Category Archives: Blog

Your blog category

87ರ ವಯಸ್ಸಿನಲ್ಲಿ ಮೊದಲ ಬಾರಿ ಸಮುದ್ರ ತೀರಕ್ಕೆ ಹೋದ ಅಜ್ಜಿ, ರಿಯಾಕ್ಷನ್ ಹೇಗಿತ್ತು ನೋಡಿ – Kannada News

ನವದೆಹಲಿ, ಜೂನ್ 02: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ಬಂದು ಹೋಗುತ್ತವೆ. ಆದರೆ, ಕೆಲವು ವಿಡಿಯೋಗಳು ಹೃದಯಕ್ಕೆ ಹತ್ತಿರವಾಗಿ, ಸಂಬಂಧಗಳ ನಿಜವಾದ ಮೌಲ್ಯವನ್ನು ನೆನಪಿಸುತ್ತವೆ. ಅಂತಹದೇ ಒಂದು ಅಪರೂಪದ ಹಾಗೂ ಭಾವುಕ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಜನರ ಮನ ಗೆದ್ದಿದೆ. 87 ವರ್ಷದ ಅಜ್ಜಿ(Grand Mother)ಯೊಬ್ಬರು ತಮ್ಮ ಜೀವಿತಾವಧಿಯಲ್ಲೇ ಮೊದಲ ಬಾರಿಗೆ ಬೀಚ್‌(Beach)ಗೆ ಭೇಟಿ ನೀಡಿ ಆನಂದಿಸುತ್ತಿರುವ ದೃಶ್ಯ ನೋಡುಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

‘ಹರ್ಷೆ ಇನೆನಿ’ ಎಂಬ ಕಂಟೆಂಟ್ ಕ್ರಿಯೇಟರ್ ಈ ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಅಜ್ಜಿ ಇಡೀ ಜೀವನವನ್ನು ಕುಟುಂಬದ ಇತರರನ್ನು ನೋಡಿಕೊಳ್ಳುವುದರಲ್ಲೇ ಕಳೆದಿದ್ದರು, ಆದರೆ ಅವರಿಗೆ ಸಮುದ್ರವನ್ನು ನೋಡುವ ಅವಕಾಶ ಸಿಕ್ಕಿರಲಿಲ್ಲ. ಇದನ್ನು ಅರಿತ ಕುಟುಂಬಸ್ಥರು, ಅಜ್ಜ-ಅಜ್ಜಿ, ತಾಯಿ ಸೇರಿದಂತೆ ವಿವಿಧ ತಲೆಮಾರುಗಳ ಸಂಬಂಧಿಕರೆಲ್ಲರೂ ಒಟ್ಟಾಗಿ ಅಜ್ಜಿಯ ಈ ಕನಸನ್ನು ನನಸಾಗಿಸಲು ಸಮುದ್ರ ತೀರಕ್ಕೆ ಹೋಗಲು ಯೋಜಿಸಿದ್ದರು.

ಮತ್ತಷ್ಟು ಓದಿ: ಸಮುದ್ರದ ನೀರಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ಪಾಲಿಗೆ ದೇವರಾದ ಕ್ರಿಕೆಟ್​​ ಆಡುತ್ತಿದ್ದ ಯುವಕರು

ಈ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರಲ್ಲಿ ತೀವ್ರ ಭಾವನಾತ್ಮಕ ಪ್ರತಿಕ್ರಿಯೆ ಮೂಡಿಸಿದೆ. ಹಿರಿಯರು ನಮಗಾಗಿ ಮಾಡುವ ತ್ಯಾಗಗಳನ್ನು ಸ್ಮರಿಸಿರುವ ಬಳಕೆದಾರರು, ತಮ್ಮ ಅಜ್ಜ-ಅಜ್ಜಿಯರ ಪುಟ್ಟ ಪುಟ್ಟ ಆಸೆಗಳನ್ನು ಈಡೇರಿಸಲು ಈ ವಿಡಿಯೋ ತಮಗೆ ಪ್ರೇರಣೆ ನೀಡಿದೆ ಎಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಪ್ರೀತಿ ಮತ್ತು ಕೃತಜ್ಞತೆಯ ಈ ಅಪರೂಪದ ಕ್ಷಣ ಸದ್ಯ ಎಲ್ಲರ ಮುಖದಲ್ಲೂ ನಗು ಮೂಡಿಸುತ್ತಿದೆ.

ವಿಡಿಯೋ:

87 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ತನ್ನ ಮುಂದೆ ವಿಶಾಲವಾದ ಸಾಗರವನ್ನು ನೋಡುವುದು ಅಜ್ಜಿಗೆ ಒಂದು ಮಾಂತ್ರಿಕ ಮತ್ತು ಆಳವಾದ ಭಾವನಾತ್ಮಕ ಕ್ಷಣವಾಗಿತ್ತು. ಕುಟುಂಬದ ಎಲ್ಲಾ ಸದಸ್ಯರು ಅವಳ ಸುತ್ತಲೂ ನಿಂತು ಆ ಕ್ಷಣವನ್ನು ಆನಂದಿಸುತ್ತಿದ್ದಾರೆ. ವಿಡಿಯೋವನ್ನು ಹಂಚಿಕೊಂಡ ಮೊಮ್ಮಗಳು, ಜನರು ತಮ್ಮ ಅಜ್ಜ ಮತ್ತು ಅಜ್ಜಿಯರೊಂದಿಗೆ ಸಮಯ ಕಳೆಯುವಂತೆ ಮತ್ತು ಈ ಕ್ಷಣಗಳನ್ನು ಅವರಿಗೆ ವಿಶೇಷವಾಗಿಸುವಂತೆ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:48 pm, Tue, 2 June 26

Source link

Kuja in Vrishabha Rashi: ಜೂನ್‌ನಲ್ಲಿ ಕುಜ ವೃಷಭ ರಾಶಿಯಲ್ಲಿ ಸಂಚಾರ; 12ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ? – Kannada News

ಕುಜ ವೃಷಭ ರಾಶಿಯಲ್ಲಿ ಸಂಚಾರImage Credit source: Pinterest

ಕುಜ ಗ್ರಹವು ಜೂನ್ ತಿಂಗಳಿನಲ್ಲಿ ವೃಷಭ ರಾಶಿಯಲ್ಲಿ ಸಂಚರಿಸುತ್ತಾ ಶುಕ್ರನ ದ್ರೇಕ್ಕಾಣ, ಚಂದ್ರನ ಹೋರೆ, ಗುರುವಿನ ನವಾಂಶ, ಬುಧನ ತ್ರಿಂಶಾಂಶ ಮತ್ತು ಚಂದ್ರನ ದ್ವಾದಶಾಂಶದಲ್ಲಿ ಸ್ಥಿತನಾಗಿರುವುದು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿ ಫಲಗಳನ್ನು ನೀಡುತ್ತದೆ. ​ಸ್ಥಿರ ಹಾಗೂ ಭೂತತ್ವದ ವೃಷಭ ರಾಶಿಯಲ್ಲಿ ಅಗ್ನಿತತ್ವದ ಕುಜನಿರುವುದು ಸಾಮಾನ್ಯವಾಗಿ ನಿಧಾನಗತಿಯ ಆದರೆ ದೃಢವಾದ ಪ್ರಯತ್ನಗಳನ್ನು ಸೂಚಿಸುತ್ತದೆ. ಇಲ್ಲಿ ಚಂದ್ರ, ಗುರು, ಶುಕ್ರರ ಪ್ರಭಾವವು ಹೆಚ್ಚಿರುವುದರಿಂದ ಕುಜನ ತೀಕ್ಷ್ಣತೆ ಮತ್ತು ಉಗ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ, ಬುದ್ಧಿವಂತಿಕೆ ಮತ್ತು ಸೌಮ್ಯತೆಯ ಮಿಶ್ರಣ ಕಾಣಸಿಗುತ್ತದೆ.

​ಮೇಷ ರಾಶಿ:

​ನಿಮ್ಮ ರಾಶ್ಯಾಧಿಪತಿಯಾದ ಕುಜನು ದ್ವಿತೀಯ ಭಾವದಲ್ಲಿ ಇರುವುದರಿಂದ ಆರ್ಥಿಕ ವಿಷಯಗಳಲ್ಲಿ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಹಠಾತ್ ಧನಲಾಭದ ಯೋಗವಿದೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ಸಿಗಲಿದೆ. ಆಸ್ತಿ ಪಾಸ್ತಿ ವಿಷಯಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬರಲಿದೆ. ಬುಧನ ತ್ರಿಂಶಾಂಶದ ಪ್ರಭಾವದಿಂದಾಗಿ ಮಾತಿನಲ್ಲಿ ಕಠೋರತೆ ಬರಬಹುದು. ಆವೇಶಕ್ಕೆ ಒಳಗಾಗಿ ಮಾತನಾಡಿ ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ತಂದುಕೊಳ್ಳಬೇಡಿ. ಕಣ್ಣು ಅಥವಾ ಹಲ್ಲಿನ ಸಮಸ್ಯೆ ಬಾಧಿಸಬಹುದು.

​ವೃಷಭ ರಾಶಿ:

​ಕುಜನು ನಿಮ್ಮ ರಾಶಿಯಲ್ಲೇ ಸಂಚರಿಸುತ್ತಿದ್ದಾನೆ. ಶುಕ್ರನ ದ್ರೇಕ್ಕಾಣ ಮತ್ತು ಚಂದ್ರನ ಹೋರೆಯ ಪ್ರಭಾವ ಇಲ್ಲಿ ಹೆಚ್ಚಿರುತ್ತದೆ. ನಿಮ್ಮ ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚಲಿದೆ. ಕಾರ್ಯರಂಗದಲ್ಲಿ ಉತ್ಸಾಹ ಮತ್ತು ಸೃಜನಶೀಲತೆ ಹೆಚ್ಚಾಗಿರುತ್ತದೆ. ಸಂಗಾತಿಯಿಂದ ಅಥವಾ ಸ್ತ್ರೀ ವರ್ಗದಿಂದ ಲಾಭವಾಗಲಿದೆ. ಮನಸ್ಸಿನಲ್ಲಿ ಚಂಚಲತೆ (ಚಂದ್ರನ ಹೋರೆಯಿಂದಾಗಿ) ಮತ್ತು ಅತಿಯಾದ ಕೋಪ ಇರಲಿದೆ. ರಕ್ತದೊತ್ತಡ ಅಥವಾ ಉಷ್ಣ ಬಾಧೆಯ ಸಾಧ್ಯತೆ ಇದೆ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

​ಮಿಥುನ ರಾಶಿ:

​ನಿಮ್ಮ ರಾಶಿಯಿಂದ ದ್ವಾದಶ ಭಾವದಲ್ಲಿ ಕುಜನ ಸಂಚಾರವಿದೆ. ವಿದೇಶಿ ವ್ಯವಹಾರಗಳಲ್ಲಿ ಪ್ರಗತಿ, ಆಧ್ಯಾತ್ಮಿಕ ಕ್ಷೇತ್ರಗಳತ್ತ ಒಲವು ಹೆಚ್ಚಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಹಣ ವಿನಿಯೋಗಿಸುವಿರಿ. ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ. ನಿದ್ರಾಹೀನತೆ ಮತ್ತು ಆಸ್ಪತ್ರೆಯ ವೆಚ್ಚಗಳು ಎದುರಾಗಬಹುದು. ಶತ್ರುಗಳ ಕಾಟ ಹೆಚ್ಚಾಗುವ ಸಂಭವವಿದ್ದು, ಕೋರ್ಟ್ ಕಚೇರಿ ವಿಷಯಗಳಲ್ಲಿ ಜಾಗ್ರತೆ ಅಗತ್ಯ.

​ಕರ್ಕಾಟಕ ರಾಶಿ:

​ನಿಮ್ಮ ರಾಶಿಗೆ ಕುಜನು ಯೋಗಕಾರಕನಾಗಿದ್ದು, ಈಗ ಏಕಾದಶ ಭಾವದಲ್ಲಿ ಸ್ಥಿತನಾಗಿದ್ದಾನೆ. ಚಂದ್ರನ ದ್ವಾದಶಾಂಶ ಇರುವುದರಿಂದ ನಿಮಗೆ ವಿಶೇಷ ಫಲ ಸಿಗಲಿದೆ. ಜೂನ್ ತಿಂಗಳು ನಿಮಗೆ ಅತ್ಯಂತ ಲಾಭದಾಯಕವಾಗಿರಲಿದೆ. ಬಾಕಿ ಉಳಿದಿದ್ದ ಹಣ ಕೈ ಸೇರಲಿದೆ. ಹಿರಿಯ ಸಹೋದರ ಅಥವಾ ಮಿತ್ರರಿಂದ ದೊಡ್ಡ ಸಹಾಯ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಇದೆ. ಅತಿಯಾದ ಆತ್ಮವಿಶ್ವಾಸದಿಂದಾಗಿ ಕೆಲವು ಉತ್ತಮ ಅವಕಾಶಗಳನ್ನು ಕೈತಪ್ಪಿಸಿಕೊಳ್ಳಬಹುದು. ಪ್ರೇಮ ಜೀವನದಲ್ಲಿ ಸಣ್ಣಪುಟ್ಟ ಗೊಂದಲಗಳು ಉಂಟಾಗಬಹುದು.

​ಸಿಂಹ ರಾಶಿ :

​ನಿಮ್ಮ ರಾಶಿಯ ದಶಮ ಭಾವದಲ್ಲಿ ದಿಗ್ದರ್ಶನ ಪಡೆದ ಕುಜನಿದ್ದಾನೆ. ಗುರುವಿನ ನವಾಂಶದ ಪ್ರಭಾವ ಇಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅದ್ಭುತ ಯಶಸ್ಸು ಸಿಗಲಿದೆ. ನಿಮ್ಮ ಅಧಿಕಾರ ಮತ್ತು ಗೌರವ ಹೆಚ್ಚಾಗಲಿದೆ. ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಹೊಸ ಜವಾಬ್ದಾರಿಗಳು ಸಿಗಲಿವೆ. ಕೆಲಸದ ಒತ್ತಡದಿಂದಾಗಿ ಕುಟುಂಬಕ್ಕೆ ಸಮಯ ಕೊಡುವುದು ಕಷ್ಟವಾಗಬಹುದು. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ವಿನಯವಿರಲಿ.

​ಕನ್ಯಾ ರಾಶಿ :

​ನಿಮ್ಮ ರಾಶಿಯಿಂದ ಭಾಗ್ಯಸ್ಥಾನದಲ್ಲಿ ಕುಜನ ಸಂಚಾರವಿದೆ. ಬುಧನ ತ್ರಿಂಶಾಂಶವು ನಿಮ್ಮ ರಾಶ್ಯಾಧಿಪತಿಯ ಬಲವನ್ನು ತೋರ್ಪಡಿಸುತ್ತದೆ. ದೂರದ ಪ್ರಯಾಣ ಅಥವಾ ತೀರ್ಥಯಾತ್ರೆ ಕೈಗೊಳ್ಳುವಿರಿ. ಉನ್ನತ ಶಿಕ್ಷಣ ಪಡೆಯುತ್ತಿರುವವರಿಗೆ ಉತ್ತಮ ಸಮಯ. ತಂದೆಯ ಕಡೆಯಿಂದ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗಲಿದೆ. ಭಾಗ್ಯೋದಯಕ್ಕೆ ಕೆಲವು ಅಡೆತಡೆಗಳು ಎದುರಾಗಬಹುದು. ಭಾಗ್ಯ ಸ್ಥಾನದ ಕುಜನು ಕೆಲವೊಮ್ಮೆ ತಂದೆಯ ಆರೋಗ್ಯದಲ್ಲಿ ಏರುಪೇರು ಉಂಟುಮಾಡಬಹುದು, ಜಾಗ್ರತೆ ವಹಿಸಿ.

​ತುಲಾ ರಾಶಿ :

​ನಿಮ್ಮ ರಾಶಿಯಿಂದ ಅಷ್ಟಮಭಾವದಲ್ಲಿ ಕುಜನಿರುವುದು ಸ್ವಲ್ಪ ಕಠಿಣ ಪರಿಸ್ಥಿತಿಯನ್ನು ಸೂಚಿಸುತ್ತದೆ. ಸಂಶೋಧನೆ, ಜ್ಯೋತಿಷ್ಯ ಅಥವಾ ಗೂಢ ವಿಜ್ಞಾನದಲ್ಲಿ ಆಸಕ್ತಿ ಇರುವವರಿಗೆ ಇದು ಸುವರ್ಣ ಕಾಲ. ವಿಮೆ ಅಥವಾ ಉಯಿಲಿನ ಮೂಲಕ ಹಠಾತ್ ಧನಲಾಭವಾಗಬಹುದು. ವಾಹನ ಚಲಾಯಿಸುವಾಗ ಅತ್ಯಂತ ಜಾಗರೂಕರಾಗಿರಿ. ಅಪಘಾತ ಅಥವಾ ಗಾಯಗಳಾಗುವ ಸಂಭವವಿದೆ. ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ಅಥವಾ ಶಸ್ತ್ರಚಿಕಿತ್ಸೆಯ ಯೋಗ ಬರಬಹುದು. ಸಂಗಾತಿಯೊಂದಿಗೆ ವಾಗ್ವಾದ ಬೇಡ.

​ವೃಶ್ಚಿಕ ರಾಶಿ :

​ನಿಮ್ಮ ರಾಶ್ಯಾಧಿಪತಿಯಾದ ಕುಜನು ಸಪ್ತಮ (ಕಳತ್ರ) ಭಾವದಲ್ಲಿ ಸಂಚರಿಸುತ್ತಿದ್ದಾನೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗಲಿದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಸೂಕ್ತ ಸಮಯ. ವೈವಾಹಿಕ ಜೀವನದಲ್ಲಿ ಸಾಮರಸ್ಯದ ಕೊರತೆ ಕಾಣಿಸಬಹುದು. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು ಅಥವಾ ಅವರ ಸ್ವಭಾವದಲ್ಲಿ ಉಗ್ರತೆ ಕಾಣಬಹುದು. ತಾಳ್ಮೆಯೇ ಇಲ್ಲಿ ಮುಖ್ಯ ಮಂತ್ರ.

​ಧನು ರಾಶಿ :

ನಿಮ್ಮ ರಾಶಿಯಿಂದ ಷಷ್ಠ ಭಾವದಲ್ಲಿ ಕುಜನಿದ್ದಾನೆ. ಗುರುವಿನ ನವಾಂಶ ಇರುವುದರಿಂದ ಕುಜನು ನಿಮಗೆ ಅನುಕೂಲಕರವಾಗಿ ನಡೆದುಕೊಳ್ಳುತ್ತಾನೆ. ಶತ್ರುಗಳ ಮೇಲೆ ಜಯ ಸಿಗಲಿದೆ. ಕೋರ್ಟ್ ಕಚೇರಿ ವ್ಯಾಜ್ಯಗಳು ನಿಮ್ಮ ಪರವಾಗಲಿವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ. ಸಾಲದ ಬಾಧೆ ಕಡಿಮೆಯಾಗಲಿದೆ. ಸಣ್ಣಪುಟ್ಟ ಉಷ್ಣ ಸಂಬಂಧಿ ಕಾಯಿಲೆಗಳು ಅಥವಾ ರಕ್ತದ ದೋಷಗಳು ಬಾಧಿಸಬಹುದು. ಸೋದರಮಾವನ ಜೊತೆಗಿನ ಸಂಬಂಧದಲ್ಲಿ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು.

​ಮಕರ ರಾಶಿ :

ನಿಮ್ಮ ರಾಶಿಯಿಂದ ಪಂಚಮ ಭಾವದಲ್ಲಿ ಕುಜನ ಸಂಚಾರವಿದೆ. ಬುದ್ಧಿಶಕ್ತಿ ತೀಕ್ಷ್ಣವಾಗಲಿದ್ದು, ಕಠಿಣ ನಿರ್ಧಾರಗಳನ್ನು ಧೈರ್ಯವಾಗಿ ತೆಗೆದುಕೊಳ್ಳುವಿರಿ. ಕ್ರೀಡಾಪಟುಗಳಿಗೆ ಮತ್ತು ತಾಂತ್ರಿಕ ವಲಯದವರಿಗೆ ಉತ್ತಮ ಯಶಸ್ಸು ಸಿಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಳವಳ ಉಂಟಾಗಬಹುದು. ಗರ್ಭಿಣಿಯರು ಈ ಸಮಯದಲ್ಲಿ ಅತಿ ಹೆಚ್ಚು ಜಾಗ್ರತೆ ವಹಿಸಬೇಕು. ಷೇರು ಮಾರುಕಟ್ಟೆಯಲ್ಲಿ ಅತಿಯಾದ ರಿಸ್ಕ್ ತೆಗೆದುಕೊಳ್ಳಬೇಡಿ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

​ಕುಂಭ ರಾಶಿ :

​ನಿಮ್ಮ ರಾಶಿಯಿಂದ ಚತುರ್ಥ ಭಾವದಲ್ಲಿ ಕುಜನಿದ್ದಾನೆ. ಚಂದ್ರನ ಹೋರೆ ಮತ್ತು ದ್ವಾದಶಾಂಶದ ಪ್ರಭಾವ ಇಲ್ಲಿ ಹೆಚ್ಚಿರುತ್ತದೆ. ಭೂಮಿ, ಮನೆ ಅಥವಾ ವಾಹನ ಖರೀದಿಸಲು ಯೋಗವಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರುವವರಿಗೆ ಉತ್ತಮ ಲಾಭ ಸಿಗಲಿದೆ. ಮನೆಯ ನವೀಕರಣ ಕಾರ್ಯ ಕೈಗೊಳ್ಳಬಹುದು. ಮನೆಯಲ್ಲಿ ಸುಖ-ಶಾಂತಿಯ ಕೊರತೆ ಎದುರಾಗಬಹುದು. ತಾಯಿಯ ಆರೋಗ್ಯ ಕ್ಷೀಣಿಸುವ ಸಾಧ್ಯತೆ ಇದೆ. ಎದೆಯ ಭಾಗದಲ್ಲಿ ನೋವು ಅಥವಾ ರಕ್ತದೊತ್ತಡದ ಸಮಸ್ಯೆ ಇದ್ದರೆ ನಿರ್ಲಕ್ಷಿಸಬೇಡಿ.

ಮೀನ ರಾಶಿ:

ನಿಮ್ಮ ರಾಶಿಯಿಂದ ತೃತೀಯಭಾವದಲ್ಲಿ ಕುಜನಿದ್ದಾನೆ. ಗುರು ಮತ್ತು ಚಂದ್ರನ ಶುಭ ಪ್ರಭಾವಗಳು ಈ ಸ್ಥಾನಕ್ಕೆ ಬಲ ತುಂಬುತ್ತವೆ. ನಿಮ್ಮ ಧೈರ್ಯ, ಶೌರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಣ್ಣ ಪ್ರಮಾಣದ ಪ್ರವಾಸಗಳು ಲಾಭದಾಯಕವಾಗಿರಲಿವೆ. ಕಮ್ಯುನಿಕೇಶನ್ ಮತ್ತು ಮಾರ್ಕೆಟಿಂಗ್ ರಂಗದಲ್ಲಿ ಇರುವವರಿಗೆ ಭರ್ಜರಿ ಯಶಸ್ಸು ಸಿಗಲಿದೆ. ಕಿರಿಯ ಸಹೋದರ-ಸಹೋದರಿಯರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಕೈ ಮತ್ತು ಹೆಗಲಿಗೆ ಸಂಬಂಧಿಸಿದ ನೋವು ಕಾಣಿಸಿಕೊಳ್ಳಬಹುದು.

​ವೃಷಭ ರಾಶಿಯಲ್ಲಿರುವ ಕುಜನ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ಶುಭ ಫಲಗಳನ್ನು ಹೆಚ್ಚಿಸಿಕೊಳ್ಳಲು ಜೂನ್ ತಿಂಗಳಿನಲ್ಲಿ ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಅತ್ಯಂತ ಶ್ರೇಷ್ಠ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಸಿನಿಮಾ ಮಾಡಿದ ನಿರ್ದೇಶಕನಿಗೆ ಚಾನ್ಸ್ ಕೊಟ್ಟ ರಜನಿಕಾಂತ್-ಕಮಲ್ – Kannada News

ಸೂಪರ್ ಸ್ಟಾರ್ ರಜನಿಕಾಂತ್ ಅವರ (Rajinikanth) ಮುಂದಿನ ಬಹುನಿರೀಕ್ಷಿತ ಚಿತ್ರ ‘ತಲೈವರ್ 173’ ನಿರ್ದೇಶಕರು ಯಾರು ಎಂಬ ಪ್ರಶ್ನೆ ಕಳೆದ ಕೆಲವು ದಿನಗಳಿಂದ ಸಿನಿರಂಗದಲ್ಲಿ ಭಾರಿ ಚರ್ಚೆ ಆಗಿತ್ತು. ಹಲವು ದೊಡ್ಡ ನಿರ್ದೇಶಕರ ಹೆಸರುಗಳು ಈ ಪ್ರಾಜೆಕ್ಟ್ ಜೊತೆ ಕೇಳಿಬರುತ್ತಿದ್ದವು. ಆದರೆ, ಈಗ ಈ ಎಲ್ಲಾ ಚರ್ಚೆ ಮತ್ತು ಸಸ್ಪೆನ್ಸ್‌ಗಳಿಗೆ ಚಿತ್ರತಂಡ ಅಧಿಕೃತವಾಗಿ ತೆರೆ ಎಳೆದಿದ್ದು, ಚಿತ್ರದ ಹೊಸ ಸಾರಥಿಯನ್ನು ಅದ್ಧೂರಿಯಾಗಿ ಪರಿಚಯಿಸಿದೆ.

ರಜನಿಕಾಂತ್ ಅವರ 173ನೇ ಸಿನಿಮಾವನ್ನು ಕಮಲ್ ಹಾಸನ್ ಅವರು ‘ರಾಜ್ ಕಮಲ್ ಫಿಲ್ಮ್ಸ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಯುವ ಹಾಗೂ ಪ್ರತಿಭಾವಂತ ನಿರ್ದೇಶಕ ಅಶ್ವಥ್ ಮಾರಿಮುತ್ತು ಅವರು ನಿರ್ದೇಶನ ಮಾಡಲಿದ್ದಾರೆ ಎಂಬ ವಿಷಯ ಈಗ ಬಹಿರಂಗವಾಗಿದೆ. ಈ ಹಿಂದೆ ‘ಓ ಮೈ ಕಡವಲೆ’ ಹೆಸರಿನ ಹಿಟ್ ಸಿನಿಮಾ ನೀಡಿದ್ದ ಅಶ್ವಥ್ ಮಾರಿಮುತ್ತು, ಈಗ ರಜನಿಕಾಂತ್-ಕಮಲ್ ಹಾಸನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಸುವರ್ಣ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

‘ರಾಜ್ ಕಮಲ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಒಂದು ವಿಶೇಷ ವಿಡಿಯೋ ಗುಟ್ಟನ್ನು ರಟ್ಟು ಮಾಡಿದೆ. ನಿರ್ದೇಶಕ ಅಶ್ವಥ್ ಮಾರಿಮುತ್ತು ಅವರ ಜನ್ಮದಿನದ ಅಂಗವಾಗಿ ಚಿತ್ರತಂಡ ವಿಶೇಷ ಬರ್ತ್‌ಡೇ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋವನ್ನು ಈ ಹಿಂದೆ ಬಿಡುಗಡೆಯಾಗಿದ್ದ ‘ತಲೈವರ್ 173’ ಚಿತ್ರದ ಪ್ರಮೋ ಶೈಲಿಯಲ್ಲೇ ವಿನ್ಯಾಸಗೊಳಿಸಲಾಗಿದೆ. ಇದು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ಚಿತ್ರದ ಚುಕ್ಕಾಣಿ ಹಿಡಿದಿರುವುದು ಅಶ್ವಥ್ ಅವರೇ ಎಂಬುದು ಅಭಿಮಾನಿಗಳಿಗೆ ಖಾತ್ರಿಯಾಗಿದೆ.

ಇದನ್ನೂ ಓದಿ: ಜೈಲರ್ 2: ರಜನಿಕಾಂತ್ ಸಿನಿಮಾದಲ್ಲಿ ಶಾರುಖ್ ಖಾನ್ ಬದಲು ಹೃತಿಕ್ ರೋಷನ್ ನಟನೆ?

ಈ ಹಿಂದೆ ಈ ಚಿತ್ರಕ್ಕೆ ಸಿ. ಸುಂದರ್ ನಿರ್ದೇಶನ ಮಾಡಬೇಕಿತ್ತು. ಅವರು ಸಿನಿಮಾದಿಂದ ಹೊರ ಹೋಗಿದ್ದಾರೆ. ಆದರೆ ಈಗ ನಡೆದಿರುವ ಈ ಬದಲಾವಣೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ತಲೈವರ್ ಹೊಸ ಅವತಾರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಈಗ ಪ್ರೇಕ್ಷಕರಲ್ಲಿ ಮನೆಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐಸಿಸಿಯಿಂದ ಕ್ರಿಕೆಟ್ ಕೆನಡಾ ಸದಸ್ಯತ್ವ ಅಮಾನತು! – Kannada News

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕ್ರಿಕೆಟ್ ಕೆನಡಾ (Cricket Canada) ಮಂಡಳಿಯ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಕೆನಡಾ ಕ್ರಿಕೆಟ್ ಮಂಡಳಿಯ ಆಡಳಿತಾತ್ಮಕ ವೈಫಲ್ಯಗಳು, ಭ್ರಷ್ಟಾಚಾರದ ಆರೋಪಗಳು ಹಾಗೂ ನಿಯಮಾವಳಿಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ.

ಮೇ 31 ರಂದು ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಬೋರ್ಡ್ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಮೂಲಕ ಕೆನಡಾ ಕ್ರಿಕೆಟ್ ಮಂಡಳಿಯನ್ನು ಅಮಾನಲ್ಲಿಡಲಾಗಿದೆ. ಇದಕ್ಕೆ ಐಸಿಸಿ ನೀಡಿರುವ ಕಾರಣಗಳು ಈ ಕೆಳಗಿನಂತಿವೆ…

ಫಿಕ್ಸಿಂಗ್ ಆರೋಪ: ಕೆನಡಾದ ರಾಷ್ಟ್ರೀಯ ಮಾಧ್ಯಮವಾದ ಸಿಬಿಸಿ (CBC) ಪ್ರಸಾರ ಮಾಡಿದ ತನಿಖಾ ವರದಿಯಲ್ಲಿ ಕ್ರಿಕೆಟ್ ಕೆನಡಾ ಮಂಡಳಿಯ ಅಧಿಕಾರಿಗಳು ಭ್ರಷ್ಟಾಚಾರ ಮತ್ತು ಪಂದ್ಯದ ಫಲಿತಾಂಶ ಬದಲಿಸುವ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಆಯ್ಕೆಯಲ್ಲಿ ಹಸ್ತಕ್ಷೇಪ: ಇತ್ತೀಚೆಗೆ ಕೆನಡಾ ಮಾಜಿ ಮುಖ್ಯ ಕೋಚ್ ಖುರ್ರಮ್ ಚೋಹನ್ ಅವರ ಆಡಿಯೋ ಕ್ಲಿಪ್‌ ಒಂದು ಸೋರಿಕೆಯಾಗಿತ್ತು. ಅದರಲ್ಲಿ ಅಧಿಕಾರಿಗಳು ಬಲವಂತವಾಗಿ ತಂಡದ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳ (ACU) ತನಿಖೆಯನ್ನೂ ಕೂಡ ನಡೆಸಿದ್ದರು.

ಆರ್ಥಿಕ ಅಶಿಸ್ತು: ಕೆನಡಾ ಕ್ರಿಕೆಟ್ ಮಂಡಳಿಯು ತನ್ನ ಹಣಕಾಸು ವರದಿಗಳಲ್ಲಿ ಪಾರದರ್ಶಕತೆಯನ್ನು ಪಾಲಿಸಿಲ್ಲ.  ಹೀಗಾಗಿ ಕೆನಡಾ ಕ್ರೀಡಾ ಸಚಿವಾಲಯ ಮತ್ತು ಐಸಿಸಿ ಕೆನಾಡ ಕ್ರಿಕೆಟ್​ ಮಂಡಳಿಗೆ ನೀಡುತ್ತಿದ್ದ ಅನುದಾನವನ್ನು ತಡೆಹಿಡಿದಿದ್ದವು.

ಈ ಎಲ್ಲಾ ಕಾರಣಗಳನ್ನು ಮುಂದಿಟ್ಟು ಇದೀಗ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಕೆನಡಾ ಕ್ರಿಕೆಟ್ ಮಂಡಳಿಯ ಸದಸ್ಯತ್ವವನ್ನು ಅಮಾನತಿನಲ್ಲಿಟ್ಟಿದೆ.

ಆಟಗಾರರಿಗೆ ಐಸಿಸಿ ಅಭಯ:

ಕೆನಡಾ ಕ್ರಿಕೆಟ್ ಮಂಡಳಿಯನ್ನು ಸದಸ್ಯತ್ವವನ್ನು ಅಮಾನತುಗೊಳಿಸಿದರೂ, ಐಸಿಸಿ ಕೆನಡಾ ತಂಡದ ಆಟಗಾರರಿಗೆ ಅಭಯಹಸ್ತ ಚಾಚಿದ್ದಾರೆ. ಅಂದರೆ ಯಾವುದೇ ಆತಂಕವಿಲ್ಲದೇ ಕ್ರಿಕೆಟ್​ನಲ್ಲಿ ಮುಂದುವರೆಯಬಹುದು ಎಂದು ತಿಳಿಸಲಾಗಿದೆ.

ಅದರಂತೆ ಕೆನಡಾದ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ತಂಡಗಳು ಎಂದಿನಂತೆ ಐಸಿಸಿ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಾಗಿ ತಿಳಿಸಲಾಗಿದೆ.

ಹಾಗೆಯೇ ಈ ಪಂದ್ಯಗಳ ಮತ್ತು ಪ್ರವಾಸದ ವೆಚ್ಚಗಳಿಗೆ ಐಸಿಸಿ ನೇರವಾಗಿ ಹಣಕಾಸಿನ ನೆರವು ನೀಡಲಿದ್ದು, ಈ ಮೂಲಕ ಕೆನಡಾ ತಂಡವನ್ನು ಮುಂದುವರೆಸಲು ನಿರ್ಧರಿಸಲಾಗಿದೆ.

ಐಸಿಸಿಯ ಮುಂದಿನ ನಡೆಯೇನು?

ಸದ್ಯ ಕೆನಡಾ ಕ್ರಿಕೆಟ್ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವ ಐಸಿಸಿ, ಅಲ್ಲಿನ ಕ್ರಿಕೆಟ್ ವ್ಯವಸ್ಥೆಯನ್ನು ಸುಧಾರಿಸಲು ಶೀಘ್ರದಲ್ಲೇ  ‘ನಾರ್ಮಲೈಸೇಶನ್ ಕಮಿಟಿ’ ಯನ್ನು ನೇಮಿಸಲಿದೆ. ಅದರಂತೆ ‘ನಾರ್ಮಲೈಸೇಶನ್ ಕಮಿಟಿ’  ನೆರವಿನೊಂದಿಗೆ ಕೆನಡಾದಲ್ಲಿ ಕ್ರಿಕೆಟ್ ಆಡಳಿತ ಮುಂದುವರೆಯಲಿದೆ.

ಇದನ್ನೂ ಓದಿ: ಟೆಸ್ಟ್​ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆ..!

ಅಲ್ಲದೆ ಐಸಿಸಿ ನೀಡಿರುವ ಎಲ್ಲಾ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದ ನಂತರವಷ್ಟೇ ಕೆನಡಾ ಕ್ರಿಕೆಟ್ ಮಂಡಳಿಯ ಅಮಾನತನ್ನು ತೆರವುಗೊಳಿಸುವ ಬಗ್ಗೆ ಪರಿಶೀಲಿಸುವುದಾಗಿ ಐಸಿಸಿ ತಿಳಿಸಿದೆ.

Published On – 1:06 pm, Tue, 2 June 26

Source link

ಡಿಕೆ ಶಿವಕುಮಾರ್ ಸಂಪುಟಕ್ಕೆ ಹೈಕಮಾಂಡ್‌ನಿಂದ ‘ಏಜ್ ಬೇಸ್ಡ್ ಫಾರ್ಮುಲಾ’: ಸಚಿವಾಕಾಂಕ್ಷಿಗಳಲ್ಲಿ ಢವಢವ – Kannada News

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್Image Credit source: tv9

ನವದೆಹಲಿ, ಜೂನ್ 2: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅಧಿಕಾರ ಸ್ವೀಕರಿಸಲಿರುವ ಬೆನ್ನಲ್ಲೇ, ದೆಹಲಿಯಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಅಂತಿಮ ಹಂತಕ್ಕೆ ತಲುಪಿದೆ. ನಿರ್ಗಮಿತ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಂತಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಲು ಪ್ರತ್ಯೇಕ ಪಟ್ಟಿ ನೀಡಿ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ಆಕಾಂಕ್ಷಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ದಿಢೀರ್ ಬಿಗ್ ಶಾಕ್ ನೀಡಿದೆ. ಸಂಪುಟದಲ್ಲಿ ಯುವಕರು ಮತ್ತು ಹಿರಿಯ ನಾಯಕರ ನಡುವೆ ಸಮತೋಲನ ಕಾಯ್ದುಕೊಳ್ಳಲು ದೆಹಲಿ ನಾಯಕರು ಈ ಬಾರಿ ‘ಏಜ್ ಬೇಸ್ಡ್ ಫಾರ್ಮುಲಾ (ವಯೋಮಿತಿ ಆಧಾರಿತ ಸೂತ್ರ)’ ಎಂಬ ಹೊಸ ಸೂತ್ರವನ್ನು ಜಾರಿಗೆ ತಂದಿದ್ದಾರೆ.

ಮುಖ್ಯಾಂಶಗಳು

  • ಸಂಪುಟದಲ್ಲಿ ಯುವಕರು ಹಾಗೂ ಹಿರಿಯ ನಾಯಕರ ಬ್ಯಾಲೆನ್ಸ್​ಗೆ ಪ್ಲಾನ್.
  • ಹೈಕಮಾಂಡ್‌ನಿಂದ ಹೊಸ ವಯೋಮಿತಿ ಸೂತ್ರ.
  • 40 ವರ್ಷದೊಳಗಿನ ಯುವ ಶಾಸಕರಿಗೆ ಒಟ್ಟು 10 ಸಂಪುಟ ಸ್ಥಾನಗಳು ಹಾಗೂ ಹಿರಿಯರಿಗೆ 20 ಸ್ಥಾನಗಳನ್ನು ಮೀಸಲಿಡಲು ಪ್ಲ್ಯಾನ್.

ನಾಯಕರಲ್ಲಿ ಶುರುವಾದ ನಡುಕ, ಬಿರುಸಾದ ಲೆಕ್ಕಾಚಾರ

ಹೈಕಮಾಂಡ್‌ನ ಈ ಹೊಸ ಲೆಕ್ಕಾಚಾರದ ಪ್ರಕಾರ, 40 ವರ್ಷದೊಳಗಿನ ಯುವ ಶಾಸಕರಿಗೆ ಸಂಪುಟದಲ್ಲಿ 10 ಸ್ಥಾನಗಳನ್ನು ಮೀಸಲಿಡಲು ನಿರ್ಧರಿಸಲಾಗಿದೆ. ಇನ್ನು 50 ರಿಂದ 70 ವರ್ಷದೊಳಗಿನ ಹಿರಿಯ ಮತ್ತು ಅನುಭವಿ ಶಾಸಕರಿಗೆ 20 ಸ್ಥಾನಗಳನ್ನು ನೀಡಲು ವರಿಷ್ಠರು ಮುಂದಾಗಿದ್ದಾರೆ. ಈ ದಿಢೀರ್ ಸೂತ್ರದಿಂದಾಗಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ದೆಹಲಿಗೆ ದಂಡಯಾತ್ರೆ ನಡೆಸಿ ಬೀಡುಬಿಟ್ಟಿರುವ ಅನೇಕ ಮಧ್ಯ ವಯಸ್ಕ ಹಾಗೂ ಹಿರಿಯ ಆಕಾಂಕ್ಷಿಗಳಲ್ಲಿ ತೀವ್ರ ಆತಂಕ ಶುರುವಾಗಿದೆ.

ಇದನ್ನೂ ಓದಿ: ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಕಸರತ್ತು: ವರಿಷ್ಠರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ಪಟ್ಟಿ!

ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್ ಅವರಂತಹ ಹಿರಿಯರ ಹೆಸರಿನ ಜೊತೆಗೆ ಯುವ ಶಾಸಕರಾದ ಪ್ರದೀಪ್ ಈಶ್ವರ್, ಯತೀಂದ್ರ ಸಿದ್ದರಾಮಯ್ಯ ಮುಂತಾದವರಿಗೂ ಮಂತ್ರಿಭಾಗ್ಯ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಈ ಹೊಸ ಸೂತ್ರದ ಬೆನ್ನಲ್ಲೇ ಯಾರಿಗೆ ಸ್ಥಾನ ಸಿಗಲಿದೆ, ಯಾರು ಕೈಬಿಡಲಿದ್ದಾರೆ ಎಂಬ ಹೊಸ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ರಾಹಕರಿಗೆ ಗುಡ್ ನ್ಯೂಸ್: ಬೆಂಗಳೂರಿನ ಹೋಟೆಲ್‌ಗಳಲ್ಲಿ ಸದ್ಯಕ್ಕೆ ತಿಂಡಿ, ಊಟದ ಬೆಲೆ ಹೆಚ್ಚಳವಿಲ್ಲ! – Kannada News

ಬೆಂಗಳೂರಿನ ಹೋಟೆಲ್‌ಗಳಲ್ಲಿ ಸದ್ಯಕ್ಕೆ ತಿಂಡಿ, ಊಟದ ಬೆಲೆ ಹೆಚ್ಚಳವಿಲ್ಲ!
Image Credit source: gettyimages.com

ಬೆಂಗಳೂರು, ಜೂನ್ 02: ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದ್ದರೂ, ಸಿಲಿಕಾನ್ ಸಿಟಿ ಬೆಂಗಳೂರಿನ ಗ್ರಾಹಕರಿಗೆ ಸದ್ಯಕ್ಕೆ ಯಾವುದೇ ಬೆಲೆ ಏರಿಕೆಯ ಬಿಸಿ ತಟ್ಟುವುದಿಲ್ಲ. ವಾಣಿಜ್ಯ ಸಿಲಿಂಡರ್ ದರ ಹೆಚ್ಚಳವಾಗಿದ್ದರೂ ಸಹ ಸಾರ್ವಜನಿಕರ ಹಿತದೃಷ್ಟಿಯಿಂದ ಹೋಟೆಲ್‌ಗಳ ಮೆನು ದರವನ್ನು ಸದ್ಯಕ್ಕೆ ಪರಿಷ್ಕರಿಸದಿರಲು ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.

ಮುಖ್ಯಾಂಶಗಳು

  • ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾದರೂ ಹೋಟೆಲ್ ದರ ಹೆಚ್ಚಳವಿಲ್ಲ.
  • ಗ್ರಾಹಕರಿಗೆ ಹೊರೆಯಾಗದಂತೆ ಹಳೆಯ ದರದಲ್ಲೇ ಮುಂದುವರಿಯಲು ಹೋಟೆಲ್ ಸಂಘದ ತೀರ್ಮಾನ.
  • ಮುಂದಿನ ದಿನಗಳಲ್ಲಿ ದಿನಸಿ ದರ ಹೆಚ್ಚಾದರೆ ಬೆಲೆ ಏರಿಕೆ ಅನಿವಾರ್ಯ.

ಸದ್ಯಕ್ಕೆ ಬೆಲೆ ಏರಿಕೆ ಮಾಡದಿರಲು ಕಾರಣಗಳೇನು?

ಬೆಂಗಳೂರು ಹೋಟೆಲ್‌ಗಳ ಸಂಘದ ಪದಾಧಿಕಾರಿಗಳ ಪ್ರಕಾರ, ಸಿಲಿಂಡರ್ ಬೆಲೆ ಏರಿಕೆಯು ಹೋಟೆಲ್ ಉದ್ಯಮದ ನಿರ್ವಹಣಾ ವೆಚ್ಚವನ್ನು ಹೆಚ್ಚಿಸುವುದು ನಿಜ. ಆದರೆ, ಪದೇ ಪದೇ ಹೋಟೆಲ್ ತಿಂಡಿ-ಊಟದ ದರವನ್ನು ಹೆಚ್ಚಿಸಿದರೆ ಗ್ರಾಹಕರು ಹೋಟೆಲ್‌ಗಳಿಂದ ದೂರ ಸರಿಯುವ ಸಾಧ್ಯತೆ ಇರುತ್ತದೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಮಧ್ಯಮ ವರ್ಗದ ಜನರಿಗೆ ಮತ್ತಷ್ಟು ಹೊರೆ ನೀಡಲು ಹೋಟೆಲ್ ಮಾಲೀಕರು ಇಷ್ಟಪಡುತ್ತಿಲ್ಲ. ಸದ್ಯಕ್ಕೆ ಪರಿಸ್ಥಿತಿಯನ್ನು ಅವಲೋಕಿಸಿ, ಲಾಭದ ಪ್ರಮಾಣವನ್ನು ಕೊಂಚ ಕಡಿತಗೊಳಿಸಿಕೊಂಡಾದರೂ ಹಳೆಯ ದರದಲ್ಲೇ ಉದ್ಯಮ ಮುಂದುವರಿಸಲು ತೀರ್ಮಾನಿಸಲಾಗಿದೆ.

ಹೋಟೆಲ್ ಉದ್ಯಮಿಗಳ ಮುಂದಿನ ನಡೆ

ಹೋಟೆಲ್ ಮಾಲೀಕರು ಸದ್ಯಕ್ಕೆ ಬೆಲೆ ಏರಿಕೆಯಿಂದ ಗ್ರಾಹಕರನ್ನು ರಕ್ಷಿಸಿದ್ದರೂ, ಸರ್ಕಾರದ ಧೋರಣೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಮೇಲಿನ ತೆರಿಗೆ ಮತ್ತು ಸತತ ದರ ಏರಿಕೆಯು ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆ ಪರಿಣಾಮ ಊಟ-ತಿಂಡಿ ದರವೂ ಹೆಚ್ಚಾಗುತ್ತಾ? ಹೋಟೆಲ್ ಮಾಲೀಕರು ಏನಂತಾರೆ ನೋಡಿ

ಒಂದು ವೇಳೆ ಮುಂದಿನ ದಿನಗಳಲ್ಲಿ ಹಾಲಿನ ದರ, ತರಕಾರಿ ಹಾಗೂ ಇತರೆ ದಿನಸಿ ಪದಾರ್ಥಗಳ ಬೆಲೆಗಳೂ ಸಹ ಗಣನೀಯವಾಗಿ ಏರಿಕೆಯಾದರೆ, ಅನಿವಾರ್ಯವಾಗಿ ಮೆನು ದರವನ್ನು ಶೇ 5 ರಿಂದ 10ರಷ್ಟು ಹೆಚ್ಚಿಸಬೇಕಾಗಬಹುದು ಎಂದು ಹೋಟೆಲ್ ಸಂಘಟನೆಗಳು ಮುನ್ಸೂಚನೆ ನೀಡಿವೆ. ಅಲ್ಲಿಯವರೆಗೆ ಬೆಂಗಳೂರಿನ ಜನಪ್ರಿಯ ದೋಸೆ, ಇಡ್ಲಿ, ಕಾಫಿ ಮತ್ತು ಊಟದ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಾನು, ಎಂಜಿಆರ್​ ಗಿಂತಲೂ ಗ್ರೇಟ್ ಎಂದರೇ ವಿಜಯ್: ಹೇಳಿದ್ದೇನು?

ವಿಜಯ್ (Vijay) ತಮಿಳುನಾಡಿನ ಸಿಎಂ ಆಗಿ ಇತಿಹಾಸ ಬರೆದಿದ್ದಾರೆ. ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಅವರಿಗೆ ವಿಜಯ್ ಧಕ್ಕಿದೆ. ಸಿಎಂ ಆದಬಳಿಕವೂ ಕೆಲ ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಂಡು ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದಾರೆ. ವಿಜಯ್ ತಮ್ಮ ವಿನಯತೆ, ಗಾಂಭೀರ್ಯತೆಯಿಂದಲೂ ಗಮನ ಸೆಳೆಯುತ್ತಿದ್ದಾರೆ. ಇದೆಲ್ಲ ಇರುವಾಗ ಇದೀಗ ವಿಜಯ್ ನೀಡಿರುವ ಹೇಳಿಕೆ ಖುದ್ದು ಅವರ ಅಭಿಮಾನಿಗಳಿಗೇ ಇರುಸು-ಮುರುಸು ಉಂಟು ಮಾಡಿದೆ. ವಿನಯದಿಂದ ವರ್ತಿಸುವ ವಿಜಯ್, ತಮ್ಮನ್ನು ತಮಿಳು ಚಿತ್ರರಂಗದ ದಿಗ್ಗಜ, ಎಂಜಿಆರ್​​ ಜೊತೆಗೆ ಹೋಲಿಸಿಕೊಂಡಿರುವುದು ಮಾತ್ರವಲ್ಲ, ಪರೋಕ್ಷವಾಗಿ ತಾವು ಎಂಜಿಆರ್​​ಗಿಂತಲೂ ಗ್ರೇಟ್ ಎಂದಿದ್ದಾರೆ.

ಮುಖ್ಯಮಂತ್ರಿ ವಿಜಯ್ ಸಿಎಂ ಆದ ಬಳಿಕ ನಿನ್ನೆ (ಸೋಮವಾರ) ತಿರುಚಿರಾಪಳ್ಳಿಯಲ್ಲಿ ತಮ್ಮ ಮೊದಲ ಸಾರ್ವಜನಿಕ ರ್‍ಯಾಲಿ ನಡೆಸಿದರು. ಅಲ್ಲಿ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಗೆಲ್ಲಿಸಿದ್ದಕ್ಕೆ ಜನರಿಗೆ ಧನ್ಯವಾದ ಅರ್ಪಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ವಿರೋಧಿಗಳ ಲೇವಡಿ ಮಾಡಿದರು. ವಿರೋಧಿಗಳು ಮೊದಲ ಆರು ತಿಂಗಳು ಪರಿಸ್ಥಿತಿಯನ್ನು ಗಮನಿಸುವುದಾಗಿ ಹೇಳಿದ್ದರು, ಆದರೆ ಅವರಿಂದ 6 ದಿನಗಳೂ ಸಹ ಸುಮ್ಮನಿರಲು ಸಾಧ್ಯವಾಗಲಿಲ್ಲ ಎಂದು ಅವರು ಪರೋಕ್ಷವಾಗಿ ಮಾಜಿ ಸಿಎಂ ಸ್ಟಾಲಿನ್ ಅವರಿಗೆ ಟಾಂಗ್ ನೀಡಿದರು.

ತಮಿಳುನಾಡು ಚುನಾವಣಾ ಫಲಿತಾಂಶಗಳ ಬಗ್ಗೆ ಮಾತನಾಡಿದ ಅವರು, ‘ದಿವಂಗತ, ಮಾಜಿ ಸಿಎಂ ಎಂಜಿಆರ್ ಕೂಡ ತಮ್ಮ ಮೊದಲ ಚುನಾವಣೆಯಲ್ಲಿ ಇಷ್ಟೊಂದು ಮತಗಳನ್ನು ಪಡೆದಿರಲಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಆದರೂ ಇಂದು ನೀವು ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಇಷ್ಟೊಂದು ಭಾರಿ ಬೆಂಬಲವನ್ನು ನೀಡಿದ್ದೀರಿ. ನಾನು ನನ್ನನ್ನು ಎಂಜಿಆರ್ ಅವರಿಗೆ ಹೋಲಿಸಿಕೊಳ್ಳುತ್ತಿಲ್ಲ. ಎಂಜಿಆರ್; ಎಂಜಿಆರ್ ಅವರೇ, ಆದರೆ ನಾನು ನಿಮ್ಮ ವಿಜಯ್. ಎಂಜಿಆರ್, ಅಣ್ಣಾ ಮತ್ತು ಪೆರಿಯಾರ್ ಅವರು ತೋರಿಸಿದ ಹಾದಿಯಲ್ಲಿ ಕೆಲಸ ಮಾಡಲು ನಾನು ಬಂದಿದ್ದೇನೆ’ ಎಂದರು.

ಇದನ್ನೂ ಓದಿ:ಸೂಟು-ಬೂಟು ಧರಿಸುತ್ತಿರುವುದಕ್ಕೆ ಸ್ಪಷ್ಟನೆ ಕೊಟ್ಟ ವಿಜಯ್; ಕಾರಣ ಬೇರೆಯೇ ಇದೆ

ಎಂಜಿಆರ್ ಅವರು ಜೂನ್ 30, 1977 ರಿಂದ ಡಿಸೆಂಬರ್ 24, 1987 ರಲ್ಲಿ ತಮ್ಮ ನಿಧನದವರೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಭಾರತದಲ್ಲಿ ಮುಖ್ಯಮಂತ್ರಿಯಾದ ಮೊದಲ ಚಲನಚಿತ್ರ ನಟರಾಗಿದ್ದರು. ದಕ್ಷಿಣದಲ್ಲಿ ಸಿನಿಮಾ ನಟರು ಚುನಾವಣೆಗೆ ಧುಮುಕುವ ಪದ್ಧತಿಗೆ ಚಾಲನೆ ಕೊಟ್ಟವರು ಅವರೇ.

ಕಳೆದ ತಿಂಗಳು ನಡೆದ ತಮಿಳುನಾಡು ಚುನಾವಣೆ ಮತ ಎಣಿಕೆಯಲ್ಲಿ, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ರಾಜಕೀಯ ಮೈಲಿಗಲ್ಲು ಸೃಷ್ಟಿಸಿ ಸರ್ಕಾರವನ್ನು ರಚಿಸಿತು. ಈ ಚುನಾವಣೆಯಲ್ಲಿ ಟಿವಿಕೆ ನಾಯಕ ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಜಯ ದಾಖಲಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದಿಢೀರ್​​ ಜಮೀರ್​ ಅಹ್ಮದ್​​ ಭೆಟಿಯಾದ ಡಿ.ಕೆ. ಸುರೇಶ್​​: ಕಾರಣ ಏನೆಂಬುದೇ ಕುತೂಹಲ – Kannada News

ಬೆಂಗಳೂರು, ಜೂನ್​​ 02: ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್​​ ಅವರ ಸಹೋದರ ಡಿ.ಕೆ. ಸುರೇಶ್ ಬೆಂಗಳೂರಿನ ಚಾಲುಕ್ಯ ರಸ್ತೆಯಲ್ಲಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿಯು ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜಮೀರ್ ಅಹ್ಮದ್ ಉಪಮುಖ್ಯಮಂತ್ರಿ (DyCM) ಮತ್ತು ಪ್ರಮುಖ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ನಡುವೆ ಇತ್ತೀಚೆಗೆ ದಾವಣಗೆರೆ ದಕ್ಷಿಣ ಉಪಚುನಾವಣೆ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಡಿ.ಕೆ. ಸುರೇಶ್ ಅವರ ಭೇಟಿ ಹೆಚ್ಚಿನ ಮಹತ್ವ ಪಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ! ಉಭಯ ಕುಶಲೋಪರಿ

ನವದೆಹಲಿ, ಜೂನ್ 2: ರಾಜ್ಯದಲ್ಲಿ ಡಿಕೆ ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟ ರಚನೆ ಹಾಗೂ ಮಂತ್ರಿಗಳ ಪಟ್ಟಿ ಅಂತಿಮಗೊಳಿಸುವ ಮಹತ್ವದ ಕಸರತ್ತಿಗಾಗಿ ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆಗಾಗಿ ದೆಹಲಿಗೆ ಆಗಮಿಸಿರುವ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುವಿಲ್ಲದ ಸಭೆಗಳಲ್ಲಿ ನಿರತರಾಗಿದ್ದಾರೆ. ಈ ರಾಜಕೀಯ ಬೆಳವಣಿಗೆಗಳ ನಡುವೆ, ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಿಂದ ಹೊರಬರುತ್ತಿದ್ದ ಸಿದ್ದರಾಮಯ್ಯಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಎದುರಾಗಿದ್ದಾರೆ. ಈ ವೇಳೆ ಉಭಯ ನಾಯಕರು ಅತ್ಯಂತ ಸೌಜನ್ಯದಿಂದ ಪರಸ್ಪರ ಹಸ್ತಲಾಘವ ಮಾಡಿ, ನಗುಮುಖದಿಂದಲೇ ಉಭಯಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ‘ಹೇಗಿದ್ದೀರಾ?’ ಎಂದು ಜೈಶಂಕರ್ ಅವರ ಕ್ಷೇಮ ಸಮಾಚಾರ ವಿಚಾರಿಸಿದ ಸಿದ್ದರಾಮಯ್ಯ, ಕೆಲ ಕ್ಷಣಗಳ ಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಹೈಡ್ರಾಮಾ: ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು ಸತ್ಯ! – Kannada News

ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಹೈಡ್ರಾಮಾ: ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು ಸತ್ಯ!

ಬೆಂಗಳೂರು, ಜೂನ್ 02: ನಗರದಲ್ಲಿ ರಾಜ್ಯಪಾಲರ (Governor) ಸಂಚಾರದ ವೇಳೆ ವಿಐಪಿ ಟ್ರಾಫಿಕ್ ತಡೆದಿದ್ದಕ್ಕೆ ಆಕ್ರೋಶಗೊಂಡು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದ ಯುವಕನ ಪ್ರಕರಣ ಇದೀಗ ಭಾರಿ ಟ್ವಿಸ್ಟ್ ಪಡೆದುಕೊಂಡಿದೆ. ಪೊಲೀಸರ ಪ್ರಾಥಮಿಕ ತನಿಖೆ ಮತ್ತು ವಿಚಾರಣೆಯ ವೇಳೆ ಪ್ರತಿಭಟನೆ ನಡೆಸಿದ ವ್ಯಕ್ತಿ ಸಾರ್ವಜನಿಕವಾಗಿ ಹೈಡ್ರಾಮಾ ಮಾಡಿರುವುದು ಬೆಳಕಿಗೆ ಬಂದಿದೆ. ಆತನ ಕಾರಿನಲ್ಲಿ ಆ ಸಮಯದಲ್ಲಿ ಯಾವ ಗರ್ಭಿಣಿಯೂ ಇರಲಿಲ್ಲ ಎಂಬ ಸತ್ಯವನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.

ಮುಖ್ಯಾಂಶಗಳು

  • ರಾಜ್ಯಪಾಲರ ಸಂಚಾರ ವೇಳೆ ನಡುರಸ್ತೆಯಲ್ಲಿ ಪ್ರತಿಭಟಿಸಿದ್ದ ಯುವಕನ ಹೈಡ್ರಾಮಾ ಬಯಲಾಗಿದೆ.
  • ಕಾರಿನಲ್ಲಿ ಗರ್ಭಿಣಿ ಪತ್ನಿ ಇರಲಿಲ್ಲ ಎಂದು ಒಪ್ಪಿಕೊಂಡ ಯುವಕ ಮೋಹಿತ್.
  • ಹೆಚ್‌ಎಎಲ್ ಪೊಲೀಸರು ಯುವಕನ ಹೇಳಿಕೆ ದಾಖಲಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತ ಹೆಚ್‌ಎಎಲ್ (HAL) ಠಾಣೆಯ ಪೊಲೀಸರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದ ಮೋಹಿತ್ ಎಂಬ ಯುವಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನು ಸುಳ್ಳು ಹೇಳಿದ್ದಾಗಿ ಮೋಹಿತ್ ಒಪ್ಪಿಕೊಂಡಿದ್ದಾನೆ.

ವಿಚಾರಣೆ ವೇಳೆ ಮೋಹಿತ್ ಹೇಳಿದ್ದೇನು?

ಪ್ರತಿಭಟನೆಯ ಸಮಯದಲ್ಲಿ ಮೋಹಿತ್ ಜೊತೆ ಕಾರಿನಲ್ಲಿ ಆತನ ಪತ್ನಿ ಇರಲಿಲ್ಲ. ಆತ ಒಂಟಿಯಾಗಿಯೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂದು ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ. ನಾನು ಹೆಚ್‌ಎಎಲ್ ಇಸ್ರೋ (ISRO) ಜಂಕ್ಷನ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ಟ್ರಾಫಿಕ್‌ನಲ್ಲಿ ಕಾಯುತ್ತಿದ್ದೆ. ವಿಐಪಿ ಮೂವ್‌ಮೆಂಟ್‌ನಿಂದಾಗಿ ವಾಹನಗಳನ್ನು ತಡೆ ಹಿಡಿಯಲಾಗಿತ್ತು. ನನಗೆ ಮನೆಗೆ ಹೋಗಲು ತಡವಾಗುತ್ತಿತ್ತು ಮತ್ತು ಮನೆಯಲ್ಲಿದ್ದ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ತುರ್ತು ಪರಿಸ್ಥಿತಿ ಇತ್ತು. ಆ ಒತ್ತಡದಲ್ಲಿ ಸಿಟ್ಟು ಬಂದು, ಪೊಲೀಸರು ದಾರಿ ಬಿಡಲಿ ಎಂಬ ಕಾರಣಕ್ಕೆ ಕಾರಿನಲ್ಲೇ ಪತ್ನಿ ಇದ್ದಾಳೆ ಎಂದು ಸುಳ್ಳು ಹೇಳಿ ವಾಗ್ವಾದ ನಡೆಸಿದೆ ಎಂದು ಮೋಹಿತ್ ತಿಳಿಸಿದ್ದಾನೆ. ಪೊಲೀಸರ ಮೇಲೆ ತನಗೆ ಯಾವುದೇ ವೈಯಕ್ತಿಕ ಟಾರ್ಗೆಟ್ ಇರಲಿಲ್ಲ ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಇದನ್ನೂ ಓದಿ ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ

ಸದ್ಯಕ್ಕೆ ಪ್ರಕರಣ ದಾಖಲಾಗಿಲ್ಲ

ಯುವಕನ ಹೈಡ್ರಾಮಾದಿಂದಾಗಿ ಇಡೀ ಪೊಲೀಸ್ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುವಂತಾಗಿತ್ತು. ಆದರೆ ಸದ್ಯಕ್ಕೆ ಪೊಲೀಸರು ಮೋಹಿತ್ ವಿರುದ್ಧ ಯಾವುದೇ ಅಧಿಕೃತ ಪ್ರಕರಣ ದಾಖಲಿಸಿಲ್ಲ. ಆತನ ಲಿಖಿತ ಹೇಳಿಕೆಯನ್ನು ದಾಖಲಿಸಿಕೊಂಡು, ಇನ್ನು ಮುಂದೆ ಇಂತಹ ಕೃತ್ಯಗಳನ್ನು ಎಸಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಹೆಚ್‌ಎಎಲ್ ಪೊಲೀಸರು ಆತನನ್ನು ಕಳುಹಿಸಿಕೊಟ್ಟಿದ್ದಾರೆ. ವಿಐಪಿ ಟ್ರಾಫಿಕ್ ಕಿರಿಕಿರಿಯ ನಡುವೆಯೂ ಸಾರ್ವಜನಿಕರು ಸುಳ್ಳು ವದಂತಿಗಳನ್ನು ನಂಬಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link