Video: ಇಲ್ಲಿನ ಜನ್ರು ತುಂಬಾ ಒಳ್ಳೆಯವ್ರು: ಭಾರತೀಯರ ಗುಣವನ್ನು ಮೆಚ್ಚಿಕೊಂಡ ವಿದೇಶಿ ಮಹಿಳೆಯ – Kannada News | Australian woman praises Indians for helping her
ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಹಿಂದೆ ಮುಂದೆ ಯೋಚಿಸುವವರೇ ಹೆಚ್ಚು. ಅಪರಿಚಿತ ವ್ಯಕ್ತಿಗಳಿಗೆ ಸಹಾಯ ಮಾಡುವ ಗುಣವಿರುವ ಜನರನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇಂತಹ ಗುಣವನ್ನು ಭಾರತೀಯರಲ್ಲಿ ಕಂಡು ವಿದೇಶಿ ಮಹಿಳೆ ಫುಲ್ ಖುಷ್ ಆಗಿದ್ದಾಳೆ. ಭಾರತದಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದ ವೇಳೆ ಆಸ್ಟ್ರೇಲಿಯನ್ ಮಹಿಳೆ (Australian woman) ತನಗೆ ಭಾರತೀಯರು ತನಗೆ ಸಹಾಯ ಮಾಡಿದ್ದನ್ನು ನೆನಪಿಸಿಕೊಂಡಿದ್ದಾಳೆ. ಅವರ ಒಳ್ಳೆಯ ಗುಣ ಹಾಗೂ ಒಳ್ಳೆತನವನ್ನು ಮೆಚ್ಚಿಕೊಂಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ. ಭಾರತದಲ್ಲಿ ಒಂಟಿಯಾಗಿ…