Headlines

ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ್ದ ಸರ್ಕಾರಿ ಕಟ್ಟಡವೀಗ ಅನೈತಿಕ ಚಟುವಟಿಕೆಗಳ ತಾಣ: ಹೇಳೋರು ಇಲ್ಲ ಕೇಳೋರು ಇಲ್ಲ! – Kannada News

ಪಾಳು ಬಿದ್ದಿರುವ ಕಟ್ಟಡImage Credit source: Tv9 Kannada ಬಾಗಲಕೋಟೆ, ಜೂನ್​​ 04: ಇಲ್ಲಿನ ನವನಗರ ಯುನಿಟ್ ಎರಡರ ಸೆಕ್ಟರ್ ನಂಬರ್​​ 10ರಲ್ಲಿ ಕೋಟ್ಯಾಂತರ ರೂಪಾಯಿ ಹಣ ವೆಚ್ಚ ಮಾಡಿ ನಿರ್ಮಿಸಲಾಗಿರುವ ಸರಕಾರಿ ನರ್ಸರಿ ಶಾಲೆಯ ಕಟ್ಟಡ ಭೂತ ಬಂಗಲೆಯಂತಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಆವರಣದ ಗೇಟ್​​ಗೆ ಕನಿಷ್ಠ ಬೀಗವೂ ಇಲ್ಲದ ಕಾರಣ ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ ಎಂಬಂತಾಗಿದೆ. ಕಿಟಕಿಗಳ ಗಾಜುಗಳು ಚೂರಾಗಿದ್ದರೆ, ಕೊಠಡಿಗಳ ಬಾಗಿಲು ಮುರಿದಿವೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು,…

Read More

ರಾಜ್ಯಾದ್ಯಂತ ವಾಯು ಗುಣಮಟ್ಟ ಸುಧಾರಣೆ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ನಿರಾಳ ವಾತಾವರಣ – Kannada News

ಬೆಂಗಳೂರು, ಜೂ.4: ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟವು ‘ಉತ್ತಮ’ (Good) ಹಾಗೂ ‘ಸಾಧಾರಣ’ (Moderate) ಮಟ್ಟದಲ್ಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರದಿ ಮಾಡಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು ಸರಾಸರಿ AQI 46 ರಿಂದ 65ರ ಆಸುಪಾಸಿನಲ್ಲಿದೆ. ಮಳೆಯ ಸಿಂಚನ ಮತ್ತು ತಂಗಾಳಿಯ ಕಾರಣದಿಂದಾಗಿ ಧೂಳಿನ ಕಣಗಳು…

Read More

Weather Report: ಕರಾವಳಿ-ಮಲೆನಾಡಿಗೆ ಮಳೆ ಸಿಂಚನ, ಉತ್ತರ ಕರ್ನಾಟಕಕ್ಕೆ ಸೂರ್ಯನ ತಾಪ! – Kannada News

ಬೆಂಗಳೂರು, ಜೂ.4:ಕರಾವಳಿಯಿಂದ ಬಯಲು ಸೀಮೆಯವರೆಗೆ ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ಬಿಗುವಿನ ವಾತಾವರಣಕ್ಕೆ ಬ್ರೇಕ್ ಬೀಳುವ ಸಮಯ ಬಂದಿದೆ. ರಾಜ್ಯದಲ್ಲಿ ವರುಣದೇವ ಅಬ್ಬರ ಹೆಚ್ಚಾಗಲಿದೆ. ಇಂದು ಮಧ್ಯಾಹ್ನದ ನಂತರ ಕರ್ನಾಟಕದಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುವ (Heavy Rain Forecast) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಒಣಗಿದ ಭೂಮಿಯನ್ನು ಮತ್ತೆ ತಂಪಾಗಿಸಲಿದೆ. ಇಂದು ಬೆಳಗಿನ ಜಾವದಿಂದಲೇ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಶೇ. 90 ರಷ್ಟು ತೇವಾಂಶ ದಾಖಲಾಗಿದ್ದು, ವಾತಾವರಣದಲ್ಲಿ ಗರಿಷ್ಠ ತಂಪಾದ ಅನುಭವವಾಗುತ್ತಿದೆ. ನೈಋತ್ಯ ದಿಕ್ಕಿನಿಂದ ಬೀಸುತ್ತಿರುವ…

Read More

ದಿನ ಭವಿಷ್ಯ: ಇಂದು ಈ ರಾಶಿಯವರ ಮನಸ್ಸಿಗೆ ಏನನ್ನು ಅರ್ಥಮಾಡಿಸುವುದೂ ಕಷ್ಟ.. – Kannada News

ಮೇಷ ರಾಶಿ: ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಅಡೆತಡೆಗಳು ಕಂಡುಬಂದರೆ, ಅದು ಕೊನೆಗೊಳ್ಳುತ್ತದೆ. ಬಂದ ಕಳಂಕವನ್ನು ಯಾವುದಾರೂ ರೀತಿಯಲ್ಲಿ ತೊಳೆಯುವ ಪ್ರಯತ್ನ ಮಾಡುವಿರಿ. ಕೆಲಸದಲ್ಲಿ ಒತ್ತಡ ತಕ್ಷಣ ಉಂಟಾಗಬಹುದು ಆದರೆ ನಿರ್ವಹಿಸಬಹುದಾದ ಮಟ್ಟದಲ್ಲಿದೆ. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ಅನಿರೀಕ್ಷಿತ ಅಶುಭವಾರ್ತೆಯನ್ನು ನೀವು ಕೇಳಬೇಕಾದೀತು.‌ ತನ್ನವರ ಬಗ್ಗೆ ನಂಬಿಕೆ ಇರದು. ನಂಬಿಕೆಯಲ್ಲಿ ಪಕ್ವತೆ ಇರಲಿದೆ. ವೃಷಭ ರಾಶಿ: ನಿಮ್ಮ ಮನಸ್ಸಿಗೆ ಅದು ಒಪ್ಪಿಗೆಯಾಗಲಿ. ಎಲ್ಲ ವಿಷಯಗಳಲ್ಲಿ ಸ್ಪಷ್ಟತೆಯೊಂದಿಗೆ ನಡೆದುಕೊಳ್ಳಿ. ಹಣಕಾಸಿನಲ್ಲಿ ಉತ್ತಮ ಸ್ಥಿತಿ ಕಾಣಬಹುದು. ಆದರೂ…

Read More

ದೆಹಲಿ ಬೆಂಕಿ ದುರಂತ; ಹೋಟೆಲ್ ಮಾಲೀಕ ಬಂಧನ, ನ್ಯಾಯಾಂಗ ತನಿಖೆಗೆ ಆದೇಶ – Kannada News

ನವದೆಹಲಿ, ಜೂನ್ 3: ದೆಹಲಿಯ ಮಾಳವೀಯ ನಗರದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ (Fire Accident) 21 ಜನರು ಸಾವನ್ನಪ್ಪಿದ ನಂತರ ಲೆಫ್ಟಿನೆಂಟ್ ಗವರ್ನರ್ ಇಂದು ತುರ್ತು ಸಭೆ ಕರೆದಿದ್ದರು. ಈ ವೇಳೆ ಅವರು ದೆಹಲಿಯಲ್ಲಿ ಒಂದು ತಿಂಗಳ ವಿಶೇಷ ಅಗ್ನಿ ಸುರಕ್ಷತಾ ಅಭಿಯಾನವನ್ನು ನಡೆಸಲು ಆದೇಶಿಸಿದ್ದಾರೆ. ಇದರಲ್ಲಿ ಎಲ್ಲಾ ಹೋಟೆಲ್‌ಗಳು, ಅತಿಥಿ ಗೃಹಗಳು ಮತ್ತು ಸೂಕ್ಷ್ಮ ಕಟ್ಟಡಗಳ ತಪಾಸಣೆ ಸೇರಿದೆ. ಈ ಬೆಂಕಿ ದುರಂತದ ಬಗ್ಗೆ ನ್ಯಾಯಾಂಗ ತನಿಖೆಗೂ ಆದೇಶಿಸಲಾಗಿದೆ. ಪರಾರಿಯಾಗಿದ್ದ ಹೋಟೆಲ್ ಮಾಲೀಕರನ್ನು ಕೂಡ ಬಂಧಿಸಲಾಗಿದೆ….

Read More

ಆರ್​ಸಿಬಿ ಹ್ಯಾಟ್ರಿಕ್ ಕಪ್ ಗೆಲ್ಲುವುದು ಕಷ್ಟಕರ..! ಇದು ಐಪಿಎಲ್ ಇತಿಹಾಸ ನುಡಿದ ಭವಿಷ್ಯ – Kannada News

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಐಪಿಎಲ್ (IPL) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಪ್ರಶಸ್ತಿಗಳನ್ನು ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಒಂದು ಟ್ರೋಫಿಗಾಗಿ ಬರೋಬ್ಬರಿ 17 ವರ್ಷಗಳ ಕಾಲ ಕಾದಿದ್ದ ಆರ್​ಸಿಬಿ, ಎರಡನೇ ಟ್ರೋಫಿಯನ್ನು ಕೇವಲ ಒಂದು ವರ್ಷದಲ್ಲೇ ಗೆದ್ದುಕೊಂಡಿತು. ಇದೀಗ ಆರ್​ಸಿಬಿ ಸತತ ಮೂರನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ತಂಡದ ಆಟಗಾರರು ಕೂಡ ಇದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಆರ್​ಸಿಬಿ ತನ್ನ ಮೂರನೇ…

Read More

Monsoon 2026: ಕೇರಳದಿಂದಲೇ ಮಾನ್ಸೂನ್ ಭಾರತವನ್ನು ಪ್ರವೇಶಿಸುವುದೇಕೆ? – Kannada News

ನವದೆಹಲಿ, ಜೂನ್ 3: ನಾಳೆ (ಜೂನ್ 4) ಮಾನ್ಸೂನ್ (Monsoon) ಕೇರಳವನ್ನು ತಲುಪಲಿದೆ. ಇದು ಅಧಿಕೃತವಾಗಿ ಭಾರತದಲ್ಲಿ ಮಳೆಗಾಲದ ಆರಂಭವನ್ನು ಸೂಚಿಸುತ್ತದೆ. ಈಗಾಗಲೇ ದೇಶಾದ್ಯಂತ ಪೂರ್ವ ಮಾನ್ಸೂನ್ ಮಳೆ ಶುರುವಾಗಿದೆ. ಹಾಗಾದರೆ, ಮಾನ್ಸೂನ್ ಕೇರಳದಿಂದಲೇ ಭಾರತವನ್ನು ಪ್ರವೇಶಿಸಲು ಕಾರಣವೇನು? ಮಾನ್ಸೂನ್ ಮಳೆಗಾಗಿ ಒತ್ತಡವನ್ನು ಹೇಗೆ ಸೃಷ್ಟಿಸುತ್ತವೆ? ಎಂಬ ಕುರಿತು ಮಾಹಿತಿ ಇಲ್ಲಿದೆ. ಜೂನ್ 4ರಂದು ಮಾನ್ಸೂನ್ ಕೇರಳವನ್ನು ತಲುಪಲಿದೆ. ಕೇರಳವು ಅರಬ್ಬಿ ಸಮುದ್ರದ ತೀರದಲ್ಲಿದೆ. ಅರಬ್ಬಿ ಸಮುದ್ರದ ಶಾಖೆಯು ಮೊದಲು ಭಾರತದ ಪಶ್ಚಿಮ ಕರಾವಳಿಯನ್ನು ತಲುಪುತ್ತದೆ. ಆ…

Read More

26/11 ಮುಂಬೈ ಉಗ್ರರ ದಾಳಿ ನಡೆದಾಗ ಪಾರ್ಟಿ ಮಾಡುತ್ತಿದ್ದ ನಟಿ ಕಂಗನಾ ರಣಾವತ್ – Kannada News

ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ‘ಭಾರತ್ ಭಾಗ್ಯ ವಿಧಾತ’ (Bharat Bhagya Vidhata) ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಈ ವಿಷಯ ಹೇಳಿದ್ದಾರೆ. ದೇಶವನ್ನೇ ನಡುಗಿಸಿದ್ದ 2008ರ 26/11 ಮುಂಬೈ ಉಗ್ರರ ದಾಳಿಯ ಕರಾಳ ರಾತ್ರಿಗೆ ಸಂಬಂಧಿಸಿದಂತೆ ತಮ್ಮ ನೆನಪೊಂದನ್ನು ಅವರು ಹಂಚಿಕೊಂಡಿದ್ದಾರೆ. ಉಗ್ರರು ಮುಂಬೈ ಮೇಲೆ ದಾಳಿ ಮಾಡಿದ ಆ ಸಮಯದಲ್ಲಿ ತಾವು ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವಿಷಯವನ್ನು ಕಂಗನಾ (Kangana Ranaut) ಬಹಿರಂಗಪಡಿಸಿದ್ದಾರೆ. ಆ ಕರಾಳ ರಾತ್ರಿಯನ್ನು ನೆನಸಿಕೊಂಡ ಕಂಗನಾ,…

Read More

ಲೈಂಗಿಕ ಕಿರುಕುಳದ ಸುಳ್ಳು ಕೇಸ್ ಹಾಕಿದ್ದನ್ನು ಒಪ್ಪಿಕೊಂಡ ಶಿಲ್ಪಾ ಶಿಂಧೆ; ನಟಿಯ ಬಂಧನಕ್ಕೆ ಒತ್ತಾಯ – Kannada News

ಕಿರುತೆರೆಯ ಜನಪ್ರಿಯ ನಟಿ ಮತ್ತು ‘ಬಿಗ್ ಬಾಸ್’ ವಿನ್ನರ್ ಶಿಲ್ಪಾ ಶಿಂಧೆ (Shilpa Shinde) ಅವರು ತಮ್ಮ ಹಳೆಯ ವಿವಾದವೊಂದರ ಕುರಿತು ನೀಡಿರುವ ಹೇಳಿಕೆ ಈಗ ಹೊಸದೊಂದು ಕಾನೂನು ಸಂಕಷ್ಟಕ್ಕೆ ಕಾರಣವಾಗಿದೆ. ಸೂಪರ್ ಹಿಟ್ ಹಿಂದಿ ಧಾರಾವಾಹಿ ‘ಭಾಬಿ ಜಿ ಘರ್ ಪರ್ ಹೈ’ (Bhabi Ji Ghar Par Hain) ನಿರ್ಮಾಪಕರ ವಿರುದ್ಧ ತಾವು ಈ ಹಿಂದೆ ಹೂಡಿದ್ದ ಲೈಂಗಿಕ ಕಿರುಕುಳದ ಕೇಸ್ (Harassment Case) ಸುಳ್ಳು ಎಂದು ಅವರು ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಇದರ…

Read More

ಇಂಧನ ಉಳಿಸಲು ಮೋದಿ ಕರೆ; ಒಂದೇ ಕಾರಿನಲ್ಲಿ ಸಂಪುಟ ಸಭೆಗೆ ತೆರಳಿದ ಕೇಂದ್ರ ಸಚಿವರು – Kannada News

ನವದೆಹಲಿ, ಜೂನ್ 3: ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಕೇಂದ್ರ ಸಚಿವರು ಪರಿಸರ ಕಾಳಜಿ ಮೆರೆದಿರುವ ಅಪರೂಪದ ವಿದ್ಯಮಾನವೊಂದು ನಡೆದಿದೆ. ಇಂಧನ ಉಳಿತಾಯಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ಕರೆ ನೀಡಿರುವ ಹಿನ್ನೆಲೆಯಲ್ಲಿ ಒಂದೇ ಕಾರಿನಲ್ಲಿ ಕ್ಯಾಬಿನೆಟ್ ಸಭೆಗೆ ತೆರಳಿ ಕೇಂದ್ರ ಸಚಿವರು ಮಾದರಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲು ಮತ್ತು ಪರಿಸರ ಮಾಲಿನ್ಯ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ಕೇಂದ್ರ ಸಚಿವರು ಅದ್ಭುತವಾಗಿ…

Read More