Headlines

ಇಂಧನ ಉಳಿಸಲು ಮೋದಿ ಕರೆ; ಒಂದೇ ಕಾರಿನಲ್ಲಿ ಸಂಪುಟ ಸಭೆಗೆ ತೆರಳಿದ ಕೇಂದ್ರ ಸಚಿವರು – Kannada News

ನವದೆಹಲಿ, ಜೂನ್ 3: ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಕೇಂದ್ರ ಸಚಿವರು ಪರಿಸರ ಕಾಳಜಿ ಮೆರೆದಿರುವ ಅಪರೂಪದ ವಿದ್ಯಮಾನವೊಂದು ನಡೆದಿದೆ. ಇಂಧನ ಉಳಿತಾಯಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ಕರೆ ನೀಡಿರುವ ಹಿನ್ನೆಲೆಯಲ್ಲಿ ಒಂದೇ ಕಾರಿನಲ್ಲಿ ಕ್ಯಾಬಿನೆಟ್ ಸಭೆಗೆ ತೆರಳಿ ಕೇಂದ್ರ ಸಚಿವರು ಮಾದರಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲು ಮತ್ತು ಪರಿಸರ ಮಾಲಿನ್ಯ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ಕೇಂದ್ರ ಸಚಿವರು ಅದ್ಭುತವಾಗಿ…

Read More

ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಸೂರ್ಯಕುಮಾರ್​ಗೆ ಗೇಟ್​ಪಾಸ್ – Kannada News

2026 ರ ಐಪಿಎಲ್‌ನಲ್ಲಿ (IPL 2026) ಕಳಪೆ ಪ್ರದರ್ಶನದ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಪ್ರಸ್ತುತ ಮುಂಬೈ ಟಿ20 ಲೀಗ್​ನಲ್ಲಿ ಆಡುತ್ತಿದ್ದಾರೆ. ಈ ಲೀಗ್​ನಲ್ಲೂ ಸೂರ್ಯನಿಗೆ ಉತ್ತಮ ಆರಂಭ ಸಿಕ್ಕಿಲ್ಲ. ಇದೆಲ್ಲದರ ನಡುವೆ ಹೊರಬಿದ್ದಿರುವ ಮಾಹಿತಿ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಟಿ20 ತಂಡದ ನಾಯಕತ್ವದಿಂದ ತೆಗೆದುಹಾಕಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಅವರನ್ನು ಭಾರತ ಟಿ20 ತಂಡದಿಂದಲೂ ಕೈಬಿಡಲಾಗುತ್ತಿದೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರನ್ನು…

Read More

CM DK Shivakumar: ಡಿ.ಕೆ. ಶಿವಕುಮಾರ್​ ಎಂಬ ಹೆಸರಿನವನಾದ ನಾನು…, ಕರ್ನಾಟಕದ 25ನೇ ಸಿಎಂ ಆಗಿ ಡಿಕೆಶಿ ಪ್ರಮಾಣವಚನ – Kannada News

ಕರ್ನಾಟಕದ 25ನೇ ಸಿಎಂ ಆಗಿ ಡಿಕೆಶಿ ಪ್ರಮಾಣವಚನImage Credit source: PTI ಬೆಂಗಳೂರು, ಜೂನ್​​ 03: ಕರ್ನಾಟಕದ 25 ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar)​​ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೆಂಗಳೂರಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್​​ಚಂದ್​ ಗೆಹ್ಲೋಟ್​​ ನೂತನ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಿದ್ದು, ವೀರ ಗಂಗಾಧರ ಅಜ್ಜಯ್ಯ ಹೆಸರಲ್ಲಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರೇಷ್ಮೆ ಪಂಚೆ, ಜುಬ್ಬ, ಶಲ್ಯ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಶಿವಕುಮಾರ್​​ ಕಾಣಿಸಿಕೊಂಡಿರೋದು ಗಮನಸೆಳೆಯಿತು. ಮುಖ್ಯಾಂಶಗಳು ಕರ್ನಾಟಕದ 25ನೇ ಸಿಎಂ ಆಗಿ ಪ್ರಮಾಣವಚನ…

Read More

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ: ವಿಡಿಯೋ ನೋಡಿ – Kannada News

ಬೆಂಗಳೂರು, ಜೂನ್​ 03: ರಾಜ್ಯದ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್​​ (DK Shivakumar)ಪ್ರಮಾಣ‌ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ನಾಯಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಿದ್ದಾರೆ. ರಾಹುಲ್ ಗಾಂಧಿ ಲೋಕಭವನಕ್ಕೆ ಆಗಮಿಸುತ್ತಿದ್ದ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಹಸ್ರಾರು ಕಾರ್ಯಕರ್ತರತ್ತ ಕೈ ಬೀಸಿದರು. ಈ ಸಂದರ್ಭದಲ್ಲಿ ಅವರು ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ನೀಡಿದ್ದು ಎಲ್ಲರ ಗಮನ ಸೆಳೆಯಿತು. ಅಭಿಮಾನಿಗಳು ರಾಹುಲ್ ಗಾಂಧಿಯವರನ್ನು ನೋಡುತ್ತಿದ್ದಂತೆ, “ಸರ್, ವೇವ್ ಯುವರ್ ಹ್ಯಾಂಡ್ ಸರ್,” “ರಾಹುಲ್ ಸರ್, ವೇವ್ ಯುವರ್ ಹ್ಯಾಂಡ್,” ಎಂದು…

Read More

ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: ಸಿಎಂ ಘೋಷಿಸಿದ 6 ಕೊಡುಗೆಗಳಾವುವು? – Kannada News

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್…

Read More

ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ: ಬಿಕೆ ಹರಿಪ್ರಾಸದ್​​​ ಒಂದೇ ದಿನ ಡಬಲ್ ಧಮಾಕ – Kannada News

ಬೆಂಗಳೂರು, (ಜೂನ್ 03): ಸಚಿವ ಸ್ಥಾನ ಆಸೆ ಈಡೇರದಿದ್ದರೂ ಸಹ ಬಿಕೆ ಹರಿಪ್ರಸಾದ್​​​ಗೆ (BK Hariprasad) ಎರಡೆರಡು ಹುದ್ದೆಗು ಒದಗಿ ಬಂದಿವೆ. ವಿಧಾನ ಪರಿಷತ್​​​ಗೆ ಮತ್ತೊಮ್ಮೆ ಹರಿಪ್ರಸಾದ್​​ ಅವರಿಗೆ ಹೈಕಮಾಂಡ್ ಅವಕಾಶ ಮಾಡಿಕೊಟ್ಟಿದೆ. ಇದರ ಜೊತೆ ಕೆಪಿಸಿಸಿ (KPCC President)  ಪಟ್ಟವನ್ನು ಕಟ್ಟಿದೆ. ಹೌದು….ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಈ ಸ್ಥಾನಕ್ಕೆ ಬಿಕೆ ಹರಿಪ್ರಸಾದ್ ಅವರನ್ನು ನೇಮಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ರಾಷ್ಟ್ರೀಯ ಅಧ್ಯಕ್ಷರು…

Read More

ಡಾರ್ಕ್ ಪ್ಯಾಟರ್ನ್ ವಿರುದ್ಧ CCPA ಕಠಿಣ ಕ್ರಮ; 5 ಲಕ್ಷದವರೆಗೆ ದಂಡ – Kannada News

ನವದೆಹಲಿ, ಜೂನ್ 3: ಗ್ರಾಹಕರನ್ನು ವಂಚಿಸುವ ಇ-ಕಾಮರ್ಸ್ ವೆಬ್‌ಸೈಟ್‌ಗಳ ವಿರುದ್ಧ ಕೇಂದ್ರ ಸರ್ಕಾರ ಮತ್ತು ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಭಾರಿ ಸಮರ ಸಾರಿವೆ. ಆನ್‌ಲೈನ್‌ನಲ್ಲಿ ಗ್ರಾಹಕರಿಗೆ ಗೊತ್ತಿಲ್ಲದಂತೆ ಮೋಸ ಮಾಡುವ ‘ಡಾರ್ಕ್ ಪ್ಯಾಟರ್ನ್ಸ್‌’ ಹಾವಳಿಗೆ ಬ್ರೇಕ್ ಹಾಕಲು CCPA (Central Consumer Protection Authority) ಈಗ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಭಾರಿ ದಂಡ ವಿಧಿಸಿದೆ. ಡಿಜಿಟಲ್, ಇ ಕಾಮರ್ಸ್ ವೇದಿಕೆಗಳಲ್ಲಿ ಕರಾಳ ಮಾದರಿ (ಡಾರ್ಕ್ ಪ್ಯಾಟರ್ನ್) ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕಠಿಣ…

Read More

‘ಲಗಾನ್’ ಸಿನಿಮಾಗೆ 25 ವರ್ಷಗಳ ಸಂಭ್ರಮ; ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆ – Kannada News

ಭಾರತೀಯ ಚಿತ್ರರಂಗದಲ್ಲಿ ಕ್ರಿಕೆಟ್ ಹಿನ್ನೆಲೆಯ ಸಿನಿಮಾಗಳು ಟ್ರೆಂಡ್ ಆಗುವುದಕ್ಕೂ ದಶಕಗಳ ಮೊದಲೇ, ಕೇವಲ ಒಂದು ಸಾಮಾನ್ಯ ಕ್ರಿಕೆಟ್ ಪಂದ್ಯವನ್ನು ಇಟ್ಟುಕೊಂಡು ಇಡೀ ದೇಶವೇ ರೋಮಾಂಚನಗೊಳ್ಳುವಂತೆ ಮಾಡಿದ ಸಿನಿಮಾ ‘ಲಗಾನ್’ (Lagaan). ಆ ಸಿನಿಮಾ ಬಿಡುಗಡೆಯಾಗಿ ಈಗ 25 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಅಬ್ಬರಿಸಲು ಸಜ್ಜಾಗಿದೆ. ನಿರ್ದೇಶಕ ಅಶುತೋಷ್ ಗೋವಾರಿಕರ್ ಮತ್ತು ನಟ ಆಮಿರ್ ಖಾನ್ ಕಾಂಬಿನೇಷನ್‌ನ ಈ ಸಿನಿಮಾ ಮರು-ಬಿಡುಗಡೆ (Lagaan Re-release) ಆಗುತ್ತಿದೆ ಎಂಬ ವಿಷಯವನ್ನು ಚಿತ್ರತಂಡ ತಿಳಿಸಿದೆ. ಇದರ ಅಂಗವಾಗಿ ‘ಆಮಿರ್…

Read More

IPL 2026: 15 ರನ್ ಬಾರಿಸಲು 13 ಕೋಟಿ ಸಂಬಳ ಪಡೆದ ಸನ್‌ರೈಸರ್ಸ್ ಬ್ಯಾಟರ್

2026 ರ ಐಪಿಎಲ್ ಅದ್ಧೂರಿಯಾಗಿ ಕೊನೆಗೊಂಡಿದೆ. ಪ್ರತಿ ಬಾರಿಯಂತೆ ಈ ಸೀಸನ್​ನಲ್ಲಿ ಕೆಲವು ಆಟಗಾರರು ತಮ್ಮ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಇನ್ನು ಕೆಲವು ಸ್ಟಾರ್ ಆಟಗಾರರ ಹರಾಜಿನಲ್ಲಿ ಕೋಟಿ ಕೋಟಿ ಹಣ ಪಡೆದರೂ ಅವರ ಪ್ರದರ್ಶನ ಮಾತ್ರ ತೀರ ಕಳಪೆಯಾಗಿತ್ತು. ಅಂತಹ ಆಟಗಾರರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ ಲಿಯಾಮ್ ಲಿವಿಂಗ್‌ಸ್ಟನ್ ಕೂಡ ಒಬ್ಬರು (PC- PTI). ಐಪಿಎಲ್ 2026 ರ ಹರಾಜಿನಲ್ಲಿ, ಸನ್‌ರೈಸರ್ಸ್ ಹೈದರಾಬಾದ್, ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಲಿಯಾಮ್…

Read More

Video: ಪುಟ್ಟ ಕಂದಮ್ಮನನ್ನು ಬೇಬಿ ಕ್ಯಾರಿಯರ್‌ನಲ್ಲಿ ಕೂರಿಸಿಕೊಂಡು ಡ್ಯಾನ್ಸ್ ಮಾಡಿದ ತಂದೆ – Kannada News

ಅಪ್ಪ (father) ಮಗಳಿಗೆ ಹೇಗೆ ಪ್ರಪಂಚವೋ, ಅದೇ ರೀತಿ ತಂದೆಯಂದಿರಿಗೆ ತಮ್ಮ ಮುದ್ದು ಮಗಳೆಂದರೆ ಪ್ರಾಣಕ್ಕಿಂತಲೂ ಹೆಚ್ಚು. ಈ ತಂದೆ ಮಗಳ ಸುಂದರ ಬಾಂಧವ್ಯವನ್ನು ವರ್ಣಿಸಲು ಪದಗಳೇ ಸಾಲಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಾಂಧವ್ಯ ಸಾರುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ತಂದೆ ಮಗಳ ಡ್ಯಾನ್ಸ್ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ತಂದೆ ತನ್ನ ಮಗಳನ್ನು ಬೇಬಿ ಕ್ಯಾರಿಯರ್ ನಲ್ಲಿ ಕೂರಿಸಿಕೊಂಡು ಸ್ಟೆಪ್ ಹಾಕಿದ್ದಾನೆ. ಪುಟಾಣಿ ಖುಷಿಯಿಂದ ನಗುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. little_munchkin28…

Read More