ಕಗ್ಗತ್ತಲೆಯಲ್ಲಿ ಬಾಲಕಿಯ ಅಪಹರಿಸಿ ಅತ್ಯಾಚಾರ ಮಾಡಿ, ಕೊನೆಗೆ ಭಯದಿಂದ ಕಾಲುವೆಗೆ ಎಸೆದ ಸಂಬಂಧಿ – Kannada News | Madhya pradesh: Kidnapped After Dark, Silenced Forever: Relative Arrested in Child’s Murder
ಬರ್ವಾನಿ, ಜನವರಿ 29: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಒಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಏಳು ವರ್ಷದ ಬಾಲಕಿ(Girl)ಯ ಮೇಲೆ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ 17 ವರ್ಷದ ಅಪ್ರಾಪ್ತ ವಯಸ್ಸಿನ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಈ ಘಟನೆ ರಾಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಜನವರಿ 25 ರ ರಾತ್ರಿ, ಹುಡುಗಿಯ ಕುಟುಂಬ ನಿದ್ರಿಸುತ್ತಿದ್ದಾಗ, ಆರೋಪಿ ಅವಳನ್ನು ಮನೆಯಿಂದ ಅಪಹರಿಸಿ ಹತ್ತಿರದ ಇಂದಿರಾ ಸಾಗರ್ ಕಾಲುವೆಗೆ…