Category Archives: Blog

Your blog category

ಸಿಎಂಗೆ ಅಂತಿಮ ವರದಿ ಸಲ್ಲಿಸಿದ ಪ್ರೊ.ಎಂ.ಗೋವಿಂದ ರಾವ್ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ – Kannada News | Karnataka Regional Imbalance: Govinda Rao Committee Submits Final Report to CM Siddaramaiah

ಸಿಎಂಗೆ ಅಂತಿಮ ವರದಿ ಸಲ್ಲಿಕೆImage Credit source: Google

ಬೆಂಗಳೂರು, ಜನವರಿ 31: ಪ್ರೊ.ಎಂ.ಗೋವಿಂದ ರಾವ್‌ ಅಧ್ಯಕ್ಷತೆಯ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ ಅಂತಿಮ ವರದಿಯನ್ನು ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲಿಸಿದೆ. ಡಾ. ಡಿ.ಎಂ. ನಂಜುಂಡಪ್ಪನವರ ಪ್ರಾದೇಶಿಕ ಅಸಮತೋಲನ ನಿವಾರಣಾ ವರದಿ ಹಳೆಯದಾಗಿದ್ದ ಕಾರಣ, ರಾಜ್ಯ ಸರ್ಕಾರವು 233 ತಾಲ್ಲೂಕುಗಳಲ್ಲಿ ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಿ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕ ಗುರುತಿಸಲು ಆರ್ಥಿಕ ತಜ್ಞ ಪ್ರೊ. ಗೋವಿಂದ ರಾವ್ ಅವರನ್ನು ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಳಿಸಿ 2024ರ ಮಾರ್ಚ್​​ನಲ್ಲಿ ಆದೇಶಿಸಿತ್ತು.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಅಧ್ಯಯನ ಮಾಡಲು ಮತ್ತು ಅದನ್ನು ನಿವಾರಿಸುವ ನಿಟ್ಟಿನಲ್ಲಿ 2000ನೇ ಇಸವಿಯಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸರ್ಕಾರ ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ರಚಿಸಿತ್ತು. ಈ ಸಮಿತಿಯು 2002 ರಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿ, ರಾಜ್ಯದ 175 ತಾಲ್ಲೂಕುಗಳಲ್ಲಿ 114 ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳು ಎಂದು ಗುರುತಿಸಿತ್ತು. ಅತಿ ಹೆಚ್ಚು ಹಿಂದುಳಿದ (39), ಹೆಚ್ಚು ಹಿಂದುಳಿದ (40) ಮತ್ತು ಹಿಂದುಳಿದ (35) ಎಂದು ಮೂರು ವರ್ಗಗಳಾಗಿ ವಿಂಗಡಿಸಿತ್ತು.

ದನ್ನೂ ಓದಿ: ಸರ್ಕಾರದಿಂದ ಮಹತ್ವದ ಆದೇಶ; ಕರ್ನಾಟಕ ನೌಕರರು ಈ ಬಟ್ಟೆ ಧರಿಸುವುದು ಕಡ್ಡಾಯ

ಆದರೆ ಈ ವರದಿ ಸುಮಾರು 22 ವರ್ಷಗಳಷ್ಟು ಹಳೆಯದ್ದಾಗಿದೆ ಎಂಬ ಕಾರಣಕ್ಕೆ ಈ ಬಗ್ಗೆ ಅಧ್ಯಯನಕ್ಕೆ 2024ರಲ್ಲಿ ಪ್ರೊ. ಎಂ. ಗೋವಿಂದ ರಾವ್ ಸಮಿತಿ ರಚನೆ ಮಾಡಲಾಗಿತ್ತು. ನಂಜುಂಡಪ್ಪ ಸಮಿತಿಯ ಶಿಫಾರಸುಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸುವುದು ಮತ್ತು ಪ್ರಸ್ತುತ ಹಿಂದುಳಿದಿರುವ ತಾಲ್ಲೂಕುಗಳನ್ನು ಅಭಿವೃದ್ಧಿಪಡಿಸಲು ಹೊಸ ಮಾನದಂಡಗಳನ್ನು ರೂಪಿಸುವುದು ಹೊಸ ಸಮಿತಿಯ ಜವಾಬ್ದಾರಿಯಾಗಿತ್ತು. ಹೀಗಾಗಿ ಸಮಿತಿಯು ತನ್ನ ಅಂತಿಮ ವರದಿಯನ್ನು ಇಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ವೇಳೆ ಸಚಿವರಾದ ಈಶ್ವರ ಖಂಡ್ರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಸಮಿತಿ ಸದಸ್ಯರಾದ ಎಸ್.ಟಿ.ಬಾಗಲಕೋಟೆ, ಸೂರ್ಯನಾರಾಯಣ ರಾವ್, ಸಂಗೀತ ಎನ್.ಕೆ., ಎಲ್.ಕೆ.ಅತೀಕ್, ಸದಸ್ಯ ಕಾರ್ಯದರ್ಶಿ ವಿಶಾಲ್ ಉಪಸ್ಥಿತರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

94ರ ವಯಸ್ಸಿನಲ್ಲಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಲಿಜೆಂಡರಿ ನಿರ್ದೇಶಕ, ರಾಜಮೌಳಿಗೂ ಕಾತರ – Kannada News | Singeetam Srinivasa Rao directing new movie in his age of 94

ಸಿಂಗೀತಂ ಶ್ರೀನಿವಾಸ್, ಭಾರತದ ಲಿಜೆಂಡರಿ ಸಿನಿಮಾ ನಿರ್ದೇಶಕರುಗಳಲ್ಲಿ (Director) ಒಬ್ಬರು. ಅವರು ನಿರ್ದೇಶಿಸಿರುವ ಅತ್ಯುತ್ತಮ ಸಿನಿಮಾಗಳ ಪಟ್ಟಿ ಬಹಳ ದೊಡ್ಡದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಎಲ್ಲ ಭಾಷೆಗಳಲ್ಲಿಯೂ ಸಿನಿಮಾಗಳನ್ನು ನಿರ್ದೇಶಿಸಿರುವುದು ಮಾತ್ರವೇ ಅಲ್ಲ ಸುಮಾರು 20ಕ್ಕೂ ಹೆಚ್ಚು ಆಲ್​​ಟೈಂ ಕಲ್ಟ್ ಸಿನಿಮಾಗಳನ್ನು ಭಾರತ ಚಿತ್ರರಂಗಕ್ಕೆ ನೀಡಿದ ಅತ್ಯದ್ಭುತ ನಿರ್ದೇಶಕ ಅವರು. ಅಪ್ಪಟ ಸಿನಿಮಾ ಪ್ರೇಮಿ ಆಗಿರುವ ಸಿಂಗೀತಂ ಶ್ರೀನಿವಾಸ್ ವಯಸ್ಸು ಈಗ 94 ವರ್ಷ. ಈ ವಯಸ್ಸಿನಲ್ಲೂ ಅವರು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಮುಂದಾಗಿರುವುದು ಮಾತ್ರವಲ್ಲ, ಹಲವು ಭಾಗಗಳ ಚಿತ್ರೀಕರಣವನ್ನೂ ಮುಗಿಸಿಬಿಟ್ಟಿದ್ದಾರೆ.

ಸಿಂಗೀತಂ ಶ್ರೀನಿವಾಸ್ ಅವರು ಈ ವಯಸ್ಸಿನಲ್ಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾಕ್ಕೆ ದಕ್ಷಿಣದ ಜನಪ್ರಿಯ ಮತ್ತು ಹಿರಿಯ ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಸಿಂಗೀತಂ ಅವರು ಈಗಾಗಲೇ ತಮ್ಮ ಹೊಸ ಸಿನಿಮಾದ ಹಲವು ಭಾಗಗಳ ಚಿತ್ರೀಕರಣವನ್ನು ಸಹ ಮುಗಿಸಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ವೈಜಯಂತಿ ಮೂವೀಸ್, ಸಿಂಗೀತಂ ಅವರು ಚಿತ್ರೀಕರಣ ಮಾಡುತ್ತಿರುವ ದೃಶ್ಯಗಳನ್ನು ಹಂಚಿಕೊಂಡಿದೆ. ಸಿನಿಮಾಕ್ಕೆ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನೀಡಿರುವುದು ಮತ್ತೊಂದು ವಿಶೇಷ.

ಸಿಂಗೀತಂ ಶ್ರೀನಿವಾಸ್ ಅವರ ಹೊಸ ಸಿನಿಮಾದ ನಟರುಗಳು ಯಾರು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ನಡೆದಿದೆ. ಈ ಸಿನಿಮಾ ಸಿಂಗೀತಂ ಶ್ರೀನಿವಾಸ್ ಅವರ ಬಹು ಮೆಚ್ಚಿನ ಕತೆಯನ್ನು ಒಳಗೊಂಡಿರಲಿದ್ದು, ಇದು ಅವರ ಡ್ರೀಮ್ ಪ್ರಾಜೆಕ್ಟ್ ಆಗಿದೆಯಂತೆ. ಸಿನಿಮಾದ ಟೈಟಲ್ ಅನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ವೈಜಯಂತಿ ಮೂವೀಸ್ ಹೇಳಿಕೊಂಡಿದೆ.

ಇದನ್ನೂ ಓದಿ:ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು: ನೀವೂ ನೋಡಿ

ಸಿಂಗೀತಂ ಶ್ರೀನಿವಾಸ್ ಅವರ 61ನೇ ಸಿನಿಮಾ ಇದಾಗಿದೆ. 2005 ರಲ್ಲಿ ಬಿಡುಗಡೆ ಆದ ಕಮಲ್ ಹಾಸನ್ ನಟನೆಯ ‘ಮುಂಬೈ ಎಕ್ಸ್​​ಪ್ರೆಸ್’ ಸಿಂಗೀತಂ ನಿರ್ದೇಶಿಸಿದ ಕೊನೆಯ ಸಿನಿಮಾ ಆಗಿತ್ತು. ಅದಾದ ಬಳಿಕ 2013 ರಲ್ಲಿ ‘ವೆಲ್​​ಕಮ್ ಒಬಾಮ’ ಹೆಸರಿನ ಮಕ್ಕಳ ಸಿನಿಮಾ ನಿರ್ದೇಶಿಸಿದರು. ಅದಾದ ಬಳಿಕ ಈಗ ಮತ್ತೆ ಡೈರೆಕ್ಟರ್ ಕುರ್ಚಿ ಏರಿದ್ದಾರೆ.

ಶಿವಣ್ಣನ ಮೊದಲ ಸಿನಿಮಾ ‘ಆನಂದ್’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಹಾಲು-ಜೇನು’, ‘ಚಲಿಸುವ ಮೋಡಗಳು’, ‘ದೇವತಾ ಮನುಷ್ಯ’, ‘ಶ್ರುತಿ ಸೇರಿದಾಗ’, ‘ಟುವ್ವಿ ಟುವ್ವಿ ಟುವ್ವಿ’ ಇನ್ನೂ ಕೆಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಸಿಂಗೀತಂ ಕನ್ನಡಕ್ಕೆ ನೀಡಿದ್ದಾರೆ. ಭಾರತದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ‘ಪುಷ್ಪಕ ವಿಮಾನ’ದ ನಿರ್ದೇಶಕರೂ ಇವರೇ. ತೆಲುಗಿನಲ್ಲಿ ‘ಭೈರವ ದ್ವೀಪಂ’, ‘ಆದಿತ್ಯ 369’ ತಮಿಳಿನ ‘ಅಪೂರ್ವ ಸೋದರಂಗಳ್’ ಸೇರಿದಂತೆ ಇನ್ನೂ ಹಲವು ಅತ್ಯುತ್ತಮ ಸಿನಿಮಾಗಳನ್ನು ಅವರು ನೀಡಿದ್ದಾರೆ. ಎಸ್​​ಎಸ್ ರಾಜಮೌಳಿ ಸಹ ಸಿಂಗೀತಂ ಅವರ ಹೊಸ ಸಿನಿಮಾದ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದು, ಸಿನಿಮಾಕ್ಕಾಗಿ ಕಾತರನಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

PAK vs AUS: ತವರಿನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಟಿ20 ಸರಣಿ ಗೆದ್ದ ಪಾಕಿಸ್ತಾನ – Kannada News | Pakistan Secures T20 Series Win vs Australia, Boosts World Cup Morale

ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿರುವ ಪಾಕಿಸ್ತಾನ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಈ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ಪ್ರಮುಖ ಆಟಗಾರರಿಲ್ಲದೆ ಪಾಕಿಸ್ತಾನಕ್ಕೆ ತೆರಳಿದ್ದ ಆಸ್ಟ್ರೇಲಿಯಾ ಟಿ20 ವಿಶ್ವಕಪ್​ಗೂ ಮುನ್ನ ಟಿ20 ಸರಣಿ ಸೋಲಿನ ಆಘಾತಕ್ಕೀಡಾಗಿದೆ. ಸರಣಿಯ ಮೊದಲ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿದ್ದ ಪಾಕಿಸ್ತಾನ ಇದೀಗ ಸರಣಿಯ ಎರಡನೇ ಪಂದ್ಯವನ್ನು ಬರೋಬ್ಬರಿ 90 ರನ್​ಗಳಿಂದ ಗೆದ್ದುಕೊಂಡಿದೆ. ಟಿ20 ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾ ತಂಡವನ್ನು ಮಣಿಸಿರುವುದು ಪಾಕಿಸ್ತಾನ ತಂಡದ ಮನೋಬಲ ಹೆಚ್ಚಿಸಿದೆ ಎನ್ನಬಹುದು.

Source link

ಜಾಗತಿಕ ಜಿಡಿಪಿ ಹೆಚ್ಚಳಕ್ಕೆ ವಿವಿಧ ದೇಶಗಳ ಕೊಡುಗೆ; ಭಾರತ ಶೇ. 17, ಅಮೆರಿಕ ಶೇ. 9.9 – Kannada News | World GDP growth, India’s contribution higher than US, as per IMF projection

ನವದೆಹಲಿ, ಜನವರಿ 31: ಈ ಕ್ಯಾಲಂಡರ್ ವರ್ಷದಲ್ಲಿ ಜಾಗತಿಕವಾಗಿ ಆಗುವ ಜಿಡಿಪಿ ಹೆಚ್ಚಳದಲ್ಲಿ (GDP increase) ಚೀನಾದ ಕೊಡುಗೆ ಶೇ. 26.6ರಷ್ಟಾಗಬಹುದು ಎಂದು ಐಎಂಎಫ್ ಅಂದಾಜು ಮಾಡಿದೆ. ಈ ಕೊಡುಗೆಯಲ್ಲಿ ಭಾರತವು ಅಮೆರಿಕವನ್ನೂ ಮೀರಿಸಲಿದೆ. ವಿಶ್ವದ ಐದನೆ ಅತಿದೊಡ್ಡ ಆರ್ಥಿಕತೆಯಾದರೂ 2026ರಲ್ಲಿ ಜಿಡಿಪಿ ಹೆಚ್ಚಳಕ್ಕೆ ನೀಡುವ ಕೊಡುಗೆಯಲ್ಲಿ ಭಾರತ 2ನೇ ಸ್ಥಾನ ಪಡೆಯಲಿದೆ ಎನ್ನುವುದು ಗಮನಾರ್ಹ.

ಜಾಗತಿಕ ಜಿಡಿಪಿ ಹೆಚ್ಚಳಕ್ಕೆ ಭಾರತದ ಕೊಡುಗೆ ಶೇ. 17 ಇರುತ್ತದೆ. ಅಮೆರಿಕವು ವಿಶ್ವದಲ್ಲೇ ಅತಿದೊಡ್ಡ ಆರ್ಥಿಕತೆಯ ದೇಶವಾದರೂ ಅದರ ಜಿಡಿಪಿ ಹೆಚ್ಚಳದ ಕೊಡುಗೆ ಶೇ. 9.9 ಮಾತ್ರ. ಇದಕ್ಕೆ ಕಾರಣ ಜಿಡಿಪಿ ಬೆಳವಣಿಗೆಯಲ್ಲಿನ ವ್ಯತ್ಯಾಸ.

ಇದನ್ನೂ ಓದಿ: ಬಲಿಷ್ಠ ಭಾರತಕ್ಕೆ ಬೇಕು ತಂತ್ರಜ್ಞಾನ ಪ್ರಾವೀಣ್ಯತೆ; ಬಜೆಟ್​ನಲ್ಲಿ ಟೆಕ್ ಸೆಕ್ಟರ್​ಗೆ ಏನು ಸಿಗುತ್ತೆ?

ಐಎಂಎಫ್ ಅಂದಾಜು ಪ್ರಕಾರ 2026ರಲ್ಲಿ ಚೀನಾದ ಆರ್ಥಿಕತೆ ಶೇ. 4.5ರಷ್ಟು ಹೆಚ್ಚಬಹುದು. ಅಮೆರಿಕದ ಜಿಡಿಪಿ ಶೇ. 2.4ರಷ್ಟು ಮಾತ್ರ ಹೆಚ್ಚಬಹುದು. ಭಾರತದ ಆರ್ಥಿಕತೆ ಶೇ. 6.4ರಷ್ಟು ಬೆಳೆಯಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಭಿಪ್ರಾಯಪಟ್ಟಿದೆ.

2026ರ ಜಿಡಿಪಿ ಹೆಚ್ಚಳದಲ್ಲಿ ವಿವಿಧ ದೇಶಗಳ ಕೊಡುಗೆ

  1. ಚೀನಾ: ಶೇ. 26.6
  2. ಭಾರತ: ಶೇ. 17
  3. ಅಮೆರಿಕ: ಶೇ. 9.9
  4. ಇಂಡೋನೇಷ್ಯಾ: ಶೇ. 3.8
  5. ಟರ್ಕಿ: ಶೇ. 2.2
  6. ನೈಜೀರಿಯಾ: ಶೇ. 1.5
  7. ಬ್ರೆಜಿಲ್: ಶೇ. 1.5
  8. ವಿಯೆಟ್ನಾಂ: ಶೇ. 1.6
  9. ಸೌದಿ ಅರೇಬಿಯಾ: ಶೇ. 1.7
  10. ಜರ್ಮನಿ: ಶೇ. 0.9

ಇದನ್ನೂ ಓದಿ: ಟ್ಯಾಕ್ಸ್ ಡಿಡಕ್ಷನ್, ಡೆವಲಪರ್ಸ್​ಗೆ ಕಡಿಮೆ ದರದಲ್ಲಿ ಭೂಮಿ ಇತ್ಯಾದಿ ಕ್ರಮಗಳ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ

ವಿಶ್ವದ ಜಿಡಿಪಿ ಹೆಚ್ಚಳದಲ್ಲಿ ಏಷ್ಯಾ ಪೆಸಿಫಿಕ್ ಪ್ರದೇಶದ ಕೊಡುಗೆಯೇ ಶೇ. 50ಕ್ಕಿಂತ ಹೆಚ್ಚಿದೆ. ಚೀನಾ ಮತ್ತು ಭಾರತ, ಈ ಎರಡು ದೇಶಗಳ ಕೊಡುಗೆ ಶೇ. 43.6ರಷ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಅಭಿಷೇಕ್ ಅಬ್ಬರಕ್ಕೆ ಮೊದಲ ಓವರ್​ನಲ್ಲೇ ಆಕಾರ ಕಳೆದುಕೊಂಡ ಚೆಂಡು – Kannada News | Abhishek Sharma’s Power Six Forces Ball Change in IND vs NZ T20 Final

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಮತ್ತು ಐದನೇ ಪಂದ್ಯ ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ (Abhishek Sharma) ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು. ಅದರಲ್ಲೂ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಲು ಯತ್ನಿಸುವ ಅಭಿಷೇಕ್ ಈ ಪಂದ್ಯದ ಮೊದಲೆರಡು ಎಸೆತಗಳಲ್ಲಿ ರನ್ ಬಾರಿಸಲಿಲ್ಲ. ಆದರೆ ಮೂರನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದರು. ಜಾಕೋಬ್ ಡಫಿ ಎಸೆದ ಈ ಎಸೆತವನ್ನು ಸಿಕ್ಸರ್​ಗಟ್ಟುವ ಮೂಲಕ ಅಭಿಷೇಕ್ ತಮ್ಮ ಖಾತೆ ತೆರೆದರು. ಆದರೆ ಅಭಿಯ ಈ ಪವರ್​ಫುಲ್​ ಶಾಟ್​ನಿಂದಾಗಿ ಅಂಪೈರ್​ಗಳು ಮೊದಲ ಓವರ್​ನಲ್ಲೇ ಚೆಂಡನ್ನು ಬದಲಿಸಬೇಕಾಯಿತು.

ಚೆಂಡಿನ ಆಕಾರವೇ ಬದಲಾಯ್ತು

ಅಭಿಷೇಕ್ ಶರ್ಮಾ ಈ ಸರಣಿಯಲ್ಲಿ ಮತ್ತೊಮ್ಮೆ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಖಾತೆಯನ್ನು ತೆರೆದರು. ಜಾಕೋಬ್ ಡಫಿ ಮೂರನೇ ಎಸೆತವನ್ನು ಅಭಿಷೇಕ್ ಕವರ್ಸ್​ ದಿಕ್ಕಿನಲ್ಲಿ ಆಡುವ ಮೂಲಕ ಭರ್ಜರಿ ಸಿಕ್ಸರ್ ಬಾರಿಸಿದರು. ಇತ್ತ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಕೂಡ ಹುಚ್ಚೆದು ಕುಣಿಯಲಾರಂಭಿಸಿದರು. ಆದರೆ ಈ ಅದ್ಭುತ ಸಿಕ್ಸರ್ ನಂತರ ಚೆಂಡನ್ನು ಬದಲಿಸಬೇಕಾಯಿತು. ಏಕೆಂದರೆ ಅಭಿಷೇಕ್ ತೋಳ್ಬಲಕ್ಕೆ ಸಿಲುಕಿದ ಚೆಂಡು ತನ್ನ ಆಕಾರವನ್ನು ಕಳೆದುಕೊಂಡಿತ್ತು. ವಾಸ್ತವವಾಗಿ ಅಭಿ ಬಾರಿಸಿದ ಚೆಂಡು ಬೌಂಡರಿಯಿಂದಾಚೆಗಿನ ಕಾಂಕ್ರೀಟ್ ಅಥವಾ ಗಟ್ಟಿಯಾದ ಮೇಲ್ಮೈಗೆ ಬಡಿದು ಅದರ ಆಕಾರವನ್ನು ಕಳೆದುಕೊಂಡಿತ್ತು. ಹೀಗಾಗಿ ಚೆಂಡನ್ನು ಪರೀಕ್ಷಿಸಿದ ಅಂಪೈರ್‌ಗಳು ಚೆಂಡನ್ನು ಬದಲಿಸುವ ನಿರ್ಧಾರಕ್ಕೆ ಬಂದರು.

IND vs NZ: ಗುರುವಿಗೆ ತಕ್ಕ ಶಿಷ್ಯ; 2ನೇ ಅತಿ ವೇಗದ ಅರ್ಧಶತಕ ಬಾರಿಸಿದ ಅಭಿಷೇಕ್

30 ರನ್​ಗಳಿಗೆ ಅಭಿ ಇನ್ನಿಂಗ್ಸ್ ಅಂತ್ಯ

ನಿಯಮಗಳ ಪ್ರಕಾರ, ಪಂದ್ಯದಲ್ಲಿ ಬಳಸುವ ಚೆಂಡಿನ ಆಕಾರ ಬದಲಾದರೆ, ಅದನ್ನು ಬದಲಾಯಿಸಬೇಕು. ಅದರಂತೆ ಅಂಪೈರ್‌ಗಳು ತಕ್ಷಣ ಹೊಸ ಚೆಂಡನ್ನು ತರಲು ನಿರ್ಧರಿಸಿದರು, ಇದರಿಂದಾಗಿ ಆಟವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ಪಂದ್ಯದ ಆರಂಭಿಕ ಓವರ್‌ನಲ್ಲಿ ಈ ಘಟನೆ ಸಂಭವಿಸಿದರಿಂದ ಅಭಿಮಾನಿಗಳು ಅಚ್ಚರಿಗೊಂಡರು. ಆ ಬಳಿಕ ತಮ್ಮ ಸ್ಫೋಟಕ ಇನ್ನಿಂಗ್ಸ್ ಮುಂದುವರಿಸಿದ ಅಭಿಷೇಕ್ ಶರ್ಮಾ ಮೊದಲ ಓವರ್‌ನಲ್ಲಿ ಒಂದು ಸಿಕ್ಸ್ ಮತ್ತು ಎರಡು ಬೌಂಡರಿಗಳನ್ನು ಒಳಗೊಂಡಂತೆ 14 ರನ್ ಗಳಿಸಿದರು. ಆದಾಗ್ಯೂ ಅವರಿಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಭಿ 16 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಸ್ ಅಧಿಕಾರಿಗಳಿಗೆ ಹೊಸ ನಿಯಮ; ಕೇಂದ್ರದಲ್ಲಿ ಐಜಿಯಾಗಲು ಎರಡು ವರ್ಷ ಕೇಂದ್ರೀಯ ಸೇವೆ ಕಡ್ಡಾಯ – Kannada News | MHA mandates two year Central stint as SP or DIG for IPS officers aiming IG rank

ನವದೆಹಲಿ, ಜನವರಿ 31: ಐಪಿಎಸ್ ಅಧಿಕಾರಿಗಳು ಕೇಂದ್ರದಲ್ಲಿ ಐಜಿ ಮಟ್ಟದ ಅಧಿಕಾರಿಯಾಗಲು ಕನಿಷ್ಠ ಎರಡು ವರ್ಷ ಎಸ್​ಪಿ ಅಥವಾ ಡಿಐಜಿ ಮಟ್ಟದಲ್ಲಿ ಕೇಂದ್ರೀಯ ಸೇವೆ ಪೂರ್ಣಗೊಳಿಸುವುದು (central deputation) ಕಡ್ಡಾಯ. ಹೀಗೊಂದು ಹೊಸ ನಿಯಮವನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (Ministry of Home Affairs) ಮಾಡಿದೆ. ಜನವರಿ 28ರಂದು ಹೊರಡಿಸಲಾದ ಈ ಮಾರ್ಗಸೂಚಿ ಪ್ರಕಾರ 2011, ಹಾಗೂ ನಂತರದ ಬ್ಯಾಚ್ ಅಧಿಕಾರಿಗಳಿಗೆ ಹೊಸ ನಿಯಮ ಅನ್ವಯ ಆಗುತ್ತದೆ.

ರಾಷ್ಟ್ರಮಟ್ಟದ ಜವಾಬ್ದಾರಿ ನಿಭಾಯಿಸಬಲ್ಲಂತಹ ಅಧಿಕಾರಿಗಳ ಸಮೂಹ ನಿರ್ಮಿಸುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ. ಹೊಸ ನಿಯಮದಿಂದ ಅಧಿಕಾರಿಗಳು ಹಿರಿಯ ನಾಯಕತ್ವದ ಪಾತ್ರಕ್ಕೆ ಬೇಕಾದ ಕೇಂದ್ರೀಯ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ರವಿದಾಸ್ ಜಯಂತಿ: ಬಾಂಬ್ ಬೆದರಿಕೆ ನಡುವೆ ಇಂದು ಪ್ರಧಾನಿ ಮೋದಿ ಪಂಜಾಬ್ ಭೇಟಿ; ಅದಂಪುರ್ ಏರ್ಪೋರ್ಟ್​ಗೆ ಗುರು ರವಿದಾಸ್ ಹೆಸರು

ಕೇಂದ್ರ ಮಟ್ಟದಲ್ಲಿ ಅನುಭವ ಇಲ್ಲದ ಐಪಿಎಸ್ ಅಧಿಕಾರಿಗಳು ಪೊಲೀಸ್ ಮಹಾನಿರ್ದೇಶಕ ಅಥವಾ ಐಜಿ ಮಟ್ಟದ ಹುದ್ದೆ ಏರುತ್ತಿದ್ದರು. ಇದರಿಂದ ಕೇಂದ್ರೀಯ ಮಟ್ಟದಲ್ಲಿ ಪೊಲೀಸ್ ವ್ಯವಸ್ಥೆ, ಗುಪ್ತಚರ ಮತ್ತು ಭದ್ರತೆಯನ್ನು ನಿಭಾಯಿಸಲು ಕಷ್ಟವಾಗುತ್ತಿರುವ ಕಾರಣ ಈ ಸುಧಾರಣಾ ಕ್ರಮ ಜಾರಿಗೆ ತರಲಾಗಿದೆ.

ಐಪಿಎಸ್ ಅಧಿಕಾರಿಗಳು ಸಿಎಪಿಎಫ್ ಮತ್ತಿತರ ಕೇಂದ್ರೀಯ ಹುದ್ದೆಗಳಲ್ಲಿ ಅನುಭವ ಹೊಂದಿದ ನಂತರ ಐಜಿಯಾಗಬೇಕಾಗುತ್ತದೆ.

ಇದನ್ನೂ ಓದಿ: ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ; ಮಹಾರಾಷ್ಟ್ರಕ್ಕೆ ಮೊತ್ತಮೊದಲ ಮಹಿಳಾ ಡಿಸಿಎಂ

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಈ ಅಧಿಸೂಚನೆಯು ಎಲ್ಲಾ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಲಾಗಿದೆ. ಕೇಂದ್ರಾಡಳಿತ ಪ್ರದೇಶಗಳ ಅಧೀನ ಕಾರ್ಯದರ್ಶಿಗಳಿಗೂ ಕಳುಹಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಮೀನು ವಿಚಾರಕ್ಕೆ ದಾಯಾದಿ ಕಲಹ: ಹಿಂಬದಿಯಿಂದ ಚಾಕು ಇರಿದು ಬರ್ಬರವಾಗಿ ವ್ಯಕ್ತಿಯ ಕೊಲೆ – Kannada News | Kalaburagi Land Dispute: Family Feud Ends in Brutal Stabbing Murder

ಕಲಬುರಗಿ, ಜನವರಿ 31: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ದಾಯಾದಿ ಕಲಹ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ತಳವಾರ ಮೃತ ದುರ್ದೈವಿಯಾಗಿದ್ದು, ಮೃತನ ದೊಡ್ಡಪ್ಪನ ಮಗ ಗೂಳೇಶ್​​ ಎಂಬವನೇ ಕೊಲೆ ಆರೋಪಿಯಾಗಿದ್ದಾನೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಗೂಳೆಶ್​​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಿಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಬಸವರಾಜ್ ಹೆಂಡತಿ ಜೊತೆ ಊಟ ಮಾಡಿ ಕೂತಿದ್ದರು. ಈ ವೇಳೆ ಸ್ನೇಹಿತರಿಂದ ಕರೆ ಬಂದ ಹಿನ್ನೆಲೆ ಮನೆಯಿಂದ ಆಚೆ ಬಂದು ಅಂಗಡಿಯ ಬಳಿ ಗೆಳೆಯರ ಜೊತೆ ಬಸವರಾಜ್​​ ಮಾತಾಡಿಕೊಂಡಿದ್ದರು. ಈ ವೇಳೆ ಅಲ್ಲಿಗೆ ಬಂದ ಗೂಳೇಶ್,​​​​ ಅನ್ನ ಇಲ್ಲದಿದ್ರು ದೊಡ್ಡ ದೊಡ್ಡ ಮಾತು ಹೇಳ್ತೀಯಾ? ಜಮೀನು ಮಾರಾಟ ವಿಚಾರದಲ್ಲಿ ಎಂಟ್ರಿ ಕೊಡ್ತೀಯಾ? ಅಂತಾ ಬೈಯೋದಕ್ಕೆ ಶುರು ಮಾಡಿದ್ದಾನೆ‌. ಬಸವರಾಜ್ ಮೇಲಿನ ಕೋಪಕ್ಕೆ ಆತನ ಸ್ನೇಹಿತನ ಜೊತೆಯೂ ಗಲಾಟೆ ತೆಗೆದು ಹಲ್ಲೆ ಮಾಡಿದ್ದಾನೆ. ಹೀಗಾಗಿ ತಕ್ಷಣ ಅಲ್ಲಿದ್ದವರು ಬಸವರಾಜ್​​ಗೆ ಮನೆಗ ಹೋಗುವಂತೆ ಹೇಳಿದ್ದಾರೆ. ಅವರು ಕೂಡ ಮನೆಯತ್ತ ಹೆಜ್ಜೆ ಹಾಕಿದ್ದು, ಈ ವೇಳೆ ಹಿಂದಿನಿಂದ ಬಂದ ಆರೋಪಿ ಚಾಕುವಿನಿಂದ ಎರಡ್ಮೂರು ಬಾರಿ ಬಸವರಾಜ್​​ಗೆ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಸವರಾಜ್ ತನ್ನ ಸಹೋದರ ಮತ್ತು ಚಿಕ್ಕಪ್ಪಂದಿರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ‌. ತಕ್ಷಣ ಸ್ಥಳಕ್ಕೆ ಬಂದವರೆ ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯತ್ನಿಸಿದರೂ ಅಷ್ಟರಲ್ಲಾಗಲೇ ಬಸವರಾಜ್ ಉಸಿರು ಚೆಲ್ಲಿದ್ದರು.

ಇದನ್ನೂ ಓದಿ: ತನ್ನ ತಂದೆ-ತಾಯಿ, ಸಹೋದರಿಯನ್ನು ಕೊಂದ ಯುವಕ; ಮಿಸ್ಸಿಂಗ್ ಕೇಸ್ ಕೊಡಲು ಹೋಗಿ ಸತ್ಯ ಕಕ್ಕಿದ ಭೂಪ!

ಇನ್ನು ಕೊಲೆಯಾದ ಬಸವರಾಜ್ ಮತ್ತು ಗೂಳೇಶ್ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು. ಬಸವರಾಜ್ ತಂದೆ-ತಾಯಿ ಮೃತರಾದ ಬಳಿಕ ಬಸವರಾಜ್ ಸಹೋದರರನ್ನ ಗೂಳೇಶ್ ತಂದೆ-ತಾಯಿಯೇ ಸಾಕಿದ್ದು, ಮದುವೆಯನ್ನೂ ಮಾಡಿದ್ದರು. ಆದ್ರೆ ಮದುವೆ ಖರ್ಚು ಅದು ಇದು ಅಂತಾ ಸಾಕಷ್ಟು ಸಾಲ ಆಗಿದೆ. ಹೀಗಾಗಿ ಬಸವರಾಜ್ ಪಾಲಿನ ಜಮೀನು ನಾವೇ ಖರಿದಿ ಮಾಡಿ ಸಾಲ ತೀರಿಸುತ್ತೇವೆ ಎಂದು ಗೂಳೇಶ್​​ ಕುಟುಂಬ ಹೇಳಿತ್ತು. ಬಸವರಾಜ್ ಪತ್ನಿ ಸ್ವಲ್ಪ ಓದು ಬರಹ ಗೊತ್ತಿದ್ದವರಾಗಿದ್ದು, ಇವರು ಮೋಸ ಮಾಡಿ ನಮ್ಮ ಜಮೀನು ಲಪಟಾಯಿಸೋದಕ್ಕೆ ಮುಂದಾಗಿದ್ದಾರೆ ಅಂತಾ ಗಂಡನಿಗೆ ಹೇಳಿದ್ದರು. ಹೀಗಾಗಿ ಮನೆಯಿಂದ ಆಚೆ ಬಂದು ಇವರು ವಾಸ ಮಾಡುತ್ತಿದ್ದರು. ಇದ್ರಿಂದ ಕೆರಳಿ ಕೆಂಡವಾಗಿ ಬಸವರಾಜ್ ಮೇಲೆ ಹಲ್ಲೆ ಮಾಡಿ ಗೂಳೇಶ್​​ ಒಮ್ಮೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ಬಂದಿದ್ದ. ಅದಾದ ಬಳಿಕವೂ ಪದೇ ಪದೇ ಬಸವರಾಜ್ ಜೊತೆ ಗಲಾಟೆ ಮಾಡ್ತಿದ್ದ. ಕೆಲ ತಿಂಗಳ ಹಿಂದೆ ಈ ಗೂಳೇಶ್​​ನ ಮತ್ತೊಬ್ಬ ಚಿಕ್ಕಪ್ಪ ಕೂಡ ಜಮೀನು ಮಾರಾಟ ಮಾಡೋದಕ್ಕೆ ಮುಂದಾಗಿದ್ದರು. ಆ ಜಮೀನನ್ನು ಕಡಿಮೆದರಲ್ಲಿ ಖರೀದಿಸಲು ಆರೋಪಿಯ ಕುಟುಂಬ ನಿರ್ಧರಿಸಿತ್ತು. ಆದರೆ ಅದಾಗಲೇ ಅವರು ಬೇರೆಯವರಿಗೆ ಜಮೀನು ಮಾರಲು ಒಪ್ಪಿ ಮುಂಗಡ ಹಣವನ್ನೂ ಪಡೆದಿದ್ದರು. ಚಿಕ್ಕಪ್ಪನ ಬೆಂಬಲಕ್ಕೆ ಬಸವರಾಜ್​​​​ ಕೂಡ ನಿಂತಿದ್ದರು. ಈ ವಿಚಾರವಾಗಿಯೂ  ಗೂಳೇಶ್​​ಗೆ ಸಿಟ್ಟಿತ್ತು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು: ನೀವೂ ನೋಡಿ – Kannada News | OTT Release this week from January 25 to January 31

ಬಾಕ್ಸ್ ಆಫೀಸ್​​ನಲ್ಲಿ ಹಲವು ಹೊಸ ದಾಖಲೆಗಳನ್ನೇ ಬರೆದಿರುವ 2025ರ ಬ್ಲಾಕ್ ಬಸ್ಟರ್ ಸಿನಿಮಾ ‘ಧುರಂಧರ್’ ಈ ವಾರ ಒಟಿಟಿಗೆ ಬಂದಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಸಿನಿಮಾ ಈಗಾಗಲೇ ಬಿಡುಗಡೆ ಆಗಿದ್ದು, ಚಿತ್ರಮಂದಿರಗಳ ರೀತಿಯೇ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ.

Source link

‘ಉತ್ತರಕಾಂಡ’ ಸಿನಿಮಾ ನಿಂತಿದ್ದು ಏಕೆ? ಮುಂದೇನು? ಡಾಲಿ ಧನಂಜಯ್ ಉತ್ತರ – Kannada News | Is Uttarakaanda movie stopped Daali Dhanajay gave answer

ಡಾಲಿ ಧನಂಜಯ್ (Daali Dhananjay) ಸಿನಿಮಾ ವೃತ್ತಿ ಜೀವನದಲ್ಲಿ ‘ರತ್ನನ್ ಪ್ರಪಂಚ’ ಒಂದು ಅಪರೂಪದ ಮತ್ತು ಅತ್ಯುತ್ತಮ ಸಿನಿಮಾ ಸಹ ಹೌದು. ಆ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದರು. ಆ ಸಿನಿಮಾದ ಅದ್ಭುತ ಯಶಸ್ಸಿನ ಬಳಿಕ ರೋಹಿತ್ ಪದಕಿ ಡಾಲಿ ಧನಂಜಯ್ ಕಾಂಬಿನೇಷನ್​​ನಲ್ಲಿ ‘ಉತ್ತರಕಾಂಡ’ ಸಿನಿಮಾ ಘೋಷಣೆಯಾಯ್ತು. ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಿ ಸಖತ್ ನಿರೀಕ್ಷೆ ಹುಟ್ಟಿಸಿತ್ತು. ಅದೇ ಸಿನಿಮಾನಲ್ಲಿ ಶಿವರಾಜ್ ಕುಮಾರ್, ರಮ್ಯಾ ಅವರುಗಳು ಸಹ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಹಠಾತ್ತಾಗಿ ಸಿನಿಮಾದ ಸುದ್ದಿಯೇ ಇಲ್ಲದಾಗಿದೆ?

ನಿನ್ನೆ ನಟ ಡಾಲಿ ಧನಂಜಯ್ ಅವರು ಸುದ್ದಿಗೋಷ್ಠಿಯೊಂದನ್ನು ಕರೆದಿದ್ದರು. ಈ ವೇಳೆ ‘ಉತ್ತರಕಾಂಡ’ ಸಿನಿಮಾ ನಿಂತೇ ಹೋಯ್ತೆ?’ ಎಂಬ ಪ್ರಶ್ನೆ ಡಾಲಿಗೆ ಎದುರಾಯ್ತು, ಪ್ರಶ್ನೆಗೆ ಉತ್ತರಿಸಿದ ಧನಂಜಯ್, ‘ಉತ್ತರಕಾಂಡ ಸದ್ಯಕ್ಕೆ ಆಗಿಲ್ಲ, ನಿಂತಿದೆ. ಬೇರೆ ಬೇರೆ ಕಾರಣಕ್ಕೆ ಕೆಲವು ಪ್ರಾಜೆಕ್ಟ್​​ಗಳು ನಿಧಾನ ಆಗುತ್ತಾ ಹೋಗುತ್ತವೆ. ಆದರೆ ಅದನ್ನು ಹಾಗೆ ಬಿಡುವುದಿಲ್ಲ ಖಂಡಿತ ಮಾಡುತ್ತೀವಿ, ಪೂರ್ತಿ ಮಾಡಿ ಜನರ ಎದುರು ತೆಗೆದುಕೊಂಡು ಹೋಗುತ್ತೇವೆ. ಶಿವಣ್ಣ ಜೊತೆಗೂ ಮಾತನಾಡಿದ್ದೇನೆ’ ಎಂದಿದ್ದಾರೆ ಡಾಲಿ.

ಇದನ್ನೂ ಓದಿ:ತಂದೆ ಆಗುತ್ತಿದ್ದಾರೆ ಡಾಲಿ ಧನಂಜಯ್: ಸಿಹಿ ಸುದ್ದಿ ಹಂಚಿಕೊಂಡ ನಟ

ಮುಂದುವರೆದು, ‘ಉತ್ತರಕಾಂಡ’ ಸಿನಿಮಾದ ಚಿತ್ರಕತೆ ಕೆಲಸ ಸದ್ಯಕ್ಕೆ ಚಾಲ್ತಿಯಲ್ಲಿದೆ. ಸಿನಿಮಾ ತಡ ಆಗಿದ್ದರಿಂದ ಮೊದಲಿನ ಚಿತ್ರಕತೆಗೆ ಸಾಕಷ್ಟು ಬದಲಾವಣೆ, ಇನ್ನಷ್ಟು ಹರಿತಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸಿನಿಮಾವನ್ನು ಬಹಳ ದೊಡ್ಡದಾಗಿ, ಭಿನ್ನವಾಗಿ ತೆರೆಗೆ ತರುವ ಯೋಚನೆ ನಮಗೆ ಇದೆ. ಎಲ್ಲೇ ಹೋದರು ‘ಉತ್ತರಕಾಂಡ’ ಸಿನಿಮಾದ ಬಗ್ಗೆಯೇ ಕೇಳುತ್ತಾರೆ. ಹಾಗಾಗಿ ಸದ್ಯಕ್ಕೆ ನನ್ನ ಸಿನಿಮಾಗಳ ಚಿತ್ರೀಕರಣವನ್ನು ಮುಗಿಸಿ ‘ಉತ್ತರಕಾಂಡ’ ಸಿನಿಮಾ ಶುರು ಮಾಡುತ್ತೀವಿ’ ಎಂದು ಭರವಸೆ ನೀಡಿದ್ದಾರೆ.

ಡಾಲಿ ಧನಂಜಯ್ ಅವರು ನಾಯಕನಾಗಿ ನಟಿಸಿದ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿ ಸುಮಾರು ಎರಡು ವರ್ಷಗಳಾಗುತ್ತಾ ಬಂತು. ಇದೀಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಹಲಗಲಿ’, ‘ಜಿಂಗೊ’ ಮತ್ತು ‘ಅಣ್ಣ ಫ್ರಂ ಮೆಕ್ಸಿಕೊ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಜೆಸಿ’, ‘ಹೆಗ್ಗಣ ಮುದ್ದು’ ಇನ್ನೂ ಕೆಲ ಸಿನಿಮಾಗಳ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:01 pm, Sat, 31 January 26

Source link

IND vs NZ: ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾದಲ್ಲಿ 2 ಬದಲಾವಣೆ – Kannada News | India vs New Zealand 5th T20: Thiruvananthapuram Finale; IND Batting First, Full Playing XIs

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಅಂತಿಮ ಹಂತವನ್ನು ತಲುಪಿದೆ. ಮೊದಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಈಗಾಗಲೇ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಆದರೆ ಕಿವೀಸ್ ತಂಡವು ನಾಲ್ಕನೇ ಟಿ20ಯಲ್ಲಿ ಭಾರತವನ್ನು 50 ರನ್‌ಗಳಿಂದ ಸೋಲಿಸಿತ್ತು. ಇದೀಗ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಸೋಲಿನ ಅಂತರವನ್ನು ಕಡಿಮೆ ಮಾಡಲು ನೋಡುತ್ತಿದೆ. ಸರಣಿಯ ಅಂತಿಮ ಮತ್ತು ಐದನೇ ಪಂದ್ಯವು ಈಗ ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯವು ಟಿ20 ವಿಶ್ವಕಪ್‌ಗೆ ಮುನ್ನ ಟೀಂ ಇಂಡಿಯಾದ ಕೊನೆಯ ಪಂದ್ಯವಾಗಿದೆ.

ಟಾಸ್ ಗೆದ್ದ ಟೀಂ ಇಂಡಿಯಾ

ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟಾಸ್ ಜೊತೆಗೆ ಉಭಯ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ. ಅದರಂತೆ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದ್ದು, ಅಕ್ಷರ್ ಪಟೇಲ್ ಮತ್ತು ಇಶಾನ್ ಕಿಶನ್ ತಂಡಕ್ಕೆ ಮರಳಿದ್ದಾರೆ. ವರುಣ್ ಚಕ್ರವರ್ತಿ ಕೂಡ ಆಡಲಿದ್ದಾರೆ. ನ್ಯೂಜಿಲೆಂಡ್ ಕಳೆದ ಪಂದ್ಯಕ್ಕೆ ಹೋಲಿಸಿದರೆ ಈ ಪಂದ್ಯಕ್ಕೆ ನಾಲ್ಕು ಬದಲಾವಣೆಗಳನ್ನು ಮಾಡಿದೆ. ಡೆವೊನ್ ಕಾನ್ವೇ ಬದಲಿಗೆ ಫಿನ್ ಅಲೆನ್, ಜಾಕೋಬ್ ಡಫಿ ಬದಲಿಗೆ ಮಾರ್ಕ್ ಚಾಪ್ಮನ್ ಮತ್ತು ಮ್ಯಾಟ್ ಹೆನ್ರಿ ಬದಲಿಗೆ ಲಾಕಿ ಫರ್ಗುಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕೈಲ್ ಜೇಮಿಸನ್ ಕೂಡ ಈ ಪಂದ್ಯದಲ್ಲಿ ಆಡಲಿದ್ದಾರೆ.

ಉಭಯ ತಂಡಗಳು

ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ನ್ಯೂಜಿಲೆಂಡ್ ತಂಡ: ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಬೆವನ್ ಜಾಕೋಬ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮಿಸನ್, ಇಶ್ ಸೋಧಿ, ಲಾಕಿ ಫರ್ಗುಸನ್, ಜಾಕೋಬ್ ಡಫಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:46 pm, Sat, 31 January 26

Source link