ಕುಮಟಾ ಬಳಿ ಕೆಎಸ್ಆರ್ಟಿಸಿ ಬಸ್, ಬೊಲೆರೋ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಾಯ – Kannada News | KSRTC Bus and Bolero Collision on NH 66 Near Kumta, Several Injured
ಕಾರವಾರ, ಜನವರಿ 29: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ–66ರ ಮಾನೀರು ದೇವಸ್ಥಾನದ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಬೊಲೆರೋ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೊಲೆರೋ ವಾಹನ ಚಾಲಕ ಹಾಗೂ ಬಸ್‌ನಲ್ಲಿದ್ದ ಏಳು ಜನ ಗಾಯಗೊಂಡಿದ್ದಾರೆ. ಬೊಲೆರೋ ವಾಹನ ಚಾಲಕ ಕಾರವಾರದ ಡೇವಿಡ್ ಪಾಸ್ಕಲ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರವಾರದಿಂದ ಕುಮಟಾಗೆ ಮೀನು ತುಂಬಿಕೊಂಡು…