ಹಿಂದಿ ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ನಿಹಲಾನಿ ಅವರು ಹಲವು ಸೂಪರ್ ಹಿಟ್ ಕಮರ್ಷಿಯಲ್ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಗೋವಿಂದ ನಟನೆಯ ‘ಆಂಖೇ’, ‘ಅಂದಾಜ್’, ‘ತಲಾಶ್’, ‘ರಂಗೀಲಾ ರಾಜಾ’ ಮತ್ತು ‘ಜೂಲಿ 2’ ಸೇರಿದಂತೆ ವಿಭಿನ್ನ ಶೈಲಿಯ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಪಹ್ಲಾಜ್ ನಿಹಲಾನಿ ಅವರು 2015ರಿಂದ 2017ರವರೆಗೆ ಸೆನ್ಸಾರ್ ಮಂಡಳಿಯ (CBFC) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅಧಿಕಾರಾವಧಿಯು ಚಿತ್ರರಂಗದಲ್ಲಿ ತೀವ್ರ ಚರ್ಚೆ ಮತ್ತು ವಿವಾದಗಳಿಗೆ ಕಾರಣವಾಗಿತ್ತು. ಸಿನಿಮಾಗಳ ಸೆನ್ಸಾರ್‌ಶಿಪ್ ಹಾಗೂ ಕತ್ತರಿ ಪ್ರಯೋಗಕ್ಕೆ ಸಂಬಂಧಿಸಿದಂತೆ ಇವರು ತೆಗೆದುಕೊಂಡ ಕಠಿಣ ನಿರ್ಧಾರಗಳು ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಆಕ್ರೋಶ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದ್ದವು. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಸುದ್ದಿಯಾದ ಸೆನ್ಸಾರ್ ಮಂಡಳಿಯ ಮುಖ್ಯಸ್ಥರಲ್ಲಿ ಇವರು ಒಬ್ಬರಾಗಿದ್ದರು.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಖ್ಯಾತ ಕಿರುತೆರೆ ನಟ ನಿಧನ, ಮೂವರ ಸ್ಥಿತಿ ಗಂಭೀರ

ಪಹ್ಲಾಜ್ ನಿಹಲಾನಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಮುಂಬೈನಲ್ಲೇ ಇಂದು (ಜೂನ್ 4) ಅಂತ್ಯಕ್ರಿಯೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link