ಆಪ್ತ ಗೆಳೆಯ ಎಸ್ಪಿಬಿ ವಿರುದ್ಧವೇ ಕಾನೂನು ಸಮರಕ್ಕೆ ಇಳಿದಿದ್ದ ಇಳಯರಾಜ – Kannada News
ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 1,500ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿ, 8,000ಕ್ಕೂ ಅಧಿಕ ಹಾಡುಗಳನ್ನು ರಚಿಸಿದವರು ಇಳಯರಾಜಾ. ಬ್ರಿಟನ್‌ನ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದಿಂದ ‘ಮಾಸ್ಟ್ರೋ’ ಬಿರುದು ಪಡೆದ ಮೊದಲ ಏಷ್ಯನ್ ಇವರಾಗಿದ್ದಾರೆ. ಆದರೆ, ಇವರ ಸಂಗೀತ ಜಗತ್ತಿನಾದ್ಯಂತ ವಾಣಿಜ್ಯಿಕವಾಗಿ ಕೋಟಿ ಕೋಟಿ ಗಳಿಸಿದರೂ, ಅದರ ಲಾಭವೆಲ್ಲಾ ನಿರ್ಮಾಪಕರು ಹಾಗೂ ಆಡಿಯೋ ಕಂಪನಿಗಳ ಪಾಲಾಯಿತೇ ಹೊರತು ಇಳಯರಾಜಾಗೆ ಸಿಕ್ಕಿದ್ದು ತೀರಾ ಕಡಿಮೆ. ಈ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಮೊದಲ ಭಾರತೀಯ ಸಂಗೀತ ನಿರ್ದೇಶಕ ಇಳಯರಾಜಾ. ಕಾನೂನಿನ…